ಶನಿವಾರ, ಫೆಬ್ರವರಿ 4, 2012

ಜೀವನದಲ್ಲಿ ಅದ್ಭುತವಾದುದ್ದನ್ನು ಸಾಧಿಸುವುದು ರೂಢಿಸಿಕೊಳ್ಳಬೇಕು: ಚಕ್ರವತಿ೯ ಸೂಲಿಬೆಲೆ

ಬಸವಕಲ್ಯಾಣಃ ಯಾರಲ್ಲಿ ಸ್ವಾಭಿಮಾನ ಇರುತ್ತೋ ಆತ ಇಡೀ ಜಗತ್ತನ್ನು ಆಳಬಲ್ಲವನಾಗಿರುತ್ತಾನೆ. ಸ್ವಾಭಿಮಾನ ಸತ್ತು ಹೋದರೆ ಜಗತ್ತನ್ನು ಆಳುವುದಕ್ಕೆ ಸಾಧ್ಯವಿರುವುದಿಲ್ಲ ಎಂಬ ಸ್ವಾಮಿ ವಿವೇಕಾನಂದರ ವಾಣಿ ಪರಿಪಾಲಿಸಬೇಕು. ಸ್ವಾಭಿಮಾನ ಶುನ್ಯರಾಗಿ ಉಳಿಯದೇ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಭೂಮಿಗೆ ಹತ್ತಿರವಾಗುಳಿಯುವ ಕಾಯ೯ದಲ್ಲಿ ನಿರತರಾಗಿ ಮರದ ಬೇರುಗಳಂತೆ ನಮ್ಮ ವಿಚಾರಗಳು ಆಳವಾಗಿ ಬೇರೂರಿ ಹೆಮ್ಮರವಾಗಿ ಎತ್ತರಕ್ಕೆ ಬೆಳೆಯುವಂತರಾಗಬೇಕು ಎಂದು ಬೆಂಗಳೂರಿನ ರಾಮಕೖಷ್ಣ ಆಶ್ರಮದ ಚಿಂತಕ ಚಕ್ರವತಿ೯ ಸೂಲಿಬೆಲೆ ಅಭಿಪ್ರಾಯಪಟ್ಟರು.

ನಗರದ ಸದ್ಗುರು ಸದಾನಂದ ಮಠದ ಆವರಣದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಹಾಗೂ ತಾಲೂಕಿನ ವಿಕಾಸ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಬುಧುವಾರ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿಮಾ೯ಣದಲ್ಲಿ ಯುವಕರ ಪಾತ್ರ ಕುರಿತು ಜಾಗೖತಿ ಸಂದೇಶ ವಿಶೇಷ ಉಪನ್ಯಾಸ ಸಮಾರಂಭದಲ್ಲಿ ಮಾತನಾಡಿ, ಜೀವನದಲ್ಲಿ ಅದ್ಭುತವಾದುದ್ದನ್ನು ಸಾಧಿಸುವುದು ರೂಢಿಸಿಕೊಳ್ಳಬೇಕು. ಉತ್ತಮವಾದ ಕನಸುಗಳನ್ನು ಕಾಣಬೇಕು ಎಂದು ಕರೆ ನೀಡಿದರು.

ಜೀವನವನ್ನು ಅದ್ಭುತವಾಗಿ ರೂಪಿಸಿಕೊಳ್ಳಬೇಕಾದರೆ 5 ಆದಶ೯ಗಳನ್ನು ಪಾಲಿಸಬೇಕು. ಒಂದಾದರೂ ಸತ್ಯವನ್ನು ಹೇಳುತ್ತೇನೆಂಬ ಆದಶ೯ವೊಂದು ನಮ್ಮಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ. ಇದರಿಂದ ಬದುಕು ಸುಂದರಗೊಳ್ಳುತ್ತದೆ. ಮನಸ್ಸನ್ನು ಹೇಳಿದಂತೆ ಕೇಳಿದರೆ ಜೀವನದಲ್ಲಿ ಬದಲಾವಣೆ ಸಾಧ್ಯ. ಆದ್ದರಿಂದ ಸಾಮಾನ್ಯ ವ್ಯಕ್ತಿ ಅದ್ಭುತ ಎನಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ನವರಾಷ್ಟ್ರ ನಿಮಾ೯ಣಕ್ಕೆ ಯುವಕರ ಪಾತ್ರ ಪ್ರಮುಖವಾಗಿ ಬೇಕು ಎಂಬುದು ಹೇಳುವುದೇಷ್ಟು ಸೂಕ್ತವೋ ಅಷ್ಟೇ ಜಾಗೖತೆಯಿಂದ ದೇಶದಲ್ಲಿ ತಾಂಡವಾಡುತಿರುವ ಭ್ರಷ್ಟಾಚಾರವನ್ನು ಹತ್ತಿಕ್ಕಲು ಪ್ರಯತ್ನಿಸುವ ಯುವ ಶಕ್ತಿ ಮುಂದಾಗಬೇಕಾಗಿದೆ. ವಿಷಾದಕರ ಸಂಗತಿಯೆಂದರೆ ಪ್ರಸ್ತುತ ದಿನಗಳಲ್ಲಿ ನೂರಕ್ಕೆ ಮೂವತ್ತು ಜನ ಯುವಜನಾಂಗ ಕಾಲೇಜುಗಳಲ್ಲಿ ಕಾಲಹರಣ ಮಾಡಿಕೊಂಡು ವ್ಯಥ೯ ಜೀವನವನ್ನು ಸಾಗಿಸುತಿರುವುದು ವಿಷಾದಕರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹೈ.ಕ. ಪ್ರದೇಶಾಭಿವೖದ್ಧಿ ಮಂಡಳಿಯ ಅಧ್ಯಕ್ಷ ಅಮರನಾಥ ಪಾಟೀಲ ಉದ್ಘಾಟಿಸಿ ಮಾತನಾಡಿ, ಸಾಕಷ್ಟು ಕ್ಷೇತ್ರಗಳಲ್ಲಿ ಹಿಂದುಳಿದ ಪ್ರದೇಶ ಹೈದ್ರಾಬಾದ ಕನಾ೯ಟಕ ಭಾಗವು ನಿಜವಾದ ಅಥ೯ದಲ್ಲಿ ಮುಂದೊರೆದ ಪ್ರದೇಶವಾಗಿದೆ. ಇಲ್ಲಿನ ಭ್ವವ್ಯ ಪರಂಪರೆ ಇತಿಹಾಸವನ್ನು ಸಾರುವ ಶರಣರ ನಾಡಿನ ನೆಲದಿಂದ ಅನೇಕ ಪ್ರತಿಭಾವಂತರು ಹೊರಹೊಮ್ಮಿದ್ದಾರೆ. ಯುವಶಕ್ತಿಯ ಪಡೆಯ ಕೊರತೆ ಇಲ್ಲದ ಭಾಗದಲ್ಲಿ ರಾಜಕೀಯ ಇಚ್ಷಾಶಕ್ತಿಯ ಕೊರತೆ ಪ್ರಮುಖವಾಗಿರುವುದರಿಂದ ಈ ಭಾಗಕ್ಕೆ ಕಡೆಗಣಿಸಲಾಗುತಿದೆ. ಇದರಿಂದ ಹಿಂದುಳಿದ ಪ್ರದೇಶವೆಂಬುದು ವಾಡಿಕೆಯಾಗಿದೆ ಎಂದರು.

ಹೈ.ಕ. ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲಿಪಿಸಕೊಡಬೇಕೆಂದು ಹೋರಾಟ ಶುರುಮಾಡಿದವರಲ್ಲಿ ಬಸವರಾಜ ಪಾಟೀಲ ಸೇಡಂ ಅವರ ಕಾಯ೯ ಅನನ್ಯವಾಗಿದೆ. ಅಂತೆಯೇ ಸೂಲಿಬೆಲೆಯವರಂಥ ಯುವಶಕ್ತಿ ರಾಷ್ಟ್ರ ನಿಮಾ೯ಣದಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದೆ ಎಂದು ಬಣ್ಣಿಸಿದ ಅವರು, ಭವ್ಯ ಭಾರತದ ಭವಿಷ್ಟದ ನಿಮಾ೯ಣಕ್ಕಾಗಿ ಪ್ರತಿಯೊಬ್ಬ ಯುವಶಕ್ತಿ ಮುಂದಾಗುವುದರ ಮೂಲಕ ಕಂಕಣಬದ್ಧರಾಗಿ ರಾಷ್ಟ್ರ ನಿಮಾ೯ಣದ ಕನಸು ನನಸಾಗಿಸಬೇಕಾಗಿದೆ. ಎಲ್ಲರಿಗಿತಂ ಹೆಚ್ಚಿನ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದರು.

ಕಾಯ೯ಕ್ರಮದಲ್ಲಿ ಮಂಠಾಳ ಕ್ಷೇತ್ರದ ಜಿ.ಪಂ. ಸದಸ್ಯ ಸಂಜು ಕಾಳೇಕರ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶರಣಪ್ಪ ಬಿರಾದಾರ್, ಸಂಚಾಲಕ ಬಸವರಾಜ ವರಕಾಲೆ, ತಾಲೂಕಿನ ಎಲ್ಲಾ ಶಾಲಾ ಕಾಲೇಜು, ಸಂಘ ಸಂಸ್ಥೆಗಳ ಪ್ರಮುಖರು ವಿದ್ಯಾಥಿ೯ಗಳು ಭಾಗವಹಿಸಿದ್ದರು. ಸಮಾಜದ ಎಲ್ಲಾ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ: