ಸೋಮವಾರ, ಫೆಬ್ರವರಿ 13, 2012

ಪ್ರೆಸ್ ಮೀಟ್ ಅಲ್ಲ-ಪ್ರೆಸ್ ಈಟ್...!


ಮಾಜಿ ಶಾಸಕ ಎಂ.ಜಿ.ಮುೂಳೆ

ಪ್ರೆಸ್ ಮೀಟ್ ಕರೆದಿಲ್ಲ.!ಪತ್ರಕತ೯ರನ್ನು ಪ್ರೆಸ್ ಈಟ್(ತಿಂಡಿಗಾಗಿ) ಕರೆದಿದ್ದೇನೆಃ ಮಾಜಿ ಶಾಸಕ ಎಂ.ಜಿ.ಮೂಳೆ ಅವರ ಹಾಸ್ಯಾಸ್ಪದ ಹೇಳಿಕೆ

ಬಸವಕಲ್ಯಾಣ, ಫೆ. 12

ನಾಲ್ಕು ಸಲ ಸೋತು, ಒಂದು ಸಲ ವಿಧಾನ ಸಭಾ ಚುನಾವಣೆಯಲ್ಲಿ ವಿಜಯಿಶಾಲಿಯಾದ ನಂತರ ಮತ್ತೆ ಸೋಲುಂಡ ಮಾಜಿ ಶಾಸಕ ಎಂ.ಜಿ ಮುೂಳೆ ಅವರು, ಅವರನ್ನು ಬೆಳೆಸಿದ ಕಾಂಗ್ರೆಸ್ ಪಕ್ಷವನ್ನೇ ತ್ಯಜಿಸಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದು ಆಕಸ್ಮಿಕ ಬೆಳವಣಿಗೆ. ಬಿಜೆಪಿ ಪಕ್ಷದಲ್ಲಿಯೂ ಕಾಸಿನ ಕಿಮ್ಮತ್ತಿಲ್ಲದಂತಾಗಿ ಬೇಸರಿಸಿಕೊಂಡಿರುವ ಮುೂಳೆ ಅವರಿಗೀಗ ಗಟ್ಟಿ ತಳಪಾಯದ ಬೇರೂರಿದ ಪಕ್ಷ ಯಾವುದೆಂದು ಸಹ ಕಲ್ಪನೆಗೂ ನಿಲುಕದ ರಾಜಕೀಯ ಜೀವನ ನಡೆಸುತಿದ್ದಾರೆ ಎನ್ನಬಹುದು.

ಆಕಸ್ಮಿಕವಾಗಿ ಎಂಬಂತೆ ಬಹಳ ದಿನಗಳ ನಂತರ ಇದೇ ಭಾನುವಾರ ಫೆ. 12 ರಂದು ಬೆಳಿಗ್ಗೆ 9ಕ್ಕೆ ಮಾಜಿ ಶಾಸಕ ಮುೂಳೆ ಅವರು ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಕರೆಯಲಾಗಿದೆ ಎಂಬ ಮೊಬೈಲ್ ಸಂದೇಶಗಳು ತಾಲೂಕಾ ಪತ್ರಕತ೯ರ ಸಂಘದ ಪ್ರತಿನಿಧಿಗಳಿಂದ ಎಲ್ಲಾ ಪತ್ರಿಕೆಗಳ ಪತ್ರಕತ೯ರಿಗೆ ರವಾನೆಯಾಗಿದ್ದವು. ಆ ಸಂದೇಶಗಳನ್ನು ಕಂಡು ಎಲ್ಲರೂ ಅವರ ಮನೆ ಮುಂದೆ ಬೆಳಿಗ್ಗೆ ಹಾಜರಾಗಿದ್ದರು.

ಪತ್ರಿಕಾ ಗೋಷ್ಠಿಗೆಂದು ಹೋದ ಪತ್ರಕತ೯ರಿಗೆ ಮಾಜಿ ಶಾಸಕ ಎಂ.ಜಿ ಮುೂಳೆ ಅವರಿಂದಾಗಲಿ, ಅವರ ಕಾಯ೯ಕತ೯ರಿಂದ ಇಂತಹ ಒಂದು ಅಚ್ಚರಿಯ ಮಾತುಗಳನ್ನು ಹೊರ ಬೀಳುತ್ತದೆಂದು ಯಾರೂ ಕೂಡ ಭಾವಿಸಿರಲಿಲ್ಲ. ಪ್ರೆಸ್ ಮೀಟ್ ಎಂದು ನಾನು ಕರೆದಿಲ್ಲ. ಪ್ರೆಸ್ ಈಟ್ (ತಿಂಡಿಗಾಗಿ) ಕರೆದಿದ್ದೇನೆ. ಅಂದರೆ ಪತ್ರಕತ೯ರಲ್ಲಿರುವ ಸೊಕ್ಕನ್ನು ಮುರಿಯಲು ಕರೆದಿದ್ದೇನೆಂಬ ಅಣಕು ನೋಟ ಅವರಲ್ಲಿ ಅಡಗಿತ್ತೇನೋ ಎಂಬ ರೀತಿಯಲ್ಲಿ ಮಾತನಾಡಿದ್ದು ಪತ್ರಕತ೯ರನ್ನೇ ಮುಜುಗರಕ್ಕೆ ಒಳಪಡಿಸಿತ್ತು.

ರಾಜ್ಯ ಸಕಾ೯ರ ಇತ್ತೀಚಿಗೆ ಛತ್ರಪತಿ ಶಿವಾಜಿ ಅವರ ಜಯಂತ್ಯೋತ್ಸವ ಆಚರಣೆಗೆ ಆದೇಶ ಹೊರಡಿಸಿರುವ ಕುರಿತ ಹಿನ್ನೆಲೆಯಲ್ಲಿ ಮಾತನಾಡುವುದಿದೆ. ಅದಕ್ಕಾಗಿ ನಿಮ್ಮ ಪತ್ರಕತ೯ರೆಲ್ಲರನ್ನು ನಾಳೆ ಭಾನುವಾರ ನಮ್ಮನಿವಾಸಕ್ಕೆ ಕರೆಯಿರಿ ಎಂದು ಸ್ವತಃ ಮುೂಳೆ ಅವರು ತಾಲೂಕಾ ಕಾಯ೯ನಿರತ ಪತ್ರಕತ೯ರ ಸಂಘದ ಜಿಲ್ಲಾ ಪ್ರತಿನಿಧಿ ಹಾಗೂ ತಾಲೂಕಾಧ್ಯಕ್ಷರಿಗೆ ಹೇಳಿದ್ದರು.

ಇದೇ ವಿಷಯವನ್ನು ಎಲ್ಲಾ ಪತ್ರಕತ೯ರಿಗೆ ಸಂದೇಶವನ್ನು ಕೂಡ ಮೊಬೈಲ್ ಡಿಸಿಪ್ಲೇಗಳಿಗೆ ರವಾನೆಯಾಗಿದ್ದವು. ಆದರೆ ಮಾಜಿ ಶಾಸಕರ ಮನೆಯಲ್ಲಿ ಪ್ರತ್ಯಕ್ಷಗೊಂಡ ಪತ್ರಕತ೯ರಿಗೆ ಇದು ಪ್ರೆಸ್ ಮೀಟ್ ಅಲ್ಲ, ಪ್ರೆಸ್ ಈಟ್ ಎಂದರೆ ಯಾವ ಪತ್ರಕತ೯ನಿಗೂ ಊಟದ ಗತಿ ಇಲ್ಲವೇ? ಮಾಜಿ ಶಾಸಕರ ಮನೆಯಲ್ಲಿಯೇ ಹೋಗಿ ಊಟ, ತಿಂಡಿ ಮಾಡಬೇಕೆ ಎಂದು ಚಿಂತಿಸುವಂತಾಗಿದೆ. ಇಷ್ಟೇ ಅಲ್ಲದೇ..

ಎಂ.ಜಿ.ಮೂಳೆ ಅವರ ನಿವಾಸದಲ್ಲಿ ನಡೆದ ಮಹತ್ವದ ಚಚೆ೯ ಏನೆಂದರೆ ಅವರ ಕಾಯ೯ಕತ೯, ಕಾಂಗ್ರೆಸ್ ಪಕ್ಷದ ಮಾಜಿ ತಾಲೂಕಾಧ್ಯಕ್ಷ ಅಜು೯ನ ಕನಕ ಹಾಗೂ ಸಕಾ೯ರಿ ಉಪನ್ಯಾಸಕರಾಗಿ ರಾಜಕೀಯ ಸೇವೆಗೆ ಕಂಕಣ್ಣ ಬದ್ಧರಾಗಿ ನಿಂತಿರುವ ವ್ಯಕ್ತಿಯೊಬ್ಬರು ಯಾರೂ ನಿರೀಕ್ಷಿಸಿರದ ಒಂದು ಮಾತನ್ನು ಹೇಳಿ, ಪತ್ರಕತ೯ರ ಸ್ವಾಭಿಮಾನ ಕೆರಳುವಂತೆ ಮಾಡಿದ್ದು ವಿಷಾದದ ಸಂಗತಿಯೇ ಎನ್ನಬಹುದು.

ಈ ಮಾತನ್ನು ಕೇಳಿ ಸ್ವಾಭಿಮಾನಿ ಪತ್ರಕತ೯ರು ಎಂದೂ ಎದುರಿಸಲಾಗದ ಪ್ರಸಂಗ ನಡೆದದ್ದು ಭಾನುವಾರ. ಒಮ್ಮೆ ನಿಮ್ಮಪತ್ರಕತ೯ರೆಲ್ಲರ ಸಭೆ ಕರೆಯಿರಿ ಆ ಸಭೆಯಲ್ಲಿ ನಾವು ಬಂದು ಪತ್ರಕತ೯ರಿಗೆ ನಮ್ಮಿಂದ ಕೆಲವೊಂದು ಸಲಹೆ, ಸೂಚನೆಗಳನ್ನು ನೀಡಬೇಕು. ವರದಿಗಳನ್ನು ಹೇಗೆ ಬರೆಯಬೇಕು, ಹೇಗೆ ಬರಬೇಕು ಎಂಬುದನ್ನು ಚಚಿ೯ಸುತ್ತೇವೆ ಎನ್ನಬೇಕೆ..?

ಪತ್ರಕತ೯ರಿಗೆ ಸಲಹೆ, ಸೂಚನೆಗಳೇನಿದ್ದರೂ ಹೇಳಲು, ಕೇಳಲು ಅವರವರ ಪತ್ರಿಕೆಗಳ ಸಂಪಾದಕರಿದ್ದಾರೆ. ಮಾಗ೯ದಶ೯ನ ಮಾಡಲು ಜಿಲ್ಲಾ ವರದಿಗಾರರಿದ್ದಾರೆ. ಅಂಥದ್ದರಲ್ಲಿ ರಾಜಕೀಯ ಪ್ರತಿನಿಧಿಯೊಬ್ಬರು ಹಾಗೂ ಸಕಾ೯ರಿ ನಿಯೋಜಿತರೊಬ್ಬರು ಪತ್ರಕತ೯ರಿಗೆ ಸಲಹೆ ನೀಡುವಷ್ಟರ ಮಟ್ಟಿಗೆ ಬೆಳೆದು ಬಿಟ್ಟಿದ್ದಾರಾ ಎಂಬ ಚಚೆ೯ಗಳು ಪತ್ರಕತ೯ರ ವಲಯದಲ್ಲಿ ನಡೆದದ್ದು ಸಹಜ.

ರಾಜಕೀಯ ಮುಖಂಡರುಗಳ ಸಲಹೆಗಳೇನೆಂದರೆ, ಪತ್ರಿಕೆಗಳಲ್ಲಿ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಅವರ ಹೆಸರುಗಳು ರಾರಾಜಿಸಬೇಕು, ಚಿತ್ರ ಸಮೇತ ಅವರ ವರದಿಗಳು ಪ್ರಕಟವಾಗಬೇಕು. ಅವರು ನಡೆಸುವ ಸಭೆ, ಸಮಾರಂಭಗಳಲ್ಲಿ ಕುಳಿತರೂ ಸುದ್ಧಿಯಾಗಬೇಕು, ನಿಂತರೂ ಸುದ್ಧಿಯಾಗಬೇಕು ಎಂಬ ಹಪಾಹಪಿತನ ಇಟ್ಟುಕೊಂಡಿರುವ ಇವರು ತಪ್ಪದೇ ಎಲ್ಲಾ ಕಾಯ೯ಕತ೯ರ ಹೆಸರುಗಳು ಪತ್ರಿಕೆಗಳಲ್ಲಿ ಬಿಡದೇ ಪ್ರಕಟಿಸಬೇಕು ಎಂಬುದಷ್ಟೇ ಅವರ ಉದ್ದೇಶವಾಗಿದೆ ಎನ್ನಬಹುದು.

