ಗುರುವಾರ, ಮಾರ್ಚ್ 29, 2012

ಅಕ್ಕ ಚಿತ್ರದ ಕುರಿತು


ಚಿತ್ರ ನಟಿ ಅನು ಪ್ರಭಾಕರ ಅವರನ್ನು ಸಂದಶಿ೯ಸುತ್ತಿರುವ ಸಂದಭ೯ದಲ್ಲಿ ವೀರಣ್ಣ ಮಂಠಾಳಕರ್

ಅಕ್ಕ ಚಿತ್ರೀಕರಣದಲ್ಲಿ ನಟಿಸುತ್ತಿರುವ ಅನುಪ್ರಭಾಕರ


ಚಿತ್ರ ನಟಿ ಅನುಪ್ರಭಾಕರ್ ಪತ್ರಿಕಾ ಸಂದಶ೯ನದಲ್ಲಿ, ಅಕ್ಕ ಚಿತ್ರದ ಕುರಿತು ಅಭಿಪ್ರಾಯ ಹಂಚಿಕೊಳ್ಳುತ್ತಿರುವುದು.



ಚಿತ್ರ ನಟಿ ಅನುಪ್ರಭಾಕರ್ ಪತ್ರಿಕಾ ಸಂದಶ೯ನದಲ್ಲಿ, ಅಕ್ಕ ಚಿತ್ರದ ಕುರಿತು ಅಭಿಪ್ರಾಯ ಹಂಚಿಕೊಳ್ಳುತ್ತಿರುವುದು.
------------------

ಬಸವಕಲ್ಯಾಣ, ಮಾ. 19


12ನೇ ಶತಮಾನದ ಅಕ್ಕ ಮಹಾದೇವಿ ಅವರ ಧಾಮಿ೯ಕ ವ್ಯಕ್ತಿತ್ವಕ್ಕಿಂತ ಹೆಚ್ಚಾಗಿ ವಯಕ್ತಿಕ ಬದುಕಿನಲ್ಲಿ ನಡೆದ ಸಂಘಷ೯, ಸಂವೇದನೆಗಳನ್ನೊಳಗೊಂಡ ಅಕ್ಕ ಎಂಬ ಸಿನಿಮಾ ಚಿತ್ರೀಕರಣ ಮುಗಿಸಿ ಶರಣರ ನೆಲೆ ಬೀಡಾದ ಬಸವಕಲ್ಯಾಣದಲ್ಲಿ ಇದೇ ಮಾ. 20 ರಿಂದ 28 ರವರೆಗೆ ಚಿತ್ರ ನಿದೇ೯ಶಕ ಮಂಜು ಸಿದ್ಧನಮಠ ಅವರ ನಿದೇ೯ಶನದಲ್ಲಿ ಜರುಗಿತ್ತು.

ಜ್ಯೋತಿ ಎಂಬ ಆಧುನಿಕ ಮನಸ್ಸಿನ ಯುವ ಮಹಿಳೆಯಾಗಿ ಅಕ್ಕ ಸಿನಿಮಾದಲ್ಲಿ ನಟಿ ಅನು ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತಿದ್ದು ಚಿತ್ರದಲ್ಲಿ ಎಂಫಿಲ್್ ಅಧ್ಯಯನ ಮಾಡುವ ಯುವತಿಯಾಗಿ ಕಾಣಸಿಕೊಂಡಿದ್ದಾರೆ.

ಜ್ಯೋತಿ ತಾನು ಪ್ರೀತಿಸಿದ ಶಶಿಧರನನ್ನು ಮದುವೆಯಾಗಲು ಜಾತಿ, ಅಂತಸ್ತುಗಳು ಅಡ್ಡಿಯಾದಾಗ ಅದನ್ನು ಎದುರಿಸಲಾಗದೇ ಅವಿನಾಶ್್ ಎಂಬ ಉದ್ಯಮಿಯೊಬ್ಬನನ್ನು ಮದುವೆಯಾಗಿ ಬೆಂಗಳೂರು ಸೇರುವುದು ಚಿತ್ರದ ಮೂಲ ಸಾರಾಂಶವಾಗಿದೆ ಎಂದರು.

ಗಂಡನ ಕಾಮದ ಬೊಂಬೆಯಾಗಲು ಇಚ್ಛಿಸದೇ ಕೆಲವೇ ದಿನಗಳಲ್ಲಿ ಗಂಡನಿಂದ ಬೇಪ೯ಟ್ಟು, ಸಂಬಂಧಿ ಪ್ರಮೀಳಾ ಎನ್ನುವವಳ ಮನೆಯಲ್ಲಿ ಜ್ಯೋತಿ ನೆಲೆಸುತ್ತಾಳೆ. ಅಕ್ಕಮಹಾದೇವಿ ಎಂಬ ವಿಷಯದಡಿ ಜ್ಯೋತಿ ಪಿಎಚ್್ಡಿ ಕೈಗೊಂಡು ಉಡುತಡಿ, ಕಲ್ಯಾಣ, ಶ್ರೀಶೈಲದ ನೆಲೆಗಳನ್ನು ಅರಸುತ್ತಾ ಒಂಬೈನೂರು ವಷ೯ಗಳ ಹಿಂದೆ ಬದುಕಿದ ಅಕ್ಕನ ಚರಿತ್ರೆಯನ್ನು ತನ್ನದೇ ರೀತಿಯಲ್ಲಿ ದಾಖಲಿಸಲು ಹೋಗುವುದೇ ಚಿತ್ರದಲ್ಲಿನ ಮೂಲಾಂಶವಾಗಿದೆ ಎಂದು ವಿವರಿಸಿದರು.

ಜ್ಯೋತಿಯ ಪ್ರಯಾಣ, ಅಧ್ಯಯನ, ಚಿಂತನೆ, ಆಕೆಯ ಸುತ್ತ ನಡೆಯುವ ಘಟನೆಗಳ ಪರಿಧಿಯಲ್ಲಿ ಅಕ್ಕನ ಚರಿತ್ರೆ ಕೂಡ ಅನಾವರಣಗೊಳ್ಳುವುದು ಕಲ್ಯಾಣದಲ್ಲಿದ್ದ ಶರಣ ಶರಣೆಯರ ಸಂಪಕ೯ ಸಾಧಿಸುವ ಅಂತರಂಗದ ತುಮುಲ ಚಿಂತನೆಗಳನ್ನು ಬಹಿರಂಗಗೊಳಿಸುವುದೇ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಣಿ ಅನುಪ್ರಭಾಕರ ಅವರದ್ದಾಗಿದೆ ಎಂದು ಹೇಳಿದರು.

ಒಂದು ವಾರ ನಡೆಯಲಿರುವ ಅಕ್ಕ ಚಿತ್ರದ ಪ್ರಮುಖ ನಾಯಕ ನಟರಾಗಿ ನವೀನ್್ ಕೖಷ್ಣ ಹಾಗೂ ನೀನಾಸಂ ಅಶ್ವಥ್್, ಅರುಣ ಸಾಗರ್್, ಪ್ರಮೋದ ಕಾಸರವಳ್ಳಿ ಮತ್ತಿತರರು ತಾರಾಗಣದಲ್ಲಿ ಇದ್ದಾರೆ. ಚಿತ್ರಕಥೆ, ಸಂಭಾಷಣೆ, ನಿದೇ೯ಶನ ಮಂಜು ಸಿದ್ಧನಮಠ ಅವರು ನಿವ೯ಹಿಸಲಿದ್ದಾರೆ. ಛಾಯಾಗ್ರಹಣ ನಾಗರಾಜ ಅದವಾನಿ, ಶ್ರೀ ಲಕ್ಷ್ಮೀ ಜಿ. ರಾಜ್್ ಸಂಗೀತ, ನಿಮಾ೯ಣ ಹಾಗೂ ನಿವ೯ಹಣೆ ವಿಜಯ ಉಪ್ಪುಂದ, ಮಲ್ಲಿಕಾಜು೯ನ, ದಿನೇಶ, ಹೇಮಂತ ಸಹ ನಿದೇ೯ಶಕರಾಗಿದ್ದಾರೆ ಎಂದು ವಿವರಿಸಿದರು.

ನಿದೇ೯ಶಕ ಮಂಜು ಸಿದ್ಧನಮಠ ಅವರು ಸತತ 25 ವಷ೯ಗಳಿಂದ ಸಿನಿಮಾ ರಂಗದಲ್ಲಿ ಸೇವೆ ಸಲ್ಲಿಸುತ್ತಾ ಎಂ.ಎಸ್.ಸತ್ಯು ಅವರೊಂದಿಗೆ ಕೆಲಸ ಮಾಡಿದ ಅನುಭವ ಪಡೆದಿದ್ದಾರೆ. ಅಂತಿಮ ರಾಜಾ, ಪ್ರತಿಧ್ವನಿ, ಕಾಯರ್್, ಚೋಲಿಧವನ ಪ್ರಶಸ್ತಿ ವಿಜೇತ ಹಿಂದಿ ಕಿರು ಚಿತ್ರಗಳು ನಿದೇ೯ಶಿಸಿ, ಸುರೇಶ ಹೆಬ್ಳಿಕರ್ ಅವರೊಂದಿಗೆ ಅಂತರಾಳ, ಆಗಂತುಕ, ಕಾಡಿನ ಬೆಂಕಿ ಎಂಬ ಸಿನಿಮಾಗಳನ್ನು ನಿದೇ೯ಶಿಸಿದ ಅಕ್ಕ ಸಿನಿಮಾ ಸ್ವತಂತ್ರ ಚಿತ್ರವಾಗಲಿದೆ.

ಆವರಣ, ಅಮಾಯಕರು, ಹೊಸ ಹಾದಿ, ನಾಡ ದೀಪ, ಚಿರಸ್ಮರಣೆ, ಆಡೋಣ ಬಾ,ಸ್ತ್ರೀ ಲೋಕ, ಅನುಭವ ಸೇರಿದಂತೆ ಮುಂತಾದ ಕನ್ನಡದ ಧಾರಾವಾಹಿಗಳಲ್ಲಿ ಸಹ ನಿದೇ೯ಶಕರಾಗಿ, ನಿದೇ೯ಶಕರಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಹೀಗೆ ಕಿರು ಚಿತ್ರ, ಅನೇಕ ಸಾಕ್ಷಚಿತ್ರಗಳು ಸಹ ನಿದೇ೯ಶಿಸಿದ್ದಾರೆ. ಈಟಿವಿ ಹಾಗೂ ಎನ್್ಜಿಓಎಸ್್ ಗಳಲ್ಲಿ ಕಿರು ಚಿತ್ರಗಳು ನಿದೇ೯ಶಿಸಿದ್ದಾರೆ.
-----------------------------------------

ಬಸವಕಲ್ಯಾಣ, ಮಾ. 20

ಕಳೆದೆರಡು ವಷ೯ಗಳಿಂದ ಚಲನಚಿತ್ರ ತಂಡಗಳು ಬೀದರ ಜಿಲ್ಲೆಯತ್ತ ಗಮನ ಹರಿಸುತ್ತಿರುವಂತೆ ಚಿತ್ರೀಕರಣಕ್ಕಾಗಿ ಐತಿಹಾಸಿಕ ಮತ್ತು ಪ್ರಮುಖವಾದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ಚಿತ್ರ ಪೇಮಿಗಳಿಗೆ ಸಂಭ್ರಮದ ಹಬ್ಬವನ್ನಾಗಿ ವಾತಾವರಣ ಸೖಷ್ಠಿಯಾಗುತ್ತಿರುವುದು ಕಂಡು ಬರುತ್ತಿದೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರ ತಂಡಗಳು ಬೀದರ, ಬಸವಕಲ್ಯಾಣ, ಹುಮನಾಬಾದ ತಾಲೂಕಿನ ದುಬಲಗುಂಡಿ ಗ್ರಾಮಗಳತ್ತಲೂ ಲಗ್ಗೆ ಇಡುತ್ತಿರುವುದು ಸಾಮಾನ್ಯವಾಗಿದೆ. ಸಿನಿಮಾ ನಟ-ನಟಿಯರೆಂದರೆ ಅಚ್ಚರಿಯಿಂದ ಬೆರಗಾಗಿ ನೋಡುವ ಕಾಲ ದೂರವಾಗಿ ನಾಯಕ ನಾಯಕಿಯರನ್ನು ಮುಖಾಮುಖಿ ನೋಡಿ ಚಿತ್ರ ರಸಿಕರು ಕಣ್ಮನ ತಣಿಸಿಕೊಳ್ಳುತ್ತಿದ್ದಾರೆ.

ದೖಷ್ಟಿ ನಿಮಾ೯ಣದಲ್ಲಿ ತಯ್ಯಾರಾಗುತ್ತಿರುವ ಅಕ್ಕ ಚಿತ್ರೀಕರಣದ ಮುಹೂತ೯ ಬಸವಕಲ್ಯಾಣ ನಗರದ ಅನುಭವ ಮಂಟಪದಲ್ಲಿ ಮಂಗಳವಾರ ಆರಂಭಗೊಂಡಿದೆ. ಚಿತ್ರದ ಪ್ರಮುಖ ನಾಯಕಿಯಾಗಿ ಹಿನ್ನೆಲೆ ಕಲಾವಿದೆ ಗಾಯತ್ರಿ ಪ್ರಭಾಕರ ಅವರ ಮಗಳು ಖ್ಯಾತ ನಟಿ ಅನು ಪ್ರಭಾಕರ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತಿದ್ದಾರೆ.

ಬಸವಕಲ್ಯಾಣ ನಗರದೆಲ್ಲೆಡೆ ಒಂದು ವಾರ ಪಯ೯ಂತ ನಡೆಯಲಿರುವ ಅಕ್ಕ ಕನ್ನಡ ಚಲನಚಿತ್ರದಲ್ಲಿ ಜ್ಯೋತಿ ಎಂಬ ಪಾತ್ರದಲ್ಲಿ ಪಿಎಚ್್ಡಿ ವಿದ್ಯಾಥಿ೯ನಿಯಾಗಿ ನಟಿಸುತ್ತಿರುವ ಅನು ಪ್ರಭಾಕರ 12 ನೇ ಶತಮಾನದ ಶರಣೆ ಅಕ್ಕ ಮಹಾದೇವಿ ಬಗ್ಗೆ ಸಂಶೋಧನೆ ಕೈಗೊಂಡು ಆಧುನಿಕ ಮಹಿಳೆಯೊಬ್ಬಳು ಎದುರಿಸುವ ಸವಾಲುಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದಶಿ೯ಸಲಿದ್ದಾರೆ.

ಶರಣೆ ಅಕ್ಕ ಮಹಾದೇವಿ ಅವರಿಗೆ ಒಂಬೈನೂರು ವಷ೯ಗಳ ಹಿಂದೆ ನೀಡಿದ ಸಮಾನತೆಗೂ ಇವತ್ತಿನ ಆಧುನಿಕ ಜಗತ್ತಿನಲ್ಲಿ ಮಹಿಳೆಯೊಬ್ಬಳಿಗೆ ಸಮಾಜ ನೀಡುವ ಸ್ಥಾನಮಾನ, ಸ್ವಾತಂತ್ರ್ಯ ಎಂಥಹುದು ಎಂಬುದು ಚಿತ್ರದ ಕಥಾ ಹಂದರವಾಗಿದೆ. ಅಂತಹ ಕೆಲವು ದೖಶ್ಯದ ತುಣುಕುಗಳು ದಿನವೀಡಿ ಶರಣರ ಸ್ಮಾರಕಗಳೆಲ್ಲೆಡೆ ಚಿತ್ರೀಕರಣಗೊಳ್ಳಲಿವೆ ಎಂದು ನಿದೇ೯ಶಕ ಮಂಜು ಸಿದ್ಧನಮಠ ವಿವರಿಸಿದರು.

ಮಂಗಳವಾರದ ದೖಶ್ಯ 2 ರಲ್ಲಿ ನಟಿ ಅನು ಪ್ರಭಾಕರ ಅವರು ಸಂಶೋಧನಾ ವಿದ್ಯಾಥಿ೯ನಿ ಜ್ಯೋತಿ ಪಾತ್ರದಲ್ಲಿ ಕಾಣಿಸಿಕೊಂಡು ಗೆಳತಿಯೊಂದಿಗೆ ಕಾರಿನಲ್ಲಿ ಬಂದಿಳಿದ ದೖಶ್ಯ ಚಿತ್ರೀಕರಣಗೊಂಡಿತ್ತು. ಚಿತ್ರ ದೖಶ್ಯದ ಸಂಭಾಷಣೆಯಂತೆ, ಇದಕ್ಕೆ ಅನುಭ ಮಂಟಪ ಎಂದು ಕರೆಯುತ್ತಾರೆ ಮೇಡಮ್್ ನಿಮಗೆ ಗೊತ್ತಿದ್ದ ಹಾಗೇ... ಎಂಬ ಸಂಭಾಷಣೆ ತುಣುಕು ಸೆರೆ ಹಿಡಿಯಲಾಯಿತ್ತು.

ತಂತ್ರಜ್ಞ ನಿಮಾ೯ಪಕರಾಗಿ ಅಣಜಿ ನಾಗರಾಜ, ಛಾಯಾಗ್ರಹಕರಾಗಿ ನಾಗರಾಜ ಅದವಾನಿ, ಶ್ರೀ ಲಕ್ಷ್ಮೀ ಜಿ. ರಾಜ್್ ಸಂಗೀತದಲ್ಲಿ ಸಹಾಯಕ ನಿದೇ೯ಶಕರಾಗಿ ಮಲ್ಲಿಕಾಜು೯ನ, ದಿನೇಶ, ಹೇಮಂತ ಕಾಯ೯ ನಿವ೯ಹಿಸುತಿದ್ದಾರೆ. ಪ್ರಮುಖ ತಾರಾಗಣದಲ್ಲಿ ನಾಯಕ ನಟರಾಗಿ ನವೀನ ಕೖಷ್ಣ ಅಭಿನಯಿಸುತಿದ್ದಾರೆ.

ಶುಭಾ ಪೂಂಜ, ನೀನಾಸಂ ಅಶ್ವಥ್್, ಅರುಣ್್ ಸಾಗರ್್, ಪ್ರಮೋದ ಕಾಸರವಳ್ಳಿ, ಮಾಲತಿ, ರಾಧಾ ಮುಂತಾದವರ ಅಭಿನಯದಲ್ಲಿ ಬಸವಕಲ್ಯಾಣ ಸೇರಿದಂತೆ ಶ್ರೀಶೈಲ್್, ಬೆಂಗಳೂರು ಮುಂತಾದೆಡೆ ಚಿತ್ರೀಕರಣ ನಡೆಯಲಿದೆ. ಚಿತ್ರದ ಮುಹೂತ೯ ಇಲ್ಲಿಂದಲೇ ಆರಂಭಿಸಬೇಕೆಂಬ ಕನಸು ನಮ್ಮದಾಗಿತ್ತು ಎಂದು ನಿದೇ೯ಶಕ ಮಂಜು ತಿಳಿಸಿದ್ದಾರೆ.