ಬುಧವಾರ, ಏಪ್ರಿಲ್ 13, 2011

ಬಸವಕಲ್ಯಾಣ ತಾಲೂಕಿನಲ್ಲಿರುವ ಮೋರಖಂಡಿ ಗ್ರಾಮದಲ್ಲಿರುವ ಚಾಲುಕ್ಯರ ಕಾಲದ ಶಿವಮಂದಿರದ ಶಿಲಾ ಶಾಸನಗಳ ಕೆಲವು ಚಿತ್ರಗಳು.


ಐತಿಹಾಸಿಕ ಹಿನ್ನೆಲೆಯ ಗತವೈಭವ ಸಾರುತ್ತಿದೆಃ ಬಸವಕಲ್ಯಾಣ ತಾಲೂಕಿನ ಮೋರಖಂಡಿ ಗ್ರಾಮದಲ್ಲೊಂದು ಚಾಲುಕ್ಯರ ಕಾಲದ ಶಿವಮಂದಿರ
( ಇದಕ್ಕೆ ಬೇಕಾಗಿದೆ ಸಕಾ೯ರದಿಂದ ಕಾಯಕಲ್ಪ-ಜೀಣೋ೯ದ್ಧಾರದ ಸಂಕಲ್ಪ)

 ಚಿತ್ರ ಲೇಖನ :    ವಿ.ಎಚ್. ವೀರಣ್ಣ ಮಂಠಾಳಕರ್





 ಚಿತ್ರ ಲೇಖನ ವರದಿಃ ವಿ.ಎಚ್.ವೀರಣ್ಣ ಮಂಠಾಳಕರ್
-----------------------------------------------

ಐತಿಹಾಸಿಕ ಹಿನ್ನೆಲೆಯ ಗತವೈಭವ ಸಾರುತ್ತಿದೆಃ ಬಸವಕಲ್ಯಾಣ ತಾಲೂಕಿನ ಮೋರಖಂಡಿ ಗ್ರಾಮದಲ್ಲೊಂದು ಚಾಲುಕ್ಯರ ಕಾಲದ ಶಿವಮಂದಿರ
( ಇದಕ್ಕೆ ಬೇಕಾಗಿದೆ ಸಕಾ೯ರದಿಂದ ಕಾಯಕಲ್ಪ-ಜೀಣೋ೯ದ್ಧಾರದ ಸಂಕಲ್ಪ)

ಬಸವಕಲ್ಯಾಣಃ ಏ-13. ಇತಿಹಾಸದ ಕುರುಹುಗಳ ಜೀಣೋ೯ದ್ಧಾರ ಮಾಡಬೇಕಾದ ಸಕಾ೯ರದ ಜವಾಬ್ದಾರಿ ಕೆಲವೆಡೆ ನಿಲ೯ಕ್ಷಕೊಳಗಾಗಿ ಅವನತಿಯ ಅಂಚಿನಲ್ಲಿ ಅವು ಮರೆಯಾಗಿ ಹೋಗುತ್ತಿರುವುದು ಇತಿಹಾಸ ಎಂಬುದು ಬರೀ ಕಲ್ಪನೆಗಳಲ್ಲಿ ಉಳಿದು ಬಿಡಬಹುದೇನೋ ಎನ್ನುವಂತೆ ಆತಂಕ ಎದುರಾಗುತ್ತದೆ. ಚಾಲುಕ್ಯರ ಕಾಲದಲ್ಲಿ ಕಟ್ಟಲ್ಪಟ್ಟ ದೇವಸ್ಥಾನಗಳು ಬಹುತೇಕ ಜನ ಮರೆತು ಕುಳಿತಂತಿದೆ ಅನಿಸುತ್ತಿದೆ.

ಇತಿಹಾಸದ ನೆನಪುಗಳು ಯಾರಿಗೂ ಬೇಕಾಗಿಲ್ಲ ಎನ್ನುವಂತೆ ಜನ ಮರೆತು ಕುಳಿತಂತಿದ್ದರೂ ಅವುಗಳ ಆಕಷ೯ಣೆಗೆ ಒಳಗಾಗುವವರಿಗೆ ಒಂದು ವಿಚಿತ್ರ ಅನುಭವವನ್ನೆ ನೀಡುತದೆ. ಚಾಲುಕ್ಯರ ಕಾಲದಲ್ಲಿದ್ದ ಶಿಲಾ ಶಾಸನಗಳ ಕಟ್ಟಡಗಳು ಅಲ್ಲೊಂದು ಇಲ್ಲೊಂದು ನೋಡಲು ಮಾತ್ರ ಸಿಗುವಂತಿವೆ. ಅವುಗಳ ರಕ್ಷಣೆಗೆ ಮುಂದಾಗಬೇಕಾದ ಸಕಾ೯ರ ನಿಲ೯ಕ್ಷಿಸದೇ ಉಥಗಸಬೇಕಾಗಿದೆ.

ಇಂತಹ ನಿಲ೯ಕ್ಷಕ್ಕೆ ಒಳಗಾಗಿರುವ ಬಸವಕಲ್ಯಾಣ ತಾಲೂಕಿನ ಮೋರಖಂಡಿ ಗ್ರಾಮದಲ್ಲಿರುವ ಚಾಲುಕ್ಯರ ಕಾಲದ ಶಿವಮಂದಿರ ಕಟ್ಟಡವನ್ನು ಇತಿಹಾಸದ ಗತವೈಭವ ಸಾರುವಂತಿದೆ. ಆದರೆ ಹಾಳುಬಿದ್ದ ಕಟ್ಟಡದತ್ತ ಸಂಬಂಧಿಸಿದವರು ಕಾಳಜಿವಹಿಸಿ ಜೀಣೋ೯ದ್ದಾರ ಮಾಡುವ ಉದ್ದೇಶದಿಂದ ಕೈಗೆತ್ತಿಕೊಂಡರೆ ಚಾಲುಕ್ಯ ಅರಸರ ಆಳ್ವಿಕೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇತ್ತ ಒಂದಿಷ್ಟು ಕಣ್ಣು ಹಾಯಿಸಿದರೆ ಅಳಿವಿನಂಚಿನಲ್ಲಿರುವ ಕಟ್ಟಡಗಳು ಮುಂದಿನ ಪೀಳಿಗೆಗಾಗಿ ಐತಿಹಾಸಿಕ ಹಿನ್ನೆಲೆಯ ಚಿತ್ರಣವನ್ನು ಕಲ್ಪನೆಗಿಂತ ವಾಸ್ತವಾಗಿ ತೋರಿಸಬಹುದು.

ಬಸವಕಲ್ಯಾಣ ತಾಲೂಕಿನಿಂದ ಕೆಲವೇ ಕಿ.ಮೀ, ಅಂತರವಿರುವ ಮೋರಖಂಡಿ ಗ್ರಾಮದಲ್ಲಿರುವ ಶಿವಮಂದಿರ ಕೆರೆಯ ದಡದಲ್ಲಿ ಅನಾಥವಾಗಿ ಶಿವ ದೇವಾಲಯ ಕೈ ಬೀಸಿ ಕರೆಯುವಂತೆ ಕಂಡು ಬರುತ್ತದೆ. ಯಾವುದ್ಯಾವುದೋ ದೇವಸ್ಥಾನಗಳಿಗೆ ಅನುದಾನದ ಹೊಳೆಯನ್ನು ಸರಾಗವಾಗಿ ಹರಿಸುತ್ತಿರುವ ಸಕಾ೯ರ ಅವನತಿಯಲ್ಲಿ ಉಳಿದಿರುವ ಐತಿಹಾಸಿಕ ಶಿಲಾ ಶಾಸನಗಳ ಕಟ್ಟಡಗಳು ಕೈಗೆತ್ತಿಕೊಳ್ಳಬೇಕಾದ್ದು ಅವಶ್ಯವಾಗಿದೆ.

ಅಭಿವ್ರದ್ಧಿಯ ಪಥದಲ್ಲಿ ಸಾಗುತ್ತಿರುವ ಬಸವಕಲ್ಯಾಣ ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ಇಂತಹ ಇತಿಹಾಸದ ಕಥೆ ಹೇಳುವ ಮಂದಿರಗಳಿಂದ ಖುಷಿ, ನೆಮ್ಮದಿಯನ್ನು ಕೊಡುತ್ತದೆ. ಅಲ್ಲದೆ ಇಲ್ಲಿ ಬಂದು ಹೋಗುವವರನ್ನು ವಿನೂತನವಾದ ಇತಿಹಾಸದ ಚಿಂತನೆ ಮುೂಡಿಸದೇ ಇರದು.ಚಾಲುಕ್ಯರ ಕಾಲದ ಶಿವಮಂದಿರವೆಂದೇ ಕರೆಯಲ್ಪಡುವ ಈ ದೇವಸ್ಥಾನದ ಗೋಡೆ ಕಲ್ಲುಗಳು ಬಹುತೇಕ ಅನಾಥ ಸ್ಥಿತಿಯಲ್ಲಿ ಬಿದಿದ್ದು, ಇವುಗಳ ಸುರಕ್ಷತೆಗೆ ಮುಂದಾಗಬೇಕಾಗಿದೆ.

ಸುತ್ತಲಿನ ಪರಿಸರ ತಂಪು ಹವಾಮಾನದಿಂದ ಕೂಡಿದ್ದು, ಪಕ್ಕದಲ್ಲೇ ಇರುವ ಕೆರೆಗೆ ಗ್ರಾಮದ ಹೆಣ್ಣುಮಕ್ಕಳು ಬಟ್ಟೆಯನ್ನು ತೊಳೆಯಲು ಬರುತ್ತಾರೆ. ಈ ಎಲ್ಲಾ ಮನಮೋಹಕವಾದ ದ್ರಶ್ಯ ನೋಡುತಿದ್ದರೆ ಕೆರೆಯಲ್ಲಿ ಸ್ನಾನವನ್ನು ಮುಗಿಸಿ, ಶುಭ್ರವಾದ ಶರೀರದಲ್ಲಿ ಭಕ್ತಿಪೂವ೯ಕವಾಗಿ ದೇವಸ್ಥಾಕ್ಕೆ ಪೂಜೆಗಾಗಿ ಬರುವಂತೆ ಐತಿಹಾಸಿಕ ಚಿತ್ರಣ ಇಲ್ಲಿ ಕೊಂಚ ಮಟ್ಟಿಗೆ ತೇಲಿ ಬರುತದೆ. ನಿತ್ಯವೂ ಈ ಶಿವಮಂದಿರ ದೇವಸ್ಥಾನದಲ್ಲಿರುವ ಶಿವ ಲಿಂಗಕ್ಕೆ ಭಕ್ತಿಯಿಂದ ಹೂ-ಹಾರ, ವಿಭೂತಿಯ ಸೇವೆಯನ್ನು ಗ್ರಾಮಸ್ಥರು ಸಲ್ಲಿಸುತ್ತಾರೆ. ಯಾವುದಕ್ಕೂ ಇಲ್ಲಿರುವ ಇತಿಹಾಸದ ಗುರುತನ್ನು ಸಕಾ೯ರ ನಿಲ೯ಕ್ಷಿಸದಿರಲೆಂಬ ಆಶಯ ಗ್ರಾಮಸ್ಥರದು ಇದ್ದಂತಿದೆ. ಪ್ರವಾಸಿಗರಿಗಂತೂ ಚಾಲುಕ್್ಯರ ಕಾಲದ ಕಟ್ಟಡ ಆಕಷಿ೯ಸದೇ ಇರಲಾರದು.
                                                                                              ಕ.ಪ್ರ. ಕ್ರಪೆ




ಕಾಮೆಂಟ್‌ಗಳಿಲ್ಲ: