ಸೋಮವಾರ, ಫೆಬ್ರವರಿ 13, 2012

ಔರಾದನಲ್ಲಿ ನಡೆಯಲಿರುವ ಜಾನಪದ ಸಮ್ಮೇಳನಕ್ಕೂ...




ಫೆ. 16 ರಿಂದ ಔರಾದನಲ್ಲಿ ನಡೆಯಲಿರುವ ಜಾನಪದ ಸಮ್ಮೇಳನಕ್ಕೂ... ಇದೇ ಫೆ. 15 ರಿಂದ ತಾಲೂಕಿನ ಬೇಲೂರು ಉರಿಲಿಂಗ ಪೆದ್ದಿ ಮಠದಲ್ಲಿ ನಡೆಯಲಿರುವ ಜಾನಪದ ಸಮ್ಮೇಳನಕ್ಕೂ
ಬಸವಕಲ್ಯಾಣ, ಫೆ. 13

ಇದೇ ಫೆ. 15 ರಿಂದ ತಾಲೂಕಿನ ಬೇಲೂರು ಉರಿಲಿಂಗ ಪೆದ್ದಿ ಮಠದಲ್ಲಿ ನಡೆಯಲಿರುವ ಜಾನಪದ ಸಮ್ಮೇಳನ ಹಾಗೂ ಫೆ. 16 ರಿಂದ ಔರಾದನಲ್ಲಿ ನಡೆಯಲಿರುವ ಜಾನಪದ ಸಮ್ಮೇಳನಕ್ಕೂ ಜನರಲ್ಲಿ ಸಹಜವಾಗಿಯೇ ಗೊಂದಲವುಂಟಾಗಿ ಜಾನಪದ ಸಾಹಿತ್ಯ ಪರಿಷತ್ತು ಈ ರೀತಿ ಕಾಯ೯ಕ್ರಮಗಳು ಹಮ್ಮಿಕೊಂಡಿತ್ತೆ? ಎಂಬ ಅನುಮಾನಗಳು ಹುಟ್ಟಿಕೊಳ್ಳುವುದು ಸಹಜ.

ಉರಿಲಿಂಗಪೆದ್ದಿ ಬೇಲೂರು ಮಠದ ಪೀಠಾಧಿಪತಿಗಳು ಕಳೆದ ಕೆಲ ವಷ೯ಗಳಿಂದ ಲಿಂ. ಶಿವಲಿಂಗೇಶ್ವರ ಶಿವಯೋಗಿಗಳವರ ಪುಣ್ಯ ಸ್ಮರಣೋತ್ಸವ ಅಚರಿಸುತ್ತಾ ಬರುತ್ತಿದ್ದಾರೆ. ಅವರ ಪಾಡಿಗೆ ಅವರು ಧಾಮಿ೯ಕ ಕಾಯ೯ಕ್ರಮಗಳನ್ನು ಮಾಡುತ್ತ ತಾಲೂಕಿನಾದ್ಯಂತ ಪರಿಚಿತರಾಗಿದ್ದರು. ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಯಾರದೇ ಸಲಹೆಗೆ ಎಡವುತ್ತಿರುವುದು ಗೋಚರಿಸುತ್ತಿದೆ.

ಪುಣ್ಯ ಸ್ಮರಣೋತ್ಸವದಲ್ಲಿ ಸಾಂಸ್ಕೖತಿಕ ಕಾಯ೯ಕ್ರಮಗಳು ಮಾಡಿದರೆ ಸರಿಯಾಗಿರುತ್ತದೆ ಎಂದು ಯಾರೋ ಅವರ ತಲೆಗೆ ಬಿಟ್ಟ ಹುಳವನ್ನು ಮಠಾಧೀಶರೆಂಬುದನ್ನೇ ತಮಗೆ ತಾವು ಮರೆತಿದ್ದಾರೆ. ಸಾಹಿತಿಗಳ, ಸಂಘಟಕರ ಬೆನ್ನತ್ತಿ ಹೋಗುತ್ತಿರುವುದಲ್ಲದೇ, ಅವರ ಮಾತನ್ನು ಕೇಳದವರಿಗೆ ಅವಾಚ್ಯ ಶಬ್ಧಗಳಿಂದ ಬೈಯ್ಯುವುದು, ನಾನು, ನನ್ನ ಮಠವೆಂದು ಬೀಗುವುದು. ನನ್ನ ಮಠಕ್ಕೆ ವಿಐಪಿ ಸಾಹಿತಿಗಳನ್ನೇ ಕರೆಸುತ್ತೇನೆ ಎನ್ನುವುದು ಇವರಲ್ಲಿರುವ ಉದ್ಧಟತನ ಪ್ರದಶಿ೯ಸುತ್ತದೆ.

ವಿಚಿತ್ರ ಹಾಗೂ ಬೀದರ ಜಿಲ್ಲೆ ಮಠಾಧೀಶರಲ್ಲಿ ಇವರು ಏಕೈಕ ಮಠಾಧೀಶರೆಂದೇ ಹೇಳಬಹುದು. ಯಾರೋ ಹೇಳಿದರೆಂದು ಪ್ರತಿ ವಷ೯ ಉರಿಲಿಂಗ ಪೆದ್ದಿ ಪ್ರಶಸ್ತಿ ನೀಡುತ್ತಾ ಬರುತ್ತಿರುವುದು ಸಂತಸದ ಸಂಗತಿ ಒಂದೆಡೆಯಾದರೆ, ಇವರು ಕೊಡುವ ಪ್ರಶಸ್ತಿಯನ್ನು ಪಡೆದವರು ರಾಜ್ಯಮಟ್ಟದವರೇ ಆಗಿರಬೇಕೆಂಬುದು ಬೇಲೂರು ಶ್ರೀಗಳ ಇತ್ತೀಚಿನ ಮೊಂಡುತನ ಯಾರೋ ಬಿಟ್ಟ ಹುಳವೇ ಇವರಳೊಗೆ ಕೆಲಸ ಮಾಡುತ್ತಿದೆ ಎನಿಸದೇ ಇರಲಾರದು.

2007 ರಿಂದ ಕೆಲ ಚಿಂತಕರ ಸಲಹೆ, ಮಾಗ೯ದಶ೯ನದ ಮೇರೆಗೆ ಸಾಹಿತ್ಯೀಕ ಮೆರುಗನ್ನು ಕೊಟ್ಟು ಉರಿಲಿಂಗ ಪೆದ್ದಿ ಉತ್ಸವ ಆಚರಿಸುತ್ತಿರುವುದು ಖುಷಿಯ ಸಂಗತಿಯಾಗಿದೆ. ಪ್ರಪ್ರಥಮ ಬಾರಿಗೆ ಪ್ರಶಸ್ತಿ ಕೊಟ್ಟಿದ್ದು, ಸ್ಥಳೀಯ ಒಬ್ಬ ಉತ್ತಮ ಪ್ರತಿಭಾವಂತ ಕಥೆಗಾರನಿಂದ ಹಿಡಿದು ರಾಜ್ಯಮಟ್ಟದಲ್ಲಿರುವ ಕವಿ, ಲೇಖಕರನ್ನು ಈ ಪ್ರಶಸ್ತಿ ನೀಡುತ್ತಲೇ ಬಂದಿದ್ದಾರೆ.

ಆದರೆ ಅವರಲ್ಲಿ ಸ್ಥಳೀಯರಲ್ಲಿ ಬಹುತೇಕರು ಈ ಹೈ.ಕ. ಗಡಿ ಭಾಗದವರೇ ಉರಿಲಿಂಗ ಪೆದ್ದಿ ಪ್ರಶಸ್ತಿ ಸ್ವೀಕರಿಸಿ ಮಾನ ಉಳಿಸಿದ್ದಾರೆಯೇ ಹೊರತು, ದಕ್ಷಿಣ ಕನ್ನಡ ಭಾಗದ ಕೆಲವರಿಗೆ ಪ್ರಶಸ್ತಿ ಘೋಷಣೆ ಮಾಡಿದರೂ ಕೂಡ ಅವರು ಇದೇನು ಎನ್ನುವಂತೆ ನಿರಾಸಕ್ತಿ ತೋರಿರುವುದು ಬೇಲೂರು ಲಿಂ. ಶಿವಲಿಂಗೇಶ್ವರ ಶಿವಯೋಗಿಗಳವರ ಪುಣ್ಯ ಸ್ಮರಣೋತ್ಸವ ಉತ್ಸವಗಳಲ್ಲಿ ದಾಖಲೆಯಾಗಿ ಉಳಿದಿವೆ.

ಆಸಕ್ತಿಯಿಂದ ಪ್ರಶಸ್ತಿ ಸ್ವೀಕಾರ ಮಾಡಿದವರಲ್ಲಿ ಈ ಭಾಗದವರು ಬಿಟ್ಟರೆ ಬೆಂಗಳೂರು, ಮೈಸೂರಿನವರಿಗೆ ಹೆಮ್ಮೆಯಿಂದ ಕೊಟ್ಟ ಉರಿಲಿಂಗ ಪೆದ್ದಿ ಪ್ರಶಸ್ತಿ ಸ್ವೀಕರಿಸಲು ಬಾರದೇ ನಿರಾಸಕ್ತಿ ತೋರಿಸಿರುವುದು ಅಷ್ಟೇ ಸೂಜಿಗದ ಸಂಗತಿಯಾಗಿದೆ. ಅದಲ್ಲದೇ ಪ್ರಶಸ್ತಿ ನೀಡುವಲ್ಲಿ ತಾರತಮ್ಯ, ಸ್ವಂತ ನೆಲದವರಿಗೆ ತೋರುತ್ತಿರುವ ನಿಲ೯ಕ್ಷ ಧೋರಣೆಗೆ ಬೇಸರಿಸಿ ಪ್ರಶಸ್ತಿ ಪ್ರಾಯೋಜಕರೊಬ್ಬರು ದೂರ ಸರಿದಿದ್ದಾರೆ.

ಕಾರಣ ಬೇಲೂರು ಮಠಾಧೀಶರು ತಮಗೆ ತಾವೇ ಜಾಣರೆಂದುಕೊಂಡು, ಪ್ರಶಸ್ತಿಗಾಗಿ ಲಾಬಿ ನಡೆಸುವವರ ಮೊರೆ ಹೋಗಿ, ಅವರಲ್ಲಿ ಒಂದಿಷ್ಟು ಹಣ ಪಡೆದು ಪ್ರಶಸ್ತಿ ನೀಡುತಿದ್ದಾರೆಂಬ ಆರೋಪಗಳು ಕೇಳಿ ಬಂದು ಪ್ರಾಯೋಜಕರು ಈ ವಷ೯ದಿಂದ ನಾನು ಕೊಡುವುದಿಲ್ಲವೆಂದು ಹೇಳಿದ್ದಾರೆ. ಆದರೂ ಒತ್ತಾಯಕ್ಕೆ ಪ್ರಶಸ್ತಿ ಪ್ರಾಯೋಜಕತ್ವದಲ್ಲಿ ಅವರದೇ ಹೆಸರನ್ನು ಬಳಸಿಕೊಂಡಿರುವುದು ವೈಮನಸ್ಸಿಗೆ ಕಾರಣವೂ ಆಗಿದೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮೂರನೇಯವರು ಲಾಭ ಪಡೆದುಕೊಂಡು ತಮಗೆ ಬೇಕಾದವರನ್ನು ಪ್ರಶಸ್ತಿ ಘೋಷಣೆ ಮಾಡುವಂತೆ ಒತ್ತಾಯಿಸಿ, ಮಠಾಧೀಶರ ಕೈ ಬೆಚ್ಚಗೆ ಮಾಡಿ ಬೀದರ ಜಿಲ್ಲಾ ಪ್ರಥಮ ಜಾನಪದ ಸಮ್ಮೇಳನ ಎಂಬ ನೆಪದಲ್ಲಿ ಕಾಯ೯ಕ್ರಮ ಏಪ೯ಡಿಸುವಂತೆ ಮಾಡಿರುವುದು ರಾಜ್ಯ ಜಾನಪದ ಪರಿಷತ್ತಿನವರ ಗಮನಕ್ಕೂ ಬರದೇ ಇಂಥದ್ದೊಂದು ಸಮ್ಮೇಳನಕ್ಕೆ ಸಿದ್ಧತೆ ತಾಲೂಕಿನ ಒಂದು ಪುಟ್ಟ ಹಳ್ಳಿಯಲ್ಲಿ ನಡೆಯುತ್ತಿರುವುದು ಬುದ್ಧಿ ಜೀವಿಗಳಲ್ಲಿ ಹುಬ್ಬೇರಿಸುವಂತೆ ಮಾಡಿದೆ.

ಇದೇ ಫೆ. 16 ರಿಂದ ಒಂದು ದಿನ ತಡವಾಗಿ ಜಾನಪದ ಪರಿಷತ್ತಿನವರು ಕೂಡ ಔರಾದ ತಾಲ್ಲೂಕಿನಲ್ಲಿ ಜಿಲ್ಲಾ ಪ್ರಥಮ ಸಮ್ಮೇಳನಕ್ಕೆ ಪೂವ೯ ಸಿದ್ಧತೆ ನಡೆಸಿ, ಈಗಾಗಲೇ ಸಮ್ಮೇಳನಾಧ್ಯಕ್ಷರನ್ನಾಗಿ ಚಲನಚಿತ್ರ ನಟ ವೈಜಿನಾಥ ಬಿರಾದಾರ್ ಅವರಿಗೆ ಆಯ್ಕೆ ಮಾಡಿದ್ದು ಸಂತಸವನ್ನುಂಟು ಮಾಡಿದೆ. ಬಸವಕಲ್ಯಾಣ ತಾಲೂಕಿನ ಬೇಲೂರಿನಲ್ಲಿ ನಡೆಯಲಿರುವ ಸಮ್ಮೇಳನಕ್ಕೂ ಔರಾದನಲ್ಲಿ ನಡೆಯಲಿರುವ ಜಾನಪದ ಸಮ್ಮೇಳನಕ್ಕೂ ಸಂಬಂಧ ಸೂತ್ರವಿಲ್ಲದಂತಾಗಿದೆ.

ಬೇಲೂರು ಉರಿಲಿಂಗ ಪೆದ್ದಿ ಉತ್ಸವ ಕಾಯ೯ಕ್ರಮಗಳಲ್ಲಿ ಬಹುತೇಕ ಬುದ್ಧಿ ಜೀವಿಗಳೆನಿಸಿಕೊಂಡವರು ತಮ್ಮ ಕನಸಿನ ಬೇಳೆ ಬೇಯಿಸಿಕೊಳ್ಳಲು ಮಠವನ್ನು ಅಸ್ತ್ರವನ್ನಾಗಿಸಿಕೊಳ್ಳುತ್ತಿರುವ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಿವೆ. ಉರಿಲಿಂಗ ಪೆದ್ದಿ ಪ್ರಶಸ್ತಿಯ ನೆಪದಲ್ಲಿ ಮಠದ ಪರಂಪರೆ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯುವ ಶ್ರೀಗಳ ಕನಸು ಬೇರೆಯವರ ಪಾಲಾಗುತ್ತಿರುವುದು ಕೂಡ ಅಷ್ಟೇ ಸತ್ಯವನ್ನು ಗೋಚರಿಸುತ್ತಿದೆ.

ಇದರಿಂದ ಜಾತ್ರೋತ್ಸವ ನೆಪದಲ್ಲಿ ಮೂರು ವಷ೯ಗಳಿಂದ ಪ್ರಥಮ ಸಮ್ಮೇಳನಗಳೇ ಜರುಗುತ್ತಿರುವುದು ಕೂಡ ಆಶ್ಚಯ೯ದ ಸಂಗಿತಿಯಾಗಿದೆ. ದ್ವಿತೀಯ ಸಮ್ಮೇಳನಗಳು ನಡೆದ ಉದಾಹರಣೆಗಳಂತೂ ಇಲ್ಲವೇ ಇಲ್ಲ. ಪ್ರಥಮ ಸಮ್ಮೇಳನ ಮಾಡಿ ಮುಗಿಸಿದರೆ ಆಯ್ತು, ನಮ್ಮ ಕೆಲಸ ಮುಗೀತು ಎಂದು ತಮ್ಮ ಬಯೋಡಾಟದಲ್ಲಿ ಸೇರಿಕೊಳ್ಳುವವರಿಗೇನು ಇಲ್ಲಿ ಬರವಿಲ್ಲ.ಅಂಥವರಿದಂಲೇ ಕಾಯ೯ಕ್ರಮಗಳಿಗೆ ಏಪಾ೯ಟು ನಡೆಯುತ್ತಲಿವೆ ಎಂದರೆ ತಪ್ಪಾಗಲಾರದು.

ಮೊಟ್ಟ ಮೊದಲಿಗೆ ಪ್ರಶಸ್ತಿ ಪ್ರಾರಂಭಿಸಿದ್ದು 2007 ರಲ್ಲಿ ಇದೇ ಬಸವಕಲ್ಯಾಣ ತಾಲೂಕಿನವರಾದ ಸಾಹಿತಿ ಕೆ. ನೀಲಾ ಹಾಗೂ ಮಚ್ಚೇಂದ್ರ ಅಣಕಲ್ ಅವರುಗಳನ್ನು ಉರಿಲಿಂಗ ಪೆದ್ದಿ ಪ್ರಶಸ್ತಿ ನೀಡಿ ಗೌರವಿಸುವುದರ ಮೂಲಕ ಬೇಲೂರು ಮಠವು ಮಾಧ್ಯಮಗಳ ಮೂಲಕ ಚಚೆ೯ಗೆ ಬಂದು ಜನ ಗುರುತಿಸುವಂತಾಯಿತು. ಸ್ಥಳೀಯರನ್ನು ಗುರುತಿಸುವ ಮೂಲಕ ಉತ್ತಮ ಕಾಯ೯ ಮಾಡುತಿದ್ದಾರೆನಿಸಿತ್ತು. ಇಬ್ಬರಲ್ಲಿ ಕೆ.ನೀಲಾ ಅವರು ಪ್ರಶಸ್ತಿ ಪಡೆಯುವಲ್ಲಿ ಅಷ್ಟೇನು ಆಸಕ್ತಿ ತೋರಲಿಲ್ಲವಾದ್ದರಿಂದ ಅವರು ಗೈರು ಹಾಜರಾಗಿದ್ದರು.

ಪ್ರಾರಂಭವಾದ ದಿನಗಳಿಂದ ಹಿಡಿದು ಕಳೆದ 2010ನೇ ಸಾಲಿನ ವಷ೯ದ ಪ್ರಶಸ್ತಿ ಕವಿ ಸರಜೂ ಕಾಟ್ಕರ್ ಹಾಗೂ ಡಾ. ಕೆ.ಆರ್. ದುಗಾ೯ದಾಸ ಅವರನ್ನು ಪ್ರಶಸ್ತಿ ನೀಡಿದ್ದರೂ ಕೂಡ ಇಬ್ಬರಲ್ಲಿ ಯಾರೊಬ್ಬರೂ ಪ್ರಶಸ್ತಿ ಸ್ವೀಕಾರಕ್ಕೆ ಬರದೇ ಇರುವುದು ಖೇದದ ಸಂಗತಿ ಹೌದು. ಈ ಭಾಗದಲ್ಲಿ ಫ್ರತಿಭಾವಂತರೇ ಇಲ್ಲವೆನ್ನುವಂತೆ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೖತರನ್ನೇ ಪ್ರಶಸ್ತಿ ನೀಡಿದರೆ ನಮ್ಮ ಘನತೆ ಹೆಚ್ಚುತ್ತದೆಂಬುದು ಬೇಲೂರು ಶ್ರೀಗಳ ಭ್ರಮೆಯಾಗಿದೆ.

ಹಂತ ಹಂತವಾಗಿ ಮೆಟ್ಟಿಲುಗಳಿಂದಲೇ ಗುರಿಮುಟ್ಟುಲು ಹತ್ತಬೇಕು ಎಂಬ ಪ್ರಥಮಿಕ ಅರಿವಿಲ್ಲದ ಶ್ರೀಗಳು ಒಮ್ಮೇಲೆ ಬೆಟ್ಟವನ್ನೇ ಹತ್ತಿ ಕೂರಬೇಕೆಂಬುದು ಅವರಲ್ಲಿನ ವಿಚಾರ ಸ್ವಂತದ್ದಲ್ಲ ಎನ್ನಬಹುದು. ಸಾಸ್ಕೖತಿಕ ರಾಯಭಾರಿ, ಸಾಹಿತಿ, ಸಂಘಟಕರೆಂದೆನಿಸಿಕೊಳ್ಳುವವರ ಪಾಲಾಗುತ್ತಿರುವ ಮಠಾಧೀಶರು ಅವರ ತಾಳಕ್ಕೆ ತಕ್ಕಂತೆ ಕುಣಿಯುತಿದ್ದಾರೆ. ಇದರಿಂದ ಮಾನ ಎಲ್ಲಿ ಕಳೆದು ಹೋಗುತ್ತಿದೆ ಹರಾಜಾಗುತ್ತಿದೆ ಎಂಬುದೇ ಸ್ವತಃ ಅವರಿಗೆ ಗೊತ್ತಿಲ್ಲ. ಒಟ್ಟಿನಲ್ಲಿ ಪ್ರಶಸ್ತಿಗೆ ಉರಿಲಿಂಗಪೆದ್ದಿ ಪ್ರಶಸ್ತಿಗೆ ಬೆಲೆ ಕುಸಿಯುತ್ತಿರುವುದು ಖಚಿತವಾಗಿದೆ.

ಇದೇ ಕಾಯ೯ಕ್ರಮಕ್ಕೆ ಫೆ. 15 ರಂದು ಖ್ಯಾತ ವೈಚಾರಿಕ ಚಿಂತಕ, ಆನುದೇವ ಹೊರಗಣವನು ಕೖತಿ ರಚನಾಕಾರ ಸಾಕಷ್ಟು ವಿವಾದಕೊಳಗಾಗಿರುವ ಲೇಖಕ ಡಾ. ಬಂಜಗೇರೆ ಜಯಪ್ರಕಾಶ ಅವರು ಇಲ್ಲಿ ಉದ್ಘಾಟನೆಗೆ ಬರುತಿದ್ದಾರೆ. ನೇರಾ ನೇರ ಭಾಷಣವನ್ನು ಮಾಡುವ ಚಿಂತಕ, ಲೇಖಕರನ್ನು ಇಲ್ಲಿನ ಜನತೆ ಅಷ್ಟು ಸರಳವಾಗಿ ಸ್ವೀಕರಿಸುವರೇ, ಹಳೇ ವಿಚಾರಗಳನ್ನು ತಲೆಯೆತ್ತಿದಾಗ ಈ ಪರಿಸರದಲ್ಲಿ ಏನಾಗಬಹುದು ಮತ್ತು ಗಲಭೆ, ಗೊಂದಲಗಳು ಆಗುತ್ತವೆಂಬುದು ಅರಿವಿಟ್ಟುಕೊಂಡು ಚಿಂತಿಸಬೇಕಾಗಿದೆ.

ಬೇಲೂರು ಉರಿಲಿಂಗ ಪೆದ್ದಿ ಮಠದ ಉತ್ಸವಕ್ಕೂ, ಇಲ್ಲಿ ನಡೆಸುವ ಸಾಂಸ್ಕೖತಿಕ, ಸಾಹಿತ್ಯೀಕ ಕಾಯ೯ಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಯಾರೋ ಹೇಳಿದರೆಂದು ಏನೋ ಮಾಡಲು ಹೋಗಿ ಮಠದ ಮಾನ ಕಳೆದುಕೊಳ್ಳುತ್ತಿರುವ ಮಠಾಧೀಶರು ಎಚ್ಚರಗೊಳ್ಳುವರೆ ಎಂದು ನುಡಿಯುತ್ತಾರೆ ಅವರ ಆಪ್ತ ವಲಯದವರು. ಅಂತೂ ಎರಡೂ ಕಡೆ ಒಟ್ಟಿಗೆ ಜಾನಪದ ಸಮ್ಮೇಳನದ ಪ್ರತಿಕ್ರಿಯೆ ಏನಾಗುತ್ತದೆ ಎಂಬ ಕುತೂಹಲ ಜನರಲ್ಲಿದೆ.








ಕಾಮೆಂಟ್‌ಗಳಿಲ್ಲ: