ಭಾನುವಾರ, ಏಪ್ರಿಲ್ 17, 2011

ಮಾಣಿಕ ಭುರೆ ಅವರಿಗೆ ಕಸಾಪ ದತ್ತಿ ಪ್ರಶಸ್ತಿ

 ಮಾಣಿಕ ಆರ್. ಭುರೆ ಅವರು ರಚಿಸಿದ ದಲಿತ ಪೀಠಾಧಿಪತಿ ಕ್ರತಿಗೆ ಜಿ.ಆರ್. ರೇವಯ್ಯ ದತ್ತಿ ಪ್ರಶಸ್ತಿ ಲಭಿಸಿದೆ.

         ಮಾಣಿಕ ಆರ್. ಭುರೆ
ಬಸವಕಲ್ಯಾಣಃ  ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನೀಡಲಾಗುವ ಪ್ರತಿವಷ೯ದಂತೆ 2010ನೆಯ ಸಾಲಿನ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು,  ಬಸವಕಲ್ಯಾಣದ ಲೇಖಕ ಹಾಗೂ ಪತ್ರಕತ೯ಕತ೯ರಾದ ಮಾಣಿಕ ಆರ್. ಭುರೆ ಅವರು ರಚಿಸಿದ ದಲಿತ ಪೀಠಾಧಿಪತಿ ಕ್ರತಿಗೆ ಜಿ.ಆರ್. ರೇವಯ್ಯ ದತ್ತಿ ಪ್ರಶಸ್ತಿ ಲಭಿಸಿದೆ.

ವಿವಿಧ ಪ್ರಕಾರದ ಸಾಹಿತ್ಯ ಕ್ರತಿಗಳಿಗೆ ರಾಜ್ಯಮಟ್ಟದ ಸ್ಪಧೆ೯ ನಡೆಸಿ ಉತ್ತಮ ಕ್ರತಿಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ಘೋಷಿಸಲಾಗಿದೆ. 2010ನೇ ಸಾಲಿನಲ್ಲಿ ಪ್ರಕಟಗೊಂಡ ಕ್ರತಿಗಳನ್ನು ಪರಿಶೀಲಿಸಿ ಒಟ್ಟು 28 ಕ್ರತಿಗಳನ್ನು ಆಯ್ಕೆ ಮಾಡಿ ವಿವಿಧ ಪ್ರಶಸ್ತಿಗಳನ್ನು ಕೊಡಲಾಗುತಿದ್ದು ಮಾಣಿಕ ಆರ್.ಭುರೆ ಅವರ ಕ್ರತಿ ದಲಿತ ಪೀಠಾಧಿಪತಿ ಅದರಲ್ಲಿ ಒಂದಾಗಿದೆ.

ಮಾಣಿಕ ಆರ್.ಭುರೆ ಅವರು ಅನುಭವ ಮಂಟಪ ಪ್ರಶಸ್ತಿ ಪುರಸ್ಕ್ರತರು ಮತ್ತು ದಲಿತ ಪೀಠಾಧಿಪತಿ ಎಂಬ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕಳೆದ 15 ವಷ೯ಗಳಿಂದ ಪತ್ರಕತ೯ರಾಗಿ ಸೇವೆ ಸಲ್ಲಿಸುತ್ತಿರುವ ಇವರು ವಿವಿಧ ಲೇಖನಗಳನ್ನು ಬರೆದಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಬಟಗೇರಾ ಗ್ರಾಮದವರಾದ ಇವರಿಗೆ ಇದುವರೆಗೆ ತಾಲ್ಲೂಕು ಆಡಳಿತದಿಂದ ರಾಜ್ಯೋತ್ಸವ ಸನ್ಮಾನ (2003), ಬೀದರ ಜಿಲ್ಲಾ ಮರಾಠಾ ಸಮಾಜ ಸೇವಾ ಸಮಿತಿಯ ಪತ್ರಿಕೋದ್ಯಮ ಕ್ಷೇತ್ರದ ಪ್ರಶಸ್ತಿ(2002), ಬೀದರ ಜಿಲ್ಲಾ 7ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ(2003), ಕಾಯ೯ನಿರತ ಪತ್ರಕತ೯ರ ಸಂಘದಿಂದ ತಾಲ್ಲೂಕು ಮಟ್ಟದ ಉತ್ತಮ ಪತ್ರಕತ೯ ಪ್ರಶಸ್ತಿ(2010), ಬಸವಕಲ್ಯಾಣ ಹಿತರಕ್ಷಣಾ ಸಮಿತಿಯ ವತಿಯಿಂದ ಉತ್ತಮ ಪತ್ರಕತ೯ ಪ್ರಶಸ್ತಿ(2004) ಹಾಗು ಸಾಕ್ಷಿ ಪ್ರತಿಷ್ಠಾನದ ಹೈ.ಕನಾ೯ಟಕ ಮಟ್ಟದ ಧರಿನಾಡು ಸಿರಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಕೊಟ್ಟು ಗೌರವ ಸನ್ಮಾನವನ್ನು ಮಾಡಲಾಗಿದೆ.

ಮಾಣಿಕ ಆರ್.ಭುರೆ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದಕ್ಕೆ ಇಲ್ಲಿನ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿದ್ದು, ಕಲ್ಯಾಣ ಕನ್ನಡ ಸಂಘದ ಅಧ್ಯಕ್ಷ ನಾಗೇಂದ್ರ ಬಿರಾದಾರ, ಭೀಮಾಶಂಕರ ಬಿರಾದಾರ, ರುದ್ರಮುನಿ ಮಠಪತಿ, ವೀರಶೆಟ್ಟಿ ಪಾಟೀಲ, ಪಂಚಾಕ್ಷರಿ ಹಿರೇಮಠ, ದೇವಿಂದ್ರ ಬರಗಾಲೆ, ಶಿವಕುಮಾರ ಮಠಪತಿ, ಶಾಂತಲಿಂಗ ಮಠಪತಿ, ಮಲ್ಲಿಕಾಜು೯ನ ಬಂಡೆ, ಅಶೋಕ ಢಗಳೆ, ಡಾ. ಗವಿಸಿದ್ಧಪ್ಪಾ ಪಾಟೀಲ, ಪ್ರಭುಲಿಂಗಯ್ಯ ಟಂಕಸಾಲಿಮಠ, ಗುರುನಾಥ ಗಡ್ಡೆ, ಕಲ್ಲಯಾಣರಾವ ಮದರಗಾಂವಕರ್, ರಾಜೇಂದ್ರ ಗೋಖಲೆ, ಉದಯ ಮುಳೆ, ಪಂಚಾಕ್ಷರಿ ಸ್ವಾಮಿ ಸೇರಿದಂತೆ ಮುಂತಾದವರು ಹಷ೯ವನ್ನು ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳಿಲ್ಲ: