ಭಾನುವಾರ, ಏಪ್ರಿಲ್ 17, 2011



   ಬಸವ ಉತ್ಸವದ ಕುರಿತು ಶಾಸಕ ಅಟ್ಟೂರ್ ಅವರ ಪತ್ರಿಕಾಗೋಷ್ಠಿ
  ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಅವರು 2ನೆಯ ಬಸವ ಉತ್ಸವದ ಕುರಿತು ಮಾತನಾಡುತಿರುವ ಸಂದಭ೯ದಲ್ಲಿ
ಬಸವಕಲ್ಯಾಣಃ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಡಿಯಲ್ಲಿ ಇದೇ ಮಾಚ೯ 25 ರಿಂದ 27 ರವರೆಗೆ ನಡೆಯಲಿರುವ ಬಸವ ಉತ್ಸವಕ್ಕೆ ಸಂಪೂಣ೯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ಬಾರಿಯ ಉತ್ಸವದಂತೆ ಈ ಬಾರಿಯುೂ ಕೋಟೆಯಿಂದ ಹರಳಯ್ಯ ಚೌಕವರೆಗೆ ಭಾವೈಕ್ಯತೆಯ ಮೆರವಣಿಗೆಯಲ್ಲಿ ವಚನ ಸಾಹಿತ್ಯದ ಪುಸ್ತಕ ತಲೆಯ ಮೇಲೆ ಹೊತ್ತು ಅದ್ದೂರಿಯ ಕಾಯ೯ಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಬಸವರಾಜ ಪಾಟೀಲ ಅಟ್ಟೂರ್ ವಿವರಿಸಿದರು.
ಅವರು ತಮ್ಮ ನಿವಾಸದಲ್ಲಿ ಬುಧುವಾರ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ, ಬಸವೇಶ್ವರ ದೇವಸ್ಥಾನದಿಂದ ಕೋಟೆಯವರೆಗೆ ಬಸವ ಜ್ಯೋತಿ ಚಾಲನೆ ಹಾಗು ವಿವಿಧ ಶರಣರ ಕ್ಷೇತ್ರಗಳಿಂದ ಬಂದ ಧಮ೯ಜ್ಯೋತಿ ನೆರವೇರಲಿದೆ ಎಂದರು.
ಜಿಲ್ಲೆಯ ಎಲ್ಲಾ ಶಾಸಕರು ಕಾಯ೯ಕ್ರಮದಲ್ಲಿ ಭಾಗವಹಿಸುತಿದ್ದು, ಕಾಯ೯ಕ್ರಮ ಸಂಪೂಣ೯ ಯಶಸ್ವಿಗೊಳಿಸಲು ಎಲ್ಲಾ ತರಹದ ಪೂವ೯ ಸಿದ್ಧತೆಗಳು ನಡೆಯುತ್ತಿವೆ. ತಾಲೂಕಿನ ಮಸ್ತ ನಾಗರಿಕರು ಇದರಲ್ಲಿ ಪಾಲ್ಗೊಳ್ಳುವುದರ ಮುೂಲಕ ಪ್ರತಿಯೊಬ್ಬರು ಸಹಕರಿಸಬೇಕು. ಪ್ರತಿ ಗ್ರಾಮ ಹಳ್ಳಿಗಳಿಗೆ ವಿಶೇಷ ಬಸ್ ವ್ಯವಸ್ಥೆ ಕೂಡ ಮಾಡಲಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕರೆ ನೀದಿದರು.
ಮೆರವಣಿಗೆ ದಿನದಂದು ತಾಲೂಕಾ ಪಂಚಾಯತ್ ಸಮಿತಿ ವತಿಯಿಂದ ಉಚಿತವಾಗಿ ಮಜ್ಜಿಗೆ ಪೌಚ್ ನೀಡಲಾಗುತ್ತದೆ. ಕಾರಣ ಬಿಸಿಲಿನ ತಾಪ ಹೆಚ್ಚಿರುವ ಕಾರಣ ಇಂತಹ ಒಂದು ನಿಸ್ವಾಥ೯ ಸೇವೆಯನ್ನು ಮಾಡುವ ಉದ್ದೇಶ ತಾಲೂಕಾ ಪಂಚಾಯತ್ ಅಧ್ಯಕ್ಷರು ಹೊಂದಿದ್ದಾರೆ. ಬಸವ ಉತ್ಸವಕ್ಕಾಗಿ ಶಾಸಕರ ನಿಧಿಯಿಂದ 1 ಲಕ್ಷ ರು. ನೀಡಲಾಗಿದೆ. ಹಾಗೆಯೆ ಜಿಲ್ಲೆಯ ಎಲ್ಲಾ ಶಾಸಕರು ಸಹ ದಾಸೋಹ ವ್ಯವಸ್ಥೆಗೆ ತಲಾ ಒಂದೊಂದು ಲಕ್ಷ ರು. ನೀಡುತಿದ್ದಾರೆ ಎಂದು ಹೇಳಿದರು.
ಕ್ರಿಡಾಂಗಣ ಉದ್ಘಾಟನೆಃ 2 ಕೋಟಿ ರು. ವೆಚ್ಚದಲ್ಲಿ ನಿಮಾ೯ಣಗೊಂಡ ಸುಸಜ್ಜಿತ, ವಿಶಾಲವಾದ ಕ್ರಿಡಾಂಗಣವನ್ನು ಮಾ. 25 ರಂದು 4 ಗಂಟೆಗೆ ಉದ್ಘಾಟಿಸಲಿದ್ದು, ಯುಥ್ ಸನಿ೯ಸ್ ಮಂತ್ರಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯುೂರಪ್ಪ ಅವರ ಮುಂದೆ ಕೆಲವು ಬೇಡಿಕೆಗಳನ್ನು ಮುಂದಿಡಲಾಗಿದೆ ಎಂದರು.
ಕ್ರಿಡಾಂಗಣದಲ್ಲಿ ಇಂಟರನ್ಯಾಷನಲ್ ಸ್ವಿಮಿಂಗ್ ಫೂಲ್, ಓಪನ್ ಥೇಟರ್, ಜಿಮ್, ಸಾವ೯ಜನಿಕರಿಗಾಗಿ ಕ್ಲಬ್ ನಿಮಾ೯ಣ ಸೇರಿದಂತೆ ಮುಂತಾದ ಸೌಲಭ್ಯಕ್ಕಾಗಿ 5 ಕೋಟಿ ರು.ಗಳ ಬೇಡಿಕೆಯನ್ನು ಇಡಲಾಗುತ್ತದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ತಾ.ಪಂ. ಅಧ್ಯಕ್ಯ ಗುರುಲಿಂಗಪ್ಪ ಸೈದಾಪುರೆ, ಶಿವಪುತ್ರ ಗೌರ ಇದ್ದರು.
 
(ಮಾ. 25,2011ರಂದು ಜರುಗಿದ 2ನೆಯ ಬಸವ ಉತ್ಸವದ ಮೆರವಣಿಗೆ ಸಂದಭ೯ದಲ್ಲಿ ಜಿಲ್ಲಾಧಿಕಾರಿ ಸಮೀರ ಶುಕ್ಲಾ, ಶಾಸಕ ಬಸವರಾಜ ಪಾಟೀಲ ಅಟ್ಟೂರ್, ಅಕ್ಕ ಅನ್ನಪೂಣ೯, ಸೇರಿದಂತೆ ಮುಂತಾದ ಗಣ್ಯರು ಕಾಯ೯ಕ್ರಮದಲ್ಲಿ ಪಾಲ್ಗೊಂಡ ಸಂದಭ೯ದಲ್ಲಿ ಅಪರೂಪದ ಚಿತ್ರಗಳು. ಹಾಗೂ ಸಹಸ್ರಾರು ಜನಸಂಖ್ಯೆ ಮೆರವಣಿಗೆಯಲ್ಲಿ ಪಾಲ್ಗೊಂಡ ದ್ರಶ್ಯ.)











                                                                                     
 

ಕಾಮೆಂಟ್‌ಗಳಿಲ್ಲ: