ಶನಿವಾರ, ಮಾರ್ಚ್ 2, 2013

ಅಭಿವೖದ್ಧಿ ಚಿಂತನೆ ಉಳ್ಳವರಿಗೆ ಚುಮಾವಣೆಯಲ್ಲಿ ಗೆಲ್ಲಿಸಿಃ ಖೂಬಾ

ಮಾಜಿ ಶಾಸಕ, ಜೆಡಿಎಸ್ ರಾಜ್ಯ ಯುವ ಕಾಯ೯ದಶಿ೯ ಮಲ್ಲಿಕಾಜು೯ನ ಖೂಬಾ
ಬಸವಕಲ್ಯಾಣ, ಮಾ.1

ಪ್ರಸ್ತುತ ನಗರಸಭೆ ಚುನಾವಣೆಯಲ್ಲಿ ಸ್ಪಧಿ೯ಸುವ ಅಭ್ಯಥಿ೯ಗಳು ಜನಸಾಮಾನ್ಯರ ಕುಂದು ಕೊರತೆಗಳಿಗೆ ಸ್ಪಂಧಿಸುವ ಮನೋಭಾವ ಇರುವವರನ್ನು ಗೆಲ್ಲಿಸಬೇಕೆ ಹೊರತು ಸ್ವಾರ್ಥಕ್ಕಾಗಿ ರಾಜಕೀಯ ಪ್ರವೇಶಿಸುವರನ್ನು ದೂರವಿಡಬೇಕು ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು.

ನಗರದ ಖೂಬಾ ನಿವಾಸದಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಅವರು, ಸಧ್ಯದ ಚುನಾವಣೆ ಪ್ರಚಾರದ ನಿಮಿತ್ಯ ಮತದಾರರನ್ನು ಕೊಂಡುಕೊಳ್ಳುವ ಉದ್ದೇಶದಿಂದ  ಆಮೀಷಕೊಳಗಾಗಿಸುವ ಪ್ರಯತ್ನವನ್ನು ಮಾಡುತಿದ್ದಾರೆ ಎಂದು ಆರೋಪಿಸಿದರು.

ಜನರ ಭಾವನೆಗಳನ್ನು ಖರಿದಿಸುವ ನಿಟ್ಟಿನಲ್ಲಿ ರಾಜಕೀಯದಲ್ಲಿ ಹೇರಳವಾದ ದುಡ್ಡು ಖರ್ಚು ಮಾಡುವುದು ಸರಿಯಲ್ಲ. ದುಡ್ಡು ಕೊಟ್ಟವರನ್ನು ದೂರವಿರಿಸಿ ಯಾವುದೇ ಪಕ್ಷದ ಅಭ್ಯರ್ಥಿಯಾಗಿರಲಿ ಮತದಾರರು ಉತ್ತಮ ಅಭ್ಯರ್ಥಿಗಳನ್ನು ಗೆಲ್ಲಿಸಿ ತರಬೇಕು ಎಂದು ಕರೆ ನೀಡಿದರು.

ತಾಲ್ಲೂಕಿನ ಸಮೀಪದಲ್ಲೇ ಐದು ಕೆರೆಗಳಿದ್ದರೂ 22 ಕಿ.ಮೀ ಅಂತರದಲ್ಲಿನ ಕೋಂಗಳಿ ಬ್ಯಾರೇಜಿನಿಂದ ತಾಲೂಕಿಗೆ ನೀರು ತರುವ ಉದ್ದೇಶ ಹೊಂದಿದ್ದ ಮಾಜಿ ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಅವರು ತಮ್ಮ ಸ್ವಾರ್ಥಕ್ಕಾಗಿ ಇಂತಹ ಯೋಜನೆ ಹಾಕಿ ಕೊಂಡಿರುವುದು ಸರಿಯಲ್ಲ.

ಅಟ್ಟೂರ್ ಅವಧಿಯಲ್ಲಿ ನಿರ್ಗತಿಕರಿಗಾಗಿ ಮಂಜೂರಾದ ಆಶ್ರಯ ಮನೆಗಳು ಬಡವರ ಪಾಲಾಗದೇ ಶ್ರೀಮಂತರಿಗೆ ಶ್ರೀಮಂತರ ಪಾಲಾಗಿರುವುದು ನೋಡಿದರೆ ಅವರಲ್ಲಿರುವ ಸಾಮಾಜಿಕ ಚಿಂತನೆ ಎಂತಹದ್ದೆಂಬುದು ಗೊತ್ತಾಗುತ್ತದೆ ಎಂದು ದೂರಿದರು.

ಇನ್ನೋವ೯ ಮಾಜಿ ಶಾಸಕ ಎಂ.ಜಿ.ಮೂಳೆ ಅವರ ಕೈಯಲ್ಲಿರುವ ಗಡಿಯಾರದಲ್ಲಿ ಮಾಜಿ ಸಚಿವ ಹಾಗೂ ಕೆಜೆಪಿ ಮುಖಂಡ ಗುರುಪಾದಪ್ಪ ನಾಗಮಾರಪಳ್ಳಿ ಅವರ ಭಾವಚಿತ್ರವಿದ್ದು, ಮುಳೆ ಅವರ ಕಾರಿನ ಹಿಂದೆ ಬಿಎಸ್್ಆರ್್ ಶ್ರೀರಾಮುಲು ಅವರ ಭಾವಚಿತ್ರ ಇರುವುದರಿಂದ ಇವರು ಯಾವ ಪಕ್ಷದಲ್ಲಿದ್ದಾರೆ ಎಂಬುದು ಜನರಿಗೆ ತಿಳಿಯದಾಗಿದೆ ಎಂದು ವ್ಯಂಗ್ಯವಾಡಿದರು.

ಚುನಾವಣೆಗಳು ಸಮೀಪಿಸುತಿದ್ದಂತೆ ಸ್ಪರ್ಧಿಸಲು ನಾ ಮುಂದು ತಾ ಮುಂದು ಎಂದು ಎಲ್ಲಿಂದಲೋ ಧಾವಿಸಿ ಬರುತ್ತಿರುವ ರಾಜಕೀಯ ನಾಯಕರುಗಳು ಇಲ್ಲಿನ ಸ್ಥಳೀಯ ಜನರ ಸಮ್ಸಯೆಗಳೇನು ಎಂಬುದೇ ಗೊತ್ತಿರದೇ ಸ್ಥಳೀಯವಾಗಿದ್ದವರನ್ನು ಅವಕಾಶ ವಂಚಿತರಾಗಿಸುತಿದ್ದಾರೆ. ಗೊತ್ತಿಲ್ಲದ ಓಣಿ, ಜನರ ಸಮಸ್ಯೆಗಳನ್ನು ಇವರು ಹೇಗೆ ನಿಭಾಯಿಸುತ್ತಾರೆ ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಯಾವುದೇ ಪಕ್ಷದ ಅಭ್ಯರ್ಥಿಗಳಲ್ಲಿ ಅಭಿವೖದ್ಧಿ ಚಿಂತನೆಗಳಿದ್ದಲ್ಲಿ ಮಾತ್ರ ಮತದಾರರು ಗೆಲ್ಲಿಸಿ ತರಬೇಕು. ಸ್ವಾರ್ಥಕ್ಕಾಗಿ ಚುನಾವಣೆ ಸ್ಪಧಿ೯ಸುತ್ತಿರುವ  ರಾಜಕೀಯ ಪಕ್ಷದವರನ್ನು ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಮತಬಾಂಧವರಿಗೆ ಕರೆ ನೀಡಿದರು.