ಸೋಮವಾರ, ಫೆಬ್ರವರಿ 13, 2012

ಪ್ರತಿಯೊಂದು ಕೆಲಸ ಕಾಯ೯ಗಳು ಕಾನೂನಿನ ಚೌಕಟ್ಟಿನಡಿ



ತಾಲೂಕಾ ಕಾನೂನು ಸೇವೆಗಳ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಹೊರವಲಯದ ಆಟೋ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಸಂಘಟಿತ ಕಾಮಿ೯ಕರ ಸಾಮಾಜಿಕ ಭದ್ರತೆ ಕಾಯ್ದೆಯಡಿ ಕಾನೂನು ಅರಿವು ನೆರವು ಕಾಯ೯ಕ್ರಮ ಉದ್ಘಾಟಿಸಿ ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ತಾಲೂಕಾ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷೆ ಎಂ.ಎಸ್.ಹಿರೇಮಠ ಮಾತನಾಡುತ್ತಿರುವುದು.

ಬಸವಕಲ್ಯಾಣ, ಫೆ. 10

ಅಸಂಘಟಿತ ಕಾಮಿ೯ಕರಿಗೆ ಸರಿಯಾದ ರೀತಿಯಲ್ಲಿ ಕಾಲಕಾಲಕ್ಕೆ ವೇತನ, ಇನ್ಸೂರೆನ್ಸ ಜಾರಿಯಾಗಬೇಕು. ಇದರಿಂದ ಅವರ ಬದುಕನ್ನು ಯಾವುದೇ ರೀತಿಯ ಸಂಕಷ್ಟಕ್ಕೆ ಒಳಗಾಗದಂತೆ ಜೀವನ ಸರಾಗವಾಗಿ ಸಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ತಾಲೂಕಾ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷೆ ಎಂ.ಎಸ್.ಹಿರೇಮಠ ಹೇಳಿದರು.

ತಾಲೂಕಾ ಕಾನೂನು ಸೇವೆಗಳ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಹೊರವಲಯದ ಆಟೋ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಸಂಘಟಿತ ಕಾಮಿ೯ಕರ ಸಾಮಾಜಿಕ ಭದ್ರತೆ ಕಾಯ್ದೆಯಡಿ ಕಾನೂನು ಅರಿವು ನೆರವು ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದು ಕೆಲಸ ಕಾಯ೯ಗಳು ಕಾನೂನಿನ ಚೌಕಟ್ಟಿನಡಿ ನಿವ೯ಹಿಸಿಕೊಂಡು ಹೋದರೆ ದುಡಿಯುವ ವಗ೯ಕ್ಕೂ ದುಡಿಸಿಕೊಳ್ಳುವ ವಗ೯ಕ್ಕೂ ಸುರಕ್ಷಿತವಾಗಿರುತ್ತದೆ. ಕಾಮಿ೯ಕರ ಜೀವನ ಸುಭದ್ರವಾಗಿರಲು ಪ್ರತ್ಯೇಕವಾದ ಕಾಯ್ದೆಗಳು ರೂಪಿಸಲಾಗಿದೆ ಎಂದು ವಿವರಿಸಿದರು.

ಯಾರನ್ನೂ ತೊಂದರೆಯಾಗದಂತೆ ನಡೆದುಕೊಂಡು ಕಾನೂನು ಬಾಹಿರ ವಿಚಾರಗಳಿಂದ ದೂರವಿದ್ದು, ಕಾಮಿ೯ಕರನ್ನು ಸಮಾನವಾಗಿ ಕಾಣುವಂತಾಗಬೇಕು. ಮಾಲೀಕ, ನೌಕರನೆಂಬ ಭೇದವನ್ನು ಮಾಡದೇ ಸಾಮಾಜಿಕ ಬೆಳವಣಿಗೆಗಳಲ್ಲಿ ಉತ್ತಮ ಕಾಯ೯ಗಳನ್ನು ಮಾಡಿದ್ದಲ್ಲಿ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗುವುದಿಲ್ಲ ಎಂದು ಎಚ್ಚರಿಸಿದರು.

ಸಿವಿಲ್ ನ್ಯಾಧೀಶರು ಮತ್ತು ಪ್ರಥಮ ದಜೆ೯ ನ್ಯಾಯಿಕ ದಂಡಾಧಿಕಾರಿ ಎಂ.ಆರ್. ಒಡೆಯರ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕಾನೂನಿಲ್ಲದ ಬದುಕು ಗುರುವಿಲ್ಲದ ವಿದ್ಯೆಯಂತಾಗುತ್ತದೆ. ಪ್ರತಿಯೊಂದು ಹಂತದಲ್ಲೂ ಕಾನೂನು ಒಳ್ಳೆಯದಕ್ಕಾಗಿ ನೆರವು ನೀಡುತ್ತದೆ. ಕೆಟ್ಟದ್ದಕ್ಕಾಗಿ ಶಿಕ್ಷೆಯನ್ನು ವಿಧಿಸುವುದಾಗುತ್ತದೆ ಎಂದರು.

ಕನಾ೯ಟಕ ಟೆಕನೋಕ್ರೆಟ್ಸ ಅಸೋಷಿಯನ್ ಅಧ್ಯಕ್ಷ ಅಸಂಘಟಿತ ಕಾಮಿ೯ಕರ ಬಗ್ಗೆ ಅವರ ಜೀವನವನ್ನು ಕುರಿತಾಗಿ ಸುಧೀಘ೯ವಾಗಿ ಮಾತನಾಡಿದರು. ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಚನ್ನಬಸಪ್ಪಾ ಹಾರಕೂಡೆ, ರಸೂಲ್ ಪಟೇಲ್, ಸಿಪಿಐ ಎನ್.ಡಿ.ಸವದಿ, ಸಿ. ಪಿಡಿತರಾವ, ರಾಜಕುಮಾರ ಮುಡಬಿ, ನಾಗೇಶ ಡೋಂಗ್ರೆ ವೇದಿಕೆಯಲ್ಲಿದ್ದರು.

ಕಾಯ೯ಕ್ರಮದಲ್ಲಿ ನ್ಯಾಯವಾದಿಗಳಾದ ಎಸ್.ಬಿ.ಮಾಶಾಳಕರ್, ವಿಜಯಲಕ್ಷ್ಮೀ ಹೂಗಾರ್, ಖಲೀಲ ಮಿಯ್ಯಾ,ಮಝರ್ ಆಶಿಫ್, ಜಮೀಲ ಮಾಮು, ಅಹ್ಮದ್ ಅಸ್ಫಾಕ್ ಸೇರಿದಂತೆ ಮುಂತಾದವರಿದ್ದರು. ಕಾಮಿ೯ಕರು ಸಹ ಪಾಲ್ಗೊಂಡಿದ್ದರು.

-------------------

ಕಾಮೆಂಟ್‌ಗಳಿಲ್ಲ: