ಶನಿವಾರ, ಫೆಬ್ರವರಿ 4, 2012

ಭಾರತ ದೇಶ ಮುಂದಿನ ದಿನಗಳಲ್ಲಿ ಅಗ್ರಗಣ್ಯವಾಗಿ ಮುಂದೊರೆಯುತ್ತದೆ :ಆಫ್ ಲೀವಿಂಗ್ ಸಂಸ್ಥಾಪಕ ರವಿಶಂಕರ ಗುರೂಜಿ

ರವಿಶಂಕರ ಗುರೂಜಿ ಧ್ಯಾನ, ಸತ್ಸಂಗದಲ್ಲಿರುವ ದೖಶ್ಯ

ಬಸವಕಲ್ಯಾಣಃ ಅಜ್ಞಾನ, ಅನ್ಯಾಯ, ಅಶುಚಿತ್ವ ದೂರ ಮಾಡಿದಾಗ ಮುಂದಿನ ಪೀಳಿಗೆಗೆ ಉತ್ತಮ ಜವಾಬ್ದಾರಿ ಕೊಟ್ಟು ಹೋಗಲು ಸಾಧ್ಯವಾಗುತ್ತದೆ. ಹೀಗಾದಾಗ ಮಾತ್ರ ಭಾರತ ದೇಶ ಮುಂದಿನ ದಿನಗಳಲ್ಲಿ ಅಗ್ರಗಣ್ಯವಾಗಿ ಮುಂದೊರೆಯುತ್ತದೆ ಎಂದು ಆಟ್೯ ಆಫ್ ಲೀವಿಂಗ್ ಸಂಸ್ಥಾಪಕ ರವಿಶಂಕರ ಗುರೂಜಿ ಅಭಿಪ್ರಾಯಪಟ್ಟರು.

ನಗರದ ಬಸವೇಶ್ವರ ಥೇರ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮಹಾಸತ್ಸಂಗ ಕಾಯ೯ಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ, ಸುಂದರ ಸಮಾಜ ನಿಮಾ೯ಣಕ್ಕಾಗಿ ದೇಶದ ಪ್ರತಿಯೊಬ್ಬ ನಾಗರಿಕರು ಸಂಕಲ್ಪವನ್ನು ಮಾಡಬೇಕಾಗಿದೆ. ಸ್ವಾಸ್ಥ್ಯ ಬದುಕಿಗೆ ಧ್ಯಾನ, ಪೂಜೆ, ಭಜನೆ ತುಂಬಾ ಅವಶ್ಯವಾಗಿದೆ. ಮುಂದೊರೆದ ದೇಶವೆಂದು ಹೇಳುವ ಅನೇಕ ರಾಷ್ಟ್ರಗಳಲ್ಲಿ 40 ರಿಂದ 50 ಪ್ರತಿಶತ ಜನ ಮಾನಸಿಕ ಅಸ್ವಸ್ಥೆಯಿಂದ ತೊಳಲಾಡುತಿದ್ದಾರೆ. ಎಷ್ಟೇ ಸಂಪತ್ತಿದ್ದರೂ ಅವರು ನಿತ್ಯವೂ ಬಳಲುತಿದ್ದಾರೆ.

ನಮ್ಮ ಭಾರತ ದೇಶ ಹಿಂದುಳಿದಿದೆ ಎಂದು ಹೇಳುವುದು ತಪ್ಪು. ಮಧ್ಯಪಾನ, ಜಾತಿಭೇದ, ಭ್ರಷ್ಟಾರವನ್ನು ಅಳಿಸಿ ಹೋದಾಗ ಮಾತ್ರ ಭಾರತ ದೇಶಕ್ಕಿಂತ ಮುಂದೊರೆದ ದೇಶ ಜಗತ್ತಿನಲ್ಲಿಯೇ ಯಾವುದೂ ಇಲ್ಲ ಎಂದು ಹೇಳಿದರು.

ಜಾತಿ ಭೇದವನ್ನು ಮರೆತು ಒಗ್ಗಟ್ಟಾಗಿ ಬದುವುದನ್ನು ಕಲಿಬೇಕು. ನಾವೆಲ್ಲಾ ಒಂದಾಗಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಮುಂದಾಗಬೇಕು. ಎಲ್ಲೆಂದರಲ್ಲಿ ಬೀಡು ಬಿಟ್ಟಿರುವ ಮಧ್ಯದ ನಿಷೇಧ ಮಾಡಬೇಕಾದ್ದು ಅವಶ್ಯವಾಗಿದೆ. ಸತ್ಸಂಗದ ನಶೆಯಲ್ಲಿ ಲೀನವಾಗುವುದರ ಮೂಲಕ ಶಿವನ ದ್ಯಾನದಲ್ಲಿ ಸಮಾಜ ಸುಧಾರಣೆಯ ಚಿಂತನೆಯನ್ನು ಮಾಡಬೇಕು.

ಜನ ಕಲ್ಯಾಣ, ಲೋಕ ಕಲ್ಯಾಣಕ್ಕಾಗಿ ಸತ್ಸಂಗದಂಥ ಕಾಯ೯ಕ್ರಮಗಳು ನಡೆಯಬೇಕಾದ್ದು ಬಹಳ ಅವಶ್ಯವಾಗಿದೆ. ಬೆಲ್ಲದ ಸಿಹಿಯಂತೆ ಜೀವನ ನಡೆಸಬೇಕು. ಮೇಲ್ನೋಟಕ್ಕೆ ಒಳ್ಳೆಯವರಂತೆ ಕಾಣದೇ ಒಳ ನೋಟದಲ್ಲಿ ಕೆಟ್ಟ ವಿಚಾರಗಳು ಮಾಡಬಾರದು ಎಂದರು.

ಮಧ್ಯದ ನಶೆಯಲ್ಲಿ ಜಗತ್ತನ್ನು ಮುಳುಗದೇ ಶಿವನ ಧ್ಯಾನವೆಂಬ ನಶೆಯಲ್ಲಿ ಸಮಾಜ ಸುಧಾರಣೆಯ ಚಿಂತನೆಗಳು ಎಲ್ಲರಲ್ಲಿ ಅಡಗಿರಬೇಕು. ಸ್ವಚ್ಛ ಭಾರತ, ಸಮೖದ್ಧ ಸಮಾಜ ನಿಮಾ೯ಣಕ್ಕೆ ನಾವೆಲ್ಲ ಪಣತೊಡೇಕಾದ್ದು ತುಂಬಾ ಅವಶ್ಯವಾಗಿದೆ. ಶಿವ ತತ್ವಗಳನ್ನು ಅರಿಯುವ ಮೂಲಕ ನಾವು ಬದುಕನ್ನು ಸಾಥ೯ಕಗೊಳಿಸಿಕೊಳ್ಳಬೇಕು.

ನಗುವುದು ಸಹಜ ಧಮ೯, ನಗಿಸುವುದು ಪರರ ಧಮ೯ ಡಿವಿಜಿ ಅವರು ಹೇಳುಂತೆ ನಾವು ಜೀವನದಲ್ಲಿ ನಗುವುದನ್ನು, ನಗಿಸುವುದನ್ನು ಕಲಿಯಬೇಕು. ಮಾನವನಿಗೆ ಮಾತ್ರ ನಗುವುದನ್ನು ಕಲಿಸಿ ಕೊಟ್ಟ ಪರಮಾತ್ಮನು ಯಾವ ಪ್ರಾಣಿ ಪಕ್ಷಿಗಳಿಗೂ ಸಹ ನಗುವುದು ಕಲಿಸಿಕೊಟ್ಟಿಲ್ಲ. ಅದಕ್ಕಾಗಿ ಮಾನವ ಜೀವನ ಬಹಳ ಶ್ರೇಷ್ಟವಾಗಿದೆ. ಜೀವನದಲ್ಲಿ ನಗುವುದನ್ನು ಕಲಿಯದಿದ್ದರೆ ನಾವು ಸುಕ್ಷಿತರಲ್ಲ, ಓದು ಬರಹ ಕಲಿತವಲ್ಲ ಎಂಬುದು ಸಾಬೀತುಗೊಳಿಸುತ್ತದೆ ಎಂದರು.

ಮನುಷ್ಯನ ಬೇಡಿಕೆಗಳು ಕಡಿಮೆಯಾಗಿ ಜವಾಬ್ದಾರಿ ಹೆಚ್ಚಾದರೆ ಜೀವನ ಸುಖಮಯವಾಗಿ ಸಾಗುತ್ತದೆ. ಜವಾಬ್ದಾರಿ ಹೆಚ್ಚಾಗಿ ಬೇಡಿಕೆಗಳು ಕಡಿಮೆಯಾಗಿದ್ದರೆ ಬದುಕು ಸಮೖದ್ಧವಾಗಿರುತ್ತದೆ. ನಮ್ಮ ಶರೀರವನ್ನು ದೇವರು ಕೊಟ್ಟ ಅದ್ಭುತ ಕೊಡುಗೆಯಾಗಿದೆ. ನೀರಲ್ಲಿ ಮೀನು ಇದ್ದಂತೆ ಗಾಳಿಯಲ್ಲಿ ಮಾನವ ಜೀವನ ಅಡಗಿದೆ. ಗಾಳಿ ಇದ್ದರೆ ಮಾತ್ರ ಬದುಕಲು ಸಾಧ್ಯವಾಗುತ್ತದೆ.

ಮಾನವನ ಶರೀರ ಬತ್ತಿಯಂತೆ ಇದ್ದರೆ ಮನಸ್ಸು ಬೆಳಗುವ ದೀಪದಂತೆ ಬಾಳನ್ನು ಬೆಳಗುತ್ತದೆ. ಮನಸ್ಸಿಗೆ ಬಂದ ವಿಚಾರಗಳನ್ನು ತಡೆಯದೇ ಬಂದು ಹೋಗುವ ವಿಚಾರಗಳು ತಾನು ತಾನಾಗಿಯೇ ಬಂದು ಹೋಗುವುದನ್ನು ತಡಯದೇ ಶಿವನ ಧ್ಯಾನ ಮಾಡುವುದರ ಮೂಲಕ ಆತ್ಮ ಶುದ್ಧಿ ಮಾಡಿಕೊಳ್ಳಕೊಳ್ಳಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಹುಲಸೂರಿನ ಶಿವಾನಂದ ಮಹಾಸ್ವಾಮಿಗಳು, ಹಾರಕೂಡ ಸಂಸ್ಥಾನ ಮಠದ ಚೆನ್ನವೀರ ಶಿವಾಚಾಯ೯ರು, ಘನಲಿಂಗ ರುದ್ರಮುನಿ ಶಿವಾಚಾಯ೯ರು, ಸಾಯಗಾಂವನ ಶ್ರೀಗಳು, ಬೆಟಬಾಲಕುಂದಾ ಶ್ರೀಗಳು ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕಾಯ೯ಕ್ರಮದ ಸಂಯೋಜಕ ಸುನೀಲ ಪಾಟೀಲ, ಸಂಜು ಕಾಳೇಕರ್, ಮಾಜಿ ಶಾಸಕ ಮಲವ್ಲಿಕಾಜು೯ನ ಖೂಬಾ, ಶಶಿಕಾಂತ ದುಗೆ೯, ರಾಜು ಮಂಠಾಳೆ ಮುಂತಾದವರಿದ್ದರು.

ಕಾಮೆಂಟ್‌ಗಳಿಲ್ಲ: