ಶುಕ್ರವಾರ, ಜೂನ್ 24, 2011

ಬಸವಕಲ್ಯಾಣ ನೆಲದ ಸುತ್ತ


ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ ಶಾಸಕ ಬಸವರಾಜ ಪಾಟೀಲ ಅಟ್ಟೂರ್



ದಿನಾಂಕಃ 24-ಜೂನ್, 2011
--------------------------------------------------------------------------------------------------------------------
ಭಾಲ್ಕಿಯಲ್ಲಿ ಈಗಾಗಲೇ ಈಶ್ವರ ಖಂಡ್ರೆ ಅವರು ಶಾಸಕರಿದ್ದು ಅವರು ಬಸವಕಲ್ಯಾಣಕ್ಕೆ ಬರುವ ಅವಶ್ಯಕತೆ ಏನಿದೆ..? ಅಲ್ಲಿ ಅವರು ಪ್ರಕಾಶ ಖಂಡ್ರೆಯವರಿಗೆ ನೇರಸ್ಪಧಿ೯ ಇದ್ದು ಇಲ್ಲಿಗ್ಯಾಕೆ ಬರಬಹುದೆಂಬ ಜನರಲ್ಲಿರುವ ಪ್ರಶ್ನೆಗೆ ಒಂದು ಸ್ಪಷ್ಟ ಉತ್ತರವೂ ಕಂಡು ಹಿಡಿದಂತಿದೆ. ಅದೇನೆಂದರೆ ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಬಹುಮತ ಸಾಬೀತುಪಡಿಲು ಆಗದಿರುವುದು ಒಂದು ನೆಪವಾದರೆ, ಒಂದೇ ಪರಿವಾರದಲ್ಲಿರುವ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಇದೊಂದು ಸುಲಭ ಮಾಗ೯ವಾದೀತು. ಒಳಗೊಳಗೇ ಇರುವ ಖಂಡ್ರೆ ಪರಿವಾರದಲ್ಲಿರುವ ಒಳಜಗಳಗಳಿಗೆ ತುಪ್ಪ ಸುರಿಯುವುದಕ್ಕಿಂತ ದೂರವಿದ್ದು ಹತ್ತಾರು ವಷ೯ಗಳಿಂದಲೂ ಪ್ರಬಲ ನಾಯಕರ ಕೊರತೆಯನ್ನು ಎದುರಿಸುತಿರುವ ಬಸವಕಲ್ಯಾಣಕ್ಕೆ ಹೋಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಗಿಯಬೇಕೆಂಬ ಅಪೇಕ್ಷೆ ಹೊಂದಿದ್ದಾರೆ ಎನ್ನಲಾಗುತಿದೆ. ಪಕ್ಷದಲ್ಲಿರುವ ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ ಈಶ್ವರ ಖಂಡ್ರೆ ಅವರು ಚಿಂತಿಸುತಿದ್ದಾರೆ ಎಂಬ ವಾದಗಳು ಸಹ ಜನ ವಲಯದಲ್ಲಿ ಕೇಳಿ ಬರುತಿವೆ. ಬಸವಕಲ್ಯಾಣ ತಾಲೂಕಿನ ಕಾಂಗ್ರೇಸ್ ಮುಖಂಡರುಗಳಲ್ಲಿಯೇ ಒಬ್ಬರಿಗೊಬ್ಬರು ಕಂಡರೆ ಹಾವು ತುಳಿದವರಂತೆ ವತಿ೯ಸುವ ಪಕ್ಷದ ಕಾಯ೯ಕತ೯ರುಗಳಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ. ಬಸವಕಲ್ಯಾಣದಲ್ಲಿ ಯಾರೊಬ್ಬರಿಗೂ ಪ್ರಬಲ ನಾಯಕರಾಗಿ ಬೆಳೆಯುವುದಕ್ಕೆ ಜನಬೆಂಬಲದ ಕೊರತೆ ಸಾಕಷ್ಟಿದೆ ಎನ್ನುವವರು ಈಶ್ವರ ಖಂಡ್ರೆ ಅವರು ಭಾಗಕ್ಕೆ ಬಂದರೆ ಸ್ವಾಗತಿಸುವವರು ಇದ್ದಾರೆನ್ನುವಂತಿದೆ. ಆದರೆ ಜೆಡಿಎಸ್ ನಿಂದ ಕಾಂಗ್ರೇಸ್ ಪಕ್ಷದಲ್ಲಿ ಸೇಪ೯ಡೆ ಹೊಂದಬೇಕೆಂಬುದು ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ ಅವರು ತಮ್ಮ ಆಪ್ತ ವಲಯಗಳಲ್ಲಿ ಪ್ರಸ್ತಾಪಿಸುತಿರುವುದನ್ನು ಗಾಳಿ ಸುದ್ದಿ ಹರಡುತಿದೆ. ಇನ್ನೋವ೯ ಮಾಜಿ ಶಾಸಕ ಎಂ.ಜಿ.ಮೂಳೆ ಅವರು ಕೂಡ ಕಾಂಗ್ರೇಸ್ ನಿಂದ ಟಿಕೇಟ್ ಪಡೆಯುವ ಅಕಾಂಕ್ಷಿ ಆಗಿದ್ದಾರೆ ಎನ್ನುವ ಅದೇ ಜನಗಳು ಹಳೇ ಮುಖಗಳನ್ನು ಕಂಡು ಕಂಡು ಬೇಸರಿಸಿದವರಂತೆ ಪ್ರತಿಕ್ರಿಯಿಸುತ್ತಾರೆ. ಹೀಗಾಗಿ ಈಶ್ವರ ಖಂಡ್ರೆ ಅವರು ಬಸವಕಲ್ಯಾಣಕ್ಕೆ ಬಂದರೆ ಉತ್ತಮವಾಗುತ್ತದೆ ಎಂಬುದು ಸಹಸ್ರಾರು ಸಂಖ್ಯೆಯಲ್ಲಿರುವ ಜನಭಿಪ್ರಾಯದಲ್ಲಿ ಅಲಲ್ಲಿ ಕೇಳಿ ಬರುತಿದೆ. ಅದಕ್ಕಾಗಿ ಹೀಗೊಂದು ಸುತ್ತು ಜನಸಾಮಾನ್ಯರೊಂದಿಗೆ ಸಮೀಕ್ಷೆ ನಡೆಸಿದಾಗ ಹಲವು ಕುತೂಹಲದ ಸಂಗತಿಗಳು ಕಂಡು ಬಂದವು. ಬಳಿಕ ರಾಜಕೀಯ ವಲಯದಲ್ಲಿರುವ ನೆಗೆಟೀವ್ ಪಾಜೀಟಿವ್ ವಿಚಾರಗಳು ಸಮಸಮವಾಗಿ ಗೋಚರಿಸಿರುವುದನ್ನು ಹಲವರ ವಿಚಾರಗಳಿಂದ ತಿಳಿದು ಬಂತು. ಒಟ್ಟಿನಲ್ಲಿ ಬಸವಕಲ್ಯಾಣ ತಾಲೂಕಿಗೆ ಒಬ್ಬ ಪ್ರಬಲ ನಾಯಕನ ಕೊರತೆ ಯಾರು ನೀಗಿಸುತ್ತಾರೆ ಎಂಬುದು ಕುತೂಹಲದ ಸಂಗತಿ ಮುಂದಿನ ರಾಜಕೀಯ ಬೆಳವಣಿಗೆ ಏನಾಗಬಹುದೆಂಬ ನಿಗೂಢ ಗುಪ್ತಚಾರಗಳು ದಿನೆ ದಿನೆ ಬಹಿರಂಗಗೊಳ್ಳುತಿವೆ. ಬಸವಕಲ್ಯಾಣ ತಾಲೂಕಿನ ರಾಜಕೀಯ ಬೆಳವಣಿಗೆ ಮುಂದೆ ಏನಾಗಬಹುದು ಮತ್ತು ಸಧ್ಯದ ಪರಿಸ್ಥಿತಿಯಲ್ಲಿ ರಾಜಕೀಯದಲ್ಲಿ ಏನು ನಡೆಯುತಿದೆ ಎಂಬ ಕುರಿತು ಸುದೀಘ೯ವಾದ ದಿನಗಳಲ್ಲಿ ಹಲವರಿಂದ ಕೇಳಿ ಬಂದ ಮಾತುಗಳನ್ನು ಇಲ್ಲಿ ಕಲೆ ಹಾಕಿಕೊಂಡು ಪ್ರಸ್ತಾಪಿಸಲಾಗಿದೆ. ನಿಮ್ಮ ಅಭಿಪ್ರಾಯ ಏನಾಗಿರಬಹುದೆಂಬುದು ತಿಳಿಸುವುದಕ್ಕೆ ಇಲ್ಲಿ ಮುಕ್ತ ಅವಕಾಶವಿದೆ........


ನಿಮ್ಮ ಸಂಪಾದಕ
ವೀರಣ್ಣ ಮಂಠಾಳಕರ್

ಬಸವಕಲ್ಯಾಣ ತಾಲೂಕಿನಲ್ಲಿ ಪ್ರಬಲ ಕಾಂಗ್ರೇಸ್ ನಾಯಕರಿಲ್ಲದ ಕೊರಗನ್ನು ನೀಗಿಸುವ ನಿಟ್ಟಿನಲ್ಲಿ ಬೀದರ ಜಿಲ್ಲೆಯ ರಾಜಕೀಯ ಗಣ್ಯರ ಕಣ್ಣು ಬಸವಕಲ್ಯಾಣ ನೆಲದ ಮೇಲೆ ಬಿದ್ದಿದೆ. ಮುಂದಿನ ದಿನಗಳಲ್ಲಿ ಬಸವಕಲ್ಯಾಣ ಉಸ್ತುವಾರಿ(ಜವಾಬ್ದಾರಿ) ನನ್ನದೆಂದು ಹೇಳಿದ ಬಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರು ಬಹಿರಂಗವಾಗಿ ಕಾಯ೯ಕ್ರಮಗಳಲ್ಲಿ ಹೇಳಿಕೊಂಡಿರುವುದರಿಂದ ಅನೇಕರಲ್ಲಿ ಈಶ್ವರ ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಇಲ್ಲಿ ಬಂದರೂ ಬರಬಹುದೆಂಬ ಊಹಾಪೂಹಗಳು ಶುರುವಾಗಿವೆ.

ಕಾರಣ ಬಸವಕಲ್ಯಾಣದಲ್ಲಿ ಹಲವಾರು ವಷ೯ಗಳಿಂದ ಖಂಡ್ರೆ ಪರಿವಾರದಿಂದ ನಡೆಯುವ ಪ್ರತಿವಷ೯ದ ಅದ್ಧೂರಿಯ ಶರಣ ಕಮ್ಮಟಗಳಿಂದ ಇವರ ಬಗ್ಗೆ ಆತ್ಮವಿಶ್ವಾಸ ಹೆಚ್ಚಿಸಿದೆ. ಇದರಿಂದ ಅವರಿಗೆ ಲಾಭದಾಯಕ ಅಂಶವೆನ್ನಲಾಗುತಿದೆ. ಬಸವಕಲ್ಯಾಣದೊಂದಿಗೆ ಹಲವು ದಶಕಗಳ ನಂಟನ್ನು ಬೆಳೆಸಿಕೊಂಡಿರುವ ಬೀಮಣ್ಣ ಖಂಡ್ರೆ ಹಾಗೂ ಅವರ ಮಗ ಭಾಲ್ಕಿಯ ಪ್ರಭಾವಿ ಶಾಸಕ ಈಶ್ವರ ಖಂಡ್ರೆ ಅವರು ಕಲ್ಯಾಣದ ಜನತೆಯೊಂದಿಗೆ ಉತ್ತಮವಾದ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ.

ಬಸವಕಲ್ಯಾಣದಲ್ಲಿ ಮಹತ್ವದ ಅನೇಕ ಕಾಯ೯ಕ್ರಮಗಳು ನಡೆಸಿರುವ ಈಶ್ವರ ಖಂಡ್ರೆ ಅವರಲ್ಲಿ ವಿಶಿಷ್ಟ ವ್ಯಕ್ತಿತ್ವ ಕಂಡಿರುವ ಜನರ ಮನದಲ್ಲಿ ಉಳಿದುಕೊಂಡಿದ್ದಾರೆ. ಹಾಗಾಗಿ ಈ ರೀತಿ ನಡೆಯುತಿರುವ ಜನಸಾಮಾನ್ಯರ ಒಳಗಿನ ಚಚೆ೯ಗಳಿಂದ ಮುಂದಿನ ಶಾಸಕರಾಗಿ ಖೂಬಾ, ಅಟ್ಟೂರ್, ಎ.ಜಿ.ಮೂಳೆ, ಖಂಡ್ರೆ ಇವರಲ್ಲಿ ಯಾರಾಗಬಹುದೆಂಬ ಚಚೆ೯ಗೆ ಗ್ರಾಸವಾಗಿ ರಾಜಕೀಯ ವಲಯದಲ್ಲಿ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಇಲ್ಲಿ ನಡೆಯುವ ಕಾಂಗ್ರೇಸ್ ಪಕ್ಷದ ವತಿಯಿಂದ ಯಾವುದೇ ಕಾಯ೯ಕ್ರಮಗಳನ್ನು ಯಾವ ರೀತಿ ಹೇಗೆ ನಡೆಯಬೇಕೆಂಬುದು ಚಾಕ್ಔಟ್ ಮಾಡುತ್ತೇನೆ. ಬಸವಕಲ್ಯಾಣದಲ್ಲಿರುವ ಪಕ್ಷದ ಕಾಯ೯ಕತ೯ರೊಂದಿಗೆ ಪ್ರತಿ ತಿಂಗಳು ಸಮಾಲೋಚಿಸಿ ಬಸವಕಲ್ಯಾಣದಲ್ಲಿಯ ಕಾಂಗ್ರೇಸ್ ಪಕ್ಷದಲ್ಲಿರುವ ತೊಡಕುಗಳನ್ನು ನಿವಾರಿಸಿ ನಾಯಕರ ಕೊರತೆಯನ್ನು ನೀಗಿಸುವಲ್ಲಿ ಮುಂದಾಗುತ್ತೇನೆ ಎಂದಿರುವ ಖಂಡ್ರೆಯವರು ಇಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಹೊರಟಿದ್ದಾರೆ. ಇದರಿಂದ ಸ್ಥಳೀಯ ಕಾಯ೯ಕತ೯ರಲ್ಲಿ ಕೂಡ ಹೊಸ ಹುರುಪನ್ನು ತುಂಬಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸುವಂಥ ವಾತಾವರಣ ಬದಲಾಗುತಿದೆ.

ಶಾಸಕ ಈಶ್ವರ ಖಂಡ್ರೆ ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಕಲ್ಯಾಣದ ನೆಲದಲ್ಲಿ ಬಂದು ನೆಲೆಯೊರುವರೇ ಎಂಬ ಚಚೆ೯ಗಳು ಸಹ ಹೋಟೆಲ್, ಅಂಗಡಿ, ಸೇರಿದಂತೆ ತಾಲೂಕಿನ ಸುತ್ತಲಿರುವ ಗ್ರಾಮಗಳಲ್ಲಿ, ಗುಂಪುಕಟ್ಟಿ ಚಚಿ೯ಸುವ ಜನರಲ್ಲಿ ವಿಸ್ಮಯಕಾರಿ ಊಹಾಪೂಹಗಳು ನಡೆಯುತಿವೆ. ಇಂತಹ ಚಚಾ೯ಸ್ಪದ ಮಾತುಗಳು ಕೇಳಿ ಬರುತಿರುವುದು ಸಹಜವೆನ್ನುವಂತಿದ್ದರೂ ಕಾಂಗ್ರೇಸ್ ಪಕ್ಷದ ತಾಲೂಕಾ ಮಾಜಿ ಅಧ್ಯಕ್ಷರುಗಳಲ್ಲಿ ಪಕ್ಷದ ತಾಲೂಕಾ ಅಧ್ಯಕ್ಷನಾಗಬೇಕೆಂಬ ಹಂಬಲದಲ್ಲಿರುವ ಕಾಯ೯ಕತ೯ರಲ್ಲೂ ತಾಲೂಕಿನಲ್ಲಿ ನಾಯಕತ್ವ ಪಡೆಯಬೇಕೆಂಬ ಮುಸುಕಿನ ಗುದ್ದಾಟ ಶುರುವಾಗಿದೆ.

ಸ್ಥಳೀಯ ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ ಅವರು ಇತ್ತೀಚಿಗೇಕೋ ಮೌನವಹಿಸಿದ್ದರೂ ಕೂಡ ಬೂದಿ ಮುಚ್ಚಿದ ಕೆಂಡದಂತೆ ಅವರು ಒಳಗೊಳಗೆ ಮುಂಬರುವ ಚುನಾವಣೆಗಾಗಿ ಎಲ್ಲಾ ರೀತಿಯ ತಯ್ಯಾರಿ ನಡೆಸುತಿದ್ದಾರೆ ಎನ್ನಲಾಗುತಿದೆ. ಹಾಲಿ ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಅವರು ಮುಂದಿನ ಚುನಾವಣೆಯ ಅಖಾಡಕಿಳಿಯಲು ಜನರ ವಿಶ್ವಾಸ ಉಳಿಸಿಕೊಳ್ಳಬೇಕು ಎನ್ನುವ ಜನರು ವಿಧಾನಸಭಾ ಚುನಾವಣೆ ಮುನ್ನದ ಉಳಿದ ದಿನಗಳಲ್ಲಿ ಅಭಿವ್ರದ್ಧಿ ಕಾಯ೯ಗಳು ಚುರುಕುಗೊಳಿಸಿ ಆಮೆಗತಿ ನಡಿಗೆಯಲ್ಲಿರುವ ಹತ್ತು ಹಲವು ಅಭಿವ್ರದ್ದಿಯ ಕಾಮಗಾರಿಗಳು, ನೆನೆಗುದಿಗೆ ಬಿದ್ದಿರುವ ಭರವಸೆಗಳು ಈಡೇರಿಸುವ ಯತ್ನದಲ್ಲಿ ಸಾಗಬೇಕು. ಜನರಲ್ಲಿ ವಿಶ್ವಾಸವನ್ನು ಮೂಡಿಸುವಂಥ ಪ್ರಯತ್ನ ಅಟ್ಟೂರ್ ಅವರು ಮಾಡಿದರೆ ಉತ್ತಮವೆಂದು ಭಾವಿಸುವ ಅವರ ಹಿತ ಚಿಂತಕರು ಇಲ್ಲಿದ್ದಾರೆ.

ಇತ್ತೀಚಿಗೆ ಕನಾ೯ಟಕ ಕ್ಷತ್ರಿಯ ಮರಾಠಾ ಪರಿಷತ್ತಿನ ಗೌನಿ೯ಂಗ್ ಕೌನ್ಸಿಲ್ ಅಧ್ಯಕ್ಷರಾಗಿ ಮಾಜಿ ಶಾಸಕ ಎಂ.ಜಿ.ಮುಳೆಯವರು ನೇಮಕಗೊಂಡಿದ್ದಾರೆ. ಕನಾ೯ಟಕ ರಾಜ್ಯದಲ್ಲಿ 60 ಲಕ್ಷ ಮರಾಠಾ ಮತದಾರರಿದ್ದು ಬೀದರ ಜಿಲ್ಲೆಯಲ್ಲಿ ಮೂರು ಲಕ್ಷ ಮರಾಠಾ ಜನರಿದ್ದಾರೆ. ಮುಳೆಯವರ ನೇಮಕದಿಂದ ಬೀದರ ಜಿಲ್ಲೆ ಅಷ್ಟೇ ಅಲ್ಲದೆ, ಕನಾ೯ಟಕದ ಮರಾಠಾ ಜನರನ್ನು ಒಗ್ಗೂಡಿಸುವ ಕಾಯ೯ ಮುಳೆಯವರು ಮಾಡಲಿದ್ದಾರೆ ಎಂದು ಮೂಳೆ ಅವರ ಕಾಯ೯ಕತ೯ರಲ್ಲಿ ಮತ್ತು ಬೆಂಬಲಿಗರಲ್ಲಿ ಇರುವುದರಿಂದ ಆ ಒಂದು ವಿಶ್ವಾಸ ಮತದಿಂದ ಇವರು ಸಹ ಚುನಾವಣೆಗೆ ಯಾವ ಕ್ಷೇತ್ರದಿಂದ ಚುನಾವಣಾ ಕಳಕಿಳಿಯುವರು ಎಂಬ ಕುತೂಹಲದ ಸಂಗತಿಯಾಗಿದೆ. ಈಶ್ವರ ಖಂಡ್ರೆ ಅವರು ಬಸವಕಲ್ಯಾಣ ಕ್ಷೇತ್ರಕ್ಕೆ ಬಂದರೆ ಪ್ರತಿಯೊಬ್ಬರ ಮತಬ್ಯಾಂಕ್ ಗಳಿಗೆ ಗ್ರಹಣ ಹಿಡಿಯುವುದಂತೂ ಖಚಿತ ಎನ್ನುತಿರುವ ಜನರಲ್ಲಿ ಕೂಡ ಮುಂದೇನಾಗಬಹುದೆಂಬ ಗೊಂದಲದ ಗೂಡಾಗಿದೆ.

ಮಾಚ೯ 2011 ರಂದು ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಭೀಮಣ್ಣ ಖಂಡ್ರೆ ಅವರ ನೇತ್ರತ್ವದಲ್ಲಿ ಶರಣ ಹರಳಯ್ಯ ಮತ್ತು ಮಧುವಯ್ಯರ ಸ್ಮರಣೋತ್ಸವ ಸಮಾರಂಭ ಬಸವಕಲ್ಯಾಣದಲ್ಲಿ ಅದ್ಧೂರಿಯಾಗಿ ಜರುಗಿತು. ಭಾರಿ ಪ್ರಮಾಣದಲ್ಲಿ ಜನರನ್ನು ಸೇರಿಸುವ ಪ್ರಯತ್ನದಲ್ಲಿ ರಾಜ್ಯದ ನಾನಾ ಭಾಗಗಳಿಂದ ಮಠಾಧೀಶರನ್ನು ಚಿಂತಕರನ್ನು ಆಹ್ವಾನಿಸಿ ಯಶಸ್ವಿ ಕಾಯ೯ಕ್ರಮವನ್ನು ಮಾಡಿ ತಾಲೂಕಿನಾದ್ಯಂತ ಜನರ ಗಮನ ಸೆಳೆದಿದ್ದು ಒಂದು ವಿಶೇಷ. ಇದರಿಂದ ಖಂಡ್ರೆ ಪರಿವಾರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ ಎಂದು ಸ್ಥಳೀಯ ಸಾಮಾನ್ಯ ಜನರಿಂದ ಹಿಡಿದು ರಾಜಕೀಯ ವಲಯದವರೆಗೆ ಮುಸುಕಿನ ಚಚೆ೯ ನಡೆಯುತಿದೆ.

ಈಶ್ವರ ಖಂಡ್ರೆ ಅವರಿಗೆ ಮತ್ತು ಅಟ್ಟೂರ್ ಅವರಿಗೆ ಪೈಪೋಟಿಯಾಗಿ ಎದುರಿಸಲು ಸಕಲ ಸಿದ್ದತೆಯಲ್ಲಿ ಇರುವ ಖೂಬಾ ಅವರು ಪಕ್ಷವನ್ನು ಬದಲಾಯಿಸುವ ನಿಣ೯ಯದಲ್ಲಿ ಚಿಂತಿಸುತಿದ್ದಾರೆ ಎಂಬ ಮಾತುಗಳು ಕೂಡ ಅಸ್ಪಷ್ಟವಾಗಿ ಕೇಳಿ ಬರುವಂತಿವೆ. ಆದರೆ ಖೂಬಾ ಅವರು ಯಾವುದೇ ಪಕ್ಷದಲ್ಲಿದ್ದರೂ ಅವರ ಗೆಲುವಿಗಾಗಿ ಪಣತೊಟ್ಟಿರುವ ಜನಬೆಂಬಲ ವಗ೯ ಒಂದೆಡೆ ಇದ್ದೇ ಇದೆ ಎಂಬುದು ಜನರ ಅಭಿಪ್ರಾಯದಲ್ಲಿ ಮನೆ ಮಾಡಿದೆ. ಅವರಿದ್ದರೆ ಅಭಿವ್ರದ್ದಿ ಕಾಮಗಾರಿಗಳು, ನೆನಗುದಿಗೆ ಬಿದ್ದಿರುವ ಭರವಸೆಗಳು ಚುರುಕಾದ ರೀತಿಯಲ್ಲಿ ಈಡೇರುತವೆ. ಜನಸಾಮಾನ್ಯರ ಸಕಾ೯ರಿ ಕೆಲಸಗಳು ಅಧಿಕಾರಿಗಳಿಂದ ಸುಲಭವಾಗಿ ಮಾಡಿಸಿಕೊಳ್ಳಬುದು ಎನ್ನುವವರಿದ್ದಾರೆ.

ಹೀಗೆನ್ನುವ ಅದೇ ಜನ ಕೆಲವೊಮ್ಮೆ ಆದರೆ... ಎಂಬ ಮಾತಿನೊಂದಿಗೆ ಮೌನವಹಿಸುತ್ತಾರೆ. ಒಟ್ಟಿನಲ್ಲಿ ಉತ್ತಮ, ವಿಶಿಷ್ಟ ನಾಯಕನ ಆಯ್ಕೆ, ಬಸವಕಲ್ಯಾಣ ಜನತೆಗೆ ಬೇಕಾಗಿದೆ. ಜನರ ಹಿತವನ್ನು ಕಾಪಾಡುವಂಥವರು, ಜನಸಾಮಾನ್ಯರ ಕೆಲಸಗಳು ಕಚೇರಿ ಕಾಯ೯ಗಳಲ್ಲಿ ಸುಲಭವಾಗಿ ನಡೆಯಬೇಕಾದರೆ ನಾಯಕನ ಆಯ್ಕೆಯಲ್ಲಿ ಜನರ ಮನದ ಮಾತು ಏನೆಂದು ಹೇಳದಂತೆ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಉತ್ತಮ ನಾಯಕನ ಆಯ್ಕೆ ಇಲ್ಲಿ ಮುಖ್ಯವಾಗಿರುವುದರಿಂದ ಯಾರೇ ಬಂದರೂ ಸ್ವಾಗತಿಸುವರಿಗೆ ಬೇಕಾಗಿರುವುದು ತಾಲೂಕಾ ಅಭಿವ್ರದ್ಧಿ ಎಂಬುದು ಮಾತ್ರ ಸ್ಪಷ್ಟವಾಗಿ ಕೇಳಿ ಬರುತಿದೆ.

ಒಟ್ಟಿನಲ್ಲಿ ಹೇಳುವುದಾದರೆ ಬಸವಕಲ್ಯಾಣದಲ್ಲಿರುವ ಕಾಂಗ್ರೇಸ್ ಪಕ್ಷದ ಪ್ರಬಲ ನಾಯಕರ ಕೊರತೆಯನ್ನು ಬಹುತೇಕ ನೀಗಿಸುವ ಪ್ರಯತ್ನದಲ್ಲಿ ಈಶ್ವರ ಖಂಡ್ರೆ ಅವರು ನಗರ ಸೇರಿದಂತೆ ತಾಲೂಕಿನಾದ್ಯಂತ ಗ್ರಾಮಗಳಲ್ಲಿ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಅವರೇ ಖುದ್ದಾಗಿ ಆಸಕ್ತಿಯನ್ನು ತೋರಿದರೆ ರಾಜಕೀಯ ಬೆಳವಣಿಗೆಯಲ್ಲಿ ಏನು ಬೇಕಾದರೂ ನಡೆಯಬುದೆಂದು ನಂಬುವಂತಾಗಿದೆ. ಶರಣರ ನಾಡಿನ ನೆಲದಲ್ಲಿ ಎಲ್ಲರೂ ಸಲ್ಲುವರೆಂಬ ಮಾತನ್ನು ಎಲ್ಲರೂ ಅರಗಿಸಿಕೊಳ್ಳುವರೇ ಎಂಬುದು ಕಾಲವೇ ನಿಣ೯ಯಿಸುವಂತಿದೆ. ಸ್ಥಳೀಯ ಮುಖಂಡರುಗಳು ಇದರಿಂದ ಸ್ವಲ್ಪವಾದರೂ ವಿಚಲಿತರಾಗದೇ ಇರಲಾರರು ಎಂಬುದು ಕೂಡ ಸತ್ಯವಾಗಿದೆ.