ಮಂಗಳವಾರ, ಜೂನ್ 5, 2012

ಬಸವಕಲ್ಯಾಣಃ ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆಯ ಆಗರ


ಬಸವಕಲ್ಯಾಣ ಪಟ್ಟಣದ ಪ್ರಮುಕ ಬಸ್್ ನಿಲ್ದಾಣ ದಲ್ಲಿ ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ ಗಳು ಮುಖ್ಯರಸ್ತೆಯಿಂದಲೇ ತಿರುವು ಪಡೆದು ಬಂದು ನಿಲ್ದಾಣದಲ್ಲಿ ಆಶ್ರಯ ಪಡೆಯಬೇಕಾದ ಅನಿವಾಯ೯ತೆ.

ವೀರಣ್ಣ ಮಂಠಾಳಕರ್

ಬಸವಕಲ್ಯಾಣಃ  ನಗರದ ಹೊರವಲಯದಲ್ಲಿರುವ ಪ್ರಮುಖ ಬಸ್ ನಿಲ್ದಾಣದಿಂದ ಮುಚಳಂಬ, ಗೋಟಾ೯ ಹಾಗೂ ಹುಲಸೂರು ಮಾಗ೯ದಿಂದ ಭಾಲ್ಕಿ ಕಡೆ ಸಾಗುವ ಈಶಾನ್ಯ ಸಾರಿಗೆ ಸಂಸ್ಥೆ ವಾಹನಗಳಿಗೆ ಸೂಕ್ತ ನಿಲ್ದಾಣವಿಲ್ಲದೇ ಪರದಾಡುವಂತಿದ್ದರೂ ಸಂಬಂಧಪಟ್ಟವರು ಪಯಾ೯ಯ ವ್ಯವಸ್ಥೆಯನ್ನು ಮಾಡದೇ ಕಣ್ಮುಚ್ಚಿ ಕುಳಿತಿರುವುದು ವಿಪಯಾ೯ಸವಾಗಿದೆ.

ಮುಖ್ಯ ರಸ್ತೆಗೆ ಅಂಟಿಕೊಂಡಿರುವ ಸಂಬಂಧಿಸಿದ ಮಾಗ೯ಗಳಿಗೆ ಸಾಗಬೇಕಾದ ಸಕಾ೯ರಿ ವಾಹನಗಳು ಜನದಟ್ಟಣೆಯ ರಸ್ತೆಯ ಮೇಲಿಂದಲೇ ತಿರುವು ಪಡೆಯಬೇಕಾಗುತ್ತಿದೆ. ಇದರಿಂದ ಪ್ರಯಾಣಿಕರು ರಸ್ತೆ ದಾಟುವಾಗ ಪ್ರಾಣ ಭಯದಿಂದ ನಡೆದಾಡುವ ಸ್ಥಿತಿ ಯಾರೂ ಕೇಳದಂತಾಗಿದೆ.

ಹುಲಸೂರು ಮಾಗ೯ದ ಈ ಮುಖ್ಯರಸ್ತೆಯು ಎರಡೂ ಬದಿಯಿಂದ ಬರುವ ವಾಹನಗಳಿಗೆ ನಿಲ್ದಾಣಕ್ಕೆ ಬರುವ ಸಾರಿಗೆ ಸಂಸ್ಥೆಯ ಬಸ್್ಗಳಿಂದ ತೊದರೆಯುಂಟು ಮಾಡುವುದಲ್ಲದೇ ಇಲ್ಲಿಂದ ಓಡಾಡುವ ಪ್ರಯಾಣಿಕರು ಜೀವಭಯದಿಂದ ಚಲಿಸಬೇಕಾದ ಪರಿಸ್ಥಿತಿ ಸಂಬಂಧಪಟ್ಟ ಇಲಾಖೆಯವರು ಗಮನಿಸಿದಂತಿಲ್ಲ.

ಸುಸಜ್ಜಿತವಾದ ಬಸ್್ ನಿಲ್ದಾಣ ನಗರದಲ್ಲಿ ಇದೆ ಎಂಬ ನೆಮ್ಮದಿ ಒಂದೆಡೆ ಇದ್ದರೆ, ಇದೇ ಬಸ್ ನಿಲ್ದಾಣದ ಹಿಂದೆ ಹುಲಸೂರು ಮುಖ್ಯ ರಸ್ತೆಗೆ ಅಂಟಿಕೊಂಡಿರುವ ನಿಲ್ದಾಣದಲ್ಲಿ ಗೋಟಾ೯, ಮುಚಳಂಬ, ಹಾಗೂ ಹುಲಸೂರು ಮಾಗ೯ದ ಭಾಲ್ಕಿ ಕಡೆ ಸಾಗುವ ಸಾರಿಗೆ ವಾಹನಗಳು ಕಿಕ್ಕಿರಿದ ಪ್ರಯಾಣಿಕರನ್ನು ತುಂಬಿಕೊಂಡೇ ವಿಶ್ರಾಂತಿ ಪಡೆಯಲು ಆಗಮಿಸುತ್ತವೆ.

ಅಧೀಕವಾದ ವಾಹನ ಸಂಚಾರವಿರುವ ಈ ಮುಖ್ಯ ರಸ್ತೆಯ ಮೇಲೆ ಬಸ್ ನಿಲ್ದಾಣಕ್ಕೆ ಬಂದು ಹೋಗುವ ವಾಹನಗಳಿಗೆ ಬೇರೆ ಸುರಕ್ಷಿತವಾಗಿ ನಿಲ್ಲಲು ಸ್ಥಳವೇ ಇಲ್ಲದಂತಾಗಿ ಪರದಾಡಬೇಕಾಗಿದೆ. ಇಲ್ಲಿ ಇಲಾಖೆಯ ನಿಲ೯ಕ್ಷತನವೂ ಗೋಚರಿಸುವುದರಿಂದ ಪಯಾ೯ಯ ವ್ಯವಸ್ಥೆಗಾಗಿ ಸಂಬಂಧಪಟ್ಟವರಿಗೆ ಮನವಿ ಮಾಡುವುದಕ್ಕೂ ಮೀನಾಮೇಷ ಏಣಿಸುವಂತಾಗಿದೆ.

ಯಾವುದೇ ಸಂದಭ೯ದಲ್ಲಿ ಮುಖ್ಯರಸ್ತೆ ಮೇಲೆ ಓಡಾಡುವ ಹುಮನಾಬಾದ ಮಾಗ೯ದ ವಾಹನಗಳು ಮತ್ತು ಭಾಲ್ಕಿ ಕಡೆಯಿಂದ ಬರುವ ವಾಹನಗಳು ವೇಗದ ನಿಯಂತ್ರಣವನ್ನು ತಪ್ಪಿದರೆ ಮುಗಿಯಿತು. ಪ್ರಾಣಪಾಯ ಕಟ್ಟಿಟ್ಟಂತಾಗಿದೆ ಎನ್ನುತ್ತಾರೆ ವಿವಿಧೆಡೆ ಗ್ರಾಮಗಳಿಗೆ ಹೋಗುವ ಅನೇಕ ಪ್ರಯಾಣಿಕರು.

ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕರ ನಿಯಂತ್ರಣ ತಪ್ಪಿದರಂತೂ ಭಾರಿ ಪ್ರಮಾಣದ ಅಪಘಾತವಾಗುವುದರಲ್ಲಿ ಸಂಧೇಹವಿಲ್ಲ. ನಿತ್ಯವೂ ಇಲ್ಲಿಂದ ಪ್ರಯಾಣಿಸುವ ಪ್ರಯಾಣಿಕರ ಅಳಲನ್ನು ಯಾರೂ ಕೇಳಿಸಿಕೊಳ್ಳದಂತಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಕೇಳಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತವೆ.

ನಿಲ೯ಕ್ಷತನಕ್ಕೆ ಒಳಗಾಗಿರುವ ಕಾರಣ ಸಣ್ಣಪುಟ್ಟ ಅಪಘಾತಗಳು ಸಂಭವಿಸಿರುವುದಂತೂ ಮರೆಯಲಾಗದು. ಇದೇ ಬಸ್ ನಿಲ್ದಾಣದ ಹತ್ತಿರವೇ ಖಾಸಗಿ ವಾಹನಗಳ ಸಂಖ್ಯೆ ಕಡಿಮೆಯೇನು ಇಲ್ಲವೆಂಬಂತೆ ರಾಜಾರೋಷವಾಗಿ ಓಡಾಡುತ್ತವೆ. ಆದ್ದರಿಂದ ಪೊಲೀಸ್್ ಇಲಾಖೆ ಸಹ ಇತ್ತ ಗಮನ ಹರಿಸಬೇಕಾಗಿದೆ ಎನ್ನುತ್ತಾರೆ ಪ್ರಮುಖರು.

ಜನದಟ್ಟಣೆಯ ಪ್ರದೇಶದಲ್ಲಿ ಕೂಡಿರುವ ಪ್ರಮುಖ ಬಸ್್ ನಿಲ್ದಾಣದಲ್ಲಿ  ಆಟೋಗಳ ಕಿರಿಕಿರಿಯಂತೂ ಕೇಳುವವರೇ ಇಲ್ಲ. ಸಾರಿಗೆ ವಾಹನಗಳು ಬಂದು ನಿಲ್ಲುತಿದ್ದಂತೆ ಪ್ರಯಾಣಿಕರನ್ನು ಇಳಿಯುವಾಗಲೇ ಬಾಗಿಲಲ್ಲೇ ಬಂದು ನಿಲ್ಲುವ ಆಟೋಗಳಿಂದ ಅಪಾಯ ಖಚಿತ ