ಶನಿವಾರ, ಫೆಬ್ರವರಿ 4, 2012

ಮಠಾಧೀಶರು ತಮ್ಮ ಶರೀರವನ್ನು ಬತ್ತಿಯಂತೆ ಮಾಡಿಕೊಂಡು ಜಗತ್ತಿಗೆ ಬೆಳಕನ್ನು ನೀಡುವ ಮಹಾಮೇಧಾವಿಗಳಾಗಿರುತ್ತಾರೆ.


ಜಿಲ್ಲಾ ಕನಾ೯ಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ನಗರದ ಬಿಕೆಡಿಬಿ ಬಸವ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂಜ್ಯ ಲಿಂ. ಡಾ.ಚನ್ನಬಸವ ಪಟ್ಟದೇವರ 122ನೇ ಜಯಂತೋತ್ಸವ ಹಾಗೂ ಕನ್ನಡ ಜಾಗೖತಿ ಉತ್ಸವ ಕಾಯ೯ಕ್ರಮ ಮುನ್ನ ಪಟ್ಟದೇವರ ಭಾವಚಿತ್ರದೊಂದಿಗೆ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಬಾಜ, ಭಜಂತ್ರಿಗಳೊಂದಿಗೆ ಜನಸ್ತೋಮ.

ಜಿಲ್ಲಾ ಕನಾ೯ಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ನಗರದ ಬಿಕೆಡಿಬಿ ಬಸವ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂಜ್ಯ ಲಿಂ. ಡಾ.ಚನ್ನಬಸವ ಪಟ್ಟದೇವರ 122ನೇ ಜಯಂತೋತ್ಸವ ಹಾಗೂ ಕನ್ನಡ ಜಾಗೖತಿ ಉತ್ಸವ ಕಾಯ೯ಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ರೇವುನಾಯಕ ಬೆಳಮಗಿ ಮಾತನಾಡಿದರು.
-----------------------------------------------------------------------------------------
ಆಗರಬತ್ತಿ ತನ್ನ ತಾನಾಗಿಯೇ ಸುಟ್ಟು ಸುವಾಸನೆಯನ್ನು ಬೀರುವಂತೆ ಮಠಾಧೀಶರು ತಮ್ಮ ಶರೀರವನ್ನು ಬತ್ತಿಯಂತೆ ಮಾಡಿಕೊಂಡು ಜಗತ್ತಿಗೆ ಬೆಳಕನ್ನು ನೀಡುವ ಮಹಾಮೇಧಾವಿಗಳಾಗಿರುತ್ತಾರೆ. ಸಮಾಜ ಸುಧಾರಣೆಯ ಕೆಲಸ ಅವರಿಂದ ನಡೆಯುತಿರುತ್ತದೆ ಎಂದು ಪಶು ಸಂಗೋಪನಾ ಸಚಿವ, ಜಿಲ್ಲಾ ಉಸ್ತುವಾರಿ ರೇವುನಾಯಕ ಬೆಳಮಗಿ ಅಭಿಪ್ರಾಪಟ್ಟರು.

ಜಿಲ್ಲಾ ಕನಾ೯ಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ನಗರದ ಬಿಕೆಡಿಬಿ ಬಸವ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂಜ್ಯ ಲಿಂ. ಡಾ.ಚನ್ನಬಸವ ಪಟ್ಟದೇವರ 122ನೇ ಜಯಂತೋತ್ಸವ ಹಾಗೂ ಕನ್ನಡ ಜಾಗೖತಿ ಉತ್ಸವ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಠಾಧೀಶರುಗಳಲ್ಲಿ ಪಾಟಿ೯, ಪಕ್ಷ, ಜಾತಿ-ಭೇದ ಎಂಬುದಿರುವುದಿಲ್ಲ. ನಿಷ್ಕಲ್ಮಷ ಮನಸ್ಸಿನಿಂದ ಸಮಾಜ ಕಾಯ೯ಗಳನ್ನು ಕೈಗೊಂಡಿರುತ್ತಾರೆ. ಅಂತಹ ಮಠಮಾನ್ಯರಿಗೆ ಸಕಾ೯ರ ವಿಶೇಷ ಸ್ಥಾನಮಾನ ನೀಡಿ ಮಠಗಳನ್ನು ಬೆಳೆಸಬೇಕಾದ್ದು ಅವಶ್ಯವಾಗಿದೆ ಎಂದರು.

ಯಾರಿಗೂ ಯಾವುದೇ ಅಧಿಕಾರ ಶಾಶ್ವತ ಇರುವುದಿಲ್ಲ. ನಮ್ಮಧಿಕಾರವಧಿಯಲ್ಲಿ ಪ್ರಾಮಾಣಿಕವಾಗಿ ಸಮಾಜಕ್ಕಾಗಿ ದುಡಿದ ಪುಣ್ಯ ಪುರುಷರ ಜಯಂತಿ ಉತ್ಸವಗಳನ್ನು ಆಚರಿಸುವುದರೊಂದಿಗೆ ಅವರ ಜೀವನ ಸಾಧನೆಯನ್ನು ಪರಿಚಯಿಸುವ ಕಾಯ೯ ಮಾಡಬೇಕು. ಲಿಂ. ಡಾ. ಚನ್ನಬಸವ ಪಟ್ಟದೇವರು ಶರಣರ ಮಾಗ೯ದಶ೯ನದಲ್ಲಿ ನಡೆದು ಸಮಾಜೋದ್ಧಾರಕ್ಕಾಗಿ ಶ್ರಮಿಸಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಎಂ.ಜಿ.ಮೂಳೆ ಮಾತನಾಡಿ, ನಿಜಾಮರ ಕಾಲದಲ್ಲಿ ಕನ್ನಡ ಭಾಷೆ ಮತ್ತು ಕನ್ನಡದಲ್ಲಿ ಆಡಳಿತ ನಡೆಸುವುದು ಕಷ್ಟದ ಕೆಲಸವಾಗಿತ್ತು. ಅಂತಹ ಸಂದಭ೯ದಲ್ಲಿ ಶತಾಯುಷಿ ಲಿಂ. ಡಾ. ಚನ್ನಬಸವ ಪಟ್ಟದೇವರು ಕನ್ನಡದಲ್ಲಿ ಅಕ್ಷರ ದಾಸೋಹವನ್ನು ನೀಡಿ, ಸಮಾಜಕ್ಕಾಗಿ ದುಡಿದಿದ್ದಾರೆ. ಈ ಭಾಗವನ್ನು ಉಳಿಸಿ ಬೆಳೆಸಿದ್ದಾರೆ.

ಹೈದ್ರಾಬಾದ ಕನಾ೯ಟಕ ಭಾಗವನ್ನು ಉಳಿಸುವುದರಲ್ಲಿ ಶ್ರಮಿಸಿದ ಧೈಯ೯ಶಾಲಿ ವ್ಯಕ್ತಿತ್ವ ಹೊಂದಿದ ಅವರು, ಸಮಾಜದಲ್ಲಿ ಕನ್ನಡಪರ ವಾತಾವರಣ ನಿಮಿ೯ಸಲು ಶ್ರಮಿಸಿದ ಪುಣ್ಯ ಪುರಷರಾದ ಪಟ್ಟದೇವರ ಜಯಂತೋತ್ಸವ ಆಚರಿಸುವುದು ಎಲ್ಲರ ಕತ೯ವ್ಯವಾಗಿದೆ ಎಂದರು.


ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಆನಂದ ದೇವಪ್ಪ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, 12ನೇ ಶತಮಾನದ ಶರಣರು ಕೊಟ್ಟ ಕಲ್ಯಾಣದ ಕೊಡುಗೆ ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಹೋಗಲು ದುಡಿದಿದ್ದಾರೆ. ಆ ನಿಟ್ಟಿನಲ್ಲಿ ಬಸವಕಲ್ಯಾಣದಲ್ಲಿ ಅನುಭವ ಮಂಟಪವನ್ನು ಕಟ್ಟಿದ ಲಿಂ. ಡಾ.ಚೆನ್ನಬಸವ ಪಟ್ಟದೇವರ ಜಯಂತೋತ್ಸವ ಆಚರಣೆ ಪ್ರತಿವಷ೯ವೂ ನಡೆಯುವ ಬಸವಣ್ಣನವರ ಜಯಂತಿ ಉತ್ಸವದಂತೆ ನಡೆಸಬೇಕು.

ಶರಣರ ಮಾಗ೯ದಶ೯ನದಂತೆ ಲಿಂ. ಚನ್ನಬಸವ ಪಟ್ಟದೇವರು ಸಾಕಷ್ಟು ಶ್ರಮಿಸಿದವರಾಗಿರುವುದರಿಂದ ಮಾನವರಾಗಿ ನಾವು ಮಹಾತ್ಮರ, ಪುಣ್ಯ ಪುರುಷರ ಜಯಂತೋತ್ಸವ ಆಚರಿಸುವುದರಿಂದ ನಮ್ಮ ಜೀವನ ಸಾಥ೯ಕಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು ಮತ್ತು ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಮಹಾಸ್ವಾಮಿಗಳು ಆಶಿವ೯ಚನ ನೀಡಿದರು. ಪಂಚಾಕ್ಷರಿ ಶಾಸ್ತ್ರಿಗಳು ಗದಗ ಮಾತನಾಡಿದರು. ಕರವೇ ವಿಭಾಗೀಯ ಸಂಚಾಲಕ ಶಶಿಧರ ಕೋಸಂಬೆ ಪ್ರಾಸ್ತಾವಿಕ ಮಾತನಾಡಿದರು.

ಇದೇ ವೇಳೆ ಬಸವದಶಿ೯ನಿ ಕ್ಯಾಲೆಂಡರ್ ಬಿಡುಗಡೆ ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ ಮಾಡಿದರು. ಕಾಯ೯ಕ್ರಮದ ವೇದಿಕೆಯಲ್ಲಿ ಚನ್ನಬಸವೇಶ್ವರ ಗುರುಕುಲ ಶಾಲೆಯ ಮಕ್ಕಳಿಂದ ಹೋಗೋಣ ಭಾಲ್ಕಿಯ ಮಠಕ್ಕೆ ಎಂಬ ಹಾಡಿನೊಂದಿಗೆ ನೖತ್ಯ ನಡೆಯಿತು.

ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಚನ್ನಬಸವ ಪಟ್ಟದೇವರ ಭಾವಚಿತ್ರದ ಮೆರವಣಿಗೆಗೆ ಡಾ. ಬಸವಲಿಂಗ ಪಟ್ಟದೇವರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಶರಣರ ವೇಷಭೂಷಣಗಳನ್ನು ತೊಟ್ಟ ಶಾಲಾ ಮಕ್ಕಳು, ಡೊಳ್ಳು ಕುಣಿತ, ಜಾನಪದ ಗೀತೆಗಳೊಂದಿಗಿದ್ದ ಮಹಿಳೆಯರು ಗಮನ ಸೆಳೆಯುವಂತಿತ್ತು. ಮೆರವಣಿಗೆಯಲ್ಲಿ ಕರವೇ ಕಾಯ೯ಕತ೯ರು, ವಿವಿಧ ಪಕ್ಷದ ಗಣ್ಯರು, ನಾಗರಿಕರು ಭಜನಾ ಮಂಡಳಿ ಮಹಿಳೆಯರು ರಸ್ತೆಯುದ್ದಕ್ಕೂ ಸಹಸ್ರಾರು ಸಂಖ್ಯೆಯಲ್ಲಿದ್ದರು.

ವೇದಿಕೆಯಲ್ಲಿ ತಾಲೂಕಾ ಪಂಚಾಯತ್ ಅಧ್ಯಕ್ಷ ಗುರುಲಿಂಗಪ್ಪ ಸೈದಾಪೂರೆ, ಬಸವೇಶ್ವರ ದೇವಸ್ಥಾನ ಪಂಚ ಕಮೀಟಿ ಅಧ್ಯಕ್ಷ ಅನೀಲಕುಮಾರ ರಗಟೆ, ಮಾಜಿ ಜಿ.ಪಂ ಸದಸ್ಯ ನೀಲಕಂಠ ರಾಠೋಡ್, ಅಜು೯ನ ಕನಕ, ಜಿ.ಪಂ, ಸದಸ್ಯ ರವೀಂದ್ರರೆಡ್ಡಿ ಪಾಟೀಲ, ರವಿ ಚಂದನಕೇರೆ, ರಾಜು ಮಂಠಾಳೆ, ಶಶಿಕಾಂತ ದುಗೆ೯, ಡಾ. ಗವಿಸಿದ್ಧಪ್ಪ ಪಾಟೀಲ, ಆನಂದ ಹೊನ್ನಾನಾಯಕ, ಸೂಯ೯ಕಾಂತ ಚಿಲ್ಲಾಬಟ್ಟೆ ಮುಂತಾದವರಿದ್ದರು.

ಕರವೇ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳಕರ್ ಸ್ವಾಗತಿಸಿದರು. ಹಾಸ್ಯ ಕಲಾವಿದ ನವಲಿಂಗ ಪಾಟೀಲ ನಿರೂಪಿಸಿದರು. ಶಿವಾನಂದ ಹಿರೇಮಠ ವಂದಿಸಿದರು. ಕಾಯ೯ಕ್ರಮದಲ್ಲಿ ಮಹಾಂತಟ್ಟ ಮಠಪತಿ, ಸುಭಾಷ ಕೆಲಡೆ, ರಾಜಕುಮಾರ ಮಠಪತಿ, ಸುನೀಲ ದಳವೆ, ಸಾವನ್ ವಾಗಲೆ, ಸಂತೋಷ ತೋರಣಿಕರ್, ದಯಾನಂದ ಖಳಾಳೆ ಮುಂತಾದ ಗಣ್ಯರು ಇದ್ದರು.


ಕಾಮೆಂಟ್‌ಗಳಿಲ್ಲ: