ಗುರುವಾರ, ಜುಲೈ 14, 2011

ಕಲ್ಯಾಣದಲ್ಲಿ ಬಸವ ಮಹಾಮನೆ

 ಸುದ್ಧಿಗೋಷ್ಠಿಯಲ್ಲಿ ಕೌಠಾದ ಬೆಲ್ದಾಳ ಶ್ರೀಗಳು ಮಾತನಾಡುತಿರುವುದು. ಭಾಲ್ಕಿಯ ಬಸವಲಿಂಗ ಪಟ್ಟದೇವರು, ಕೂಡಲ ಸಂಗಮದ ಮ್ರತ್ಯುಂಜಯ ಸ್ವಾಮಿಗಳು ಇದ್ದರು.

ವೀರಣ್ಣ ಮಂಠಾಳಕರ್ 
--------------------------
ಬಸವಕಲ್ಯಾಣಃ ಮೂವತ್ತು ವಷ೯ಗಳ ಹಿಂದೆಯೇ ಬಸವಕಲ್ಯಾಣದಲ್ಲಿ ಬಸವ ಮಹಾಮನೆಯೊಂದನ್ನು ನಿಮಿ೯ಸುವ ಕಲ್ಪನೆ ಬಂದಿತ್ತು. ಆ ಕನಸನ್ನು ನನಸಾಗಿಸುವ ಸಂಕಲ್ಪದಿಂದ ಈಗಿನ ಅನುಭವ ಮಂಟಪದ ಹತ್ತಿರ ಈಗಾಗಲೆ 8 ಎಕರೆ ಜಮೀನು ಖರೀದಿಸಲಾಗಿದ್ದು 2 ಎಕರೆ ಭೂಮಿಯಲ್ಲಿ ಬಸವ ಮಹಾಮನೆ ಮತ್ತು ಶರಣೆಯರ ಧ್ಯಾನಕ್ಕಾಗಿ ನೀಲಾಂಬಿಕಾ ಯೋಗಕೇಂದ್ರವನ್ನು ವಿಶಾಲವಾದ ಸ್ಥಳದಲ್ಲಿ ನಿಮಿ೯ಸಲಾಗುತಿದೆ ಎಂದು ಕೌಠಾದ ಸಿದ್ಧರಾಮ ಶರಣರು ಬೆಲ್ದಾಳ ನುಡಿದರು.

ನಗರದ ಅನುಭವ ಮಂಟಪದಲ್ಲಿ ಮಂಗಳವಾರ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ, ಕಲ್ಯಾಣದಲ್ಲಿ ಬಸವ ಮಹಾಮನೆ ಮಾಡುವ ಮೂಲಕ 12ನೇ ಶತಮಾನದಲ್ಲಿದ್ದ ಯೋಗಿಗಳು ಭೂಕೈಲಾಸವನ್ನು ಕಂಡ ಅನುಭವದಂಥ ವಾತಾವರಣ ನಿಮಿ೯ಸುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಇಂತಹ ಒಂದು ಮಹತ್ವ ಯೋಜನೆಗೆ ಕೆಲವರ ಹಸ್ತಕ್ಷೇಪದಿಂದ ಅಡ್ಡಿಪಡಿಸುತಿದ್ದಾರೆ ಅದಕ್ಕಾಗಿ ಎಲ್ಲಾ ದಾಖಲೆಗಳ ಸಮೇತ ನಾನು ಸಿದ್ಧನಾಗಿದ್ದೇನೆ ಎಂದರು.

ಬಸವ ಮಹಾಮನೆ ನಿಮಾ೯ಣಕ್ಕಾಗಿ ಬೀದರನಲ್ಲಿ 5 ಎಕರೆ ಜಮೀನು ಮಂಜೂರಾಗಿತ್ತು. ಆದರೆ ಇಂತಹ ಮಹತ್ವದ ಯೋಜನೆ ಬಸವಕಲ್ಯಾಣದಲ್ಲಿಯೇ ಆಗಬೇಕೆಂದು ಭಾಲ್ಕಿಯ ಬಸವಲಿಂಗ ಪಟ್ಟದೇವರು ಒತ್ತಾಯಿಸಿದಾಗ ಜಿಲ್ಲಾಡಳಿತಕ್ಕೆ ಮಂಜೂರಾದ ಜಾಗ ವಾಪಸ್ ಮಾಡಿ ಇದೀಗ ಬಸವಕಲ್ಯಾಣದ ಅನುಭವ ಮಂಟಪದ ಹತ್ತಿರ 8 ಎಕರೆ ಜಮೀನಿಗೆ ಎನ್-ಎ, ಲೇಔಟ್ ಮಾಡಿಸಿ ನೋಂದಣಿ ಮಾಡಿಸಲಾಗಿದೆ ಇದಕ್ಕಾಗಿ ಬೇಕಾಗುವ ಅನುದಾನ ಸಕಾ೯ರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಶರಣ ಸಂಸ್ಕ್ರತಿ ಅಧ್ಯಯನ ಕೇಂದ್ರವನ್ನಾಗಿ ಮಾಡುವ ಬಸವ ಮಹಾಮನೆಯು ನಾಡಿನ ನೂರಾರು ಶರಣೆಯರಿಗೆ ಇದು ಧ್ಯಾನ ಕೇಂದ್ರವಾಗಲಿದೆ. 2 ಕೋಟಿ ರು. ವೆಚ್ಚದಲ್ಲಿ ಬಸವ ಮಹಾಮನೆ ಟ್ರಸ್ಟ್ ಅಡಿಯಲ್ಲಿ ನೀಲಾಂಬಿಕಾ ಯೋಗಕೇಂದ್ರ ಸೇರಿದಂತೆ ಹಲವು ಬಗೆ ಹಣ್ಣುಗಳನ್ನು ಈ ಜಾಗದಲ್ಲಿ ಬೆಳೆಸಲಾಗುತ್ತದೆ.

ಇದೇ 2011ರ ಅಕ್ಟೋಬರ್ ದಿಂದ ಡಿಸೆಂಬರ್ ಒಳಗಾಗಿ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಅವರನ್ನು ಕರೆಸಿ, ಕಾಮಗಾರಿ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಗುತಿದೆ. ದಿಬ್ಬದ ಮೇಲೆ 2 ಎಕರೆ ಜಾಗದಲ್ಲಿ ಬಸವ ಮಹಾಮನೆ ಮತ್ತು ಉಳಿದ ಜಾಗದೆಲ್ಲಿ ಯೋಗ ಧ್ಯಾನ ಕೇಂದ್ರದ ಕಾಮಗಾರಿ ಶೀಘ್ರವೆ ಪ್ರಾರಂಭಿಸಲಾಗುತ್ತದೆ. ವಯಕ್ತಿಕ ಸಾಧನೆ ಮಾಡುವವರಿಗೆ ಇದು ಸೂಕ್ತವಾಗುತ್ತದೆ ಎಂದು ವಿವರಿಸಿದರು.

ಕಾಮೆಂಟ್‌ಗಳಿಲ್ಲ: