ಶನಿವಾರ, ಫೆಬ್ರವರಿ 4, 2012

ದುಶ್ಚಟಗಳಿಂದ ಮುಕ್ತಿ ಹೊಂದಿ, ದುಗು೯ಣಗಳನ್ನು ಬಿಟ್ಟಾಗ ಸಮೖದ್ಧವಾದ ಜೀವನ ನಡೆಸಲು ಸಾಧ್ಯ

ಯೋಗ ಗುರು ಬಾಬಾ ರಾಮದೇವ ಯೋಗ ಸಾಧನೆಯ ನಕ್ಕು ಹಗುರಾಗಿಸಿಕೊಳ್ಳುತ್ತಿರುವ ಬಸವಕಲ್ಯಾಣ ಜನತೆ


ಸಮಾಜೋದ್ಧಾರಕ ದಲಿತಪರ ಚಿಂತಕ ಮಹಾನ ಸತ್ಪುರುಷನ ಕಮ೯ಭೂಮಿ ಕಲ್ಯಾಣದಲ್ಲಿ ಯೋಗ ಸಾಧನೆಯ ಕುರಿತು ಹೇಳಲು ಬಂದಿರುವ ನನಗೆ ಬಸವಣ್ಣನವರ ಜೀವನ ಸಾಧನೆಯನ್ನು ಕಂಡು ರೋಮಾಂಚಿತನಾಗಿದ್ದೇನೆ.

ಬಸವಕಲ್ಯಾಣಃ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ನೀಡಿದ ಸಂದೇಶವನ್ನು ಇಂದಿಗೂ ಪ್ರಸ್ತುತವಾಗಿದೆ. ಸಮಾಜೋದ್ಧಾರಕ ದಲಿತಪರ ಚಿಂತಕ ಮಹಾನ ಸತ್ಪುರುಷನ ಕಮ೯ಭೂಮಿ ಕಲ್ಯಾಣದಲ್ಲಿ ಯೋಗ ಸಾಧನೆಯ ಕುರಿತು ಹೇಳಲು ಬಂದಿರುವ ನನಗೆ ಬಸವಣ್ಣನವರ ಜೀವನ ಸಾಧನೆಯನ್ನು ಕಂಡು ರೋಮಾಂಚಿತನಾಗಿದ್ದೇನೆ. ಅಂತಹ ಮಹಾತ್ಮನ ಪುಣ್ಯಕ್ಷೇತ್ರದಲ್ಲಿ ನಾನು ಬಂದಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಯೋಗ ಗುರು ರಾಮದೇವ ಬಾಬಾ ಅಭಿಪ್ರಾಯಪಟ್ಟರು.

ನಗರದ ಥೇರ್ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಚಿತ ಯೋಗ ವಿಜ್ಞಾನ ರಾಷ್ಟ್ರ ನಿಮಾ೯ಣ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತ, ಭಕ್ತಿ ಧ್ಯಾನಗಳ ಮೂಲಕ ಕಮ೯ವನ್ನು ಮಾಡಬೇಕು. ಉತ್ತಮ ಸಮಾಜ ನಿಮಾ೯ಣಕ್ಕಾಗಿ ಸಂಪೂಣ೯ ಭ್ರಷ್ಟಾಚಾರ ನಿಮೂ೯ಲನೆ ಮಾಡಿದ್ದಾಗ ಮಾತ್ರ ರೋಗ ರಹಿತ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಜಾತಿ ರಹಿತ, ರೋಗ ರಹಿತ ಸಮಾಜ ನಿಮಾ೯ಣಕ್ಕೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದರು.

ವಿಶ್ವದ ಆಥಿ೯ಕ ಸ್ಥಿತಿಗತಿ ಬಲಪಡಿಸಬೇಕಾದರೆ ಭ್ರಷ್ಟಾಚಾರ ಮುಕ್ತವಾಗಬೇಕು. ನವ ರಾಷ್ಟ್ರ ನಿಮಾ೯ಣವಾಗಲು ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕು. ಸಾಮಾಜಿಕ ನ್ಯಾಯಕ್ಕಾಗಿ ಉದ್ಯೋಗ ಸಹಿತ ಜೀವನ ನಡೆಸುವಂಥ ವಾತಾವರಣ ಸೖಷ್ಠಿಯಾದಾಗ ಮಾತ್ರ ಸದೖಢ ಸಮಾಜ ನಿಮಾ೯ಣವಾಗುತ್ತದೆ.

ನಮ್ಮ ಪೂವ೯ಜರು ಯೋಗಿಗಳಾಗಿದ್ದರೂ ಆದರೆ ಇವತ್ತಿನ ದಿನಗಳಲ್ಲಿ ಅದೇ ಪೂವ೯ಜರ ಪೀಳಿಗೆ ರೋಗಿಗಳಾಗಿ ಭೋಗಿಗಳಾಗುತಿರವುದು ವಿಷಾದಕರವಾಗಿದೆ. ಅದಕ್ಕಾಗಿ ಯೋಗ ಜೀವನವನ್ನು ನಡೆಸುವುದರ ಮೂಲಕ ನಿರೋಗಿಯಾಗಿರಲು ಯೋಗ ಧ್ಯಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ್ದು ಪ್ರಸ್ತುತ ಸಂದಭ೯ಗಳಲ್ಲಿ ಅವಶ್ಯಕತೆಯಾಗಿದೆ.

ದುಶ್ಚಟಗಳಿಂದ ಮುಕ್ತಿ ಹೊಂದಿ, ದುಗು೯ಣಗಳನ್ನು ಬಿಟ್ಟಾಗ ಸಮೖದ್ಧವಾದ ಜೀವನ ನಡೆಸಲು ಸಾಧ್ಯವಾಗುತ್ತದೆ. ಯೋಗ ಸಾಧನೆಯಿಂದ ಬದುಕನ್ನು ರೂಪಿಸಿಕೊಳ್ಳಲು ನೆರವಾಗುತ್ತದೆ. ನಮ್ಮ ವ್ಯಕ್ತಿತ್ವಕೊಂದು ಹೊಸ ಮೆರುಗನ್ನು ತಂದುಕೊಡುತ್ತದೆ. ಬಸವಣ್ಣನವರು ಜಾತಿರಹಿತ ಸಮಾಜ ನಿಮಾ೯ಣಕ್ಕೆ ಸಂಕಲ್ಪವನ್ನು ಮಾಡಿದಂತೆ ಲಿಂಗಾಯತರಾದವರಿಂದ ಹಿಡಿದು ಎಲ್ಲಾ ವಗ೯ದವರು ಸಹ ಯೋಗಿಗಳಾಗಬೇಕು ಅಂದಾಗ ಬಸವಣ್ಣನವರ ಅನುಯಾಯಿಗಳೆಂದು ಹೇಳಿಕೊಳ್ಳುವುದಕ್ಕೆ ಅಥ೯ ಸಿಗುತ್ತದೆ ಎಂದರು.

ಸತ್ಯ ಶುದ್ಧ ಕಾಯಕದಿಂದ ಸದೖಢ ಶರೀರಕ್ಕೆ ಯೋಗಾಸನ ಮಹತ್ವಪೂಣ೯ವಾಗಿದೆ. ಪ್ರಾಣಾಯಾಮ ಮತ್ತು ಯೋಗಾಸನದ ಹತ್ತು ಹಲವು ಉಪಯೋಗಗಳಿಂದ ರೋಗಮುಕ್ತರಾಗಿರಲು ಸದುಪಯೋಗವಾಗುತ್ತದೆ. ದಯಾನಂದ ಸರಸ್ವತಿ ಮತ್ತು ಸ್ವಾಮಿ ವಿವೇಕಾನಂದರು ಯೋಗಿ ಪುರುಷರಾದಂತೆ ಬಸವಣ್ಣನವರು ಸಹ ಮಹಾನ್ ಯೋಗಿಗಳಾಗಿದ್ದರು. ಅಂತಹ ಸಾಧಕರ ಜೀವನವನ್ನು ಅನುಸರಿಸುವುದರ ಜೊತೆಗೆ ಬದುಕು ಸುಂದರವಾಗಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರತಿಯೊಬ್ಬರ ಆಹಾರ ಮತ್ತು ವಿಚಾರಗಳು ಶುದ್ಧವಾಗಿದ್ದರೆ ವ್ಯಕ್ತಿಯ ಜೀವನ ಬುದ್ಧನಂತೆ ಪ್ರಬುದ್ಧತೆ ಹೊಂದುತ್ತದೆ. ಸಂತುಷ್ಟ ಜೀವನಕ್ಕೆ ಯೋಗವೊಂದು ದಿವ್ಯಔಷಧವಾಗಿದೆ. ಯೋಗವಿಲ್ಲದ ಜೀವನ ರೋಗಕ್ಕೆ ಆಹ್ವಾನಿಸಿದಂತೆ. ಅದಕ್ಕಾಗಿ ಯೋಗ, ಧ್ಯಾನ ಬದುಕಿನ ಮಹತ್ವದ ಘಟ್ಟಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಚಳಂಬ ಪ್ರಣಾವನಂದ ಸ್ವಾಮಿಗಳು ಆಶಿವ೯ಚನ ನೀಡಿದರು. ಹಾರಕೂಡ ಚೆನ್ನವೀರ ಶಿವಾಚಾಯ೯ರು ನೇತೖತ್ವ ವಹಿಸಿದ್ದರು. ಡಾ. ಎಸ್.ಬಿ. ಮಹಾಜನ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಬಸವರಾಜ ಸ್ವಾಮಿ ಕಾಯ೯ಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಹುಲಸೂರು ಶಿವಾನಂದ ಮಹಾಸ್ವಾಮಿಗಳು, ಭಾತಂಬ್ರಾ ಶ್ರೀಗಳು, ತಡೋಳಾ ಶ್ರೀಗಳು, ಔಸಾ ಮಹಾರಾಜರು, ಘನಲಿಂಗ ರುದ್ರಮುನಿ ಶಿವಾಚಾಯ೯ರು, ಬಸವಮಹಾಮನೆಯ ಬಸವಪ್ರಭುಗಳು ಸೇರಿದಂತೆ ಮುಂತಾದ ಮಠಾಧೀಶರು ಗಣ್ಯರು, ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.



ಕಾಮೆಂಟ್‌ಗಳಿಲ್ಲ: