ಶುಕ್ರವಾರ, ಏಪ್ರಿಲ್ 15, 2011

ಬಸವಕಲ್ಯಾಣಕ್ಕೆ ಆಗಮಿಸಿದ್ದ ಖ್ಯಾತ ಸಂಗೀತ ನಿದೇ೯ಶಕ ಗುರುಕಿರಣ ಅವರನ್ನು

ಇತ್ತೀಚೆಗೆ ಬಸವಕಲ್ಯಾಣಕ್ಕೆ ಆಗಮಿಸಿದ್ದ ಖ್ಯಾತ ಸಂಗೀತ ನಿದೇ೯ಶಕ ಗುರುಕಿರಣ ಅವರೊಂದಿಗೆ ಭೇಟಿಯಾದ ಸಂದಭ೯ದಲ್ಲಿ ಯುವಕವಿ ವೀರಣ್ಣ ಮಂಠಾಳಕರ್ ಹಾಗೂ ಜನವಾದಿ ಸಂಘಟನಾಕಾತಿ೯ ಲಕ್ಷ್ಮೀ ಬಾವಗೆ ಅವರು ಭೇಟಿಯಾದ ಸಂದಭ೯ದಲ್ಲಿ ತೆಗೆಸಿಕೊಂಡ ಅಪರೂಪದ ಚಿತ್ರಗಳು.


ವೀರಣ್ಣ ಮಂಠಾಳಕರ್ ಹಾಗೂ ಲಕ್ಷ್ಮೀ ಬಾವಗೆ ಅವರು ಇತ್ತೀಚೆಗೆ ಬಸವಕಲ್ಯಾಣಕ್ಕೆ ಆಗಮಿಸಿದ್ದ ಖ್ಯಾತ ಸಂಗೀತ ನಿದೇ೯ಶಕ ಗುರುಕಿರಣ ಅವರನ್ನು ಭೇಟಿಯಾದ ಸಂದಭ೯ದಲ್ಲಿ

ಗುರುವಾರ, ಏಪ್ರಿಲ್ 14, 2011

ಮಂಠಾಳಕರ್ ಜೀವನ ಅನುಭವದಿಂದ.....

ಭಾಗ-1
---------

ವೀರಣ್ಣ ಮಂಠಾಳಕರ್ ಜೀವನ ಅನುಭವದಿಂದ.....

ನಾನೊಬ್ಬ ಹವ್ಯಾಸಿ ಬರಹಗಾರ, ಪತ್ರಕತ೯ನಾಗಿ ಬಸವಕಲ್ಯಾಣ ತಾಲೂಕಿನಲ್ಲಿ ಸೇವೆ ಸಲ್ಲಿಸುತಿದ್ದೇನೆ. ನನ್ನ ಬಗ್ಗೆ ಹೇಳುವಂಥದ್ದು ಏನಿಲ್ಲವಾದರೂ ಕೆಲವು ಆಸಕ್ತಿದಾಯಕವಾದ ವಿಚಾರಗಳನ್ನು ತಮ್ಮ ಮುಂದೆ ಹೇಳಲು ಇಷ್ಟಪಡುತ್ತೇನೆ. ಕಾರಣ ಇಷ್ಟೆ. ನನಗೆ ಸಾಹಿತ್ಯಿಕ ಪತ್ರಿಕೆಯೊಂದನ್ನು ತೆಗೆಯಬೇಕೆಂಬ ಸಂಕಲ್ಪ ಬಹಳ ದಿನಗಳದ್ದಾಗಿತ್ತು. ಅದಕ್ಕಾಗಿ 2005 ರಲ್ಲಿ ಪತ್ರಿಕೆಯೊಂದನ್ನು ಪ್ರಾರಂಭಿಸಿದೆ. ಆಥಿ೯ಕ ಮುಗ್ಗಟ್ಟಿನಿಂದ ಕೆಲವೇ ಸಂಚಿಕೆಗಳನ್ನು ಪ್ರಕಟಿಸಿ ಅಸಮಾಧಾನಕೊಳಗಾದೆ. ತುಂಬಾ ಆಸಕ್ತಿಯಿಂದ ಪ್ರಾರಂಭಿಸಿದ ಪತ್ರಿಕೆ ನಿಂತು ಹೋಯಿತಲ್ಲ ಎಂಬ ಸಂಕಟದಲ್ಲಿದ್ದೆ. ಹೊಟ್ಟೆಪಾಡಿಗಾಗಿ
ಪಟ್ಟಣಗಳಿಗೆ ಅಲೆದಾಡಿದೆ. ಎಲ್ಲೂ ಒಂದು ಸ್ಥಿರವಾದ ನೆಲೆ ಸಿಗಲಿಲ್ಲ. ಕೊನೆಗೆ ಗುಲ್ಬಗಾ೯ದ ಸ್ಥಳೀಯ ಪತ್ರಿಕೆಯೊಂದರಲ್ಲಿ ಉಪಸಂಪಾದಕನಾಗಿ ಕೆಲಸಕ್ಕೆ ಸೇರಿದೆ. ಅಲ್ಲಿಂದಲೇ ಶುರುವಾಯಿತು. ನನ್ನ ಬದುಕಿನ ಮಹತ್ವದ ಗುರಿಯೊಂದಕ್ಕೆ ಮೆಟ್ಟಿಲುಗಳ ನಿಮಾ೯ಣ. ಆದರೆ ಆ ಮಹತ್ವದ ಬದಲಾವಣೆಯ ಬಗ್ಗೆ ನನಗೇ ಅರಿವಿರಲಿಲ್ಲ. ಕಾರಣ ಹೊಟ್ಟೆಪಾಡಿಗೆಗಿ ಕೆಲಸಕ್ಕೆ ಸೇರಿದ ನನಗೆ, ನಾನು ಪ್ರಕಟಿಸಿದ ಕವನ ಸಂಕಲನಗಳು ಹಾಗೂ ಸಂಕಲ್ಪ ಮಾಸ ಪತ್ರಿಕೆಯ ಸಂಚಿಕೆಗಳು ದಿನದ ಒಂದು ಹೊತ್ತು ಕೂಳನ್ನು ಕೊಡುತಿತ್ತು. ಆ ಪತ್ರಿಕಾ ಕಚೇರಿಯಲ್ಲಿ ಕೆಲಸಕ್ಕೆ ಸೇರಿದಕ್ಕಾಗಿ ಕಂಪ್ಯೂಟರ್ ಎಬುದೇ ರೊತ್ತಿರದ ನನಗೆ, ಅಕ್ಷರ ಜೋಡಣೆ ಮಾಡುವುದನ್ನು ಕಲಿಸಿತ್ತು.  ಹೀಗೆ ಕಾಲಕ್ರಮೇಣವಾಗಿ ಸಾಹಿತ್ಯದ ಇನ್ನೂ ಹೆಚ್ಚಿನ ಅಭಿರುಚಿ ಬೆಳೆದ ಪ್ರತೀಕವಾಗಿ ನಾಲ್ಕಾರು ಪುಸ್ತಕಗಳನ್ನು ಪ್ರಕಟಿಸಿದೆ. ನನ್ನ ಮೊಟ್ಟ ಮೊದಲನೆಯ ಸಂಕಲನ ಭಾವಾಂತರಂಗ ಬೀದರ ಜಿಲ್ಲೆಯ ಧೀಮಂತ ಕಥೆಗಾರ ದಿ.ಶ್ರೀಕಾಂತ ಪಾಟೀಲರು ಸ್ವ-ಆಸಕ್ತಿಯಿಂದ ಬಸವಕಲ್ಯಾಣದಲ್ಲಿ ಬಿಡುಗಡೆಗೊಳಿಸಿದರು.
                                            ಸರಣಿ ಲೇಖನವಾಗಿ ಮುಂದೊರೆಯುತ್ತದೆ.....

www.manthalkar-veersankalpa.blogspot.com

ಬುಧವಾರ, ಏಪ್ರಿಲ್ 13, 2011

ಬಸವಕಲ್ಯಾಣ ತಾಲೂಕಿನಲ್ಲಿರುವ ಮೋರಖಂಡಿ ಗ್ರಾಮದಲ್ಲಿರುವ ಚಾಲುಕ್ಯರ ಕಾಲದ ಶಿವಮಂದಿರದ ಶಿಲಾ ಶಾಸನಗಳ ಕೆಲವು ಚಿತ್ರಗಳು.


ಐತಿಹಾಸಿಕ ಹಿನ್ನೆಲೆಯ ಗತವೈಭವ ಸಾರುತ್ತಿದೆಃ ಬಸವಕಲ್ಯಾಣ ತಾಲೂಕಿನ ಮೋರಖಂಡಿ ಗ್ರಾಮದಲ್ಲೊಂದು ಚಾಲುಕ್ಯರ ಕಾಲದ ಶಿವಮಂದಿರ
( ಇದಕ್ಕೆ ಬೇಕಾಗಿದೆ ಸಕಾ೯ರದಿಂದ ಕಾಯಕಲ್ಪ-ಜೀಣೋ೯ದ್ಧಾರದ ಸಂಕಲ್ಪ)

 ಚಿತ್ರ ಲೇಖನ :    ವಿ.ಎಚ್. ವೀರಣ್ಣ ಮಂಠಾಳಕರ್





 ಚಿತ್ರ ಲೇಖನ ವರದಿಃ ವಿ.ಎಚ್.ವೀರಣ್ಣ ಮಂಠಾಳಕರ್
-----------------------------------------------

ಐತಿಹಾಸಿಕ ಹಿನ್ನೆಲೆಯ ಗತವೈಭವ ಸಾರುತ್ತಿದೆಃ ಬಸವಕಲ್ಯಾಣ ತಾಲೂಕಿನ ಮೋರಖಂಡಿ ಗ್ರಾಮದಲ್ಲೊಂದು ಚಾಲುಕ್ಯರ ಕಾಲದ ಶಿವಮಂದಿರ
( ಇದಕ್ಕೆ ಬೇಕಾಗಿದೆ ಸಕಾ೯ರದಿಂದ ಕಾಯಕಲ್ಪ-ಜೀಣೋ೯ದ್ಧಾರದ ಸಂಕಲ್ಪ)

ಬಸವಕಲ್ಯಾಣಃ ಏ-13. ಇತಿಹಾಸದ ಕುರುಹುಗಳ ಜೀಣೋ೯ದ್ಧಾರ ಮಾಡಬೇಕಾದ ಸಕಾ೯ರದ ಜವಾಬ್ದಾರಿ ಕೆಲವೆಡೆ ನಿಲ೯ಕ್ಷಕೊಳಗಾಗಿ ಅವನತಿಯ ಅಂಚಿನಲ್ಲಿ ಅವು ಮರೆಯಾಗಿ ಹೋಗುತ್ತಿರುವುದು ಇತಿಹಾಸ ಎಂಬುದು ಬರೀ ಕಲ್ಪನೆಗಳಲ್ಲಿ ಉಳಿದು ಬಿಡಬಹುದೇನೋ ಎನ್ನುವಂತೆ ಆತಂಕ ಎದುರಾಗುತ್ತದೆ. ಚಾಲುಕ್ಯರ ಕಾಲದಲ್ಲಿ ಕಟ್ಟಲ್ಪಟ್ಟ ದೇವಸ್ಥಾನಗಳು ಬಹುತೇಕ ಜನ ಮರೆತು ಕುಳಿತಂತಿದೆ ಅನಿಸುತ್ತಿದೆ.

ಇತಿಹಾಸದ ನೆನಪುಗಳು ಯಾರಿಗೂ ಬೇಕಾಗಿಲ್ಲ ಎನ್ನುವಂತೆ ಜನ ಮರೆತು ಕುಳಿತಂತಿದ್ದರೂ ಅವುಗಳ ಆಕಷ೯ಣೆಗೆ ಒಳಗಾಗುವವರಿಗೆ ಒಂದು ವಿಚಿತ್ರ ಅನುಭವವನ್ನೆ ನೀಡುತದೆ. ಚಾಲುಕ್ಯರ ಕಾಲದಲ್ಲಿದ್ದ ಶಿಲಾ ಶಾಸನಗಳ ಕಟ್ಟಡಗಳು ಅಲ್ಲೊಂದು ಇಲ್ಲೊಂದು ನೋಡಲು ಮಾತ್ರ ಸಿಗುವಂತಿವೆ. ಅವುಗಳ ರಕ್ಷಣೆಗೆ ಮುಂದಾಗಬೇಕಾದ ಸಕಾ೯ರ ನಿಲ೯ಕ್ಷಿಸದೇ ಉಥಗಸಬೇಕಾಗಿದೆ.

ಇಂತಹ ನಿಲ೯ಕ್ಷಕ್ಕೆ ಒಳಗಾಗಿರುವ ಬಸವಕಲ್ಯಾಣ ತಾಲೂಕಿನ ಮೋರಖಂಡಿ ಗ್ರಾಮದಲ್ಲಿರುವ ಚಾಲುಕ್ಯರ ಕಾಲದ ಶಿವಮಂದಿರ ಕಟ್ಟಡವನ್ನು ಇತಿಹಾಸದ ಗತವೈಭವ ಸಾರುವಂತಿದೆ. ಆದರೆ ಹಾಳುಬಿದ್ದ ಕಟ್ಟಡದತ್ತ ಸಂಬಂಧಿಸಿದವರು ಕಾಳಜಿವಹಿಸಿ ಜೀಣೋ೯ದ್ದಾರ ಮಾಡುವ ಉದ್ದೇಶದಿಂದ ಕೈಗೆತ್ತಿಕೊಂಡರೆ ಚಾಲುಕ್ಯ ಅರಸರ ಆಳ್ವಿಕೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇತ್ತ ಒಂದಿಷ್ಟು ಕಣ್ಣು ಹಾಯಿಸಿದರೆ ಅಳಿವಿನಂಚಿನಲ್ಲಿರುವ ಕಟ್ಟಡಗಳು ಮುಂದಿನ ಪೀಳಿಗೆಗಾಗಿ ಐತಿಹಾಸಿಕ ಹಿನ್ನೆಲೆಯ ಚಿತ್ರಣವನ್ನು ಕಲ್ಪನೆಗಿಂತ ವಾಸ್ತವಾಗಿ ತೋರಿಸಬಹುದು.

ಬಸವಕಲ್ಯಾಣ ತಾಲೂಕಿನಿಂದ ಕೆಲವೇ ಕಿ.ಮೀ, ಅಂತರವಿರುವ ಮೋರಖಂಡಿ ಗ್ರಾಮದಲ್ಲಿರುವ ಶಿವಮಂದಿರ ಕೆರೆಯ ದಡದಲ್ಲಿ ಅನಾಥವಾಗಿ ಶಿವ ದೇವಾಲಯ ಕೈ ಬೀಸಿ ಕರೆಯುವಂತೆ ಕಂಡು ಬರುತ್ತದೆ. ಯಾವುದ್ಯಾವುದೋ ದೇವಸ್ಥಾನಗಳಿಗೆ ಅನುದಾನದ ಹೊಳೆಯನ್ನು ಸರಾಗವಾಗಿ ಹರಿಸುತ್ತಿರುವ ಸಕಾ೯ರ ಅವನತಿಯಲ್ಲಿ ಉಳಿದಿರುವ ಐತಿಹಾಸಿಕ ಶಿಲಾ ಶಾಸನಗಳ ಕಟ್ಟಡಗಳು ಕೈಗೆತ್ತಿಕೊಳ್ಳಬೇಕಾದ್ದು ಅವಶ್ಯವಾಗಿದೆ.

ಅಭಿವ್ರದ್ಧಿಯ ಪಥದಲ್ಲಿ ಸಾಗುತ್ತಿರುವ ಬಸವಕಲ್ಯಾಣ ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ಇಂತಹ ಇತಿಹಾಸದ ಕಥೆ ಹೇಳುವ ಮಂದಿರಗಳಿಂದ ಖುಷಿ, ನೆಮ್ಮದಿಯನ್ನು ಕೊಡುತ್ತದೆ. ಅಲ್ಲದೆ ಇಲ್ಲಿ ಬಂದು ಹೋಗುವವರನ್ನು ವಿನೂತನವಾದ ಇತಿಹಾಸದ ಚಿಂತನೆ ಮುೂಡಿಸದೇ ಇರದು.ಚಾಲುಕ್ಯರ ಕಾಲದ ಶಿವಮಂದಿರವೆಂದೇ ಕರೆಯಲ್ಪಡುವ ಈ ದೇವಸ್ಥಾನದ ಗೋಡೆ ಕಲ್ಲುಗಳು ಬಹುತೇಕ ಅನಾಥ ಸ್ಥಿತಿಯಲ್ಲಿ ಬಿದಿದ್ದು, ಇವುಗಳ ಸುರಕ್ಷತೆಗೆ ಮುಂದಾಗಬೇಕಾಗಿದೆ.

ಸುತ್ತಲಿನ ಪರಿಸರ ತಂಪು ಹವಾಮಾನದಿಂದ ಕೂಡಿದ್ದು, ಪಕ್ಕದಲ್ಲೇ ಇರುವ ಕೆರೆಗೆ ಗ್ರಾಮದ ಹೆಣ್ಣುಮಕ್ಕಳು ಬಟ್ಟೆಯನ್ನು ತೊಳೆಯಲು ಬರುತ್ತಾರೆ. ಈ ಎಲ್ಲಾ ಮನಮೋಹಕವಾದ ದ್ರಶ್ಯ ನೋಡುತಿದ್ದರೆ ಕೆರೆಯಲ್ಲಿ ಸ್ನಾನವನ್ನು ಮುಗಿಸಿ, ಶುಭ್ರವಾದ ಶರೀರದಲ್ಲಿ ಭಕ್ತಿಪೂವ೯ಕವಾಗಿ ದೇವಸ್ಥಾಕ್ಕೆ ಪೂಜೆಗಾಗಿ ಬರುವಂತೆ ಐತಿಹಾಸಿಕ ಚಿತ್ರಣ ಇಲ್ಲಿ ಕೊಂಚ ಮಟ್ಟಿಗೆ ತೇಲಿ ಬರುತದೆ. ನಿತ್ಯವೂ ಈ ಶಿವಮಂದಿರ ದೇವಸ್ಥಾನದಲ್ಲಿರುವ ಶಿವ ಲಿಂಗಕ್ಕೆ ಭಕ್ತಿಯಿಂದ ಹೂ-ಹಾರ, ವಿಭೂತಿಯ ಸೇವೆಯನ್ನು ಗ್ರಾಮಸ್ಥರು ಸಲ್ಲಿಸುತ್ತಾರೆ. ಯಾವುದಕ್ಕೂ ಇಲ್ಲಿರುವ ಇತಿಹಾಸದ ಗುರುತನ್ನು ಸಕಾ೯ರ ನಿಲ೯ಕ್ಷಿಸದಿರಲೆಂಬ ಆಶಯ ಗ್ರಾಮಸ್ಥರದು ಇದ್ದಂತಿದೆ. ಪ್ರವಾಸಿಗರಿಗಂತೂ ಚಾಲುಕ್್ಯರ ಕಾಲದ ಕಟ್ಟಡ ಆಕಷಿ೯ಸದೇ ಇರಲಾರದು.
                                                                                              ಕ.ಪ್ರ. ಕ್ರಪೆ




ಕವಯಿತ್ರಿ ಎ.ಜಿ.ರತ್ನಾ ಕಾಳೇಗೌಡ

ಇತ್ತೀಚಿಗೆ ಬೆಂಗಳೂರಿನಿಂದ ಆಗಮಿಸಿದ್ದ ಹಿರಿಯ ಕವಯಿತ್ರಿ ಎ.ಜಿ.ರತ್ನಾ ಕಾಳೇಗೌಡ ಅವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸರಕಾರಿ ಪದವಿಪೂವ೯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾಯ೯ಕ್ರಮ ಒಂದರಲ್ಲಿ ಭಾಗವಹಿಸಿ, ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ, ಬಸವಕಲ್ಯಾಣ ನಗರದ ಅಕ್ಕ ನಾಗಮ್ಮನ ಗವಿ ಹಾಗೂ ಅಂಬಿಗರ ಚೌಡಯ್ಯನ ಗವಿ ಸೇರಿದಂತೆ ಮುಂತಾದ ಶರಣರ ಸ್ಮಾರಕಗಳಿಗೆ ಭೇಟಿ ನೀಡಿರುವ  ಸಂದಭ೯ದಲ್ಲಿ ಬೀದರ ಜಿಲ್ಲೆಯ ಕವಯಿತ್ರಿ ಚನ್ನಮ್ಮ ವಲ್ಲೆಪೂರೆ ಹಾಗೂ ರತ್ನಾ ಕಾಳೇಗೌಡ ಅವರು ತಮ್ಮ ಮಗಳೊಂದಿಗೆ ತೆಗಿಸಿಕೊಂಡ ಭಾವಚಿತ್ರಗಳು.

ಇತ್ತೀಚಿಗೆ ಬೆಂಗಳೂರಿನಿಂದ ಆಗಮಿಸಿದ್ದ ಹಿರಿಯ ಕವಯಿತ್ರಿ ಎ.ಜಿ.ರತ್ನಾ ಕಾಳೇಗೌಡ ಅವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸರಕಾರಿ ಪದವಿಪೂವ೯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾಯ೯ಕ್ರಮ ಒಂದರಲ್ಲಿ ಭಾಗವಹಿಸಿ, ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ, ಬಸವಕಲ್ಯಾಣ ನಗರದ ಅಕ್ಕ ನಾಗಮ್ಮನ ಗವಿ ಹಾಗೂ ಅಂಬಿಗರ ಚೌಡಯ್ಯನ ಗವಿ ಸೇರಿದಂತೆ ಮುಂತಾದ ಶರಣರ ಸ್ಮಾರಕಗಳಿಗೆ ಭೇಟಿ ನೀಡಿರುವ  ಸಂದಭ೯ದಲ್ಲಿ ಬೀದರ ಜಿಲ್ಲೆಯ ಕವಯಿತ್ರಿ ಚನ್ನಮ್ಮ ವಲ್ಲೆಪೂರೆ ಹಾಗೂ ರತ್ನಾ ಕಾಳೇಗೌಡ ಅವರು  ತಮ್ಮ ಮಗಳೊಂದಿಗೆ ತೆಗಿಸಿಕೊಂಡ ಅಪರೂಪದ ಭಾವಚಿತ್ರಗಳು.

                                                                                           ನಿಮ್ಮ

                                                                                      ಅಕ್ಷರ ಪ್ರೇಮಿ
ಇತ್ತೀಚಿಗೆ ಬೆಂಗಳೂರಿನಿಂದ ಆಗಮಿಸಿದ್ದ ಹಿರಿಯ ಕವಯಿತ್ರಿ ಎ.ಜಿ.ರತ್ನಾ ಕಾಳೇಗೌಡ ಅವರು ಬಸವಕಲ್ಯಾಣ ತಾಲೂಕಿನ ಸರಕಾರಿ ಪದವಿಪೂವ೯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾಯ೯ಕ್ರಮ ಒಂದರಲ್ಲಿ ಭಾಗವಹಿಸಿ, ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ, ಬಸವಕಲ್ಯಾಣ ನಗರದ ಅಕ್ಕ ನಾಗಮ್ಮನ ಗವಿ ಹಾಗೂ ಅಂಬಿಗರ ಚೌಡಯ್ಯನ ಗವಿ ಸೇರಿದಂತೆ ಮುಂತಾದ ಶರಣರ ಸ್ಮಾರಕಗಳಿಗೆ ಭೇಟಿ ನೀಡಿರು ಸಂದಭ೯ದಲ್ಲಿ ಬೀದರ ಜಿಲ್ಲೆಯ ಕವಯಿತ್ರಿ ಚನ್ನಮ್ಮ ವಲ್ಲೆಪೂರೆ ಹಾಗೂ ತಮ್ಮ ಮಗಳೊಂದಿ ತೆಗಿಸಿಕೊಂಡ ಭಾವಚಿತ್ರಗಳು.

                                                                                                                                ನಿಮ್ಮ

                                                                                                                            ಅಕ್ಷರ ಪ್ರೇಮಿ

ಮಂಗಳವಾರ, ಏಪ್ರಿಲ್ 12, 2011

ಮಾಣಿಕ ಭುರೆ ರಚಿಸಿದ ಪುಸ್ತಕಗಳ ಮುಖಪುಟಗಳು.


ಬದುಕಿನ ಬೆನ್ನೇರಿ ಕಥಾ ಸಂಕಲನದ ಮುಖಪುಟ ಹಾಗೂ ಹಿಂಬದಿ ಪುಟ ಸುಂದರ-ಆಕಷ೯ಕವಾಗಿ ವಿನ್ಯಾಸ ಮಾಡಿರುವರು ಮಾಣಿಕ ಭುರೆ.


ಆತ್ಮೀಯರೆ
           ಇತ್ತೀಚಿಗಷ್ಟೆ ಫೆ- 24, 2011 ರಂದು ಬಸವಕಲ್ಯಾಣ ತಾಲೂಕಿನ ಬೇಲೂರಿನಲ್ಲಿ ಶರಣ ಉರಿಲಿಗ ಪೆದ್ದಿಯ ಜಾತ್ರಾ ಮಹೋತ್ಸವ ಹಾಗೂ ಉರಿಲಿಂಗ ಪೆದ್ದಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಐದು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಡಾ. ಗವಿಸಿದ್ಧಪ್ಪ ಪಾಟೀಲ, ಮಲ್ಲೇಶ್ವರಿ ಉದಯಗಿರಿ, ಪ್ರೊ.ವಿಜಯಲಕ್ಷ್ಮೀ ಗಡ್ಡೆ, ಮಹಾಂತೇಶ ನವಲಕಲ್ ಸೇರಿದಂತೆ ವೀರಣ್ಣ ಮಂಠಾಳಕರ್ ಆದ ನನ್ನ ಬದುಕಿನ ಬೆನ್ನೇರಿ ಎಂಬ ಕಥಾ ಸಂಕಲನವು ಕೂಡ ಸಾಂಕೇತಿಕವಾಗಿ ಬಿಡುಗಡೆ ಮಾಡಿದ್ದೇವೆ. ಪೂಜ್ಯ ಪಂಚಾಕ್ಷರಿ ಸ್ವಾಮಿಗಳ ಒತ್ತಾಸೆ ಪ್ರೀತಿಯಿಂದ ಉರಿಲಿಂಗಪೆದ್ದಿ ಪ್ರತಿಷ್ಠಾನದಿಂದ ಪ್ರಕಟಿಸಿದ ಪುಸ್ತಕಗಳ ಪೈಕಿ ಒಂದೆರಡು ಪುಸ್ತಗಳ ಮುಖಪುಟ ಇಲ್ಲಿವೆ. ಅಷ್ಟೇ ಪ್ರೀತಿಯಿಂದ ಪುಸ್ತಕಗಳಿಗೆ ಮುಖಪುಟ ವಿನ್ಯಾಸ ಮಾಡಿರುವ ಆತ್ಮೀಯ ಸ್ನೇಹಿತರು, ಎಲ್ಲರೊಂದಿಗೆ ಬೆರೆಯುವ ಸರಳ ಜೀವಿ, ಪತ್ರಕತ೯ ಮಾಣಿಕ ಭುರೆ ಅವರ ಸಹಕಾರ ಬೆಳೆಯುವ ಪ್ರತಿಭೆಗಳಿಗೆ ನೀರೆರೆಯುವ ಕೆಲಸವನ್ನು ತುಂಬಾ ಶ್ರದ್ಧೆಯಿಂದ, ಆಸಕ್ತಿಯಿಂದ ಮಾಡುತ್ತಾರೆ. ಅದಕ್ಕಾಗಿ ಭುರೆ ಅವರು ವಿಶಿಷ್ಠ ವ್ಯಕ್ತಿತ್ವದ ಶಕ್ತಿಯಾಗಿ ಎಲೆಮರೆ ಕಾಯಿಯಾಗಿರುವವರನ್ನು ಗುರುತಿಸುತ್ತಾರೆ. ಅವರಿಗೆ ನಾವೆಲ್ಲ ಅಭಿನಂದಿಸಲೇಬೇಕು.
                                                                                                      -ವೀರಣ್ಣ ಮಂಠಾಳಕರ್

   ಮಲ್ಲೇಶ್ವರಿ ಉದಯಗಿರಿ ಅವರ ಕವನ ಭಾವಂಕಷ೯ ಸಂಕಲನ ಮುಖಪುಟ.

ಮಾಣಿಕ ಭುರೆ ಅವರು ರಚಿಸಿದ ಪುಸ್ತಕಗಳ ಮುಖಪುಟಗಳು. ಸೊಗಸಾಗಿವೆ. ಅವರು ಬಹುಮುಖ ಪ್ರತಿಭೆಯ ವಿಶಿಷ್ಟ ವ್ಯಕ್ತಿ, ಪತ್ರಕತ೯ರಾಗಿ, ಲೇಖಕರಾಗಿ, ಬಿಡುವಿನ ವೇಳೆ ಇತ್ತ ಮುಖಪುಟ ವಿನ್ಯಾಸಕಾರರಾಗಿ ಹವ್ಯಾಸವನ್ನು ಬೆಳೆಸಿಕೊಂಡಿರುವ  ಮಾಣಿಕ ಭುರೆ ಅವರ ಛಾಯಾಚಿತ್ರ. ಈ ಬರಹದ ಕೆಳಗೆ, ಬರಹಗಾರರಿಗೆ ನೆಗಳಾಗಿದ್ದಾರೆಂದರೆ ತಪ್ಪಾಗಲಾರದು. 

ಪತ್ರಕತ೯, ಲೇಖಕರಾದ  ಮಾಣಿಕ ಭುರೆ