ಬುಧವಾರ, ಜನವರಿ 16, 2013

ಸಣ್ಣ ಕಥೆ



ತರ್ಜುಮೆ


ಒಂದು ವಾರದಿಂದ ಅವಳ ಕಣ್ತಪ್ಪಿಸಿ ಓಡಾಡುತಿದ್ದನು. ಅಕಸ್ಮಾತ್ ಅವಳನ್ನು ನೋಡಿಯೂ ನೋಡದಂತೆ ಓಡಾಡಿದರೂ ಖುದ್ದಾಗಿ ಅವಳೇ ಅವನೆದುರಿಗೆ ಬಂದು ಮಾತಾಡಿಸುವ ತವಕದಲ್ಲಿ ಇದ್ದಳು.!

ಸುಮ್ ಸುಮ್ಮನೆ ಸುಳ್ಳು ಹೇಳಿದನು. ಇದರಿಂದ ಫಜೀತಿಗೆ ಸಿಲುಕಿಕೊಂಡಂತಾಗಿತ್ತು. ಹೀಗಿದ್ದ ಅವನ ಪರಿಸ್ಥಿತಿ, ಆ ಸುಳ್ಳು ಸೃಷ್ಟಿ ತಿಳಿಗೊಳಿಸಲು ಏನಾದರೊಂದು ನೆಪ ಹೇಳಿ, ಜಾರಿಕೊಳ್ಳುವ ಸಿದ್ಧತೆ ಮಾಡಿಕೊಳ್ಳುತ್ತಲೇ ಇದ್ದ. ಆದರೆ ಎಂದಾದರೊಂದು ದಿನ ತಾನು ಹೇಳಿದ್ದನ್ನು ಮತ್ತೆ ನೆನಪು ಕೊಡುತ್ತಾಳೆ. ನನ್ನಲಿಲ್ಲದ ಆ ಪುಸ್ತಕ ತಂದು ಕೊಡುವವರೆಗೆ ಕೇಳದೆ ಇರಲಾರಳು ಎಂದು ಆತಂಕಕೊಳಗಾಗಿದ್ದನು. ಮನೆಯಿಂದ ಆಚೆ ತಿರುಗಾಡುವಾಗ ಚಕ್ಕನೆ ಎದುರಾಗುವಳು ಎಂಬ ವಿಚಾರ ಲಹರಿಯಲ್ಲಿ ತೇಲಾಡುತ್ತಾ ಗ್ರಂಥಾಲಯದ ಕಡೆ ಹೆಜ್ಜೆ ಹಾಕಿದನು.

“ಅದಕ್ಕಾಗಿ ಒಂದು ವ್ಯವಸ್ಥೆ ಮಾಡಲೇಬೇಕು. ಎಲ್ಲಿಂದಾದರೂ ಸರಿಯೇ ಆ ಪುಸ್ತಕ ಹುಡುಕಿ ತಂದು ಕೊಡಬೇಕು. ತಂದು ಕೊಟ್ಟ ಮೇಲೆ?” ಎಂಬ ಪ್ರಶ್ನೆಗೆ ಉತ್ತರ ನಿಗೂಢವೆಂಬಂತೆ ರಸ್ತೆಯುದ್ದಕ್ಕೂ ಸಾಗುವಾಗ ಚಿಂತನ ಮಂಥನ ಮಾಡಿಕೊಳ್ಳುತ್ತಲೇ ಇದ್ದನು.

ತನ್ನಲಿಲ್ಲದ ಆ ಪುಸ್ತಕ ಅವಳಿಗೆ ಕೊಡುವ ಭರವಸೆ? ಮೇಲಾಗಿ ಅವನೇ ಅರಿಯದ ಅಕ್ಷರಗಳು. ಆ ಉರ್ದು ಭಾಷೆಯ ಪುಸ್ತಕವನ್ನು ತಂದು ಕೊಡುವುದಾಗಿಯೂ, ಅದರ ತರ್ಜುಮೆ ಮಾಡಿ ಹೇಳಿ ಕೊಡ್ತಿರಾ? ಎಂದು ಕೇಳಿದನು. ಅದಕ್ಕವಳು ತಕ್ಷಣಕ್ಕೆ ಒಪ್ಪಿಕೊಂಡಿದ್ದಳು. ಆ ಕ್ಷಣದಲ್ಲಿ ಮತ್ತೊಂದು ಸಬೂಬು ಹೇಳಿ ಜಾರಿಕೊಂಡಿದನು. ಅವಳೋ....ಕುತೂಹಲ, ಕಾತರದಲ್ಲಿ ಅವನನ್ನೇ ನುಂಗಿ ಬಿಡುವಂತೆ ಆಕರ್ಷಿಸಿದಳು. ಅವಳ ದೃಷ್ಠಿಯಲ್ಲೊಮ್ಮೆ ರತಿ-ಮನ್ಮಥರ ದೃಶ್ಯ ಕಾವ್ಯ ಮಿಂಚಿ ಮರೆಯಾಗಿತ್ತು. ಆ ಪುಸ್ತಕದ ಹುಡುಕಾಟದಲ್ಲಿ ಮುಂದೆ ಮುಂದೇ ಸಾಗಿದನು.

ಅವಳೊಂದಿಗೆ ಈ ರೀತಿಯ ಸಖ್ಯ ಬೆಳೆಸಿಕೊಳ್ಳಲು ಒಂದು ಬಲವಾದ ಕಾರಣವೇ ಇತ್ತು. ಅವರಿಬ್ಬರ ಧರ್ಮ ಬೇರೆ ಬೇರೆಯಾದರೂ, ಮನಸ್ಸಿನ ಆಸೆ, ಭಾಷೆ, ಒಂದೇ ಆಗಿತ್ತು. ಎರಡು ದೇಹದಂಗಾಂಗಗಳಲ್ಲಿ ಚಲನ-ವಲನದ ರೀತಿಯೇ ಬದಲಾಗಿ ಸಂಚಲನ ಮೂಡಿಸಿತು.
ಅವನು ತನ್ನ ಒಂಟಿತನದ ಬೇಸರವನ್ನು ಕಳೆಯಲು ಅವಳನ್ನು ಆಪ್ತ ಸಂಗಾತಿಯನ್ನಾಗಿ ಮಾಡಿಕೊಳ್ಳಲೋ ಅಥವಾ ಅವಳ ಯೌವ್ವನ, ರೂಪ, ಆ ಚೆಲುವೆಯ ಮುಗ್ಧತೆಯಲ್ಲಿರುವ ರಸಿಕತನವನ್ನು ಕಂಡು, ಹೆಣ್ಣಿನಂತರಂಗದ ಸೂಕ್ಷ್ಮ ಭಾವನೆಗಳನ್ನು ಯಾವ ರೀತಿಯಲ್ಲಿ ಪಲ್ಲಟಗೊಳ್ಳುತವೆ? ಎಂಬುದನ್ನರಿಯಲೋ ಒಂದೂ ತಿಳಿಯದೆ ಗೊಂದಲದಲ್ಲಿ ಸಿಲುಕಿದನು.

ಅವಳ ದೃಷ್ಠಿಗೆ ದೃಷ್ಠಿ ಬೆರೆಸಿ ಮಾತಾಡಲು ಆಗದೇ, ಅಪರಾಧಿ ಭಾವನೆಯಲ್ಲಿ ಕೆಲವೊಮ್ಮೆ ಪಶ್ಚಾತ್ತಾಪಕ್ಕೆ ಈಡಾಗುತ್ತಿದ್ದನು.

ಅವನ ಹೆಂಡತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಎಲ್ಲಾ ಘಟನೆಗಳು ನಡೆದಿದ್ದವು. ಹೆಂಡತಿಯ ನೆನಪುಗಳ ವಿರಹವನ್ನು ಮರೆಯುವದಕ್ಕೋಸ್ಕರ, ಪುಸ್ತಕದ ನೆಪದಲ್ಲಿ ಅವಳಿಗೆ ಮಾತಾಡಿಸುವ ಉತ್ಕಟ, ಆಸೆಯನ್ನು ಚಿಗುರೊಡೆದಿತ್ತು.

ಅಲ್ಲೊಂದಿಷ್ಟು ಸ್ವಾರ್ಥ ಕೂಡ ಇತ್ತು ಎಂದೆನಿಸುತ್ತದೆ. ಯಾಕೆ? ಅವನಂಥವರಿಗೆ ಈ ರೀತಿಯ ಕೀಳುಮಟ್ಟದ ವಿಚಾರಗಳು ಬರಲು ಸಾಧ್ಯವೆ?! ಹೆಣ್ಣೆಂಬ ವಿಷಯದಲ್ಲಿ ಯಾರೇ ಆಗಿರಲಿ ದುರ್ಬಲರಾಗಿ ವರ್ತಿಸುತ್ತಾರೆ ಎಂಬುದಕ್ಕೆ ಅವನೇ ತಾಜಾ ಉದಾಹರಣೆಯಾಗಿದ್ದನು.

ಅವನೇನು ಸಾಮಾನ್ಯ ವ್ಯಕ್ತಿಯಾಗಿ ಬಾಳುತಿರಲಿಲ್ಲ. ಕವಿ, ಸಾಹಿತಿ, ಚಿಂತಕನೆಂಬ ಹೆಸರಿನಲ್ಲಿ ಗುರುತಿಸಿಕೊಂಡಿದನು. ಅವನ ಹಲವಾರು ಕವಿತೆಗಳು, ಕತೆ, ಲೇಖನಗಳು ಮೆಚ್ಚಿ ನೂರಾರು ಅಭಿಮಾನಿಗಳು ಮೆಚ್ಚುಗೆಯ ಪತ್ರಗಳನ್ನು ಬರೆದಿದ್ದರು. ಆದರೆ ಯಾರನ್ನೂ ಅವನು ಅಷ್ಟಾಗಿ ತೀರಾ ಹತ್ತಿರದಿಂದ ಪರಿಚಯಿಸಿಕೊಳ್ಳುವ ಮನಸ್ಸು ಮಾಡಲಿಲ್ಲ. ಆದರೆ ಇದ್ದಕ್ಕಿದಂತೆ ಒಬ್ಬ ಚೆಲುವೆಯನ್ನು ನೋಡಿ ಆಕರ್ಷಿತನಾಗಿದ್ದು ಸೂಜಿಗದ ಸಂಗತಿ.

ಯಾರದೇ ಪ್ರೇಮ ಪತ್ರಕ್ಕೂ, ಪ್ರೀತಿ-ಪ್ರೇಮ ನಿವೇದನೆಗೆ ಕ್ಯಾರೆ ಎನ್ನದೆ ಈತ ಬುರ್ಕಾ ತೊಡುವವಳ ಆಕರ್ಷಣೆಗೆ ಒಳಗಾಗಿದ್ದು ವಿಪರ್ಯಾಸ! ಹತ್ತು ಹಲವು ಪ್ರಶ್ನೆಗಳಿಗೆ ಉತ್ತರವಾಗುಳಿಯದೇ, ಅನೇಕ ಬಾರಿ ಚಿಂತಿಸುತ್ತಿದ್ದನು. ಆವಾಗಾವಾಗ ನಡೆದ ತಪ್ಪುಗಳೆಲ್ಲ ಅವನಿಂದಲೇ ಎಂಬುದು ಒಪ್ಪಿಕೊಳ್ಳುವ ಹಾಗೆ ಅವ£ರಲಿಲ್ಲ. ಇದಕ್ಕೆಲ್ಲ ಕಾರಣ ಆತನ ಹೆಂಡತಿಯೇ ಆಗಿದ್ದಳು.

ಈಗ ಅವನ ಮನಸ್ಸೊಮ್ಮೆ ಹಗುರವಾದಂತಾಗಿತ್ತು. “ಈ ಜಗತ್ತಿನಲ್ಲಿ ಯಾರೂ ಮಾಡದ ತಪ್ಪು ನಾನೇನು ಮಾಡುತ್ತಿಲ್ಲ. ಎಲ್ಲರೂ ಬಯಸುವಂಥದ್ದೇ ನಾನು ಬಯಸಿರಬಹುದು” ಎಂದು ಬಲವಾಗಿ ನಂಬಿದನು. ಅವಳಿಗೆ ಹೇಳಿದ ಸುಳ್ಳೊಂದು £ಜ ಮಾಡಿ ತೋರಿಸುವ ಛಲ ಅವನೊಳಗಿತ್ತು. ಅವಳಿಂದ ಸಿಗುವ ಸುಖ, ನೆಮ್ಮದಿಯನ್ನು ಯಾಕೆ ಬಿಡಬೇಕು ಎಂಬ ಭಂಡ £ಲುವಿನ ದೃಢ ನಿರ್ಧಾರಕ್ಕೆ ಬಂದು ಬಿಟ್ಟನು.

ಆ ಪುಸ್ತಕದ ಹುಡುಕಾಟದಲ್ಲಿ ಒಂದು ದಿನವೇ ಕಳೆದು ಹೋಗಿತ್ತು. ಕೊನೆಗೂ ಒಂದಿನ ಗ್ರಂಥಾಲಯದಲ್ಲಿ ಅದು ಸಿಕ್ಕಿತು. ಒಂದು ವಾರದಲ್ಲಿ ಅವಳು ಹತ್ತು ಬಾರಿಯಾದರೂ ಕೇಳಿರಬೇಕು. “ಓ ಅಂಧೇರಾ ಕಿತಾಬ್ ಮಿಲಾ ಕ್ಯಾ?” ಎಂದು. ಘೋಷಾ ಪದ್ಧತಿಯ ದಿಗ್ಭಂಧನದಲ್ಲೂ ಅವಳು ಆತನೊಂದಿಗೆ ಇಟ್ಟುಕೊಂಡ ಸಲುಗೆ ಕೂಡ ಅವನ ಆಸೆಗೆ ಪ್ರೇರಣೆ ಕೊಟ್ಟಿರಬಹುದು.

ಅವನ ಮದುವೆಯಾಗಿ ನಾಲ್ಕು ವರ್ಷಗಳೇ ಕಳೆದಿದ್ದವು. ಆ ಹಿನ್ನೆಲೆಯ ಸಂದರ್ಭದಲ್ಲಿ ಗಂಡ-ಹೆಂಡತಿ ಇಬ್ಬರೂ ಅನ್ಯೂನ್ಯವಾಗಿ ಬದುಕುತ್ತ, ಅಲೆಮಾರಿ ಜೀವನ ನಡೆಸಿದ್ದರು. ಕೆಲವೆಡೆ ಹೊಟ್ಟೆ ಪಾಡಿಗಾಗಿ ಸಂಸಾರ ಹೂಡಿದರು. ಅವರ ಸುಖ ದಾಂಪತ್ಯ ಜೀವನದಲ್ಲಿ ಒಬ್ಬ ಮಗನೂ ಹುಟ್ಟಿ ಬಂದನು. ಈ ಒಂದು ಸಂತೋಷದಲ್ಲಿ ಇರುವಾಗಲೇ....ಹೆಂಡತಿ ಎನಿಸಿಕೊಂಡವಳು ಒಂದೇ ಹೇರಿಗೆಯಲ್ಲಿ ವಯಸ್ಸಾದ ಮುದಕಿಯಂತೆ ನರಳುತ್ತಾ, ಗಂಡನ ದೇಹ ಸುಖ, ಸಂಪರ್ಕದಿಂದ ದೂರವೇ ಉಳಿದು ಬಿಟ್ಟಿದ್ದಳು.

ಯೌವ್ವನದ ಸಹಜ ಆಸೆಗಳು ಚಿಗುರುವ ಹೊತ್ತಿಗೆ ಅವನನ್ನು ಹೆಂಡತಿ ತಿರಸ್ಕಾರ ಬಾವದಿಂದ ನೋಡುತ್ತಿದ್ದಳು. ವರ್ಷದಲ್ಲಿ ಹತ್ತಾರು ತಿಂಗಳುಗಳವರೆಗೆ ತವರು ಮನೆಯನ್ನೇ ನೆಚ್ಚಿಕೊಂಡು ಉಳಿದು ಬಿಡುತಿದ್ದಳು. ಕಾರಣ? ಸದಾ ಅವಳು ಒಂದಿಲ್ಲೊಂದು ಜ್ವರದಲ್ಲಿ ಬಳಲುತ್ತಿದ್ದಳು.

“ನನ್ನ ಹೆಂಡತಿ ಯಾವುದೇ ಪರಿಸ್ಥಿತಿಯಲ್ಲಿ ಇದ್ದರೂ ತಂದು ಬಿಡಿ. ಅವಳ ಯೋಗಕ್ಷೇಮ ನಾನೇ ನೋಡ್ಕೊಳ್ತಿನಿ. ಅವಳಿಲ್ಲದ ಜೀವನ ನನಗೆ ಶೂನ್ಯವಾಗಿ ಬಿಟ್ಟಿದೆ” ಎಂದೆಲ್ಲ ಒಂದಿನ ಅತ್ತೆ ಮಾವನಿಗೆ ಮೊಬೈಲ್ ಪೋನಿನಲ್ಲಿ ತೋಡಿಕೊಂಡಿದನು. ಆದರೆ ಪ್ರಯೋಜನವಾಗಲಿಲ್ಲ.

ಮಗಳು ಎಂಬ ಮಮಕಾರದಲ್ಲಿ ಅಳಿಯನಿಗೆ ಒಂದಿಷ್ಟೂ ಗೌರವವನ್ನು ಕೊಡದೇ ಅವನ ಹೆಂಡತಿಯ ತವರು ಮನೆಯವರು ಹೀನಾಯವಾಗಿ ಮಾತಾಡಿದರು. “ನಮ್ಮ ಮಗಳ ಜ್ವರ ವಾಸಿ ಆಗುವವರೆಗೆ ಕಳಿಸುವುದಿಲ್ಲ. ನಿನ್ನಲ್ಲಿ ಜೋರ್ ಇದ್ದಿದ್ರೆ ಇಲ್ಲಿಗ್ಯಾಕ್ ಕಳ್ಸಬೇಕಾಗಿತ್ತು. ಎಂದೆಲ್ಲಾ ಮಾತಾಡಿದ್ದರು. ‘ಜೋರ್’ ಎಂಬ ಪದವೊಂದೇ ಅವನ ಗಂಡಸುತನಕ್ಕೆ ಸವಾಲ್ ಹಾಕಿದಂತಾಗಿತ್ತು. ಅವರ ಮಾತುಗಳಿಂದ ಅವನ ಮನಸ್ಸಿಗೆ ನೋವುಂಟು ಮಾಡಿತ್ತಲ್ಲದೇ, ಅವನ ಶಕ್ತಿ-ಸಾಮಥ್ರ್ಯಕ್ಕೆ ಅಣಕಿಸುವಂತಿತ್ತು. ಆ ರೀತಿ ಮಾತಾಡಿದ್ದರಿಂದ ಅವನು ತೀರಾ ತಲೆ ಕೆಡಿಸಿಕೊಂಡಿದನು.

ಹೆಂಡತಿಯಿಲ್ಲದ ಸಮಯದಲ್ಲಿ ಮಾನಸಿಕವಾಗಿ ಬಳಲುತಿದ್ದನು. ಇಲ್ಲ ಸಲ್ಲದ ವಿಚಾರಗಳನ್ನೆಲ್ಲ ಮಾಡಿದನು. ಹೆಂಡತಿಯ ಸಾಮಿಪ್ಯವನ್ನು ಮರೆಯುವದಕ್ಕೋಸ್ಕರ ಆ ಪುಸ್ತಕದ ನೆಪ ಮಾಡಿಕೊಂಡು ಅವನ ಮನಸ್ಸೆಲ್ಲ ಆ ಚೆಲುವೆಯ ಜಪದಲ್ಲಿಯೇ ಬಂಧಿಯಾಗಿತ್ತು.

ಅವಳ ಮೋಹದ ಸೆಳೆತಕೊಳಗಾಗಿ ಹೆಂಡತಿಯ ಪ್ರೀತಿಗೆ ದ್ರೋಹ ಮಾಡುತ್ತಿರಬಹುದೆ? ಎಂದುಕೊಳ್ಳುತ್ತಾ ಕೆಲವೊಮ್ಮೆ ತೀರಾ ಯೋಚಿಸುತ್ತಿದ್ದನು. “ಹೆಂಡತಿಯಾದವಳು ನನ್ನ ಪ್ರೀತಿಗೆ ಧಿಕ್ಕರಿಸಿ, ಅವಳ ಮೇಲೆ ನಾನಿಟ್ಟಿರುವ ಲಕ್ಷ್ಯವನ್ನು ಅಲಕ್ಷಿಸಿ ತವರು ಮನೆಯಲ್ಲಿ ಕುಳಿತಿದ್ದಾಳಲ್ಲ. ಅದು ದ್ರೋಹ ಅಲ್ಲವಾ?” ಹೀಗೆ ಅವನೊಳಗೊಬ್ಬ ಬೆಂಬಲಿಗ ಇದ್ದಂತೆ ಅವನ ವಿಚಾರಗಳಿಗೆ ಸ್ಫೂರ್ತಿ ಕೊಡುತಿದ್ದವು. ಅದಕ್ಕಾಗಿ ತಾನು ಮಾಡುತ್ತಿರುವುದು ಯಾವುದೂ ತಪ್ಪೆನಿಸಲಿಲ್ಲ ಅವನಿಗೆ.

ಅವನು ತನ್ನ ಹೆಂಡತಿಯೆದುರಿಗೊಮ್ಮ ಆತ್ಮ ನಿವೇದನೆ ಮಾಡಿಕೊಂಡಿದನು. “ನೋಡೆ, ನಮ್ಮಲ್ಲಿ ಹಣ, ಆಸ್ತಿ, ಅಂತಸ್ತು ಇಲ್ಲದಿದ್ದರೇನು. ದುಡಿಯುವ ಛಲ ಇದೆ. ಬದುಕುವ ಆಸೆ ಇದೆ. ಈ ಸಮಾಜದಲ್ಲಿ ಒಂದು ಸ್ಥಾನಮಾನ ಎಂಬುದಿದೆ. ನನ್ನದೇ ಆದಂಥ ಕೆಲವು ಕನಸುಗಳು ನನ್ನೆದೆಯ ಬೆಚ್ಚನೆಯ ಗೂಡಿನಲ್ಲಿ ಇಟ್ಟುಕೊಂಡಿದ್ದೇನೆ. ಸೃಜನಶೀಲ ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದೇನೆ. ನನ್ನಿಂದ ನೀನು ದೂರ ಉಳಿದರೆ? ನನ್ನ ಯಾವುದೇ ಸಾಧನೆಗೆ ಸ್ಫೂರ್ತಿ ಎಲ್ಲಿಂದ ಬರುತ್ತೆ. ನೀ£ಲ್ಲದ ಮೇಲೆ ನಾನಾಗಿ ಎಲ್ಲವನ್ನು ತ್ಯಜಿಸಿ, ಯಾರಿಗೂ ಸಿಗದಂತಾಗಿ ಬಿಡುತ್ತೇನೆ. ನನ್ನನ್ನು ಕಳೆದುಕೊಂಡ ಬಳಿಕ ಪರಿತಪಿಸುವುದು ಬೇಡ. ಯಾವುದಕ್ಕೂ ಸರಿಯಾಗಿ ಯೋಚಿಸು. ನಂತರ ನಾನು ಬೇಡವಾದರೆ ನಿನ್ನ ತವರು ಮನೆಗೆ ಹೋಗು” ಎಂದು ಹೆಂಡತಿಯ ಮೇಲಿನ ಪ್ರೀತಿಗಾಗಿ ಎಚ್ಚರಿಸಿದನು.

ಅವನ ಅಂತರಾತ್ಮದ ನಿವೇದನೆಗೆ ಹೆಂಡತಿಯ ಪಾಲಿಗೆ £ೀರಸವೆ£ಸಿದವು. ಅವಳೆದುರಿಗೆ ಪರಿಪರಿಯಾಗಿ ಬೇಡಿಕೊಂಡಿದ್ದರೂ ಹಠಮಾರಿ ಸ್ವಭಾವದ ಹೆಂಡತಿ “ತವರು ಮನೆಯಲ್ಲಿಯೇ ಉಳಿದು ಚಿಕಿತ್ಸೆ ಪಡೆಯುತ್ತೇನೆ. ಸಂಪೂರ್ಣ ಜ್ವರ ವಾಸಿಯಾದ್ಮೇಲೆ ಬರೋದು” ಎಂದು ಖಡಾಖಂಡಿತವಾಗಿ ನುಡಿದಿದ್ದಳು. ಗಂಡನ ಮನಸ್ಸನ್ನು ಅರ್ಥೈಸಿಕೊಳ್ಳಲಿಲ್ಲ ಎಂದುಕೊಂಡ ಅವನು. ಸಂಸಾರ ನಡೆಸಲು ತಾನು ಕೈಲಾಗದವನು ಎಂದು ತಿಳಿದು ಹೋಗಿರಬಹುದೆ? ಎನ್ನುತ್ತ, ಅವನು ಹೆಂಡತಿಯ ನೆನಪಲ್ಲೇ ಒಳಗೊಳಗೆ ಕೊರಗುತಿದ್ದನು. ಹೆಂಡತಿ ಮಾತ್ರ ತವರು ಮನೆಗೆ ಹೋಗಿಯೇ ಬಿಟ್ಟಿದ್ದಳು.

ಹೆಂಡತಿ ಹೋಗಿ ತಿಂಗಳುಗಳೇ ಕಳೆದವು. ಜ್ವರ ಇನ್ನು ವಾಸಿಯಾಗಿಲ್ಲ ಎಂಬ ಇತ್ಯಾದಿ ವರದಿಗಳು ಮೊಬೈಲ್ ಪೋನಿ£ಂದಲೇ ತಿಳಿದು ಬರುತಿತ್ತು. ಹೆಂಡತಿಯ ಮೇಲಿನ ಅಪಾರ ಪ್ರೀತಿ, ಮಗನ ರೂಪದಲ್ಲಿ ಬಂದಿರುವ ಹೊಸ ಅತಿಥಿಯ ಮೇಲಿಟ್ಟ ಅಕ್ಕರೆ, ಒಂಟಿತನದಲ್ಲಿ ಆತ ಅನುಭವಿಸುತ್ತಿದ್ದುದನ್ನು ಯಾರಲ್ಲಿಯೂ ಹೇಳಿಕೊಂಡಿರಲಿಲ್ಲ. ಹೀಗೆ ದಿನಗಳುರುಳಿದವು. ಒಂದಿನ ಕುಡಿತಕ್ಕೆ ಒಳಗಾಗಿ ಆ ಮತ್ತಿನಲ್ಲಿ ಹೆಂಡತಿಯ ತವರು ಮನೆಗೆ ಫೋನ್‍ಕಾಲ್ ಮಾಡಿದನು.

ಪೋನಿನ ಸಂಭಾಷಣೆಯಲ್ಲಿ ಮಾತಿಗೆ ಮಾತು ಬೆಳೆಯಿತು. ಅಲ್ಲೊಂದು ಚಿಕ್ಕದಾದ ಸಮರವೇ ನಡೆದು ಹೋಗಿತ್ತು. ಅತ್ತೆ ಮಾವನ ಮನೆಯವರಿಗೂ ಅವನಿಗೂ ಮನಸ್ತಾಪ ಹುಟ್ಟಿತು. ಅವನ ವಿಚಾರಗಳಿಗೂ ಅವರ ಮಾತುಗಳಿಗೂ ಹೋಲಿಕೆಯಾಗದೆ, ಸಂಬಂಧ ವಿಚ್ಛೇದನದವರೆಗೂ ಬಂದು ಮುಟ್ಟಿತು.

ಸಧ್ಯಕ್ಕೆ ಹೆಂಡತಿ ಮರಳಿ ಗಂಡನ ಮನೆಗೆ ಬರುವುದಕ್ಕೆ ನಿರಾಕರಿಸಿದಳು. ಅವನು ಕೆಲವು ದಿವಸಗಳ ಕಾಲಾವಕಾಶ ಮತ್ತೆ ಮತ್ತೆ £ೀಡಿದನು. “ಬರದಿದ್ದರೇ....ನೋಡು” ಎಂಬ ಉದ್ಗಾರದಲ್ಲಿ ಎಚ್ಚರಿಸಿದನು. ಕೋಪದಲ್ಲಿ ಪೋನ್ ಸಂಪರ್ಕ ಅವನಾಗಿಯೇ ಕಡಿದನು. ಗಂಡನ ಆಜ್ಞೆಯನ್ನು ಪಾಲಿಸದ ಹೆಂಡತಿ ಅವನು ನೀಡಿರುವ ಕಾಲಾವಕಾಶಕ್ಕೆ ಮೀರಿದಳು. ಕಾರಣ ಅವಳು ಕೂಡಾ ಅವನಷ್ಟೇ ಹಠದಿಂದ ತವರು ಮನೆಯಲ್ಲಿಯೇ ಉಳಿದಿದ್ದಳು.

ಇನ್ನೇನು....!? ಹೆಂಡತಿ ಬರುವುದೇ ಇಲ್ಲ ಎಂದು ಭಾವಿಸಿದ ಲೇಖಕ ಮಹಾಶಯ. ಒಂದು ವೇಳೆ ಬಂದರೂ ವಿಚ್ಛೇದನ ಪತ್ರಕ್ಕೆ ಸಹಿ ಹಾಕಲು ಬರಬೇಕಷ್ಟೇ ಎಂದುಕೊಂಡನು. ಹೆಂಡತಿಯ ನೆನಪುಗಳು ಮರೆಯುವದಕ್ಕೆ ಸಜ್ಜಾದನು. “ಹೇಗಾದರೂ ಮಾಡಿ ಪುಸ್ತಕದ ನೆಪದಲ್ಲಿ ಇವಳನ್ನಾದರೂ ಒಲಿಸಿಕೊಳ್ಳಬೇಕು” ಎಂಬ ಹಟ. ಅವನಲ್ಲಿ ಬೇರು ಬಿಟ್ಟಿತು. ಅದು ತರ್ಜುಮೆ ಮಾಡಿ ಕೊಡುವವಳ ಅಮತರಂಗದಲ್ಲೂ ಆಸೆ ರಹಸ್ಯವಾಗಿಯೇ ಬಚ್ಚಿಟ್ಟುಕೊಂಡಿದ್ದಳು. ಅವನ ವೇದನೆ ಏನೆಂಬುದನ್ನು ಸ್ಪಷ್ಟವಾಗಿ ಅರಿತುಕೊಂಡಿದ್ದಳು.
ಆ ಮೂರು ನಿಮಿಷ, ನೂರು ಕ್ಷಣದ ಸುಖಕ್ಕಾಗಿ ಇಬ್ಬರು ಹಾತೊರೆಯುತ್ತಿದ್ದರು. ಇದಕ್ಕಾಗಿ ಅವನು ಬಾಳ ಸಂಗಾತಿಗೆ ಬಿಟ್ಟು ಬಿಡಲು ಸಿದ್ಧನಾಗಿದ್ದ. ಅವಳು ಧರ್ಮವನ್ನು. ಅವನನ್ನು ಹತ್ತಿರದಿಂದ ಕಂಡು ಪುಳಕಿತಗೊಂಡಿದ್ದಳು. ಅವನಷ್ಟೇ ಕಾತುರ, ಕುತೂಹಲ, ಬಿಡುಗಡೆಯ ಭಾವ ಸ್ಪಂಧನಕ್ಕಾಗಿ ಎದುರು ನೋಡುತಿದ್ದಳು. ಅವಳೊಳಗಿನ ಬಯಕೆಗಳು ಬಯಲಿಗೆ ಬಾರದಿದ್ದರೂ, ಕಣ್ಣ ಭಾಷೆಯಲ್ಲಿಯೇ ಕಾಮದ ಹಸಿವು ಎದ್ದು ಕಾಣುತಿತ್ತು.

ಅಂತಹ ಒಂದು ಸಮಯ ಬಂದೇ ಬಿಟ್ಟಿತು. ಅವನ ಮನೆಯ ಹಿಂಬದಿಯ ಬಾಗಿಲಲ್ಲಿ ನಿಂತಿರುವ ಹೆಣ್ಣಿನ ಬೆತ್ತಲೆ £ಚ್ಚಳವಾದ ಆಕೃತಿಯೊಂದು ಅವನಿದ್ದ ರೂಮಿನೊಳಗೆ ಯಾವ ಹಂಗಿಲ್ಲದೆ ಪ್ರವೇಶಿಸಿತು.

ಈಗ ಅಲ್ಲಿ ನಾಲ್ಕು ಗೋಡೆ, ನಾಲ್ಕು ಕಣ್ಣುಗಳ ಮಧ್ಯೆ ಯಾವುದೇ ಪರದೆಗಳಿರಲಿಲ್ಲ. ಆ ಪುಸ್ತಕದ ನೆಪದಲ್ಲಿ ಅಡಗಿದ ಕಾವ್ಯ ಶೈಲಿಯ ಗಜಲ್‍ಗಳ ಸಾಲುಗಳು ಒಂದೊಂದಾಗಿ ಅವಳು ತನ್ನ ಅಂಗಸ್ಪರ್ಶದಿಂದ ತರ್ಜುಮೆ ಮಾಡಿಕೊಡುತ್ತಿದ್ದಳು.

ಭಾಷೆ ಬದಲಾವಣೆಯ ನೆಪದಲ್ಲಿ ಎರಡೂ ದೇಹಗಳ ಸಂಮ್ಮಿಲನ! ಸ್ವರ್ಗಕ್ಕೆ ಕಿಚ್ಚಿಟ್ಟಿತು. ಹಾವು ಏಣಿ ಆಟದಂತೆ ಅವರಿಬ್ಬರ ಮಧ್ಯೆ ಸ್ಪರ್ಧೆ! ಬಿರುಸಾಗಿಯೇ ನಡೆದಿತ್ತು. ಯಾರೋ ಬಾಗಿಲು ಬಡಿದ ಸದ್ದು!? ಅವನ ಹೆಂಡತಿಯ ಧ್ವನಿ ಹೊರಗಿ£ಂದ ಅಸ್ಪಷ್ಟವಾಗಿ ಕೇಳಿಸಿತು. ಒಳಗೆ ಎರಡೂ ದೇಹಗಳ ಸ್ಪರ್ಶದಿಂದ ಭಾಷೆಗಳ ತರ್ಜುಮೆ ನಡೆದಿತ್ತು. ಹೊರಗೆ ಕೂಗು, ಕಿರುಚಾಟ ಪ್ರತಿಭಟನೆಯ ರೂಪ ತಾಳಿತು.

                ***

ಕಾಮೆಂಟ್‌ಗಳಿಲ್ಲ: