ಬುಧವಾರ, ಏಪ್ರಿಲ್ 27, 2011

ವರದಿ-ವೀರಣ್ಣ ಮಂಠಾಳಕರ್
-------------------------------
ಮಂಠಾಳ ಸಕಾ೯ರಿ ಆಸ್ಪತ್ರೆಯ ಹೊರನೋಟದ ಚಿತ್ರ

ವೈದ್ಯರಿಗಾಗಿ ಕಾದು ಕುಳಿತಿರುವ ಹೊರ ರೋಗಿಗಳು.
ವೈದ್ಯರುಗಳ ದಿವ್ಬ ನಿಲ೯ಕ್ಷಃ ರೋಗಿಗಳಿಲ್ಲದೇ ಖಾಲಿಯಾಗಿ ಬಿದ್ದಿರುವ ಸಕಾ೯ರಿ ಆಸ್ಪತ್ರೆಯಲ್ಲಿನ ಹಾಸಿಗೆಗಳು.

ಬಸವಕಲ್ಯಾಣಃ ಸಕಾ೯ರಿ ಆಸ್ಪತ್ರೆಗಳೆಂದರೆ ಇನ್ನೂ ಮುಂದೆ ಕನಸಿನ ಮಾತಾಗುತದೇನೋ ಎನ್ನುವಷ್ಟರ ಮಟ್ಟಿಗೆ ಆಸ್ಪತ್ರೆಗಳಲ್ಲಿನ ವ್ಯವಸ್ಥೆಗೆ ಜನ ಬೇಸತ್ತು ಖಾಸಗಿ ಆಸ್ಪತ್ರೆಗಳತ್ತ ಮುಖಮಾಡಿ ನಿಲ್ಲುವಂತಾಗಿದೆ. ಅದೇ ಸಕಾ೯ರಿ ಆಸ್ಪತ್ರೆಗಳಲ್ಲಿರುವ ವೈದ್ಯರುಗಳು ತಮ್ಮ ಖಾಸಗಿ ಆಸ್ಪತ್ರೆಳಲ್ಲಿ ರೋಗಿಗಳಿಗೆ ತಪಾಸಣೆ ಮಾಡಿ, ಯಾವುದೇ ಚಿಕಿತ್ಸೆಗೆ ಮುಂದಾಗುತ್ತಾರೆ. ಆದರೆ ಸಕಾ೯ರದ ಸೌಲಭ್ಯಗಳನ್ನು ಅರಸಿಕ್ಕೂಂಡು ಸಕಾ೯ರಿ ಆಸ್ಪತ್ರೆಗಳಿಗೆ ಬರುವವ ರೋಗಿಗಳನ್ನು ದೂರದ್ರಷ್ಠಿಯಿಂದ ನೋಡುತ್ತಾರೇಕೆ ಎಂಬುದು ಜನರಲ್ಲಿ ಯಕ್ಷಪ್ರಶ್ನೆಯಾಗಿ ಉಳಿಯುತ್ತಿದೆ.

ಜನಗಳ ಬೇಸರಕ್ಕೆ ಕಾರಣವಾಗಿರುವ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿರುವ ಸಕಾ೯ರಿ ಆಸ್ಪತ್ರೆಗಳಲ್ಲಿ ಮುೂರು ಜನ ವೈದ್ಯರುಗಳು ಸೇರಿದಂತೆ ಒಟ್ಟು 25 ಜನ ಸಿಬ್ಬಂದಿಗಳಿದ್ದರೂ ಇಲ್ಲಿ ಯಾವುದೇ ರೀತಿಯ ಚಿಕಿತ್ಸೆ ದೊರೆಯುತದೆಂಬ ಭರವಸೆ ಇಲ್ಲ. ಹಾಗೊಂದು ವೇಳೆ ನಂಬಿಕೊಂಡು ಹೋದರೆ ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಶ್ರೀಮಂತ ಜನ ಖಾಸಗಿ ಆಸ್ಪತ್ರೆಗಳನ್ನಾದರೂ ಅರಸಿಕೊಂಡು ಹೋಗಬಹುದು. ಬಡ ಜನತೆ ಎಲ್ಲಿ ಹೋಗಬೇಕೆಂಬುದು ಇಲ್ಲಿನ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿರುವ ಬಡವರ ಅಳಲಾಗಿದೆ.

ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯೇ ಇಲ್ಲವೆಂದ ಮೇಲೆ ಹೋಗಿ ಉಪಯೋಗವೇನು? ಎಂದು ಬಾವಿಸಿರುವಿದರಿಂದ ಆಸ್ಪತ್ರೆಯಲ್ಲಿನ ಹಾಸಿಗೆಗಳೆಲ್ಲ ಖಾಲಿ ಖಾಲಿಯಾಗಿಯೇ ಉಳಿದು ಬಿಟ್ಟಿವೆ. ತುತು೯ ಹೇರಿಗೆಗಂದು ಬರುವವರಿಗಿಲ್ಲಿ ಸ್ಮಶಾನ ಸದ್ರಸ್ಯದ ಅನುಭವವಾಗದೇ ಇರದು. ಸಾಮಾನ್ಯ ಜ್ವರಕ್ಕೂ ಪರದಾಡುವಂಥ ಸ್ಥಿತಿ ಮಂಠಾಳ ಆಸ್ಪತ್ರೆಯಲ್ಲಿ ಇರುವುದರಿಂದ ಊರಿಗೊಂದು ದೊಡ್ಡ ಆಸ್ಪತ್ರೆಯಿದ್ದರೂ ಗ್ರಾಮದ ಸುತ್ತಲಿರುವ ಹತ್ತಾರು ಹಳ್ಳಿಗಳ ಜನ ತೀರಾ ತೊಂದರೆ ಅನುಭವಿಸುವಂತಾಗಿದೆ.

ಇಲ್ಲಿನ ವ್ಯವಸ್ಥೆಗಳ ಕುರಿತು ಖುದ್ದಾಗಿ ಕನ್ನಡಪ್ರಭ ಪ್ರತಿನಿಧಿ ವೈದ್ಯರುಗಳನ್ನು ಸಂಪಕಿ೯ಸಿದಾಗ, ನಾವೇನು ಮಾಡುವುದು, ಈ ಆಸ್ಪತ್ರಯಲ್ಲಿ ಕೊಟ್ಟಿರುವಂಥ ಸೌಲಭ್ಯಗಳನ್ನು ಎಷ್ಟಿದೆಯೋ ಅಷ್ಟು ಜನರಿಗೆ ತಲುಪಿಸುತ್ತಿದ್ದೇವೆ. ಇಲ್ಲದ್ದನ್ನು ಕೊಡುವುದಕ್ಕೆ ನಮಗೆ ಆದೇಶವಿಲ್ಲ. ಇದ್ದಂಥ ಮುೂರು ಜನ ವೈದ್ಯರುಗಳಲ್ಲಿ ಇಬ್ಬರನ್ನು ಈಗಾಗಲೆ ವಗಾ೯ವಣೆ ಆಗಿದೆ. ಇರುವುದು ಈಗ ಒಬ್ಬರೆ ಮೂರು ಜನ ವೈದ್ಯರುಳಿರುವಾಗಲೆ ರೋಗಿಗಳ ಆರೈಕೆ ಆಗುತ್ತಿಲ್ಲವೆಂದು ದೂರುತ್ತಿದ್ದಾರೆ. ಈಗ ಊರಿನ ಜನ ಅದೇಷ್ಟು ದೂರುಗಳನ್ನು ಯಾರ ಮೇಲೆ ಕೊಡುತ್ತಾರೆ ಕೊಡಲಿ ಎನ್ನುವಂತೆ ಉಡಾಫೆಯ ಮಾತುಗಳನ್ನು ಇಲ್ಲಿ ಕೇಳಿ ಬರುತವೆ.

ಈ ಹಿಂದೆ ಕನ್ನಡಪ್ರಭ ಪತ್ರಿಕೆ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಮಂಠಾಳ ಸಕಾ೯ರಿ ಆಸ್ಪತ್ರೆ ಅವ್ಯವಸ್ಥೆಯ ಕುರಿತು ಬರೆದ ವರದಿಗೆ ಆಕ್ರೋಶದಿಂದ ಪ್ರತಿಕ್ರಿಯಿಸುವ ವೈದ್ಯರು, ಸಕಾ೯ರದ ಆದೇಶದಂತೆ ಕತ೯ವ್ಯ ಪಾಲಿಸುತಿದ್ದೇವೆ ಎನ್ನುತ್ತಾರೆ. ಸಕಾ೯ರದ ಆದೇಶದಲ್ಲಿ ರೋಗಿಗಳಿಗೆ ಚಿಕಿತ್ಸೆಯೇ ಇಲ್ಲವೆನ್ನುವಂತೆ ಮಾತಾಡುವ ಅವರು ಸಕಾ೯ರದ ಕೆಲಸ ದೇವರ ಕೆಲಸವೆಂದು ಭಾವಿಸುವುದಕ್ಕೆ ಇಲ್ಲಿ ತದ್ವಿರುದ್ಧವಾಗಿದೆ ಎಂದರೆ ತಪ್ಪಾಗಲಾರದು.

ದಿನನಿತ್ಯ ಬರುವ ರೋಗಿಗಳು ವೈದ್ಯರುಗಳಿಗಾಗಿ ಗಂಟೆಗಟ್ಟಲೆ ಕಾದು ಕುಳಿತರೂ ಸರಿಯಾದ ಸಮಯಕ್ಕೆ ಬಾರದೆ ಇರುವುದರಿಂದ ಸಾವಿರಾರು ರುಪಾಯಿ ಖಚು೯ ಮಾಡಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾದ್ದು ಅನಿವಾಯ೯ವಾಗಿದೆ. ಆಸ್ಪತ್ರೆಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಕೂಡಲೇ ಗಮನ ಹರಿಸಿದರೆ ಇಲ್ಲಿರುವ ಗೊಂದಲ ಹಾಗೂ ವ್ಯವಸ್ಥೆ ಸರಿಪಡಿಸಲು ತಡವೇನಿಲ್ಲ.

ಒಂದು ವೇಳೆ ಹೀಗೆಯೇ ನಿಲ೯ಕ್ಷಿಸುತ್ತಾ ನಡೆದರೆ ಮುಂದೊಂದು ದಿನ ಮಂಠಾಳದಲ್ಲಿರುವ ಸಕಾ೯ರಿ ಆಸ್ಪತ್ರೆ ಮುಚ್ಚಿ ಹೋಗುವುದರಲ್ಲಿ ಅನುಮಾನವೇ ಇಲ್ಲ. ಆಸ್ಪತ್ರೆ ಮುಚ್ಚಿ ಹೇಗುವುದಕ್ಕಿಂತ ಮುನ್ನ ಸಂಬಂಧಿಸಿದವರು ಇತ್ತ ಮುಖಮಾಡಿ ನಿಲ್ಲಲಿ ಎಂಬುದು ಜನರ ಆಶಯವಾಗಿದೆ. ಇಲ್ಲಿಗೆ ಸೂಕ್ತ ವೈದ್ಯರನ್ನು ನೇಮಿಸಿ ಜನರ ಬಗ್ಗೆ ಕಾಳಜಿ, ಕೆಲಸದ ಮೇಲೆ ಆಸಕ್ತಿ ಇದ್ದವರನ್ನು ಮಾತ್ರ ಆಸ್ಪತ್ರೆಗೆ ನೇಮಿಸಬೇಕೆಂದು ಜನ ಒತ್ತಾಯಿಸುತ್ತಾರೆ.
                                                                                                       -ವೀರಣ್ಣ ಮಂಠಾಳಕರ್

ಸಕಾ೯ರಿ ಆಸ್ಪತ್ರೆಗಳಲ್ಲಿ ವೈದ್ಯರುಗಳ ದಿವ್ಯ ನಿಲ೯ಕ್ಷ

ವಿಶೇಷ ವರದಿ-ವೀರಣ್ಣ ಮಂಠಾಳಕರ್

ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಇಲ್ಲದಿರುವುದರಿಂದ ರೋಗಿಗಳಿಲ್ಲದೇ ಖಾಲಿಯಾಗಿರುವ ಹಾಸಿಗೆಗಳು

ವೀರಣ್ಣ ಮಂಠಾಳಕರ್