ಗುರುವಾರ, ಜುಲೈ 14, 2011

ಬಟಗೇರಾ ಸರಕಾರಿ ಪ್ರೌಢ ಶಾಲೆಯಲ್ಲಿ ಕಳೆದ ಒಂದು ವಷ೯ದಿಂದ ಶಿಕ್ಷಕರ ಕೊರತೆ


ಬಸವಕಲ್ಯಾಣ ತಾಲೂಕಿನ ಬಟಗೇರಾದಲ್ಲಿ  ಶಿಕ್ಷಕರ ಕೊರತೆಯನ್ನು ನೀಗಿಸಬೇಕೆಂದು ಒತ್ತಾಯಿಸಿ ಶಾಲಾ ಮಕ್ಕಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರಲ್ಲಿ ರಸ್ತೆ ತಡೆ ನಡೆಸಿ ತಮ್ಮ ಪಾಲಕರೊಂದಿಗೆ ಪ್ರತಿಭಟನೆ ಮಾಡಿದರು.

  ವೀರಣ್ಣ ಮಂಠಾಳಕರ್,

ಬಸವಕಲ್ಯಾಣಃ ತಾಲೂಕಿನ ಬಟಗೇರಾ ಸರಕಾರಿ ಪ್ರೌಢ ಶಾಲೆಯಲ್ಲಿ ಕಳೆದ ಒಂದು ವಷ೯ದಿಂದ ಶಿಕ್ಷಕರ ಕೊರತೆಯನ್ನು ಅನುಭವಿಸುತಿರುವುದರಿಂದ ಮಂಗಳವಾರ ನಗರದ ಗಾಂಧಿ ವ್ರತ್ತದಿಂದ ಬಿ.ಇ.ಓ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಶಾಲಾ ಮಕ್ಕಳು ಮತ್ತು ಪಾಲಕ-ಪೋಷಕರು ಶಾಲಾ ಶಿಕ್ಷಕರ ಕೊರತೆ ನೀಗಿಸಬೇಕೆಂಬ ಘೋಷಣೆಗಳೊಂದಿಗೆ ಕೆಲಹೊತ್ತು ರಸ್ತೆ ತಡೆ ನಡೆಸಿದರು.

ಬಟಗೇರಾದಲ್ಲಿ ಕೇವಲ ಮೂರು ಜನ ಶಿಕ್ಷಕರು ಸಧ್ಯದಲ್ಲಿ ಕಾಯ೯ನಿವ೯ಹಿಸುತಿದ್ದು, ಶಿಕ್ಷಕರ ಕೊರತೆ ಬಗ್ಗೆ ಹಲವು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಕೂಡ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ಇದ್ದಂಥ ಶಿಕ್ಷಕರನ್ನೆ ಮತ್ತೆ ವಗಾ೯ವಣೆ ಮಾಡಿದ್ದಾರೆ. ಉತ್ತಮವಾದ ಬೋಧನೆ ಇಲ್ಲದೇ ಮಕ್ಕಳು ಪರೀಕ್ಷೆಯಲ್ಲಿ ಪ್ರತಿಶತ ಫಲಿತಾಂಶ ಪಡೆಯುವುದು ಹೇಗೆ ಎಂಬ ದೂರಿನೊಂದಿಗೆ ರಸ್ತೆಗಿಳಿದ ಪಾಲಕರು ಮತ್ತು ಶಾಲಾ ಮಕ್ಕಳು ಶಾಲೆಗೆ ಹೆಚ್ಚುವರಿ ಶಿಕ್ಷಕರನ್ನು ನೇಮಿಸಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದರು.

ಬೇಕೆ ಬೇಕು ಶಿಕ್ಷಕರು ಬೇಕು ಎಂಬ ಘೋಷಣೆಗಳೊಂದಿಗೆ ರಸ್ತೆಗಿಳಿದ ಸಕಾ೯ರಿ ಪ್ರೌಢ ಶಾಲಾ ಮಕ್ಕಳ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪೋಷಕರು ಆಕ್ರೋಶಕಿಳಿದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾದರು. ಪ್ರತಿಭಟನಾಕಾರರು ಬಿ.ಇ.ಓ ಕಚೇರಿಗೆ ಸಮೀಪಿಸುತಿದ್ದಂತೆ ಅಧಿಕಾರಿಗಳು ಗೈರು ಹಾಜರಿ ಇರುವುದನ್ನು ಕಂಡು ಮತ್ತಷ್ಟು ಆಕ್ರೋಶಕಿಳಿದರು. ನಂತರ ನೂರಾರು ಸಂಖ್ಯೆಯಲ್ಲಿದ್ದ ಜನಸಮೂಹ ರಸ್ತೆ ನಡೆಸಿ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ನಗರದ ಹೊರವಲಯದಲ್ಲಿರುವ ತಹಶೀಲ ಕಚೇರಿಗೆ ತೆರಳಿದರು.

ಬಟಗೇರಾದಲ್ಲಿ ಇನ್ನೂ ಕನಿಷ್ಠ ಐದಾರು ಶಿಕ್ಷಕರ ಅಗತ್ಯವಿದ್ದು ಶಿಕ್ಷಕರ ಕೊರತೆಯನ್ನು ಕೂಡಲೇ ಒದಗಿಸಿಕೊಡಬೇಕು. ಇದ್ದಂಥ ಮೂರು ಜನ ಶಿಕ್ಷಕರು ಶಾಲಾ ಮಕ್ಕಳಿಗೆ ನ್ಯಾಯಯುತವಾಗಿ ಪಾಠ ಹೇಳಿಕೊಡಲು ಹೇಗೆ ಸಾಧ್ಯವಾಗುತ್ತದೆ. ಸರಿಯಾದ ಬೋಧನೆ ಇಲ್ಲದ ಕಾರಣ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮಕ್ಕಳು ಪ್ರತಿಶತ ಫಲಿತಾಂಶವನ್ನು ಕಾಣದೇ ಅವರ ವ್ಯಕ್ತಿತ್ವ ವಿಕಾಸದತ್ತ ದುಷ್ಟ ಪರಿಣಾಮವನ್ನು ಬೀರುತಿದೆ.

ಹೀಗೆ ಶಿಕ್ಷಣ ವ್ಯವಸ್ಥೆ ಮುಂದೊರೆದರೆ ಮಕ್ಕಳ ಭವಿಷ್ಯವನ್ನು ಹಾಳಾಗುವುದರಲ್ಲಿ ಸಂದೇಹವಿಲ್ಲ. ಹಿಂದುಳಿದ ಗ್ರಾಮಗಳೆಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಊರುಗಳತ್ತ ಸಕಾ೯ರ ಮೊದಲ ಅಧ್ಯತೆಯನ್ನು ನೀಡಿ ಇಲ್ಲಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಮುತುವ೯ಜಿ ವಹಿಸಬೇಕೆಂದು ಗ್ರಾಮಸ್ಥರೆಲ್ಲ ಒತ್ತಾಯಿಸಿದರು. ಒಂದು ವೇಳೆ ವ್ಯವಸ್ಥೆಯನ್ನು ಇದೇ ರೀತಿ ಇದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟಕ್ಕೂ ಸಿದ್ಧರಿದ್ದೇವೆ. ಅರಳಬೇಕಾದ ಮಕ್ಕಳ ಭವಿಷ್ಯದಲ್ಲಿ ಕರಾಳ ದಿನಗಳು ಬಾರದಂತಿರಲಿ ಎಂದು ಮನವಿ ಮಾಡಿದ್ದಾರೆ.

ಬಟಗೇರಾ ಪ್ರೌಢ ಹತ್ತಾರು ಸಲ ಶಿಕ್ಷಕರ ಕೊರತೆಯನ್ನು ಅಧಿಕಾರಿಗಳ ಗಮನ ಸೆಳೆದರೂ ಕೂಡ ನಿಲ೯ಕ್ಷಕೊಳಪಟ್ಟ ಶಾಲೆಗೆ ಶೀಘ್ರವೇ ಶಿಕ್ಷಕರ ಕೊರತೆಯನ್ನು ನೀಗಿಸಬೇಕು. ಇಲ್ಲವಾದರೆ ಶಾಲೆಗೆ ಬೀಗ ಜಡಿದು ಇನ್ನಷ್ಟು ಉಗ್ರವಾದ ಹೋರಾಕ್ಕಿಳಿಯಲು ಸಿದ್ಧರಿದ್ದೇವೆ ಎಂದು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಶಾಲಾ ಮಕ್ಕಳ ಪಾಲಕರು ಎಚ್ಚರಿಸಿದರು. ಮನವಿಯನ್ನು ಉಪ ತಹಸೀಲ್ದಾರ್ ಜಗನ್ನಾಥರೆಡ್ಡಿ ಸ್ವೀಕರಿಸಿದರು.

ಕಾಮೆಂಟ್‌ಗಳಿಲ್ಲ: