ಸೋಮವಾರ, ಫೆಬ್ರವರಿ 13, 2012

ಎಲ್ಲರೊಂದಿಗೆ ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು.



ವ್ಯಕ್ತಿಯೊಬ್ಬ ಯಶಸ್ವಿಯಾದ ಜೀವನ ನಡೆಸಬೇಕಾದರೆ ಎಲ್ಲರೊಂದಿಗೆ ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕುಃ ಬೆಲ್ದಾಳ ಶ್ರೀ
ಬಸವಕಲ್ಯಾಣ, ಫೆ. 6

ವ್ಯಕ್ತಿಯೊಬ್ಬ ಯಶಸ್ವಿಯಾದ ಜೀವನ ನಡೆಸಬೇಕಾದರೆ ಎಲ್ಲರೊಂದಿಗೆ ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ಅಭಿನಂದನೆಗಳಂಥ ಗೌರವಕ್ಕೆ ಪಾತ್ರನಾಗಿ ಸಾಧನೆಯ ಪಥದಲ್ಲಿ ಸಾಗಲು ಪ್ರೇರಕವಾಗಿರುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ ಅಭಿಪ್ರಾಯಪಟ್ಟರು.

ನಗರದ ಸರಕಾರಿ ಪ್ರಥಮ ದಜೆ೯ ಕಾಲೇಜಿನಲ್ಲಿ ಸಾಕ್ಷಿ ಪ್ರತಿಷ್ಠಾನ ಹುಮನಾಬಾದ, ಧರಿನಾಡು ಕನ್ನಡ ಸಂಘದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ನಾಲ್ಕು ಪ್ರಶಸ್ತಿ ಪುರಸ್ಕೖತ ಪ್ರೊ. ಎಂ.ಎಂ. ತಂಬಾಕೆ ಅವರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಾಹಿತ್ಯೀಕ, ಸಾಂಸ್ಕೖತಿಕವಾಗಿ ದುಡಿದವರಿಗೆ ಸಲ್ಲುವ ಗೌರವದಂತೆ ಶೈಕ್ಷಣಿಕ, ಆಡಳಿತ ಸೇವೆಯಲ್ಲಿ ಶ್ರಮಿಸಿದ ತಂಬಾಕೆಯವರ ಜೀವನದ ಸಾಥ೯ಕತೆಗೆ ಅಭಿನಂದನಾ ಸಮಾರಂಭಗಳು ಅವಶ್ಯವಾಗಿದೆ. ನಮ್ಮ ವಯಕ್ತಿಕ ಕೆಲಸಗಳ ಮಧ್ಯೆಯೊ ಸಮಾಜ, ನಾಡಿಗಾಗಿ ಸಮಪಿ೯ಸಿಕೊಳ್ಳುವುದೇ ಸಾಧನೆಯೆನಿಸಿಕೊಳ್ಳುತ್ತದೆ ಎಂದರು.

ಹಣಕ್ಕಿಂತ ಮುಖ್ಯವಾಗಿ ಅಭಿನಂದಿಸಿಕೊಳ್ಳುವ ಕಾಯ೯ದಲ್ಲಿ ತೊಡಗುವುದೇ ನಿಜಾಥ೯ದ ಬದುಕೆನಿಸಿಕೊಳ್ಳಲು ಸಾಧ್ಯ. ಎಲ್ಲಾ ಉನ್ನತಿಗಿಂತ ಶಿಕ್ಷಕ ವೖತ್ತಿ ಶ್ರೇಷ್ಠವಾದುದ್ದಾಗಿದ್ದು, ಸನ್ಮಾನ್ಯರ ಸಮಾರಂಭಗಳಲ್ಲಿ ಕೇವಲ ಭಾಷಣವನ್ನು ಕೇಳಿ ಹೋಗದೇ ಅದರ ಮಹತ್ವವನ್ನು ಅರಿತುಕೊಳ್ಳುವುದು, ಸಾಧಕರ ಜೀವನ ತಿರುಗಿ ನೋಡುವುದು ಅವಶ್ಯವೆಂದು ಕರೆ ನೀಡಿದರು.

ಕಾಯ೯ಕ್ರಮದ ಸಾನಿಧ್ಯ ವಹಿಸಿ ಕೌಠಾ ಬಸವಯೋಗಾಶ್ರಮದ ಸಿದ್ಧರಾಮ ಶರಣರು ಬೆಲ್ದಾಳ ಮಾತನಾಡಿ, ಸಮಾಜದಲ್ಲಿ ಉತ್ತಮ ಕಾಯ೯ ನಿವ೯ಹಿಸಿದವರನ್ನು ಗುರುತಿಸುವುದೇ ನಾಡಿನ ಘನತೆ ಉಳಿಸಿದಂತಾಗುತ್ತದೆ. ವ್ಯಕ್ತಿಯೊಬ್ಬರ ಹತ್ತು ಗುಣಗಳಲ್ಲಿ ಎಂಟು ದುಗು೯ಣಗಳನ್ನು ಏಣಿಸದೇ ಎರಡು ಉತ್ತಮವಾದ ಗುಣಗಳನ್ನು ಗುರುತಿಸುವುದೇ ಶರಣರ ವಚನ ಪರಿಪಾಲಿಸಿದಂತಾಗುತ್ತದೆ.

ಆ ಎರಡು ಉತ್ತಮ ಗುಣಗಳು ಗುರುತಿಸಿದಾಗ ಉಳಿದೆಲ್ಲಾ ದುಗು೯ಣಗಳನ್ನು ಬಿಟ್ಟು ಹೊಸ ಜೀವನಕ್ಕೆ ಪರಿವತ೯ನೆಗೊಳ್ಳುತ್ತಾನೆ. ಸನ್ನಡತೆಯ ಮಾಗ೯ದಲ್ಲಿ ನಡೆಯುವ ಸಂಕಲ್ಪವನ್ನು ಮಾಡಿ ಉತ್ತಮವಾದ ಜೀವನ ನಡೆಸಲು ಪ್ರತಿಯೊಬ್ಬರೂ ಆಶಿಸುತ್ತಾರೆ. ಸಮಾಜದಲ್ಲಿ ಕೆಟ್ಟವರಾಗಬೇಕೆಂದು ಯಾರೂ ಬಯಸುವುದಿಲ್ಲ ಎಂದು ನುಡಿದರು.

ಮುಂದೊರೆದು ಮಾತನಾಡಿ, ಸಮಾಜ ಕಾಯ೯ ಸೇವೆಯೆಂದರೆ ಗೊತ್ತಿದ್ದು ಮುಳ್ಳು ದಾರಿಯಲ್ಲಿ ನಡೆದಂತೆ ಎಂದಿರುವ ಸಂವಿಧಾನಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಾತಿನಲ್ಲಿ ಮುಳ್ಳಿನ ಹಾಸಿಗೆಯಲ್ಲಿ ನಡೆದವರೇ ಶ್ರೇಷ್ಠ ಸಾಧಕರೆನಿಸಿಕೊಳ್ಳುತ್ತಾರೆ ಎನ್ನುವಂತೆ ತಂಬಾಕೆಯವರು ಅನೇಕ ಕಷ್ಟಗಳ ಮಧ್ಯೆಯೊ ಮೇಲೆದ್ದು ಬಂದವರಾಗಿದ್ದಾರೆ ಎಂದು ಶ್ಲಾಘಿಸಿದರು.

ಪ್ರೊ. ಎಂ.ಎಂ. ತಂಬಾಕೆ ಹಾಗೂ ಪ್ರೊ. ಕಮಲಾತಾಯಿ ತಂಬಾಕೆ ದಂಪತಿ ಅಭಿನಂದನೆ ಸ್ವೀಕರಿಸಿ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡು, ಬದುಕಿನ ಕುರಿತ ವಿಚಾರಗಳನ್ನು ಮಂಡಿಸಿದರು. ಪ್ರಾಚಾಯ೯ ಪ್ರೊ. ನಾಗೇಂದ್ರ ಡೋಲೆ ಮಾತನಾಡಿದರು. ನೀಲಾಂಬಿಕಾ ಕಾಲೇಜಿನ ಪ್ರಾಚಾಯ೯ ಎಂ.ಕೆ.ಗಾದಗೆ, ನಗರಸಭೆ ಅಧ್ಯಕ್ಷೆ ಮಂಗಲಾಬಾಯಿ ಉದರೆ, ಉಪಾಧ್ಯಕ್ಷ ಪಾಶಾಮಿಯ್ಯಾ ಜಾರೆಗಾರ್ ವೇದಿಕೆಯಲ್ಲಿದ್ದರು.

ಡಾ. ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಜೈಶೇನ್ ಪ್ರಸಾದ ನಿರೂಪಿಸಿದರು. ದಶವಂತ ಬಂಡೆ ವಂದಿಸಿದರು. ತ್ರಿವೇಣಿ ಮಠಪತಿ, ರಾಜಶೇಖರ ಶೀಲವಂತ, ನರೇಂದ್ರ ಜಾಧವ, ಮೇನಕಾ, ಪವಿತ್ರಾ ಬಿರಾದಾರ್ ಪ್ರಾಥ೯ನೆ ಸಂಗೀತ ಗಾಯನ ನಡೆಸಿಕೊಟ್ಟರು.

ಕಾಯ೯ಕ್ರಮದಲ್ಲಿ ಮಲ್ಲಿಕಾಜು೯ನ ಹುಣಸಗೇರಾ, ಈಶ್ವರ ಹೆಬ್ಬಾಳಕರ್, ಶಿವರಾಜ ರಾಜೋಳೆ, ಸುನೀತಾ ವಿಠ್ಠಲ, ದೀಪಕ ಗಾಯಕವಾಡ್, ಪ್ರಭುಲಿಂಗಯ್ಯಾ ಟಂಕಸಾಲಿಮಠ, ಬಸವರಾಜ ಶಿಂಧೆ, ಡಾ. ಗೋವಿಂದ ಕಟಕೆ, ಶಾಂತಕುಮಾರ, ವಿಲಾಸ್ ಚೌಹ್ವಾಣ್ ಸೇರಿದಂತೆ ವಿವಿಧ ಕಾಲೇಜು ಸಿಬ್ಬಂದಿಗಳು, ಪ್ರಾಚಾಯ೯ರು, ಸಂಘಟನೆಗಳ ಪದಾಧಿಕಾರಿಗಳು ಇದ್ದರು.
















ಕಾಮೆಂಟ್‌ಗಳಿಲ್ಲ: