ಬುಧವಾರ, ಏಪ್ರಿಲ್ 17, 2013

ಸಮಾನತೆ ತರಲು ಪ್ರಯತ್ನಿಸಿದ ಏಕೈಕ ನಾಡು ಕಲ್ಯಾಣವಾಗಿದೆ:ಬಿ.ನಾರಾಯಣ

           ಕಾಂಗ್ರೆಸ್್ ಪಕ್ಷದ ಅಭ್ಯಥಿ೯ ಹಾಗೂ ಹಿರಿಯ
                   ಮುಖಂಡ ಬಿ.ನಾರಾಯಣ ಅ


ಸಾಮಾಜಿಕ ನ್ಯಾಯಕ್ಕಾಗಿ 12ನೇ ಶತಮಾನದಲ್ಲಿ ನಡೆದ ಶರಣರ ಕ್ರಾಂತಿ ಭೂಮಿ ಬಸವಕಲ್ಯಾಣ
ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪಧಿ೯ಸಲು ಸಿಕ್ಕಿರುವ ಅವಕಾಶ ಅದು ನನ್ನ
ಸೌಭಾಗ್ಯವಾಗಿದೆ. ಜನರ ಸೇವೆಗಾಗಿ ನಾನು ಸದಾ ಕಂಕಣಬದ್ಧನಾಗಿದ್ದೇನೆ ಎಂದು
ಕಾಂಗ್ರೆಸ್್ ಅಭ್ಯಥಿ೯ ಬಿ.ನಾರಾಯಣ ಅಭಿಪ್ರಾಯಪಟ್ಟಿದ್ದಾರೆ.

ಬುಧುವಾರ ಅವರು ಕಾಂಗ್ರೆಸ್್ ಪಕ್ಷದಿಂದ ನಾಮ ಪತ್ರ ಸಲ್ಲಿಸಿದ ಬಳಿಕ
ಮಾತನಾಡಿ, ವಿಶ್ವಗುರು ಬಸವಣ್ಣನವರು ಸವ೯ಧಮ೯ ಸಮಾನತೆಗಾಗಿ
ಹೋರಾಡಿದ ಚಿತ್ರಣ ನನ್ನ ಕಣ್ಣೆದುರಿಗಿದೆ. ಬಡವ, ದಲಿತರ, ಶೋಷಿತರ, ಹಿಂದುಳಿದವರ
ಏಳ್ಗೆ ನನ್ನ ಗುರಿಯಾಗಿದೆ ಎಂದರು.

ಕೇಂದ್ರ ಸಕಾ೯ರದ ಸಾಧನೆ ಜನಸಾಮಾನ್ಯರು ಅರಿತುಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಜನರ
ಆಶೋತ್ತರಗಳಿಗೆ ಸ್ಪಂಧಿಸುವ ಮನೋಭಾವ ಹೊಂದಿರುವ ನನಗೆ ಮತದಾರರು ಒಲಿದರೆ ಬಸವಕಲ್ಯಾಣ
ತಾಲೂಕಿನ ಸಮಗ್ರ ಅಭಿವೖದ್ಧಿ ಮತ್ತು ಸವ೯ಧಮ೯ದವರನ್ನು ಸಮಾನತೆಯಿಂದ ಕಾಣುವುದೇ ನನ್ನ
ಧ್ಯೇಯವಾಗಿದೆ ಎಂದು ಸ್ಪಷ್ಟಪಡಿಸಿದರು.

ಬಸವಣ್ಣನವರು ಅಂತಜಾ೯ತಿ ವಿವಾಹ, ಸಮಾನತೆ ತರಲು ಪ್ರಯತ್ನಿಸಿದ ಏಕೈಕ ನಾಡು
ಕಲ್ಯಾಣವಾಗಿದೆ. ಅಂತಹ ನಾಡಿನಿಂದ ಸ್ಪಧಿ೯ಸುವುದು ಪುಣ್ಯವೆಂದು ಭಾವಿಸಿದ್ದೇನೆ.
ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರ ಬದುಕು ಸ್ವಾಭಿಮಾನದಿಂದ ಬದುಕುವಂಥ ವಾತಾವರಣ
ನಿಮಾ೯ಣಗೊಳ್ಳಬೇಕಾದ್ದು ಅವಶ್ಯವಾಗಿದೆ ಎಂದು ಅಭಿಮತಪಟ್ಟರು.

ಸವ೯ರಿಗೂ ಸಮಪಾಲು ಸಮಬಾಳು ನೀಡುವಂಥ ಸಿದ್ಧಾಂತ ಬಸವಣ್ಣನವರ ನಾಡಿನಿಂದ ಆಗಬೇಕು. ಅಂತಹ
ಯೋಚನೆಗಳು ಜಾರಿಗೆ ತರುವಂಥ ಉದ್ದೇಶ ಎಲ್ಲರದ್ದಾಗಬೇಕು. ಸ್ವಾತಂತ್ರ್ಯ ಸಿಕ್ಕು 65
ವಷ೯ ಕಳೆದರೂ ಯಾರೂ ಕೂಡ ಶೋಷಿತರ ಪರವಾಗಿ ಹೋರಾಟ ಮಾಡಲು ಮುಂದಾಗುತ್ತಿಲ್ಲ ಎಂದು
ವಿಷಾದಿಸಿದರು.

ಹಿಂದುಳಿದ ಜನರ ಶ್ರೇಯೋಭಿವೖದ್ಧಿ ನನ್ನ ಗುರಿಯಾಗಿದೆ. ಸಮಾಜದಲ್ಲಿ ಸಾಮರಸ್ಯದಿಂದ
ಬಾಳಿ, ರಾಜಕೀಯದಲ್ಲಿ ಸಾಮಾಜಿಕ ಚಿಂತನೆ ನಡೆಸುತ್ತಾ ಪ್ರಾಮಾಣಿಕವಾಗಿ ಜನರ ನೋವು,
ಸಮಸ್ಯೆಗಳಿಗೆ ಸ್ಪಂಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗುರುವಾರ, ಮಾರ್ಚ್ 21, 2013

ಜಾತಿ, ಮತ, ಧಮ೯ ಮೀರಿ ಆಚರಿಸುವ ಹಬ್ಬ : ಮೈ ಮನಕ್ಕೆ ರಂಗೋಲಿ ಹಾಕುವ ಹೋಳಿಯಿದು

  21,302013 ರಂದು ಕನ್ನಡಪ್ರಭದಲ್ಲಿ ಪ್ರಕಟವಾದ ವರದಿ ಲೇಖನದ ಸ್ಕ್ಯಾನ್
 ವೀರಣ್ಣ ಮಂಠಾಳಕರ್
ಬಸವಕಲ್ಯಾಣ, ಮಾ.21,ಎಲ್ಲರೂ ಕುಣಿದು ಕುಪ್ಪಳಿಸುವ ಬಣ್ಣದೋಕುಳಿಯ ಹಬ್ಬ ಹೋಳಿ ರಂಗಿನಾಟದಲ್ಲಿ ವಯಸ್ಸಿನ ಭೇದಭಾವವಿಲ್ಲದೇ ಸಂಭ್ರಮಿಸುವ ಕ್ಷಣ ಇನ್ನೇನು ಬಂದೇ ಬಿಟ್ಟಿತ್ತು. ಇದೇ ಮಾ.26ರಂದು ಹಿಂದೂಗಳ ಹಬ್ಬವೆಂದೇ ಆಚರಿಸಲ್ಪಡುವ ಬಣ್ಣದೋಕುಳಿಯ ಹೋಳಿ ಹಬ್ಬ ಉತ್ತರ ಭಾರತ ಸೇರಿದಂತೆ ದೇಶದ ವಿವಿಧೆಡೆ ಜಾತಿ-ಮತ, ಧರ್ಮ ಮೀರಿ ಆಚರಿಸುವ ಹೋಳಿ ಹಬ್ಬವಾಗಿದೆ.

ಇತ್ತೀಚೆಗೆ ಕಾಲ ಬದಲಾಗುತ್ತಿದ್ದಂತೆ, ಮತ್ತು ಪ್ರತಿ ಪರ್ವವೂ ಪರಿವರ್ತನೆ ಆಗುತ್ತಿರುವ ಸಂದಭ೯ಗಳಲ್ಲಿ ಹೋಳಿ ಹಬ್ಬ ಕೂಡ ರಂಗು ರಂಗಿನಾಟವಾಗಿ ಮಾರ್ಪಟ್ಟು, ದಕ್ಷಿಣ ಭಾರತೀಯರನ್ನೂ ಸೆಳೆಯತೊಡಗಿದೆ. ಓಕುಳಿಯಾಡುವ ಮೋಜಿಗಾಗಿ ಮತ್ತು ಅದೊಂದು ರೀತಿಯ ಫ್ಯಾಶನ್್ ಆಗಿ ಈ ಫಾಲ್ಗುಣದ ಶುಕ್ಲ ಪಕ್ಷದ ಹುಣ್ಣಿಮೆಯಂದು ಹೇಳಲಾಗುತ್ತದೆ.

ಭಾರತೀಯರ ಹಬ್ಬವಾಗಿ ಟಿವಿ, ಸಿನಿಮಾಗಳು ಕೂಡ ಹೋಳಿಯನ್ನು ಮೋಜಿನ ಹಬ್ಬವೆಂದು ಪ್ರತಿಬಿಂಬಿಸುತ್ತಾ ಬಂದಿವೆ. ಇದರಿಂದ ಜನಮನದಲ್ಲಿ ಅಚ್ಚಳಿಯದೇ ಉಳಿದ ಹೋಳಿ ಹಬ್ಬದಾಚರಣೆ ನೆಪವೊಡ್ಡಿ, ಪಿಚಕಾರಿ ಮೂಲಕ ರಂಗು ಎರಚುವಿಕೆ, ಕೈಮೈಗಳಿಗೆ ಬಣ್ಣ ಮೆತ್ತುವುದು. ಅಟ್ಟಾಡಿಸಿಕೊಂಡು ಹೋಗಿ ಬಣ್ಣ ಹಚ್ಚಿ ಬಿಡುವುದೆಂದರೆ ಒಂಥರಾ ಖುಷಿಯಾಗಿರುತ್ತದೆ.

ಪ್ರತಿಯೊಂದು ಹಬ್ಬಗಳಿಗೂ ಪೌರಾಣಿಕ ಹಿನ್ನೆಲೆ ಇರುವಂತೆ ಹೋಳಿ ಕೂಡ ಹಿರಣ್ಯಕಶ್ಯಪು ಮತ್ತು ಪುತ್ರ ಪ್ರಹ್ಲಾದನ ನಡುವಿನ ಕಥೆಯೊಂದು ಸಾರುತ್ತದೆ. ಇದು ಶೈವ-ವೈಷ್ಣವ ಹೊಯ್ದಾಟದ ತಿರುಳನ್ನು ಹೊಂದಿದ್ದು, ಆ ಕಾರಣಕ್ಕಾಗಿ ಹೋಳಿ ಪ್ರಮುಖವಾಗಿ ಉತ್ತರ ಭಾರತದಲ್ಲಿ ಅದ್ಧೂರಿಯಾಗಿ ಅಚರಿಸುತ್ತಾರೆ.

ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಹೋಳಿ ಮೀನುಗಾರ (ಖಾರ್ವಿ) ಹಾಗೂ ಬುಡಕಟ್ಟಿನ ಕುಡುಬಿ ಜನಾಂಗಕ್ಕೆ ಮಾತ್ರ ಸೀಮಿತವಾಗಿದ್ದ ಹಬ್ಬ ಇತ್ತೀಚಿನ ಕೆಲ ವಷ೯ಗಳಲ್ಲಿ ಬಣ್ಣದೋಕುಳಿ ಎರಚುವಿಕೆ ಹೆಚ್ಚಿನ ಶಾಲಾ-ಕಾಲೇಜುಗಳಲ್ಲಿ ಮಹತ್ವ ಪಡೆದಿದೆ. ಗ್ರಾಮಾಂತರ ಹಾಗೂ ನಗರ ಪ್ರದೇಶಗಳ ಜನರ ವಿಶಿಷ್ಟ ಹಬ್ಬವಾಗಿ ಸಹ ರೂಪುಗೊಂಡಿದೆ.

ಏನೆಲ್ಲ ಮನರಂಜನೆ ನೀಡುವ ಹೋಳಿ ಹಬ್ಬದ ಹಿಂದೆ ಒಂದೆರಡು ಪೌರಾಣಿಕ ಕಥೆಗಳೂ ಇವೆ. ಅದರಲ್ಲಿ ಪ್ರಮುಖವಾದದ್ದು ಪುರಾಣದಲ್ಲಿ ಉಲ್ಲೇಖವಿರುವ ಕಾಮ ದಹನ. ತಾರಕಾಸುರನೆಂಬ ರಾಕ್ಷಸ ರಾಜನ ಉಪಟಳ ತಾಳದೆ, ಬ್ರಹ್ಮನ ವರಬಲದ ಸೊಕ್ಕಿನಿಂದ ಲೋಕದಲ್ಲಿ ಆತನಿಂದಾಗಿ ಅನ್ಯಾಯ ಹೆಚ್ಚಾಗಿತೆನ್ನಲಾಗುತ್ತದೆ.

ಆದ್ದರಿಂದ ಅವನ ಸಂಹಾರಕ್ಕೆ ದೇವತೆಗಳು ಉಪಾಯ ಹೂಡಿ, ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರಬಲವೇ ಆತನ ಮದಕ್ಕೆ ಕಾರಣ. ಆದರೆ ಶಿವನು ಆ ಸಂದರ್ಭ ಭೋಗಸಮಾಧಿಯಲ್ಲಿದ್ದ ಕಾರಣ, ಪಾರ್ವತಿಯನ್ನು ಕೂಡುವಂತಿರಲಿಲ್ಲ. ದೇವತೆಗಳು ಕಾಮ (ಮನ್ಮಥ)ನ ಮೊರೆ ಹೋಗುವ ಪುರಾಣ ಕಥೆ ಮುಂದೊರೆಯುತ್ತದೆ.

ಲೋಕಕಲ್ಯಾಣವೆಂಬ ಅತಿಶಯದಿಂದ ಪರೋಪಕಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನನ್ನು ಬಡಿದೆಬ್ಬಿಸಿ, ತಪೋಭಂಗ ಮಾಡುತ್ತಾನೆ. ಕೆರಳಿ ಮೂರನೇ ಕಣ್ಣು ತೆರೆದ ಈಶ್ವರನ ಕ್ರೋಧಾಗ್ನಿಗೆ ಕಾಮನು ಸುಟ್ಟು ಭಸ್ಮವಾಗುತ್ತಾನೆ ಎಂಬುದು ಪ್ರತೀತಿ ಇದೆ.

ಕಾಮನರಸಿ ರತಿದೇವಿಯು ಪರಿಪರಿಯಾಗಿ ಶಿವನಲ್ಲಿ ಪತಿಭಿಕ್ಷೆ ಯಾಚಿಸಲು, ಕಾಮನು ಅನಂಗನಾಗಿಯೇ ಇರುತ್ತಾನೆ, ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ. ಶಿವನು ರತಿದೇವಿಗೆ ಅಭಯ ನೀಡಿದನೆಂಬುದು ಪುರಾಣದಲ್ಲಿ ಹೇಳುವ ಕಥನವಾಗಿದೆ.

ನವನೀತಚೋರ ಶ್ರೀಕೃಷ್ಣನು ಗೋಪಿಕೆಯರಿಗೆ ಪಿಚಕಾರಿ ಮೂಲಕ ಓಕುಳಿ ಹಾರಿಸುತ್ತಾ, ರಂಗು ರಂಗಾಗಿಸುತ್ತಿದ್ದ ಮತ್ತು ಬೇಕೆಂದೇ ಆತನ ರಂಗಿನೆರಚಾಟಕ್ಕೆ ತುತ್ತಾಗಲು ಹವಣಿಸುತ್ತಿದ್ದ ಗೋಪಿಕೆಯರ ದೃಶ್ಯಗಳು ಕಣ್ಮುಂದೆ ಬಂದು ಹೋಗುವ ನೆನಪು ಸುಳಿದು ಹೋಗುವಂಥದ್ದು..

ಹೋಳಿ ನೆಪದಲ್ಲಿ ಮೋಜು, ಮಜಾ ಮಾಡುವುದೆಂದು ಬಹುತೇಕರು ಭಾವಿಸಿದ್ದಾರೆ. ನಿಜಾಥ೯ದಲ್ಲಿ ಹೋಳಿ ಹಬ್ಬದ ಆಚರಣೆ ಐತಿಹಾಸಿಕ ಎನ್ನಬಹುದು. ಖಾರ್ವಿ ಜನಾಂಗ ಹೋಳಿ ಹಬ್ಬ ವೈಶಿಷ್ಟ್ಯವಾಗಿ ಆಚರಿಸುವಂತೆ ಕುಡುಬಿ ಜಾತಿಯವರು ಕೂಡ ವಿಶಿಷ್ಟ ಜಾನಪದ ಹಾಡು, ಸಾಂಪ್ರದಾಯಿಕ ಉಡುಗೆ-ತೊಡುಗೆ, ನರ್ತನದ ಮೂಲಕ ಆಚರಿಸುತ್ತಾರೆ.

ಉತ್ತರ ಕರ್ನಾಟಕದಲ್ಲಿ ಕುರುಬ ಜನಾಂಗವೂ ಕೂಡ ಕೊರಳಿಗೆ ಡೋಲು ಕಟ್ಟಿಕೊಂಡು ಹೋಳಿಯ ದಿನದಂದು ತಮ್ಮ ಇಷ್ಟದ ದೈವ ಬೀರಲಿಂಗೇಶ್ವರ ದೇವರನ್ನು ಆರಾಧಿಸುತ್ತಾ, ಡೊಳ್ಳು ಕುಣಿತ ವಿಶಿಷ್ಟವಾಗಿರುತ್ತದೆ. ಆದರೆ ಈ ಪರಂಪರೆ ಇತ್ತೀಚಿಗೆ ಮರೀಚಿಕೆಯಾಗಿದೆ.

ಕುರುಬರು ಹೋಳಿಯಂದು ಬೀರೇಶ್ವರನನ್ನು ಸ್ತುತಿಸುತ್ತಾ ಡೊಳ್ಳು ಕುಣಿತದೊಂದಿಗೆ ಆಕರ್ಷಕ ಜನಪದ ನರ್ತನ ಪ್ರದಶಿ೯ಸುವ ಆಸಕ್ತಿದಾಯಕ ಹಬ್ಬ ಇದಾಗಿದೆ. 12ಜನರ ತಂಡದೊಂದಿಗೆ ತಾಳ, ತಪ್ಪಾಡಿ, ಡೋಲು,ಕೊಳಲಿನ ಸುಶ್ರಾವ್ಯ ಸಂಗೀತದೊಂದಿಗೆ ಹೋಳಿಯ ನರ್ತನ ಸಾಗುತ್ತದೆ.

ಇದರಲ್ಲಿ ಡೊಳ್ಳು ಹಾಡು ಮತ್ತು ಡೋಲು ಹಾಡು ಎಂಬ ಎರಡು ವಿಧಗಳಲ್ಲಿ ನರ್ತನ ನಡೆಯುತ್ತದೆ. ಕೈಪಟ್ಟಿನೊಂದಿಗೆ ಡೋಲು ಬಾರಿಸುವ ಮೂಲಕ ಹಾಡುತ್ತ ನರ್ತಿಸುವುದು ಪ್ರಮುಖವಾದ ಅಂಶ ಕೂಡ. ಈ ಸಂದರ್ಭದಲ್ಲಿ ಹಾಲುಮಾತ ಪುರಾಣವನ್ನು ಕೂಡ ಹಾಡುತ್ತ ನರ್ತಿಸುವುದು ಕುರುಬ ಜನಾಂಗದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಇನ್ನುಳಿದಂತೆ ಬೀದರ್ ,ಗುಲ್ಬರ್ಗಾ, ರಾಯಚೂರು, ಬಳ್ಳಾರಿ, ಮುಂಬೈ, ಹೈದರಾಬಾದ ಕನಾ೯ಟಕದಲ್ಲಿ ಹೋಳಿಯನ್ನು ಹಿಂದೂ-ಮುಸ್ಲಿಮ್್ ಎನ್ನುವ ಬೇಧವಿಲ್ಲದೆ ಹೋಳಿ ಆಚರಿಸಲ್ಪಡುತ್ತದೆ. ಧಾರ್ಮಿಕ ಆಚರಣೆಯ ಹಿನ್ನೆಲೆಯಲ್ಲಿ ನಡೆಯುವ ಹೋಳಿಯ ಬಣ್ಣದೋಕುಳಿ ಎರಚುವಿಕೆ ಇಂದು ಕೇವಲ ಸಂಭ್ರಮವಾಗಿ ಉಳಿದಿಲ್ಲ.

ಹೋಳಿ ಹಬ್ಬ ನೆಪದ ಹಿಂದೆ ವಿಕೃತ ಮನಸ್ಸುಗಳು ಕೂಡ ಸೇರಿಕೊಂಡಿರುತ್ತವೆ. ಇದರಿಂದಾಗಿ ಅಪಾಯವೂ ಹೆಚ್ಚಿದೆ. ಬಣ್ಣಕ್ಕೆ ವಿವಿಧ ರಾಸಾಯನಿಕ ಸೇರಿಸುವುದು ಇಲ್ಲವೇ ದುರುದ್ದೇಶದಿಂದ ಆಸಿಡ್‌್ನಂತಹ ದ್ರವ್ಯ ಸೇರಿಸಿ ಮುಖಕ್ಕೆ ಎರಚಿದ ಘಟನೆ ಸಾಕಷ್ಟು ಬಾರಿ ಎಲ್ಲಡೆ ವರದಿಯಾಗಿರುತ್ತವೆ.

ಆ ಒಂದು ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಟ್ಟೆಚ್ಚರ ವಹಿಸಿ ಜಾತ್ಯತೀತವಾಗಿ ನಡೆಯುವ ಬಣ್ಣದೋಕುಳಿಯ ನಡುವೆ ರಕ್ತದೋಕುಳಿ ಹರಿಯದಂತೆ ನೋಡಿಕೊಳ್ಳಬೇಕಾಗಿದೆ. ಶಾಲಾ-ಕಾಲೇಜುಗಳಲ್ಲಿ ಮೋಜಿಗಾಗಿ ಮುಖಕ್ಕೆ ಬಣ್ಣ, ಸುನಾರಿಯಂತಹ ಪುಡಿ,ಪುಡಿಗಳನ್ನು ಹಚ್ಚಲಾಗುತ್ತದೆ. ಆದರೂ ವಿಕೖತ ಮನಸ್ಸಿನ ಅಪಾಯ ತಡೆಗಟ್ಟಲು ಎಚ್ಚರ ಅಗತ್ಯವಾಗಿದೆ.


 ಕನ್ನಡಪ್ರಭ ಕೖಪೆ.....
ರಂಗಿನೆರಚಾಟದಲ್ಲಿ ತೊಡಗಿರುವ ಚಿಣ್ಣರು

ಸೋಮವಾರ, ಮಾರ್ಚ್ 18, 2013

ಯುವ ಉತ್ಸಾಹಿ ಸಕ್ರೀಯ ರಾಜಕಾರಣಿ ಸೂರ್ಯಕಾಂತ ಚಿಲ್ಲಾಬಟ್ಟೆ


                                                (ರಾಜಕೀಯ ಪ್ರತಿಭಾನ್ವೇಷಣೆ)

ಸೂರ್ಯಕಾಂತ ಚಿಲ್ಲಾಬಟ್ಟೆ
ಲೇಖಕರು: ವಿ.ಎಚ್.ವೀರಣ್ಣ ಮಂಠಾಳಕರ್
ಮೂಲ ವಕೀಲ ವೃತ್ತಿಯನ್ನು ಪ್ರಾರಂಭಿಸಿ ರಾಜಕೀಯ ಕ್ಷೇತ್ರದೆಡೆ ವಿಶೇಷ ಆಸಕ್ತಿ ತೋರಿರುವ ಸೂರ್ಯಕಾಂತ ಚಿಲ್ಲಾಬಟ್ಟೆ ಅವರು ಯುವ ಉತ್ಸಾಹಿಯಾಗಿ ಸಣ್ಣ ವಯಸ್ಸಿನಲ್ಲಿಯೇ ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿ ಪಕ್ಷದಿಂದ ಏಕೈಕ ನಗರ ಸಭೆ ಸದಸ್ಯರಾಗಿ ಆಯ್ಕೆಗೊಂಡಿರುವ ಇವರು ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಲೆ ಅನೇಕ ರಾಜಕೀಯ ಮುಖಂಡರೊಂದಿಗೆ ಗುರುತಿಸಿಕೊಂಡಿರುವ ಚಿಲ್ಲಾಬಟ್ಟೆ ಚಿಲ್ಲರೆ ರಾಜಕೀಯವನ್ನು ಮಾಡದೇ ಜನಪರವಾದ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತಿದ್ದಾರೆ.

ಈ ಎಲ್ಲಾ ಹಿನ್ನೆಲೆಯ ಅನುಭವದಿಂದ ತಮ್ಮನ್ನು ತಾವು ಸಕ್ರೀಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ನಗರ ಸಭೆಯ ಸದಸ್ಯರಾಗಿಯೂ ಕಾರ್ಯಪ್ರವೃತ್ತರಾಗಿದ್ದಾರೆ. ಭಾಜಪ ನಗರ ಘಟಕದ ಅಧ್ಯಕ್ಷರಾಗಿ ಮತ್ತೆ ಸಲ್ಲಿಸುತ್ತಿರುವ ಇವರ ಸೇವೆ ಅನನ್ಯವಾದದ್ದು. ಸಂಘಟನಾಪರ ಚತುರರಾಗಿ ಬಿಎಎಲ್‍ಎಲ್‍ಬಿ ಪದವಿಧರರಾಗಿ, ರಾಜಕೀಯ ಪ್ರವೇಶಕ್ಕಿಂತ ಮುಂಚೆ ವಕೀಲರಾಗಿ ಸೇವೆ ಸಲ್ಲಿಸುತಿದ್ದಾರೆ. ನಂತರದ ದಿನಗಳಲ್ಲಿ ರಾಜಕೀಯವೆಂಬುದು ಇವರ ವ್ಯಕ್ತಿತ್ವಗನುಗುಣವಾಗಿ ಒಲಿದು ಬಂದಿದೆ.

ಬಸವಕಲ್ಯಾಣ ತಾಲೂಕಿನ ಬೇಲೂರು ಎಂಬ ಗ್ರಾಮದಿಂದ ಬಂದಿರುವ ಚಿಲ್ಲಾಬಟ್ಟೆಯವರು ಶಿಕ್ಷಣ ಸಂಸ್ಥೆಗಳ ಹಲವು ಬಡ ಮಕ್ಕಳಿಗೆ ಉಚಿತವಾದ ಬಟ್ಟೆ, ವಿದ್ಯಾಭ್ಯಾಸ ಪೂರೈಕೆ ಮಾಡುವುದೆಂದರೆ ಎಲ್ಲಿಲ್ಲಸ ಖುಷಿಯನ್ನನುಭವಿಸುತ್ತಾರೆ. ಜನಪರ ಸೇವೆಗೆ ಎಲ್ಲಿದ್ದರೂ ಧಾವಿಸಿ ಬರುವ ಸರಳ ಸ್ವಭಾವದ ಸೌಮ್ಯ ವ್ಯಕ್ತಿತ್ವ ರೂಪಿಸಿಕೊಂಡಿರುವ ಅಪರೂಪದ ಯುವ ನಾಯಕನೆಂದರೆ ತಪ್ಪಾಗಲಾರದು.

ಬಸವಕಲ್ಯಾಣ ತಾಲೂಕಿನ ಅನೇಕ ಹಳ್ಳಿಗಳ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ನೇಗಿಲು ವಿತರಣೆ, ಬೆಳೆಗಳಿಗೆ ಮದ್ದು ಸಿಂಪಡಿಸುವ ಯಂತ್ರೋಪಕರಣಗಳು ದಾನವಾಗಿ ನೀಡುವುದರಿಂದ ಅದೇನೋ ತೃಪ್ತಿ ಭಾವವನ್ನು ಅನುಭವಿಸುತ್ತಾರೆ. ಬೀಜ ಬಿತ್ತನೆ, ಮುಂತಾದ ರೈತಪರ ಉಪಯೋಗಿ ಸಾಮಾಗ್ರಿಗಳು ಇಂದಿಗೂ ಕೊಡುತ್ತಲೇ ಬಂದಿದ್ದಾರೆ.
ಅನ್ನದಾತನ ಸೇವೆಯಿಂದ ಸಮೃದ್ಧ ಸಮಾಜ ನಿರ್ಮಾಣಕ್ಕೆ ಒಂದು ಪ್ರೇರಣೆ ಎಂಬ ಭಾವನೆ ಮೂಡಿಸಿಕೊಂಡಿರುವ ಇವರು, ಯಾವುದೇ ಹಬ್ಬ ಹರಿದಿನಗಳಲ್ಲಿ ಅನೇಕ ಬಡ ಮಹಿಳೆಯರಿಗೆ ಸೀರೆ ವಿತರಣೆ ಮಾಡುತ್ತ ಬಂದಿದ್ದಾರೆ.

ಜನಪರಯೋಗಿ, ಜನಪ್ರಿಯ ಕಾರ್ಯ ಯೋಜನೆಗಳನ್ನು ಹಾಕಿಕೊಂಡಿರುವ ಇವರು ಮಹತ್ವದ ಅಭಿವೃದ್ಧಿ ಕನಸಗಳನ್ನು ಹೊತ್ತಿರುವ ಚಿಲ್ಲಾಬಟ್ಟೆ ಒಂದು ಹೊಸ ಯುವಪಡೆಯೊಂದಿಗೆ ಮುಂದಡಿ ಇಡುತಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆ, ತಾಲೂಕಾ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಕಣದಲ್ಲಿದ್ದು ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಪಂಚಾಯತ್ ಚುನಾವಣೆ ಸೇರಿದಂತೆ ವಿಧಾನಸಭಾ ಚುನಾವಣೆಗಳಲ್ಲಿ ಸಹ ತಮ್ಮ ಪಕ್ಷದ ಅಭ್ಯರ್ಥಿಗಳು ಚುನಾವಣಾ ಸ್ಪರ್ಧಾ ಕಣದಲ್ಲಿದ್ದವರಿಗೆ ಸದಾ ಸಾಥ್ ನೀಡುತ್ತಲೇ ಬಂದು, ಅವರ ಗೆಲುವಿಗೆ ಪ್ರಮುಖ ಪಾತ್ರ ವಹಿಸಿರುವ ಅನೇಕ ಉದಾಹರಣೆಗಳಿವೆ.

ಇವರ ಸಹಕಾರದಿಂದ ಹಲವರು ಅಧಿಕಾರದ ಗದ್ದುಗೆಯನ್ನೇರಿದ್ದಾರೆ. ಮುಂಬರುವ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ನಾಯಕರಾಗಿ ಗುರುತಿಸಿಕೊಳ್ಳುವ ಸ್ವಭಾವಉಳ್ಳ ಸೂರ್ಯಕಾಂತ ಚಿಲ್ಲಾಬಟ್ಟೆ ಸದಾ ಪ್ರಕಾಶಿಸುವ ಸೂರ್ಯನಂತೆ. ಬಡವ, ಬಲ್ಲಿದ, ನೊಂದವರ ಜೀವನಕ್ಕೆ ಆಶ್ರಯವಾಗಿ, ಅಂಧಕಾರದ ಬದುಕನ್ನು ನಡೆಸುತ್ತಿರುವವರ ಪಾಲಿಗೆ ಸದಾ ಬೆಳಕನ್ನು ತೋರುವ ಲವಲವಿಕೆಯಿಂದ ಹತ್ತು ಹಲವು ಅಭಿವೃದ್ಧಿಪರ ಯೋಜನೆಗಳು ಇವರ ಚಿಂತನೆಗಳಾಗಿವೆ.

ಅನ್ಯಾಯಕ್ಕೆ ಸಿಡಿದೇಳುವ, ನ್ಯಾಯಕ್ಕೆ ಮೌನ ತಾಳುವ ಸೌಮ್ಯ ವ್ಯಕ್ತಿತ್ವ ರೂಢಿಸಿಕೊಂಡಿರುವ ಕೆಚ್ಚೆದೆಯ ಧೀರನಂತೆ ಅಸಮಾನತೆ ಕಂಡು ಬಂದಲ್ಲಿ ಅದಕ್ಕೆ ಪ್ರತಿಭಟಿಸುವ ಮನೋಭಾವ. ಸಮಾನತೆಗಾಗಿ ಹೋರಾಟ ನಡೆಸುವ ಉತ್ತಮ ಸಂಘಟಕರಾಗಿಯೂ, ಬಂಡಾಯ ವ್ಯಕ್ತಿತ್ವ ಇವರಲ್ಲಿ ಕಂಡು ಬರುವ ವಿಶಿಷ್ಟ ಗುಣ ಎದ್ದು ಕಾಣುತ್ತದೆ. ಎಲ್ಲರನ್ನು ಸರಿಸಮಾನವಾಗಿ ಕಾಣಬೇಕು. ಯಾರನ್ನೂ ಮೇಲು ಕೀಳು ಭಾವನೆಯಿಂದ ಕಾಣಬಾರದು ಎಂಬ ತತ್ವ ಇವರದ್ದಾಗಿದೆ.

ಚಿಲ್ಲಾಬಟ್ಟೆಯವರ ಸಹೋದರ ಚಂದ್ರಕಾಂತ ಚಿಲ್ಲಾಬಟ್ಟೆ ಪ್ರಸ್ತುತ ಎಪಿಎಂಸಿ ಸದಸ್ಯರಾಗಿದ್ದಾರೆ. ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ತಂದೆ ಜಗನ್ನಾಥ ಚಿಲ್ಲಾಬಟ್ಟೆ ಸೇರಿದಂತೆ ಇವರ ಕುಟುಂಬವೇ ರಾಜಕೀಯ ಹಿನ್ನೆಲೆಯಿಂದ ಬಂದಿದ್ದಾಗಿದೆ. ದಿ.ಓಂಕಾರ ಚಿಲ್ಲಾಬಟ್ಟೆಯವರ ನೆರಳಲ್ಲಿ ರಾಜಕೀಯ ಜೀವನ ಮುಂದೊರೆಸಿಕೊಂಡು ಸಾಗುತ್ತಿರುವ ಇವರು ಅಪಾರ ಜನರ ಬೆಂಬಲದೊಂದಿಗೆ ಸದಾ ಜನಮನದಲ್ಲಿ ಉಳಿಯುವಂಥ ಕಾರ್ಯಗಳನ್ನು ಮಾಡುತ್ತಲೇ ಬರುತಿದ್ದಾರೆ.

ಚಿಲ್ಲಾಬಟ್ಟೆಯವರ ಕೌಟುಂಬಿಕ ಹಿನ್ನೆಲೆಯನ್ನರಿತು ಭಾರತೀಯ ಜನತಾ ಪಕ್ಷದಿಂದೊಮ್ಮೆ ಬಸವಕಲ್ಯಾಣ ವಿಧಾನಸಭಾ ಚುನಾವಣೆ-1999ರಲ್ಲಿ ಟಿಕೇಟ್ ಸಿಕ್ಕಿದ್ದು ಮರೆಯಲಾಗದ ಸಂಗತಿ ಎನ್ನುವ ಇವರು, ರಾಜಕೀಯವೆಂದರೆ ಏಳು ಬೀಳುಗಳು ಸಹಜವಾದದ್ದು, ಗೆದ್ದಾಗ ಸಂಭ್ರಮಿಸುವುದು, ಸೋತಾಗ ಮೂಲೆಗುಂಪಾಗುವುದು ಸರಿಯಲ್ಲ. ಏನಿದ್ದರೂ ಸೋಲು-ಗೆಲುವು ಸರಿಸಮವಾಗಿ ಸ್ವೀಕರಿಸಿ ಸ್ಪರ್ಧೆಗಿಳಿದರೆ ಜಯವೆಂಬುದು ತಾನಾಗಿಯೇ ಒಲಿದು ಬರುತ್ತದೆ. ನಮ್ಮ ವಯಕ್ತಿಯ ಹಿನ್ನೆಲೆ, ಉತ್ತಮ ಜನಸಂಪರ್ಕ ಹೊಂದಿದ್ದರೆ ಯಾವುದೇ ಕ್ಷೇತ್ರದಲ್ಲಿ ಮುನ್ನುಗ್ಗಲು ಅಸಾಧ್ಯವಾದುದ್ದೇನು ಇಲ್ಲ. ಮನುಷ್ಯನಾಗಿ ಹುಟ್ಟಿದ ಮೇಲೆ ನಮಗೆ ನಮ್ಮ ಮೇಲೆ ಮೊಟ್ಟ ಮೊದಲ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕೆಂಬ ಭರವಸೆಯ ಮಾತುಗಳನ್ನಾಡುತ್ತಾರೆ. ಇವರ ಆಸೆ, ಕನಸು, ಯೋಜನೆಗಳು ಸಾಕಾರಗೊಳ್ಳಲಿ.

ಲೇಖಕರು: ವಿ.ಎಚ್.ವೀರಣ್ಣ ಮಂಠಾಳಕರ್

ಶನಿವಾರ, ಮಾರ್ಚ್ 2, 2013

ಅಭಿವೖದ್ಧಿ ಚಿಂತನೆ ಉಳ್ಳವರಿಗೆ ಚುಮಾವಣೆಯಲ್ಲಿ ಗೆಲ್ಲಿಸಿಃ ಖೂಬಾ

ಮಾಜಿ ಶಾಸಕ, ಜೆಡಿಎಸ್ ರಾಜ್ಯ ಯುವ ಕಾಯ೯ದಶಿ೯ ಮಲ್ಲಿಕಾಜು೯ನ ಖೂಬಾ
ಬಸವಕಲ್ಯಾಣ, ಮಾ.1

ಪ್ರಸ್ತುತ ನಗರಸಭೆ ಚುನಾವಣೆಯಲ್ಲಿ ಸ್ಪಧಿ೯ಸುವ ಅಭ್ಯಥಿ೯ಗಳು ಜನಸಾಮಾನ್ಯರ ಕುಂದು ಕೊರತೆಗಳಿಗೆ ಸ್ಪಂಧಿಸುವ ಮನೋಭಾವ ಇರುವವರನ್ನು ಗೆಲ್ಲಿಸಬೇಕೆ ಹೊರತು ಸ್ವಾರ್ಥಕ್ಕಾಗಿ ರಾಜಕೀಯ ಪ್ರವೇಶಿಸುವರನ್ನು ದೂರವಿಡಬೇಕು ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು.

ನಗರದ ಖೂಬಾ ನಿವಾಸದಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಅವರು, ಸಧ್ಯದ ಚುನಾವಣೆ ಪ್ರಚಾರದ ನಿಮಿತ್ಯ ಮತದಾರರನ್ನು ಕೊಂಡುಕೊಳ್ಳುವ ಉದ್ದೇಶದಿಂದ  ಆಮೀಷಕೊಳಗಾಗಿಸುವ ಪ್ರಯತ್ನವನ್ನು ಮಾಡುತಿದ್ದಾರೆ ಎಂದು ಆರೋಪಿಸಿದರು.

ಜನರ ಭಾವನೆಗಳನ್ನು ಖರಿದಿಸುವ ನಿಟ್ಟಿನಲ್ಲಿ ರಾಜಕೀಯದಲ್ಲಿ ಹೇರಳವಾದ ದುಡ್ಡು ಖರ್ಚು ಮಾಡುವುದು ಸರಿಯಲ್ಲ. ದುಡ್ಡು ಕೊಟ್ಟವರನ್ನು ದೂರವಿರಿಸಿ ಯಾವುದೇ ಪಕ್ಷದ ಅಭ್ಯರ್ಥಿಯಾಗಿರಲಿ ಮತದಾರರು ಉತ್ತಮ ಅಭ್ಯರ್ಥಿಗಳನ್ನು ಗೆಲ್ಲಿಸಿ ತರಬೇಕು ಎಂದು ಕರೆ ನೀಡಿದರು.

ತಾಲ್ಲೂಕಿನ ಸಮೀಪದಲ್ಲೇ ಐದು ಕೆರೆಗಳಿದ್ದರೂ 22 ಕಿ.ಮೀ ಅಂತರದಲ್ಲಿನ ಕೋಂಗಳಿ ಬ್ಯಾರೇಜಿನಿಂದ ತಾಲೂಕಿಗೆ ನೀರು ತರುವ ಉದ್ದೇಶ ಹೊಂದಿದ್ದ ಮಾಜಿ ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಅವರು ತಮ್ಮ ಸ್ವಾರ್ಥಕ್ಕಾಗಿ ಇಂತಹ ಯೋಜನೆ ಹಾಕಿ ಕೊಂಡಿರುವುದು ಸರಿಯಲ್ಲ.

ಅಟ್ಟೂರ್ ಅವಧಿಯಲ್ಲಿ ನಿರ್ಗತಿಕರಿಗಾಗಿ ಮಂಜೂರಾದ ಆಶ್ರಯ ಮನೆಗಳು ಬಡವರ ಪಾಲಾಗದೇ ಶ್ರೀಮಂತರಿಗೆ ಶ್ರೀಮಂತರ ಪಾಲಾಗಿರುವುದು ನೋಡಿದರೆ ಅವರಲ್ಲಿರುವ ಸಾಮಾಜಿಕ ಚಿಂತನೆ ಎಂತಹದ್ದೆಂಬುದು ಗೊತ್ತಾಗುತ್ತದೆ ಎಂದು ದೂರಿದರು.

ಇನ್ನೋವ೯ ಮಾಜಿ ಶಾಸಕ ಎಂ.ಜಿ.ಮೂಳೆ ಅವರ ಕೈಯಲ್ಲಿರುವ ಗಡಿಯಾರದಲ್ಲಿ ಮಾಜಿ ಸಚಿವ ಹಾಗೂ ಕೆಜೆಪಿ ಮುಖಂಡ ಗುರುಪಾದಪ್ಪ ನಾಗಮಾರಪಳ್ಳಿ ಅವರ ಭಾವಚಿತ್ರವಿದ್ದು, ಮುಳೆ ಅವರ ಕಾರಿನ ಹಿಂದೆ ಬಿಎಸ್್ಆರ್್ ಶ್ರೀರಾಮುಲು ಅವರ ಭಾವಚಿತ್ರ ಇರುವುದರಿಂದ ಇವರು ಯಾವ ಪಕ್ಷದಲ್ಲಿದ್ದಾರೆ ಎಂಬುದು ಜನರಿಗೆ ತಿಳಿಯದಾಗಿದೆ ಎಂದು ವ್ಯಂಗ್ಯವಾಡಿದರು.

ಚುನಾವಣೆಗಳು ಸಮೀಪಿಸುತಿದ್ದಂತೆ ಸ್ಪರ್ಧಿಸಲು ನಾ ಮುಂದು ತಾ ಮುಂದು ಎಂದು ಎಲ್ಲಿಂದಲೋ ಧಾವಿಸಿ ಬರುತ್ತಿರುವ ರಾಜಕೀಯ ನಾಯಕರುಗಳು ಇಲ್ಲಿನ ಸ್ಥಳೀಯ ಜನರ ಸಮ್ಸಯೆಗಳೇನು ಎಂಬುದೇ ಗೊತ್ತಿರದೇ ಸ್ಥಳೀಯವಾಗಿದ್ದವರನ್ನು ಅವಕಾಶ ವಂಚಿತರಾಗಿಸುತಿದ್ದಾರೆ. ಗೊತ್ತಿಲ್ಲದ ಓಣಿ, ಜನರ ಸಮಸ್ಯೆಗಳನ್ನು ಇವರು ಹೇಗೆ ನಿಭಾಯಿಸುತ್ತಾರೆ ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಯಾವುದೇ ಪಕ್ಷದ ಅಭ್ಯರ್ಥಿಗಳಲ್ಲಿ ಅಭಿವೖದ್ಧಿ ಚಿಂತನೆಗಳಿದ್ದಲ್ಲಿ ಮಾತ್ರ ಮತದಾರರು ಗೆಲ್ಲಿಸಿ ತರಬೇಕು. ಸ್ವಾರ್ಥಕ್ಕಾಗಿ ಚುನಾವಣೆ ಸ್ಪಧಿ೯ಸುತ್ತಿರುವ  ರಾಜಕೀಯ ಪಕ್ಷದವರನ್ನು ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಮತಬಾಂಧವರಿಗೆ ಕರೆ ನೀಡಿದರು.

ಶುಕ್ರವಾರ, ಫೆಬ್ರವರಿ 1, 2013

ಮತದಾನದ ಹಕ್ಕು ಚಲಾಯಿಸುವವರ ಮೇಲೆ ಸದೖಢ ಸಮಾಜದ ಕನಸು ಅಡಗಿ ಕುಳಿತಿದೆ.


ಲೇಖಕರುಃ ವೀರಣ್ಣ ಮಂಠಾಳಕರ್


ಬಸವಕಲ್ಯಾಣ, ಫೆಬ್ರವರಿ-01, 2013
ಇಂದಿನ ರಾಜಕೀಯ ಇಚ್ಛಾಶಕ್ತಿಗಳಿಗೆ ದೇಶದ ಅಭಿವೖದ್ಧಿಯ ಚಿಂತನೆಗಳಿಲ್ಲ. ತಮ್ಮ ಸ್ವಾಥ೯ಕ್ಕಾಗಿ ರಾಜಕಾರಣ ಮಾಡುವ ದುರುದ್ದೇಶ, ತಮ್ಮ ಕುಟುಂಬ ಶ್ರೇಯೋಭಿವೖದ್ಧಿಗೆ ಮಾತ್ರ ಜನರ ಕಣ್ಣೀರೊರೆಸುವ ತಂತ್ರ, ಮೊಸಳೆ ಕಣ್ಣೀರಿಟ್ಟು ಪ್ರಚಾರ ಗಿಟ್ಟಿಸುವ ಕಾಯ೯ರೂಪಕ್ಕೆ ಸಿದ್ಧರಾಗುತ್ತಿರುವ ನಾಯಕರೇ ಸಮಾಜದಲ್ಲಿ ಬೆಳೆಯುತಿದ್ದಾರೆ.

ಜನಸಾಮಾನ್ಯರ ಹಬ್ಬ ಹರಿದಿನಗಳಲ್ಲಿ, ಜಾತ್ರಾ ಸಮಾರಂಭಗಳಲ್ಲಿ ಪ್ರತ್ಯಕ್ಷಗೊಳ್ಳುವ ರಾಜಕೀಯ ಮುಖಂಡರಿಗೆ ಅಲ್ಲಿನ ಜನಜೀವನದ ಬಗ್ಗೆ ನಿಗಾ ಇಡುವುದಕ್ಕಿಂತ ಹೆಚ್ಚಾಗಿ ಒಂದು ಸಮಾರಂಭಗಳಲ್ಲಿ ಭಾಗವಹಿಸಿ ಮರುದಿನದ ಪತ್ರಿಕೆಗಳಲ್ಲಿ ಕಾಣಿಸಕೊಳ್ಳುವುದೇ ಹೇಗೆಂಬುದು ಮುಖ್ಯ ಉದ್ದೇಶವಾಗಿದೆ.

ಹಲವು ಗ್ರಾಮೀಣ ಪ್ರದೇಶಗಳಲ್ಲಿ ನೀರಿಗೆ ತಾತ್ಸಾರ, ರಸ್ತೆಗಳ ದುರಸ್ಥಿ ಇಲ್ಲ. ವ್ಯವಸ್ಥಿತವಾಗಿ ಚರಂಡಿ ನೀರು ಹರಿದು ಹೋಗುವುದಿಲ್ಲ. ಮುಂತಾದ ಸಮಸ್ಯೆಗಳತ್ತ ಗಮನ ಹರಿಸದೇ ರಾಜಕೀಯ ಪ್ರಚಾರ ಸಭೆಗಳಲ್ಲಿ ತಮ್ಮ ಕಾಯ೯ ಚಟುವಟಿಕೆ ಜನಪರವಾಗಿತ್ತು ಎನ್ನುವ ಹಾಗೆ ಪ್ರತಿಬಿಂಬಸಲು ಹವಣಿಸುವವರೇ ಹೆಚ್ಚಾಗಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಪುಕ್ಕಟೆ ಪ್ರಚಾರಕ್ಕೆ ರಾಜಕಾರಣಿಗಳು ರೂಪಿಸುತ್ತಿರುವ ಕಾಯ೯ತಂತ್ರ ಹೇಸಿಗೆಯುಂಟು ಮಾಡಿದರೆ, ಇನ್ನೂ ಕೆಲವರ ವತ೯ನೆ ಮಾಧ್ಯಮಗಳಿಗೆ ಕಂಟಕವಾಗಿ ಪರಿಣಮಿಸುವುದರಲ್ಲಿ ಅಚ್ಚರಿಯೇನಿಲ್ಲ. ಪತ್ರಕತ೯ರಿಗೆ ರಾಜಕಾರಣಿಗಳ ಕಾಟಾಚಾರ ಒಂದೆಡೆ ಸಹಿಸಲಸಾಧ್ಯ ಆಗುವುದರಲ್ಲಿ ಸಂಧೇಹವಿಲ್ಲ.

ಕಾರಣ ವಷ೯ವಿಡೀ ಪತ್ರಿಕೆಗಳಿಗೆ ಜಾಹಿರಾತು ನೀಡುತ್ತೇವೆಂಬ ಬಿಗುಮಾನ ಅವರಲ್ಲಿರುತ್ತದೆ. ಕೆಲವರು ಯಾವುದೇ ಪತ್ರಿಕೆಗಳಿಗೆ ಜಾಹಿರಾತು ಕೊಡದವರಿದ್ದರೂ ಕೂಡ ದಬ್ಬಾಳಿಕೆ ನಡೆಸುವ ಚಿಲ್ಲರೆ ರಾಜಕಾರಣಿಗಳು ಎಲ್ಲೆಡೆ ಇದ್ದಾರೆ. ನೀವು ಪತ್ರಕತ೯ರಾಗಿ ಇರುವುದ್ಯಾಕೆ,? ನಿಮಗೆ ನಾವು ಕೊಟ್ಟಿದ್ದೇ ಸುದ್ಧಿಯಲ್ಲವಾ ಎಂಬ ಉದ್ಧಟತನದ ಪ್ರಶ್ನೆ ಎದುರಿಸಬೇಕು.

ಅವರು ಕೊಟ್ಟಿದ್ದೆಲ್ಲ ಪತ್ರಿಕೆಗಳಲ್ಲಿ ಸುದ್ಧಿಯಾಗಬೇಕು ಎಂಬುದು ಅವರಲ್ಲಿರುವ ಮೊಂಡುತನ ಪ್ರದಶಿ೯ಸುತ್ತದೆ. ಯಾವುದೇ ಪಕ್ಷದ ಜನನಾಯಕರು ಸಮಾರಂಭಗಳ ವೇದಿಕೆಗಳಲ್ಲಿ ಠೀಕು ಠಾಕಾಗಿಯೇ ಬಂದು ಜನರ ಮಧ್ಯೆ ಭಾಗವಹಿಸಿರುತ್ತಾರೆ. ಅವರು ಹೇಳಿದ್ದನ್ನು ಬರೆದುಕೊಂಡು ಪ್ರಕಟಿಸುವುದೇ ಮುದ್ರಣ ಮಾಧ್ಯಮದ ಧಮ೯ವೆ ಎಂಬ ಪ್ರಶ್ನೆ ಎದುರಾಗುತ್ತದೆ.

ವೇದಿಕೆಯಲ್ಲಿ ನಾಲ್ಕಾರು ಮಾತುಗಳನ್ನುದುರಿಸಿದ್ದೇ ಮಹಾತ್ಮರ ತತ್ವಾದಶ೯ಗಳು ಪಾಲಿಸಿದಷ್ಟೇ ಹೆಮ್ಮೆ ಪಡುವವರು ಮೈಕಿನ ಮುಂದೆ ಕಿರುಚಿ ಬಂದಿರುತ್ತಾರೆ. ಅದೇ ಮಾತನ್ನು ಮಾಣಿಕ್ಯವೆಂಬಂತೆ ಮರುದಿನ ಪತ್ರಿಕೆಯಲ್ಲಿ ಪ್ರಕಟವಾಗಬೇಕು ಎಂಬ ಹಠ ಅವರಲ್ಲಿರುವುದು ಸಹಜ. ಆದರೆ ಅದನ್ನು ಯಥಾವತ್ತಾಗಿ ಪ್ರಕಟಿಸಬೇಕು ಎಂಬ ಮಾನದಂಡ ಇದೆಯೇ..?

ಪ್ರಚಾರಪ್ರಿಯತೆಯ ಹಪಾಹಪಿತನ ಬಹುತೇಕ ರಾಜಕಾರಣಿಗಳಲ್ಲಿ ಇತ್ತೀಚಿಗೆ ಮನೆ ಮಾಡಿಕೊಂಡಿರುವುದರಿಂದ ಜನರ ಸಮಸ್ಯೆಗಳು ಅವರು ಯಾವ ರೀತಿ ನಿಭಾಯಿಸುತ್ತಾರೆ ಎಂಬುದನ್ನು ಜನಸಾಮಾನ್ಯರು ಚಿಂತಿಸಬೇಕು. ಇವರಿಂದ ಸವಾ೯ಂಗೀಣ ಸಮಾಜ ಅಭಿವೖದ್ಧಿ ಹೊಂದಲು ಸಾಧ್ಯವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ಮಾಧ್ಯಮಗಳ ಮೂಲಕವಷ್ಟೇ ತಾವು ಉತ್ತಮರೆಂದು ಸಾಬೀತು ಪಡಿಸಲು ಮುಂದಾಗುವ ರಾಜಕಾರಣ ಹೆಚ್ಚಾಗಿದೆ. ವಾಸ್ತವಿಕ ಬದುಕಿನಲ್ಲಿ ಜನರ ಮೂಲ ಸಮಸ್ಯೆಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಉತ್ತಮ ನಾಯಕರಾಗಬೇಕು. ಸಕಾ೯ರದ ಸೌಲಭ್ಯಗಳು ಒದಗಿಸುವುದರೊಂದಿಗೆ ಸನ್ನಡತೆಯ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಪ್ರಗತಿ ಸಾಧ್ಯ.

ಮತಬ್ಯಾಂಕ್್ ಸ್ಥಾಪಿಸುವ ಹುನ್ನಾರದಲ್ಲಿ ಆಯಾ ಜಾತಿ ಜನಾಂಗದವರ ಹಬ್ಬ ಹರಿದಿನಗಳ ಸಡಗರದಲ್ಲಿ, ಜಾತ್ರಾ ಮಹೋತ್ಸವಗಳಲ್ಲಿ ಸಾಮಾನ್ಯ ಜನರೊಂದಿಗೆ ಬೆರೆಯುವುದು ಯಾವ ನ್ಯಾಯ. ಆಯಾ ಸಂದಭ೯ಗಳಲ್ಲಿ ಭಾರಿ ಗಾತ್ರದ ಕಟೌಟ್್ಗಳು ನೇತಾಕಿದ ಮಾತ್ರಕ್ಕೆ ಜನಗಳ ಸಂಕಟಗಳು, ನೂರಾರು ಸಮಸ್ಯೆಗಳು ಬಗೆ ಹರಿಯುವುದಿಲ್ಲ.

ಜನರ ಕಣ್ಣಿಗೆ ರಾಜಕೀಯ ನಾಯಕರ ಭಾವಚಿತ್ರಗಳು ರಾರಾಜಿಸುವ ಹಾಗೆ ಎಲ್ಲೆಡೆ ರಸ್ತೆ, ಕಟ್ಟಡಗಳ ಅಂದವನ್ನು ಕೆಡಿಸಿರುತ್ತಾರೆ. ಕಟೌಟ್್ಗಳಲ್ಲಿ ಚಂದವಾಗಿ ಕಾಣಿಸಿದರೆ ಹಸಿದವರ ಹೊಟ್ಟೆ ತುಂಬುವುದಿಲ್ಲ. ಸಿದ್ಧ ಕಟೌಟ್್ಗಳಲ್ಲಿ ಕಾಣಿಸಿಕೊಂಡ ಮಾತ್ರಕ್ಕೆ ಜನನಾಯಕರಾಗಲು ಸಾಧ್ಯವಿಲ್ಲ.

ಪ್ರಜ್ಞಾವಂತ ನಾಗರಿಕರು ರಾಜಕೀಯ ನಾಟಕೀಯಕ್ಕೆ ಮಾರಿ ಹೋಗದೇ, ಚುನಾವಣೆಗಳಲ್ಲಿ ರಾಜಕೀಯ ದಾಳಕ್ಕೆ ಸಿಲುಕಿ ಆಸೆ, ಆಮಿಷಗಳಿಗೆ ಬಲಿಯಾಗದೇ ಇರುವುದರಿಂದ ಸಾಮಾಜಿಕ ಚಿಂತನೆಯುಳ್ಳ ನಾಯಕರನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು. ಪ್ರಚಾರದಿಂದ ಸಮಾಜದ ಅಭಿವೖದ್ಧಿಯ ಕನಸು ನನಸಾಗಿಸಲು ಸಾಧ್ಯವಿಲ್ಲ.

ಜನಸಾಮಾನ್ಯರು ಗಮನಿಸಬೇಕಾದ ಪ್ರಮುಖ ವಿಚಾರವೆಂದರೆ ಕೆಲವೇ ತಿಂಗಳಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಗಾಗಿ ರಾಜ್ಯ ರಾಜಕಾರಣದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತಿವೆ. ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳಲ್ಲಿ ಭುಗಿಲೆದ್ದಿರುವ ಗೊಂದಲಗಳಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಜನಗಳ ಅಭಿವೖದ್ಧಿಯ ಕನಸು ನನಸಾಗದೇ ಸಮಸ್ಯೆಗಳು ನಿಂತ ನೀರಾಗಿದೆ. ಗೊಂದಲದ ರಾಜಕೀಯ ವಾತಾವರಣ ನಿಮಾ೯ಣವಾಗಿದೆ. ಇದರಿಂದ ಸಮಾಜ ಕಲುಷಿತಗೊಳ್ಳುತ್ತಿದೆ. ಸಕಾ೯ರದ ಮೂಲ ಸೌಲಭ್ಯಗಳಿಂದ ವಂಚಿತರಾದ ಜನರ ತಲ್ಲಣದ ಬದುಕು ಮುಂದೆ ಸಾಗದಂತಾಗಿದೆ.

ಈ ಬಾರಿ ಮತ ಕೇಳಲು ಬಂದವರನ್ನು ಮಾತಿನ ಮಂಟಪಕ್ಕೊಯ್ಯಲು ಸನ್ನದ್ಧರಾಗಬೇಕು. ಪಕ್ಷ ಭೇದ ಮರೆತು ವ್ಯಕ್ತಿ ನಿಷ್ಠ, ಸಾಮಾಜಿಕ ಸವಾ೯ಂಗೀಣ ಅಭಿವೖದ್ಧಿಗಾಗಿ ಶ್ರಮಿಸುವ ಪಕ್ಷಗಳಿಗೆ ಬೆಂಬಲಿಸಬೇಕಾದ್ದು ಅಧ್ಯ ಕತ೯ವ್ಯವಾಗಿದೆ. ಮತದಾನದ ಹಕ್ಕು ಚಲಾಯಿಸುವವರ ಮೇಲೆ ಸದೖಢ ಸಮಾಜದ ಕನಸು ಅಡಗಿ ಕುಳಿತಿದೆ.


ಬುಧವಾರ, ಜನವರಿ 16, 2013

ಸಣ್ಣ ಕಥೆ



ತರ್ಜುಮೆ


ಒಂದು ವಾರದಿಂದ ಅವಳ ಕಣ್ತಪ್ಪಿಸಿ ಓಡಾಡುತಿದ್ದನು. ಅಕಸ್ಮಾತ್ ಅವಳನ್ನು ನೋಡಿಯೂ ನೋಡದಂತೆ ಓಡಾಡಿದರೂ ಖುದ್ದಾಗಿ ಅವಳೇ ಅವನೆದುರಿಗೆ ಬಂದು ಮಾತಾಡಿಸುವ ತವಕದಲ್ಲಿ ಇದ್ದಳು.!

ಸುಮ್ ಸುಮ್ಮನೆ ಸುಳ್ಳು ಹೇಳಿದನು. ಇದರಿಂದ ಫಜೀತಿಗೆ ಸಿಲುಕಿಕೊಂಡಂತಾಗಿತ್ತು. ಹೀಗಿದ್ದ ಅವನ ಪರಿಸ್ಥಿತಿ, ಆ ಸುಳ್ಳು ಸೃಷ್ಟಿ ತಿಳಿಗೊಳಿಸಲು ಏನಾದರೊಂದು ನೆಪ ಹೇಳಿ, ಜಾರಿಕೊಳ್ಳುವ ಸಿದ್ಧತೆ ಮಾಡಿಕೊಳ್ಳುತ್ತಲೇ ಇದ್ದ. ಆದರೆ ಎಂದಾದರೊಂದು ದಿನ ತಾನು ಹೇಳಿದ್ದನ್ನು ಮತ್ತೆ ನೆನಪು ಕೊಡುತ್ತಾಳೆ. ನನ್ನಲಿಲ್ಲದ ಆ ಪುಸ್ತಕ ತಂದು ಕೊಡುವವರೆಗೆ ಕೇಳದೆ ಇರಲಾರಳು ಎಂದು ಆತಂಕಕೊಳಗಾಗಿದ್ದನು. ಮನೆಯಿಂದ ಆಚೆ ತಿರುಗಾಡುವಾಗ ಚಕ್ಕನೆ ಎದುರಾಗುವಳು ಎಂಬ ವಿಚಾರ ಲಹರಿಯಲ್ಲಿ ತೇಲಾಡುತ್ತಾ ಗ್ರಂಥಾಲಯದ ಕಡೆ ಹೆಜ್ಜೆ ಹಾಕಿದನು.

“ಅದಕ್ಕಾಗಿ ಒಂದು ವ್ಯವಸ್ಥೆ ಮಾಡಲೇಬೇಕು. ಎಲ್ಲಿಂದಾದರೂ ಸರಿಯೇ ಆ ಪುಸ್ತಕ ಹುಡುಕಿ ತಂದು ಕೊಡಬೇಕು. ತಂದು ಕೊಟ್ಟ ಮೇಲೆ?” ಎಂಬ ಪ್ರಶ್ನೆಗೆ ಉತ್ತರ ನಿಗೂಢವೆಂಬಂತೆ ರಸ್ತೆಯುದ್ದಕ್ಕೂ ಸಾಗುವಾಗ ಚಿಂತನ ಮಂಥನ ಮಾಡಿಕೊಳ್ಳುತ್ತಲೇ ಇದ್ದನು.

ತನ್ನಲಿಲ್ಲದ ಆ ಪುಸ್ತಕ ಅವಳಿಗೆ ಕೊಡುವ ಭರವಸೆ? ಮೇಲಾಗಿ ಅವನೇ ಅರಿಯದ ಅಕ್ಷರಗಳು. ಆ ಉರ್ದು ಭಾಷೆಯ ಪುಸ್ತಕವನ್ನು ತಂದು ಕೊಡುವುದಾಗಿಯೂ, ಅದರ ತರ್ಜುಮೆ ಮಾಡಿ ಹೇಳಿ ಕೊಡ್ತಿರಾ? ಎಂದು ಕೇಳಿದನು. ಅದಕ್ಕವಳು ತಕ್ಷಣಕ್ಕೆ ಒಪ್ಪಿಕೊಂಡಿದ್ದಳು. ಆ ಕ್ಷಣದಲ್ಲಿ ಮತ್ತೊಂದು ಸಬೂಬು ಹೇಳಿ ಜಾರಿಕೊಂಡಿದನು. ಅವಳೋ....ಕುತೂಹಲ, ಕಾತರದಲ್ಲಿ ಅವನನ್ನೇ ನುಂಗಿ ಬಿಡುವಂತೆ ಆಕರ್ಷಿಸಿದಳು. ಅವಳ ದೃಷ್ಠಿಯಲ್ಲೊಮ್ಮೆ ರತಿ-ಮನ್ಮಥರ ದೃಶ್ಯ ಕಾವ್ಯ ಮಿಂಚಿ ಮರೆಯಾಗಿತ್ತು. ಆ ಪುಸ್ತಕದ ಹುಡುಕಾಟದಲ್ಲಿ ಮುಂದೆ ಮುಂದೇ ಸಾಗಿದನು.

ಅವಳೊಂದಿಗೆ ಈ ರೀತಿಯ ಸಖ್ಯ ಬೆಳೆಸಿಕೊಳ್ಳಲು ಒಂದು ಬಲವಾದ ಕಾರಣವೇ ಇತ್ತು. ಅವರಿಬ್ಬರ ಧರ್ಮ ಬೇರೆ ಬೇರೆಯಾದರೂ, ಮನಸ್ಸಿನ ಆಸೆ, ಭಾಷೆ, ಒಂದೇ ಆಗಿತ್ತು. ಎರಡು ದೇಹದಂಗಾಂಗಗಳಲ್ಲಿ ಚಲನ-ವಲನದ ರೀತಿಯೇ ಬದಲಾಗಿ ಸಂಚಲನ ಮೂಡಿಸಿತು.
ಅವನು ತನ್ನ ಒಂಟಿತನದ ಬೇಸರವನ್ನು ಕಳೆಯಲು ಅವಳನ್ನು ಆಪ್ತ ಸಂಗಾತಿಯನ್ನಾಗಿ ಮಾಡಿಕೊಳ್ಳಲೋ ಅಥವಾ ಅವಳ ಯೌವ್ವನ, ರೂಪ, ಆ ಚೆಲುವೆಯ ಮುಗ್ಧತೆಯಲ್ಲಿರುವ ರಸಿಕತನವನ್ನು ಕಂಡು, ಹೆಣ್ಣಿನಂತರಂಗದ ಸೂಕ್ಷ್ಮ ಭಾವನೆಗಳನ್ನು ಯಾವ ರೀತಿಯಲ್ಲಿ ಪಲ್ಲಟಗೊಳ್ಳುತವೆ? ಎಂಬುದನ್ನರಿಯಲೋ ಒಂದೂ ತಿಳಿಯದೆ ಗೊಂದಲದಲ್ಲಿ ಸಿಲುಕಿದನು.

ಅವಳ ದೃಷ್ಠಿಗೆ ದೃಷ್ಠಿ ಬೆರೆಸಿ ಮಾತಾಡಲು ಆಗದೇ, ಅಪರಾಧಿ ಭಾವನೆಯಲ್ಲಿ ಕೆಲವೊಮ್ಮೆ ಪಶ್ಚಾತ್ತಾಪಕ್ಕೆ ಈಡಾಗುತ್ತಿದ್ದನು.

ಅವನ ಹೆಂಡತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಎಲ್ಲಾ ಘಟನೆಗಳು ನಡೆದಿದ್ದವು. ಹೆಂಡತಿಯ ನೆನಪುಗಳ ವಿರಹವನ್ನು ಮರೆಯುವದಕ್ಕೋಸ್ಕರ, ಪುಸ್ತಕದ ನೆಪದಲ್ಲಿ ಅವಳಿಗೆ ಮಾತಾಡಿಸುವ ಉತ್ಕಟ, ಆಸೆಯನ್ನು ಚಿಗುರೊಡೆದಿತ್ತು.

ಅಲ್ಲೊಂದಿಷ್ಟು ಸ್ವಾರ್ಥ ಕೂಡ ಇತ್ತು ಎಂದೆನಿಸುತ್ತದೆ. ಯಾಕೆ? ಅವನಂಥವರಿಗೆ ಈ ರೀತಿಯ ಕೀಳುಮಟ್ಟದ ವಿಚಾರಗಳು ಬರಲು ಸಾಧ್ಯವೆ?! ಹೆಣ್ಣೆಂಬ ವಿಷಯದಲ್ಲಿ ಯಾರೇ ಆಗಿರಲಿ ದುರ್ಬಲರಾಗಿ ವರ್ತಿಸುತ್ತಾರೆ ಎಂಬುದಕ್ಕೆ ಅವನೇ ತಾಜಾ ಉದಾಹರಣೆಯಾಗಿದ್ದನು.

ಅವನೇನು ಸಾಮಾನ್ಯ ವ್ಯಕ್ತಿಯಾಗಿ ಬಾಳುತಿರಲಿಲ್ಲ. ಕವಿ, ಸಾಹಿತಿ, ಚಿಂತಕನೆಂಬ ಹೆಸರಿನಲ್ಲಿ ಗುರುತಿಸಿಕೊಂಡಿದನು. ಅವನ ಹಲವಾರು ಕವಿತೆಗಳು, ಕತೆ, ಲೇಖನಗಳು ಮೆಚ್ಚಿ ನೂರಾರು ಅಭಿಮಾನಿಗಳು ಮೆಚ್ಚುಗೆಯ ಪತ್ರಗಳನ್ನು ಬರೆದಿದ್ದರು. ಆದರೆ ಯಾರನ್ನೂ ಅವನು ಅಷ್ಟಾಗಿ ತೀರಾ ಹತ್ತಿರದಿಂದ ಪರಿಚಯಿಸಿಕೊಳ್ಳುವ ಮನಸ್ಸು ಮಾಡಲಿಲ್ಲ. ಆದರೆ ಇದ್ದಕ್ಕಿದಂತೆ ಒಬ್ಬ ಚೆಲುವೆಯನ್ನು ನೋಡಿ ಆಕರ್ಷಿತನಾಗಿದ್ದು ಸೂಜಿಗದ ಸಂಗತಿ.

ಯಾರದೇ ಪ್ರೇಮ ಪತ್ರಕ್ಕೂ, ಪ್ರೀತಿ-ಪ್ರೇಮ ನಿವೇದನೆಗೆ ಕ್ಯಾರೆ ಎನ್ನದೆ ಈತ ಬುರ್ಕಾ ತೊಡುವವಳ ಆಕರ್ಷಣೆಗೆ ಒಳಗಾಗಿದ್ದು ವಿಪರ್ಯಾಸ! ಹತ್ತು ಹಲವು ಪ್ರಶ್ನೆಗಳಿಗೆ ಉತ್ತರವಾಗುಳಿಯದೇ, ಅನೇಕ ಬಾರಿ ಚಿಂತಿಸುತ್ತಿದ್ದನು. ಆವಾಗಾವಾಗ ನಡೆದ ತಪ್ಪುಗಳೆಲ್ಲ ಅವನಿಂದಲೇ ಎಂಬುದು ಒಪ್ಪಿಕೊಳ್ಳುವ ಹಾಗೆ ಅವ£ರಲಿಲ್ಲ. ಇದಕ್ಕೆಲ್ಲ ಕಾರಣ ಆತನ ಹೆಂಡತಿಯೇ ಆಗಿದ್ದಳು.

ಈಗ ಅವನ ಮನಸ್ಸೊಮ್ಮೆ ಹಗುರವಾದಂತಾಗಿತ್ತು. “ಈ ಜಗತ್ತಿನಲ್ಲಿ ಯಾರೂ ಮಾಡದ ತಪ್ಪು ನಾನೇನು ಮಾಡುತ್ತಿಲ್ಲ. ಎಲ್ಲರೂ ಬಯಸುವಂಥದ್ದೇ ನಾನು ಬಯಸಿರಬಹುದು” ಎಂದು ಬಲವಾಗಿ ನಂಬಿದನು. ಅವಳಿಗೆ ಹೇಳಿದ ಸುಳ್ಳೊಂದು £ಜ ಮಾಡಿ ತೋರಿಸುವ ಛಲ ಅವನೊಳಗಿತ್ತು. ಅವಳಿಂದ ಸಿಗುವ ಸುಖ, ನೆಮ್ಮದಿಯನ್ನು ಯಾಕೆ ಬಿಡಬೇಕು ಎಂಬ ಭಂಡ £ಲುವಿನ ದೃಢ ನಿರ್ಧಾರಕ್ಕೆ ಬಂದು ಬಿಟ್ಟನು.

ಆ ಪುಸ್ತಕದ ಹುಡುಕಾಟದಲ್ಲಿ ಒಂದು ದಿನವೇ ಕಳೆದು ಹೋಗಿತ್ತು. ಕೊನೆಗೂ ಒಂದಿನ ಗ್ರಂಥಾಲಯದಲ್ಲಿ ಅದು ಸಿಕ್ಕಿತು. ಒಂದು ವಾರದಲ್ಲಿ ಅವಳು ಹತ್ತು ಬಾರಿಯಾದರೂ ಕೇಳಿರಬೇಕು. “ಓ ಅಂಧೇರಾ ಕಿತಾಬ್ ಮಿಲಾ ಕ್ಯಾ?” ಎಂದು. ಘೋಷಾ ಪದ್ಧತಿಯ ದಿಗ್ಭಂಧನದಲ್ಲೂ ಅವಳು ಆತನೊಂದಿಗೆ ಇಟ್ಟುಕೊಂಡ ಸಲುಗೆ ಕೂಡ ಅವನ ಆಸೆಗೆ ಪ್ರೇರಣೆ ಕೊಟ್ಟಿರಬಹುದು.

ಅವನ ಮದುವೆಯಾಗಿ ನಾಲ್ಕು ವರ್ಷಗಳೇ ಕಳೆದಿದ್ದವು. ಆ ಹಿನ್ನೆಲೆಯ ಸಂದರ್ಭದಲ್ಲಿ ಗಂಡ-ಹೆಂಡತಿ ಇಬ್ಬರೂ ಅನ್ಯೂನ್ಯವಾಗಿ ಬದುಕುತ್ತ, ಅಲೆಮಾರಿ ಜೀವನ ನಡೆಸಿದ್ದರು. ಕೆಲವೆಡೆ ಹೊಟ್ಟೆ ಪಾಡಿಗಾಗಿ ಸಂಸಾರ ಹೂಡಿದರು. ಅವರ ಸುಖ ದಾಂಪತ್ಯ ಜೀವನದಲ್ಲಿ ಒಬ್ಬ ಮಗನೂ ಹುಟ್ಟಿ ಬಂದನು. ಈ ಒಂದು ಸಂತೋಷದಲ್ಲಿ ಇರುವಾಗಲೇ....ಹೆಂಡತಿ ಎನಿಸಿಕೊಂಡವಳು ಒಂದೇ ಹೇರಿಗೆಯಲ್ಲಿ ವಯಸ್ಸಾದ ಮುದಕಿಯಂತೆ ನರಳುತ್ತಾ, ಗಂಡನ ದೇಹ ಸುಖ, ಸಂಪರ್ಕದಿಂದ ದೂರವೇ ಉಳಿದು ಬಿಟ್ಟಿದ್ದಳು.

ಯೌವ್ವನದ ಸಹಜ ಆಸೆಗಳು ಚಿಗುರುವ ಹೊತ್ತಿಗೆ ಅವನನ್ನು ಹೆಂಡತಿ ತಿರಸ್ಕಾರ ಬಾವದಿಂದ ನೋಡುತ್ತಿದ್ದಳು. ವರ್ಷದಲ್ಲಿ ಹತ್ತಾರು ತಿಂಗಳುಗಳವರೆಗೆ ತವರು ಮನೆಯನ್ನೇ ನೆಚ್ಚಿಕೊಂಡು ಉಳಿದು ಬಿಡುತಿದ್ದಳು. ಕಾರಣ? ಸದಾ ಅವಳು ಒಂದಿಲ್ಲೊಂದು ಜ್ವರದಲ್ಲಿ ಬಳಲುತ್ತಿದ್ದಳು.

“ನನ್ನ ಹೆಂಡತಿ ಯಾವುದೇ ಪರಿಸ್ಥಿತಿಯಲ್ಲಿ ಇದ್ದರೂ ತಂದು ಬಿಡಿ. ಅವಳ ಯೋಗಕ್ಷೇಮ ನಾನೇ ನೋಡ್ಕೊಳ್ತಿನಿ. ಅವಳಿಲ್ಲದ ಜೀವನ ನನಗೆ ಶೂನ್ಯವಾಗಿ ಬಿಟ್ಟಿದೆ” ಎಂದೆಲ್ಲ ಒಂದಿನ ಅತ್ತೆ ಮಾವನಿಗೆ ಮೊಬೈಲ್ ಪೋನಿನಲ್ಲಿ ತೋಡಿಕೊಂಡಿದನು. ಆದರೆ ಪ್ರಯೋಜನವಾಗಲಿಲ್ಲ.

ಮಗಳು ಎಂಬ ಮಮಕಾರದಲ್ಲಿ ಅಳಿಯನಿಗೆ ಒಂದಿಷ್ಟೂ ಗೌರವವನ್ನು ಕೊಡದೇ ಅವನ ಹೆಂಡತಿಯ ತವರು ಮನೆಯವರು ಹೀನಾಯವಾಗಿ ಮಾತಾಡಿದರು. “ನಮ್ಮ ಮಗಳ ಜ್ವರ ವಾಸಿ ಆಗುವವರೆಗೆ ಕಳಿಸುವುದಿಲ್ಲ. ನಿನ್ನಲ್ಲಿ ಜೋರ್ ಇದ್ದಿದ್ರೆ ಇಲ್ಲಿಗ್ಯಾಕ್ ಕಳ್ಸಬೇಕಾಗಿತ್ತು. ಎಂದೆಲ್ಲಾ ಮಾತಾಡಿದ್ದರು. ‘ಜೋರ್’ ಎಂಬ ಪದವೊಂದೇ ಅವನ ಗಂಡಸುತನಕ್ಕೆ ಸವಾಲ್ ಹಾಕಿದಂತಾಗಿತ್ತು. ಅವರ ಮಾತುಗಳಿಂದ ಅವನ ಮನಸ್ಸಿಗೆ ನೋವುಂಟು ಮಾಡಿತ್ತಲ್ಲದೇ, ಅವನ ಶಕ್ತಿ-ಸಾಮಥ್ರ್ಯಕ್ಕೆ ಅಣಕಿಸುವಂತಿತ್ತು. ಆ ರೀತಿ ಮಾತಾಡಿದ್ದರಿಂದ ಅವನು ತೀರಾ ತಲೆ ಕೆಡಿಸಿಕೊಂಡಿದನು.

ಹೆಂಡತಿಯಿಲ್ಲದ ಸಮಯದಲ್ಲಿ ಮಾನಸಿಕವಾಗಿ ಬಳಲುತಿದ್ದನು. ಇಲ್ಲ ಸಲ್ಲದ ವಿಚಾರಗಳನ್ನೆಲ್ಲ ಮಾಡಿದನು. ಹೆಂಡತಿಯ ಸಾಮಿಪ್ಯವನ್ನು ಮರೆಯುವದಕ್ಕೋಸ್ಕರ ಆ ಪುಸ್ತಕದ ನೆಪ ಮಾಡಿಕೊಂಡು ಅವನ ಮನಸ್ಸೆಲ್ಲ ಆ ಚೆಲುವೆಯ ಜಪದಲ್ಲಿಯೇ ಬಂಧಿಯಾಗಿತ್ತು.

ಅವಳ ಮೋಹದ ಸೆಳೆತಕೊಳಗಾಗಿ ಹೆಂಡತಿಯ ಪ್ರೀತಿಗೆ ದ್ರೋಹ ಮಾಡುತ್ತಿರಬಹುದೆ? ಎಂದುಕೊಳ್ಳುತ್ತಾ ಕೆಲವೊಮ್ಮೆ ತೀರಾ ಯೋಚಿಸುತ್ತಿದ್ದನು. “ಹೆಂಡತಿಯಾದವಳು ನನ್ನ ಪ್ರೀತಿಗೆ ಧಿಕ್ಕರಿಸಿ, ಅವಳ ಮೇಲೆ ನಾನಿಟ್ಟಿರುವ ಲಕ್ಷ್ಯವನ್ನು ಅಲಕ್ಷಿಸಿ ತವರು ಮನೆಯಲ್ಲಿ ಕುಳಿತಿದ್ದಾಳಲ್ಲ. ಅದು ದ್ರೋಹ ಅಲ್ಲವಾ?” ಹೀಗೆ ಅವನೊಳಗೊಬ್ಬ ಬೆಂಬಲಿಗ ಇದ್ದಂತೆ ಅವನ ವಿಚಾರಗಳಿಗೆ ಸ್ಫೂರ್ತಿ ಕೊಡುತಿದ್ದವು. ಅದಕ್ಕಾಗಿ ತಾನು ಮಾಡುತ್ತಿರುವುದು ಯಾವುದೂ ತಪ್ಪೆನಿಸಲಿಲ್ಲ ಅವನಿಗೆ.

ಅವನು ತನ್ನ ಹೆಂಡತಿಯೆದುರಿಗೊಮ್ಮ ಆತ್ಮ ನಿವೇದನೆ ಮಾಡಿಕೊಂಡಿದನು. “ನೋಡೆ, ನಮ್ಮಲ್ಲಿ ಹಣ, ಆಸ್ತಿ, ಅಂತಸ್ತು ಇಲ್ಲದಿದ್ದರೇನು. ದುಡಿಯುವ ಛಲ ಇದೆ. ಬದುಕುವ ಆಸೆ ಇದೆ. ಈ ಸಮಾಜದಲ್ಲಿ ಒಂದು ಸ್ಥಾನಮಾನ ಎಂಬುದಿದೆ. ನನ್ನದೇ ಆದಂಥ ಕೆಲವು ಕನಸುಗಳು ನನ್ನೆದೆಯ ಬೆಚ್ಚನೆಯ ಗೂಡಿನಲ್ಲಿ ಇಟ್ಟುಕೊಂಡಿದ್ದೇನೆ. ಸೃಜನಶೀಲ ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದೇನೆ. ನನ್ನಿಂದ ನೀನು ದೂರ ಉಳಿದರೆ? ನನ್ನ ಯಾವುದೇ ಸಾಧನೆಗೆ ಸ್ಫೂರ್ತಿ ಎಲ್ಲಿಂದ ಬರುತ್ತೆ. ನೀ£ಲ್ಲದ ಮೇಲೆ ನಾನಾಗಿ ಎಲ್ಲವನ್ನು ತ್ಯಜಿಸಿ, ಯಾರಿಗೂ ಸಿಗದಂತಾಗಿ ಬಿಡುತ್ತೇನೆ. ನನ್ನನ್ನು ಕಳೆದುಕೊಂಡ ಬಳಿಕ ಪರಿತಪಿಸುವುದು ಬೇಡ. ಯಾವುದಕ್ಕೂ ಸರಿಯಾಗಿ ಯೋಚಿಸು. ನಂತರ ನಾನು ಬೇಡವಾದರೆ ನಿನ್ನ ತವರು ಮನೆಗೆ ಹೋಗು” ಎಂದು ಹೆಂಡತಿಯ ಮೇಲಿನ ಪ್ರೀತಿಗಾಗಿ ಎಚ್ಚರಿಸಿದನು.

ಅವನ ಅಂತರಾತ್ಮದ ನಿವೇದನೆಗೆ ಹೆಂಡತಿಯ ಪಾಲಿಗೆ £ೀರಸವೆ£ಸಿದವು. ಅವಳೆದುರಿಗೆ ಪರಿಪರಿಯಾಗಿ ಬೇಡಿಕೊಂಡಿದ್ದರೂ ಹಠಮಾರಿ ಸ್ವಭಾವದ ಹೆಂಡತಿ “ತವರು ಮನೆಯಲ್ಲಿಯೇ ಉಳಿದು ಚಿಕಿತ್ಸೆ ಪಡೆಯುತ್ತೇನೆ. ಸಂಪೂರ್ಣ ಜ್ವರ ವಾಸಿಯಾದ್ಮೇಲೆ ಬರೋದು” ಎಂದು ಖಡಾಖಂಡಿತವಾಗಿ ನುಡಿದಿದ್ದಳು. ಗಂಡನ ಮನಸ್ಸನ್ನು ಅರ್ಥೈಸಿಕೊಳ್ಳಲಿಲ್ಲ ಎಂದುಕೊಂಡ ಅವನು. ಸಂಸಾರ ನಡೆಸಲು ತಾನು ಕೈಲಾಗದವನು ಎಂದು ತಿಳಿದು ಹೋಗಿರಬಹುದೆ? ಎನ್ನುತ್ತ, ಅವನು ಹೆಂಡತಿಯ ನೆನಪಲ್ಲೇ ಒಳಗೊಳಗೆ ಕೊರಗುತಿದ್ದನು. ಹೆಂಡತಿ ಮಾತ್ರ ತವರು ಮನೆಗೆ ಹೋಗಿಯೇ ಬಿಟ್ಟಿದ್ದಳು.

ಹೆಂಡತಿ ಹೋಗಿ ತಿಂಗಳುಗಳೇ ಕಳೆದವು. ಜ್ವರ ಇನ್ನು ವಾಸಿಯಾಗಿಲ್ಲ ಎಂಬ ಇತ್ಯಾದಿ ವರದಿಗಳು ಮೊಬೈಲ್ ಪೋನಿ£ಂದಲೇ ತಿಳಿದು ಬರುತಿತ್ತು. ಹೆಂಡತಿಯ ಮೇಲಿನ ಅಪಾರ ಪ್ರೀತಿ, ಮಗನ ರೂಪದಲ್ಲಿ ಬಂದಿರುವ ಹೊಸ ಅತಿಥಿಯ ಮೇಲಿಟ್ಟ ಅಕ್ಕರೆ, ಒಂಟಿತನದಲ್ಲಿ ಆತ ಅನುಭವಿಸುತ್ತಿದ್ದುದನ್ನು ಯಾರಲ್ಲಿಯೂ ಹೇಳಿಕೊಂಡಿರಲಿಲ್ಲ. ಹೀಗೆ ದಿನಗಳುರುಳಿದವು. ಒಂದಿನ ಕುಡಿತಕ್ಕೆ ಒಳಗಾಗಿ ಆ ಮತ್ತಿನಲ್ಲಿ ಹೆಂಡತಿಯ ತವರು ಮನೆಗೆ ಫೋನ್‍ಕಾಲ್ ಮಾಡಿದನು.

ಪೋನಿನ ಸಂಭಾಷಣೆಯಲ್ಲಿ ಮಾತಿಗೆ ಮಾತು ಬೆಳೆಯಿತು. ಅಲ್ಲೊಂದು ಚಿಕ್ಕದಾದ ಸಮರವೇ ನಡೆದು ಹೋಗಿತ್ತು. ಅತ್ತೆ ಮಾವನ ಮನೆಯವರಿಗೂ ಅವನಿಗೂ ಮನಸ್ತಾಪ ಹುಟ್ಟಿತು. ಅವನ ವಿಚಾರಗಳಿಗೂ ಅವರ ಮಾತುಗಳಿಗೂ ಹೋಲಿಕೆಯಾಗದೆ, ಸಂಬಂಧ ವಿಚ್ಛೇದನದವರೆಗೂ ಬಂದು ಮುಟ್ಟಿತು.

ಸಧ್ಯಕ್ಕೆ ಹೆಂಡತಿ ಮರಳಿ ಗಂಡನ ಮನೆಗೆ ಬರುವುದಕ್ಕೆ ನಿರಾಕರಿಸಿದಳು. ಅವನು ಕೆಲವು ದಿವಸಗಳ ಕಾಲಾವಕಾಶ ಮತ್ತೆ ಮತ್ತೆ £ೀಡಿದನು. “ಬರದಿದ್ದರೇ....ನೋಡು” ಎಂಬ ಉದ್ಗಾರದಲ್ಲಿ ಎಚ್ಚರಿಸಿದನು. ಕೋಪದಲ್ಲಿ ಪೋನ್ ಸಂಪರ್ಕ ಅವನಾಗಿಯೇ ಕಡಿದನು. ಗಂಡನ ಆಜ್ಞೆಯನ್ನು ಪಾಲಿಸದ ಹೆಂಡತಿ ಅವನು ನೀಡಿರುವ ಕಾಲಾವಕಾಶಕ್ಕೆ ಮೀರಿದಳು. ಕಾರಣ ಅವಳು ಕೂಡಾ ಅವನಷ್ಟೇ ಹಠದಿಂದ ತವರು ಮನೆಯಲ್ಲಿಯೇ ಉಳಿದಿದ್ದಳು.

ಇನ್ನೇನು....!? ಹೆಂಡತಿ ಬರುವುದೇ ಇಲ್ಲ ಎಂದು ಭಾವಿಸಿದ ಲೇಖಕ ಮಹಾಶಯ. ಒಂದು ವೇಳೆ ಬಂದರೂ ವಿಚ್ಛೇದನ ಪತ್ರಕ್ಕೆ ಸಹಿ ಹಾಕಲು ಬರಬೇಕಷ್ಟೇ ಎಂದುಕೊಂಡನು. ಹೆಂಡತಿಯ ನೆನಪುಗಳು ಮರೆಯುವದಕ್ಕೆ ಸಜ್ಜಾದನು. “ಹೇಗಾದರೂ ಮಾಡಿ ಪುಸ್ತಕದ ನೆಪದಲ್ಲಿ ಇವಳನ್ನಾದರೂ ಒಲಿಸಿಕೊಳ್ಳಬೇಕು” ಎಂಬ ಹಟ. ಅವನಲ್ಲಿ ಬೇರು ಬಿಟ್ಟಿತು. ಅದು ತರ್ಜುಮೆ ಮಾಡಿ ಕೊಡುವವಳ ಅಮತರಂಗದಲ್ಲೂ ಆಸೆ ರಹಸ್ಯವಾಗಿಯೇ ಬಚ್ಚಿಟ್ಟುಕೊಂಡಿದ್ದಳು. ಅವನ ವೇದನೆ ಏನೆಂಬುದನ್ನು ಸ್ಪಷ್ಟವಾಗಿ ಅರಿತುಕೊಂಡಿದ್ದಳು.
ಆ ಮೂರು ನಿಮಿಷ, ನೂರು ಕ್ಷಣದ ಸುಖಕ್ಕಾಗಿ ಇಬ್ಬರು ಹಾತೊರೆಯುತ್ತಿದ್ದರು. ಇದಕ್ಕಾಗಿ ಅವನು ಬಾಳ ಸಂಗಾತಿಗೆ ಬಿಟ್ಟು ಬಿಡಲು ಸಿದ್ಧನಾಗಿದ್ದ. ಅವಳು ಧರ್ಮವನ್ನು. ಅವನನ್ನು ಹತ್ತಿರದಿಂದ ಕಂಡು ಪುಳಕಿತಗೊಂಡಿದ್ದಳು. ಅವನಷ್ಟೇ ಕಾತುರ, ಕುತೂಹಲ, ಬಿಡುಗಡೆಯ ಭಾವ ಸ್ಪಂಧನಕ್ಕಾಗಿ ಎದುರು ನೋಡುತಿದ್ದಳು. ಅವಳೊಳಗಿನ ಬಯಕೆಗಳು ಬಯಲಿಗೆ ಬಾರದಿದ್ದರೂ, ಕಣ್ಣ ಭಾಷೆಯಲ್ಲಿಯೇ ಕಾಮದ ಹಸಿವು ಎದ್ದು ಕಾಣುತಿತ್ತು.

ಅಂತಹ ಒಂದು ಸಮಯ ಬಂದೇ ಬಿಟ್ಟಿತು. ಅವನ ಮನೆಯ ಹಿಂಬದಿಯ ಬಾಗಿಲಲ್ಲಿ ನಿಂತಿರುವ ಹೆಣ್ಣಿನ ಬೆತ್ತಲೆ £ಚ್ಚಳವಾದ ಆಕೃತಿಯೊಂದು ಅವನಿದ್ದ ರೂಮಿನೊಳಗೆ ಯಾವ ಹಂಗಿಲ್ಲದೆ ಪ್ರವೇಶಿಸಿತು.

ಈಗ ಅಲ್ಲಿ ನಾಲ್ಕು ಗೋಡೆ, ನಾಲ್ಕು ಕಣ್ಣುಗಳ ಮಧ್ಯೆ ಯಾವುದೇ ಪರದೆಗಳಿರಲಿಲ್ಲ. ಆ ಪುಸ್ತಕದ ನೆಪದಲ್ಲಿ ಅಡಗಿದ ಕಾವ್ಯ ಶೈಲಿಯ ಗಜಲ್‍ಗಳ ಸಾಲುಗಳು ಒಂದೊಂದಾಗಿ ಅವಳು ತನ್ನ ಅಂಗಸ್ಪರ್ಶದಿಂದ ತರ್ಜುಮೆ ಮಾಡಿಕೊಡುತ್ತಿದ್ದಳು.

ಭಾಷೆ ಬದಲಾವಣೆಯ ನೆಪದಲ್ಲಿ ಎರಡೂ ದೇಹಗಳ ಸಂಮ್ಮಿಲನ! ಸ್ವರ್ಗಕ್ಕೆ ಕಿಚ್ಚಿಟ್ಟಿತು. ಹಾವು ಏಣಿ ಆಟದಂತೆ ಅವರಿಬ್ಬರ ಮಧ್ಯೆ ಸ್ಪರ್ಧೆ! ಬಿರುಸಾಗಿಯೇ ನಡೆದಿತ್ತು. ಯಾರೋ ಬಾಗಿಲು ಬಡಿದ ಸದ್ದು!? ಅವನ ಹೆಂಡತಿಯ ಧ್ವನಿ ಹೊರಗಿ£ಂದ ಅಸ್ಪಷ್ಟವಾಗಿ ಕೇಳಿಸಿತು. ಒಳಗೆ ಎರಡೂ ದೇಹಗಳ ಸ್ಪರ್ಶದಿಂದ ಭಾಷೆಗಳ ತರ್ಜುಮೆ ನಡೆದಿತ್ತು. ಹೊರಗೆ ಕೂಗು, ಕಿರುಚಾಟ ಪ್ರತಿಭಟನೆಯ ರೂಪ ತಾಳಿತು.

                ***

ಶುಕ್ರವಾರ, ಜನವರಿ 4, 2013

ನೈತಿಕತೆ ಇಲ್ಲದ ರಾಜಕಾರಣಃ ಖೂಬಾ ಆರೋಪ

ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಯುವ ಕಾಯಾ೯ಧ್ಯಕ್ಷ ಮಲ್ಲಿಕಾಜು೯ನ ಖೂಬಾ
ನೈತಿಕತೆ ಇಲ್ಲದ ರಾಜಕಾರಣಃ ಜ. 17ರಿಂದ ಜೆಡಿಎಸ್್ ಪಕ್ಷದಲ್ಲಿ ಸೇಪ೯ಡೆಃ ಪದಾಧಿಕಾರಿಗಳ ನೇಮಕಃ ಖೂಬಾ ಸ್ಪಷ್ಟನೆ
------------------------------------------
ಬಸವಕಲ್ಯಾಣ, ಜ.3,2013

ತಾಲೂಕಿನ ಸಾವಿರಾರು ಮತದಾರರ ಅಭಿಪ್ರಾಯವಾಗಲಿ, ಪ್ರಾಮಾಣಿಕ ಬಿಜೆಪಿ ಕಾಯ೯ಕತ೯ರ ವಿರುದ್ಧ ರಾಜಿನಾಮೆ ನೀಡಿ ಕೆ
ಜೆಪಿ ಸೇಪ೯ಡೆಗೂಂಡಿರುವ ಶಾಸಕ ಬಸವರಾಜ ಪಾಟೀಲ ಅಟ್ಟೂರ್್ ಅವರು ನೈತಿಕತೆ ಇಲ್ಲದ ರಾಜಕಾರಣ ಮಾಡುತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್್ ರಾಜ್ಯ ಯುವ ಕಾಯಾ೯ಧ್ಯಕ್ಷ ಮಲ್ಲಿಕಾಜು೯ನ ಖೂಬಾ ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಕಳೆದ 2008ರಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಸಾವಿರಾರು ಮತಗಳ ಅಂತರದಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿ, ಇನ್ನೂ ಸೇವಾವಧಿ ಇರುವ ಮುನ್ನವೇ ದುಡ್ಡಿನಾಸೆ ಮತ್ತು ಅಧಿಕಾರಕ್ಕಾಗಿ ಮತದಾರರ ಭಾವನೆಗಳಿಗೆ ಕೆಣಕಿದ್ದಾರೆ ಎಂದು ಖೂಬಾ ಟೀಕಿಸಿದ್ದಾರೆ.

ಮತದಾರರು ಅವರ ಮೇಲಿಟ್ಟಿರುವ ವಿಶ್ವಾಸಕ್ಕೆ ದ್ರೋಹ ಬಗೆದು, ಅಟ್ಟೂರ್್ ಅವರು ಇತ್ತೀಚಿಗೆ ಬಂಗ್ಲಾದ ಮಹಾದ್ವಾರದಲ್ಲಿನ ವಿಶ್ವಗುರು ಬಸವಣ್ಣನವರ ಮೂತಿ೯ ಅನಾವರಣ ಯಾರಿಗೂ ಗೊತ್ತಿಲ್ಲದಂತೆ, ಆಹ್ವಾನ ಪತ್ರಿಕೆಯೂ ಕಳುಹಿಸದೇ, ಕ್ಷೇತ್ರದ ಪ್ರತಿನಿಧಿಗಳಿಗೂ ಜಿಲ್ಲಾ ಸಂಸದ ಹಾಗೂ ಎಲ್ಲಾ ಶರಣರ ಭಕ್ತರಿಗೆ ಮಾಹಿತಿಯಿಲ್ಲದೇ ಉದ್ಘಾಟಿಸಿರುವುದಕ್ಕೆ ಬೇಸರಿಸಿದ್ದಾರೆ.

ಶಾಸಕ ಸ್ಥಾನಕ್ಕೆ ಅಟ್ಟೂರ್್ ರಾಜಿನಾಮೆ ನೀಡಿದ್ದಕ್ಕೆ ಸ್ವಾಗತಿಸಿದ ಖೂಬಾರವರು, ಬಿಜೆಪಿ ಸಕಾ೯ರದಲ್ಲಿದ್ದಾಗ ಬಸವಕಲ್ಯಾಣ ಅಭಿವೖದ್ಧಿಗೆ ಬಿ.ಎಸ್್.ಯಡಿಯೂರಪ್ಪನವರು ನೀಡಿದ 100 ಕೋಟಿ ರುಪಾಯಿ ಭರವಸೆ ಎಲ್ಲಿ ಹೋಯಿತು. ಮಾತಿನಂತೆ ನಡೆದುಕೊಳ್ಳದೇ ಕೇವಲ 16 ಕೋಟಿ ನೀಡಿದ್ದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಅಧಿಕಾರದಲ್ಲಿದ್ದಾಗ ಬಸವಣ್ಣನವರು ನೆನಪಾಗುವುದಿಲ್ಲ. ಅಧಿಕಾರ ಕಳಚಿಕೊಂಡಾದ ಮೇಲೆ ವಿಶ್ವಗುರು ಬಸವಣ್ಣನವರು ನೆನಪಾಗುವುದಲ್ಲದೇ, ಇಲ್ಲಿಂದಲೇ ಪಾದಯಾತ್ರೆ, ಪ್ರಚಾರ ಸಭೆ ಹಮ್ಮಿಕೊಳ್ಳುವುದು ಬಿಎಸ್್ಆರ್್, ಕೆಜೆಪಿ ಸೇರಿದಂತೆ ಕಾಂಗ್ರೇಸ್್ನವರು ಕೂಡ ಇಲ್ಲಿಂದಲೇ ಪ್ರಚಾರ ಕೈಗೊಳ್ಳಲು ನಿಧ೯ರಿಸಿರುವುದು ಹಾಸ್ಯಾಸ್ಪದವಾಗಿದೆ ಎಂದು ತಿಳಿಸಿದ್ದಾರೆ.

ಕ್ಷೇತ್ರದ 41 ಹಳ್ಳಿಗಳಿಗೆ ಭೇಟಿ ನೀಡದೇ ಜನರ ಸಮಸ್ಯೆಗಳಿಗೆ ಸ್ಪಂಧಿಸದೇ ಕಾಲಹರಣದ ರಾಜಕಾರಣ ಮಾಡುತಿದ್ದಾರೆ. ಅಪೂಣ೯ವಾಗುಳಿದ ತಾಲೂಕಿನ ಅಭಿವೖದ್ಧಿಯ ಹಲವು ಕಾಮಗಾರಿಗಳ ಕಡೆ ಗಮನ ಹರಿಸದೇ ಚುನಾವಣೆಯ ಕನಸು ಕಾಣುತ್ತಿರುವವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಬಿಜೆಪಿ ಸಕಾ೯ರವಿದ್ದಾಗ ಮಾಜಿ ಶಾಸಕ ಎಂ.ಜಿ.ಮುಳೆ ಅದೇ ಪಕ್ಷದಲ್ಲಿದ್ದಾಗ ಮುಸ್ಲಿಂರ ಬಗ್ಗೆ ಕಿಂಚಿತ್ತೂ ಕಾಳಜಿ ಹೊಂದಿರಲಿಲ್ಲ. ಬಿಎಸ್್ಆರ್್ ಸೇರಿದ ಕೂಡಲೇ ಮುಸ್ಲಿಂರ ಬಗ್ಗೆ ತೋರುತ್ತಿರುವ ಆಸಕ್ತಿ ಮತ್ತು ಆಟೋ ನಗರದಲ್ಲಿ ಶ್ರೀರಾಮುಲು ಕೊಟ್ಟಿರುವ ಹಣದಲ್ಲಿ ರಸ್ತೆ ನಿಮಾ೯ಣ ಕೈಗೊಂಡಿರುವುದು ಜನರ ಕಣ್ಣೀರೊರೆಸುವ ತಂತ್ರವಾಗಿದೆ ಎಂದು ದೂರಿದ್ದಾರೆ.

ತಾಲೂಕಿನ ಮುಂತಾದ ಹಳ್ಳಿಗಳಲ್ಲಿನ ರಸ್ತೆ, ಚಂರಂಡಿಗಳ ದುರಸ್ಥಿ ಮಾಡಿಕೊಳ್ಳಲಿಚ್ಛಿಸುವರು ಮುಳೆಯವರ ಬಳಿ ಹೋಗಲಿ, ಆಗ ಸಕಾ೯ರದಿಂದ ಹಣ ತಂದು ಕೆಲಸ ಮಾಡಲು ಸಮಯ ಇರಲಿಲ್ಲ. ಇದೀಗ ಚುನಾವಣೆ ಹತ್ತಿರವಾಗುತಿದ್ದಂತೆ ಬಿಎಸ್್ಆರ್್ ಹಣದಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ಗ್ರಾಮಸ್ಥರು ಇದರ ಸದುಪಯೋಗ ಮಾಡಿಕೊಳ್ಳಲಿ ಎಂದು ಸೂಚಿಸಿದ್ದಾರೆ.

ತಾಲೂಕಾ ಮತದಾರರು ಅಭಿವೖದ್ಧಿ ಚಿಂತನೆಯುಳ್ಳ ಜನನಾಯಕರ ಹುಡುಕಾಟದಲ್ಲಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸೂಕ್ತ ಅಭ್ಯಥಿ೯ಯನ್ನೇ ಆಯ್ಕೆ ಮಾಡಲಿದ್ದು, ಅದರ ಬಗ್ಗೆ ಮಾಜಿಗಳು ತಲೆ ಕೆಡಿಸಿಕೊಳ್ಳಬೇಕಿಲ್ಲ. 7 ತಿಂಗಳಿನಿಂದ ಮಾತ್ರ ಬಸವಕಲ್ಯಾಣ ಕ್ಷೇತ್ರ ಇದೆ ಎಂಬುದನ್ನು ಕಾಂಗ್ರೆಸ್್, ಕೆಜೆಪಿ, ಬಿಎಸ್್ಆರ್್ನವರಿಗೆ ಅರಿವಾಗುತ್ತಿದೆಯೆ ಎಂದು ವ್ಯಂಗ್ಯವಾಡಿದ್ದಾರೆ.

ಜೆಡಿಎಸ್್ ಪಕ್ಷದಿಂದ ತಾಲೂಕಿನಲ್ಲಿ ಈಗಾಗಲೇ 28 ಸಾವಿರ ಸದಸ್ಯತ್ವ ಮಾಡಿದ್ದೇವೆ. ಇದೇ ಜ.17ರಿಂದ ಜೆಡಿಎಸ್್ ಪಕ್ಷಕ್ಕೆ ಸೇಪ೯ಡೆ ಕಾಯ೯ಕ್ರಮ ಮತ್ತು ಪದಾಧಿಕಾರಿಗಳ ನೇಮಕ ನಡೆಸಲಾಗುತ್ತಿದೆ. ಜೆಡಿಎಸ್್, ಬಿಎಸ್್ಆರ್್, ಕೆಜೆಪಿ ಪ್ರಾದೇಶಿಕ ಪಕ್ಷವಾದರೂ ನಾವು ಈಗಾಗಲೇ 4 ಬಾರಿ ಚುನಾವಣೆ ಎದುರಿಸಿದ್ದೇವೆ ಎಂದು ತಿಳಿಸಿದ ಅವರು, ನಮ್ಮ ಸತ್ವ ಪರೀಕ್ಷೆ ಕಾಲ ಮುಗಿದಿದೆ. ಮತದಾರರು ನೀಡುವ ನಿಣ೯ಯದಂತೆ ಚುನಾವಣೆಯೆಂಬ ಸತ್ವ ಪರೀಕ್ಷೆಯಲ್ಲಿ ಉಳಿದ ಪ್ರಾದೇಶಿಕ ಪಕ್ಷದವರು ಗೆದ್ದು ಬರಲಿ ನೋಡೋಣ ಎಂದು ಸವಾಲೆಸೆದಿದ್ದಾರೆ.