ಬುಧವಾರ, ಫೆಬ್ರವರಿ 29, 2012

ಯುವ ನಾಯಕರ ಅವಶ್ಯಕತೆ


ಬಸವಕಲ್ಯಾಣ ಮತಕ್ಷೇತ್ರಕ್ಕೆ ಯುವ ನಾಯಕರ ಅವಶ್ಯಕತೆ ಅದೇಷ್ಟುಃ ಆ ಸ್ಥಾನವನ್ನು ತುಂಬುವ ನಾಯಕತ್ವ ಯಾರಲ್ಲುಂಟು....?



ಯುವ ನಾಕ ಸುಧೀರ ಕಾಡಾದಿ ಅವರ ಜನ್ಮ ದಿನಾಚಾರಣೆ ನಿಮಿತ್ಯವಾಗಿ ಸಕಾ೯ರಿ ಸಾವ೯ಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸುತ್ತಿರುವುದು. ಈ ಸಂದಭ೯ದಲ್ಲಿ ಲೀಡ್ಕರ್ ಅಧ್ಯಕ್ಷ ರಾಜೇಂದ್ರ ವಮಾ೯ ಇತರರಿದ್ದರು.







ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರನ್ನು ಬೀದರನಲ್ಲಿ ಭೇಟಿಯಾಗಿ ಬಸವಕಲ್ಯಾಣ ತಾಲೂಕಾ ಅಭಿವೖದ್ಧಿಗಾಗಿ ಸುಧೀರ ಕಾಡಾದಿ ಹಾಗೂ ಅವರ ಬೆಂಬಲಿಗರು ಮನವಿ ಸಲ್ಲಿಸುತ್ತಿರುವುದು.



ಈ ಯುಗದ ಗಾಂಧಿ ಅಣ್ಣಾ ಹಜಾರೆಯವರನ್ನು ಬಸವಕಲ್ಯಾಣ ನಗರಕ್ಕೆ ಬರಮಾಡಿಕೊಳ್ಳಬೇಕೆಂದು ಉದ್ದೇಶಿಸಿ ಸುಧೀರ ಕಾಡಾದಿ ಅವರ ನೇತೖತ್ವದಲ್ಲಿ ನಿಯೋಗವನ್ನು ಕರೆದೊಯ್ದ ಸಂದಭ೯ದಲ್ಲಿ


ಹುಲಸೂರು ಕ್ಷೇತ್ರ ಪ್ರತ್ಯೇಕವಾದ ತಾಲೂಕನ್ನಾಗಿ ಮಾಡಬೇಕೆಂದು ಆಗ್ರಹಿಸಿ ಸುಧೀರ ಕಾಡಾದಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದಭ೯ದಲ್ಲಿ ಮನವಿ ಪತ್ರ ಸಲ್ಲಿಸುತ್ತಿರುವುದು


ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಶಿವರಾಜ ಪಾಟೀಲ ಅವರು ಮೊಟ್ಟ ಮೊದಲನೇ ಬಸವ ಅತ್ಸವಕ್ಕೆ ಬಂದಿರುವ ಸಂದಭ೯ದಲ್ಲಿ ಯುವ ನಾಯಕ ಸುಧೀರ ಕಾಡಾದಿ ಭೇಟಿಯಾಗಿರುವುದು.


ಸಚಿವ ಜಗದೀಶ ಶೆಟ್ಟರ್ ಅವರಿಗೆ ಭೇಟಿಯಾದ ಸಂದಭ೯ದಲ್ಲಿ ಸುಧೀರ ಕಾಡಾದಿ.


ಹುಲಸೂರು ಕ್ಷೇತ್ರ ಪ್ರತ್ಯೇಕವಾದ ತಾಲೂಕನ್ನಾಗಿ ಮಾಡಬೇಕೆಂದು ಆಗ್ರಹಿಸಿ ಸುಧೀರ ಕಾಡಾದಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದಭ೯ದಲ್ಲಿ ಮನವಿ ಪತ್ರ ಸಲ್ಲಿಸುತ್ತಿರುವುದು


ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಶಿವರಾಜ ಪಾಟೀಲ ಅವರು ಮೊಟ್ಟ ಮೊದಲನೇ ಬಸವ ಅತ್ಸವಕ್ಕೆ ಬಂದಿರುವ ಸಂದಭ೯ದಲ್ಲಿ ಯುವ ನಾಯಕ ಸುಧೀರ ಕಾಡಾದಿ ಭೇಟಿಯಾಗಿರುವುದು.


ಸಚಿವ ಜಗದೀಶ ಶೆಟ್ಟರ್ ಅವರಿಗೆ ಭೇಟಿಯಾದ ಸಂದಭ೯ದಲ್ಲಿ ಸುಧೀರ ಕಾಡಾದಿ.
----------------------------------------------------------------------------
---------------------------------------------------------------------------
ಬಸವಕಲ್ಯಾಣ ಮತಕ್ಷೇತ್ರಕ್ಕೆ ಯುವ ನಾಯಕರ ಅವಶ್ಯಕತೆ ಅದೇಷ್ಟುಃ ಆ ಸ್ಥಾನವನ್ನು ತುಂಬುವ ನಾಯಕತ್ವ ಯಾರಲ್ಲುಂಟು....?

ಬಸವಕಲ್ಯಾಣಃ ನಾವು ದುಡಿಯುವ ಕ್ಷೇತ್ರ ಯಾವುದೇ ಇರಲಿ. ಅದರಲ್ಲಿ ಶೖದ್ಧೆ, ನಿಷ್ಠೆಯಿಂದ ಕಾಯಕವನ್ನು ಮಾಡುವವರಿಗೆ ಈ ಸಮಾಜದ ಉತ್ತಮವಾದ ಸ್ಥಾನಮಾನ ಇದ್ದೇ ಇರುತ್ತದೆ. ಯಾವುದೇ ಕ್ಷೇತ್ರದಲ್ಲಿ ಸಾಮಥ್ಯ೯ವನ್ನು ಗುರುತಿಸಲು ಸೂಕ್ತವಾದ ಒಂದು ವೇದಿಕೆ ಬೇಕಾಗುತ್ತದೆ. ನಮಗೆ ನಾವೇ ಕೆಲವೊಂದು ಸಾರಿ ಮಾಗ೯ದಶ೯ಕರಾಗಿ ಬದುಕಿನ ದಾರಿಯನ್ನು ಕ್ರಮಿಸಬೇಕು ಕೂಡ. ಆ ಸಂದಭ೯ದಲ್ಲಿ ನಮ್ಮಿಂದ ಇನ್ಯಾರಿಗಾದರೂ ಉಪಕಾರವಾಗಿದೆ ಎನಿಸಿದರೆ ಅದು ಜೀವನ ಸಾಥ೯ಕವೆಂದಿನಿಸದೇ ಇರದು. ಅಂತಹ ಸಾಥ೯ಕತೆಯ ಬದುಕು ಅತ್ಯಂತ ಕಡಿಮೆ ಅವಧಿಯಲ್ಲಿ ಬಸವಕಲ್ಯಾಣ ತಾಲೂಕಿನ ಹುಲಸೂರು ಗ್ರಾಮದ ಯುವ ಮನಸ್ಸೊಂದು ಸದ್ದಿಲ್ಲದೇ ರಾಜಕೀಯ ಬದುಕಿನಲ್ಲಿ ಶ್ರಮಿಸುತ್ತಾ ಜೀವಿಸುತ್ತಿರವುದನ್ನು ಗಮನಿಸಿದರೆ ಅಚ್ಚರಿ ಮತ್ತು ಶ್ಲಾಘನೀಯ ಕಾಯ೯ ಎನಿಸದೇ ಇರಲಾರದು.


ನಮ್ಮ ನಿಮ್ಮೆಲ್ಲರ ಮಧ್ಯದಲ್ಲಿದ್ದುಕೊಂಡು ರಾಜಕೀಯ ಪಕ್ಷಗಳಲ್ಲಿ ಅಭೂತಪೂವ೯ ಸೇವೆಯನ್ನು ಮಾಡುತ್ತಲೇ ಇತರರ ಯಶಸ್ಸಿಗಾಗಿ ಶ್ರಮಿಸುತ್ತಿರುವ ಬಸವಕಲ್ಯಾಣ ತಾಲೂಕಿನ ರಾಜಕೀಯ ಯುವ ಮುಖಂಡ ಸುಧೀರ ಕಾಡಾದಿ. ಇವರನ್ನು ಜನ ಪ್ರೀತಿಯಿಂದ ಕರೆಯುವುದು (ಪಪ್ಪು ಕಾಡಾದಿ) ಎಂಬ ಹೆಸರಿನಲ್ಲಿ ಚಿರಪರಿಚಿತರಾಗಿದ್ದಾರೆ. ಸ್ಪುರದ್ರೂಪಿ, ಸುಶಿಕ್ಷಿತ, ಸುಂದರವಾಗಿ ಕಾಣುವ ಇವರು ನೋಡುವುದಕ್ಕೆ ಯಾವುದೋ ಸಿನಿಮಾ ನಟ ಇರಬಹುದೆಂದೆನಿಸಿದರೆ ತಪ್ಪೇನಿಲ್ಲ. ಆದರೆ ಇವರು ವಾಸ್ತವಿಕದಲ್ಲಿ ಸಿನಿಮಾ ನಟರಲ್ಲದಿದ್ದರೂ ರಾಜಕೀಯ ಜೀವನದಲ್ಲಿ ಉತ್ತಮ ನಾಯಕರಾಗುವ ಎಲ್ಲಾ ಗುಣ ಲಕ್ಷಣಗಳು ಇವರಲ್ಲಿ ಗೋಚರಿಸುತ್ತವೆ. ಇಂಥವರ ಅವಶ್ಯಕತೆ ಇಂದಿನ ಯುವಜನಾಂಗಕ್ಕೆ ಈ ಸಮಾಜಕ್ಕೆ ತೀರಾ ಅವಶ್ಯವಾಗಿ ಬೇಕಾಗಿರುವುದು ಕೂಡ ಅಷ್ಟೇ ಸತ್ಯ ಸಂಗತಿಯಾಗಿದೆ.

1996 ರಲ್ಲಿ ಪ್ರೌಡ ಶಿಕ್ಷಣವನ್ನು ಮುಗಿಸಿ ಕಾಲೇಜು ಮೆಟ್ಟಿಲೇರುವ ಹೊತ್ತಿಗೆ ರಾಜಕೀಯ ಪ್ರವೇಶವನ್ನು ಮಾಡಿ ಅನೇಕ ರಾಜಕೀಯ ಧುರೀಣರೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿರುವ ಇವರು 16 ವಷ೯ಗಳ ರಾಜಕೀಯ ಜೀವನದ ಏರುಪೇರುಗಳನ್ನು ಕಂಡುಂಡಿದ್ದಾರೆ. ಮೂಲತಃ ಬಸವಕಲ್ಯಾಣ ತಾಲೂಕಿನ ಹುಲಸೂರು ಕ್ಷೇತ್ರದವರಾದ ಸುಧೀರ ಕಾಡಾದಿ ಇವರಂಥಹ ಯುವ ಉತ್ಸಾಹಿಗಳು ಚುನಾವಣಾ ಕಣಕ್ಕಿಳಿದರೆ ನಿಜವಾದ ಅಭಿವೖದ್ಧಿಯ ಬದಲಾವಣೆಯ ಗಾಳಿ ಬೀಸಬಹುದು. ಸಾಮಾಜಿಕ ಪರಿವತ೯ನೆಯ ಕನಸು ಕಾಣಲು ಸಾಧ್ಯವಾಗುತ್ತದೆ.

ಹಳೆಯ ನೀರು ಕೊಚ್ಚಿಕೊಂಡು ಹೊಸ ನೀರಿನ ನಿರೀಕ್ಷೆಯಲ್ಲಿದ್ದವರಿಗೆ ಸುಧೀರ ಕಾಡಾದಿ ಅವರಂಥವರು ಸೂಕ್ತ ವ್ಯಕ್ತಿ ಎಂದರೆ ತಪ್ಪಾಗಲಾರದು. ಸಮಂಜಸವಾದ ವ್ಯಕ್ತಿತ್ವ ಹೊಂದಿರುವ ಇವರಿಗೆ ಯಾವುದೇ ಶಾಸಕರು, ಸಂಸದರಿಗಿಂತ ಅನುಭವಗಳೇನು ಕಡಿಮೆಯಿಲ್ಲ. ಪ್ರದಶಿ೯ಸಿಕೊಳ್ಳುವಂಥ ಸಂದಭ೯ಗಳು ಇವರಾಗಿ ತಂದುಕೊಂಡಿಲ್ಲ ಅಷ್ಟೆ. ಇತರರ ಉನ್ನತಿಯಲ್ಲೇ ನೆಮ್ಮದಿಯನ್ನು ಕಾಣುತ್ತಿರುವ ಇವರು, ರಾಜಕೀಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ. ಸುಧೀರ ಕಾಡಾದಿ ಅಭಿವೖದ್ಧಿಪರವಾಗಿ ಚಿಂತಿಸುವ ನಾಯಕರಾಗಿ ಬದಲಾವಣೆಯ ವಿಚಾರಗಳನ್ನು ಹೊಂದಿರುವ ಕಾಡಾದಿ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಸ್ಪಧಿ೯ಸಲು ಎಲ್ಲಾ ರೀತಿಯಲ್ಲಿ ಫಿಟ್ ಆಗಿದ್ದಾರೆ. ರಾಜಕೀಯಕ್ಕೆ ಬೇಕಾಗುವ ಎಲ್ಲಾ ಅಹ೯ತೆಗಳಿವೆ. ಯಾರಿಗೂ ನೋವನ್ನು ಕೊಡದೇ, ಇತರರ ಹಕ್ಕುಗಳನ್ನು ಕಸಿದುಕೊಳ್ಳದೇ ಜೀವಿಸಬೇಕು ಎಂಬ ತತ್ವಗಳನ್ನು ಪರಿಪಾಲಿಸುವ ಇವರು ತಮ್ಮ ಜೀವನದಲ್ಲಿ ಮಹಾತ್ಮರ ಜೀವನ ಸಾಧನೆಗಳನ್ನು ಅಳವಡಿಸಿಕೊಂಡಿದ್ದಾರೆ.

ಯಾವುದೇ ಜಾತಿ, ಧಮ೯ಗಳೆನ್ನದೇ ತತ್ವ ಸಿದ್ಧಾಂತದ ತಳಹದಿಯ ಮೇಲೆ ನಡೆಯುವಂಥ ಅಪರೂಪದ ವ್ಯಕ್ತಿತ್ವ ಹೊಂದಿದ್ದಾರೆ. ಮಠ, ಮಾನ್ಯ, ಧಮ೯ ಕಾಯ೯ಗಳಲ್ಲಿ ಸಮಾಜದ ಹಿತಕ್ಕಾಗಿ ಸದಾ ದುಡಿಯುವ, ತುಡಿಯುವ ಮನಸ್ಥಿತಿಯಲ್ಲಿ ಚುರುಕಾದ ನಿಟ್ಟಿನಲ್ಲಿ ಅಚ್ಚುಕಟ್ಟಾದ ಕಾಯ೯ಗಳು ನಿವ೯ಹಿಸುವುದೆಂದರೆ ಅಚ್ಚುಮೆಚ್ಚು. ಆ ಕಾರಣಕ್ಕಾಗಿ ಇವರ ಸಹಕಾರದಿಂದ ಇವತ್ತಿಗೂ ಅನೇಕರು ಶಾಸಕರಾಗಿ, ಸಂಸದರಾಗಿ, ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರುಗಳಾಗಿ ಹೋಗಿದ್ದಾರೆ. ಇವರು ಸಹ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಸದಸ್ಯರಾಗಿ ಜನಸಾಮಾನ್ಯರ ಕುಂದು ಕೊರತೆಗಳಿಗೆ ಸ್ಪಂಧಿಸಿದ್ದಾರೆ. ಈಗಲೂ ಸ್ಪಂಧಿಸುತ್ತಲೇ ಜನ ಕಲ್ಯಾಣ, ಲೋಕ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಕೂಡ ಸುಧೀರ ಕಾಡಾದಿಯವರ ಸಹಕಾರ, ಸಲಹೆಗಳ ಮೇರೆಗೆ ಅನೇಕರು ಉತ್ತಮವಾದ ಆಡಳಿತವನ್ನು ನಡೆಸುತಿದ್ದಾರೆ. ಬಿಜೆಪಿ ರಾಜಕೀಯ ಪಕ್ಷದ ಕಾಯ೯ಕತ೯ರೊಂದಿಗೆ ಸಮಾಲೋಚಿಸಿ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳುತಿದ್ದಾರೆ. ಅವರ ವಿಶಾಲ ಮನೆಭಾವನೆಯ ಪ್ರತೀಕವಾಗಿ ಅಧಿಕಾರದ ಗದ್ದುಗೆಯನ್ನು ಏರಿ ಅದೇಷ್ಟೋ ರಾಜಕೀಯ ನಾಯಕರು ಚಾಕಚಕ್ಯತೆಯಿಂದ ಆಡಳಿತವನ್ನು ನಡೆಸುತ್ತಿದ್ದಾರೆ. ಕಾಡಾದಿಯವರಂಥ ಯುವನಾಯಕರ ಬೆಂಬಲದಿಂದಾಗಿ ವಿರೋಧ ಪಕ್ಷದವರಿಂದ ಟೀಕೆಗಳನ್ನು ಬರದಂತೆ ಮಾಗ೯ದಶ೯ನವನ್ನು ಮಾಡುತಿದ್ದಾರೆ ಎಂದರೆ ತಪ್ಪಾಗಲಾರದು. ಇಷ್ಟೆಲ್ಲಾ ಇದ್ದು ಇಂತಹ ಸವ೯ತೋಮುಖ ಬೆಳವಣಿಗೆಗಳ ಚಿಂತನೆಗಳನ್ನು ಹೊಂದಿರುವ ಇವರಿಗೆ ವಿಧಾನಸಭಾ ಚುನಾವಣೆಗಳಲ್ಲಿ ಯಾಕೆ ಯಾವುದೇ ಪಕ್ಷದವರು ಟಿಕೇಟ್ ಕೊಟ್ಟು ಪ್ರೋತ್ಸಾಹಿಸಬಾರದು ಎಂಬ ಮಾತು ಸಹಜವಾಗಿ ಕೇಳ ಬರುತ್ತದೆ. ಇವರೇಕೆ ವಿಧಾನ ಸಭಾ ಚುನಾವಣೆಗೆ ನಿಲ್ಲಬಾರದು...? ಎಂಬ ಪ್ರಶ್ನೆ ಸಹಜವಾಗಿ ಯುವ ಜನಾಂಗ ವಗ೯ಗಳಲ್ಲಿ ಅವರ ಅಭಿಮಾನಿಯಾಗಿರುವವರಲ್ಲಿ ಭುಗಿಲೇಳುವ ಪ್ರಶ್ನೆ. ಕೆಲವರಿಗೆ ಇವರ ವ್ಯಕ್ತಿತ್ವ ಮಾದರಿಯಾಗಿ ನಿಲ್ಲುವಂಥವರಾಗಿದ್ದಾಗಿದ್ದು ಇವರನ್ನು ನಾವೆಲ್ಲಾ ಕೂಡಿ ಬೆಂಬಲಿಸುವಂತಾಗಬೇಕು.

ಇಂತಹ ಯುವಶಕ್ತಿಗಳ ಸಾಮಥ್ಯ೯ವನ್ನು ಸಮಾಜಕ್ಕೆ ತೀರಾ ಅವಶ್ಯವಾಗಿ ಬೇಕಾಗಿದೆ ಎಂಬ ಕೂಗುಗಳು ಪ್ರೋತ್ಸಾಹಿಸುವ ವಗ೯ವೇ ಒಂದೆಡೆ ಸಿದ್ಧವಾಗಿ ನಿಂತಿದೆ. ಈ ಹಿಂದೆ ಎಲ್ಲಾ ರಾಜಕೀಯ ನಾಯಕರನ್ನು ನೋಡಿದ್ದಾರೆ. ಕೆಲವರ ಆಡಳಿತ ಚುಕ್ಕಾಣಿಯ ಹಿಡಿತ ಕೈ ತಪ್ಪಿ ಹೋಗಿರುವುದನ್ನು ಜನ ಬೇಸರಿಸಿಕೊಂಡಿದ್ದಾರೆ. ನ್ಯಾಯಪರವಾಗಿ ಕೆಲಸ ಮಾಡದವರ ವಿರುದ್ಧ ಆಕ್ರೋಷಿಸಿದ ಜನರು ಇನ್ಯಾರದೋ ದಪ೯, ದಬ್ಬಾಳಿಕೆ, ಗಾಳಿಯಲ್ಲಿ ಗುಂಡು ಹಾರಿಸುವುದು, ಜನರನ್ನು ಹೆದರಿಸಿ ಬೆದರಿಸಿ ಓಟು ಪಡೆದುಕೊಳ್ಳುವವರನ್ನು ನೋಡಿದ್ದಾರೆ. ಅಂತಹ ರಾಜಕೀಯ ನಾಯಕರುಗಳಿಗಿಂತ ಹೊಸ ಮುಖಗಳನ್ನು ಚುನಾವಣಾ ಸ್ಪಧಿ೯ಗಳನ್ನಾಗಿ ನೋಡುವುದಕ್ಕೆ ಅನೇಕರು ಕಾತುರರಾಗಿದ್ದಾರೆ. ಹೊಸಬರ ಆಗಮನಕ್ಕಾಗಿ ಎದುರು ನೋಡುತಿದ್ದಾರೆ. ಕಾಡಾದಿಯವರಂಥ ನಾಯಕರಿಗೆ ಕನಸುಗಳೇನಿವೆ..? ಅವರಲ್ಲಿ ತಾಲೂಕಾ ಅಭಿವೖದ್ಧಿಗಾಗಿ ಚಿಂತಿಸುವಂಥ ಎಲ್ಲಾ ಅಹ೯ತೆಗಳನ್ನು ಪರೀಕ್ಷಗೊಳಪಡಿಸದೇ ಅವರನೊಮ್ಮೆ ಅವಕಾಶ ಕೊಟ್ಟು ನೋಡಬೇಕೆನ್ನುವ ಅನೇಕರು ಬೆಂಬಲಕ್ಕೆ ನಿಂತಿದ್ದಾರೆ. ಈ ಹಿಂದಿನ ರಾಜಕೀಯ ನಾಯಕರುಗಳಿಗಿಂತ ಸುಧೀರ ಕಾಡಾದಿಯವರು ಹಲವರಿಗೆ ಸೂಕ್ತವಾದ ಅಭ್ಯಥಿ೯ಯಾಗಿದ್ದಾರೆನಿಸುತ್ತದೆ. ಉತ್ತಮ ವಿಚಾರಗಳು, ಚಾಚು ತಪ್ಪದ ಆಡಳಿತದ ಕನಸುಗಳನ್ನು ಕಾಣುವ ಮನೋಭಾವ ಇವರು ಹೊಂದಿರುವಾಗ ಯಾಕೆ ಅವರನ್ನೊಮ್ಮೆ ಅವಕಾಶ ಕೊಟ್ಟು ನೋಡುವುದಿಲ್ಲ ಎಂಬ ಪ್ರಶ್ನೆಗಳು ಸಹಜವಾಗಿ ಕೇಳಿ ಬರುತ್ತಿವೆ.

ಎಲ್ಲಾ ಪಕ್ಷದವರನ್ನು ಎಲ್ಲರನ್ನು ನೋಡಿರುವ ತಾಲೂಕಿನ ಮತದಾರರು ಈ ಯುವ ಮನಸ್ಸುಗಳತ್ತ ಒಂದಿಷ್ಟು ಚಿತ್ತ ಹರಿಸಿದರೆ ನಿಜಕ್ಕೂ ಬಸವಕಲ್ಯಾಣ ತಾಲೂಕಿನಲ್ಲಿ ಬದಲಾವಣೆಯ ಗಾಳಿ ಬೀಸುತ್ತದೆ. ಹಳೇ ಬೇರುಗಳು, ಹೊಸ ಚಿಗುರುಗಳಿಗೆ ಬೆಂಬಲಿಸಬೇಕಾದ ಅನಿವಾಯ೯ತೆ ಈ ಕಾಲಕ್ಕೆ ಬೇಕಾಗಿದೆ. ಬರೀ ಅಧಿಕಾರದ ಗದ್ದುಗೆಯನ್ನೇರಿ ಇರಬೇಕೆಂಬ ಹಪಾಹಪಿತನ ಬಿಟ್ಟು, ಕೆಟ್ಟ ಆಲೋಚನೆಗಳನ್ನು ದೂರ ಸರಿಸಬೇಕಾಗಿದೆ. ಹೊಸಬರನ್ನು ಉತ್ತೇಜಿಸಬೇಕಾಗಿದೆ. ಮುಂಬರುವ ರಾಜಕೀಯ ಚುನಾವಣೆಗಳಲ್ಲಿ ನೂತನ ನಾಯಕರುಗಳನ್ನು ಸಮಾಜಕ್ಕೆ ಪರಿಚಯಿಸುವುದರ ಜೊತೆಗೆ ಇವರ ಸೇವೆ ಅನನ್ಯವಾದ ಕೊಡುಗೆಯನ್ನಾಗಿ ಪಡೆಯಬೇಕಾಗಿದೆ. ಹೊಸ ಹೊಸ ರಾಜಕೀಯ ನಾಯಕರುಗಳು ಬಸವಕಲ್ಯಾಣ ತಾಲೂಕಿನ ಜನತೆಗೆ ಅಷ್ಟೇ ಅವಶ್ಯವಾಗಿ ಬೇಕಾಗಿದ್ದಾರೆ.

ಸುಧೀರ ಕಾಡಾದಿ ಅವರಂಥವರನ್ನು ಶಾಸಕರನ್ನಾಗಿಯೋ, ಸಂಸದರನ್ನಾಗಿಯೋ ಕಾಣಬೇಕಾದ ನಾವು ಅವರನ್ನು ಮೂಲೆಗುಂಪಾಗಿ ಮಾಡದೇ ಬದಲಾವಣೆಯನ್ನು ಬಯಸುವಂಥವರಾಗಬೇಕು. ಉತ್ತಮವಾದವರನ್ನು ಬೆಂಬಲಿಸುವುದೇ ನಿಜವಾದ ಆಯ್ಕೆಯಾಗುತ್ತದೆ ಎಂದು ಜನಸಾಮಾನ್ಯರ ಅಭಿಪ್ರಾಯ ಇಲ್ಲಿ ಸ್ಪಸ್ಪಷ್ಟವಾಗಿ ಕೇಳಿ ಬರುತ್ತಿವೆ. ಈ ಹಿಂದೆ ಕ್ಷೇತ್ರವಾರು ವಿಧಾನಸಭೆ ಚುನಾವಣೆಗಳು ನಡೆಯುತ್ತಿರುವುದರಿಂದ ಸುಧೀರ ಕಾಡಾದಿ ಅವರು ಹುಲಸೂರು ಕ್ಷೇತ್ರದವರಾಗಿದ್ದ ಕಾರಣ ಅವರು ಬಸವಕಲ್ಯಾಣ ತಾಲೂಕಿಗೆ ಬರಬೇಕಾದ ಪ್ರಸಂಗ ಬಂದಿರಲಿಲ್ಲ. ಇದೀಗ ಬಸವಕಲ್ಯಾಣ ತಾಲೂಕಿನಲ್ಲಿಯೇ ಹುಲಸೂರು ಮತದಾರರು ಮತದಾನ ನಡೆಸಲಿದ್ದು, ಇದರಿಂದ ವಿಧಾನಸಭಾ ಚುನಾವಣಾ ಕ್ಷೇತ್ರವಾಗಿ ಬಸವಕಲ್ಯಾಣ ಒಂದೇ ಆಗಿರುತ್ತದೆ. ಇದರಿಂದಾಗಿ ಸುಧೀರ ಕಾಡಾದಿ ಅಂತಹ ಯುವ ನಾಯಕನ ಬೇಡಿಕೆ ನಾವೆಲ್ಲಾ ಬಯಸುವಂತಾಗಬೇಕು. ತಮ್ಮದೇ ನೇತ್ರತ್ವದಲ್ಲಿ ಅನೇಕರನ್ನು ಬೆಂಬಲಿಸಿ ಚುನಾವಣೆಗಳಲ್ಲಿ ವಿಜಯಿಶಾಲಿಯಾಗುವಂತೆ ಪಣತೊಟ್ಟು ಶ್ರಮಿಸಿದ ಇವರಿಗೆ ಶುಭ ಹಾರೈಸಬೇಕಾಗಿದೆ.

ಬಸವಕಲ್ಯಾಣ ತಾಲೂಕಿನಲ್ಲಿ ಪ್ರಬಲ ಕಾಂಗ್ರೇಸ್ ನಾಯಕರಿಲ್ಲದ ಕೊರಗನ್ನು ನೀಗಿಸುವ ನಿಟ್ಟಿನಲ್ಲಿ ಬೀದರ ಜಿಲ್ಲೆಯ ರಾಜಕೀಯ ಹಲವು ಗಣ್ಯರ ಕಣ್ಣು ಬಸವಕಲ್ಯಾಣ ತಾಲೂಕಿನ ನೆಲದ ಮೇಲೆ ಬಿದ್ದಂತಿದೆ. ಮುಂದಿನ ದಿನಗಳಲ್ಲಿ ಬಸವಕಲ್ಯಾಣ ಉಸ್ತುವಾರಿ(ಜವಾಬ್ದಾರಿ) ನನ್ನದೆಂದು ಹೇಳಿವ ಬಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರು ಬಹಿರಂಗವಾಗಿ ಕಾಯ೯ಕ್ರಮಗಳಲ್ಲಿ ಹೇಳಿಕೊಂಡಿರುತ್ತಾರೆ. ಅವರ ಬೆಂಬಲಿಗರಾದ ಆನಂದ ದೇವಪ್ಪ ಅವರನ್ನು ಸಹ ಕಣಕ್ಕಿಳಿಸುವ ಹುನ್ನಾರದಲ್ಲಿದ್ದಂತೆ ಕಂಡು ಬರುತ್ತದೆ. ಇದೇ ರೀತಿಯಾಗಿ ಮಾಜಿ ಶಾಸಕರೊಬ್ಬರಿಗೆ ಪಕ್ಷದ ಟಿಕೇಟ್ ಕಟ್ ಆಗುವ ಸೂಚನೆಯನ್ನು ಕಾಣುತಿದ್ದು, ಅವರ ಸ್ಥಾನದಲ್ಲಿ ಮಾಜಿ ಶಾಸಕ ಎಂ.ಜಿ.ಮೂಳೆ ಹಾಗೂ ಉದ್ಯಮಿ ಅನೀಲ ಭೂಸಾರೆ ಹಳೇ ಪಕ್ಷದ ಹೊಸ ಟಿಕೇಟ್ ಆಕಾಂಕ್ಷಿಗಳಾಗಿರುವುದು ಇತ್ತೀಚಿನ ಬೆಳವಣಿಗೆಗಳ ಮೂಲಕ ಕಂಡು ಬರುತ್ತಿದೆ.

ಈ ರೀತಿ ನಡೆಯುತ್ತಿರುವ ಬಸವಕಲ್ಯಾಣ ತಾಲೂಕಿನ ರಾಜಕೀಯ ಗಾಳಿ ಪ್ರತಿಯೊಬ್ಬರನ್ನು ಬಿಸಿ ತಟ್ಟುವಂತೆ ವಾತಾವರಣ ಸೖಷ್ಟಿಯಾಗುತ್ತಿದೆ. ಜನಸಾಮಾನ್ಯರ ಒಳಗಿನ ಚಚೆ೯ಗಳಂತೆ ಮುಂದಿನ ಶಾಸಕರಾಗಿ ಖೂಬಾ, ಅಟ್ಟೂರ್, ಎಂ.ಜಿ.ಮೂಳೆ, ಆನಂದ ದೇವಪ್ಪ, ಅನೀಲ ಭೂಸಾರೆ ಇವರಲ್ಲಿ ಯಾರಾಗಬಹುದೆಂಬ ಚಚೆ೯ಗೆ ಗ್ರಾಸವಾಗಿ ರಾಜಕೀಯ ವಲಯದಲ್ಲಿ ಕೈ ಕೈ ಹಿಸುಕಿಕೊಳ್ಳುವಂತಾಗಿರುವುದು ಸಹಜ. ಇಂತಹ ಊಹಾಪೂಹಗಳ ಮಧ್ಯೆ ಹೊಸ ಮುಖಗಳತ್ತ ಚಿತ್ತ ಹರಿಸುತ್ತಿರುವ ಮತದಾರ ಬಂಧುಗಳು ಸುಧೀರ ಕಾಡಾದಿ ಅವರು ಯಾವುದರಲ್ಲಿಯೂ ಕಡಿಮೆಯಿಲ್ಲ ಎನ್ನುತ್ತಿದ್ದಾರೆ. ಜನರ ನೋವು, ಕಷ್ಟಗಳಿಗೆ ಸ್ಪಂಧಿಸುವಂಥ ಮನೋಭಾವ, ಕಷ್ಟ-ಸುಖಗಳಿಗೆ ಸದಾ ಬೆನ್ನೆಲುಬಾಗಿ, ನ್ಯಾಯಪರವಾಗಿ ಚಿಂತಿಸುವ ಮನೋಭಾವ ಕಾಡಾದಿಯವರಾಗಿದ್ದಾರೆ. ಇಂತಹ ಯುವನಾಯಕರನ್ನು ಗೆಲ್ಲಿಸಬೇಕು. ಮುಂಬರುವ ಭಾವಿ ಶಾಸಕರನ್ನಾಗಿ ಇವರನ್ನೇ ಪ್ರತಿಬಿಂಬಿಸಬೇಕು ಎಂಬ ಛಲವನ್ನು ತೊಟ್ಟ ವಗ೯ವೇ ಒಂದೆಡೆ ಸಿದ್ಧವಾಗಿದೆ.

ಮಾಡಿದರೆ ಇವರನ್ನೇ ಶಾಸಕರನ್ನಾಗಿ ಬಸವಕಲ್ಯಾಣ ಕ್ಷೇತ್ರಕ್ಕೆ ತರಬೇಕು ಎಂಬುದು ಅನೇಕರಲ್ಲಿ ಮನೆ ಮಾಡಿಕೊಂಡಿದೆ. ಅಂತೂ ಹಳೇ ಹುಲಿಗಳು ಗವಿ ಸೇರಿಕೊಂಡು ವಿಶ್ರಾಂತಿ ಪಡೆಯಲೆಂಬುದು ಅನೇಕರ ಅಪೇಕ್ಷೆ ಕೂಡ ಆಗಿದೆ. ಹಳಬರು ಹೊಸಬರನ್ನು ಬೆಂಬಲಿಸುವುದರ ಮೂಲಕ ತಮ್ಮ ಮಾನ ಮಯಾ೯ದೆ ಉಳಿಸಿಕೊಳ್ಳಬೇಕೆಂಬ ಕೂಗುಗಳು ಜೋರಾಗಿಯೇ ಕೇಳಿ ಬರುತ್ತಿವೆ. ಇಲ್ಲಿ ನಡೆಯುವ ಕಾಂಗ್ರೇಸ್ ಪಕ್ಷದ ವತಿಯಿಂದ ಯಾವುದೇ ಕಾಯ೯ಕ್ರಮಗಳನ್ನು ಯಾವ ರೀತಿ ಹೇಗೆ ನಡೆಯಬೇಕೆಂಬುದು ಚಾಕ್ಔಟ್ ಮಾಡುತ್ತೇನೆ ಎಂಬ ಹೇಳಿಕೆಗಳು ರಾಜಾರೋಷವಾಗಿ ಕೇಳಿ ಬರುತ್ತಿವೆ. ಈ ರೀತಿಯ ಹೇಳಿಕೆಗಳು ಬೀದರ, ಭಾಲ್ಕಿ, ಹುಮನಾಬಾದ ಕ್ಷೇತ್ರಗಳ ರಾಜಕೀಯ ಧುರೀಣರು ಆವಾಗಾವಾಗ ಭುಸುಗುಡುವ ಹಾವಿನಂತೆ ಹೆಡೆಯೆತ್ತಿ ಮತದಾರ ಬಾಂಧವರನ್ನು ನಮಸ್ಕರಿಸುವುದರ ಮೂಲಕ ತಮ್ಮ ವರಸೆಯನ್ನು ಪ್ರದಶಿ೯ಸುತಿದ್ದಾರೆ.

ಬಸವಕಲ್ಯಾಣದಲ್ಲಿರುವ ಅನೇಕ ಪಕ್ಷದ ನಾಯಕರು ಸಹ ಚುನಾವಣೆಗೆ ನಿಲ್ಲಬೇಕೆಂಬ ಅಪೇಕ್ಷೆ ಹೊಂದಿದ್ದಾರೆ. ಯಾರಿಗೀ ಸಹಕಾರಿಯಾಗದೇ, ಯಾರದೇ ನೋವು, ಕಷ್ಟ, ಸಮಸ್ಯೆಗಳಿಗೆ ಸ್ಪಂಧಿಸದೇ ಇರುವವರು ದಿನದ ಇಪ್ಪತ್ನಾಲ್ಕು ಗಂಟೆ ತಮ್ಮ ಸ್ವಾಥ೯ಪರತೆಗಾಗಿ ಇರುವವರೆಲ್ಲಾ ವಿಧಾನ ಸಭೆ ಚಾನಾವಣೆಯಲ್ಲಿ ಸ್ಪಧಿ೯ಸಬೇಕೆಂಬ ಹಂಬಲದವರೇ ಆಗಿದ್ದಾರೆ. ಕೆಲವರು ಬಿಡುವ ರೈಲು, ರಿಯಲ್ ಲೈಫ್ ನಲ್ಲಿ ರೀಲಾಗಿದೆ ಎನ್ನುವಷ್ಟು ತಿಳಿದುಕೊಳ್ಳದ ಜನ ಇಲ್ಲಿದ್ದಾರೆಂಬ ಆಲೋಚನೆಯಿಂದ ಬೊಗಳೆ ಬಿಡುತಿದ್ದಾರೆಂಬುದು ಕೂಡ ಕುರುಜನು ಜಾಣನಾಗಿದ್ದಾನೆಂಬುದು ಬೊಗಳೆ ಬಿಡುವ ರಾಜಕೀಯ ನಾಯಕರು ಅರಿತುಕೊಳ್ಳಬೇಕು. ಚಾನಾವಣೆಗಳಲ್ಲಿ ಯಾರೇ ಸ್ಪಧಿ೯ಸುವಂತಾಗಲು ಜನಮನದಲ್ಲಿ ಸದಾ ನೆಲೆಸಿರುವಂಥವರಾಗಬೇಕು. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂಧಿಸುವಂತವರಾಗಬೇಕೆಂಬ ಚಚೆ೯ಗಳು ಸಹ ಹೋಟೆಲ್, ಅಂಗಡಿ, ಸೇರಿದಂತೆ ತಾಲೂಕಿನ ಸುತ್ತಲಿರುವ ಗ್ರಾಮಗಳಲ್ಲಿ, ಗುಂಪುಕಟ್ಟಿ ಚಚಿ೯ಸುವ ಜನರಲ್ಲಿ ವಿಸ್ಮಯಕಾರಿ ಊಹಾಪೂಹಗಳು ನಡೆಯುತಿವೆ.

ಇಂತಹ ಚಚಾ೯ಸ್ಪದ ಮಾತುಗಳು ಕೇಳಿ ಬರುತಿರುವುದು ಸಹಜವೆನ್ನುವಂತಿದ್ದರೂ ಕಾಂಗ್ರೇಸ್ ಪಕ್ಷದ ತಾಲೂಕಾ ಮಾಜಿ ಅಧ್ಯಕ್ಷರುಗಳಲ್ಲಿ ಸಹ ಯಾವುದೇ ಪಕ್ಷದಿಂದಾದರೂ ಸರಿ, ಟಿಕೇಟ್ ಸಿಗದಿದ್ದರೆ ಸ್ವತಂತ್ರವಾಗಿ ಆದರೂ ಸ್ಪಧಿ೯ಸಬೇಕೆಂಬ ಮೊಂಡುತನ ತೋರಿಸಿದರೆ ಅಚ್ಚರಿಯೇನಿಲ್ಲ. ಅಂಥವರ ಹಣೆಬರವೇ ಸರಿಯಿಲ್ಲ. ಅದಕ್ಕೆ ಚುನಾವಣೆಗೆ ನಿಲ್ಲುವ ಕನಸು ಕಾಣುತಿದ್ದಾರೆ ಇಲ್ಲಿದ್ದಾರೆ. ಅಂತಹ ಯಾವುದೇ ಮಾತಿಗೂ ಕಿವಿಗೊಡದೇ ತಮ್ಮಲ್ಲಿರುವ ಆತ್ಮವಿಶ್ವಾಸ, ಬಲ, ದೖಡಸಂಕಲ್ಪ ಒಂದಿದ್ದರೆ ಯುವ ನಾಯಕರಾಗಿ ಈಗಾಗಲೇ ಜನಮನದಲ್ಲಿ ಗುರುತಿಸಿಕೊಂಡಿರುವ ಸುಧೀರ ಕಾಡಾದಿ ಅಂಥವರಿಗೆ ಚುನಾವಣೆಯಲ್ಲಿ ಸುಲಭ ಜಯ ಸಾಧಿಸಲು ಒಂದಿಷ್ಟು ಕಸರತ್ತು ನಡೆಸಬೇಕಾಗುತ್ತದೆ. ಅನೇಕ ರಾಜಕೀಯ ಧುರೀಣರು ಭ್ರಷ್ಟಾಚಾರದಲ್ಲೇ ಕಾಲ ಕಳೆಯುತಿದ್ದಾರೆಂಬ ಆರೋಪಕ್ಕೆ ತದ್ವಿರುದ್ಧವಾಗಿ ವಿಶಿಷ್ಟವಾಗಿ ಕಂಡು ಬರುವ ಕಾಡಾದಿಯವರು ಹಿಂದಕ್ಕೆ ಸರಿಯಬಾರದೆಂಬುದು ಸಹ ಅನೇಕರ ಹಂಬಲವಾಗಿದೆ. ಅವರ ಪಕ್ಷದ ಕಾಯ೯ಕತ೯ರಲ್ಲೂ, ಅಭಿಮಾನಿಗಳಲ್ಲೂ ಕಾಡಾದಿಯವರಲ್ಲಿ ಅದೇನೋ ಆಶಯವನ್ನು ಇಟ್ಟುಕೊಂಡಂತಿದೆ. ತಾಲೂಕಿನಲ್ಲಿ ಬಹುತೇಕರು ನಾಯಕತ್ವ ಪಡೆಯಬೇಕೆಂಬ ಮುಸುಕಿನ ಗುದ್ದಾಟ ನಡೆಸಿದ್ದಾರೆ. ಇಂತಹ ಘಷ೯ಣೆಗಳ ಮಧ್ಯೆ ಕೆಲವರಿಗೆ ಯಾರೂ ಕೇಳದಂತಾಗುವುದಂತೂ ಖಚಿತ. ಮತದಾರ ಬಂಧು ಯಾರತ್ತ ಒಲಿಯುವನೋ ಎಂಬುದು ರಹಸ್ಯವಾಗಿಯೇ ಉಳಿದು ಬಿಡುತ್ತದೆ. ಆದರೆ ಹೊಸಬರ ಆಶಯಗಳನ್ನು ಕಾಯ೯ರೂಪಕ್ಕೆ ತರಲು ಖಂಡಿತ ಬೆಂಬಲಿಸುವ ಜನವಗ೯ವೇ ಒಂದೆಡೆ ಇದ್ದೇ ಇದೆ.

ಸ್ಥಳೀಯ ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ ಹಾಗೂ ಹಾಲಿ ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಅವರು ಜನರಲ್ಲಿ ವಿಶ್ವಾಸವನ್ನು ಮೂಡಿಸುವಂಥ ಪ್ರಯತ್ನ ತೀವ್ರವಾಗಿ ಮಾಡಬೇಕಾಗುತ್ತದೆ. ಅಂತಹ ಒಂದು ಪ್ರಯತ್ನ ಮಾಡಿದ್ದಾಗಲೂ ಉತ್ತಮ ನಡತೆ, ಸದ್ಗುಣಗಳಿಂದ ಕೂಡಿರುವವರನ್ನು, ಯಾರದೇ ತಂಟೆ ತಕರಾರೆನ್ನದೇ ಸಾಮಾಜಿಕ ಬದಲಾವಣೆ, ಅಭಿವೖದ್ಧಿ ಪರ ಚಿಂತನೆ ನಡೆಸುವವರನ್ನು, ಭ್ರಷ್ಟಾಚಾರ ಮುಕ್ತ ಇಲಾಖೆಗಳ ಕೆಲಸ ಕಾಯ೯ಗಳು ನಡೆಸುವಂಥ ಸರಿಯಾದ ಆಡಳತವನ್ನು ನಡೆಸುವವರ ತಲಾಶದಲ್ಲಿ ಜನರಿದ್ದಾರೆ. ಯಾರೂ ಇವತ್ತಿನ ದಿನಮಾನಗಳಲ್ಲಿ ಮುಗ್ಧರಲ್ಲ. ಹೆದರಿಸಿ, ಬೆದರಿಸಿ ಓಟುಗಳನ್ನು ಪಡೆಯುವವನ ರಾಜಕೀಯ ಜೀವನ ಕ್ಷಣಿಕವಾಗಿ ಬಿಡುತ್ತದೆಂಬ ಮಾತುಗಳು ಕೇಳಿ ಬರುತ್ತಿವೆ. ಆದ್ದರಿಂದ ಜನಭಿಪ್ರಾಯದಂತೆ ಯುವ ನಾಯಕರು ನಿಸಂಧೇಹನ್ನು ಪಡದೇ ಮುನ್ನುಗ್ಗಿ ರಾಜಕೀಯ ಕ್ಷೇತ್ರದ ಚುನಾವಣಾ ಕಣಕ್ಕಿಳಿದು ಬರಬೇಕು. ಅವರಿಗೆ ರಾಜಕೀಯ ಅನುಭವ ಇರಬೇಕು. ಸಂಪಕ೯ ಸರಿಯಾಗಿರಬೇಕು ಎನ್ನುವವರು ಸುಧೀರ ಕಾಡಾದಿ ಅವರಂಥವರೊಂದಿಗೆ ಕೈ ಜೋಡಿಸುವುದು ಕೂಡ ಅನಿವಾಯ೯ವಾಗಿ ಬಿಡುತ್ತದೆ. ಹಲವರ ಸಂಪಕ೯, ಹಾಗೂ ಸಂಖ್ಯಾ ಬಲವನ್ನು ಹೊಂದಿರುವ ಕಾಡಾದಿ ಮನಸ್ಸು ಮಾಡಿದರೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬರಬಹುದು ಮತ್ತು ಇಲ್ಲವೇ ಯಾರನ್ನಾದರೂ ಸಪೋಟ್೯ ಮಾಡಲು ನಿಂತರೆ ಇವರ ಸಹಕಾರದೊಂದಿಗೆ ರಾಜಕೀಯ ಜೀವನದಲ್ಲಿ ಯಾವಾಗ ಏನು ಬೇಕಾದರೂ ನಡೆಯಬಹುದೆಂಬ ಮಾತುಗಳು ನಿಖರವಾಗಿ ಕೇಳಿ ಬರುತ್ತವೆ. ಬಂದು ಹೋದವರೇ ಮತ್ತೆ ಬಂದು ರಾಜಕೀಯ ಜೀವನದಲ್ಲಿ ಮತ್ತೆ ಉನ್ನತಿಯನ್ನು ಪಡೆದರೆ ಅಚ್ಚರಿ ಪಡಬೇಕಾಗಿಲ್ಲ. ಇದಕ್ಕೆಲ್ಲ ಮೂಲ ಸೂತ್ರಧಾರರಾಗಿ ಸುಧೀರ ಕಾಡಾದಿ ಅವರಂಥವರು ಪ್ರಬಲ ವ್ಯಕ್ತಿಗಳಾಗಿ ಕಟ್ಟಡಕ್ಕೆ ನಾಲ್ಕು ಪಿಲ್ಲರ್ ಗಳು ಹೇಗೆ ಅವಶ್ಯವೋ ಹಾಗೇ ಇವರ ಅವಶ್ಯಕತೆ ತೀರಾ ಅನಿವಾಯ೯ವಾಗಿದೆ. ಒಂದು ವೇಳೆ ಕಾಡಾದಿ ಅಂಥವರನ್ನೇ ತಾಲೂಕಿನ ಶಾಸಕರನ್ನಾಗಿ ಮಾಡಿದರೆ ಉತ್ತಮವೆಂದು ಭಾವಿಸುವ ಅವರ ಹಿತ ಚಿಂತಕರು ಇಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಅನೇಕರಿದ್ದಾರೆ.

ಇತ್ತೀಚಿಗೆ ಕನಾ೯ಟಕ ಕ್ಷತ್ರಿಯ ಮರಾಠಾ ಪರಿಷತ್ತಿನ ಗೌನಿ೯ಂಗ್ ಕೌನ್ಸಿಲ್ ಅಧ್ಯಕ್ಷರಾಗಿ ಮಾಜಿ ಶಾಸಕ ಎಂ.ಜಿ.ಮುಳೆಯವರು ನೇಮಕಗೊಂಡಿದ್ದಾರೆ. ಕನಾ೯ಟಕ ರಾಜ್ಯದಲ್ಲಿ 60 ಲಕ್ಷ ಮರಾಠಾ ಮತದಾರರಿದ್ದು ಬೀದರ ಜಿಲ್ಲೆಯಲ್ಲಿ ಮೂರು ಲಕ್ಷ ಮರಾಠಾ ಜನರಿದ್ದಾರೆ. ಮುಳೆಯವರ ನೇಮಕದಿಂದ ಬೀದರ ಜಿಲ್ಲೆ ಅಷ್ಟೇ ಅಲ್ಲದೆ, ಕನಾ೯ಟಕದ ಮರಾಠಾ ಜನರನ್ನು ಒಗ್ಗೂಡಿಸುವ ಕಾಯ೯ ಮುಳೆಯವರು ಮಾಡಲಿದ್ದಾರೆ ಎಂದು ಮೂಳೆ ಅವರ ಕಾಯ೯ಕತ೯ರಲ್ಲಿ ಮತ್ತು ಬೆಂಬಲಿಗರಲ್ಲಿ ಇರುವುದರಿಂದ ಆ ಒಂದು ವಿಶ್ವಾಸ ಮತದಿಂದ ಇವರು ಸಹ ಚುನಾವಣೆಗೆ ಯಾವ ಕ್ಷೇತ್ರದಿಂದ ಚುನಾವಣಾ ಕಳಕಿಳಿಯುವರು ಎಂಬ ಕುತೂಹಲದ ಸಂಗತಿಯಾಗಿದೆ. ಈಶ್ವರ ಖಂಡ್ರೆ ಅವರು ಬಸವಕಲ್ಯಾಣ ಕ್ಷೇತ್ರಕ್ಕೆ ಯುವ ಮುಖಂಡ ಆನಂದ ದೇವಪ್ಪ ಅಂಥವರನ್ನು ತರುತ್ತಾರೆಂಬ ಮಾತುಗಳು ಇಲ್ಲಿ ಕೇಳಿ ಬರುವಂತಾಗಿದೆ. ಇದರಿಂದ ಪ್ರತಿಯೊಬ್ಬರ ಮತಬ್ಯಾಂಕ್ ಗಳಿಗೆ ಗ್ರಹಣ ಹಿಡಿಯುವುದಂತೂ ಖಚಿತ ಎನ್ನುತ್ತಿರುವ ಜನರಲ್ಲಿ ಕೂಡ ಮುಂದೇನಾಗಬಹುದೆಂಬ ನಿರೀಕ್ಷೆ ಗೊಂದಲದ ಗೂಡಾಗಿದೆ. ಇದಲ್ಲದೇ ಅನೀಲ ಭೂಸಾರೆ ಇಲ್ಲ ಎಂ.ಜಿ.ಮೂಳೆ ಅವರು ಯಾವುದೋ ಪ್ರಮುಖ ಪಕ್ಷವೊಂದರ ಟಿಕೇಟ್ ಪಡೆಯಲಿದ್ದಾರೆಂಬ ಮಾತುಗಳು ಕೇಳಿ ಬರುತಿದ್ದು, ಇವರಿಂದ ಯಾರಿಗೂ ಪಕ್ಷದ ಟಿಕೇಟ್ ಸಿಗುವುದಿಲ್ಲ ಎಂದು ಸಹ ಹೇಳುವಂತಾಗಿದೆ. ಯಾವುದಕ್ಕೂ ಕಾಲವೇ ನಿಣ೯ಯಿಸುತ್ತದೆಂದು ಕೂಡ ಭಾವಿಸಬಹುದು. ಆದರೂ ಯಾವಾಗ ಏನು ನಡೆಯುತ್ತದೆಂಬುದು ಹಾವು ಏಣಿ ಆಟದಂತಿರುವ ರಾಜಕೀಯ ಕ್ಷೇತ್ರದಲ್ಲಿ ಯಾವಾಗ ಏನಾಗುತ್ತದೆಂದು ಕೂಡ ಹೇಳದಂತಾಗಿದೆ ಎನ್ನುವ ಜನ ಉತ್ತಮರನ್ನೇ ಆಯ್ಕೆ ಮಾಡುತ್ತಾರೆಂಬ ಭರವಸೆ ಕೂಡ ತಳೆಯಬಹುದು.

ಮಲ್ಲಿಕಾಜು೯ನ ಖೂಬಾ ಮತ್ತು ಬಸವರಾಜ ಪಾಟೀಲ ಅಟ್ಟೂರ್ ಅವರಿಗೆ ಪೈಪೋಟಿಯಾಗಿ ಎದುರಿಸಲು ಸಕಲ ಸಿದ್ದತೆಯಲ್ಲಿ ಇರುವ ಯುವ ನಾಯಕರ ದಂಡು ಕೆಲವರು ಬಿಜೆಪಿ ಪಕ್ಷದಲ್ಲಿದ್ದರೂ ಅಂಥವರನ್ನೇ ಶಾಸಕ ಅಟ್ಟೂರ್ ಕಡೆಗಣಿಸಿದ್ದಾರೆಂಬ ಆರೋಪ ಒಂದೆಡೆಯಿದ್ದರೆ ಜೆಡಿಎಸ್ ನಲ್ಲೂ ಅಪಸ್ವರ ಕೇಳಿ ಬರುತ್ತಿವೆ. ಹಳೇ ಕಾಯ೯ಕತ೯ರ ಮನವೊಲಿಸುವ ತಂತ್ರಗಳು ಎಲೆಮರೆ ಕಾಯಿಯಂತೆ ನಡೆಸುತಿದ್ದಾರೆನ್ನುವುದು ಸತ್ಯ ಸಂಗತಿಗಳಲ್ಲಿ ಒಂದಾಗಿದೆ. ಪಕ್ಷವನ್ನು ಬದಲಾಯಿಸುವ ನಿಣ೯ಯದಲ್ಲಿ ಕೆಲವರು ಚಿಂತಿಸುತಿದ್ದಾರೆ ಎಂಬ ಮಾತುಗಳು ಕೂಡ ಅಸ್ಪಷ್ಟವಾಗಿ ಕೇಳಿ ಬರುತ್ತಿವೆ. ಆದರೆ ಖೂಬಾ ಅವರು ಯಾವುದೇ ಪಕ್ಷದಲ್ಲಿದ್ದರೂ ಅವರ ಗೆಲುವಿಗಾಗಿ ಪಣತೊಟ್ಟಿರುವ ಜನಬೆಂಬಲ ಸೂಚಿಸುವ ವಗ೯ ಒಂದೆಡೆ ಇದ್ದೇ ಇದೆ ಎನ್ನುತ್ತಾರೆ ಎಂಬ ಜನರ ಅಭಿಪ್ರಾಯದಲ್ಲಿ ಮನೆ ಮಾಡಿದೆ. ಏನೇ ಆದರೂ ನೂರಕ್ಕೆ ತೊಂಬತ್ತೊಂಬತ್ತು ಪಶೆ೯ಟ್ ಜನಭಿಪ್ರಾಯದಂತೆ ಹೊಸ ಮುಖಗಳ ಆಗಮನಕ್ಕಾಗಿ ಜನಸಾಮಾನ್ಯರು ಕಾದು ಕುಳಿತಂತಿದೆ. ಹಳೇಬರ ವರಸೆ, ಆಡಳಿತವನ್ನು ಅದೇಷ್ಟೋ ಜನರಿಗೆ ಬೇಸರವನ್ನು ತರಿಸಿದೆ ಎಂಬ ಆರೋಪಗಳು ಮೇಲಿಂದ ಮೇಲೆ ಕೇಳಿ ಬರುತ್ತಿವೆ.

