ಬುಧವಾರ, ಏಪ್ರಿಲ್ 6, 2011

ಸಾಹಿತ್ಯ, ಸಮಾಜ, ಸಂಸ್ಕ್ರತಿ, ಬಿಂಬಿಸುವ ವೀರ ಸಂಕಲ್ಪ

ಸಾಹಿತ್ಯ, ಸಮಾಜ, ಸಂಸ್ಕ್ರತಿ, ಬಿಂಬಿಸುವ ವೀರ ಸಂಕಲ್ಪ



ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ಸರಸ್ವತಿ ಪ್ರಾಥಮಿಕ ಶಾಲಾ ವಾಷಿ೯ಕೋತ್ಸವದಲ್ಲಿ ನ್ರತ್ಯ ಪ್ರದಶ೯ನ ನಡೆಯಿತು.


ಬಸವಕಲ್ಯಾಣಃ ಮಕ್ಕಳಲ್ಲಿ ಬೌದ್ಧಿಕ ವಿಕಾಸದೂಂದಿಗೆ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಪ್ರೇರೇಪಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕಾಗುತ್ತದೆ. ಮಕ್ಕಳ ಸವ೯ತೋಮುಖ ಬೆಳವಣಿಗೆಯ ಜವಾಬ್ದಾರಿ ಹೂತ್ತುಕೊಳ್ಳುವ ಶಿಕ್ಷಕರು ಅರಳು ಪ್ರತಿಭೆಗಳನ್ನು ವೇದಿಕೆಗೆ ತರುವುದರಿಂದ ಶಾಲೆಗಳ ಶ್ರೇಯಸ್ಸನ್ನು ಹೆಚ್ಚುತ್ತದೆ ಎಂದು ವಿರಕ್ತ ಮಠದ ಗುಹೇಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಮಂಠಾಳ ಗ್ರಾಮದಲ್ಲಿ ಸೋಮವಾರದಂದು ಜರುಗಿದ ಸರಸ್ವತಿ ಪ್ರಾಥಮಿಕ ಶಾಲಾ ವಾಷಿ೯ಕೋತ್ಸವ ಸಮಾರಂಭದಲ್ಲಿ ನಡೆದ ಮಕ್ಕಳ ಸಾಂಸ್ಕ್ರತಿಕ ಕಾಯ೯ಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿ, ಅತ್ಯಂತ ಹಗುರ ಮನಸ್ಸುಳ್ಳ ಮಕ್ಕಳಲ್ಲಿ ಉನ್ನತ ಮಟ್ಟದ ಗುರಿಯನ್ನು ತಲುಪುವ ಆಕಾಂಕ್ಷೆಯನ್ನು ಹೂಂದಿರುತ್ತಾರೆ. ಅಂತಹ ಬಾಲ ಪ್ರತಿಭೆಗಳನ್ನು ಪೋಷಿಸಿ ಬೆಳೆಸುವುದು ಕೂಡ ಎಲ್ಲರ ಅಧ್ಯ ಕತ೯ವ್ಯವಾಗಿದೆ ಎಂದರು.

ಇದೇ ಸಂದಭ೯ದಲ್ಲಿ ಅತಿಥಿಯಾಗಿ ಶಾಂತಪ್ಪ ಶಟಗಾರ ಮಾತನಾಡಿ, ಗ್ರಾಮೀಣ ಪ್ರತಿಭೆಗಳು ಚೈತನ್ಯದಿಂದ ಕೂಡಿರುತ್ತಾರೆ. ಆ ಚೈತನ್ಯವನ್ನು ಅಡಗಿ ಹೋಗದಂತೆ ಬೆಳೆಸುವ ಕೆಲಸ ಮಾಡಬೇಕು ಎಂದರು.
ಶಾಲಾ ಮುಖ್ಯಸ್ಥೆ ಮಂಗಲಾ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಶಿಕ್ಷಕರನ್ನು ನಂಬಿ ಶಾಲೆಗೆ ಬರುವ ಮಕ್ಕಳಲ್ಲಿ ಕೇವಲ ನಾವು ಶೈಕ್ಷಣಿಕವಾಗಿ ಗುರುತಿಸದೆ, ಅವರಲ್ಲಿರುವ ಕಲಾ ಪ್ರಕಾರಗಳು ಗುರುತಿಸಬೇಕಾಗುತ್ತದೆ. ಪಠ್ಯದೊಂದಿಗೆ ಪಠ್ಯೇತರ ವಿಷಯಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಮಕ್ಕಳ ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ ಎಂದರು.
ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಸುನೀತಾ ಸ್ವಾಮಿ ಹಾಗೂ ತಾ.ಪಂ. ಸದಸ್ಯ ನಾಗೇಶರಾಮ ಮಾಳಿ ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸ ಬೆಳವಣಿಗೆ ಕುರಿತು ಮಾತನಾಡಿದರು. ಗ್ರಾಮೀಣ ಅಭಿವ್ರದ್ದಿ ಯುವಕ ಸಂಘದ ಅಧ್ಯಕ್ಷ ರಜಾಕ ಶೇಠ ಉಪಸ್ಥಿತರಿದ್ದರು. ನಿಮ೯ಲಾ ಕೊರಳೆ ನಿರೂಪಿಸಿದರೆ, ಮಂದಾಕಿನಿ ಸ್ವಾಗತಿಸಿದರು. ಶಂಕರ ಪಾಟೀಲ ವಂದಿಸಿದರು.