ಸೋಮವಾರ, ಫೆಬ್ರವರಿ 13, 2012

ಈಶಾನ್ಯ ಸಾರಿಗೆ ಸಂಸ್ಥೆಯ ವಾಹನಗಳು



ಸಕಾ೯ರಿ ಬಸ್ ಗಳಲ್ಲಿ ಪ್ರಯಾಣಿಕರಿಗೆ ಸಕ೯ಸ್ ಪ್ರಯಾಣ
ಬಸವಕಲ್ಯಾಣ-ಮಂಠಾಳ ನಡುವಿನ ಪ್ರಯಾಣಿಕರಿಗ ದುಸ್ಥಿತಿ ಯಾರೂ ಕೇಳದಂತಾಗಿದೆಃ ಉಸಿರುಗಟ್ಟಿಸುವ ಸ್ಥಿತಿಯಲ್ಲಿ ಪ್ರಯಾಣಿಸುತ್ತಿರುವ ವಿದ್ಯಾಥಿ೯ಗಳು
ಬಸವಕಲ್ಯಾಣ, ಫೆ. 9

ಈಶಾನ್ಯ ಸಾರಿಗೆ ಸಂಸ್ಥೆಯ ವಾಹನಗಳು ಸರಿಯಾದ ಸಮಯಕ್ಕೆ ಬಾರದೇ ಜನಸಾಮಾನ್ಯರು ಪರದಾಡುವಂಥ ಸ್ಥಿತಿ ತಾಲೂಕಿನ ಮಂಠಾಳ ಗ್ರಾಮದಲ್ಲಿ ನಿತ್ಯವೂ ಸಂಜೆ ಮತ್ತು ಬೆಳಗಿನಿಂದ ಸಾಯಂಕಾಲದವರೆಗೂ ಕಾಡುತ್ತಿದೆ. ಯಾರೂ ಕೂಡ ಕ್ಯಾರೇ ಎನ್ನುತ್ತಿಲ್ಲ. ಕಿಕ್ಕಿರಿದ ಬಸ್ ಗಳಲ್ಲಿ ಜೋತು ಬಿದ್ದು ಹೋಗುವ ಶಾಲಾ ಮಕ್ಕಳ ಸ್ಥಿತಿ ಮಾತ್ರ ಕರುಣಾಜನಕವಾಗಿದೆ.

ಬಸವಕಲ್ಯಾಣದಿಂದ ಮಂಠಾಳ ಮಾಗ೯ವಾಗಿ ಅದೇ ಮಂಠಾಳ ಮಾಗ೯ವಾಗಿ ಬಸವಕಲ್ಯಾಣಕ್ಕೆ ತಲುಪುವ ವಿ.ಕೆ. ಸಲಗರ ಬಸ್ ನಿತ್ಯವೂ ಬೆಳಿಗ್ಗೆ ಶಾಲಾ ಕಾಲೇಜು ವಿದ್ಯಾಥಿ೯-ವಿದ್ಯಾಥಿ೯ನಿಯರಿಗೆ ಹೊತ್ತೂಯ್ಯುತ್ತದೆ. ಇದೊಂದೇ ಬಸ್ ಗತಿ ಎನ್ನುವಂತೆ ಕಿಕ್ಕಿರಿದ ಜನ ಸಂದಣಿಯಲ್ಲಿ ದೂಡಿಕೊಂಡು ಹೋಗಬೇಕಾದ ಅನಿವಾಯ೯ ಕೂಡ ಅಷ್ಟೇ ಸಹಜವಾಗಿದೆ. ಇಂತಹ ಒದ್ದಾಟದಲ್ಲಿ ಮಕ್ಕಳ ಪರಿಸ್ಥಿತಿ ಎದುರಾಗಿರುವುದು ಯಾರೂ ಯೋಚಿಸಿದಂತಿಲ್ಲ ಎನ್ನುತ್ತಾರೆ ಸ್ಥಳೀಯರು. ಹಲವು ತಿಂಗಳುಗಳೇ ಕಳೆದರೂ ಯಾರೊಬ್ಬರೂ ಇತ್ತ ಚಿತ್ತ ಹರಿಸದೇ ಇರುವುದು ಕೂಡ ದುರಂತವಾಗಿದೆ.

ಸಮಯಕ್ಕೆ ಸರಿಯಾಗಿ ಬಾರದ ಈಶಾನ್ಯ ಸಾರಿಗೆ ವಾಹನಗಳು ಬಂದರೆ ಅಧ೯ ಗಂಟೆಯಲ್ಲೇ ನಾಲ್ಕಾರು ಬಸ್ ಒಟ್ಟೊಟ್ಟಿಗೆ ಖಾಲಿಖಾಲಿಯಾಗಿ ಸಾಗುತ್ತವೆ. ಅಲ್ಲಿಂದ ನಾಲ್ಕಾರು ಗಂಟೆಯಾದರೂ ಬರದೇ ಇರುವ ಬಸ್ ಗಳಿಗೆ ಕಾಯದೇ ಖಾಸಗಿ ವಾಹನಗಳನ್ನೆ ನೆಚ್ಚಕೊಂಡಿರಬೇಕಾದ ಪರಿಸ್ಥಿತಿ ಪ್ರಯಾಣಿಕರದ್ದಾಗಿದೆ. ಬಸವಕಲ್ಯಾಣದಿಂದ ಸಲಗರ ಮಾಗ೯ವಾಗಿ ಸಾಗುವ ಪ್ರಯಾಣಿಕರ ಗೋಳು ಯಾರೂ ಕೇಳುವವರಿಲ್ಲದೇ ಜೋತು ಬಿದ್ದು ಹೋಗುವ ಶಾಲಾ ಮಕ್ಕಳೇ ಇದಕ್ಕೆ ಸಾಕ್ಷಿಯಾಗುತ್ತಾರೆ.

ಬೆಳಿಗ್ಗೆ ಏಳರ ಸುಮಾರಿಗೆ ಯಲ್ಲದಗುಂಡಿ ಹಾಗೂ ಅಲಗೂಡ ಮಾಗ೯ವಾಗಿ ಬರುವ ಎರಡು ಬಸ್ ಹಾಗೂ ಹತ್ತರಗಾ, ಗಿಲಕಿ, ಮಾಗ೯ದಿಂದ ಬರುವ ಬಸ್ ಗಳು ಬಿಟ್ಟರೆ 7.30 ರಿಂದ 8ರ ಮಧ್ಯದಲ್ಲಿ ಬಸ್ ಗಳು ಏಕಕಾಲಕ್ಕೆ ಹೋಗಿ ಬಿಟ್ಟಿರುತ್ತವೆ. ಇದಾದ ನಂತರ ವಿ.ಕೆ. ಸಲಗರ ಬಸ್ 9 ಕ್ಕೆ ಮಂಠಾಳದಲ್ಲಿ ಪ್ರತ್ಯಕ್ಷಗೊಂಡರೂ ಇದರಲ್ಲಿ ನೂರಾರು ಶಾಲಾ ಕಾಲೇಜು ವಿದ್ಯಾಥಿ೯ಗಳಿಗೆ ನಿಂತುಕೊಳ್ಳಲು ಸಹ ಜಾಗವಿಲ್ಲದೇ ಜೋತುಬಿದ್ದು ಹೋಗಬೇಕಾದ್ದು ಅನಿವಾಯ೯ ಎದುರಾಗಿರುವುದು ಶೋಚನೀಯ ಸಂಗತಿ ಕೂಡ.

ಈ ಎಲ್ಲಾ ಪರಿಸ್ಥಿತಿ ನಿತ್ಯದ ಗೋಳಿನಲ್ಲಿ ಸರಿಯಾದ ಸಮಯಕ್ಕೆ ಶಾಲಾ ಕಾಲೇಜು ತಲುಪದ ವಿದ್ಯಾಥಿ೯-ವಿದ್ಯಾಥಿ೯ನಿಯರಿಗೆ ಶೈಕ್ಷಣಿಕ ಹಿನ್ನೆಡೆ ಆಗುತ್ತಿದೆ ಎಂಬುದು ಪಾಲಕರ ಅಳಲಾಗಿದೆ. ಬೆಳಗ್ಗಿನ ಸಮಸ್ಯೆ ಒಂದೆಡೆಯಾದರೆ ರಾತ್ರಿ ಬರುವ ಸಾರಿಗೆ ವಾನಗಳು ಒಂದರ ಹಿಂದೆ ಒಂದು ಸಾಯಂಕಾಲ 7 ರಿಂದ 8.30 ರವರೆಗೆ ಎಲ್ಲಾ ಬಸ್ ಗಳು ಬಂದು ಹೋಗಿರುತ್ತವೆ ಆಗ ಖಾಸಗೀ ವಾಹನಗಳಿಗೆ ದುಬಾರಿ ಹಣ ಕೊಟ್ಟು ಹೋಗಬೇಕಾದ್ದು ಸಂಕಟದ ಪರಿಸ್ಥಿತಿ ಪ್ರಯಾಣಿಕರದ್ದಾಗಿದೆ.

ಪ್ರಯಾಣಿಕರ ಪ್ರಯಾಸ ಯಾರೂ ಕೇಳದಂತಾಗಿರುವುದರಿಂದ ಬೇಕಾಬಿಟ್ಟಿ ದುಡ್ಡನ್ನು ವಸೂಲಿ ಮಾಡಿ ಬಿಟ್ಟು ಬರುವ ಅಪಿ ಟಂಟಂಗಳಿಗೇನು ಇಲ್ಲಿ ಕೊರತೆ ಇಲ್ಲ ಎನ್ನಬಹುದು. ಆದರೆ ದುಡ್ಡಿಲ್ಲದವರು ಏನು ಮಾಡಬೇಕು? ಎಂಬುದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಒಂದಿಷ್ಟು ಚಿಂತಿಸಿ ನೋಡಲೆಂಬುದು ನಿತ್ಯವೂ ಓಡಾಡುವ ಪ್ರಯಾಣಿಕರ ಆಕ್ರೋಷವಾಗಿದೆ. ಶಾಲಾ ಮಕ್ಕಳ ದೂರುಗಳಂತೂ ಸಾಕಷ್ಟಿವೆ.

ಇದ್ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದ ಇಲಾಖೆ ಬಸವಕಲ್ಯಾಣ ಮಾಗ೯ದಿಂದ ಮಂಠಾಳ, ಅಲಗೂಡ, ಕೋಹಿನೂರು, ಲಾಡವಂತಿ, ಚಿಟ್ಟಾ, ಭೋಸಗಾ, ಬಟಗಾರಾ, ಹತ್ತರಗಾ, ಸಲಗರಾ ಸೇರಿದಂತೆ ಮುಂತಾದ ಗ್ರಾಮಗಳ ಪ್ರಯಾಣಿಕರ ಸಮಸ್ಯೆಗಳತ್ತ ಸಾರಿಗೆ ಇಲಾಖೆಯ ಅಧಿಕಾರಿಗಳು ಲಕ್ಷ ವಹಿಸುವರೇ ಎಂಬುದು ಜನಸಾಮಾನ್ಯರ ಅಳಲಾಗಿದೆ.

ಸಮಯಕ್ಕೆ ಸರಿಯಾಗಿ ನಿತ್ಯವೂ ಹೋಗಬೇಕಾದ ಶಾಲಾ ಮಕ್ಕಳು ಉಸಿರುಗಟ್ಟಿಸುವಂಥ ಬಸ್ ಗಳಲ್ಲಿ ಹೋಗದಂದೆ ಹೆಚ್ಚುವರಿ ಬಸ್ ಗಳನ್ನು ಶಾಲಾ ಮಕ್ಕಳಿಗಾಗಿ ಸರಿಯಾದ ಸಮಯಕ್ಕೆ ಬಿಟ್ಟರೆ ನೆಮ್ಮದಿಯಿಂದ ಪ್ರಯಾಣಿಸಿ ಮತ್ತೆ ನಮ್ಮ ಮಕ್ಕಳು ಗೂಡು ಸೇರಿಕೊಳ್ಳಬಹುದು ಎಂಬುದು ಅನೇಕ ಪಾಲರಕರ ಮನವಿಯಾಗಿದೆ.

ಇದಕ್ಕೆ ಸಂಬಂಧಪಟ್ಟ ಇಲಾಖೆಯ ನಿಲ೯ಕ್ಷ ಧೋರಣೆ ಮಂಠಾಳ ಕ್ಷೇತ್ರದ ಜನಪ್ರತಿನಿಧಿಗಳು ಕೂಡ ಪ್ರಶ್ನಿಸದಂತಾಗಿದೆ ಎನ್ನುತ್ತಾರೆ ಸ್ಥಳೀಯರು. ಪ್ರಯಾಣಿಕರನ್ನು ಪರದಾಡುವಂಥ ಸ್ಥಿತಿಯನ್ನರಿತು ಇನ್ನು ಮುಂದಾದರೂ ಇಲಾಖೆ ಸ್ಪಂಧಿಸುವುದೇ ಎಂದು ಕಾದು ನೋಡಬೇಕಾಗಿದೆ.

ಕಾಮೆಂಟ್‌ಗಳಿಲ್ಲ: