ಶುಕ್ರವಾರ, ಏಪ್ರಿಲ್ 1, 2011

ಸಾಹಿತ್ಯ, ಸಮಾಜ, ಸಂಸ್ಕ್ರತಿ, ಬಿಂಬಿಸುವ ವೀರ ಸಂಕಲ್ಪ


ವಿಶೇಷ ವರದಿ ಲೇಖನಃ ವಿ.ಎಚ್. ವೀರಣ್ಣ ಮಂಠಾಳಕರ್
ಚಿತ್ರ ಲೇಖನಃ ವಿ.ಎಚ್. ವೀರಣ್ಣ ಮಂಠಾಳಕರ್
--------------------------------


ಎಚ್.ಐ.ವಿ. ಸೋಂಕಿತರ ಆಶಾದೀಪ ಕೇಂದ್ರದ ಹೊರನೋಟದ ಚಿತ್ರ, ಎಚ್.ಐ.ವಿ ಪೀಡಿತ ಮಹಿಳಾ ರೋಗಿಯೊಬ್ಬಳು ತನ್ನ ಮಗುವಿನೊಂದಿಗೆ ವಿಶ್ರಾಂತಿ ಪಡೆಯುತ್ತಿರುವ ಮನಕಲಕುವ ದ್ರಶ್ಯ.
ಏಡ್ಸ ರೋಗಿಗಳ ಪಾಲಿನ ಆಶಾಕಿರಣಃ ಆಶಾದೀಪ ಸಂಸ್ಥೆ

ಬಸವಕಲ್ಯಾಣಃ ಅನಾರೋಗ್ಯದಲ್ಲಿ ನರಳುತ್ತಿರುವ ವ್ಯಕ್ತಿಯೊಬ್ಬ ಈ ಸಮಾಜ, ಕುಟುಂಬದಿಂದ ವಂಚಿತರಾಗುತ್ತಾರೆ. ಮುಟ್ಟಿದರೆ ನಮಗೂ ಅಂಟಿಕೊಳ್ಳುತದೆಂಬ ಜನರಿಂದ ದೂಷಿಸಲ್ಪಟ್ಟ ಏಡ್ಸ ಅಥವಾ ಎಚ್.ಐ.ವಿ. ರೋಗಿಗಳನ್ನು ಬದುಕುವ ಅವಕಾಶ ಕಲ್ಪಿಸಿಕೊಟ್ಟಂತಹ ಸಂಸ್ಥೆಯೊಂದು ಸದ್ದಿಲ್ಲದೆ ತನ್ನ ಪಾಡಿಗೆ ತಾನಾಗಿ ನಿಸ್ವಾಥ೯ ಸೇವೆಯನ್ನು ಮಾಡುತ್ತಿದೆ.

ಈ ರೀತಿಯ ಸೇವಾಮನೋಭಾವ ಹೊಂದಿರುವ ಆಸ್ಪತ್ರೆ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೌಡಿಯಾಳ ಗ್ರಾಮದಲ್ಲಿರುವ ಆಬಿ೯ಟ್ ಸಂಸ್ಥೆಯಡಿಯಲ್ಲಿನ ಆಶಾದೀಪ ಸಂಸ್ಥೆ ಸದ್ದಿಲ್ಲದೆ ಕಾಯ೯ನಿವ೯ಹಿಸುತಿದೆ. ಬಡವರ ಬಾಳಿನ ಆಶಾಕಿರಣವಾಗಿ ಕಾಯ೯ನಿವ೯ಹಿಸುತ್ತಿರುವುದು ನೋಡಿದರೆ ಮಾನವೀಯತೆಯನ್ನೇ ಮರೆತವರ ಅಂತಕರಣವನ್ನು ಸಹ ಮುಟ್ಟಿ ನೋಡುವಂತಿದೆ.

ಏಡ್ಸ ರೋಗಿಗಳ ಬಾಳಿಗೆ ಬೆಳಕ್ಕಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳಿರುವುದು ತುಂಬಾ ವಿರಳ. ಬದುಕುವ ಭರವಸೆಯನ್ನೇ ಕಳೆದುಕೊಂಡ ಎಚ್.ಐ.ವಿ.ಸೋಂಕಿತರೊಂದಿಗೆ ಆಪ್ತ ಸಮಾಲೋಚನೆ ನಡೆಸಿ, ನಿಮಗೂ ಈ ಸಮಾಜದಲ್ಲಿ ಬದುಕುವ ಹಕ್ಕುಂಟು ಎಂದು ತೋರಿಸಿಕೊಡುತಿದೆ.

ರೋಗಿಗಳಲ್ಲಿ ನವ ಚೈತನ್ಯವನ್ನು ತುಂಬಿ ಯಾವುದೇ ಪ್ರವೇಶ ಶುಲ್ಕವನ್ನಿಲ್ಲದೆ ಪ್ರಥಮ ಚಿಕಿತ್ಸೆಗಾಗಿ ಸೋಂಕಿತರನ್ನು ನೋಂದಾಯಿಸಿಕೊಳ್ಳುತ್ತಾರೆ. ಅಡ್ಡ ಪರಿಣಾಮಗಳ ಬಗ್ಗೆ ರೋಗಿಯನ್ನು ಪರೀಕ್ಷಿಸಿ ರೋಗಿ ಬಯಸಿದಷ್ಟು ಕಾಲ ಆಶ್ರಯವೂ ನೀಡುತ್ತಾರೆ.

2008 ರಲ್ಲಿ ಪ್ರಾರಂಭವಾದ ಆಬಿ೯ಟ್ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಆಶಾದೀಪ ಕ್ಲಿನಿಕ್ ನಲ್ಲಿ ಒಬ್ಬರು ವೈದ್ಯರು, ಇಬ್ಬರು ನಸ್೯, ನಾಲ್ಕು ಜನ ಕಾಯ೯ಕತ೯ರು ಸೇರಿದಂತೆ ಆಡಳಿತಾಧಿಕಾರಿಯಾಗಿ ಒಬ್ಬರು ಹಾಗೂ ಸಂಯೋಜಕಿ ಒಬ್ಬರು ಇಲ್ಲಿನ ರೋಗಿಗಳ ಸಂಪೂಣ೯ ಆರೈಕೆಯಲ್ಲಿ ಸಹಕರಿಸುತ್ತಾರೆಂದು ಹೇಳುತ್ತಾರೆ ಆಡಥಿತಾಧಿಕಾರಿ ಮತ್ತು ಸಂಯೋಜಕಿಯಾಗಿರುವ ಸಿಸ್ಟರ್ ಹೆಲನ್.

ಈ ಸಮಾಜದಲ್ಲಿ ಎಚ್.ಐ.ವಿ. ಸೋಂಕಿತರನ್ನು ಅವರ ಮನೆಯವರೇ ದೂರದ್ರಷ್ಠಿಯಿಂದ ನೋಡುತ್ತಾರೆ. ನಾವು ಅವರನ್ನು ನಮ್ಮಲ್ಲಿ ಬರಮಾಡಿಕೊಂಡು ಏಡ್ಸ ರೋಗವೆಂಬುದು ಶಾಪಗ್ರಸ್ತವಲ್ಲ. ಅದೊಂದು ಪ್ರಕ್ರತಿ ನಿಯಮದ ಸಹಜ ಕಾಯಿಲೆ ಎಂದು ಹೇಳುವುದರ ಜೊತೆಗೆ ಅವರಲ್ಲಿ ಭರವಸೆಯ ಮಾತುಗಳನ್ನಾಡುತ್ತೇವೆ ಎನ್ನುವ ಅವರು,

ಸೋಂಕಿನಿಂದ ಉದ್ಯೋಗ ಕಳೆದು ಕೊಂಡವರಿಗೆ ಬದುಕಿನ ಆಸರೆಗೆ ಸ್ವ-ಉದ್ಯೋಗ ಮಾಡಿಕೊಳ್ಳಲು ಧನ ಸಹಾಯ ಮಾಡುತ್ತೇವೆ. ಈ ಹಣವನ್ನು ಅವರು ಕಂತಿನ ರೂಪದಲ್ಲಿ ಬಡ್ಡಿ ರಹಿತವಾಗಿ ಹಿಂತಿರುಗಿಸಲು ಸೂಚಿಸಿ ಅಗತ್ಯಬಿದ್ದರೆ ಇನ್ನಷ್ಟು ಹಣವನ್ನು ಒದಗಿಸಿಕೊಡು ವ್ಯವಸ್ಥೆ ಮಾಡಿಸುತ್ತೇವೆ. ಈವರೆಗೆ ಒಟ್ಟು 45 ರಿಂದ 50 ಜನಕ್ಕೆ ಸ್ವ-ಉದ್ಯೋಗ ಕಲ್ಪಿಸಿದ್ದೇವೆ ಎಂದು ಅವರು ನುಡಿಯುತ್ತಾರೆ.

ಕನಾ೯ಟಕದವರಲ್ಲದೆ ಗಡಿಭಾಗ ಮಹಾರಾಷ್ಟ್ರದಿಂದಲೂ ಎಚ್.ಐ.ವಿ. ಸೋಂಕಿತರು ನಮ್ಮಲ್ಲಿ ಸಲಹೆ, ಸೂಚನೆ ಮೇರೆಗೆ ಚಿಕಿತ್ಸೆ ಪಡೆಯುತ್ತಾರೆ. ಕನಾ೯ಟಕಾದ್ಯಂತ ಇಂತಹ ಸೇವಾಸೌಲಭ್ಯದ ಒಟ್ಟು 38 ಕೇಂದ್ರಗಳಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರೆ ಬಂದು ಹೋಗುತ್ತಾರೆ. ಬಂದವರನ್ನು ಮಾನವೀಯತೆ ದ್ರಷ್ಠಿಯಿಂದ ನೋಡುವುದು, ಜಾತಿಭೇದವನ್ನಿಲ್ಲದೆ ಪ್ರತಿಯೊಬ್ಬ ರೋಗಿಗಳನ್ನು ಸಮಾನವಾಗಿ ನೋಡುವುದೇ ನಮ್ಮ ಕತ೯ವ್ಯವೆಂದು ಭಾವಿಸಿದ್ದೇವೆ. ನಮ್ಮ ಕೈಲಾದ ಸೇವೆಯಿಂದ ರೋಗಿಯನ್ನು ಗುಣಮುಖರನ್ನಾಗಿಸುವ ಗುರಿಯಾಗಿದೆ ಎನ್ನುತ್ತಾರೆ.

ಒಂದು ವೇಳೆ ಎಚ್.ಐ.ವಿ. ಸೋಂಕಿತರ ಸಾವನ್ನು ಸಂಭವಿಸಿದರೆ ಹೇಗೆ ಅವರ ಅಂತಿಮ ಕ್ರಿಯೆ? ಎಂದು ಪ್ರಶ್ನಿಸಿದಾಗ ಃ ಅಂತಹವರ ದೇಹವನ್ನು ಮುಟ್ಟಲು ಸಹ ಹೇಸುವ ಸಂಬಂಧಿಕರು ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ವತಿ೯ಸುತ್ತಾರೆ. ಆಗ ನೆವೇ ಸತ್ತ ರೋಗಿಯ ಅಂತ್ಯಕ್ರಿಯೆಗೆ ಮುಂದಾಗುತ್ತೇವೆ.

ಸತ್ತವರ ಮಕ್ಕಳನ್ನು ನಮ್ಮ ಆರೈಕೆಯಲ್ಲಿ ಇಟ್ಟುಕೊಂಡು ಅವರ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಶಾಲೆಗಳಲ್ಲಿ ಸೇರಿಸಿದರೆ ಅಲ್ಲಿಯುೂ ಇವರೊಂದಿಗೆ ತಾರತಮ್ಯ ನೀತಿ ಕಂಡು ಬರುತ್ತದೆ. ಎಚ್.ಐ.ವಿ. ಸೋಂಕಿತರ ಒಂದುವರೆ ವಷ೯ದ ಮಕ್ಕಳಲ್ಲಿಯುೂ ಈ ಏಡ್ಸ ಕಾಯಿಲೆ ಕಂಡು ಬರುವುದರಿಂದ ಇವರ ಮುಂದಿನ ಭವಿಷ್ಯದ ಚಿಂತನೆಯಲ್ಲಿ ಪರಿಹಾರಕ್ಕೆ ಮಾಗ೯ಗಳನ್ನು ಹುಡುಕುತಲೆ ಇರುತ್ತೇವೆ.

ಏಡ್ಸ ಪೀಡಿತ ಮಕ್ಕಳನ್ನು ಸಕಾ೯ರದಿಂದ ಅಥವಾ ಖಾಸಗಿ ಸಂಘ ಸಂಸ್ಥೆಗಳ ವ್ಯಕ್ತಿಗಳು ತಮ್ಮ ಸ್ವ-ಇಚ್ಛೆಯಿಂದ ಸಹಾಯ ಹಸ್ತ ನೀಡಿದರೆ ಹೆಗು ದತ್ತು ಪಡೆದುಕೊಳ್ಳುವುದಾಗಿ ಮುಂದೆ ಬಂದರೆ ನಾವು ಬೇಡವೆನ್ನುವುದಿಲ್ಲ ಎಂದು ಅವರು ಆಶಾಭಾವನೆಯಿಂದ ನುಡಿಯುತ್ತಾರೆ.

ಏಡ್ಸ ರೋಗಿಗಳ ಪಾಲಿನ ಆಶಾದೀಪ ಚಿಕಿತ್ಸಾಲಯ ಆಶಾಕಿರಣವಾಗಿದೆ. ಆದರೆ ಯಾವುದಕ್ಕೂ ಸಮಾಜದ ಗಣ್ಯರಿಂದ, ಸಂಘ-ಸಂಸ್ಥೆ, ಸಕಾ೯ರದಿಂದ ಸಹಕಾರವನ್ನು ದೊರೆತರೆ ನಿಲ೯ಕ್ಷಿಸಲ್ಪಟ್ಟ ಏಡ್ಸ ರೋಗಿಗಳನ್ನು ಬದುಕಿಸಿದ ಪುಣ್ಯ ಈ ಸಮಾಜಕ್ಕೆ ದೊರೆಯುತ್ತದೆ ಎನ್ನಬಹುದು.