ಏನೇ ಆದರೂ ಚುನಾವಣಾ ಕಣಕ್ಕೆ ಧೈಯ೯ವನ್ನು ಮಾಡಿ ಸ್ಪಧಿ೯ಸುವವರಲ್ಲಿ ಸುಧೀರ ಕಾಡಾದಿ ಅವರೇ ಖುದ್ದಾಗಿ ಆಸಕ್ತಿಯನ್ನು ತೋರಿದರೆ ರಾಜಕೀಯ ಬೆಳವಣಿಗೆಯಲ್ಲಿ ಏನು ಬೇಕಾದರೂ ನಡೆಯಬುದೆಂದು ನಂಬುವಂತಾಗಿದೆ. ಶರಣರ ನಾಡಿನ ನೆಲದಲ್ಲಿ ಎಲ್ಲರೂ ಸಲ್ಲುವರೆಂಬ ಮಾತನ್ನು ಪ್ರತಿಯೊಬ್ಬರೂ ಅರಗಿಸಿಕೊಳ್ಳಬೇಕಾದ ಸಂದಭ೯ ಬಂದಿದೆ. ಅನಾರೋಗ್ಯದಿಂದ ಬಳಲುತ್ತಿರುವ ಶಾಸಕ ಅಟ್ಟೂರ್ ಅವರು ಮತ್ತೆ ಲವಲವಿಕೆಯಿಂದ ಚುನಾವಣೆಗೆ ನಿಂತರೂ ಕೂಡ ಮತದಾರ ಬಂಧು ಒಲಿಯಲೇಬೇಕೆಂಬುದು ನಿಯಮಗಳಿಲ್ಲ ಎನ್ನುವ ಕೆಲವರು, ಅನುಕಂಪದ ಆಧಾರದ ಮೇಲೆ ಅವರು ಗೆದ್ದು ಬರುತ್ತಾರೆಂಬ ವಿಶ್ವಾಸವೂ ಕೆಲ ಅಟ್ಟೂರ್ ಅಭಿಮಾನಿಗಳು ದಟ್ಟ ನಿಲುವನ್ನು ಹೊಂದಿದ್ದಾರೆ.

ಅಂತು ಇಂತೂ ಧಮ೯ಸಿಂಗ್, ರಾಜೇಂದ್ರ ವಮಾ೯, ಅಟ್ಟೂರ್, ಮಲ್ಲಿಕಾಜು೯ನ ಖಗೆ೯ ಮುಂತಾದವರೊಂದಿಗೆ ಹಗಲು ರಾತ್ರಿಯೆನ್ನದೇ ಸತತವಾಗಿ ರಾಜಕೀಯ ಜೀವನದಲ್ಲಿ ದುಡಿದಿರುವ ಯುವ ನಾಯಕ ಸುಧೀರ ಕಾಡಾದಿ ಅಂಥವರನ್ನು ನಿಜವಾದ ಅಥ೯ದಲ್ಲಿ ಜನ ಸ್ವೀಕರಿಸಬೇಕಾಗಿದೆ. ಇಂಥವರನ್ನು ಅವಕಾಶ ಕೊಟ್ಟು ನೋಡಿದ್ದೇ ಏದಲ್ಲಿ ನಿಜಕ್ಕೂ ಮಹತ್ತರ ಬದಲಾವಣೆ, ಅಭಿವೖದ್ಧಿಯ ಚಿಂತನೆಗಳು ಬಸವಕಲ್ಯಾಣದ ನೆಲದಲ್ಲಿ ಮೊಳಗುತ್ತವೆ. ನೆನೆಗುದಿಗೆ ಬಿದ್ದ ಅನೇಕ ಕೆಲಸ-ಕಾಯ೯ಗಳು, ರಸ್ತೆ ಕಾಮಗಾರಿಗಳು ಚುರುಕಾಗಿ ಸಾಗುವಂತಾಗುತ್ತವೆ. ಕಚೇರಿಗಳಲ್ಲಿರುವ ಆಡಳಿತ ದಕ್ಷತೆಯಿಂದ ನಡೆದುಕೊಳ್ಳುತ್ತವೆ. ಅದೇ ಹಳೇ ಮುಖಗಳು ಬಂದರೇನು ಪ್ರಯೋಜನ..? ಇದ್ದದ್ದೇ ಕಿಸಬಾಯಿದಾಸ್ ಎಂದು ಅನೇಕರು ಲೇವಡಿ ಮಾಡದೇ ಇರಲಾರರು.

ಅಂತೂ ಹಳೇ ನೀರನ್ನು ತೆಗೆದು ಹೊಸ ನೀರು ಬಳಸುವ ಬುದ್ಧಿವಂತಿಕೆ ನಮ್ಮ ಜನರಲ್ಲಿ ಬೆಳೆದು ಬಿಟ್ಟಿದೆ. ಇದಕ್ಕೆಲ್ಲ ಕಾಲವೇ ನಿಣ೯ಯಿಸುವಂತಿದೆ. 25 ವಷ೯ಗಳ ಅನುಭವ ಹೊಂದಿರುವ ರಾಜಕೀಯ ಧುರೀಣರು, ಈಗಾಗಲೇ ರಾಜಕೀಯವನ್ನು ನಡೆಸಿ ಬಿದ್ದವರನ್ನು, ಸ್ಥಳೀಯ ಮುಖಂಡರುಗಳನ್ನು ಮುಂಬರುವ ಚುನಾವಣೆಯ ಗಾಳಿಯಿಂದ ಸ್ವಲ್ಪವಾದರೂ ವಿಚಲಿತರಾಗದೇ ಇರಲಾರರು ಎಂಬುದು ಕೂಡ ಸತ್ಯವಾಗಿದೆ. ಅಷ್ಟೇ ನಿಖರವಾಗಿದೆ. ಜನ ಹುಶಾರಾಗಿದ್ದಾರೆ. ಯಾರೂ ಮುಗ್ಧರಲ್ಲ. ಯಾರನ್ನು ಯಾವಾಗ ಜಯಿಸಬೇಕು. ಹೇಗೆ ಅವರಿಂದ ಆಡಳಿತ ನಡೆಸಿಕೊಳ್ಳಬೇಕೆಂಬುದು ಅರಿತಿದ್ದಾರೆ. ಸಾರಾಯಿ ಕೊಟ್ಟು ನೋಟು ಹಂಚಿದರೆ ನಾಳೆ ದಿನ ನಮ್ಮನ್ನು, ನಮ್ಮ ಕೆಲಸ ಕಾಯ೯ಗಳನ್ನು ಆಗುವುದಿಲ್ಲವೆಂದು ಅನೇಕರು ತಿಳಿದಿದ್ದಾರೆ.








ಕಾಮೆಂಟ್‌ಗಳಿಲ್ಲ: