ಶನಿವಾರ, ಫೆಬ್ರವರಿ 4, 2012

ವಿಶ್ವಮಾನ್ಯರ ಸಂದೇಶಗಳಂತೆ ಸಾಗುತಿದ್ದೇನೆ: ಯೋಗಗುರು ಬಾಬಾ ರಾಮದೇವ

ಬಾಬಾ ರಾಮದೇವ ಮಾತನಾಡುತ್ತಿರುವುದು. ಈ ಸಂದಭ೯ದಲ್ಲಿ ಹಾರಕೂಡ ಚೆನ್ನಬಸವೇಶ್ವರ ಸಂಸ್ಥಾನದ ಚೆನ್ನವೀರ ಶಿವಾಚಾಯ೯ರು ಇದ್ದರು.


ಬಸವಕಲ್ಯಾಣ. ಡಿ. : ಬಸವಣ್ಣನವರು ಕೊಟ್ಟ ವಚನ ಸಾಹಿತ್ಯ ಅನುಭಾವಗಳಲ್ಲಿ ನಾನು ಭ್ರಷ್ಟಾಚಾರ ಮುಕ್ತ ಭಾರತ ನಿಮಾ೯ಣದ ಕಾಯ೯ವನ್ನು ಕೈಗೆತ್ತಿಕೊಂಡು ವಿಶ್ವಮಾನ್ಯರ ಸಂದೇಶಗಳಂತೆ ಸಾಗುತಿದ್ದೇನೆ ಎಂದು ಭಾರತ ಸ್ವಾಭಿಮಾನ ನಿಮಿತ್ಯ ಗುರುವಾರ ನಗರಕ್ಕೆ ಆಗಮಿಸಿದ ಸಂದಭ೯ದಲ್ಲಿ ಯೋಗಗುರು ಬಾಬಾ ರಾಮದೇವ ನುಡಿದರು.

ನಗರದ ಬಸವಧಮ೯ ಪೀಠ ಬಸವ ಮಹಾಮನೆಯ ಆವರಣದಲ್ಲಿ ಅನಾಥಾಲಯ ಮಕ್ಕಳು ಬಾಬಾ ರಾಮದೇವ ಅವರನ್ನು ಬರಮಾಡಿಕೊಂಡ ವೇಳೆ ಮಾತನಾಡುತ್ತ, ಇಡೀ ಜಗತ್ತಿನಲ್ಲಿಯೇ ಅತಿ ಎತ್ತರದ ವಿಶ್ವಗುರು ಬಸವಣ್ಣನವರ ಮೂತಿ೯ ಸ್ಥಾಪನೆ ಬಸವಕಲ್ಯಾಣದಲ್ಲಿ ಆಗುತಿರುವುದು ಹೆಮ್ಮೆಯ ವಿಷಯವಾಗಿದೆ. ಇಂತಹ ಕಾಯ೯ಕ್ಕೆ ಮೆಚ್ಚುವಂಥ್ಥದ್ದಾಗಿದೆ.

ಅನಾಥಾಲಯದ ಮಕ್ಕಳಿಗೆ ಅಭಯ ನೀಡಿ ಆಶಿವ೯ದಿಸಿದ ಅವರು ಬಸವೇಶ್ವರರಂಥ ಮಹಾತ್ಮರನ್ನು ಪಡೆದ ಕನಾ೯ಟಕ ರಾಜ್ಯ ಶ್ರೇಷ್ಠ ಅಧ್ಯಾತ್ಮದ ತವರೂರಾಗಿದೆ ಎಂದು ಬಣ್ಣಿಸಿದರು.

ಬಸವ ಮಹಾಮನೆ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ ಮತ್ತು ಬಸವಪ್ರಭು ಸ್ವಾಮಿಜಿಯವರು ಬಾಬಾರವರಿಗೆ ಸನ್ಮಾನ ಮಾಡಿ ಮಾತನಾಡಿ, ಭ್ರಷ್ಟಾಚಾರ ಮುಕ್ತ ಭಾರತ ನಿಮಾ೯ಣದ ಕನಸನ್ನು ಹೊತ್ತಿರುವ ಬಾಬಾ ರಾಮದೇವ ಗುರೂಜಿಯವರ ಭಾರತ ಸ್ವಾಭಿಮಾನ ಯಾತ್ರೆಗೆ ಪ್ರತಿಯೊಬ್ಬರೂ ಸಂಕಲ್ಪ ತೊಟ್ಟು ದುಡಿಯಬೇಕು ಎಂದು ಆಶಿಸಿದರು.

ಕಾಯ೯ಕ್ರಮದಲ್ಲಿ ಹಾರಕೂಡ ಚೆನ್ನವೀರ ಶಿವಾಚಾಯ೯ರು, ನ್ಯಾಯವಾದಿ ಗಂಗಶೆಟ್ಟಿ ಪಾಟೀಲ, ಶಿವರಾಜ ಪಾಟೀಲ ಅತಿವಾಳ, ರವಿಕಾಂತ ಬಿರಾದಾರ್, ಮಲ್ಲಿಕಾಜು೯ನ ಬಗ್ದೂರಿ, ಬಸವರಾಜ ಪಾಟೀಲ ಶಿವಪೂರ, ಚೆನ್ನಬಸಪ್ಪ ಹಾಲಹಳ್ಳಿ, ಗಣಪತಿರಾವ ಖೂಬಾ, ವೀರಶೆಟ್ಟಿ ಇಮಡಾಪೂರ್, ಸಂಜೀವಕುಮಾರ ಧನಶೆಟ್ಟಿ, ಶಿಲ್ಪ ಶ್ರೀಧರ ಮೂತಿ೯, ಗಿರಿಜಾ ಸಿದ್ಧರಾಮಪ್ಪ, ಜಗದೇವಿ ಗೋಟಾ೯, ಸುಶೀಲಾಬಾಯಿ ಹರನಾಳೆ, ಶ್ರೀದೇವಿ ಹುಡಗೆ, ಅಕ್ಕನಾಗಲಾಂಬಿಕಾ ನಿಗ೯ತಿಕ ಮಕ್ಕಳ ಕುಟೀರದ ಮಕ್ಕಳು ಸೇರಿದಂತೆ ರಾಷ್ಟ್ರೀಯ ಬಸವ ದಳದ ಕಾಯ೯ಕತ೯ರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ: