ಬುಧವಾರ, ಮೇ 30, 2012

ಬಿಜೆಪಿ ಸರಕಾರ ಬಂದಾಗಿನಿಂದ ಆಡಳಿತ ಸಂಪೂಣ೯ ಕುಸಿತಃ ಮಾಜಿ. ಸಿಎಂ, ಎಚ್.ಡಿ ಕುಮಾರಸ್ವಾಮಿ

 ಚಿತ್ರ ವಿವರಃ  ಬಸವಕಲ್ಯಾಣ ತಾಲೂಕಿನ ಸಸ್ತಾಪೂರ ಬಂಗ್ಲಾ ರಾಷ್ಟ್ರೀಯ ಹೆದ್ದಾರಿ ಹತ್ತಿರ ಆಳಂದ ತಾಲೂಕಿನಲ್ಲಿ ನಡೆಯಲಿರುವ  ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ನಿಮಿತ್ಯ ಆಗಮಿಸುತಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್್ ರಾಜ್ಯಾಧ್ಯಕ್ಷ ಎಚ್್. ಡಿ. ಕುಮಾರಸ್ವಾಮಿ ಅವರಿಗೆ ತಾಲೂಕಿನ ಜೆಡಿಎಸ್್ ಪಕ್ಷದ ಕಾಯಂಕತ೯ರಿಂದ ಸ್ವಾಗತ, ಸನ್ಮಾನ ಸ್ವೀಕರಿಸಿ ಮಾತನಾಡುತ್ತಿರುವುದು. ಈ ಸಂದಭ೯ದಲ್ಲಿ ಬೀದರ ಶಾಸದ ಬಂಡೆಪ್ಪ ಖಾಶೆಂಪೂರ, ಬಸವಕಲ್ಯಾಣ ಜೆಡಿಎಸ್ ತಾಲೂಕಾಧ್ಯಕ್ಷ ಶಬ್ಬೀರ ಪಾಶಾ ಮುಜಾವರ್, ಜಿ.ಪಂ, ಸದಸ್ಯ ಸಂಜು ಕಾಳೇಕರ್, ಕೇಶಪ್ಪ ಬಿರಾದಾರ್ ಮುಂತಾದವರಿದ್ದರು.

  ಬಿಜೆಪಿ ಸಕಾ೯ರದ ಆಡಳಿತ ಹಿನ್ನಡೆಃ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ


 ಬಸವಕಲ್ಯಾಣ, ಮೇ. 29

ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದ ಆಡಳಿತ ಸಂಪೂಣ೯ ಕುಸಿದು ಬಿದ್ದು ಅಭಿವೖದ್ಧಿಗೆ ಹಿನ್ನೆಡೆಯಾಗಿದೆ. ಬಿಜೆಪಿ ಸಕಾ೯ರದ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್್ ರಾಜ್ಯಾಧ್ಯಕ್ಷ ಎಚ್್. ಡಿ. ಕುಮಾರಸ್ವಾಮಿ ಆರೋಪಿಸಿದರು.

ಆಳಂದ ತಾಲೂಕಿನಲ್ಲಿ ನಡೆಯಲಿರುವ  ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ನಿಮಿತ್ಯ ಆಗಮಿಸುತಿದ್ದ ಸಂದಭ೯ದಲ್ಲಿ ತಾಲೂಕಿನ ಜೆಡಿಎಸ್್ ಪಕ್ಷದ ಕಾಯ೯ಕತ೯ರಿಂದ ಸ್ವಾಗತ, ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕಾಂಗ್ರೇಸ್್ ಹಾಗೂ ಬಿಜೆಪಿಯವರು ರಾಜ್ಯದ ಜನತೆಗೆ ದ್ರೋಹವನ್ನು ಎಸಗಿದ್ದಾರೆ. ರೈತರ ಸಾಲ ಮನ್ನಾ ಮಾಡದೇ ರೈತರ ಆತ್ಮ ಹತ್ಯೆಗೆ ಕಾರಣವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದಾಗ ಜೆಡಿಎಸ್್ ಪಕ್ಷದಿಂದ ರೈತರ ಸಮಸ್ಯೆಗಳಿಗೆ ಸ್ಪಂಧಿಸಿದ್ದೇನೆ. ಜನರಿಗೆ ಉತ್ತಮ ಆಡಳಿತ ಸೇವೆಯನ್ನು ನಿಸ್ಪಕ್ಷಪಾತದಿಂದ ನೀಡಿದ್ದೇನೆ ಎಂದರು.

ಜೆಡಿಎಸ್್ ಪಕ್ಷದಿಂದ ರೈತರ ಸಾಲ ಮನ್ನಾ ಮಾಡಿರುವ ನಾವು ಬಡವರಿಗಾಗಿ ಒಳ್ಳೆಯ ನ್ಯಾಯವನ್ನು ಒದಗಿಸಿ ಕೊಟ್ಟಿದ್ದೇವೆ. ಅದರಂತೆ ಬಸವಕಲ್ಯಾಣ ಅಭಿವೖದ್ಧಿ ಮಂಡಳಿ ಮಂಜೂರಿ ಮಾಡಿಸಿ  ಅನೇಕ ಶರಣರ ಸ್ಮಾರಕಗಳ ಜೀಣೋದ್ಧಾರಕ್ಕೆ ಅನುದಾನ ಬಿಡುಗಡೆ ಮಾಡಿ ಶ್ರಮಿಸಿದ ಪಕ್ಷ ಜೆಡಿಎಸ್್ ಆಗಿದೆ ಎಂದು ನುಡಿದರು.

ಮುಂದೊರೆದು ಮಾತನಾಡಿದ ಅವರು, ರಾಜ್ಯದಲ್ಲಿ ಅನೇಕ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಬಿಜೆಪಿ ಸಕಾ೯ರ ಕಣ್ಮುಚ್ಚಿ ಕುಳಿತಿರುವುದು ಜನಪರ ಕಾಳಜಿ ಅವರಿಗಿಲ್ಲ ಎಂಬಂತಾಗಿದೆ. ಬಿಜೆಪಿ ಪಕ್ಷದಲ್ಲಿರುವ ಅನೇಕ ನಾಯಕರು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.

ಜೆಡಿಎಸ್್ ಪಕ್ಷದಿಂದ ಯುವ ಉತ್ಸಾಹಿ ನವ ತರುಣ ಖೂಬಾ ಅವರಿಗೆ ಟಿಕೇಟ್್ ನೀಡಿದ್ದಕ್ಕೆ ಬಸವಕಲ್ಯಾಣ ತಾಲೂಕಿನ ಜನತೆ ಮತ್ತು ಪಕ್ಷದ ಕಾಯ೯ಕತ೯ರು ಪಕ್ಷದ ಮೇಲಿನ ವಿಶ್ವಾಸದಿಂದ ಮಲ್ಲಿಕಾಜು೯ನ ಖೂಬಾ ಅವರನ್ನು ಗೆಲ್ಲಿಸಿ ತಂದಿರುವುದಕ್ಕೆ ಬಸವಕಲ್ಯಾಣದಲ್ಲಿ ಜೆಡಿಎಸ್್ ಭ್ರದ್ರ ಕೋಟೆ ಸ್ಥಾಪಿಸಿದೆ ಎಂದು ಅಭಿಪ್ರಾಯಪಟ್ಟರು.

ಹಾಗೆಯೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಖೂಬಾ ಅವರಿಗೆ ಗೆಲ್ಲಿಸಲು ಮನವಿಸಿದರು. ಇದೇ ಸಂದಭ೯ದಲ್ಲಿ ರಾಜೇಶ್ವರಿ ಸೂಯ೯ವಂಶಿ ಜೆಡಿಎಸ್್ ಪಕ್ಷಕ್ಕೆ ಸೇಪ೯ಡೆಯಾದರು. ಜಿಲ್ಲಾ ಜೆಡಿಎಸ್್ ಪಕ್ಷದ ಅಧ್ಯಕ್ಷ ನಸೀಮೋದ್ದೀನ್್ ಪಟೇಲ್್, ಕುಮಾರ ಬಂಗಾರಪ್ಪ, ಜಿಪಂ. ಸದಸ್ಯ ಸಂಜು ಕಾಳೇಕರ್್, ದೇವಿಶೀಲಾ ಮದನೆ, ಪುಷ್ಪಾ ಹಾರಕೂಡೆ ಮುಂತಾದವರಿದ್ದರು.

ಪ್ರಮುಖರಾದ ತಾಪಂ ಸದಸ್ಯ ದೀಪಕ ನಾಗದೆ, ಕೇಶಪ್ಪ ಬಿರಾದಾರ್್, ಕಾಳೀದಾಸ್ ಜಾಧವ, ಸಿದ್ರಾಮ ಗುದಗೆ, ಜ್ಞಾನೇಶ್ವರ ಮೂಳೆ, ಗೌತಮ ಕಾಂಬಳೆ, ರವಿ ಗುಂಗೆ, ಗುರುರಾಜ ಸಾಶೆಟ್ಟೆ, ದಿಲೀಪಗೀರ ಗೋಸ್ವಾಮಿ, ರಾಜು ವಾಡೇಕರ್್, ತಾತ್ಯಾರಾವ ಪಾಟೀಲ, ಇಸ್ಮಾಯಿಲ್್ ಬೆಳಕುಣಿ, ರಶೀದ ಖುರೇಶಿ, ಸೈಯದ ಅಖ್ತರ, ಶಿವಕುಮಾರ ಬಿರಾದಾರ್್ ಸೇರಿದಂತೆ ಮುಂತಾದ ಕಾಯ೯ಕತ೯ರಿದ್ದರು.