ಸೋಮವಾರ, ಫೆಬ್ರವರಿ 13, 2012


ಘಷ೯ಣೆಗಳಿಂದ ನಾಡು ಹೋಳಾಗುತ್ತದೆಃ ಮುಚಳಂಬ ಪ್ರಣಾವನಂದ ಸ್ವಾಮಿಗಳು

ಬಸವಕಲ್ಯಾಣ, ಫೆ. 11
ಕಾಡುಗಳ ಮಧ್ಯೆದಲ್ಲಿ ಘಷ೯ಣೆ ನಡೆದರೆ ಕಾಡು ಸುಟ್ಟು ಭಸ್ಮವಾಗುತ್ತದೆ. ಅದೇ ಘಷ೯ಣೆಯನ್ನು ನಾಡಿನಲ್ಲಿ ನಡೆದಾಗ ನಾಡನ್ನು ಹೋಳಾಗಿ ಹೋಗುತ್ತದೆ ಎಂದು ಮುಚಳಂಬದ ಪ್ರಣವಾನಂದ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ನಗರದಲ್ಲಿ ವಿಶ್ವಕಮ೯ ಜಗದ್ಗುರು ಭಾವೈಕ್ಯತೆಯ ಹರಿಕಾರ ಸದ್ಗುರು ಮೌನೇಶ್ವರರ ದ್ವಿತೀಯ ಜಾತ್ರಾ ಮಹೋತ್ಸವದಲ್ಲಿ ಮೌನೇಶ್ವರರ ಭಾವಚಿತ್ರದೊಂದಿಗೆ ಮಹಿಳೆಯರು ಹೊತ್ತ ಕುಂಭ ಮೇಳದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಸಿದ ಮೆರವಣಿಗೆಯ ನಂತರ ಕಾಯ೯ಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಧಮ೯ ಇಲ್ಲದವರ ಜೀವನ ಅಧಮ೯ ಎನಿಸಿಕೊಳ್ಳುತ್ತದೆ. ಮನುಷ್ಯನಿಗೂ ಪ್ರಾಣಿ ಪಕ್ಷಿಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಆಹಾರ, ನಿದ್ರೆ, ಭಯ, ಮೈಥುನ ಪ್ರಾಣಿ-ಪಕ್ಷಿಗಳಲ್ಲೂ ಮತ್ತು, ಮನುಷ್ಯರಲ್ಲೂ ಇದ್ದಂತೆ ಧಮ೯ವನ್ನು ಸಾಧಿಸಲು ಮನುಷ್ಯನಿರಬೇಕು ಎಂದರು.

ಕಾಮವೆಂಬುದು ಎರಡರಲ್ಲೂ ಇರುತ್ತದೆ. ಅದೇ ಕಾಮವನ್ನು ಜೀವನವೆಂದು ಭಾವಿಸಿದರೆ ಸಲ್ಲದು. ಪ್ರಾಣಿಗಳಿಗಿಂತ ಕೀಳುಮಟ್ಟದ ಜೀವನ ಮನುಷ್ಯ ಬದುಕುತ್ತಿರುವುದು ಪ್ರಸ್ತುತ ವಿದ್ಯಾಮಾನಗಳಲ್ಲಿ ಗೋಚರಿಸುತ್ತಿದೆ. ಇದರಿಂದ ಸಾಮಾಜಿಕವಾಗಿ, ರಾಜಕೀಯವಾಗಿ ಮನುಷ್ಯರಲ್ಲಿರುವ ನೈತಿಕತೆ ಉಡುಗಿ ಹೋದಂತಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದರು.

ಊರೆಲ್ಲಾ ಲಂಕವಾಗಿ ಮನೆ ಮನೆಗಳಲ್ಲಿ ರಾವಣರು ಹುಟ್ಟಿಕೊಳ್ಳುತ್ತಿದ್ದಾರೆ. ಇಂತಹ ಬೆಳವಣಿಗೆ ಇಂದಿನ ರಾಜಕೀಯ ಕ್ಷೇತ್ರದಲ್ಲಿ ಆಗುತ್ತಿರುವುದು ವಿಷಾದದ ಸಂಗತಿಯಾಗಿದ್ದು, ಮಹಾನ್ ಪುರುಷರ ನೆಪದಲ್ಲಿ ಧಮ೯ ಕಾಯ೯ಗಳು ನಡೆಸಬೇಕಾದ್ದು ಎಷ್ಟು ಅವಶ್ಯಕವೋ ಮನುಷ್ಯ ಕೂಡ ಅಸಾಧ್ಯವಾದುದ್ದನ್ನು ಮೀರಿ ಸಾಧಿಸಿದಾಗ ಮಾತ್ರ ಪ್ರಾಣಿಗಳಿಗಿಂತ ಮಿಗಿಲಾದ ಬದುಕು ಜೀವಿಸಿದಂತಾಗುತ್ತದೆ ಎಂದು ಹೇಳಿದರು.

ತ್ರಿಪುರಾಂತ ಗವಿ ಮಠದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾಯ೯ರು ಸಾನಿಧ್ಯ ವಹಿಸಿ ಮಾತನಾಡುತ್ತ, ಮನಸ್ಸಿನ ಕೊಳೆಯನ್ನು ತೊಳೆಯಲು ಶರಣರ ಅನುಭಾವಗಳನ್ನು ಅರಿತುಕೊಂಡು ಜೀಣಿ೯ಸಿಕೊಳ್ಳುವ ಶಕ್ತಿ ಹೊಂದಿರಬೇಕು. ಅಂದಾಗ ಮಾತ್ರ ಮನಸ್ಸು ಶುದ್ಧೀಕರಣಗೊಳ್ಳುತ್ತದೆ.

ಶಾಂತಿಯನ್ನು ಕದಡಿದ ಸಮಾಜದಲ್ಲಿ ಸಂಸ್ಕಾರ ಹೀನರಾಗಿ ಬಾಳದೇ, ಧಮ೯ದ ತಳಹದಿಯ ಮೇಲೆ ನಡೆದುಕೊಂಡು ಹೋಗುವಂತಾಗಬೇಕು. ಶರಣರ ತತ್ವ ಸಿದ್ಧಾಂತಗಳ ಮೇಲೆ ಜೀವನ ರೂಪಿಸಿಕೊಂಡು 12ನೇ ಶತಮಾನದಲ್ಲಿ ನೆಲೆಸಿದ್ದ ಶಾಂತಿಯನ್ನು ಪುನನಿ೯ಮಾಣ ಮಾಡಬೇಕಾದ್ದು ಪ್ರಸ್ತುತ ಸಂದಭ೯ಗಳಲ್ಲಿ ಅವಶ್ಯವಾಗಿದೆ ಎಂದು ಕರೆ ನೀಡಿದರು.

ಮಾಜಿ ಶಾಸಕ ಎಂ.ಜಿ ಮುೂಳೆ ಮುಖ್ಯ ಅತಿಥಿಗಳಾಗಿ ಮಾತನಾಡಿ, ಪ್ರಾಮಾಣಿಕವಾಗಿ ದುಡಿದು ಶರಣರ ಕಾಯಕವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಸಮಾಜ ವಿಶ್ವಕಮ೯ ಸಮಾಜವಾಗಿದೆ. ಕಾಲ ಹರಣವನ್ನು ಮಾಡದೇ ಕಾಯಕ ನಿಷ್ಠೆ, ಸದಾ ಕಾಯ೯ದಲ್ಲಿ ನಿರತರಾಗಿ ಧಾಮಿ೯ಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಂತಹ ಸಮಾಜದವರನ್ನು ಸಹಕಾರ ಮನೋಭಾವನೆಯಿಂದ ನೋಡಬೇಕು ಎಂದರು.

ಏಕದಂಡಗಿ ಮಠದ ಗುರುನಾಥ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶಿವ೯ಚನ ನೀಡಿದರು. ಹುಮನಾಬಾದ ಏಕದಂಡಗಿ ಶಾಖಾ ಮಠದ ಕುಮಾರ ಮಹಾಸ್ವಾಮಿಗಳು, ಹಿರನಾಗಾಂವ ಜೈ ಶಾಂತಲಿಂಗೇಶ್ವರ ಮಾಹಾಸ್ವಾಮಿಗಳು ಮಾತನಾಡಿ, ಜಾತ್ರೆಗಳು ಜನರನ್ನು ಒಂದುಗೂಡಿಸುವ ಸಂಗಮವಾಗಬೇಕು. ದ್ವೇಷ, ಅಸೂಯೆಗಳ ಜಾತ್ರೆ ನಡೆಯಬಾರದೆಂದು ಕರೆ ನೀಡಿದರು.

ರಾಜಾಬಾಗ ಸವಾರ ದಗಾ೯ದ ಖಾಜಾ ಜಿಯಾವುಲ್ ಹಸನ್ ಜಾಗೀರದಾರ, ತಾಲೂಕಾ ಪಂಚಾಯತ್ ಅಧ್ಯಕ್ಷ ಗುರುಲಿಂಗಪ್ಪಾ ಸೈದಾಪೂರೆ, ಖೇಳಗಿ ಎಇಇ ಜೈಪ್ರಕಾಶ ಪೊದ್ದಾರ್, ನಗರಸಭೆ ಅಧ್ಯಕ್ಷೆ ಮಂಗಲಾಬಾಯಿ ಉದರೆ, ತೋಟಂದ್ರ ಮಹಾಸ್ವಾಮಿಗಳು ಸುಲೇಪೇಟ್, ಜೆಡಿಎಸ್ ತಾಲೂಕಾಧ್ಯಕ್ಷ ಶಬ್ಬೀರ್ ಪಾಶಾ ಮುಜಾವರ್, ನರಸಪ್ಪಾ ಉಡಬಾಳ್, ಓಂ ಶಾಂತಿಯ ಬಿ.ಕೆ.ರೋಹಿದಾಸ, ಅಜು೯ನ್ ಕನಕ ಸೇರಿದಂತೆ ಮುಂತಾದ ಗಣ್ಯರು ವೇದಿಕೆಯಲ್ಲಿದ್ದರು.

ಉಮೇಶ ಪಾಂಚಾಳ ಕಾಯ೯ಕ್ರಮ ನಿರೂಪಿಸಿದರು. ವಿಜಯಕುಮಾರ ಪಾಂಚಾಳ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಕಾಯ೯ಕ್ರಮದಲ್ಲಿ ಪ್ರಮುಖರಾದ ತಿಪ್ಪಣ್ಣ ಪಾಂಚಾಳ, ಹರಿಶ್ಚಂದ್ರ ಪಾಂಚಾಳ, ಕಾಳಪ್ಪ ವಿಶ್ವಕಮ೯, ನರೇಂದ್ರ ಪಾಂಚಾಳ, ವಿರೇಶ ಪಾಂಚಾಳ, ನಾಗೇಶ ಪಾಂಚಾಳ, ವಿದ್ಾಧರ ಪಾಂಚಾಳ, ಸೂಯ೯ಕಾಂತ ಪಾಂಚಾಳ, ದೇವಿದಾಸ ಪಾಂಚಾಳ ಸೇರಿದಂತೆ ಮುಂತಾದ ಧಮ೯ ಸಮುದಾಯದವರು ಇದ್ದರು.

-----------------------------------

ಕಾಮೆಂಟ್‌ಗಳಿಲ್ಲ: