ಗುರುವಾರ, ಜುಲೈ 14, 2011

ಬಟಗೇರಾ ಸರಕಾರಿ ಪ್ರೌಢ ಶಾಲೆಯಲ್ಲಿ ಕಳೆದ ಒಂದು ವಷ೯ದಿಂದ ಶಿಕ್ಷಕರ ಕೊರತೆ


ಬಸವಕಲ್ಯಾಣ ತಾಲೂಕಿನ ಬಟಗೇರಾದಲ್ಲಿ  ಶಿಕ್ಷಕರ ಕೊರತೆಯನ್ನು ನೀಗಿಸಬೇಕೆಂದು ಒತ್ತಾಯಿಸಿ ಶಾಲಾ ಮಕ್ಕಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರಲ್ಲಿ ರಸ್ತೆ ತಡೆ ನಡೆಸಿ ತಮ್ಮ ಪಾಲಕರೊಂದಿಗೆ ಪ್ರತಿಭಟನೆ ಮಾಡಿದರು.

  ವೀರಣ್ಣ ಮಂಠಾಳಕರ್,

ಬಸವಕಲ್ಯಾಣಃ ತಾಲೂಕಿನ ಬಟಗೇರಾ ಸರಕಾರಿ ಪ್ರೌಢ ಶಾಲೆಯಲ್ಲಿ ಕಳೆದ ಒಂದು ವಷ೯ದಿಂದ ಶಿಕ್ಷಕರ ಕೊರತೆಯನ್ನು ಅನುಭವಿಸುತಿರುವುದರಿಂದ ಮಂಗಳವಾರ ನಗರದ ಗಾಂಧಿ ವ್ರತ್ತದಿಂದ ಬಿ.ಇ.ಓ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಶಾಲಾ ಮಕ್ಕಳು ಮತ್ತು ಪಾಲಕ-ಪೋಷಕರು ಶಾಲಾ ಶಿಕ್ಷಕರ ಕೊರತೆ ನೀಗಿಸಬೇಕೆಂಬ ಘೋಷಣೆಗಳೊಂದಿಗೆ ಕೆಲಹೊತ್ತು ರಸ್ತೆ ತಡೆ ನಡೆಸಿದರು.

ಬಟಗೇರಾದಲ್ಲಿ ಕೇವಲ ಮೂರು ಜನ ಶಿಕ್ಷಕರು ಸಧ್ಯದಲ್ಲಿ ಕಾಯ೯ನಿವ೯ಹಿಸುತಿದ್ದು, ಶಿಕ್ಷಕರ ಕೊರತೆ ಬಗ್ಗೆ ಹಲವು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಕೂಡ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ಇದ್ದಂಥ ಶಿಕ್ಷಕರನ್ನೆ ಮತ್ತೆ ವಗಾ೯ವಣೆ ಮಾಡಿದ್ದಾರೆ. ಉತ್ತಮವಾದ ಬೋಧನೆ ಇಲ್ಲದೇ ಮಕ್ಕಳು ಪರೀಕ್ಷೆಯಲ್ಲಿ ಪ್ರತಿಶತ ಫಲಿತಾಂಶ ಪಡೆಯುವುದು ಹೇಗೆ ಎಂಬ ದೂರಿನೊಂದಿಗೆ ರಸ್ತೆಗಿಳಿದ ಪಾಲಕರು ಮತ್ತು ಶಾಲಾ ಮಕ್ಕಳು ಶಾಲೆಗೆ ಹೆಚ್ಚುವರಿ ಶಿಕ್ಷಕರನ್ನು ನೇಮಿಸಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದರು.

ಬೇಕೆ ಬೇಕು ಶಿಕ್ಷಕರು ಬೇಕು ಎಂಬ ಘೋಷಣೆಗಳೊಂದಿಗೆ ರಸ್ತೆಗಿಳಿದ ಸಕಾ೯ರಿ ಪ್ರೌಢ ಶಾಲಾ ಮಕ್ಕಳ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪೋಷಕರು ಆಕ್ರೋಶಕಿಳಿದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾದರು. ಪ್ರತಿಭಟನಾಕಾರರು ಬಿ.ಇ.ಓ ಕಚೇರಿಗೆ ಸಮೀಪಿಸುತಿದ್ದಂತೆ ಅಧಿಕಾರಿಗಳು ಗೈರು ಹಾಜರಿ ಇರುವುದನ್ನು ಕಂಡು ಮತ್ತಷ್ಟು ಆಕ್ರೋಶಕಿಳಿದರು. ನಂತರ ನೂರಾರು ಸಂಖ್ಯೆಯಲ್ಲಿದ್ದ ಜನಸಮೂಹ ರಸ್ತೆ ನಡೆಸಿ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ನಗರದ ಹೊರವಲಯದಲ್ಲಿರುವ ತಹಶೀಲ ಕಚೇರಿಗೆ ತೆರಳಿದರು.

ಬಟಗೇರಾದಲ್ಲಿ ಇನ್ನೂ ಕನಿಷ್ಠ ಐದಾರು ಶಿಕ್ಷಕರ ಅಗತ್ಯವಿದ್ದು ಶಿಕ್ಷಕರ ಕೊರತೆಯನ್ನು ಕೂಡಲೇ ಒದಗಿಸಿಕೊಡಬೇಕು. ಇದ್ದಂಥ ಮೂರು ಜನ ಶಿಕ್ಷಕರು ಶಾಲಾ ಮಕ್ಕಳಿಗೆ ನ್ಯಾಯಯುತವಾಗಿ ಪಾಠ ಹೇಳಿಕೊಡಲು ಹೇಗೆ ಸಾಧ್ಯವಾಗುತ್ತದೆ. ಸರಿಯಾದ ಬೋಧನೆ ಇಲ್ಲದ ಕಾರಣ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮಕ್ಕಳು ಪ್ರತಿಶತ ಫಲಿತಾಂಶವನ್ನು ಕಾಣದೇ ಅವರ ವ್ಯಕ್ತಿತ್ವ ವಿಕಾಸದತ್ತ ದುಷ್ಟ ಪರಿಣಾಮವನ್ನು ಬೀರುತಿದೆ.

ಹೀಗೆ ಶಿಕ್ಷಣ ವ್ಯವಸ್ಥೆ ಮುಂದೊರೆದರೆ ಮಕ್ಕಳ ಭವಿಷ್ಯವನ್ನು ಹಾಳಾಗುವುದರಲ್ಲಿ ಸಂದೇಹವಿಲ್ಲ. ಹಿಂದುಳಿದ ಗ್ರಾಮಗಳೆಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಊರುಗಳತ್ತ ಸಕಾ೯ರ ಮೊದಲ ಅಧ್ಯತೆಯನ್ನು ನೀಡಿ ಇಲ್ಲಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಮುತುವ೯ಜಿ ವಹಿಸಬೇಕೆಂದು ಗ್ರಾಮಸ್ಥರೆಲ್ಲ ಒತ್ತಾಯಿಸಿದರು. ಒಂದು ವೇಳೆ ವ್ಯವಸ್ಥೆಯನ್ನು ಇದೇ ರೀತಿ ಇದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟಕ್ಕೂ ಸಿದ್ಧರಿದ್ದೇವೆ. ಅರಳಬೇಕಾದ ಮಕ್ಕಳ ಭವಿಷ್ಯದಲ್ಲಿ ಕರಾಳ ದಿನಗಳು ಬಾರದಂತಿರಲಿ ಎಂದು ಮನವಿ ಮಾಡಿದ್ದಾರೆ.

ಬಟಗೇರಾ ಪ್ರೌಢ ಹತ್ತಾರು ಸಲ ಶಿಕ್ಷಕರ ಕೊರತೆಯನ್ನು ಅಧಿಕಾರಿಗಳ ಗಮನ ಸೆಳೆದರೂ ಕೂಡ ನಿಲ೯ಕ್ಷಕೊಳಪಟ್ಟ ಶಾಲೆಗೆ ಶೀಘ್ರವೇ ಶಿಕ್ಷಕರ ಕೊರತೆಯನ್ನು ನೀಗಿಸಬೇಕು. ಇಲ್ಲವಾದರೆ ಶಾಲೆಗೆ ಬೀಗ ಜಡಿದು ಇನ್ನಷ್ಟು ಉಗ್ರವಾದ ಹೋರಾಕ್ಕಿಳಿಯಲು ಸಿದ್ಧರಿದ್ದೇವೆ ಎಂದು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಶಾಲಾ ಮಕ್ಕಳ ಪಾಲಕರು ಎಚ್ಚರಿಸಿದರು. ಮನವಿಯನ್ನು ಉಪ ತಹಸೀಲ್ದಾರ್ ಜಗನ್ನಾಥರೆಡ್ಡಿ ಸ್ವೀಕರಿಸಿದರು.

ಶರಣ ಹರಳಯ್ಯನ ಮೂಲ ವಾಸಸ್ಥಾನ ಹಳ್ಳಿ ಗ್ರಾಮಕ್ಕೆ ಬಸವನಹಳ್ಳಿ ಎಂದು ಕರೆಯಬೇಕುಃ ಸಾಹಿತಿ ರಂಜಾನ ದಗಾ೯ ಹೇಳಿಕೆ, ಸಮಂಜಸವಲ್ಲಃ ಹರಳಯ್ಯನ ಹಳ್ಳಿ ಎಂದು ಕರೆಯುವಂತಾಗಬೇಕು ಎಂಬುದು ಚಿಂತಕರ ಅನಿಸಿಕೆಯಾಗಿದೆ. ಸಕಾ೯ರ ಯಾರ ಪರವಾಗಿರುತ್ತದೆ ಎಂಬುದು ಕಾದು ನೋಡಬೇಕು.

 ಹರಳಯ್ಯ ಮತ್ತು ಕಲ್ಯಾಣಮ್ಮ ವಾಸವಾಗಿರುವ ಕುರಿತು ಬಸವಕಲ್ಯಾಣ ತಾಲೂಕಿನ ಹಳ್ಳಿ ಎಂಬ ಗ್ರಾಮಕ್ಕೆ ಹತ್ತಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಹರಳಯ್ಯನ ದೇವಸ್ಥಾನ ಮೇಲ್ವಗ೯ದವರಿಂದ ನಿಲ೯ಕ್ಷಕೊಳಗಾಗಿರುವುದು. ಕೆಳವಗ೯ದ ಜನರಿಗೆ ಇದರ ಪರಿಪೂಣ೯ ಮಾಹಿತಿಯಿಲ್ಲದ್ದೇ ಮೂಲ ಸಮಸ್ಯೆಯಾಗಿದೆ.
   ವಿಶ್ವಗುರು ಬಸವಣ್ಣನವರ ಮೂತಿ೯ ಅನಾವರಣ ಕಾಯ೯ಕ್ರಮ ಉದ್ಘಾಟಿಸಿರುವ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಭೀಮಣ್ಣ ಖಂಡ್ರೆ, ಈ ಸಂದಭ೯ದಲ್ಲಿ ಸಾಹಿತಿ ರಂಜಾನ್ ದಗಾ೯, ತಡೋಳಾ ಶ್ರೀಗಳು ಇದ್ದರು.    
ಕಾಯ೯ಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ, ಪತ್ರಕತ೯ ರಂಜಾನ ದಗಾ೯ ಮಾತನಾಡಿ, ಈ ಹಳ್ಳಿ ಎಂಬ ಗ್ರಾಮಕ್ಕೆ ಇನ್ನೂ ಮುಂದೆ ಬಸವನ ಹಳ್ಳಿ ಎಂದು ಪ್ರತಿಯೊಬ್ಬರೂ ಕರೆಯುವಂತಾಗಬೇಕು. ಯಾಕೆಂದರೆ ಬಸವಣ್ಣ ಕ್ರಾಂತಿಭೂಮಿಯಾಗಿ ಬಸವಣ್ಣನವರು ಆಳಿದ ನೆಲದಲ್ಲಿ ಇರುವ ಪುಟ್ಟ ಗ್ರಾಮ ಹಳ್ಳಿ ಗ್ರಾಮಕ್ಕೆ ಗ್ರಾಮಸ್ಥರು ಬಸವನ ಹಳ್ಳಿ ಎಂಬ ಕರೆಯುವದನ್ನು ರೂಢಿಸಿಕೊಳ್ಳಬೇಕು. ಎಂದಿದ್ದಾರೆ ಆದರೆ ಅದೇ ಹಳ್ಳಿ ಗ್ರಾಮದಲ್ಲಿ ಹರಳಯ್ಯನ ಹೊಂಡ ಮತ್ತು 12ನೇ ಶತಮಾನದ ಶರಣರಾದ ಹರಳಯ್ಯ ಮತ್ತು ಕಲ್ಯಾಣಮ್ಮ ವಾಸವಾಗಿರುವ ಕುರಿತು ಅನೇಕ ಕುರುಹುಗಳು ಇರುವುದರಿಂದ ಗ್ರಾಮಕ್ಕೆ ಹರಳಯ್ಯನ ಹಳ್ಳಿ ಎಂದು ಕರೆಯುವುದು ಸೂಕ್ತವೆನಿಸುತ್ತದೆ ಎಂಬುದು ಬುದ್ಧಿಜೀವಿಗಳ ಅಭಿಪ್ರಾಯ ಸಕಾ೯ರ ಗಂಭೀರ ಚಿಂತನೆ ನಡೆಸಿ ಹಳ್ಳಿ ಗ್ರಾಮಕ್ಕೆ ಹರಳಯ್ಯನ ಹಳ್ಳಿ ಎಂದು ಮರುನಾಮಕರಣ ಮಾಡುವಲ್ಲಿ ಆಸಕ್ತಿ ವಹಿಸುವುದೇ ಎಂದು ಕಾದು ನೋಡಬೇಕಾಗಿದೆ.
 ವೇದಿಕೆಯಲ್ಲಿ ಸಾಹಿತಿ ಚಿಂತಕ ರಂಜಾನ ದಗಾ೯, ತಡೋಳಾ ಶ್ರೀಗಳು ಸೇರಿದಂತೆ ಮತ್ತಿತರೆ ಗಣ್ಯರಿದ್ದರು   

ವೀರಣ್ಣ ಮಂಠಾಳಕರ್ 
ಬಸವಕಲ್ಯಾಣಃ ಸಾವ೯ದನಿಕ ವಲಯದಲ್ಲಿ ವ್ಯಕ್ತಿ ಉತ್ತಮವಾದ ಕಾಯ೯ ಮಾಡುವುದನ್ನು ರೂಢಿಸಿಕೊಳ್ಳಬೇಕು. ನಮ್ಮಲ್ಲಿ ಸಂಸ್ಕಾರ ಇಲ್ಲದ ಕಾರಣ ದೇಶದಲ್ಲಿ ಭಯೋತ್ಪಾದನೆಯಂಥ ಚಟುವಟಿಕೆಗಳಿಗೆ ಪ್ರಶ್ನಿಸುವಂಥ ಸಾಮಥ್ಯ೯ ಬೆಳೆದಿಲ್ಲ. ದೇಶದ ಕೆಲಸ, ಸಮಾಜ ಕಾಯ೯ ಮಾಜಬೇಕಾದರೆ ಅದಕ್ಕಾಗಿ ನಮ್ಮ ಪ್ರಾಣವನ್ನೆ ಮುಡುಪಾಗಿಡಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಭೀಮಣ್ಣ ಖಂಡ್ರೆ ಅಭಿಪ್ರಾಯಪಟ್ಟರು.

ಅವರು ಬಸವಕಲ್ಯಾಣ ತಾಲೂಕಿನ ಹಳ್ಲಿ ಗ್ರಾಮದಲ್ಲಿ ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರ ಮೂತಿ೯ ಅನಾವರಣ ಮಾಡಿ, ನಂತರ ಹಮ್ಮಿಕೊಂಡ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ, ಒಂಬತ್ತುನೂರು ವ,೯ಗಲ ಹಿಂದೆ ಕೆಟ್ಟು ಹೋಗಿದ್ದ ಸಮಾಜದ ಪರಿಸ್ಥಿತಿಯನ್ನು ಸುಧಾರಣೆ ಮಾಡಲು ಪಣತೊಟ್ಟಿದ್ದ ಮಹಾನ ಸಾಧಕ, ಜಾತಿ ರಹಿತ ಪರಿಸರವನ್ನು ನಿಮಾ೯ಣ ಮಾಡುವ ಸಂಕಲ್ಪವನ್ನು ತೊಟ್ಟ ವಿಶ್ವಗುರು ಬಸವಣ್ಣನವರ ಮೂತಿ೯ ಅನಾವರಣಗೊಂಡಂತೆ ಅವರ ಮಾಗ೯ದಲ್ಲಿ ನಡೆಯುವಂತೆ ಜೀವನ ಪರಿವತಿ೯ಸಿಕೊಳ್ಳಬೇಕು.

ಜಾತಿಯತೆ ಮತ್ತು ಮತಭೇದವನ್ನು ಹೋಗಲಾಡಿಸಲು ನಾವೆಲ್ಲ ಇದು ಸಿದ್ಧರಾಹಬೇಕಾಗಿದೆ. ಯಾವ ಜಾತಿಗಾಗಿ ನಾಡು ದೇಶ ಹಾಥಾಗೋಯ್ತೋ ಮರುಜೀವ ಕೊಟ್ಟು ನಾವೇ ವ್ಯವಸ್ಥೆ ಹಾಳು ಮಾಡುತಿದ್ದೇವೆ. ಇಂತಹ  ಒಂದು ಮನೋಭಾವ ಬದಲಾಗಬೇಕಾಗಿದೆ. ಜಾತಿ ನಿಮೂ೯ಲನೆಗೆ ದೊಡ್ಡ ಸಂಘಟನೆ, ಯುವಶಕ್ತಿ ಒಂದುಗೂಡಿ ಜಾತಿಯತೆ ವಿರುದ್ಧ ಹೋರಾಜಬೇಕಾಗಿದೆ ಎಂದು ಸಲಹೆ ನೀಡಿದರು.

ಕಾಯ೯ಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ, ಪತ್ರಕತ೯ ರಂಜಾನ ದಗಾ೯ ಮಾತನಾಡಿ, ಈ ಹಳ್ಳಿ ಎಂಬ ಗ್ರಾಮಕ್ಕೆ ಇನ್ನೂ ಮುಂದೆ ಬಸವನ ಹಳ್ಳಿ ಎಂದು ಪ್ರತಿಯೊಬ್ಬರೂ ಕರೆಯುವಂತಾಗಬೇಕು. ಯಾಕೆಂದರೆ ಬಸವಣ್ಣ ಕ್ರಾಂತಿಭೂಮಿಯಾಗಿ ಬಸವಣ್ಣನವರು ಆಳಿದ ನೆಲದಲ್ಲಿ ಇರುವ ಪುಟ್ಟ ಗ್ರಾಮ ಹಳ್ಳಿ ಗ್ರಾಮಕ್ಕೆ ಗ್ರಾಮಸ್ಥರು ಬಸವನ ಹಳ್ಳಿ ಎಂಬ ಕರೆಯುವದನ್ನು ರೂಢಿಸಿಕೊಳ್ಳಬೇಕು.

ನಾನು ಸಕಾ೯ರಕ್ಕೆ ಮನವಿಯನ್ನು ಸಲ್ಲಿಸಿ ಒಂದೇ ವಷ೯ದಲ್ಲಿ ಬಸವನ ಹಳ್ಳಿ ಮರನಾಮಕರಣಕ್ಕೆ ಹಸಿರು ನಿಶಾನೆ ಕೊಡಿಸುವಂತೆ ಎಲ್ಲಾ ಕಡತಗಳಲ್ಲಿ ಬರುವಂತೆ ಪ್ರಯತ್ಲಿಸುತ್ತೇನೆ ಎಂದು ಆಶ್ವಾಸನೆ ನೀಡಿದರು. ಮುಂದೊರೆದು ಮಾತನಾಡಿದ ಅವರು, ಬಸವಣ್ಣನವರ ಸುಂದರವಾದ ಮೂತಿ೯ ಸ್ಥಾಪಿಸಿದ ಕಲಾವಿದ ಮಾರುತಿ ಮಂಠಾಳ ಅವರ ಕಾಯ೯ ಶ್ಲಾಘನೀಯವಾಗಿದೆ. ಮೂತಿ೯ಯಲ್ಲಿ ಬಸವಣ್ಣನವರು  ಆಶಿವ೯ದಿಸುವಂತಿರುವ ಕೈ ಸನ್ನೆ ಅದು ಸಮಾಜ ರಕ್ಷಣೆಯ ಸಂಕೇತದಂತೆ ಸುದರವಾದ ಮೂತಿ೯ ರೂಪಿಸಿದ್ದಾರೆ ಎಂದು ಬಣ್ಣಿಸಿದರು.

ದಗಾ೯ ಅವರ ಭಾಷಣದ ನಂತರ ಪ್ರತಿಸ್ಪಂಧಿಸಿದ ಪತ್ರಕತ೯ರ ಸಂಘದ ಅಧ್ಯಕ್ಷ ಗುರುನಾಥ ಗಡ್ಡೆ ಹಳ್ಳಿ ಗ್ರಾಮದಲ್ಲಿ 800 ವಷ೯ಗಳ ಹಿಂದೆ ಬಸವಣ್ಣನವರ ಅನುಯಾಯಿ ಶರಣ ಹರಳಯ್ಯ ಹಾಗೂ ಕಲ್ಯಾಣಮ್ಮ ವಾಸವಾಗಿರುವ ಊರಾಗಿರುವುದರಿಂದ ಇದಕ್ಕೆ ಹ, ಎಂಬ ಅಕ್ಷರವನ್ನಷ್ಟೇ ಉಳಿದುಕೊಂಡು ಹಳ್ಳಿಯಾಗಿದೆ ಅದಕ್ಕಾಗಿ ಗ್ರಾಮಕ್ಕೆ ಹರಳಯ್ಯನ ಹಳ್ಳಿ ಎಂದು ಕರೆಯಲು ಸೂಕ್ತವೆನಿಸುತ್ತದೆ.

ಇದಕ್ಕೆ ಸಂಬಂಧಿಸಿದಂತೆ ಹಲವು ಕುರುಹುಗಳನ್ನು ಇದೇ ಗ್ರಾಮದಲ್ಲಿ ಹರಳಯ್ಯನವರು ವಾದವಾಗಿರುವ ಕುರಿತು ದಾಖಲೆಗಳು ಸಿಗುತ್ತವೆ. ಅವು ಈಗ ಅಳಿವಿನಂಚಿನಲ್ಲಿ ಇವೆ. ಇತಿಹಾಸಕಾರರು ಇಲ್ಲಿನ ಮೂಲವನ್ನು ಕೆದಕುವದರೊಂದಿಗೆ ಗ್ರಾಮದ ಮಹತ್ವನನ್ನು ಅರಿಯುವ ಪ್ರಯತ್ನ ಮಾಡಬೇಕಾಗಿದೆ. ಆ ನಿಚ್ಚಿನಲ್ಲಿ ಗ್ರಾಮಕ್ಕೆ ಹರಳಯ್ಯನ ಹಳ್ಳಿ ಎಂದೇ ಕರೆಯುವಂತಾಗಲು ರಂಜಾನ ದಗಾ೯ ಅವರೊಂದಿಗ ಸಮಾಲೋಚಿಸಿದರು. ಯಾವುದಕ್ಕೂ ವಿಷಯ ಚಚೆ೯ಗೊಳಪಡುವಂತಾಗಲಿ ಎಂದು ರಾಜೇಶ್ವರ ಶಿವಾಚಾಯ೯ರಲ್ಲಿ ಹಾಗೂ ದಗಾ೯ ಅವರಲ್ಲಿ ಗಡ್ಡೆ ಮನವಿ ಮಾಡಿದರು.

ಕಾಯ೯ಕ್ರಮದಲ್ಲಿ ಶ್ರೀಪತರಾವ ಪಾಟೀಲ, ಶಿವಶರಣಪ್ಪ ಪಾಟೀಲ ಹುಗ್ಗೆ, ದಯಾನಂದ ಖಳಾಳೆ, ಪಿಎಸ್ಐ ಗುಂಡೇರಾವ, ತಾ.ಪಂ ಅಧ್ಯಕ್ಷ ಗುರುಲಿಂಗಪ್ಪಾ ಸೈದಾಪುರೆ, ಸುಧಾಕರ ಮದನೆ, ಮುಂತಾದ ಗಣ್ಯರು ಇದ್ದರು. ನವಲಿಂಗ ಪಾಯೀಲ ನಿರೂಪಿಸಿದರೆ ನಾಗಶೆಟ್ಟಿ ಸ್ವಾಗತಿಸಿದರು.

ಬಸವಕಲ್ಯಾಣದಲ್ಲಿ ಸಾವ೯ಜನಿಕ ಶೌಚಾಲಯ ಇಲ್ಲದೇ ಪರದಾಡುವ ಜನಗಳು

ಡಾ.ಗವಿಸಿದ್ಧಪ್ಪ ಪಾಟೀಲ 

ಃ ವಿಶ್ವಗುರು ಬಸವಣ್ಣನವರ ಪುಣ್ಯಭೂಮಿಯೆಂದರಿತು ಇಲ್ಲಿಗೆ ಆಗಮಿಸುವ ದೇಶ ವಿದೇಶ, ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಪ್ರವಾಸಿಗರಿಗೆ ಮೊಟ್ಟ ಮೊದಲು ಬೆಳಗಿನ ಕ್ರಿಯಾಕ್ರಮಗಳನ್ನು ಮುಸಿಕೊಳ್ಳುವಂಥ ಮೂಲಭೂತ ಸೌಲಭ್ಯಗಳು ಇಲ್ಲಿ ನಿಮಾ೯ಣವಾಗಬೇಕು. ನಂತರ ತಾವು ಬಂದಿರುವ ಉದ್ದೇಶದತ್ತ ಹೊರಡಲು ಸನ್ನಿದ್ಧರಾಗಿ ಇಲ್ಲಿನ ವಾತಾವರಣವನ್ನು ಕಂಡು ಖುಷಿ ಪಡುವಂತಾಗಬೇಕು. ಇಲ್ಲಿನ ಜನಪ್ರತಿನಿಧಿಗಳಿಂದ ಆಗಬೇಕಾದ ಕೆಲಸಗಳು ಕನಿಷ್ಠ ಪಕ್ಷ ಇಲ್ಲಿನವರೇ ಅವುಗಳನ್ನು ಅನುಭವಿಸುವಂತಿಲ್ಲ. ಅಂಥದರಲ್ಲಿ ನಗರ ಅಭಿವ್ರದ್ಧಿಗಾಗಿ ಕೈಗೆತ್ತಿಕೊಂಡಿರುವ ಬಿಕೆಡಿಬಿ ಮತ್ತು ಇಲ್ಲಿನ ಜನಪ್ರತಿನಿಧಿಗಳ ಸಹಕಾರದಡಿಯಲ್ಲಿ ಪ್ರವಾಸಿಗರ ಮೂಲಸೌಕಯ೯ಗಳತ್ತ ಗಮನ ಹರಿಸುವುದು ಅತಿ ಮುಖ್ಯವಾಗಿದೆ. ಹಾಗಾದಾಗ ಮಾತ್ರ ಐತಿಹಾಸಿಕ ಹಿನ್ನೆಲೆ ಇರುವ ಬಸವಕಲ್ಯಾಣಕ್ಕೆ ಪ್ರವಾಸಿಗರು ನಿತ್ಯವೂ ಲಗ್ಗೆ ಇಡುವುದರಲ್ಲಿ ಸಂದೇಹವಿಲ್ಲ.

                                                                              ಡಾ ಗವಿಸಿದ್ಧಪ್ಪ ಪಾಟೀಲ
                                                               ಕನ್ನಡ ವಿಭಾಗದ ಪ್ರಧ್ಯಾಪಕರು, ಬಸವಕಲ್ಯಾಣ


ಬಸವಕಲ್ಯಾಣಃ ಜೂನ್, 11ಃ  ಐತಿಹಾಸಿಕ ಹಿನ್ನೆಲೆಯುಳ್ಳ ಬಸವಕಲ್ಯಾಣ ನಗರದಲ್ಲಿ ಪ್ರವಾಸಿಗರ ಅನುಕಾಲಕ್ಕಾಗಿ ಸಾವ೯ಜನಿಕ ಶೌಚಾಲಯ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದಿರುವುದು ಇಲ್ಲಿನ ಜನಪ್ರತಿನಿಧಿಗಳ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ. ಪ್ರವಾಸಿ ತಾಣವನ್ನಾಗಿ ಮಾಡಬೇಕೆನ್ನುವ ಬಿಕೆಡಿಬಿ ಕನಸು ದೂರದಿಂದ ಬರುವವರ ಪಾಲಿಗೆ ಬಸವಕಲ್ಯಾಣ ಪಟ್ಟಣ ದೂರದ ಗುಡ್ಡ ನುಣ್ಣಗೆನ್ನುವಂತಿರುವುದು ವಿಪಯಾ೯ಸದ ಸಂಗತಿಯಾಗಿದೆ ಎಂದು ಹಲವರಲ್ಲಿ ಚಚೆ೯ಯಾಗುತಿದೆ.

ದೇಶದ ನಾನಾ ಭಾಗಗಳಿಂದ ಆಗಮಿಸುವ ಸಾಮಾನ್ಯ ವಗ೯ದ ಪ್ರವಾಸಿಗರು ಇಲ್ಲಿ ನರಕಯಾತನೆ ಅನುಭವಿಸುವಂಥ ಅನುಭವ. ನಗರದ ಪ್ರಮುಖ ಬಸ್ ನಿಲ್ದಾಣವೊಂದರಲ್ಲಿ ಶೌಚಾಲಯ ಬಿಟ್ಟರೆ ಬೇರೆಲ್ಲೂ ಇಲ್ಲದಿರುವುದು ಎಂಥ ದುರಂತವೆಂದು ಇಲ್ಲಿಗೆ ಬಂದು ಹೋಗುವವರು ಇದೆಂಥ ಕಲ್ಯಾಣವೆಂದು ಕನವರಿಸಿಕೊಂಡು ಬಂದ ದಾರಿಗೆ ಸುಂಕವಿಲ್ಲವೆನ್ನುವಂತೆ ವಾಪಸ್ಸಾಗುತ್ತಾರೆ.

12ನೇ ಶತಮಾನದ ಶರಣರ ಐತಿಹಾಸಿಕ ಸ್ಥಳಗಳನ್ನೆಲ್ಲಾ ಜೀಣೋ೯ದ್ದಾರ ಕಾಯ೯ಕ್ಕೆ ಮುಂದಾಗಿರುವ ಬಿಕೆಡಿಬಿಯ ಕಾಯ೯ವೈಖರಿಯನ್ನು ಮೆಚ್ಚಿ ಇಲ್ಲಿಗೆ ವಿವಿಧ ಭಾಗಗಳಿಂದ ಜನಸಾಮಾನ್ಯರಿಂದ ಹಿಡಿದು ಪ್ರತಿಷ್ಠಿತ ವ್ಯಕ್ತಿಗಳು ದಿನನಿತ್ಯ ಬಂದು ಹೋಗುವುದು ಸವೆ೯ ಸಾಮಾನ್ಯವಾಗಿದೆ. ಅಷ್ಟೇ ಅಲ್ಲದೇ ನಗರದಲ್ಲಿ ಸೇರಿದಂತೆ ತಾಲೂಕಿನಾದ್ಯಂತ  ಐತಿಹಾಸಿಕ ಕುರುಹುಗಳು ಇಲ್ಲಿರುವುದರಿಂದ ಅದಕ್ಕೆ ಆಕಷಿ೯ತರಾಗಿ ಪ್ರತಿಯೊಬ್ಬರೂ ಇತ್ತ ಚಿತ್ತ ಹರಿಸುವುಂತಾಗಿದೆ.

ಬಸವಕಲ್ಯಾಣಕ್ಕೆ ಬಂದು ಹೋಗುವ ಪ್ರವಾಸಿಗರಿಗೆ ಇಲ್ಲಿ ಕನಿಷ್ಠ ಪಕ್ಷ ಮೂಲಭೂತ ಸೌಲಭ್ಯಗಳಿಲ್ಲದಿದ್ದರೆ ಶರಣರ ನಾಡೆಂದೆನಿಸಿಕೊಳ್ಳುವ ನಗರವನ್ನು ಕಂಡು ಮೂಗು ಮುರಿಯುವ ಕಾಲ ಬಂದೊದಗುವಂಥ ಪರಿಸ್ಥಿತಿ ಇಲ್ಲಿ ನಿಮಾ೯ಣಗೊಳ್ಳುತಿದೆ. ರಸ್ತೆ ಸಂಚಾರ ನಿಯಂತ್ರಣವನ್ನು ಮಾಡದಿರುವುದರಿಂದ ಹಿಡಿದು ಇಲ್ಲಿನ ನಗರ ಬಡಾವಣೆಗಳ ಸ್ವಚ್ಛತೆಯನ್ನೂ ಕೂಡ ಮಾಡುವುದಕ್ಕೆ ಮೀನಾಮೇಷ ಏಣಿಸುವ ಅಧಿಕಾರಿಗಳು, ಜನಪ್ರತಿನಿಧಿಗಳ ನಿಲ೯ಕ್ಷ ಹೇರಳವಾಗಿದೆ ಎಂಬುದು ನಿತ್ಯವೂ ಜನಗಳ ಗೋಳಾಗಿದೆ.

ಮೊನ್ನೆ ಮೂರು ತಿಂಗಳುಗಳ ಹಿಂದೆ ಸುನಾಮಿಗೆ ತುತ್ತಾದ ಜಪಾನ ದೇಶ ಸಾವಿರಾರು ಜನರನ್ನು ಕಳೆದುಕೊಂಡಿರುವ ದುಖದಲ್ಲೂ ಅಭಿವ್ರದ್ಧಿಯತ್ತ ಮೊಟ್ಟ ಮೊದಲ ಗಮನ ಹರಿಸಿರುವ ಜಪಾನ ದೇಶ ಅಸ್ತವ್ಯಸ್ತವಾಗಿದ್ದ ಜನಜೀವನ ಸ್ವಚ್ಛ ನಗರವನ್ನಾಗಿಸಿಕೊಂಡು ಇದೀಗ ಮತ್ತೆ ಚೇತರಿಸಿಕೊಂಡಿರುವಾಗ ನೂರಾರು ವಷ೯ಗಳಿಂದ ನೆನಗುದಿಗೆ ಬಿದ್ದಿರುವ ಇಲ್ಲಿನ ಅಭಿವ್ರದ್ಧಿ ಕಾಯ೯ಗಳತ್ತ ಯಾಕೆ ನಮ್ಮ ಜನಪ್ರತಿನಿಧಿಗಳಾಗಲಿ, ಸಕಾ೯ರ ಗಮನ ಹರಿಸುವುದಿಲ್ಲ ಎಂಬುದು ಇಲ್ಲಿಗೆ ಬಂದು ಹೋಗುವ ಪ್ರವಾಸಿಗರು ನುಲಿಯುತ್ತಾರೆ.

ಕಲ್ಯಾಣದಲ್ಲಿ ಬಸವ ಮಹಾಮನೆ

 ಸುದ್ಧಿಗೋಷ್ಠಿಯಲ್ಲಿ ಕೌಠಾದ ಬೆಲ್ದಾಳ ಶ್ರೀಗಳು ಮಾತನಾಡುತಿರುವುದು. ಭಾಲ್ಕಿಯ ಬಸವಲಿಂಗ ಪಟ್ಟದೇವರು, ಕೂಡಲ ಸಂಗಮದ ಮ್ರತ್ಯುಂಜಯ ಸ್ವಾಮಿಗಳು ಇದ್ದರು.

ವೀರಣ್ಣ ಮಂಠಾಳಕರ್ 
--------------------------
ಬಸವಕಲ್ಯಾಣಃ ಮೂವತ್ತು ವಷ೯ಗಳ ಹಿಂದೆಯೇ ಬಸವಕಲ್ಯಾಣದಲ್ಲಿ ಬಸವ ಮಹಾಮನೆಯೊಂದನ್ನು ನಿಮಿ೯ಸುವ ಕಲ್ಪನೆ ಬಂದಿತ್ತು. ಆ ಕನಸನ್ನು ನನಸಾಗಿಸುವ ಸಂಕಲ್ಪದಿಂದ ಈಗಿನ ಅನುಭವ ಮಂಟಪದ ಹತ್ತಿರ ಈಗಾಗಲೆ 8 ಎಕರೆ ಜಮೀನು ಖರೀದಿಸಲಾಗಿದ್ದು 2 ಎಕರೆ ಭೂಮಿಯಲ್ಲಿ ಬಸವ ಮಹಾಮನೆ ಮತ್ತು ಶರಣೆಯರ ಧ್ಯಾನಕ್ಕಾಗಿ ನೀಲಾಂಬಿಕಾ ಯೋಗಕೇಂದ್ರವನ್ನು ವಿಶಾಲವಾದ ಸ್ಥಳದಲ್ಲಿ ನಿಮಿ೯ಸಲಾಗುತಿದೆ ಎಂದು ಕೌಠಾದ ಸಿದ್ಧರಾಮ ಶರಣರು ಬೆಲ್ದಾಳ ನುಡಿದರು.

ನಗರದ ಅನುಭವ ಮಂಟಪದಲ್ಲಿ ಮಂಗಳವಾರ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ, ಕಲ್ಯಾಣದಲ್ಲಿ ಬಸವ ಮಹಾಮನೆ ಮಾಡುವ ಮೂಲಕ 12ನೇ ಶತಮಾನದಲ್ಲಿದ್ದ ಯೋಗಿಗಳು ಭೂಕೈಲಾಸವನ್ನು ಕಂಡ ಅನುಭವದಂಥ ವಾತಾವರಣ ನಿಮಿ೯ಸುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಇಂತಹ ಒಂದು ಮಹತ್ವ ಯೋಜನೆಗೆ ಕೆಲವರ ಹಸ್ತಕ್ಷೇಪದಿಂದ ಅಡ್ಡಿಪಡಿಸುತಿದ್ದಾರೆ ಅದಕ್ಕಾಗಿ ಎಲ್ಲಾ ದಾಖಲೆಗಳ ಸಮೇತ ನಾನು ಸಿದ್ಧನಾಗಿದ್ದೇನೆ ಎಂದರು.

ಬಸವ ಮಹಾಮನೆ ನಿಮಾ೯ಣಕ್ಕಾಗಿ ಬೀದರನಲ್ಲಿ 5 ಎಕರೆ ಜಮೀನು ಮಂಜೂರಾಗಿತ್ತು. ಆದರೆ ಇಂತಹ ಮಹತ್ವದ ಯೋಜನೆ ಬಸವಕಲ್ಯಾಣದಲ್ಲಿಯೇ ಆಗಬೇಕೆಂದು ಭಾಲ್ಕಿಯ ಬಸವಲಿಂಗ ಪಟ್ಟದೇವರು ಒತ್ತಾಯಿಸಿದಾಗ ಜಿಲ್ಲಾಡಳಿತಕ್ಕೆ ಮಂಜೂರಾದ ಜಾಗ ವಾಪಸ್ ಮಾಡಿ ಇದೀಗ ಬಸವಕಲ್ಯಾಣದ ಅನುಭವ ಮಂಟಪದ ಹತ್ತಿರ 8 ಎಕರೆ ಜಮೀನಿಗೆ ಎನ್-ಎ, ಲೇಔಟ್ ಮಾಡಿಸಿ ನೋಂದಣಿ ಮಾಡಿಸಲಾಗಿದೆ ಇದಕ್ಕಾಗಿ ಬೇಕಾಗುವ ಅನುದಾನ ಸಕಾ೯ರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಶರಣ ಸಂಸ್ಕ್ರತಿ ಅಧ್ಯಯನ ಕೇಂದ್ರವನ್ನಾಗಿ ಮಾಡುವ ಬಸವ ಮಹಾಮನೆಯು ನಾಡಿನ ನೂರಾರು ಶರಣೆಯರಿಗೆ ಇದು ಧ್ಯಾನ ಕೇಂದ್ರವಾಗಲಿದೆ. 2 ಕೋಟಿ ರು. ವೆಚ್ಚದಲ್ಲಿ ಬಸವ ಮಹಾಮನೆ ಟ್ರಸ್ಟ್ ಅಡಿಯಲ್ಲಿ ನೀಲಾಂಬಿಕಾ ಯೋಗಕೇಂದ್ರ ಸೇರಿದಂತೆ ಹಲವು ಬಗೆ ಹಣ್ಣುಗಳನ್ನು ಈ ಜಾಗದಲ್ಲಿ ಬೆಳೆಸಲಾಗುತ್ತದೆ.

ಇದೇ 2011ರ ಅಕ್ಟೋಬರ್ ದಿಂದ ಡಿಸೆಂಬರ್ ಒಳಗಾಗಿ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಅವರನ್ನು ಕರೆಸಿ, ಕಾಮಗಾರಿ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಗುತಿದೆ. ದಿಬ್ಬದ ಮೇಲೆ 2 ಎಕರೆ ಜಾಗದಲ್ಲಿ ಬಸವ ಮಹಾಮನೆ ಮತ್ತು ಉಳಿದ ಜಾಗದೆಲ್ಲಿ ಯೋಗ ಧ್ಯಾನ ಕೇಂದ್ರದ ಕಾಮಗಾರಿ ಶೀಘ್ರವೆ ಪ್ರಾರಂಭಿಸಲಾಗುತ್ತದೆ. ವಯಕ್ತಿಕ ಸಾಧನೆ ಮಾಡುವವರಿಗೆ ಇದು ಸೂಕ್ತವಾಗುತ್ತದೆ ಎಂದು ವಿವರಿಸಿದರು.

ಬಸವಕಲ್ಯಾಣ ಪತ್ರಕತ೯ರ ಸಂಘದಿಂದ ಪತ್ರಿಕಾ ದಿನಾಚರಣೆ

 ಬಸವಕಲ್ಯಾಣ ತಾಲೂಕಾ ಕಾಯ೯ನಿರತ ಪತ್ರಕತ೯ರ ಸಂಘದ ಅಧ್ಯಕ್ಷ ಗುರುನಾಥ ಗಡ್ಡೆ ಅವರು ಕಾಯ೯ಕ್ರಮವನ್ನುದ್ದೇಶಿಸಿ ಮಾತನಾಡುತಿರುವುದು.

 ಪತ್ರಕತ೯ ದೇವು ಪತ್ತಾರ್
ಜುಲೈ, 6,2011 ರಂದು ಜರುಗಿದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕ್ರತರಾದ ದೇವು ಪತ್ತಾರ್ ಮಾತನಾಡುತಿರುವುದು.

ವೀರಣ್ಣ ಮಂಠಾಳಕರ್
-------------------
(ಕಾಯ೯ಕ್ರಮದ ಮುನ್ನದಲ್ಲಿ ಪ್ರಕಟವಾದ ವರದಿ.)
ಬಸವಕಲ್ಯಾಣಃ ಜೂ,01ಃ ಪ್ರತಿ ವಷ೯ದಂತೆ ಈ ವಷ೯ವೂ ತಾಲೂಕಿನ ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘ ವತಿಯಿಂದ ಪತ್ರಿಕಾ ದಿನಾಚರಣೆ ನಡೆಯಲಿದ್ದು ಇದರ ಅಂಗವಾಗಿ ಪತ್ರಕತ೯ರಿಗೆ ನೀಡುವ ವಿವಿಧ ಪ್ರಕಾರದ ಪ್ರಶಸ್ತಿಗಳು ಹಾಗೂ ವಿಶೇಷ ಉಪನ್ಯಾಸ ಜುಲೈ 6 ರಂದು ನಗರದ ಆಯ೯ ಸಮಾಜ ಭವನದಲ್ಲಿ ಜರುಗಲಿದೆ ಎಂದು ಕಾಯ೯ನಿರತ ಪತ್ರಕತ೯ರ ಸಂಘದ ಅಧ್ಯಕ್ಷ ಗುರುನಾಥ ಗಡ್ಡೆ ಪ್ರಕಟಣೆಲ್ಲಿ ತಿಳಿಸಿದ್ದಾರೆ.

ಈ ಬಾರಿಯ ಶಂಕರ ಪ್ರಸಾದ ದುಬೆ ಪ್ರಶಸ್ತಿ ಬೀದರ ಜಿಲ್ಲಾ ಪ್ರಜಾವಾಣಿ ವರದಿಗಾರರಾದ ದೇವು ಪತ್ತಾರ ಅವರನ್ನು ನೀಡಲಾಗುತಿದ್ದು ನಗದು ಪುರಸ್ಕಾರ ಐದು ಸಾವಿರ ರು. ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದ್ದು, ದುಬೆ ಪರಿವಾರದ ಪ್ರಾಯೋಜಕತ್ವದಲ್ಲಿ ಪ್ರಶಸ್ತಿ ನೀಡಲಾಗುತಿದೆ.

ಬೀದರ ಜಿಲ್ಲಾ ಉತ್ತಮ ಸಂಪಾದಕ ಪ್ರಶಸ್ತಿ ಕಾರಂಜಾ ಎಕ್ಸಪ್ರೆಸ್ ಸಂಪಾದಕ ತಿಪ್ಪಣ್ಣ ಭೋಸ್ಲೆ, ಬೀದರ ಸ್ಥಳೀಯ ಪತ್ರಿಕಾ ವರದಿಗಾರ ಪ್ರಶಸ್ತಿ ಅಶೋಕ ಕೋಟೆ ವರದಿಗಾರ ಸೋಮನಾಥ ಬಿರಾದಾರ, ಕನ್ನಡೇತರ ಪತ್ರಿಕೆ ಉತ್ತಮ ಪತ್ರಿಕಾ ಪ್ರಶಸ್ತಿ ಶಿಯಾಸತ್ ಪತ್ರಿಕೆಯ ವರದಿಗಾರ ಖೇಸರ್ ರೆಹಮಾನ, ಬಸವಕಲ್ಯಾಣ ತಾಲೂಕಿನ ಉತ್ತಮ ವರದಿಗಾರ ಪ್ರಶಸ್ತಿ ವಿಜಯಕನಾ೯ಟಕ ವರದಿಗಾರ ಮಾಥ೯ಂಡ ಜೋಶಿ, ಇವರುಗಳಿಗೆ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ಒಳಗೊಂಡ ಸ್ಮರಣಿಗೆಗಳೊಂದಿಗೆ ಗೌರವಿಸಲಾಗುತಿದೆ ಎಂದು ತಿಳಿಸಿದ್ದಾರೆ.

ಮೇಲ್ಕಂಡ ಎಲ್ಲಾ ಐದು ಪ್ರಶಸ್ತಿಗಳನ್ನು ತಾಲೂಕಾ ಸಂಘದ ಸವ೯ ಸದಸ್ಯರ ಸವಾ೯ನುಮತದಿಂದ ಆಯ್ಕೆ ಮಾಡಲಾಗಿದ್ದು, ಜುಲೈ 6 ರಂದು ನಡೆಲಿರುವ ಪತ್ರಿಕಾ ದಿನಾಚರಣೆ ಮತ್ತು ಪತ್ರಕತ೯ರ ಕಾಯಾ೯ಗಾರ ವಿಶೇಷ ಉಪನ್ಯಾಸ ಸಂದಭ೯ದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಗುರುನಾಥ ಗಡ್ಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಭೆಯಲ್ಲಿ ಮಾಣಿಕ ಭುರೆ, ಮುಕುಂದ ನಿಂಬಾಳಕರ್, ರಾಜೇಂದ್ರ ಗೋಖಲೆ, ಮಲ್ಲಿಕಾಜು೯ನ ಬಂಡೆ, ಉದಯಕುಮಾರ ಮುಳೆ, ಪ್ರಭುಲಿಂಗಯ್ಯಾ ಟಂಕಸಾಲಿಮಠ, ಶಿವಕುಮಾರ ಮಠಪತಿ, ನೈಮೋದ್ದಿನ, ಕಲ್ಯಾಣರಾವ ಮದರಗಾಂವಕರ್, ಪ್ರಲ್ಹಾದ ಡಿ.ಕೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


ಜುಲೈ, 6,2011 ರಂದು ಜರುಗಿದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕ್ರತರಾದ ದೇವು ಪತ್ತಾರ್ ಮಾತನಾಡುತಿರುವುದು. ಪತ್ರಕತ೯ ದೇವು ಪತ್ತಾರ್  ಬಸವಕಲ್ಯಾಣ ತಾಲೂಕಾ ಕಾಯ೯ನಿರತ ಪತ್ರಕತ೯ರ ಸಂಘದ ಅಧ್ಯಕ್ಷ ಗುರುನಾಥ ಗಡ್ಡೆ ಅವರು ಕಾಯ೯ಕ್ರಮವನ್ನುದ್ದೇಶಿಸಿ ಮಾತನಾಡುತಿರುವುದು. 


ಬುಧವಾರ, ಜುಲೈ 13, 2011

ಪತ್ರಿಕಾ ದಿನಾಚರಣೆ ಅಂಗವಾಗಿ

 ಪತ್ರಕತ೯ರಾದ ದೇವು ಪತ್ತಾರ್ ಅವರು ಶಂಕರ ಪ್ರಸಾದ ದುಬೆ ಪ್ರಶಸ್ತಿ ಸ್ವೀಕರಿಸಿ ಮಾತನಾಡುತಿರುವುದು.
 ಮುಚಳಂಬ ಪ್ರಣವಾನಂದ ಶ್ರೀಗಳು ಪತ್ರಿಕಾ ದಿನಾಚರಣೆ ಅಂಗವಾಗಿ ಮಾತನಾಡುತಿರುವುದು.
 ಪ್ರಶಸ್ತಿ ಪುರಸ್ಕ್ರತರು ಮತ್ತು ಅತಿಥಿಗಳು

ಕಾಯ೯ಕ್ರಮದಲ್ಲಿ ಶಾಸಕ ಬಸವರಾಜ ಪಾಟೀಲ ಅಟ್ಟೂರ್, ಈ ಸಂದಭ೯ದಲ್ಲಿ ಮುಚಳಂಬದ ಪ್ರಣವಾನಂದ ಸ್ವಾಮಿಗಳು, ಕ.ಕಾ.ಪ.ಸಂಘದ ಜಿಲ್ಲಾಧ್ಯಕ್ಷ ಮಾಥಪ್ಪ ಅಡಸಾರೆ, ನಗರ ಸಭೆ ಅಧ್ಯಕ್ಷೆ ಮಂಗಲಾಬಾಯಿ ಉದರೆ, ಆನಂದ ದೇವಪ್ಪ, ಸಿದ್ರಾಮಯ್ಯ ಸ್ವಾಮಿ, ದೇವು ಪತ್ತಾರ, ಮಾಳಪ್ಪ ಅಡಸಾರೆ, ಡಾ.ಗವಿಸಿದ್ಧಪ್ಪ ಪಾಟೀಲ, ಮಂಗಲಬಾಯಿ ಉದರೆ ಮುಂತಾದವರಿದ್ದರು.
----------------------------------------------------------------------------------------------------------------------------

ಬಸವಕಲ್ಯಾಣಃ ಜು.06ಃ ಪತ್ರಿಕಾ ರಂಗ ಎಂಬುದು ಪವಿತ್ರವಾದಂಥ ಕಾಯ೯ ಆಗಿರುವುದರಿಂದ ಪತ್ರಿಕೆಗಳ ಪಾವಿತ್ರ್ಯತೆ ಕಾಪಾಡಿಕೊಂಡು ಹೋಗುವಂಥ ಜವಾಬ್ದಾರಿ ಪತ್ರಕತ೯ರ ಮೇಲಿರುತ್ತದೆ. ಯಾವುದೇ ರಾಜಕೀಯ ವ್ಯಕ್ತಿಗಳ ಕಣ್ಣನ್ನು ತೆರೆಸುವ ಪತ್ರಿಕೆಗಳು ತಪ್ಪನ್ನು ಮಾಡಿದವರನ್ನು ಬಡಿದೆಚ್ಚರಿಸುವ ಕೆಲಸ ಮಾಡುತಿವೆ. ಇನ್ನಷ್ಟು ಪರಿಣಾಮಕಾರಿಯಾದ ವರದಿಗಳಿಂದ ಜನಸಾಮಾನ್ಯರ ಮನಸನ್ನು ಗೆಲ್ಲವಂತಾಗಬೇಕು ಎಂದು ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಅವರು ಅಭಿಪ್ರಾಯಪಟ್ಟರು.

ನಗರದಲ್ಲಿ ತಾಲೂಕಾ ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉಪನ್ಯಾಸ ಮತ್ತು ಪ್ರಶಸ್ತಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ, ಪತ್ರಕತ೯ರು ತಮ್ಮ ಜೀವಭಯವನ್ನು ಬಿಟ್ಟು ವರದಿಗಳನ್ನು ಮಾಡುವಾಗ ಅನೇಕ ಎಡರುತೊಡರುಗಳನ್ನು ಎದುರಿಸಬೇಕಾಗುತ್ತದೆ. ತಪ್ಪು ಮಾಡಿದವರ ಕುರಿತು ಬರೆದ ವರದಿಯನ್ನು ತಿದ್ದಿಕೊಳ್ಳುವ ಪ್ರಯತ್ನ ತಪ್ಪಿತಸ್ಥರು ಮಾಡಬೇಕೆ ಹೊರತು ವರದಿ ಅಥವಾ ವರದಿಗಾರ ತಪ್ಪೆಂದು ಭಾವಿಸಲಾಗದು ಎಂದರು.

ಪತ್ರಕತ೯ರಿಗಾಗಯೆ ಸಕಾ೯ರ ಅನೇಕ ಸೌಲಭ್ಯಗಳನ್ನು ಒದಗಿಸಿಕೊಡಲು ಮುಂದಾಗಿದೆ. ಅವುಗಳನ್ನು ಪಡೆಯಲು ಅಹ೯ರಾದ ತಾಲೂಕಾ ಪತ್ರಕತ೯ರು ಪಿಂಚಣಿ ಯೋಜನೆ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಪಡೆಯಬೇಕು. ಅದಕ್ಕೆ ಬೇಕಾದ ಸಹಕಾರ ಒದಗಿಸುತ್ತೇನೆಂದರು.

ಶಂಕರ ಪ್ರಸಾದ ದುಬೆ ಪ್ರಶಸ್ತಿ ಸ್ವೀಕರಿಸಿ ಪತ್ರಕತ೯ ದೇವು ಪತ್ತಾರ ಮಾತನಾಡಿ, ಪತ್ರಕತ೯ರ ಶ್ರಮಕ್ಕೆ ಮನ್ನಣೆ ಸಿಕ್ಕಾಗ ಇನ್ನಷ್ಟು ಉತ್ತೇಜನ ಸಿಗುತ್ತದೆ. ಆದರೆ ಹಿರಿಯರೊಂದಿಗೆ ಕಿರಿಯ ಪತ್ರಕತ೯ರನ್ನು ಗುರುತಿಸಿ ಸನ್ಮಾನಿಸುವುದೆಂದರೆ ಇನ್ನಷ್ಟು ಉತ್ತಮವಾದ ಕಾಯ೯ ಪತ್ರಿಕಾರಂಗದಲ್ಲಿ ಮಾಡಲಿ ಎಂದಾಗಿರುತ್ತದೆ ಎಂಬುದು ಭಾವಿಸಿದ್ದೇನೆ. ಪತ್ರಿಕೋದ್ಯಮದಲ್ಲಿ ಇರುವವರೆಲ್ಲ ಸೋಮಾರಿಗಳು ಆಗಿರುತ್ತಾರೆ ಎಂಬ ಕಲ್ಪನೆ ಇತ್ತು. ಇದೀಗ ಬೀದರಗೆ ಬಂದಾಗ ನಿಜಕ್ಕೂ ಪತ್ರಕತ೯ನ ಜವಾಬ್ದಾರಿ ಮತ್ತು ಒತ್ತಡಗಳು ಎಷ್ಟಿರುತ್ತವೆಂಬುದು ಅರಿತುಕೊಂಡಿದ್ದೇನೆ. ನನ್ನನ್ನು ಗುರುತಿಸಿ ಸನ್ಮಾನಿಸಿರುವುದು ನನ್ನ ಕತ೯ವ್ಯದಲ್ಲಿರುವ ಜವಾಬ್ದಾರಿಗಳು ಇನ್ನಷ್ಟು ಹೆಚ್ಚಾಗಿವೆ ಎಂದರು.

ಜಿಲ್ಲಾ ಮಟ್ಟದ ಸಂಪಾದಕರಿಗೆ ನೀಡುವ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ತಿಪ್ಪಣ್ಣಾ ಭೋಸಲೆ ತಾಲೂಕಾ ಮಟ್ಟದಲ್ಲಿ ಅಚ್ಚುಕಟ್ಟಾದ ಸಮಾರಂಭವವನ್ನು ಮಾಡಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡುತಿರುವುದು ಇಂದಿನ ಅನೇಕ ಲಾಬಿಗಳ ನಡುವೆ ಪಡೆದುಕೊಳ್ಳುವ ಪ್ರಶಸ್ತಿಗಳಿಗಿಂತ ಪಾರದಶ೯ಕತೆ ಹೊಂದಿದೆ. ಪತ್ರಿಕೆ ನಡೆಸುವುದು ಸರಳವಾದುದ್ದಲ್ಲ. ಪತ್ರಕತ೯ನ ಜೀವನ ಬಹಳ ಕಷ್ಟಕರವಾಗಿದೆ.

ಪತ್ರಕತ೯ರು ತಮ್ಮ ಹೊಣೆಗಾರಿಕೆಯನ್ನು ಅಥೈ೯ಸಿಕೊಂಡು ಸಮಾಜದ ನಾನ ಬಗೆಯ ಜನರೊಂದಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಉತ್ತಮ ವರದಿಗಳನ್ನು ನೀಡುವುದರ ಜೊತೆಗೆ ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸ ಮಾಡುತ್ತಾನೆ. ಕೇಳಿ ಪಡೆಯುವಂಥ ಪ್ರಶಸ್ತಿ ಸ್ವೀಕರಿಸದೇ ಗುರುತಿಸಿ ಕೊಡುವಂಥ ಪ್ರಶಸ್ತಿಗಳಿಗೆ ಮಾನ್ಯತೆ ಕೊಡಬೇಕು ಎಂದರು.

ಮುಖ್ಯ ಅತಿಥಿಗಳಾಗಿಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘ ಕೇಂದ್ರ ಸಮಿತಿ ಸದಸ್ಯ ಆನಂದ ದೇವಪ್ಪ ಮಾತನಾಡಿ, ರಾಜಕೀಯ ಪ್ರತಿನಿಧಿಗಳ ಕಾಯ೯ಕ್ರಮಗಳ ಉತ್ತಮವಾದ ವರದಿಗಳನ್ನು ಪತ್ರಕತ೯ರು ಮಾಡಿದಾಗ ಖುಷಿ ಪಡುವಂತೆ ಕೆಟ್ಟ ಕೆಲಸಗಳನ್ನು ಮಾಡಿರುವ ಬಗ್ಗೆ ಪತ್ರಕತ೯ರು ರಾಜಕೀಯ ವ್ಯಕ್ತಿಗಳ ಮತ್ತು ಅಧಿಕಾರಿಗಳ ವರದಿ ಮಾಡಿದಾಗ ಕೋಪ ಮಾಡಿಕೊಳ್ಳದೇ ಮಾಡಿರುವ ತಪ್ಪುಗಳನ್ನು ತಿದ್ದಿಕೊಳ್ಳಬೇಕು ಎಂದರು.

ಜಿಲ್ಲಾ ಮಟ್ಟದ ಕನ್ನಡೇತರ ಪತ್ರಕತ೯ ಪ್ರಶಸ್ತಿ ಕೈಸರ್ ರೆಹಮಾನ, ಜಿಲ್ಲಾ ಮಟ್ಟದ ಉತ್ತಮ ವರದಿಗಾರ ಪ್ರಶಸ್ತಿ ಸೋಮನಾಥ ಬಿರಾದಾರ, ತಾಲೂಕಾ ಮಟ್ಟದ ಉತ್ತಮ ವರದಿಗಾ ಪ್ರಶಸ್ತಿ ಮಾಥ೯ಂಡ ಜೋಶಿ ಅವರುಗಳು ಪ್ರಶಸ್ತಿ ಸ್ವೀಕರಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾಳಪ್ಪ ಅಡಸಾರೆ ಮಾತನಾಡಿ, ಬೀದರ ಜಿಲ್ಲೆಯಲ್ಲಿ ಒಂದು ಕೋಟಿ ರು. ವೆಚ್ಚದಲ್ಲಿ ಪತ್ರಕತ೯ರ ಭವನ ನಿಮಿ೯ಸಲು ಈಗಾಗಲೆ ಮುಖ್ಯಮಂತ್ರಿ ಯಡಿಯೂರಪ್ಪನವರು ಅಡಿಗಲ್ಲು ಸಮಾರಂಭ ನೆರವೇರಿಸಿದ್ದಾರೆ. ಅದೇ ರೀತಿ ಬಸವಕಲ್ಯಾಣದಲ್ಲಿ ಶೀಘ್ರವೇ ಪತ್ರಕತ೯ರ ಭವನಕ್ಕೆ ಹಸಿರು ನಿಶಾನೆ ದೊರೆತಿದೆ. ಕಾ೯ರದಿಂದ ಪತ್ರಕತ೯ರಿಗಾಗಿ ಪ್ರತ್ಯೇಕ ನಿವೇಶನಗಳು ಇಲ್ಲಿಯ ಸ್ಥಳೀಯ ಶಾಸಕರು ಮಾಡಿಸಿ ಕೊಡಬೇಕು ಎಂದರು.

ಮುಚಳಂಬ ಪ್ರಣವಾನಂದ ಸ್ವಾಮಿಗಳು ಅಶಿವ೯ಚನ ನೀಡಿ, ಸಮಾಜದ ಕಣ್ಣನ್ನು ತೆರೆಸುವ ಶಕ್ತಿ ಪತ್ರಿಕೆಗಳಿಗಿದೆ. ಅದರ ಹಿಂದಿನ ಶಕ್ತಿಯಾಗಿ ಪತ್ರಕತ೯ರು ನಿವ೯ಹಿಸುತಿದ್ದಾರೆ. ಅವರಿಗೆ ಯ3ವುದೇ ರೀತಿಯ ಆದಾಯವಲ್ಲದಿದ್ದರೂ ಸಮಾಜದ ಪರಿವತ೯ನೆಗೆ ಪಣತೊಟ್ಟು ತ್ಯಾಗ ಮನೋಭಾವನೆಯಿಂದ ನಿಸ್ವಾಥ೯ ಸೇವೆ ಮಾಡುವವರಾಗಿರುತ್ತಾರೆ. ಅವರ ಕಷ್ಟಗಳಿಗೆ ಸಮಾಜದವರೆಲ್ಲ ಸಹಕರಿಸುತ್ತ ಉತ್ತಮ ಸಮಾಜ ನಿಮಾ೯ಣಕ್ಕೆ ಕೈಜೋಡಿಸಬೇಕು ಎಂದು ನುಡಿದರು.

ಇದೇ ಸಂದಭ೯ದಲ್ಲಿ ಹಿರಿಯ ಪತ್ರಕತ೯ ಧನರಾಜ ಫುಲಾರೆ ಅವರನ್ನು ಗೌರವ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಡಾ. ಗವಿಸಿದ್ಧಪ್ಪ ಪಾಟೀಲ, ಮಾಥ೯ಂಡ ಜೋಶಿ ಇದ್ದರು. ಗುರುನಾಥ ಗಡ್ಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಚನ್ನಬಸವ ಬಿರಾದಾರ ನಿರೂಪಿಸಿದರೆ ಭೀಮಾಶಕಂರ ಬಿರಾದಾರ ಸಂದಿಸಿದರು. ಕಾಯ೯ನಿರತ ಪತ್ರಕತ೯ರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಂಠಾಳಕರ್ ಕವನ ವಾಚನ

 ಮಂಠಾಳಕರ್ ಕವನ ವಾಚನ
ಇದೇ ಜುಲೈ 12, 2011 ರಂದು ಭಾಲ್ಕಿಯಲ್ಲಿ ನಡೆದ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೀರಣ್ಣ ಮಂಠಾಳಕರ್ ಅವರು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸಂದಭ೯ದಲ್ಲಿ ಸಮ್ಮೇಳನಾಧ್ಯಕ್ಷರಾದ ಸುಬ್ಬಣ್ಣ ಅಂಬೆಸಂಗೆ ಅವರಿಂದ ಗೌರವ ಸನ್ಮಾನ ಸ್ವೀಕರಿಸಿದರು. ಇದೇ ಸಂದಭ೯ದಲ್ಲಿ ಮತ್ತೆ ಹುಟ್ಟಿ ಬರುವುದನ್ನೇ ಮರೆತಿದ್ದಾರೆ ಎಂಬ ಕವಿತೆಯನ್ನು ಓದುವುದರಲ್ಲಿ... ಮೇಲ್ಕಾಣುವ ಚಿತ್ರದಲ್ಲಿ ವೀರಣ್ಣ ಮಂಠಾಳಕರ್.