ಗುರುವಾರ, ಮಾರ್ಚ್ 21, 2013

ಜಾತಿ, ಮತ, ಧಮ೯ ಮೀರಿ ಆಚರಿಸುವ ಹಬ್ಬ : ಮೈ ಮನಕ್ಕೆ ರಂಗೋಲಿ ಹಾಕುವ ಹೋಳಿಯಿದು

  21,302013 ರಂದು ಕನ್ನಡಪ್ರಭದಲ್ಲಿ ಪ್ರಕಟವಾದ ವರದಿ ಲೇಖನದ ಸ್ಕ್ಯಾನ್
 ವೀರಣ್ಣ ಮಂಠಾಳಕರ್
ಬಸವಕಲ್ಯಾಣ, ಮಾ.21,ಎಲ್ಲರೂ ಕುಣಿದು ಕುಪ್ಪಳಿಸುವ ಬಣ್ಣದೋಕುಳಿಯ ಹಬ್ಬ ಹೋಳಿ ರಂಗಿನಾಟದಲ್ಲಿ ವಯಸ್ಸಿನ ಭೇದಭಾವವಿಲ್ಲದೇ ಸಂಭ್ರಮಿಸುವ ಕ್ಷಣ ಇನ್ನೇನು ಬಂದೇ ಬಿಟ್ಟಿತ್ತು. ಇದೇ ಮಾ.26ರಂದು ಹಿಂದೂಗಳ ಹಬ್ಬವೆಂದೇ ಆಚರಿಸಲ್ಪಡುವ ಬಣ್ಣದೋಕುಳಿಯ ಹೋಳಿ ಹಬ್ಬ ಉತ್ತರ ಭಾರತ ಸೇರಿದಂತೆ ದೇಶದ ವಿವಿಧೆಡೆ ಜಾತಿ-ಮತ, ಧರ್ಮ ಮೀರಿ ಆಚರಿಸುವ ಹೋಳಿ ಹಬ್ಬವಾಗಿದೆ.

ಇತ್ತೀಚೆಗೆ ಕಾಲ ಬದಲಾಗುತ್ತಿದ್ದಂತೆ, ಮತ್ತು ಪ್ರತಿ ಪರ್ವವೂ ಪರಿವರ್ತನೆ ಆಗುತ್ತಿರುವ ಸಂದಭ೯ಗಳಲ್ಲಿ ಹೋಳಿ ಹಬ್ಬ ಕೂಡ ರಂಗು ರಂಗಿನಾಟವಾಗಿ ಮಾರ್ಪಟ್ಟು, ದಕ್ಷಿಣ ಭಾರತೀಯರನ್ನೂ ಸೆಳೆಯತೊಡಗಿದೆ. ಓಕುಳಿಯಾಡುವ ಮೋಜಿಗಾಗಿ ಮತ್ತು ಅದೊಂದು ರೀತಿಯ ಫ್ಯಾಶನ್್ ಆಗಿ ಈ ಫಾಲ್ಗುಣದ ಶುಕ್ಲ ಪಕ್ಷದ ಹುಣ್ಣಿಮೆಯಂದು ಹೇಳಲಾಗುತ್ತದೆ.

ಭಾರತೀಯರ ಹಬ್ಬವಾಗಿ ಟಿವಿ, ಸಿನಿಮಾಗಳು ಕೂಡ ಹೋಳಿಯನ್ನು ಮೋಜಿನ ಹಬ್ಬವೆಂದು ಪ್ರತಿಬಿಂಬಿಸುತ್ತಾ ಬಂದಿವೆ. ಇದರಿಂದ ಜನಮನದಲ್ಲಿ ಅಚ್ಚಳಿಯದೇ ಉಳಿದ ಹೋಳಿ ಹಬ್ಬದಾಚರಣೆ ನೆಪವೊಡ್ಡಿ, ಪಿಚಕಾರಿ ಮೂಲಕ ರಂಗು ಎರಚುವಿಕೆ, ಕೈಮೈಗಳಿಗೆ ಬಣ್ಣ ಮೆತ್ತುವುದು. ಅಟ್ಟಾಡಿಸಿಕೊಂಡು ಹೋಗಿ ಬಣ್ಣ ಹಚ್ಚಿ ಬಿಡುವುದೆಂದರೆ ಒಂಥರಾ ಖುಷಿಯಾಗಿರುತ್ತದೆ.

ಪ್ರತಿಯೊಂದು ಹಬ್ಬಗಳಿಗೂ ಪೌರಾಣಿಕ ಹಿನ್ನೆಲೆ ಇರುವಂತೆ ಹೋಳಿ ಕೂಡ ಹಿರಣ್ಯಕಶ್ಯಪು ಮತ್ತು ಪುತ್ರ ಪ್ರಹ್ಲಾದನ ನಡುವಿನ ಕಥೆಯೊಂದು ಸಾರುತ್ತದೆ. ಇದು ಶೈವ-ವೈಷ್ಣವ ಹೊಯ್ದಾಟದ ತಿರುಳನ್ನು ಹೊಂದಿದ್ದು, ಆ ಕಾರಣಕ್ಕಾಗಿ ಹೋಳಿ ಪ್ರಮುಖವಾಗಿ ಉತ್ತರ ಭಾರತದಲ್ಲಿ ಅದ್ಧೂರಿಯಾಗಿ ಅಚರಿಸುತ್ತಾರೆ.

ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಹೋಳಿ ಮೀನುಗಾರ (ಖಾರ್ವಿ) ಹಾಗೂ ಬುಡಕಟ್ಟಿನ ಕುಡುಬಿ ಜನಾಂಗಕ್ಕೆ ಮಾತ್ರ ಸೀಮಿತವಾಗಿದ್ದ ಹಬ್ಬ ಇತ್ತೀಚಿನ ಕೆಲ ವಷ೯ಗಳಲ್ಲಿ ಬಣ್ಣದೋಕುಳಿ ಎರಚುವಿಕೆ ಹೆಚ್ಚಿನ ಶಾಲಾ-ಕಾಲೇಜುಗಳಲ್ಲಿ ಮಹತ್ವ ಪಡೆದಿದೆ. ಗ್ರಾಮಾಂತರ ಹಾಗೂ ನಗರ ಪ್ರದೇಶಗಳ ಜನರ ವಿಶಿಷ್ಟ ಹಬ್ಬವಾಗಿ ಸಹ ರೂಪುಗೊಂಡಿದೆ.

ಏನೆಲ್ಲ ಮನರಂಜನೆ ನೀಡುವ ಹೋಳಿ ಹಬ್ಬದ ಹಿಂದೆ ಒಂದೆರಡು ಪೌರಾಣಿಕ ಕಥೆಗಳೂ ಇವೆ. ಅದರಲ್ಲಿ ಪ್ರಮುಖವಾದದ್ದು ಪುರಾಣದಲ್ಲಿ ಉಲ್ಲೇಖವಿರುವ ಕಾಮ ದಹನ. ತಾರಕಾಸುರನೆಂಬ ರಾಕ್ಷಸ ರಾಜನ ಉಪಟಳ ತಾಳದೆ, ಬ್ರಹ್ಮನ ವರಬಲದ ಸೊಕ್ಕಿನಿಂದ ಲೋಕದಲ್ಲಿ ಆತನಿಂದಾಗಿ ಅನ್ಯಾಯ ಹೆಚ್ಚಾಗಿತೆನ್ನಲಾಗುತ್ತದೆ.

ಆದ್ದರಿಂದ ಅವನ ಸಂಹಾರಕ್ಕೆ ದೇವತೆಗಳು ಉಪಾಯ ಹೂಡಿ, ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರಬಲವೇ ಆತನ ಮದಕ್ಕೆ ಕಾರಣ. ಆದರೆ ಶಿವನು ಆ ಸಂದರ್ಭ ಭೋಗಸಮಾಧಿಯಲ್ಲಿದ್ದ ಕಾರಣ, ಪಾರ್ವತಿಯನ್ನು ಕೂಡುವಂತಿರಲಿಲ್ಲ. ದೇವತೆಗಳು ಕಾಮ (ಮನ್ಮಥ)ನ ಮೊರೆ ಹೋಗುವ ಪುರಾಣ ಕಥೆ ಮುಂದೊರೆಯುತ್ತದೆ.

ಲೋಕಕಲ್ಯಾಣವೆಂಬ ಅತಿಶಯದಿಂದ ಪರೋಪಕಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನನ್ನು ಬಡಿದೆಬ್ಬಿಸಿ, ತಪೋಭಂಗ ಮಾಡುತ್ತಾನೆ. ಕೆರಳಿ ಮೂರನೇ ಕಣ್ಣು ತೆರೆದ ಈಶ್ವರನ ಕ್ರೋಧಾಗ್ನಿಗೆ ಕಾಮನು ಸುಟ್ಟು ಭಸ್ಮವಾಗುತ್ತಾನೆ ಎಂಬುದು ಪ್ರತೀತಿ ಇದೆ.

ಕಾಮನರಸಿ ರತಿದೇವಿಯು ಪರಿಪರಿಯಾಗಿ ಶಿವನಲ್ಲಿ ಪತಿಭಿಕ್ಷೆ ಯಾಚಿಸಲು, ಕಾಮನು ಅನಂಗನಾಗಿಯೇ ಇರುತ್ತಾನೆ, ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ. ಶಿವನು ರತಿದೇವಿಗೆ ಅಭಯ ನೀಡಿದನೆಂಬುದು ಪುರಾಣದಲ್ಲಿ ಹೇಳುವ ಕಥನವಾಗಿದೆ.

ನವನೀತಚೋರ ಶ್ರೀಕೃಷ್ಣನು ಗೋಪಿಕೆಯರಿಗೆ ಪಿಚಕಾರಿ ಮೂಲಕ ಓಕುಳಿ ಹಾರಿಸುತ್ತಾ, ರಂಗು ರಂಗಾಗಿಸುತ್ತಿದ್ದ ಮತ್ತು ಬೇಕೆಂದೇ ಆತನ ರಂಗಿನೆರಚಾಟಕ್ಕೆ ತುತ್ತಾಗಲು ಹವಣಿಸುತ್ತಿದ್ದ ಗೋಪಿಕೆಯರ ದೃಶ್ಯಗಳು ಕಣ್ಮುಂದೆ ಬಂದು ಹೋಗುವ ನೆನಪು ಸುಳಿದು ಹೋಗುವಂಥದ್ದು..

ಹೋಳಿ ನೆಪದಲ್ಲಿ ಮೋಜು, ಮಜಾ ಮಾಡುವುದೆಂದು ಬಹುತೇಕರು ಭಾವಿಸಿದ್ದಾರೆ. ನಿಜಾಥ೯ದಲ್ಲಿ ಹೋಳಿ ಹಬ್ಬದ ಆಚರಣೆ ಐತಿಹಾಸಿಕ ಎನ್ನಬಹುದು. ಖಾರ್ವಿ ಜನಾಂಗ ಹೋಳಿ ಹಬ್ಬ ವೈಶಿಷ್ಟ್ಯವಾಗಿ ಆಚರಿಸುವಂತೆ ಕುಡುಬಿ ಜಾತಿಯವರು ಕೂಡ ವಿಶಿಷ್ಟ ಜಾನಪದ ಹಾಡು, ಸಾಂಪ್ರದಾಯಿಕ ಉಡುಗೆ-ತೊಡುಗೆ, ನರ್ತನದ ಮೂಲಕ ಆಚರಿಸುತ್ತಾರೆ.

ಉತ್ತರ ಕರ್ನಾಟಕದಲ್ಲಿ ಕುರುಬ ಜನಾಂಗವೂ ಕೂಡ ಕೊರಳಿಗೆ ಡೋಲು ಕಟ್ಟಿಕೊಂಡು ಹೋಳಿಯ ದಿನದಂದು ತಮ್ಮ ಇಷ್ಟದ ದೈವ ಬೀರಲಿಂಗೇಶ್ವರ ದೇವರನ್ನು ಆರಾಧಿಸುತ್ತಾ, ಡೊಳ್ಳು ಕುಣಿತ ವಿಶಿಷ್ಟವಾಗಿರುತ್ತದೆ. ಆದರೆ ಈ ಪರಂಪರೆ ಇತ್ತೀಚಿಗೆ ಮರೀಚಿಕೆಯಾಗಿದೆ.

ಕುರುಬರು ಹೋಳಿಯಂದು ಬೀರೇಶ್ವರನನ್ನು ಸ್ತುತಿಸುತ್ತಾ ಡೊಳ್ಳು ಕುಣಿತದೊಂದಿಗೆ ಆಕರ್ಷಕ ಜನಪದ ನರ್ತನ ಪ್ರದಶಿ೯ಸುವ ಆಸಕ್ತಿದಾಯಕ ಹಬ್ಬ ಇದಾಗಿದೆ. 12ಜನರ ತಂಡದೊಂದಿಗೆ ತಾಳ, ತಪ್ಪಾಡಿ, ಡೋಲು,ಕೊಳಲಿನ ಸುಶ್ರಾವ್ಯ ಸಂಗೀತದೊಂದಿಗೆ ಹೋಳಿಯ ನರ್ತನ ಸಾಗುತ್ತದೆ.

ಇದರಲ್ಲಿ ಡೊಳ್ಳು ಹಾಡು ಮತ್ತು ಡೋಲು ಹಾಡು ಎಂಬ ಎರಡು ವಿಧಗಳಲ್ಲಿ ನರ್ತನ ನಡೆಯುತ್ತದೆ. ಕೈಪಟ್ಟಿನೊಂದಿಗೆ ಡೋಲು ಬಾರಿಸುವ ಮೂಲಕ ಹಾಡುತ್ತ ನರ್ತಿಸುವುದು ಪ್ರಮುಖವಾದ ಅಂಶ ಕೂಡ. ಈ ಸಂದರ್ಭದಲ್ಲಿ ಹಾಲುಮಾತ ಪುರಾಣವನ್ನು ಕೂಡ ಹಾಡುತ್ತ ನರ್ತಿಸುವುದು ಕುರುಬ ಜನಾಂಗದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಇನ್ನುಳಿದಂತೆ ಬೀದರ್ ,ಗುಲ್ಬರ್ಗಾ, ರಾಯಚೂರು, ಬಳ್ಳಾರಿ, ಮುಂಬೈ, ಹೈದರಾಬಾದ ಕನಾ೯ಟಕದಲ್ಲಿ ಹೋಳಿಯನ್ನು ಹಿಂದೂ-ಮುಸ್ಲಿಮ್್ ಎನ್ನುವ ಬೇಧವಿಲ್ಲದೆ ಹೋಳಿ ಆಚರಿಸಲ್ಪಡುತ್ತದೆ. ಧಾರ್ಮಿಕ ಆಚರಣೆಯ ಹಿನ್ನೆಲೆಯಲ್ಲಿ ನಡೆಯುವ ಹೋಳಿಯ ಬಣ್ಣದೋಕುಳಿ ಎರಚುವಿಕೆ ಇಂದು ಕೇವಲ ಸಂಭ್ರಮವಾಗಿ ಉಳಿದಿಲ್ಲ.

ಹೋಳಿ ಹಬ್ಬ ನೆಪದ ಹಿಂದೆ ವಿಕೃತ ಮನಸ್ಸುಗಳು ಕೂಡ ಸೇರಿಕೊಂಡಿರುತ್ತವೆ. ಇದರಿಂದಾಗಿ ಅಪಾಯವೂ ಹೆಚ್ಚಿದೆ. ಬಣ್ಣಕ್ಕೆ ವಿವಿಧ ರಾಸಾಯನಿಕ ಸೇರಿಸುವುದು ಇಲ್ಲವೇ ದುರುದ್ದೇಶದಿಂದ ಆಸಿಡ್‌್ನಂತಹ ದ್ರವ್ಯ ಸೇರಿಸಿ ಮುಖಕ್ಕೆ ಎರಚಿದ ಘಟನೆ ಸಾಕಷ್ಟು ಬಾರಿ ಎಲ್ಲಡೆ ವರದಿಯಾಗಿರುತ್ತವೆ.

ಆ ಒಂದು ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಟ್ಟೆಚ್ಚರ ವಹಿಸಿ ಜಾತ್ಯತೀತವಾಗಿ ನಡೆಯುವ ಬಣ್ಣದೋಕುಳಿಯ ನಡುವೆ ರಕ್ತದೋಕುಳಿ ಹರಿಯದಂತೆ ನೋಡಿಕೊಳ್ಳಬೇಕಾಗಿದೆ. ಶಾಲಾ-ಕಾಲೇಜುಗಳಲ್ಲಿ ಮೋಜಿಗಾಗಿ ಮುಖಕ್ಕೆ ಬಣ್ಣ, ಸುನಾರಿಯಂತಹ ಪುಡಿ,ಪುಡಿಗಳನ್ನು ಹಚ್ಚಲಾಗುತ್ತದೆ. ಆದರೂ ವಿಕೖತ ಮನಸ್ಸಿನ ಅಪಾಯ ತಡೆಗಟ್ಟಲು ಎಚ್ಚರ ಅಗತ್ಯವಾಗಿದೆ.


 ಕನ್ನಡಪ್ರಭ ಕೖಪೆ.....
ರಂಗಿನೆರಚಾಟದಲ್ಲಿ ತೊಡಗಿರುವ ಚಿಣ್ಣರು

ಕಾಮೆಂಟ್‌ಗಳಿಲ್ಲ: