ಸೋಮವಾರ, ಮಾರ್ಚ್ 18, 2013

ಯುವ ಉತ್ಸಾಹಿ ಸಕ್ರೀಯ ರಾಜಕಾರಣಿ ಸೂರ್ಯಕಾಂತ ಚಿಲ್ಲಾಬಟ್ಟೆ


                                                (ರಾಜಕೀಯ ಪ್ರತಿಭಾನ್ವೇಷಣೆ)

ಸೂರ್ಯಕಾಂತ ಚಿಲ್ಲಾಬಟ್ಟೆ
ಲೇಖಕರು: ವಿ.ಎಚ್.ವೀರಣ್ಣ ಮಂಠಾಳಕರ್
ಮೂಲ ವಕೀಲ ವೃತ್ತಿಯನ್ನು ಪ್ರಾರಂಭಿಸಿ ರಾಜಕೀಯ ಕ್ಷೇತ್ರದೆಡೆ ವಿಶೇಷ ಆಸಕ್ತಿ ತೋರಿರುವ ಸೂರ್ಯಕಾಂತ ಚಿಲ್ಲಾಬಟ್ಟೆ ಅವರು ಯುವ ಉತ್ಸಾಹಿಯಾಗಿ ಸಣ್ಣ ವಯಸ್ಸಿನಲ್ಲಿಯೇ ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿ ಪಕ್ಷದಿಂದ ಏಕೈಕ ನಗರ ಸಭೆ ಸದಸ್ಯರಾಗಿ ಆಯ್ಕೆಗೊಂಡಿರುವ ಇವರು ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಲೆ ಅನೇಕ ರಾಜಕೀಯ ಮುಖಂಡರೊಂದಿಗೆ ಗುರುತಿಸಿಕೊಂಡಿರುವ ಚಿಲ್ಲಾಬಟ್ಟೆ ಚಿಲ್ಲರೆ ರಾಜಕೀಯವನ್ನು ಮಾಡದೇ ಜನಪರವಾದ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತಿದ್ದಾರೆ.

ಈ ಎಲ್ಲಾ ಹಿನ್ನೆಲೆಯ ಅನುಭವದಿಂದ ತಮ್ಮನ್ನು ತಾವು ಸಕ್ರೀಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ನಗರ ಸಭೆಯ ಸದಸ್ಯರಾಗಿಯೂ ಕಾರ್ಯಪ್ರವೃತ್ತರಾಗಿದ್ದಾರೆ. ಭಾಜಪ ನಗರ ಘಟಕದ ಅಧ್ಯಕ್ಷರಾಗಿ ಮತ್ತೆ ಸಲ್ಲಿಸುತ್ತಿರುವ ಇವರ ಸೇವೆ ಅನನ್ಯವಾದದ್ದು. ಸಂಘಟನಾಪರ ಚತುರರಾಗಿ ಬಿಎಎಲ್‍ಎಲ್‍ಬಿ ಪದವಿಧರರಾಗಿ, ರಾಜಕೀಯ ಪ್ರವೇಶಕ್ಕಿಂತ ಮುಂಚೆ ವಕೀಲರಾಗಿ ಸೇವೆ ಸಲ್ಲಿಸುತಿದ್ದಾರೆ. ನಂತರದ ದಿನಗಳಲ್ಲಿ ರಾಜಕೀಯವೆಂಬುದು ಇವರ ವ್ಯಕ್ತಿತ್ವಗನುಗುಣವಾಗಿ ಒಲಿದು ಬಂದಿದೆ.

ಬಸವಕಲ್ಯಾಣ ತಾಲೂಕಿನ ಬೇಲೂರು ಎಂಬ ಗ್ರಾಮದಿಂದ ಬಂದಿರುವ ಚಿಲ್ಲಾಬಟ್ಟೆಯವರು ಶಿಕ್ಷಣ ಸಂಸ್ಥೆಗಳ ಹಲವು ಬಡ ಮಕ್ಕಳಿಗೆ ಉಚಿತವಾದ ಬಟ್ಟೆ, ವಿದ್ಯಾಭ್ಯಾಸ ಪೂರೈಕೆ ಮಾಡುವುದೆಂದರೆ ಎಲ್ಲಿಲ್ಲಸ ಖುಷಿಯನ್ನನುಭವಿಸುತ್ತಾರೆ. ಜನಪರ ಸೇವೆಗೆ ಎಲ್ಲಿದ್ದರೂ ಧಾವಿಸಿ ಬರುವ ಸರಳ ಸ್ವಭಾವದ ಸೌಮ್ಯ ವ್ಯಕ್ತಿತ್ವ ರೂಪಿಸಿಕೊಂಡಿರುವ ಅಪರೂಪದ ಯುವ ನಾಯಕನೆಂದರೆ ತಪ್ಪಾಗಲಾರದು.

ಬಸವಕಲ್ಯಾಣ ತಾಲೂಕಿನ ಅನೇಕ ಹಳ್ಳಿಗಳ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ನೇಗಿಲು ವಿತರಣೆ, ಬೆಳೆಗಳಿಗೆ ಮದ್ದು ಸಿಂಪಡಿಸುವ ಯಂತ್ರೋಪಕರಣಗಳು ದಾನವಾಗಿ ನೀಡುವುದರಿಂದ ಅದೇನೋ ತೃಪ್ತಿ ಭಾವವನ್ನು ಅನುಭವಿಸುತ್ತಾರೆ. ಬೀಜ ಬಿತ್ತನೆ, ಮುಂತಾದ ರೈತಪರ ಉಪಯೋಗಿ ಸಾಮಾಗ್ರಿಗಳು ಇಂದಿಗೂ ಕೊಡುತ್ತಲೇ ಬಂದಿದ್ದಾರೆ.
ಅನ್ನದಾತನ ಸೇವೆಯಿಂದ ಸಮೃದ್ಧ ಸಮಾಜ ನಿರ್ಮಾಣಕ್ಕೆ ಒಂದು ಪ್ರೇರಣೆ ಎಂಬ ಭಾವನೆ ಮೂಡಿಸಿಕೊಂಡಿರುವ ಇವರು, ಯಾವುದೇ ಹಬ್ಬ ಹರಿದಿನಗಳಲ್ಲಿ ಅನೇಕ ಬಡ ಮಹಿಳೆಯರಿಗೆ ಸೀರೆ ವಿತರಣೆ ಮಾಡುತ್ತ ಬಂದಿದ್ದಾರೆ.

ಜನಪರಯೋಗಿ, ಜನಪ್ರಿಯ ಕಾರ್ಯ ಯೋಜನೆಗಳನ್ನು ಹಾಕಿಕೊಂಡಿರುವ ಇವರು ಮಹತ್ವದ ಅಭಿವೃದ್ಧಿ ಕನಸಗಳನ್ನು ಹೊತ್ತಿರುವ ಚಿಲ್ಲಾಬಟ್ಟೆ ಒಂದು ಹೊಸ ಯುವಪಡೆಯೊಂದಿಗೆ ಮುಂದಡಿ ಇಡುತಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆ, ತಾಲೂಕಾ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಕಣದಲ್ಲಿದ್ದು ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಪಂಚಾಯತ್ ಚುನಾವಣೆ ಸೇರಿದಂತೆ ವಿಧಾನಸಭಾ ಚುನಾವಣೆಗಳಲ್ಲಿ ಸಹ ತಮ್ಮ ಪಕ್ಷದ ಅಭ್ಯರ್ಥಿಗಳು ಚುನಾವಣಾ ಸ್ಪರ್ಧಾ ಕಣದಲ್ಲಿದ್ದವರಿಗೆ ಸದಾ ಸಾಥ್ ನೀಡುತ್ತಲೇ ಬಂದು, ಅವರ ಗೆಲುವಿಗೆ ಪ್ರಮುಖ ಪಾತ್ರ ವಹಿಸಿರುವ ಅನೇಕ ಉದಾಹರಣೆಗಳಿವೆ.

ಇವರ ಸಹಕಾರದಿಂದ ಹಲವರು ಅಧಿಕಾರದ ಗದ್ದುಗೆಯನ್ನೇರಿದ್ದಾರೆ. ಮುಂಬರುವ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ನಾಯಕರಾಗಿ ಗುರುತಿಸಿಕೊಳ್ಳುವ ಸ್ವಭಾವಉಳ್ಳ ಸೂರ್ಯಕಾಂತ ಚಿಲ್ಲಾಬಟ್ಟೆ ಸದಾ ಪ್ರಕಾಶಿಸುವ ಸೂರ್ಯನಂತೆ. ಬಡವ, ಬಲ್ಲಿದ, ನೊಂದವರ ಜೀವನಕ್ಕೆ ಆಶ್ರಯವಾಗಿ, ಅಂಧಕಾರದ ಬದುಕನ್ನು ನಡೆಸುತ್ತಿರುವವರ ಪಾಲಿಗೆ ಸದಾ ಬೆಳಕನ್ನು ತೋರುವ ಲವಲವಿಕೆಯಿಂದ ಹತ್ತು ಹಲವು ಅಭಿವೃದ್ಧಿಪರ ಯೋಜನೆಗಳು ಇವರ ಚಿಂತನೆಗಳಾಗಿವೆ.

ಅನ್ಯಾಯಕ್ಕೆ ಸಿಡಿದೇಳುವ, ನ್ಯಾಯಕ್ಕೆ ಮೌನ ತಾಳುವ ಸೌಮ್ಯ ವ್ಯಕ್ತಿತ್ವ ರೂಢಿಸಿಕೊಂಡಿರುವ ಕೆಚ್ಚೆದೆಯ ಧೀರನಂತೆ ಅಸಮಾನತೆ ಕಂಡು ಬಂದಲ್ಲಿ ಅದಕ್ಕೆ ಪ್ರತಿಭಟಿಸುವ ಮನೋಭಾವ. ಸಮಾನತೆಗಾಗಿ ಹೋರಾಟ ನಡೆಸುವ ಉತ್ತಮ ಸಂಘಟಕರಾಗಿಯೂ, ಬಂಡಾಯ ವ್ಯಕ್ತಿತ್ವ ಇವರಲ್ಲಿ ಕಂಡು ಬರುವ ವಿಶಿಷ್ಟ ಗುಣ ಎದ್ದು ಕಾಣುತ್ತದೆ. ಎಲ್ಲರನ್ನು ಸರಿಸಮಾನವಾಗಿ ಕಾಣಬೇಕು. ಯಾರನ್ನೂ ಮೇಲು ಕೀಳು ಭಾವನೆಯಿಂದ ಕಾಣಬಾರದು ಎಂಬ ತತ್ವ ಇವರದ್ದಾಗಿದೆ.

ಚಿಲ್ಲಾಬಟ್ಟೆಯವರ ಸಹೋದರ ಚಂದ್ರಕಾಂತ ಚಿಲ್ಲಾಬಟ್ಟೆ ಪ್ರಸ್ತುತ ಎಪಿಎಂಸಿ ಸದಸ್ಯರಾಗಿದ್ದಾರೆ. ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ತಂದೆ ಜಗನ್ನಾಥ ಚಿಲ್ಲಾಬಟ್ಟೆ ಸೇರಿದಂತೆ ಇವರ ಕುಟುಂಬವೇ ರಾಜಕೀಯ ಹಿನ್ನೆಲೆಯಿಂದ ಬಂದಿದ್ದಾಗಿದೆ. ದಿ.ಓಂಕಾರ ಚಿಲ್ಲಾಬಟ್ಟೆಯವರ ನೆರಳಲ್ಲಿ ರಾಜಕೀಯ ಜೀವನ ಮುಂದೊರೆಸಿಕೊಂಡು ಸಾಗುತ್ತಿರುವ ಇವರು ಅಪಾರ ಜನರ ಬೆಂಬಲದೊಂದಿಗೆ ಸದಾ ಜನಮನದಲ್ಲಿ ಉಳಿಯುವಂಥ ಕಾರ್ಯಗಳನ್ನು ಮಾಡುತ್ತಲೇ ಬರುತಿದ್ದಾರೆ.

ಚಿಲ್ಲಾಬಟ್ಟೆಯವರ ಕೌಟುಂಬಿಕ ಹಿನ್ನೆಲೆಯನ್ನರಿತು ಭಾರತೀಯ ಜನತಾ ಪಕ್ಷದಿಂದೊಮ್ಮೆ ಬಸವಕಲ್ಯಾಣ ವಿಧಾನಸಭಾ ಚುನಾವಣೆ-1999ರಲ್ಲಿ ಟಿಕೇಟ್ ಸಿಕ್ಕಿದ್ದು ಮರೆಯಲಾಗದ ಸಂಗತಿ ಎನ್ನುವ ಇವರು, ರಾಜಕೀಯವೆಂದರೆ ಏಳು ಬೀಳುಗಳು ಸಹಜವಾದದ್ದು, ಗೆದ್ದಾಗ ಸಂಭ್ರಮಿಸುವುದು, ಸೋತಾಗ ಮೂಲೆಗುಂಪಾಗುವುದು ಸರಿಯಲ್ಲ. ಏನಿದ್ದರೂ ಸೋಲು-ಗೆಲುವು ಸರಿಸಮವಾಗಿ ಸ್ವೀಕರಿಸಿ ಸ್ಪರ್ಧೆಗಿಳಿದರೆ ಜಯವೆಂಬುದು ತಾನಾಗಿಯೇ ಒಲಿದು ಬರುತ್ತದೆ. ನಮ್ಮ ವಯಕ್ತಿಯ ಹಿನ್ನೆಲೆ, ಉತ್ತಮ ಜನಸಂಪರ್ಕ ಹೊಂದಿದ್ದರೆ ಯಾವುದೇ ಕ್ಷೇತ್ರದಲ್ಲಿ ಮುನ್ನುಗ್ಗಲು ಅಸಾಧ್ಯವಾದುದ್ದೇನು ಇಲ್ಲ. ಮನುಷ್ಯನಾಗಿ ಹುಟ್ಟಿದ ಮೇಲೆ ನಮಗೆ ನಮ್ಮ ಮೇಲೆ ಮೊಟ್ಟ ಮೊದಲ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕೆಂಬ ಭರವಸೆಯ ಮಾತುಗಳನ್ನಾಡುತ್ತಾರೆ. ಇವರ ಆಸೆ, ಕನಸು, ಯೋಜನೆಗಳು ಸಾಕಾರಗೊಳ್ಳಲಿ.

ಲೇಖಕರು: ವಿ.ಎಚ್.ವೀರಣ್ಣ ಮಂಠಾಳಕರ್

ಕಾಮೆಂಟ್‌ಗಳಿಲ್ಲ: