ಸೋಮವಾರ, ಏಪ್ರಿಲ್ 11, 2011

ಮಲ್ಲೇಶ್ವರಿ ಉದಯಗಿರಿ ಅವರ ಕವನ ಸಂಕಲನಗಳಿಂದ ಆಯ್ದ ಕವಿತೆಗಳುಃ ಓದಿ ಅಭಿಪ್ರಾಯ ಬರೆಯಿರಿ.


ಮಲ್ಲೇಶ್ವರಿ ಉದಯಗಿರಿ
 ಕನ್ನಡದ ಕವಯಿತ್ರಿಯರಲ್ಲಿ ಕೇಳಿ ಬರುವ ಹೆಸರು ಮಲ್ಲೇಶ್ವರಿ ಉದಯಗಿರಿ ಅವರದು ಬಹುಮುಖ ಪ್ರತಿಭೆ. ಬೀದರ ಜಿಲ್ಲೆಯ ಪ್ರತಿಬಾವಂತ ಲೇಖಕಿಯಾಗಿರುವ ಇವರು, ಪ್ರೀತಿ-ಪ್ರೇಮ-ಪ್ರಣಯ-ವಿರಹದ-ಸಾಮಾಜಿಕ ಚಂತನೆಗಳ ಕುರಿತು ಬರೆದ ಕವಿತೆಗಳು ಓದುಗರನ್ನು ಬಹುಬೇಗ ಸೆಳೆಯುವ ಮಲ್ಲೇಶ್ವರಿ ಅದಕ್ಕಾಗಿ ಪ್ರಿಯರಾಗಿ ಬಿಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಧ್ಯಾತ್ಮದತ್ತ ಒಲವನ್ನು ಬೆಳೆಸಿಕೊಂಡಿರುವ ಇವರು ಸಧ್ಯದಲ್ಲಿ ಹುಮನಾಬಾದ ತಾಲೂಕಿನ ಠಾಣೆಯೊಂದರಲ್ಲಿ ಪೋಲಿಸ್ ಹೆಡ್ ಕಾನಸ್ಟೇಬಲ್ ಆಗಿ ಕಾಯ೯ನಿವ೯ಹಿಸುತ್ತಿದ್ದಾರೆ. ಶೋಷಿತ ಮಹಿಳೆಯರಿಗೆ ಸಾಂತ್ವನ ನೀಡಬಲ್ಲ ಶಕ್ತಿ ಇವರ ಕಾವ್ಯದಲ್ಲಿ ಕಂಡು ಬರುತ್ತದೆ. ರಸಿಕರ ಮನತಣಿಸುವಲ್ಲಿ ಸಹ ಇವರ ಕವಿತೆಗಳು ಯಶಸ್ವಿಯಾಗುತ್ತವೆ. ಅನೇಕ ಸಂಘಟನೆಗಳಲ್ಲಿ ಸಕ್ರೀಯವಾಗಿ ಕಾಯ೯ ನಿವ೯ಹಿಸಿರುವ ಮಲ್ಲೇಶ್ವರಿ ಅವರ ಬರಹಗಳು ವೀರಸಂಕಲ್ಪ ಬ್ಲಾಗನಲ್ಲಿ ಶೀಘ್ರದಲ್ಲಿಯೇ ಪ್ರಕಟಗೊಳ್ಳಲಿವೆ. ಇವರ ಸಂಪೂಣ೯ ಕವಿತೆಗಳ ಗುಚ್ಚ ನಿಮ್ಮ ಮುಂದೆ ತರುತ್ತೇವೆಂಬ ಭರವಸೆಯಲ್ಲಿ ನಾವಿದ್ದೇವೆ. ಹಾಗಂತ ಈಗಲೆ ನಿಮಗೆ ನಿರಾಸೆಗೊಳಿಸದೇ ಕೆಲವು ಕವಿತೆಗಳು ನಿಮಗಾಗಿ ಶ್ಯಾಂಪಲ್.........ಓದಿ ಅನಿಸಿಕೆ ಬರೆಯಿರಿ....
                                                                                             ನಿಮ್ಮ
                                                                                        ಅಕ್ಷರ ಪ್ರೇಮಿ.


              ಮಲ್ಲೇಶ್ವರಿ ಉದಯಗಿರಿ ಅವರ ಕವನ ಸಂಕಲನಗಳ ಮುಖಪುಟಗಳು.


ಮೇಲ್ಕಾಣುತ್ತಿರುವ ಪುಸ್ತಕಗಳ ಲೇಖಕಿ ಮಲ್ಲೇಶ್ವರಿ ಉದಯಗಿರಿ ಅವರ ಭಾವಸ್ಪಶ೯ ಮತ್ತು ಭಾವಂಕಷ೯ ಕವನ ಸಂಕಲನಗಳು ಇತ್ತೀಚಿನದವಾಗಿವೆ. ಮೊದಲ ಕವನ ಸಂಕಲನ ಭಾವಕಾರಂಜಿ ಕವನ ಸಂಕಲನದ ಮುೂಲಕ ಓದುಗರ ಗಮನ ಸೆಳೆದಿದ್ದಾರೆ.
---------------------------------------------------------------------------------------------------------------



ಮಲ್ಲೇಶ್ವರಿ ಉದಯಗಿರಿ ಅವರ ಕವನ ಸಂಕಲನಗಳ ಮುಖಪುಟಗಳು.

























ಆತ್ಮಿಯರೆ,

              ನನ್ನ ಬಹಳ ದಿನದ ಒಂದು ಕನಸಾಗಿತ್ತು. ಪತ್ರಿಕೆಯೊಂದನ್ನು ಪ್ರಾರಂಭಿಸಬೇಕು. ಅದರಲ್ಲಿ ಹತ್ತು ಹಲವು ವಿಚಾರಗಳನ್ನು ಮಂಡಿಸಬೇಕೆಂಬುದು  ಬಹುದೊಡ್ಡ ಸಂಕಲ್ಪವಾಗಿತ್ತು. ಆ ಕಾರಣಕ್ಕಾಗಿ ನಾನು ಸಾಹಿತ್ಯ ಮತ್ತು ಪತ್ರಿಕೆಗಳಲ್ಲಿ ತೀರಾ ಆಸಕ್ತದಾಯಕನಾಗಿ. ಸಂಕಲ್ಪವೆಂಬ ಸಾಹಿತ್ಯಿಕ ಮಾಸ ಪತ್ರಿಕೆ 2005 ರಲ್ಲಿ ಪ್ರರಂಭಿಸಿದೆ. ಕಾರಣಾಂತರಗಳಿಂದ ಕೆಲವೇ ಸಂಚಿಕೆಗಳನ್ನು ಪ್ರಕಟಿಸಿ ಅನಿವಾಯ೯ಕ್ಕೆ ನಿಲ್ಲಿಸಬೇಕಾದ ಪ್ರಸಂಗ ಬಂದಾಗ ಏನೋ ಮಹತ್ವವಾದುದ್ದನ್ನು ಕಳೆದುಕೊಂಡಂತಾಗಿ, ನೋವನ್ನು ಅನುಭವಿಸಿದೆ. ಬದುಕಿನ ಬೆನ್ನೇರಿ ಹೊಟ್ಟೆಪಾಡಿಗಾಗಿ ಅಲೆದಾಡಬೇಕಾದ ಪ್ರಸಂಗ ಬಂದೊದಗಿತು. ಇದರಿಂದ ಕೆಲವರು ಟೀಕಿಸಿದರು. ವ್ಯಂಗ್ಯದ ಪ್ರತಿಕ್ರಿಯೆ ತೋರಿದರು. ಅದ್ಯಾವುದಕ್ಕೂ ಗಮನ ಕೊಡುವಷ್ಟು ಪರಿಸ್ಥಿತಿಯಲ್ಲಿರಲಿಲ್ಲ....... ಈಗ ಆ ಕನಸನ್ನು ನನಸಾಗುತ್ತಿದೆ ಎಂದು ಭಾವಿಸಿದ್ದೇನೆ.

                                                                                                                                                           ವಿ.ಎಚ್. ವೀರಣ್ಣ ಮಂಠಾಳಕರ್
ಲೇಖಕರು, ಪತ್ರಕತ೯ರು
ಮೊ.ಸಂಖ್ಯೆಃ 9036144592 ಅಥವಾ 9019991066-ಸಂಪಕಿ೯ಸಿ


ಕಾಮೆಂಟ್‌ಗಳಿಲ್ಲ: