ಮಂಗಳವಾರ, ಜುಲೈ 26, 2011

ಸಕಾ೯ರದ ಮಹತ್ವದ ಯೋಜನೆಗಳಲ್ಲಿ ಸೈಕಲ್ ವಿತರಣೆ ಮಾಡಿರುವುದ ಸೂಕ್ತ, ಆದರೆ ನಿಲ್ಲಿಸಲು ಸ್ಥವಿಲ್ಲದೇ ಶಾಲೆಯ ಮುಂಭಾಗ ಮುಖ್ಯರಸ್ತೆಯ ಮುಂದೆ ನಿಲ್ಲಿಸಿರುವುದರಿಂದ ಪ್ರಯಾಣಿಕರಗಾಗುತಿರುವ ತೊಂದರೆ.


ಶಾಲೆಗಳಲ್ಲಿ ಸೈಕಲ್ ನಿಲ್ಲಿಸಲು ಜಾಗವಿಲ್ಲದೇ ಮುಖ್ಯರಸ್ತೆಗಳಲ್ಲಿ ನಿಲ್ಲಿಸುವ ಅವಾಂತರಃ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹರಿಸಲಿ ಇತ್ತ-ಚಿತ್ತ!
ವೀರಣ್ಣ ಮಂಠಾಳಕರ್, ಬಸವಕಲ್ಯಾಣ

ಬಸವಕಲ್ಯಾಣಃ ಜು,25 ಸಕಾ೯ರ ಪ್ರೌಢ ಶಾಲಾ ವಿದ್ಯಾಥಿ೯-ವಿದ್ಯಾಥಿ೯ನಿಯರಿಗೆ ನೀಡುತಿರುವ ಸೈಕಲ್ ವಿತರಣೆ ಉತ್ತಮವಾದ ಬೋಜನೆಗಳಲ್ಲಿ ಒಂದಾಗಿದೆ ಎಂಬ ಖುಷಿಯ ವಿಚಾರ ಸಂಗತಿ ಒಂದೆಡೆಯಾದರೆ ಕೆಲವೊಂದು ಶಾಲೆಗಳಲ್ಲಿ ಸೈಕಲ್ ನಿಲ್ಲಿಸಲು ಜಾಗವಿಲ್ಲದೇ ಸಾವ೯ಜನಿಕ ಮುಖ್ಯ ರಸ್ತೆಗಳಲ್ಲಿ ನಿಲ್ಲಿಸುವಂಥ ಪರಿಸ್ಥಿತಿ. ಇದರಿಂದ ವಾಹನಗಳ ಸವಾರರಿಗೂ ಅಡಚಣೆ, ಪಾದಚಾರಿಗಳಿಗೂ ಕಿರಿಕಿರಿಯಾಗಿ ನಿತ್ಯವೂ ಕಿಕ್ಕಿರಿದು ನಿಲ್ಲುವ ಸೈಕಲ್ ಗಳ ಮಧ್ಯೆಯಿಂದ ದಾಟಿ ಹೋಗುವುದೇ ಹರಸಾಹಸದ ಕೆಲಸವಾಗಿದೆ.

ಇಂತಹ ಅವಾಂತರಕ್ಕೆ ಎದುರಾಗಿದ್ದು ಬೇರೆಲ್ಲೂ ಅಲ್ಲ ಬಸವಕಲ್ಯಾಣ ನಗರದ ಪ್ರಮುಖವಾದ ಅಂಬೇಡ್ಕರ್ ವ್ರತ್ತದಲ್ಲಿ. ಇಲ್ಲಿಂದಲೇ ಮುಖ್ಯ ಬಸ್ ನಿಲ್ದಾಣಕ್ಕೆ ಹೋಗುವ ಮೇನೆ ರೋಡ್ಗೆ ಅಂಟಿಕೂಂಡಿರುವ ಸಕಾ೯ರಿ ನೀಲಾಂಬಿಕಾ ಬಾಲಕಿಯರ ಪದವಿಪೂವ೯ ಕಾಲೇಜ್ ಮತ್ತು ಪ್ರೌಢಶಾಲೆಯ ಎದುರಿಗೆ ಕಂಡು ಬರುತದೆ. ಸೈಕಲ್...ಸೈಕಲ್....ಬೈಸಿಕಲ್ ಗಳು ಇದೇನು ಸೈಕಲ್ ಮಾರಾಟದ ಅಂಗಡಿಯೋ ಎಂಬಂತೆ ಒಂದು ಕ್ಷಣ ಹೊಸಬರಿಗನಿಸದೇ ಇರಲಾರದು.

ಇಲ್ಲಿಂದ ಪ್ರಯಾಣಿಸುವ ವಾಹನಗಳಿಗೂ ಪಾದಚಾರಿಗಳಿಗೂ ಮುಖ್ಯ ರಸ್ತೆಗೆ ಅಂಟಿಕೊಂಡು ಸಾಲಾಗಿ ನಿಂತಿರುವ ವಿದ್ಯಾಥಿ೯ನಿಯರ ಸೈಕಲ್ ಗಳಿಗೆ ಪ್ರತ್ಯೇಕವಾದ ಸ್ಟ್ಯಾಂಡ್ ಇಲ್ಲದೇ ಪರಿತಪಿಸುವಂತಾಗಿದೆ. ಅದಕ್ಕಾಗಿ ಸಾವ೯ಜನಿಕ ಸ್ಥಳದಲ್ಲಿ ನಿಲ್ಲಿಸುವಂಥ ಅನಿವಾಯ೯ ಆಗಿರುವುದರಿಂದ ಅವಾಂತರವನ್ನು ಸ್ರಷ್ಟಿಸಿ ಅಪಘಾತಗಳಿಗೆ ಎಡೆಮಾಡಿಕೊಡುವಂತಿದೆ. ಇಷ್ಟಕ್ಕೂ ಸಂಬಂಧಪಟ್ಟ ಶಿಕ್ಷಕ ವ್ರಂದವಾಗಲಿ, ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇತ್ತ ಗಮನ ಹರಿಸದೇ ಇರುವುದು ಎಂಥ ದುರಂತವಾಗಿದೆ ಎಂದು ನಿತ್ಯವೂ ಓಡಾಡುವವರ ಗೋಳಾಗಿದೆ.

ಇಂಥದೇ ಸಮಸ್ಯೆಗಳು ಹಲವು ಶಾಲೆಗಳಲ್ಲಿದ್ದರೂ ಬಸವಕಲ್ಯಾಣ ನಗರದ ಮುಖ್ಯ ರಸ್ತೆಯಲ್ಲೇ ಸೈಕಲ್ ಗಳಿಗೊಂದು ತಾಣವನ್ನಾಗಿಸುವ ಸಂದಿಗ್ಧತೆ ಎದುರಾಗಿದೆ. ಇಲ್ಲಿಂದ ನಿತ್ಯವೂ ಓಡಾಡುವ ಜನರಿಗೆ ತೀರಾ ಕಿರಿಕಿರಿ ಉಂಟು ಮಾಡುತಿದೆ. ಅಷ್ಟೇ ಅಲ್ಲದೇ ಇದೇ ಶಾಲೆಯ ಮುಂಭಾಗದಲ್ಲಿ ಬಸ್ ಗಳಿಗಾಗಿ ಕಾದು ನಿಲ್ಲುವ ಪ್ರಯಾಣಿಕರಿಗೆ ಅಡ್ಡಡ್ಡವಾಗಿ ನಿಂತ ಸೈಕಲ್ ಗಳು ಅವಸರದ ಕಾಲುಗಳಿಗೆ ಎಡತಾಕುತವೆ.

ಶಾಲೆಗೆ ಕಂಪೌಂಡ್ ಗೋಡೆ ಮತ್ತು ಗೇಟ್ ಇರುವುದರಿಂದ ಒಳಗೆ ನುಗ್ಗಿಸಲು ಆಗದೇ ಹೊರಗಡೆಯೇ ನಿಲ್ಲಿಸುವಂಥ ಪರಿಸ್ಥಿತಿ. ಎಲ್ಲರನ್ನು ಮುಜುಗರಗೊಳಪಡಿಸು ಸ್ಥಿತಿಯಲ್ಲಿರುವ ಜನರು ಶಾಲೆಯ ಮುಖ್ಯೋಪಾದ್ಯಯರಲ್ಲಿ ದೂರಿದಿದೆ. ಅದಕ್ಕೆ ಅವರು ನೀಡು ಉತ್ತರ, ಏನ್ ಮಾಡೇದ್ರಿ ಶಾಲೆ ಒಳಗಡೆ ಜಾಗವಿಲ್ಲ. ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತದೆಂದು ಹೊರಗಡೆ ನಿಲ್ಲಿಸಬೇಕಾಗುತದೆ. ಅದಕ್ಕೆ ಪಯಾ೯ಯ ವ್ಯವಸ್ಥೆ ಮಾಡುವವರಿಗೆ ಚಿಂತೆವಿಲ್ಲ ನಾವೇನು ಮಾಡೋದು ಎಂದು ಜಾರಿಕೊಳ್ಳುತ್ತಾರೆ.

ಯಾವುದಕ್ಕೂ ಮುಖ್ಯ ರಸ್ತೆಯಲ್ಲಿ ವಾಹನಗಳಿಗೂ, ಪಾದಚಾರಿಗಳಿಗೂ, ನಿತಯವೂ ಪ್ರಯಾಣಿಸುವ ಪ್ರಯಾಣಿಕರಿಗೂ ತೀರಾ ಅಡ್ಡಿಯುಂಟು ಮಾಡುತಿರುವ ಶಾಲೆ ಮುಂಭಾಗದಲ್ಲಿ ನಿಲ್ಲಿಸಿರುವ ಸೈಕಲ್ ಗಳಿಗೆ ಪಯಾ೯ಯ ವ್ಯವಸ್ಥೆಯನ್ನು ಮಾಡಿದರೆ ಉತ್ತಮವಾಗುತ್ತದೆ. ಇಲ್ಲವಾದರೆ ಕಿಕ್ಕಿರಿದು ಓಡಾಡುವ ವಾಹನಗಳಿಂದ ಸಾವ೯ಜನಿಕರಿಗೂ ತೊಂದರೆ, ಶಾಲಾ ಮಕ್ಕಳಿಗೂ ತೊಂದರೆಯುಂಟಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವಂಥ ವಾತಾವರಣ ಇಲ್ಲಿ ನಿಮಾ೯ವಾಗಿದೆ.

ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಕಾ೯ರಿ ನೀಲಾಂಬಿಕಾ ಬಾಲಕೀಯರ ಪ್ರೌಢ ಶಾಲೆಯಿಂದ ಕೆಲವೇ ಅಂತರದಲ್ಲಿದ್ದರೂ ನಿಲ೯ಕ್ಷಿಸಲಾಗುತಿದೆ. ಜನಪ್ರತಿನಿಧಿಗಳ ನಿಲ೯ಕ್ಷತನವೂ ಇಂತಹ ಸಮಸ್ಯೆಗಳಿಗೆ ಕಾರಣವಾಗುತಿದೆ ಎನ್ನಲಾಗುತಿದೆ. ಒಟ್ಟಿನಲ್ಲಿ ವಿದ್ಯಾಥಿ೯ನಿಯರ ಸೈಕಲ್್ ಗಳಿಗೆ ನಿಲ್ಲಲು ಪಯಾ೯ಯ ವ್ಯವಸ್ಥೆ ಮತ್ತು ಸಾವ೯ಜನಿಕರಿಗೂ ಮತ್ತು ವಾಹನಗಳಿಗೂ ಆಗುತಿರುವ ತೊಂದರೆ ನೀಗಿಸಲು ಇಲಾಖೆ ಮುಂದಾಗಬಹುದೇ ಎಂದು ಕಾದು ನೋಡಬೇಕಷ್ಟೆ

ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸ ವಿಕಾಸಗೊಳ್ಳುವುದಾದರೂ ಹೇಗೆ

ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ
ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸ ವಿಕಾಸಗೊಳ್ಳುವುದಾದರೂ ಹೇಗೆ..? ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ ಕಳವಳ


ವೀರಣ್ಣ ಮಂಠಾಳಕರ್
ಬಸವಕಲ್ಯಾಣಃ ಜು,25ಃ ತಾಲೂಕಿನಾದ್ಯಂತ ಇರುವ ಸಕಾ೯ರಿ ಪ್ರಾಥಮಿಕ ಮತ್ತು ಪ್ರೌಢ 67 ಶಾಲೆಗಳಲ್ಲಿ ಗರಿಷ್ಠಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಒಂದೇ ಕೋಣೆಯಲ್ಲಿ ನೂರರಿಂದ ನೂರಿಪ್ಪತ್ತು ಮಕ್ಕಳು ಕುಳಿತುಕೊಂಡು ವಿದ್ಯಾಭ್ಯಾಸ ಮಾಡುತಿರುವುದು ಕಂಡು ಬರುತಿದೆ. ಇದರಿಂದ ಕುಂಠಿತಗೊಳ್ಳುತಿರುವ ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸ ವಿಕಾಸಗೊಳ್ಳುವುದಾದರೂ ಹೇಗೆ ಎಂದು ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ ವಾಗ್ದಾಳಿ ನಡೆಸಿದರು.

ಅವರು ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ, ಈ ಹಿಂದೆ ಪ್ರೌಢ ಶಿಕ್ಷಣ ಇಲಾಖೆಯ ಸಚಿವರಾಗಿ ಹಲುವು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಅವರಿಗೆ ಮಕ್ಕಳ ಭವಿಷ್ಯದ ಬಗ್ಗೆಯಾಗಲಿ, ಶೈಕ್ಷಣಿಕ ಅಭಿವ್ರದ್ಧಿ ಹಾಗೂ ಅವರ ಮೇಲೆ ವಿಶ್ವಾಸವನ್ನಿಟ್ಟು ಆರಿಸಿ ತಂದಿರುವ ಸಾವ೯ಜನಿಕರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ, ಜನರ ಕಣ್ಣಿಗೆ ಮಣ್ಣೆರಚಿ ಭ್ರಷ್ಟಾಚಾರ ಎಸಗುತಿರುವ ಅಧಿಕಾರಿಗಳನ್ನು ಬೆಂಬಲಿಸುತ್ತಾ ತಾಲೂಕಿನ ಅಭಿವ್ರದ್ಧಿ ಕಾಯ೯ಗಳಿಗೆ ಹಿನ್ನಡೆ ತರುತಿದ್ದಾರೆ ಎಂದು ಆರೋಪಿಸಿದರು.

ಸಕಾ೯ರದ ಆದೇಶದಂತೆ ಪ್ರಾಥಮಿಕ ಶಾಲೆಯ ಒಂದು ಕೋಣೆಯಲ್ಲಿ 40 ವಿದ್ಯಾಥಿ೯ಗಳು ಮತ್ತು ಪ್ರೌಢ ಶಾಲಾ ಕೋಣೆಗಳಲ್ಲಿ 60ರಿಂದ 70 ವಿದ್ಯಾಥಿ೯ಗಳಿರಬೇಕೆಂಬ ನಿಯಮಗಳಿದ್ದರೂ ನಿಯಮ ಬಾಹಿರವಾಗಿ ನೂರರಿಂದ ನೂರಿಪ್ಪತ್ತು ವಿದ್ಯಾಥಿ೯ಗಳು ಒಂದೇ ಕೋಣೆಯಲ್ಲಿ ಕುಳಿತುಕೊಳ್ಳುವಂಥ ಪರಿಸ್ಥಿತಿ ಶಾಲೆಗಳಲ್ಲಿ ಎದುರಾಗಿದೆ. ಆದರೂ ಇತ್ತ ಲಕ್ಷ ವಹಿಸದ ಶಾಸಕರು ಮಕ್ಕಳ ಭವಿಷಯವನ್ನು ಉಜ್ವಲಗೊಳಿಸುವುದರಲ್ಲಿ ಆಸಕ್ತಿ ಹೊಂದಿಲ್ಲ ಎಂಬುದು ಸ್ಪಷಟವಾಗಿ ಗೊತ್ತಾಗುತ್ತದೆ.

ಮಿತಿಮೀರಿದ ಮಕ್ಕಳನ್ನು ಬೋಧನೆ ಮಾಡುವ ಶಿಕ್ಷಕರು ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸ ನೀಡಲು ತಡಕಾಡುವಂಥ ವಾತಾವರಣ ಇಲ್ಲಿದೆ. ಆದ್ದರಿಂದ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಮಕ್ಕಳ ತಲೆಗೆ ಹತ್ತದೇ ಅರಳಬೇಕಾದ ಅವರ ಭವಿಷ್ಯವನ್ನು ಕುಂಠಿತಗೊಳ್ಳುತಿದೆ. ಇಂತಹ ಅನೇಕ ಕಡೆಗಳಲ್ಲಿ ಸಮಸ್ಯೆಗಳನ್ನು ಎದುರಿಸುತಿರುವ ಶಾಲೆಗಳಲ್ಲಿ ಶಿಕ್ಷಣ ಬಡವಾದರೆ ಮಕ್ಕಳ ಭವಿಷ್ಯದ ಗತಿಯೇನು ಎಂದು ಪ್ರಶ್ನಿಸಿದರು.

ಹಾಲಿ ಶಾಸಕರಾದ ಬಸವರಾಜ ಪಾಟೀಲ ಅಟ್ಟೂರ್ ಅವರ ಲಕ್ಷವನ್ನು ಅಭಿವ್ರದ್ಧಿಯತ್ತ ಕಾಣದೇ ಹಣದ ಬೆನ್ನತ್ತಿ ಹೊರಟಿದ್ದಾರೆ. ಹಣ ಆಸ್ತಿ ಸಂಪಾದನೆಯಲ್ಲಿ ಮೀಸಲಾಗಿಟ್ಟು ಸ್ವಾಥ೯ಕ್ಕಾಗಿ ಮಾತ್ರ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದಾರೆ. ಒಳ್ಳೆಯವರೆಂದು ಜನ ಆರಿಸಿ ತಂದಿರುವುದಕ್ಕೆ ಜನರ ವಿಶ್ವಾಸವನ್ನೇ ಕಳೆದುಕೊಳ್ಳುತಿರುವ ಇವರು ಈಗಾಗಲೆ 37 ತಿಂಗಳು ಅಧಿಕಾರ ನಡೆಸಿದ್ದಾರೆ. ಜನರ ಸಮಸ್ಯೆಗಳಿಗೆ ಎಷ್ಟರ ಮಟ್ಟಿಗೆ ಸ್ಪಂಧಿಸುತ್ತಾರೆಂಬುದಕ್ಕೆ ಇನ್ನೊಂದು ತಿಂಗಳು ಅವರಿಗೆ ಅವಕಾಶ ಕೊಟ್ಟು ನೋಡುತ್ತೇನೆ.

ನಾನು ಶಾಸಕನಾಗಿ 39 ತಿಂಗಳುಗಳಲ್ಲಿ ತಾಲೂಕಿನ ಗ್ರಾಮ ಮಟ್ಟದ ಜನತೆಯ ಸಮಸ್ಯೆಗಳಿಗೆ ಸ್ಪಂಧಿಸಿ, ಗ್ರಾಮಗಳಿಗೆ ಭೇಟಿಕೊಟ್ಟು ಪರಿಹಾರ ಒದಗಿಸಿದ್ದೇನೆ. ಅದೇ ರೀತಿ ಶಾಸಕ ಅಟ್ಟೂರ್ ಅವರು ಅಷ್ಟೇ ಸಮಯದಲ್ಲಿ ಎಷ್ಟು ಜನರ ಸಮಸ್ಯೆಗಳಿಗೆ ಸ್ಪಂಧಿಸಿದ್ದಾರೆ ಮತ್ತು ಅದೇಷ್ಟು ಗ್ರಾಮಗಳಿಗೆ ಭೇಟಿ ನೀಡಿದ್ದಾರೆಂಬುದು ನನ್ನ ಬಳಿ ಲೆಕ್ಕ ಇದೆ. ಅವರು ಮಾಡಿರುವ ಅಭಿವ್ರದ್ಧಿ ಕಾಯ೯ದ ತೂಕ ಮಾಡಿ ನೋಡುವಂಥ ಕಾಲ ಈಗ ಬಂದಿದೆ. ನಾನೇನು ಮಾಡಿದ್ದೇನೆ, ಅಟ್ಟೂರ್ ಅವರು ಏನು ಮಾಡಿದ್ದಾರೆ ಮತ್ತು ಮಾಜಿ ಶಾಸಕ ಎಂಜಿ.ಮುಳೆ ಏನು ಮಾಡಿದ್ದಾರೆಂಬುದಕ್ಕೆ ಸಮಗ್ರವಾದ ಚಚೆ೯ ನಡೆಸಲು ನಗರದ ಗಾಂಧಿ ಚೌಕ್ ನಲ್ಲಿ ಹೋರಾಟವನ್ನು ಬಸವಕಲ್ಯಾಣದಲ್ಲಿ ನಡೆಸುತ್ತೇವೆ.

ಇನ್ನು ಮುಂದೆ ಜನರ ಸಮಸ್ಯೆಗಳೇನು, ಯಾವ ಇಲಾಖೆಗಳಿಂದ ಯಾವ ಕೆಲಸಗಳು ಹೇಗೆ, ಯಾವಾಗ ಮಾಡಿಸಿಕೊಳ್ಳಬೇಕೆಂಬುದರ ಕುರಿತ ಜಾಗ್ರತಿಯನ್ನು ಮೂಡಿಸುವ ಕಾಯ೯ಕ್ರಮಗಳನ್ನು ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿದ್ದೇವೆ. ಹಳ್ಳಿ ಹಳ್ಳಿಗಳಿಗೆ ಹೋಗಿ ಕಾನೂನು ಅರಿವು ಜನಜಾಗ್ರತಿ ಮೂಡಿಸುವಂಥ ಕಾಯ೯ಕ್ರಮಗಳೊಂದಿಗೆ ನಿರಂತರ ಜನಸ್ಪಂಧನ ಕಾಯ೯ಕ್ರಮಗಳು ಹೇಗೆ ನಡೆಸಬೇಕೆಂಬು ನಾವು ಜೆಡಿಎಸ್ ಪಕ್ಷದ ನೇತ್ರತ್ವದಲ್ಲಿ ತೋರಿಸಿ ಕೊಡುತ್ತೇವೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ದಿಲೀಪಗೀರ್ ಕಿಟ್ಟಾ, ಮದನೆ ಉಪಸ್ಥಿತರಿದ್ದರು