ಗುರುವಾರ, ಏಪ್ರಿಲ್ 14, 2011

ಮಂಠಾಳಕರ್ ಜೀವನ ಅನುಭವದಿಂದ.....

ಭಾಗ-1
---------

ವೀರಣ್ಣ ಮಂಠಾಳಕರ್ ಜೀವನ ಅನುಭವದಿಂದ.....

ನಾನೊಬ್ಬ ಹವ್ಯಾಸಿ ಬರಹಗಾರ, ಪತ್ರಕತ೯ನಾಗಿ ಬಸವಕಲ್ಯಾಣ ತಾಲೂಕಿನಲ್ಲಿ ಸೇವೆ ಸಲ್ಲಿಸುತಿದ್ದೇನೆ. ನನ್ನ ಬಗ್ಗೆ ಹೇಳುವಂಥದ್ದು ಏನಿಲ್ಲವಾದರೂ ಕೆಲವು ಆಸಕ್ತಿದಾಯಕವಾದ ವಿಚಾರಗಳನ್ನು ತಮ್ಮ ಮುಂದೆ ಹೇಳಲು ಇಷ್ಟಪಡುತ್ತೇನೆ. ಕಾರಣ ಇಷ್ಟೆ. ನನಗೆ ಸಾಹಿತ್ಯಿಕ ಪತ್ರಿಕೆಯೊಂದನ್ನು ತೆಗೆಯಬೇಕೆಂಬ ಸಂಕಲ್ಪ ಬಹಳ ದಿನಗಳದ್ದಾಗಿತ್ತು. ಅದಕ್ಕಾಗಿ 2005 ರಲ್ಲಿ ಪತ್ರಿಕೆಯೊಂದನ್ನು ಪ್ರಾರಂಭಿಸಿದೆ. ಆಥಿ೯ಕ ಮುಗ್ಗಟ್ಟಿನಿಂದ ಕೆಲವೇ ಸಂಚಿಕೆಗಳನ್ನು ಪ್ರಕಟಿಸಿ ಅಸಮಾಧಾನಕೊಳಗಾದೆ. ತುಂಬಾ ಆಸಕ್ತಿಯಿಂದ ಪ್ರಾರಂಭಿಸಿದ ಪತ್ರಿಕೆ ನಿಂತು ಹೋಯಿತಲ್ಲ ಎಂಬ ಸಂಕಟದಲ್ಲಿದ್ದೆ. ಹೊಟ್ಟೆಪಾಡಿಗಾಗಿ
ಪಟ್ಟಣಗಳಿಗೆ ಅಲೆದಾಡಿದೆ. ಎಲ್ಲೂ ಒಂದು ಸ್ಥಿರವಾದ ನೆಲೆ ಸಿಗಲಿಲ್ಲ. ಕೊನೆಗೆ ಗುಲ್ಬಗಾ೯ದ ಸ್ಥಳೀಯ ಪತ್ರಿಕೆಯೊಂದರಲ್ಲಿ ಉಪಸಂಪಾದಕನಾಗಿ ಕೆಲಸಕ್ಕೆ ಸೇರಿದೆ. ಅಲ್ಲಿಂದಲೇ ಶುರುವಾಯಿತು. ನನ್ನ ಬದುಕಿನ ಮಹತ್ವದ ಗುರಿಯೊಂದಕ್ಕೆ ಮೆಟ್ಟಿಲುಗಳ ನಿಮಾ೯ಣ. ಆದರೆ ಆ ಮಹತ್ವದ ಬದಲಾವಣೆಯ ಬಗ್ಗೆ ನನಗೇ ಅರಿವಿರಲಿಲ್ಲ. ಕಾರಣ ಹೊಟ್ಟೆಪಾಡಿಗೆಗಿ ಕೆಲಸಕ್ಕೆ ಸೇರಿದ ನನಗೆ, ನಾನು ಪ್ರಕಟಿಸಿದ ಕವನ ಸಂಕಲನಗಳು ಹಾಗೂ ಸಂಕಲ್ಪ ಮಾಸ ಪತ್ರಿಕೆಯ ಸಂಚಿಕೆಗಳು ದಿನದ ಒಂದು ಹೊತ್ತು ಕೂಳನ್ನು ಕೊಡುತಿತ್ತು. ಆ ಪತ್ರಿಕಾ ಕಚೇರಿಯಲ್ಲಿ ಕೆಲಸಕ್ಕೆ ಸೇರಿದಕ್ಕಾಗಿ ಕಂಪ್ಯೂಟರ್ ಎಬುದೇ ರೊತ್ತಿರದ ನನಗೆ, ಅಕ್ಷರ ಜೋಡಣೆ ಮಾಡುವುದನ್ನು ಕಲಿಸಿತ್ತು.  ಹೀಗೆ ಕಾಲಕ್ರಮೇಣವಾಗಿ ಸಾಹಿತ್ಯದ ಇನ್ನೂ ಹೆಚ್ಚಿನ ಅಭಿರುಚಿ ಬೆಳೆದ ಪ್ರತೀಕವಾಗಿ ನಾಲ್ಕಾರು ಪುಸ್ತಕಗಳನ್ನು ಪ್ರಕಟಿಸಿದೆ. ನನ್ನ ಮೊಟ್ಟ ಮೊದಲನೆಯ ಸಂಕಲನ ಭಾವಾಂತರಂಗ ಬೀದರ ಜಿಲ್ಲೆಯ ಧೀಮಂತ ಕಥೆಗಾರ ದಿ.ಶ್ರೀಕಾಂತ ಪಾಟೀಲರು ಸ್ವ-ಆಸಕ್ತಿಯಿಂದ ಬಸವಕಲ್ಯಾಣದಲ್ಲಿ ಬಿಡುಗಡೆಗೊಳಿಸಿದರು.
                                            ಸರಣಿ ಲೇಖನವಾಗಿ ಮುಂದೊರೆಯುತ್ತದೆ.....

www.manthalkar-veersankalpa.blogspot.com

ಕಾಮೆಂಟ್‌ಗಳಿಲ್ಲ: