ಭಾನುವಾರ, ಏಪ್ರಿಲ್ 17, 2011

ಮಾಣಿಕ ಭುರೆ ಅವರಿಗೆ ಕಸಾಪ ದತ್ತಿ ಪ್ರಶಸ್ತಿ

 ಮಾಣಿಕ ಆರ್. ಭುರೆ ಅವರು ರಚಿಸಿದ ದಲಿತ ಪೀಠಾಧಿಪತಿ ಕ್ರತಿಗೆ ಜಿ.ಆರ್. ರೇವಯ್ಯ ದತ್ತಿ ಪ್ರಶಸ್ತಿ ಲಭಿಸಿದೆ.

         ಮಾಣಿಕ ಆರ್. ಭುರೆ
ಬಸವಕಲ್ಯಾಣಃ  ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನೀಡಲಾಗುವ ಪ್ರತಿವಷ೯ದಂತೆ 2010ನೆಯ ಸಾಲಿನ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು,  ಬಸವಕಲ್ಯಾಣದ ಲೇಖಕ ಹಾಗೂ ಪತ್ರಕತ೯ಕತ೯ರಾದ ಮಾಣಿಕ ಆರ್. ಭುರೆ ಅವರು ರಚಿಸಿದ ದಲಿತ ಪೀಠಾಧಿಪತಿ ಕ್ರತಿಗೆ ಜಿ.ಆರ್. ರೇವಯ್ಯ ದತ್ತಿ ಪ್ರಶಸ್ತಿ ಲಭಿಸಿದೆ.

ವಿವಿಧ ಪ್ರಕಾರದ ಸಾಹಿತ್ಯ ಕ್ರತಿಗಳಿಗೆ ರಾಜ್ಯಮಟ್ಟದ ಸ್ಪಧೆ೯ ನಡೆಸಿ ಉತ್ತಮ ಕ್ರತಿಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ಘೋಷಿಸಲಾಗಿದೆ. 2010ನೇ ಸಾಲಿನಲ್ಲಿ ಪ್ರಕಟಗೊಂಡ ಕ್ರತಿಗಳನ್ನು ಪರಿಶೀಲಿಸಿ ಒಟ್ಟು 28 ಕ್ರತಿಗಳನ್ನು ಆಯ್ಕೆ ಮಾಡಿ ವಿವಿಧ ಪ್ರಶಸ್ತಿಗಳನ್ನು ಕೊಡಲಾಗುತಿದ್ದು ಮಾಣಿಕ ಆರ್.ಭುರೆ ಅವರ ಕ್ರತಿ ದಲಿತ ಪೀಠಾಧಿಪತಿ ಅದರಲ್ಲಿ ಒಂದಾಗಿದೆ.

ಮಾಣಿಕ ಆರ್.ಭುರೆ ಅವರು ಅನುಭವ ಮಂಟಪ ಪ್ರಶಸ್ತಿ ಪುರಸ್ಕ್ರತರು ಮತ್ತು ದಲಿತ ಪೀಠಾಧಿಪತಿ ಎಂಬ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕಳೆದ 15 ವಷ೯ಗಳಿಂದ ಪತ್ರಕತ೯ರಾಗಿ ಸೇವೆ ಸಲ್ಲಿಸುತ್ತಿರುವ ಇವರು ವಿವಿಧ ಲೇಖನಗಳನ್ನು ಬರೆದಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಬಟಗೇರಾ ಗ್ರಾಮದವರಾದ ಇವರಿಗೆ ಇದುವರೆಗೆ ತಾಲ್ಲೂಕು ಆಡಳಿತದಿಂದ ರಾಜ್ಯೋತ್ಸವ ಸನ್ಮಾನ (2003), ಬೀದರ ಜಿಲ್ಲಾ ಮರಾಠಾ ಸಮಾಜ ಸೇವಾ ಸಮಿತಿಯ ಪತ್ರಿಕೋದ್ಯಮ ಕ್ಷೇತ್ರದ ಪ್ರಶಸ್ತಿ(2002), ಬೀದರ ಜಿಲ್ಲಾ 7ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ(2003), ಕಾಯ೯ನಿರತ ಪತ್ರಕತ೯ರ ಸಂಘದಿಂದ ತಾಲ್ಲೂಕು ಮಟ್ಟದ ಉತ್ತಮ ಪತ್ರಕತ೯ ಪ್ರಶಸ್ತಿ(2010), ಬಸವಕಲ್ಯಾಣ ಹಿತರಕ್ಷಣಾ ಸಮಿತಿಯ ವತಿಯಿಂದ ಉತ್ತಮ ಪತ್ರಕತ೯ ಪ್ರಶಸ್ತಿ(2004) ಹಾಗು ಸಾಕ್ಷಿ ಪ್ರತಿಷ್ಠಾನದ ಹೈ.ಕನಾ೯ಟಕ ಮಟ್ಟದ ಧರಿನಾಡು ಸಿರಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಕೊಟ್ಟು ಗೌರವ ಸನ್ಮಾನವನ್ನು ಮಾಡಲಾಗಿದೆ.

ಮಾಣಿಕ ಆರ್.ಭುರೆ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದಕ್ಕೆ ಇಲ್ಲಿನ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿದ್ದು, ಕಲ್ಯಾಣ ಕನ್ನಡ ಸಂಘದ ಅಧ್ಯಕ್ಷ ನಾಗೇಂದ್ರ ಬಿರಾದಾರ, ಭೀಮಾಶಂಕರ ಬಿರಾದಾರ, ರುದ್ರಮುನಿ ಮಠಪತಿ, ವೀರಶೆಟ್ಟಿ ಪಾಟೀಲ, ಪಂಚಾಕ್ಷರಿ ಹಿರೇಮಠ, ದೇವಿಂದ್ರ ಬರಗಾಲೆ, ಶಿವಕುಮಾರ ಮಠಪತಿ, ಶಾಂತಲಿಂಗ ಮಠಪತಿ, ಮಲ್ಲಿಕಾಜು೯ನ ಬಂಡೆ, ಅಶೋಕ ಢಗಳೆ, ಡಾ. ಗವಿಸಿದ್ಧಪ್ಪಾ ಪಾಟೀಲ, ಪ್ರಭುಲಿಂಗಯ್ಯ ಟಂಕಸಾಲಿಮಠ, ಗುರುನಾಥ ಗಡ್ಡೆ, ಕಲ್ಲಯಾಣರಾವ ಮದರಗಾಂವಕರ್, ರಾಜೇಂದ್ರ ಗೋಖಲೆ, ಉದಯ ಮುಳೆ, ಪಂಚಾಕ್ಷರಿ ಸ್ವಾಮಿ ಸೇರಿದಂತೆ ಮುಂತಾದವರು ಹಷ೯ವನ್ನು ವ್ಯಕ್ತಪಡಿಸಿದ್ದಾರೆ.



   ಬಸವ ಉತ್ಸವದ ಕುರಿತು ಶಾಸಕ ಅಟ್ಟೂರ್ ಅವರ ಪತ್ರಿಕಾಗೋಷ್ಠಿ
  ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಅವರು 2ನೆಯ ಬಸವ ಉತ್ಸವದ ಕುರಿತು ಮಾತನಾಡುತಿರುವ ಸಂದಭ೯ದಲ್ಲಿ
ಬಸವಕಲ್ಯಾಣಃ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಡಿಯಲ್ಲಿ ಇದೇ ಮಾಚ೯ 25 ರಿಂದ 27 ರವರೆಗೆ ನಡೆಯಲಿರುವ ಬಸವ ಉತ್ಸವಕ್ಕೆ ಸಂಪೂಣ೯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ಬಾರಿಯ ಉತ್ಸವದಂತೆ ಈ ಬಾರಿಯುೂ ಕೋಟೆಯಿಂದ ಹರಳಯ್ಯ ಚೌಕವರೆಗೆ ಭಾವೈಕ್ಯತೆಯ ಮೆರವಣಿಗೆಯಲ್ಲಿ ವಚನ ಸಾಹಿತ್ಯದ ಪುಸ್ತಕ ತಲೆಯ ಮೇಲೆ ಹೊತ್ತು ಅದ್ದೂರಿಯ ಕಾಯ೯ಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಬಸವರಾಜ ಪಾಟೀಲ ಅಟ್ಟೂರ್ ವಿವರಿಸಿದರು.
ಅವರು ತಮ್ಮ ನಿವಾಸದಲ್ಲಿ ಬುಧುವಾರ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ, ಬಸವೇಶ್ವರ ದೇವಸ್ಥಾನದಿಂದ ಕೋಟೆಯವರೆಗೆ ಬಸವ ಜ್ಯೋತಿ ಚಾಲನೆ ಹಾಗು ವಿವಿಧ ಶರಣರ ಕ್ಷೇತ್ರಗಳಿಂದ ಬಂದ ಧಮ೯ಜ್ಯೋತಿ ನೆರವೇರಲಿದೆ ಎಂದರು.
ಜಿಲ್ಲೆಯ ಎಲ್ಲಾ ಶಾಸಕರು ಕಾಯ೯ಕ್ರಮದಲ್ಲಿ ಭಾಗವಹಿಸುತಿದ್ದು, ಕಾಯ೯ಕ್ರಮ ಸಂಪೂಣ೯ ಯಶಸ್ವಿಗೊಳಿಸಲು ಎಲ್ಲಾ ತರಹದ ಪೂವ೯ ಸಿದ್ಧತೆಗಳು ನಡೆಯುತ್ತಿವೆ. ತಾಲೂಕಿನ ಮಸ್ತ ನಾಗರಿಕರು ಇದರಲ್ಲಿ ಪಾಲ್ಗೊಳ್ಳುವುದರ ಮುೂಲಕ ಪ್ರತಿಯೊಬ್ಬರು ಸಹಕರಿಸಬೇಕು. ಪ್ರತಿ ಗ್ರಾಮ ಹಳ್ಳಿಗಳಿಗೆ ವಿಶೇಷ ಬಸ್ ವ್ಯವಸ್ಥೆ ಕೂಡ ಮಾಡಲಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕರೆ ನೀದಿದರು.
ಮೆರವಣಿಗೆ ದಿನದಂದು ತಾಲೂಕಾ ಪಂಚಾಯತ್ ಸಮಿತಿ ವತಿಯಿಂದ ಉಚಿತವಾಗಿ ಮಜ್ಜಿಗೆ ಪೌಚ್ ನೀಡಲಾಗುತ್ತದೆ. ಕಾರಣ ಬಿಸಿಲಿನ ತಾಪ ಹೆಚ್ಚಿರುವ ಕಾರಣ ಇಂತಹ ಒಂದು ನಿಸ್ವಾಥ೯ ಸೇವೆಯನ್ನು ಮಾಡುವ ಉದ್ದೇಶ ತಾಲೂಕಾ ಪಂಚಾಯತ್ ಅಧ್ಯಕ್ಷರು ಹೊಂದಿದ್ದಾರೆ. ಬಸವ ಉತ್ಸವಕ್ಕಾಗಿ ಶಾಸಕರ ನಿಧಿಯಿಂದ 1 ಲಕ್ಷ ರು. ನೀಡಲಾಗಿದೆ. ಹಾಗೆಯೆ ಜಿಲ್ಲೆಯ ಎಲ್ಲಾ ಶಾಸಕರು ಸಹ ದಾಸೋಹ ವ್ಯವಸ್ಥೆಗೆ ತಲಾ ಒಂದೊಂದು ಲಕ್ಷ ರು. ನೀಡುತಿದ್ದಾರೆ ಎಂದು ಹೇಳಿದರು.
ಕ್ರಿಡಾಂಗಣ ಉದ್ಘಾಟನೆಃ 2 ಕೋಟಿ ರು. ವೆಚ್ಚದಲ್ಲಿ ನಿಮಾ೯ಣಗೊಂಡ ಸುಸಜ್ಜಿತ, ವಿಶಾಲವಾದ ಕ್ರಿಡಾಂಗಣವನ್ನು ಮಾ. 25 ರಂದು 4 ಗಂಟೆಗೆ ಉದ್ಘಾಟಿಸಲಿದ್ದು, ಯುಥ್ ಸನಿ೯ಸ್ ಮಂತ್ರಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯುೂರಪ್ಪ ಅವರ ಮುಂದೆ ಕೆಲವು ಬೇಡಿಕೆಗಳನ್ನು ಮುಂದಿಡಲಾಗಿದೆ ಎಂದರು.
ಕ್ರಿಡಾಂಗಣದಲ್ಲಿ ಇಂಟರನ್ಯಾಷನಲ್ ಸ್ವಿಮಿಂಗ್ ಫೂಲ್, ಓಪನ್ ಥೇಟರ್, ಜಿಮ್, ಸಾವ೯ಜನಿಕರಿಗಾಗಿ ಕ್ಲಬ್ ನಿಮಾ೯ಣ ಸೇರಿದಂತೆ ಮುಂತಾದ ಸೌಲಭ್ಯಕ್ಕಾಗಿ 5 ಕೋಟಿ ರು.ಗಳ ಬೇಡಿಕೆಯನ್ನು ಇಡಲಾಗುತ್ತದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ತಾ.ಪಂ. ಅಧ್ಯಕ್ಯ ಗುರುಲಿಂಗಪ್ಪ ಸೈದಾಪುರೆ, ಶಿವಪುತ್ರ ಗೌರ ಇದ್ದರು.
 
(ಮಾ. 25,2011ರಂದು ಜರುಗಿದ 2ನೆಯ ಬಸವ ಉತ್ಸವದ ಮೆರವಣಿಗೆ ಸಂದಭ೯ದಲ್ಲಿ ಜಿಲ್ಲಾಧಿಕಾರಿ ಸಮೀರ ಶುಕ್ಲಾ, ಶಾಸಕ ಬಸವರಾಜ ಪಾಟೀಲ ಅಟ್ಟೂರ್, ಅಕ್ಕ ಅನ್ನಪೂಣ೯, ಸೇರಿದಂತೆ ಮುಂತಾದ ಗಣ್ಯರು ಕಾಯ೯ಕ್ರಮದಲ್ಲಿ ಪಾಲ್ಗೊಂಡ ಸಂದಭ೯ದಲ್ಲಿ ಅಪರೂಪದ ಚಿತ್ರಗಳು. ಹಾಗೂ ಸಹಸ್ರಾರು ಜನಸಂಖ್ಯೆ ಮೆರವಣಿಗೆಯಲ್ಲಿ ಪಾಲ್ಗೊಂಡ ದ್ರಶ್ಯ.)











                                                                                     
 

ವೀರಣ್ಣ ಮಂಠಾಳಕರ್ ಅವರು ವಿಶೇಷ ಕಾಯ೯ಕ್ರಮಗಳಲ್ಲಿ

 ವಿವಿಧ ಸಂದಭ೯ಗಳಲ್ಲಿ ವೀರಣ್ಣ ಮಂಠಾಳಕರ್  ಅವರು ವಿಶೇಷ ಕಾಯ೯ಕ್ರಮಗಳಲ್ಲಿ ತೆಗೆಸಿಕೊಂಡಿರುವ ಫೋಟೊಗಳು.

ಬಸವಕಲ್ಯಾಣ ತಾಲೂಕಿನ ಬೇಲೂರಿನ ಉರಿಲಿಂಗ ಪೆದ್ದಿ ಪುಣ್ಯ ಸ್ಮರಣೋತ್ಸವದಲ್ಲಿ ಸಾಹಿತಿ ವೀರಣ್ಣ ಮಂಠಾಳಕರ್ ಹಾಗೂ ಕವಯಿತ್ರಿ ಮಲ್ಲೇಶ್ವರಿ ಉದಯಗಿರಿ ಅವರನ್ನು ಗೌರವ ಸನ್ಮಾನ ಮಾಡಿರುವ ಸಂದಭ೯ದಲ್ಲಿ
                                                                                        
 ವಿವಿಧ ಸಂದಭ೯ಗಳಲ್ಲಿ ವೀರಣ್ಣ ಮಂಠಾಳಕರ್  ಅವರು ವಿಶೇಷ ಕಾಯ೯ಕ್ರಮಗಳಲ್ಲಿ ತೆಗೆಸಿಕೊಂಡಿರುವ ಫೋಟೊಗಳು.

ವೀರಣ್ಣ ಮಂಠಾಳಕರ್ ಅವರ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನ ಬಿಡುಗಡೆಗೊಳಿಸಿದ ಸಂದಭ೯ದಲ್ಲಿ ಸುಕ್ಷೇತ್ರ ಹಾರಕೂಡದ ಚೆನ್ನವೀರ ಶಿವಾಚಾಯ೯ರು ಸನ್ಮಾನಿಸುತ್ತಿರುವ ಅಪರೂಪದ ಚಿತ್ರ.

ಮಂಠಾಳಕರ್ ಅವರ ಗಾಂಧಿ ಆಗ್ಬೇಕಂದುಕೊಂಡಾಗ ಪುಸ್ತಕ ಬಿಡುಗಡೆ ಮಾಡಿರುವ ಸಂದಭ೯ದಲ್ಲಿ
ಆಗ್ರಹಾರ ಕ್ರಷ್ಣಮುೂತಿ೯ ಅವರೊಂದಿಗೆ ಮಂಠಾಳಕರ್
ಮಂಠಾಳಕರ್ ಅವರ ಮಗ ಸುಮೀತ
ಮಂಠಾಳಕರ್ ಅವರ ಮಗ ಸುಮೀತ
ಮಂಠಾಳಕರ್ ಅವರ ಮಗ ಸುಮೀತ
ಬೀದರ ಜಿಲ್ಲಾ 10ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾವ್ಯ ವಾಚನ ಮಾಡುತ್ತಿರುವ ಮಂಠಾಳಕರ್
ಕನಾ೯ಟಕ ಸಾಹಿತ್ಯ ಅಕಾಡೆಮಿ ಕಾವ್ಯ ಕಮ್ಮಟದಲ್ಲಿ ಮಂಠಾಳಕರ್ ಅವರಿಗೆ ನೀಡಿರುವ ಪ್ರಶಸ್ತಿ ಪತ್ರ
ಉತ್ತಮ ಚುಟುಕು ಸಾಹಿತಿಯೆಂಬ ಪ್ರಮಾಣ ಪತ್ರ
ಬಾಲ್ಯದಲ್ಲಿ ಸ್ನೇಹಿತ ಅಸ್ಲಂನೊಂದಿಗೆ ಮಂಠಾಳಕರ್
ಕವಿಗೋಷ್ಠಿಯೊಂದರಲ್ಲಿ ಭಾಗವಹಿಸಿದ್ದ ಸಂದಭ೯ದಲ್ಲಿ ಮಂಠಾಳಕರ್
ಸಾಹಿತಿ, ಪತ್ರಕತ೯ ಮಹಿಪಾಲರೆಡ್ಡಿ ಅವರೊಂದಿಗೆ ಮಂಠಾಳಕರ್ ಹಾಗು ಯುವಕವಿ ವೀರಶೆಟ್ಟಿ ಪಾಟೀಲ
ಕವಿಗೋಷ್ಠಿಯೊಂದರಲ್ಲಿ ಭಾಗವಹಿಸಿ ಸ್ವಾಮಿಜಿಗಳಿಂದ ಗೌರವ ಸನ್ಮಾನ ಸ್ವೀಕರಿಸುತ್ತಿರುವ ಮಂಠಾಳಕರ್
ಮಂಠಾಳಕರ್ ಅವರ ಸೋದರಸೊಸೆ ವಿಜಯಲಕ್ಷ್ಮೀ
 ಡಾ. ಗವಿಸಿದ್ಧಪ್ಪ ಪಾಟೀಲ ಅವರಿಗೆ ವೀರಣ್ಣ ಮಂಠಾಳಕರ್ ಅವರು ಸನ್ಮಾನಿಸಿದ ಸಂದಭ೯ದಲ್ಲಿ ಕನಾ೯ಟಕ ಸಾಹಿತ್ಯ ಪರಿಷತ್ತಿನ ಪಂಚಾಕ್ಷರಿ ಹಿರೇಮಠ

ವಿವಿಧ ಸಂದಭ೯ಗಳಲ್ಲಿ ವೀರಣ್ಣ ಮಂಠಾಳಕರ್ ಅವರು ವಿಶೇಷ ಕಾಯ೯ಕ್ರಮಗಳಲ್ಲಿ ತೆಗೆಸಿಕೊಂಡಿರುವ ಫೋಟೊಗಳು. ಮತ್ತು ಮಂಠಾಳಕರ್ ಅವರ ಮಗ ಸುಮೀತ, ಹಾರಕೂಡದ ಶ್ರೀಗಳು ಮಂಠಾಳಕರ್ ಅವರ ಗಾಂಧಿ ಆಗ್ಬೇಕಂದುಕೊಂಡಾಗ ಪುಸ್ತಕ ಬಿಡುಗಡೆ ಮಾಡಿರುವ ಸಂದಭ೯ದಲ್ಲಿ ತೆಗೆದ ಅಪರೂಪದ ಚಿತ್ರಗಳು, ಸಾಹಿತಿ ಡಾ. ಗವಿಸಿದ್ಧಪ್ಪ ಪಾಟೀಲರು ಮಂಠಾಳಕರ್ ಅವರ ಪುಸ್ತಕದ ಪ್ರಕಾಶಕರಾಗಿದ್ದಾರೆ. ವಿವಿಧ ಕಾಯ೯ಕ್ರಮಗಳ ಕವಿಗೋಷ್ಠಿಗಳಲ್ಲಿ ಮತ್ತು ಸಾಹಿತಿ ಕಲಾವಿದರೊಂದಿಗೆ ತೆಗೆಸಿಕೊಂಡ ಅಪರೂಪದ ಚಿತ್ರಗಳು.