ಶನಿವಾರ, ಮೇ 14, 2011

ಚಿತ್ರನಟ ವಿಜಯ ವೀರಣ್ಣ ಮಂಠಾಳಕರ್ ಕವನ ಸಂಕಲನ ಓದುತಿರುವುದು.




ಮೇ 10, 2011 ರಂದು ಬಸವಕಲ್ಯಾಣ ಐತಿಹಾಸಿಕ ಕೋಟೆಗೆ ಕನ್ನಡ ಚಲನಚಿತ್ರ ತಂಡವು ಜರಾಸಂಧ ಎಂಬ ಸಿನಿಮಾದ ಒಂದು ಹಾಡಿನ ಚಿತ್ರೀಕರಣಕ್ಕಾಗಿ ಆಗಮಿಸಿದ್ದ ಸಂದಭ೯ದಲ್ಲಿ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ಸ್ಥಳೀಯ ಕವಿ ವೀರಣ್ಣ ಮಂಠಾಳಕರ್ ಅವರ ಇತ್ತೀಚಿನ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನ ಓದುವ ಮಗ್ನದಲ್ಲಿ ಚಿತ್ರ ನಟ ದುನಿಯಾ ಖ್ಯಾತಿ ವಿಜಯ ಅವರು ಮಂಠಾಳಕರ್ ಕವನ ಸಂಕಲನ ಗಂಭೀರವಾಗಿ ಓದುತಿದ್ದಾರೆ. ಇದೇ ಸಂದಭ೯ದಲ್ಲಿ ಮಾತುಕತೆ ನಡೆಸಿದ ವಿಜಯ ಅವರು ನೀವು ಯಾರನ್ನಾದ್ರೂ ಪ್ರೀತಿಸಿದ್ದಿರಾ? ಎಂದು ಕೇಳಿದರು. ಯಾಕೆಂದರೆ ಪ್ರೀತಿಸದೇ ಏನನ್ನೂ ಬರೆಯಲು ಸಾಧ್ಯವಿಲ್ಲ. ಪ್ರೀತಿಸಿದವರು ಮಾತ್ರ ಇಂತಹ ಪ್ರೇಮ ಕವಿತೆಗಳು ಬರೆಯಲು ಸಾಧ್ಯವೆಂದು ಹೇಳಿದಾಗ ಕವಿ ಮಂಠಾಳಕರ್ ಪ್ರೀತಿಯ ಪ್ರತೀಕವೇ ಕವನಗಳು ಬರೆಯಲು ಪ್ರೇರಣೆ ಸಿಕ್ಕಿರುವುದಾಗಿ ಹೇಳಿದರು. ಪ್ರೀತಿ ಇಲ್ಲದೇ ಕವಿಯಾಗಲಾರ ಎಂಬ ಮಾತು ಇಲ್ಲಿ ಚಚೆ೯ಗೆ ಬಂದಿತು.


ಚಿತ್ರ ನಟ ವಿಜಯ ಅವರು ಓದುತ್ತಿರುವುದನ್ನು ಮಂಠಾಳಕರ್ ಇಣುಕು ನೋಟ ಬೀರುತ್ತ ನಿಂತಿರುವುದು. ಸುತ್ತಲೂ ಚಿತ್ರತಂಡದ ಸಹಾಯಕರು,


ಕಾಮೆಂಟ್‌ಗಳಿಲ್ಲ: