ಸೋಮವಾರ, ಏಪ್ರಿಲ್ 23, 2012

ಬಸವಕಲ್ಯಾಣ, ಏ. 23

ಹಿಂದೂ ಸಾಮ್ರಾಜ್ಜವನ್ನು ಕಟ್ಟಲು ಪ್ರಯತ್ನಿಸಿದ ಛತ್ರಪತಿ ಶಿವಾಜಿ ಮಹಾರಾಜರು ಅತೀ ಚಾಣಕ್ಷ ಮಹಾಪುರುಷರಾಗಿದ್ದರು. ಅವರ ಜೀವನ ಸಾಧನೆಯನ್ನು ನೋಡಿದರೆ ರೋಮಾಂಚನಗೊಳ್ಳುತ್ತೇವೆ ಎಂದು ಸಹಾಯಕ ಆಯುಕ್ತ ಎಚ್್. ಪ್ರಸನ್ನ ಅಭಿಪ್ರಾಯಪಟ್ಟರು.

ನಗರದ ಹಳೇ ತಹಸೀಲ್್ ಕಚೇರಿ ಆವರಣದಲ್ಲಿ ಸೋಮವಾರ ತಾಲೂಕಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವದ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡ ನಂತರ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದರು.

ಇಡೀ ರಾಜ್ಯದಲ್ಲಿ ಸಕಾ೯ರದ ಆದೇಶದಂತೆ ಇದೇ ಪ್ರಥಮ ಬಾರಿಗೆ ಆಚರಿಸಲಾಗುತ್ತಿರುವ ಶಿವಾಜಿ ಮಹಾರಾಜರ ಜಯಂತಿ ಆಚರಣೆಯಿಂದ ಜೀವಮಾನವಿಡೀ ಪ್ರತಿಬಿಂಬಿಸಿದ ಅವರ ಶಕ್ತಿ ಸಾಮಥ್ಯ೯ಕ್ಕೆ ಕೊಡುವ ಗೌರವ ಇದಾಗಿದೆ ಎಂದರು.

ತಾಯಿ ಜೀಜಾಬಾಯಿ ಆಶ್ರಯದಲ್ಲಿ ಬೆಳೆದ ಶಿವಾಜಿ ವೀರ ಪುರುಷರಾಗಿದ್ದರು. ಯುದ್ಧದಲ್ಲಿ ನೌಪುಣ್ಯತೆ ಹೊಂದಿದ್ದ ಅವರು ಧಾಮಿ೯ಕ ನೆಲೆಗಟ್ಟಿನಲ್ಲಿ ಬೆಳೆದವರಾಗಿದ್ದರು. ಮೊಗಲ ರಾಜರಿಗೂ ಸಹ ಶಿವಾಜಿ ಮಹಾರಾಜರ ಯುದ್ಧ ಕಲೆ ಅರಿತುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಮಹಾನ್್ ಪುರುಷರನ್ನು ಇತಿತಹಾಸವನ್ನಾಳಿದ ಶಿವಾಜಿ ಮಹಾರಾಜರಿಗೆ ಸ್ಮರಿಸುವ ಗೌರವ ಭಾವನೆ ಪ್ರತಿಯೊಬ್ಬರಲ್ಲೂ ಇರಬೇಕು. ಮನಸ್ತಾಪಗಳನ್ನು ಮರೆತು ಸೌಹಾಧ೯ಯುತವಾಗಿ ಜಯಂತಿ ಆಚರಣೆ ಪ್ರತಿ ವಷ೯ ಮಾಡುವುದರಿಂದ ಅದಕ್ಕೆ ಮಹತ್ವವನ್ನು ಬರುವಂತಾಗಬೇಕು ಎಂದು ಕರೆ ನೀಡಿದರು.

ನಗರಸಭೆ ಅಧ್ಯಕ್ಷೆ ಮಂಗಲಾಬಾಯಿ ಉದರೆ, ಉಪಾಧ್ಯಕ್ಷೆ ಗೀತಾ ಅಂಬಾದಾಸ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ರವಿ ಚಂದನಕೇರೆ, ಎಪಿಎಂಸಿ ಅಧ್ಯಕ್ಷ ಪ್ರಕಾಶ ಮೆಂಡೋಳೆ, ಪಾಶಾಮಿಯ್ಯಾ ರೆಹಮಾನ ಸಾಬ ವೇದಿಕೆಯಲ್ಲಿದ್ದರು. ವಿಶೇಷ ಉಪನ್ಯಾಸಕರಾಗಿ  ಡಾ. ಶಾಮ ಮೋರೆ ಹಾಗೂ ದೇವಾ ಚಹ್ವಾಣ್್ ಉಪಸ್ಥಿತರಿದ್ದರು.

ನಗರದ ಕೋಟೆಯಿಂದ ಪ್ರಾರಂಭವಾದ ಛತ್ರಪತಿ ಶಿವಾಜಿ ಭಾವಚಿತ್ರದ ಮೆರವಣಿಗೆ ಪ್ರಮುಖ ಬೀದಿಗಳಿಂದ ಆಗಮಿಸಿ ಶಿವಾಜಿ ಮಹಾರಾಜರ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು. ಈ ಸಂದಭ೯ದಲ್ಲಿ ಅನೇಕ ರಾಜಕೀಯ ಗಣ್ಯರು, ವಿವಿಧ ಸಂಘಟಕರು ಪಾಲ್ಗೊಂಡಿದ್ದರು.