ಗುರುವಾರ, ಜುಲೈ 14, 2011

ಬಸವಕಲ್ಯಾಣದಲ್ಲಿ ಸಾವ೯ಜನಿಕ ಶೌಚಾಲಯ ಇಲ್ಲದೇ ಪರದಾಡುವ ಜನಗಳು

ಡಾ.ಗವಿಸಿದ್ಧಪ್ಪ ಪಾಟೀಲ 

ಃ ವಿಶ್ವಗುರು ಬಸವಣ್ಣನವರ ಪುಣ್ಯಭೂಮಿಯೆಂದರಿತು ಇಲ್ಲಿಗೆ ಆಗಮಿಸುವ ದೇಶ ವಿದೇಶ, ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಪ್ರವಾಸಿಗರಿಗೆ ಮೊಟ್ಟ ಮೊದಲು ಬೆಳಗಿನ ಕ್ರಿಯಾಕ್ರಮಗಳನ್ನು ಮುಸಿಕೊಳ್ಳುವಂಥ ಮೂಲಭೂತ ಸೌಲಭ್ಯಗಳು ಇಲ್ಲಿ ನಿಮಾ೯ಣವಾಗಬೇಕು. ನಂತರ ತಾವು ಬಂದಿರುವ ಉದ್ದೇಶದತ್ತ ಹೊರಡಲು ಸನ್ನಿದ್ಧರಾಗಿ ಇಲ್ಲಿನ ವಾತಾವರಣವನ್ನು ಕಂಡು ಖುಷಿ ಪಡುವಂತಾಗಬೇಕು. ಇಲ್ಲಿನ ಜನಪ್ರತಿನಿಧಿಗಳಿಂದ ಆಗಬೇಕಾದ ಕೆಲಸಗಳು ಕನಿಷ್ಠ ಪಕ್ಷ ಇಲ್ಲಿನವರೇ ಅವುಗಳನ್ನು ಅನುಭವಿಸುವಂತಿಲ್ಲ. ಅಂಥದರಲ್ಲಿ ನಗರ ಅಭಿವ್ರದ್ಧಿಗಾಗಿ ಕೈಗೆತ್ತಿಕೊಂಡಿರುವ ಬಿಕೆಡಿಬಿ ಮತ್ತು ಇಲ್ಲಿನ ಜನಪ್ರತಿನಿಧಿಗಳ ಸಹಕಾರದಡಿಯಲ್ಲಿ ಪ್ರವಾಸಿಗರ ಮೂಲಸೌಕಯ೯ಗಳತ್ತ ಗಮನ ಹರಿಸುವುದು ಅತಿ ಮುಖ್ಯವಾಗಿದೆ. ಹಾಗಾದಾಗ ಮಾತ್ರ ಐತಿಹಾಸಿಕ ಹಿನ್ನೆಲೆ ಇರುವ ಬಸವಕಲ್ಯಾಣಕ್ಕೆ ಪ್ರವಾಸಿಗರು ನಿತ್ಯವೂ ಲಗ್ಗೆ ಇಡುವುದರಲ್ಲಿ ಸಂದೇಹವಿಲ್ಲ.

                                                                              ಡಾ ಗವಿಸಿದ್ಧಪ್ಪ ಪಾಟೀಲ
                                                               ಕನ್ನಡ ವಿಭಾಗದ ಪ್ರಧ್ಯಾಪಕರು, ಬಸವಕಲ್ಯಾಣ


ಬಸವಕಲ್ಯಾಣಃ ಜೂನ್, 11ಃ  ಐತಿಹಾಸಿಕ ಹಿನ್ನೆಲೆಯುಳ್ಳ ಬಸವಕಲ್ಯಾಣ ನಗರದಲ್ಲಿ ಪ್ರವಾಸಿಗರ ಅನುಕಾಲಕ್ಕಾಗಿ ಸಾವ೯ಜನಿಕ ಶೌಚಾಲಯ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದಿರುವುದು ಇಲ್ಲಿನ ಜನಪ್ರತಿನಿಧಿಗಳ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ. ಪ್ರವಾಸಿ ತಾಣವನ್ನಾಗಿ ಮಾಡಬೇಕೆನ್ನುವ ಬಿಕೆಡಿಬಿ ಕನಸು ದೂರದಿಂದ ಬರುವವರ ಪಾಲಿಗೆ ಬಸವಕಲ್ಯಾಣ ಪಟ್ಟಣ ದೂರದ ಗುಡ್ಡ ನುಣ್ಣಗೆನ್ನುವಂತಿರುವುದು ವಿಪಯಾ೯ಸದ ಸಂಗತಿಯಾಗಿದೆ ಎಂದು ಹಲವರಲ್ಲಿ ಚಚೆ೯ಯಾಗುತಿದೆ.

ದೇಶದ ನಾನಾ ಭಾಗಗಳಿಂದ ಆಗಮಿಸುವ ಸಾಮಾನ್ಯ ವಗ೯ದ ಪ್ರವಾಸಿಗರು ಇಲ್ಲಿ ನರಕಯಾತನೆ ಅನುಭವಿಸುವಂಥ ಅನುಭವ. ನಗರದ ಪ್ರಮುಖ ಬಸ್ ನಿಲ್ದಾಣವೊಂದರಲ್ಲಿ ಶೌಚಾಲಯ ಬಿಟ್ಟರೆ ಬೇರೆಲ್ಲೂ ಇಲ್ಲದಿರುವುದು ಎಂಥ ದುರಂತವೆಂದು ಇಲ್ಲಿಗೆ ಬಂದು ಹೋಗುವವರು ಇದೆಂಥ ಕಲ್ಯಾಣವೆಂದು ಕನವರಿಸಿಕೊಂಡು ಬಂದ ದಾರಿಗೆ ಸುಂಕವಿಲ್ಲವೆನ್ನುವಂತೆ ವಾಪಸ್ಸಾಗುತ್ತಾರೆ.

12ನೇ ಶತಮಾನದ ಶರಣರ ಐತಿಹಾಸಿಕ ಸ್ಥಳಗಳನ್ನೆಲ್ಲಾ ಜೀಣೋ೯ದ್ದಾರ ಕಾಯ೯ಕ್ಕೆ ಮುಂದಾಗಿರುವ ಬಿಕೆಡಿಬಿಯ ಕಾಯ೯ವೈಖರಿಯನ್ನು ಮೆಚ್ಚಿ ಇಲ್ಲಿಗೆ ವಿವಿಧ ಭಾಗಗಳಿಂದ ಜನಸಾಮಾನ್ಯರಿಂದ ಹಿಡಿದು ಪ್ರತಿಷ್ಠಿತ ವ್ಯಕ್ತಿಗಳು ದಿನನಿತ್ಯ ಬಂದು ಹೋಗುವುದು ಸವೆ೯ ಸಾಮಾನ್ಯವಾಗಿದೆ. ಅಷ್ಟೇ ಅಲ್ಲದೇ ನಗರದಲ್ಲಿ ಸೇರಿದಂತೆ ತಾಲೂಕಿನಾದ್ಯಂತ  ಐತಿಹಾಸಿಕ ಕುರುಹುಗಳು ಇಲ್ಲಿರುವುದರಿಂದ ಅದಕ್ಕೆ ಆಕಷಿ೯ತರಾಗಿ ಪ್ರತಿಯೊಬ್ಬರೂ ಇತ್ತ ಚಿತ್ತ ಹರಿಸುವುಂತಾಗಿದೆ.

ಬಸವಕಲ್ಯಾಣಕ್ಕೆ ಬಂದು ಹೋಗುವ ಪ್ರವಾಸಿಗರಿಗೆ ಇಲ್ಲಿ ಕನಿಷ್ಠ ಪಕ್ಷ ಮೂಲಭೂತ ಸೌಲಭ್ಯಗಳಿಲ್ಲದಿದ್ದರೆ ಶರಣರ ನಾಡೆಂದೆನಿಸಿಕೊಳ್ಳುವ ನಗರವನ್ನು ಕಂಡು ಮೂಗು ಮುರಿಯುವ ಕಾಲ ಬಂದೊದಗುವಂಥ ಪರಿಸ್ಥಿತಿ ಇಲ್ಲಿ ನಿಮಾ೯ಣಗೊಳ್ಳುತಿದೆ. ರಸ್ತೆ ಸಂಚಾರ ನಿಯಂತ್ರಣವನ್ನು ಮಾಡದಿರುವುದರಿಂದ ಹಿಡಿದು ಇಲ್ಲಿನ ನಗರ ಬಡಾವಣೆಗಳ ಸ್ವಚ್ಛತೆಯನ್ನೂ ಕೂಡ ಮಾಡುವುದಕ್ಕೆ ಮೀನಾಮೇಷ ಏಣಿಸುವ ಅಧಿಕಾರಿಗಳು, ಜನಪ್ರತಿನಿಧಿಗಳ ನಿಲ೯ಕ್ಷ ಹೇರಳವಾಗಿದೆ ಎಂಬುದು ನಿತ್ಯವೂ ಜನಗಳ ಗೋಳಾಗಿದೆ.

ಮೊನ್ನೆ ಮೂರು ತಿಂಗಳುಗಳ ಹಿಂದೆ ಸುನಾಮಿಗೆ ತುತ್ತಾದ ಜಪಾನ ದೇಶ ಸಾವಿರಾರು ಜನರನ್ನು ಕಳೆದುಕೊಂಡಿರುವ ದುಖದಲ್ಲೂ ಅಭಿವ್ರದ್ಧಿಯತ್ತ ಮೊಟ್ಟ ಮೊದಲ ಗಮನ ಹರಿಸಿರುವ ಜಪಾನ ದೇಶ ಅಸ್ತವ್ಯಸ್ತವಾಗಿದ್ದ ಜನಜೀವನ ಸ್ವಚ್ಛ ನಗರವನ್ನಾಗಿಸಿಕೊಂಡು ಇದೀಗ ಮತ್ತೆ ಚೇತರಿಸಿಕೊಂಡಿರುವಾಗ ನೂರಾರು ವಷ೯ಗಳಿಂದ ನೆನಗುದಿಗೆ ಬಿದ್ದಿರುವ ಇಲ್ಲಿನ ಅಭಿವ್ರದ್ಧಿ ಕಾಯ೯ಗಳತ್ತ ಯಾಕೆ ನಮ್ಮ ಜನಪ್ರತಿನಿಧಿಗಳಾಗಲಿ, ಸಕಾ೯ರ ಗಮನ ಹರಿಸುವುದಿಲ್ಲ ಎಂಬುದು ಇಲ್ಲಿಗೆ ಬಂದು ಹೋಗುವ ಪ್ರವಾಸಿಗರು ನುಲಿಯುತ್ತಾರೆ.

ಕಾಮೆಂಟ್‌ಗಳಿಲ್ಲ: