ಶನಿವಾರ, ಮೇ 14, 2011

ಚಿತ್ರನಟ ವಿಜಯ ವೀರಣ್ಣ ಮಂಠಾಳಕರ್ ಕವನ ಸಂಕಲನ ಓದುತಿರುವುದು.




ಮೇ 10, 2011 ರಂದು ಬಸವಕಲ್ಯಾಣ ಐತಿಹಾಸಿಕ ಕೋಟೆಗೆ ಕನ್ನಡ ಚಲನಚಿತ್ರ ತಂಡವು ಜರಾಸಂಧ ಎಂಬ ಸಿನಿಮಾದ ಒಂದು ಹಾಡಿನ ಚಿತ್ರೀಕರಣಕ್ಕಾಗಿ ಆಗಮಿಸಿದ್ದ ಸಂದಭ೯ದಲ್ಲಿ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ಸ್ಥಳೀಯ ಕವಿ ವೀರಣ್ಣ ಮಂಠಾಳಕರ್ ಅವರ ಇತ್ತೀಚಿನ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನ ಓದುವ ಮಗ್ನದಲ್ಲಿ ಚಿತ್ರ ನಟ ದುನಿಯಾ ಖ್ಯಾತಿ ವಿಜಯ ಅವರು ಮಂಠಾಳಕರ್ ಕವನ ಸಂಕಲನ ಗಂಭೀರವಾಗಿ ಓದುತಿದ್ದಾರೆ. ಇದೇ ಸಂದಭ೯ದಲ್ಲಿ ಮಾತುಕತೆ ನಡೆಸಿದ ವಿಜಯ ಅವರು ನೀವು ಯಾರನ್ನಾದ್ರೂ ಪ್ರೀತಿಸಿದ್ದಿರಾ? ಎಂದು ಕೇಳಿದರು. ಯಾಕೆಂದರೆ ಪ್ರೀತಿಸದೇ ಏನನ್ನೂ ಬರೆಯಲು ಸಾಧ್ಯವಿಲ್ಲ. ಪ್ರೀತಿಸಿದವರು ಮಾತ್ರ ಇಂತಹ ಪ್ರೇಮ ಕವಿತೆಗಳು ಬರೆಯಲು ಸಾಧ್ಯವೆಂದು ಹೇಳಿದಾಗ ಕವಿ ಮಂಠಾಳಕರ್ ಪ್ರೀತಿಯ ಪ್ರತೀಕವೇ ಕವನಗಳು ಬರೆಯಲು ಪ್ರೇರಣೆ ಸಿಕ್ಕಿರುವುದಾಗಿ ಹೇಳಿದರು. ಪ್ರೀತಿ ಇಲ್ಲದೇ ಕವಿಯಾಗಲಾರ ಎಂಬ ಮಾತು ಇಲ್ಲಿ ಚಚೆ೯ಗೆ ಬಂದಿತು.


ಚಿತ್ರ ನಟ ವಿಜಯ ಅವರು ಓದುತ್ತಿರುವುದನ್ನು ಮಂಠಾಳಕರ್ ಇಣುಕು ನೋಟ ಬೀರುತ್ತ ನಿಂತಿರುವುದು. ಸುತ್ತಲೂ ಚಿತ್ರತಂಡದ ಸಹಾಯಕರು,


ಮೇ 10, 2011 ರಂದು ಬಸವಕಲ್ಯಾಣ ಐತಿಹಾಸಿಕ ಕೋಟೆಗೆ ಕನ್ನಡ ಚಲನಚಿತ್ರ ತಂಡವು ಜರಾಸಂಧ ಎಂಬ ಸಿನಿಮಾದ ಒಂದು ಹಾಡಿನ ಚಿತ್ರೀಕರಣಕ್ಕಾಗಿ ಆಗಮಿಸಿದ್ದ ಸಂದಭ೯ದಲ್ಲಿ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ಸ್ಥಳೀಯ ಕವಿ ವೀರಣ್ಣ ಮಂಠಾಳಕರ್ ಅವರ ಇತ್ತೀಚಿನ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನ ಓದುವ ಮಗ್ನದಲ್ಲಿ ಚಿತ್ರ ನಟ ದುನಿಯಾ ಖ್ಯಾತಿ ವಿಜಯ. ಚಿತ್ರ ತಾರೆ ವಿಜಯ ಅವರು ಓದುತ್ತಿರುವುದನ್ನು ಮಂಠಾಳಕರ್ ಇಣುಕು ನೋಟ ಬೀರುತ್ತ ನಿಂತಿರುವುದು. ಸುತ್ತಲೂ ಚಿತ್ರತಂಡದ ಸಹಾಯಕರು,

ಬಸವಕಲ್ಯಾಣ ಐತಿಹಾಸಿಕ ಕೋಟೆಯಲ್ಲಿಃ ಜರಾಸಂದ ಸಿನಿಮಾ ಚಿತ್ರೀಕರಣ


ಬಸವಕಲ್ಯಾಣಃ ಬೆಂಗಳೂರಿನಿಂದ ಆಗಮಿಸಿದ್ದ ಕನ್ನಡ ಚಿತ್ರಿಕರಣ ತಂಡವು ಮೂರು ದಿನಗಳ ಕಾಲ ಬೀದರನ ಐತಿಹಾಸಿಕ ಕೋಟೆಯಲ್ಲಿ ಜರಾಸಂಧ ಸಿನಿಮಾ ಚಿತ್ರಿಕರಣ ಮುಗಿಸಿಕೊಂಡು ಬಸವಕಲ್ಯಾಣ ನಗರದ ಐತಿಹಾಸಿಕ ಕೋಟೆಗೆ ಮಂಗಳವಾರ ಲಗ್ಗೆ ಇಟ್ಟಿತ್ತು. ಬೆಳಿಗ್ಗೆಯಿಂದ ಪ್ರಾರಂಭಗೊಂಡಿರುವ ಶೂಟಿಂಗ್ ಕಾತುರತೆಯಿಂದ ಚಿತ್ರಭಿಮಾನಿಗಳಿಗೆ ನೋಡುವ ಸೌಭಾಗ್ಯ ಸಿಗದೇ ಪರಿತಪಿಸುವಂತಿತ್ತು.

ಜರಾಸಂಧ ಹೊಚ್ಚ ಹೊಸ ಚಿತ್ರದ ನಾಯಕ ಪ್ರೀತಿಯಿಂದ ಕರಿಯಾ ಎಂದು ಕರೆಯಿಸಿಕೊಳ್ಳುವ ದುನಿಯಾ ವಿಜಯ ಅವರನ್ನು ಕನ್ನಡಪ್ರಭ ಚಿತ್ರೀಕರಣಕ್ಕೆ ಇಲ್ಲಿಗೆ ಬಂದಿರುವ ಅನುಭವ ಕುರಿತು ಮಾತಿಗೆಳೆದಾಗ ಅವರು ಹೇಳಿದ್ದಿಷ್ಟುಃ

ಇಂತಹ ಒಂದು ಐತಿಹಾಸಿಕ ಸ್ಥಳಗಳಿಗೆ ಬಂದು ಶೂಟಿಂಗ್ ಮಾಡುವುದೆಂದರೆ ತುಂಬಾ ಖುಷಿಯ ಸಂಗತಿಯಾಗುತದೆ. ವಿದೇಶಗಳಲ್ಲಿ ಚಿತ್ರೀಕರಣ ಮಾಡುವುದಕ್ಕಿಂತ ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳಗಳಿಗೆ ಭೇಟಿ ಕೊಡುವುದರಿಂದ ಒಂದು ರೀತಿಯಲ್ಲಿ ಹೊಸ ಅನುಭವ ಸಿಗುತ್ತದೆ. ಜೊತೆಗೆ ಇಲ್ಲಿನ ಜನರ ಪ್ರೀತಿಯೂ ಧಾರಾಳವಾಗಿ ದೊರೆಯುತ್ತದೆಂದು ತೀರಾ ಭಾವುಕರಾಗಿ ನುಡಿದರು.

ಹೈಟೆಕ್ ನಗರ ಪ್ರದೇಶಗಳಿಗಿಂತ ಐತಿಹಾಸಿಕ ನಗರಗಳಿಗೆ ಬಂದು ಹೋಗುವುದರಿಂದ ಕಡಿಮೆ ವೆಚ್ಚದಲ್ಲಿ ಭಾರಿ ಅದ್ಧೂರಿ ಚಿತ್ರೀಕರಣ ಮಾಡಿಕೊಂಡು ಯಶಸ್ವಿಯಾದ ಸಿನಿಮಾಗಳು ತಯ್ಯಾರಿಸಬುದು. ನಾವಿಲ್ಲಿ ಬಂದಿದ್ದು ಹಾಡಿನ ಚಿತ್ರೀಕರಣವೊಂದಕ್ಕೆ. ಇಲ್ಲೇನೇನಿದೆ ಎಂದು ತಿಳಿದುಕೊಡು ಮುಂಬರುವ ದಿನಗಳಲ್ಲಿಯೂ ಇದೇ ಕೋಟೆಯಲ್ಲಿ ಹೊಸ ಹೊಸ ಸಿನಿಮಾಗಳ ಚಿತ್ರೀಕರಣ ಮಾಡಬೇಕೆಂಬ ಉದ್ದೇಸ ಹೊಂದಿದ್ದೇವೆ. ವಿದೇಶಗಳಲ್ಲಿ ಹೆಜ್ಜೆ ಇಟ್ಟರೆ ಸಾಕು ಪ್ರತಿಯೊಂಕ್ಕೂ ದುಡ್ಡನ್ನೇ ಕೇಳುತ್ತಾರೆ. ಇಂತಹ ಸ್ಥಳಗಳಲ್ಲಿ ಬಂದರೆ ದುಡ್ಡು ಮತ್ತು ಸಮಯ ಎರಡನ್ನೂ ಉಳಿಸಬಹುದು ಎಂದು ಅಭಿಪ್ರಾಯಪಟ್ಟರು.

ಕನಾ೯ಟಕದ ಕಿರೀಟದಲ್ಲಿರುವ ಬೀದರ ಜಿಲ್ಲೆ ಆಯ್ಕೆ ಮಾಡಿರುವುದಕ್ಕೆ ಕಾರಣ ಇಲ್ಲಿನ ಜನ ತುಂಬಾ ಶ್ರಮ ಜೀವಿಗಳು. ದುಡಿದುದ್ದಕ್ಕೆ ಉತ್ತಮ ಪ್ರತಿಫಲ ನಿರೀಕ್ಷಿಸುವವರು ಬೆವರು ಸುರಿಸುವ ಜನರೆಂದರೆ ನನಗೆ ತುಂಬಾನೆ ಹೆಮ್ಮೆಯಾಗುತ್ತದೆ. ಅಡಂಬರದ ಜೀವನವನ್ನು ಇಷ್ಟಪಡದೇ ನೀವೆಲ್ಲ ಇಲ್ಲಿ ಬಿಸಿಲುಂಡು ಹೇಗೆ ಗಟ್ಟಿಮುಟ್ಟಾಗಿದ್ದರೋ ಹಾಗೆ ನಾನು ತೀರಾ ಕೆಳಮಟ್ಟದಿಂದ ಬೆಳೆದು ಬಂದವನಾಗಿದ್ದೇನೆ. ಸಾಮಾನ್ಯ ಜನರೊಂದಿಗೆ ಬೆರೆಯುವುದು ನನಗೆ ಬಹಳ ಇಷ್ಚ ಎಂದು ತಮ್ಮ ಸರಳ ಜೀವನವನ್ನು ವಿವರಿಸಿದರು.

ವಿಜಯ ಅವರ ಮುಂದಿನ ಚಿತ್ರ ಜಾನಿ ಮೇರಾ ನಾಮ, ಪ್ರೀತಿ ಮೇರಾ ಕಾಮ ಚಿತ್ರೀಕರಣ ಸೆಟ್ಟೇರುತಿದೆ. ಜರಾಸಂಧ ಚಿತ್ರದ ಸಾಹಿತ್ಯ ಮತ್ತು ನಿದೇ೯ಶನ ಶಶಾಂಕ ಅವರದ್ದಾಗಿದೆ. ಚಂದ್ರು ಅವರದು ಛಾಯಗ್ರಹಣ, ಸಂಗೀತ ಅಜು೯ನ ಚಿತ್ರದಲ್ಲಿ ಪ್ರಣತಿ ನಾಯಕಿಯಾಗಿ ಅಭಿನಯಿಸುತಿದ್ದಾರೆ. ಈ ಒಂದು ಐತಿಹಾಸಿಕ ಕೋಟೆಯಲ್ಲಿ ವಿದೇಸಿ ಬೆಡಗಿಯರ ನ್ರತ್ಯದೊಂದಿಗೆ ನಾಯಕ ವಿಜಯ ಹೆಜ್ಜೆ ಹಾಕಿದರು.