ಮಂಗಳವಾರ, ಏಪ್ರಿಲ್ 12, 2011

ಮಾಣಿಕ ಭುರೆ ರಚಿಸಿದ ಪುಸ್ತಕಗಳ ಮುಖಪುಟಗಳು.


ಬದುಕಿನ ಬೆನ್ನೇರಿ ಕಥಾ ಸಂಕಲನದ ಮುಖಪುಟ ಹಾಗೂ ಹಿಂಬದಿ ಪುಟ ಸುಂದರ-ಆಕಷ೯ಕವಾಗಿ ವಿನ್ಯಾಸ ಮಾಡಿರುವರು ಮಾಣಿಕ ಭುರೆ.


ಆತ್ಮೀಯರೆ
           ಇತ್ತೀಚಿಗಷ್ಟೆ ಫೆ- 24, 2011 ರಂದು ಬಸವಕಲ್ಯಾಣ ತಾಲೂಕಿನ ಬೇಲೂರಿನಲ್ಲಿ ಶರಣ ಉರಿಲಿಗ ಪೆದ್ದಿಯ ಜಾತ್ರಾ ಮಹೋತ್ಸವ ಹಾಗೂ ಉರಿಲಿಂಗ ಪೆದ್ದಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಐದು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಡಾ. ಗವಿಸಿದ್ಧಪ್ಪ ಪಾಟೀಲ, ಮಲ್ಲೇಶ್ವರಿ ಉದಯಗಿರಿ, ಪ್ರೊ.ವಿಜಯಲಕ್ಷ್ಮೀ ಗಡ್ಡೆ, ಮಹಾಂತೇಶ ನವಲಕಲ್ ಸೇರಿದಂತೆ ವೀರಣ್ಣ ಮಂಠಾಳಕರ್ ಆದ ನನ್ನ ಬದುಕಿನ ಬೆನ್ನೇರಿ ಎಂಬ ಕಥಾ ಸಂಕಲನವು ಕೂಡ ಸಾಂಕೇತಿಕವಾಗಿ ಬಿಡುಗಡೆ ಮಾಡಿದ್ದೇವೆ. ಪೂಜ್ಯ ಪಂಚಾಕ್ಷರಿ ಸ್ವಾಮಿಗಳ ಒತ್ತಾಸೆ ಪ್ರೀತಿಯಿಂದ ಉರಿಲಿಂಗಪೆದ್ದಿ ಪ್ರತಿಷ್ಠಾನದಿಂದ ಪ್ರಕಟಿಸಿದ ಪುಸ್ತಕಗಳ ಪೈಕಿ ಒಂದೆರಡು ಪುಸ್ತಗಳ ಮುಖಪುಟ ಇಲ್ಲಿವೆ. ಅಷ್ಟೇ ಪ್ರೀತಿಯಿಂದ ಪುಸ್ತಕಗಳಿಗೆ ಮುಖಪುಟ ವಿನ್ಯಾಸ ಮಾಡಿರುವ ಆತ್ಮೀಯ ಸ್ನೇಹಿತರು, ಎಲ್ಲರೊಂದಿಗೆ ಬೆರೆಯುವ ಸರಳ ಜೀವಿ, ಪತ್ರಕತ೯ ಮಾಣಿಕ ಭುರೆ ಅವರ ಸಹಕಾರ ಬೆಳೆಯುವ ಪ್ರತಿಭೆಗಳಿಗೆ ನೀರೆರೆಯುವ ಕೆಲಸವನ್ನು ತುಂಬಾ ಶ್ರದ್ಧೆಯಿಂದ, ಆಸಕ್ತಿಯಿಂದ ಮಾಡುತ್ತಾರೆ. ಅದಕ್ಕಾಗಿ ಭುರೆ ಅವರು ವಿಶಿಷ್ಠ ವ್ಯಕ್ತಿತ್ವದ ಶಕ್ತಿಯಾಗಿ ಎಲೆಮರೆ ಕಾಯಿಯಾಗಿರುವವರನ್ನು ಗುರುತಿಸುತ್ತಾರೆ. ಅವರಿಗೆ ನಾವೆಲ್ಲ ಅಭಿನಂದಿಸಲೇಬೇಕು.
                                                                                                      -ವೀರಣ್ಣ ಮಂಠಾಳಕರ್

   ಮಲ್ಲೇಶ್ವರಿ ಉದಯಗಿರಿ ಅವರ ಕವನ ಭಾವಂಕಷ೯ ಸಂಕಲನ ಮುಖಪುಟ.

ಮಾಣಿಕ ಭುರೆ ಅವರು ರಚಿಸಿದ ಪುಸ್ತಕಗಳ ಮುಖಪುಟಗಳು. ಸೊಗಸಾಗಿವೆ. ಅವರು ಬಹುಮುಖ ಪ್ರತಿಭೆಯ ವಿಶಿಷ್ಟ ವ್ಯಕ್ತಿ, ಪತ್ರಕತ೯ರಾಗಿ, ಲೇಖಕರಾಗಿ, ಬಿಡುವಿನ ವೇಳೆ ಇತ್ತ ಮುಖಪುಟ ವಿನ್ಯಾಸಕಾರರಾಗಿ ಹವ್ಯಾಸವನ್ನು ಬೆಳೆಸಿಕೊಂಡಿರುವ  ಮಾಣಿಕ ಭುರೆ ಅವರ ಛಾಯಾಚಿತ್ರ. ಈ ಬರಹದ ಕೆಳಗೆ, ಬರಹಗಾರರಿಗೆ ನೆಗಳಾಗಿದ್ದಾರೆಂದರೆ ತಪ್ಪಾಗಲಾರದು. 

ಪತ್ರಕತ೯, ಲೇಖಕರಾದ  ಮಾಣಿಕ ಭುರೆ

ಕಾಮೆಂಟ್‌ಗಳಿಲ್ಲ: