ಶನಿವಾರ, ಮಾರ್ಚ್ 10, 2012

ನಾರಾಯಣಪೂರ ವಾಸ್ತುಶಿಲ್ಪ ಕಲೆಗಳ ವೈಭವ




ಬಸವಕಲ್ಯಾಣ, ಮಾ. 10

ಇತಿಹಾಸದ ಗಭ೯ದಲ್ಲಿ ಅನೇಕ ಕುರುಗಳು ಇವತ್ತಿಗೂ ಜೀವಂತ ಸಾಕ್ಷಿಯಾಗಿ ಎಲ್ಲೆಡೆ ಸಿಗುವಂತೆ ಬಸವಕಲ್ಯಾಣ ತಾಲೂಕಿನ ಸುತ್ತಲಿನ ಗ್ರಾಮಗಳಲ್ಲಿ ಅಳಿದುಳಿದ ಇತಿಹಾಸದ ಪುಟಗಳು ತೆರೆದುಕೊಳ್ಳಲು ಮೂಲ ಸಂಶೋಧನಕಾರರ ಅವಶ್ಯಕತೆ ಬಹಳಷ್ಟಿದೆ. ಇದರಿಂದ ಇತಿಹಾಸ ಮರು ಜೀವ ಪಡೆಯಲು ಸಾಧ್ಯವಾಗುತ್ತದೆ ಎನ್ನುವುದಕ್ಕೆ ಇಲ್ಲೊಂದು ನಾರಾಯಣಪೂರ ವಾಸ್ತುಶಿಲ್ಪ ಕಲೆಗಳ ಪುಸ್ತಕವು ಸಾಕ್ಷೀಕರಿಸುತ್ತದೆ.

ಇಂತಹ ಒಂದು ಅಪರೂಪದ ಇತಿಹಾಸದ ಕುರಿತು ಬರೆಯಲ್ಪಟ್ಟ ಪುಸ್ತಕವು ವೀರಶೆಟ್ಟಿ ಎಂ. ಪಾಟೀಲ್್ ಎನ್ನುವವರು ಸತತ ಅಧ್ಯಯನ ಹಾಗೂ ತಿರುಗಾಟದಿಂದ ಅವರಲ್ಲಿರುವ ಕ್ರಿಯಾಶೀಲತೆ ಎತ್ತಿ ಹಿಡಿದಿದ್ದಾರೆ. ಪಾಟೀಲರ ಮೂಲ ವೖತ್ತಿ ಛಾಯಾಚಿತ್ರಕಾರರಾಗಿದ್ದಾರೆ. ಇವರು ಚಿತ್ರ ಕಲಾವಿದರೂ ಹೌದು. ಅನೇಕ ಇತಿಹಾಸದ ದೖಷ್ಠಾಂತ ಗಳನ್ನು ತಮ್ಮ ನಾರಾಯಣಪೂರ ವಾಸ್ತುಶಿಲ್ಪ ಕಲೆಗಳ ಪುಸ್ತಕದಲ್ಲಿ ಸೆರೆ ಹಿಡಿದಿರುವುದು ಕಂಡು ಬರುತ್ತದೆ.

ಐತಿಹಾಸಿಕ ಸ್ಮಾರಕಗಳ ಬಗ್ಗೆ ತೀವ್ರ ಹುಡುಕಾಟ ನಡೆಸಿದ ಬಳಿಕ ಒಂದು ಗೖಂಥದ ರೂಪದಲ್ಲಿ ಹೊರ ತರುವಲ್ಲಿ ಪ್ರಯತ್ನಿಸಿದ್ದು ಸ್ವಾಗತಾಹ೯ವಾಗಿದೆ. ಪುಸ್ತಕದ 10-11 ನೇ ಪುಟದಲ್ಲಿ ಲೇಖಕರು ಹೇಳಿರುವಂತೆ 21 ಯುಗಗಳಲ್ಲಿ ವಿಶ್ವಗುರು ಬಸವಣ್ಣನವರು ಹುಟ್ಟಿ ಬಂದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ತಳಂಧರ ಯುಗದಲ್ಲಿ ಬಸವಣ್ಣನವರ ಹೆಸರು ನಿಃಶೂನ್ಯನೆಂಬ ಗಣೇಶ್ವರ, ಗುರವಿನ ಹೆಸರು ಪ್ರಕಾಶನೆಂಬ ಪ್ರಭು, ಲಿಂಗದ ಹೆಸರು ಸ್ವಯಂಜ್ಯೋತಿ ಲಿಂಗ, ವಿಮಲಾಪೂರ ಎಂಬುದು ಈಗಿನ ಬಸವಕಲ್ಯಾಣಕ್ಕೆ ಪ್ರಾರಂಭದ ಹೆಸರಾಗಿತ್ತು ಎಂದು ಆಯಾ ಯುಗಗಳಲ್ಲಿ ಬಸವಣ್ಣನವರಿಗೆ ಇದ್ದ ಕಾವ್ಯನಾಮಗಳನ್ನು ಸಹ ಸೂಚಿಸಿ, ಕಲಿಯುಗದಲ್ಲಿ ಬಸವನೆಂಬ ಗಣೇಶ್ವರ ಇತ್ತೆಂದು ದಾಖಲಿಸಿದ್ದಾರೆ.

ಇಂತಹ ಅಪರೂಪದ ಪ್ರಯತ್ನ ನಡೆಸಲು ಬಸವಕಲ್ಯಾಣ ತಾಲೂಕಿನ ಗೋಟಾ೯ ಗ್ರಾಮದ ರುದ್ರಮುನಿ ವಿಶ್ವನಾಥಯ್ಯ ಮಠಪತಿ ಸಹಕರಿಸಿದ್ದಾರೆ ಎನ್ನುವ ಲೇಖಕರು, ಗೋಟಾ೯ದ ಮಠಪತಿ ಅವರಲ್ಲಿರುವ ಮೂಲ ಹಸ್ತಪ್ರತಿಗಳಲ್ಲಿ ಬಸವಣ್ಣನವರು ಆಯಾ ಕಾಲ, ಯುಗಗಳಲ್ಲಿ ಹುಟ್ಟಿ ಬಂದಿರುವ ಬಗ್ಗೆ ತಾಡೊಲೆಗಳಲ್ಲಿ ಬರೆದಿರುವುದನ್ನು ಸ್ಪಷ್ಟವಾಗಿ ಕಂಡು ಬಂದಿರುತ್ತದೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಆಯಾ ಯುಗಗಳಲ್ಲಿ ಬಸವಣ್ಣನವರಿಗೆ ಇದ್ದ ಮೂಲ ಹೆಸರು, ಗುರುವಿನ ಹೆಸರು, ಕಾವ್ಯನಾಮ ಲಿಂಗದ ಹೆಸರು ಮತ್ತು ಈಗಿನ ಬಸವಕಲ್ಯಾಣಕ್ಕೆ ಇಪ್ಪತ್ತೊಂದು ಶತಮಾನಗಳಲ್ಲಿ ಕರೆಯಲ್ಪಟ್ಟ ಬೇರೆ ಬೇರೆ ಹೆಸರುಗಳ ಸಮೇತ ನಾರಾಯಣಪೂರ ವಾಸ್ತುಶಿಲ್ಪ ಕಲೆಗಳ ಪುಸ್ತಕದಲ್ಲಿ ಸವಿವರವಾಗಿ ಸಿಗುವಂತೆ ವೀರಶೆಟ್ಟಿ ಪಾಟೀಲ ಅವರು ದಾಖಲಿಸಿದ್ದಾರೆ.

12ನೇ ಶತಮಾನದ ಮಹಾಮಾನವತಾವಾದಿ ಬಸವಣ್ಣನವರು ಹಿಂದಿನ ಎಲ್ಲಾ ಯುಗಗಳಲ್ಲಿ ಹುಟ್ಟಿ ಬಂದವರು. ಹದಿನೈದನೇ ಯುಗ ಎನ್ನಲಾದ ವಿಶ್ವಾಸು ಯುಗದಲ್ಲಿ ಬಸವಣ್ಣನವರು ಇದೇ ನಾರಾಯಣಪೂರದಲ್ಲಿ ಹುಟ್ಟಿ ಬಂದಿದ್ದರು. ಆಗ ಬಸವಣ್ಣನವರ ಹೆಸರು ಹಂಸನೆಂಬ ಗಣೇಶ್ವರ, ಇವರ ಗುರುಗಳು ಪರಮಹಂಸ ಹಾಗೂ ಅವರ ಲಿಂಗದ ಹೆಸರು ಪ್ರಾಣಲಿಂಗ ಎಂದು ತಿಳಿಯುತ್ತದೆ ಎಂದು ಪು-12 ರಲ್ಲಿ ಪ್ರಸ್ತಾಪಿಸಿದ್ದಾರೆ.

ನಾರಾಯಣಪೂರ ಗ್ರಾಮವೂ ಕಲ್ಯಾಣ ಚಾಲುಕ್ಯರ ತವರೂರು ಎಂದೇ ಪ್ರಸಿದ್ಧಿ ಪಡೆದಿದೆ. ನಾರಾಯಣಪೂರದ ದಕ್ಷಿಣಕ್ಕೆ ಶ್ರೀಮನ್್ ನಾರಾಯಣ(ವಿಷ್ಣು) ದೇವಾಲಯ ಇತ್ತೆಂದು ಹೇಳಲಾಗುತ್ತದೆ. ಈಗಿದು ಪೂತಿ೯ ಶಿಥಿಲಗೊಂಡಿದೆ. ಈಗಿಲ್ಲಿ ಮಸೀದಿಯೊಂದು ನಿಮಾ೯ಣವಾಗಿದ್ದು, ದೇವಸ್ಥಾನದಿಂದಲೇ ಊರಿಗೆ ನಾರಾಯಣಪೂರ ಎಂಬ ಹೆಸರು ಬಂದಿರಬಹುದೆಂದು ಪು-13 ರಲ್ಲಿ ಊಹಿಸುತ್ತಾರೆ.

ಹೀಗೆ ನಾರಾಯಣಪೂರ ವಾಸ್ತುಶಿಲ್ಪ ಕಲೆಗಳ ಪುಸ್ತಕ ಒಟ್ಟು 69 ಪುಟಗಳಲ್ಲಿ 2011 ನೇ ಸಾಲಿನಲ್ಲಿ ಪ್ರಕಟಗೊಂಡಿದೆ. ಇದೇ ಮಾ. 12 ರಂದು ಮಂಠಾಳ ವಲಯ ಜಾನಪದ ಪರಿಷತ್್ ಉದ್ಘಾಟನಾ ಸಮಾರಂಭದಲ್ಲಿ ಕೖತಿ ಬಿಡುಗಡೆ ಮಾಡಲಾಗುತ್ತಿದೆ. ಕಲ್ಯಾಣದಲ್ಲಿ ಚಾಲುಕ್ಯರು ಆಳಿದ ಅನೇಕ ಕುರುಹುಗಳು ಇತಿಹಾಸಕಾರರು ನಿಬ್ಬೆರಗಾಗುವಂತೆ ನೋಡುವುದರಲ್ಲಿ ಸಂದೇಹವಿಲ್ಲ.

ಶಿಲ್ಪಕಲೆಗಳಲ್ಲಿ ಇರುವ ಕಲಾ ಕುಸುರಿಗಳು ಮಹಾಭಾರತದ ಕಥೆಯನ್ನೇ ಹೇಳುವಂತಿದೆ. ಕಲ್ಯಾಣ ಚಾಲುಕ್ಯರ ಆಳ್ವಿಕೆಯಲ್ಲಿ ಹಂತ ಹಂತವಾಗಿ ಕಲಾಕುಸುರಿಗಳು ವೖದ್ಧಿಯಾದಂತೆ ಕಾಣುತ್ತದೆ. 3ನೇ ಸೋಮೇಶ್ವರನು ಅರಸನಷ್ಟೇ ಅಲ್ಲದೇ ಕವಿಯೂ ಆಗಿದ್ದನು ಎಂದು ಪು-25 ರಲ್ಲಿ ಉಲ್ಲೇಖಿಸಿರುವ ಲೇಖಕರು ಅನೇಕ ಅರಸರುಗಳ ಮಾಹಿತಿಗಳ ಸಮೇತ ಇತಿಹಾಸವನ್ನು ಕೆದಕಿ ನೋಡಿದ್ದಾರೆ.

ನಾರಾಯಣಪೂರ ಶಿವ ದೇವಾಲಯದಲ್ಲಿರುವ ಅಪರೂಪದ ಇಷ್ಟ ಲಿಂಗಾಚ೯ನೆಯ ಶಿವ ಶಿಲ್ಪಕ್ಕೆ ಕೖತಿ ಅಪಿ೯ಸುವುದರ ಮೂಲಕ ಇತಿಹಾಸದ ವೈಭವವನ್ನು ಸಾರುವ 39 ಚಿತ್ರಗಳ ಸಮೇತವಾಗಿ ಉತ್ತಮವಾದ ಗೖಂಥವನ್ನು ರಚಿಸಿ ಓದುಗರ ಕೈಗಿಟ್ಟಿದ್ದಾರೆ. ಹೆಚ್ಚಿನ ಸಂಶೋಧನೆಗೆ ಇತಿಹಾಸಕಾರರಿಗೆ ಅನುಕೂಲವನ್ನು ಮಾಡಿಕೊಡುವಲ್ಲಿ ಸಹಕರಿಸುತ್ತದೆ ಎನ್ನಬಹುದು.

ಮಹತ್ವಪೂಣ೯ವಾದ ನಾರಾಯಣಪೂರ ವಾಸ್ತುಶಿಲ್ಪ ಕಲೆಗಳ ಪುಸ್ತಕದಲ್ಲಿ ದಾಖಲಾದ ಮಾಹಿತಿಯಂತೆ ಬಸವಕಲ್ಯಾಣ ಅಭಿವೖದ್ಧಿ ಪ್ರಾಧಿಕಾರ ಮಂಡಳಿ ನಾರಾಯಣಪೂರ ಗ್ರಾಮದತ್ತ ಚಿತ್ತ ಹರಿಸಬೇಕಾದ್ದು ಅವಶ್ಯವಾಗಿದೆ. ನಾರಾಯಣಪೂರ ಕೆರೆಯ ಬಗ್ಗೆ ಕೂಡ ವಿವರಗಳಿವೆ. ಗೊತ್ತಿಲ್ಲದೇ ಮಣ್ಣಿನಲ್ಲಿ ಮುಚ್ಚಿ ಹೋದ ಇತಿಹಾಸದ ಕುರುಹುಗಳ ಬಗ್ಗೆ ಸ್ಪಷ್ಟ ಚಿತ್ರಣವನ್ನು ನೀಡಿದ್ದಾರೆ.