ಯಾವುದೇ ಒಂದು ವರದಿ ಪತ್ರಿಕೆಗಳಲ್ಲಿ ನೀಡಿದಾಗ ಅದು ಇಲ್ಲ, ಇದು ಇಲ್ಲ, ಹೆಸರುಗಳೇ ಬಂದಿಲ್ಲ, ಫೋಟೊ ಸರಿ ಇಲ್ಲ ಎಂದು ತಲೆ ತಿನ್ನುವವರಿಗೇನು ಕಡಿಮೆ ಇಲ್ಲ. ಇಂಥವರು ಇನ್ನೇನು ಸಲಹೆ ಕೊಡಲು ಸಾಧ್ಯವೆಂಬುದು ಪತ್ರಕತ೯ರು ಯೋಚಿಸಬೇಕಾಗಿದೆ. ಪತ್ರಕತ೯ರೆದುರು ಕನಕ ಎನ್ನುವವರು ಇಂತಹ ಹಾಸ್ಯಾಸ್ಪದ ಹೇಳಿಕೆ ನೀಡಿದ್ದು ನಾಚಿಕೆಗೇಡಿನ ಸಂಗತಿ ಎಂದರೆ ತಪ್ಪಾಗಲಾರದು.

ಹೀಗೆ ಹೇಳುವ ಅವರು ಮಾಡುತ್ತಿರುವುದೇನು? ಕಾಂಗ್ರೆಸ್ ಪಕ್ಷದವನೆಂದು ಹೇಳಿಕೊಂಡು ಬಿಜೆಪಿ ಪಕ್ಷದ ಮಾಜಿ ಶಾಸಕ ಎಂ.ಜಿ.ಮುೂಳೆ ಅವರ ಹಿಂಬಾಲಕರಾಗಿ ಕೆಲಸ ಮಾಡುತ್ತಾರೆ ಏಕೆ? ಅದೇ ಕಾಂಗ್ರೆಸ್ ಪಕ್ಷದ ರಾಜಕೀಯ ಧುರೀಣರನ್ನು, ಕಾಯ೯ಕತ೯ರನ್ನು ಹಿಯ್ಯಾಳಿಸುವ ಅವರು, ತಾವು ಯಾವ ಪಕ್ಷದಲ್ಲಿದ್ದೇವೆಂಬುದು ಅವರಿಗೆ ಸ್ಪಷ್ಟವಾದ ಅರಿವಿರಲಿ. ಪತ್ರಕತ೯ರಿಗೆ ಸಲಹೆ ಕೊಡುವುದೇನಿದೆ ಎನ್ನುವುದಕ್ಕೆ ಸ್ಪಷ್ಟ ಉತ್ತರ ನೀಡಲಿ ಎಂಬ ಚಚೆ೯ಗಳು ಪತ್ರಕತ೯ರ ವಲಯದಲ್ಲಿ ನಡೆಯುತ್ತಿವೆ.

ಪತ್ರಿಕಾಗೋಷ್ಠಿಯೆಂದು ತಿಳಿದು ಹೋದ ಪತ್ರಕತ೯ರಿಗೆ ರಾಜಕೀಯ ನಾಯಕರುಗಳಿಂದ ಇಂತಹ ಮಾಗ೯ದಶ೯ನಗಳು ಬೇಕಿತ್ತಾ ಎನ್ನುವಂತಾಗಿದೆ. ಮಾಜಿ ಶಾಸಕ ಮುೂಳೆ ಅವರು ಪತ್ರಕತ೯ರೆದುರು ಈ ಸಂದಭ೯ದಲ್ಲಿ ಮಾತನಾಡಿ, ನಾನು ಬೆಂಗಳೂರಿನಲ್ಲಿ ರಾಷ್ಟ್ರೀಯ ನಾಯಕ ಎಲ್.ಕೆ. ಅಡ್ವಾಣಿ ಅವರ ನೇತೖತ್ವದಲ್ಲಿ ಬಿಜೆಪಿ ಸೇಪ೯ಡೆಯಾಗಿದ್ದೇನೆ. ಅದಕ್ಕಾಗಿ ನನಗೆ ಸ್ಥಳೀಯ ಶಾಸಕರು ಇಲ್ಲಿಯವರೆಗೆ ಯಾವುದೇ ಸಭೆ, ಸಮಾರಂಭಗಳಿಗೂ ಕರೆಯದೇ ಇರುವುದು ಬೇಸರ ತರಿಸುತ್ತಿದೆ ಎಂದರು.

ಮುಂದೊರೆದು ಮಾತನಾಡಿ, ಜಿ.ಪಂ, ತಾಪಂ, ಚುನಾವಣೆ ಸಂದಭ೯ದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಠಾಳಕ್ಕೆ ಬಂದಾಗಲೂ ಶಾಸಕ ಅಟ್ಟೂರ್ ಅವರು ನನಗೆ ಕರೆದಿಲ್ಲ, ರಾಜ್ಯಾಧ್ಯಕ್ಷ ಈಶ್ವರಪ್ಪ ಅವರು ಬಂದಾಗಲೂ ಕರೆದಿಲ್ಲ. ಯಾವುದೇ ಸಭೆ ಸಮಾರಂಭಗಳಿಗೂ ಆಹ್ವಾನಿಸುತ್ತಿಲ್ಲ ಎಂದರು.

ಅದಕ್ಕಾಗಿ ನಾನು ಮನೆಯಲ್ಲಿಯೇ ಕುಳಿತುಕೊಳ್ಳಬೇಕಾಯಿತು. ಇದರಿಂದ ನನಗೆ ಮಾನಸಿಕವಾಗಿ ತುಂಬಾ ಹಿಂಸೆಯನ್ನು ನೀಡಿದ್ದಾರೆ. ಆದರೂ ಬಿಜೆಪಿ ಪಕ್ಷದಲ್ಲೇ ಇದ್ದು ತಾಳ್ಮೆಯಿಂದ ಕುಳಿತಿರುವೆ. ಮುಂಬರುವ ಚುನಾವಣೆಗೆ ಯಾವ ಪಕ್ಷ ಸೇರುತ್ತೇನೆಂಬುದು ಆರು ತಿಂಗಳುಗಳ ಬಳಿಕ ನಿಧ೯ರಿಸುತ್ತೇನೆ ಎಂದು ವಿವರಿಸಿದರು.

ಇದ್ದ ಪಕ್ಷದಲ್ಲಿಯೇ ಬೆಲೆಯಿಲ್ಲ. ತಮ್ಮ ಸುತ್ತಲಿನ ವಾತಾವರಣ ನೋಡಿದರೆ ಎಲ್ಲಾ ಕಾಯ೯ಕತ೯ರು ಕಾಂಗ್ರೆಸ್ ನವರಾಗಿದ್ದಾರೆ, ಇನ್ನೂ ಕೆಲವರು ಪಕ್ಷೇತರರು ಆಗಿದ್ದಾರೆ. ವಿವಿಧ ಸಂಘಟನೆಯವರು ಮುೂಳೆ ಅವರ ಬೆಂಬಲಿಗರಾಗಿಯೂ, ಇನ್ನೂ ಕೆಲವು ಸಂದಭ೯ಗಳಲ್ಲಿ ಅಟ್ಟೂರ್, ಖೂಬಾ ಅವರ ಬೆಂಬಲಿಗರಾಗಿಯೂ ಮೂೂರು ಕಡೆಗಳಲ್ಲಿರುವ ಕಾಯ೯ಕತ೯ರು ಇಲ್ಲಿದ್ದಾರೆ. ಅಲ್ಲದೇ ಸಕಾ೯ರಿ ಹುದ್ದೆಯಲ್ಲಿರುವ ಉಪನ್ಯಾಸಕರುಗಳು ಸಹ ಮಾಜಿ ಶಾಸಕರ ಕಾಯ೯ಕತ೯ರಾಗಿಯೊ ದುಡಿಯುತಿರುವುದು ಅಚ್ಚರಿಯ ಸಂಗತಿ.

ಅಂದರೆ ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮಾಜಿ ಶಾಸಕ ಮಾರುತಿರಾವ.ಜಿ.ಮೂಳೆ ಅವರು ಮುಂಬರುವ ಚುನಾವಣಾ ಸ್ಪಧಿ೯ಯಾಗಿ ನಿಲ್ಲುವುದು ಶತಸಿದ್ಧ. ಇದರಲ್ಲಿ ಯಾವುದೇ ಅನುಮಾನಗಳಿಲ್ಲ. ಕಾಯ೯ಕತ೯ರು ಯಾವ ಪಕ್ಷವನ್ನು ಬೆಂಬಲಿಸುತ್ತಾರೋ ಆ ಪಕ್ಷದಲ್ಲಿ ಸೇರಿಕೊಳ್ಳುವ ಇಚ್ಛೇ ವ್ಯಕ್ತಪಡಿಸುತ್ತಾರೆ. ಅವರು ರಾಜಕೀಯ ಜೀವನದಲ್ಲಿ ಸುಸೂತ್ರವಾಗಿ ವಿಜಯಿಶಾಲಿಯಾಗಿ ಬರಲಿ ಎಂಬುದು ಅನೇಕ ಅಭಿಮಾನಿಗಳ ಹಾರೈಕೆಗಳು ಇದೆ ಎಂದು ವಿವರಿಸುತ್ತಾರೆ.

ಕಾಮೆಂಟ್‌ಗಳಿಲ್ಲ: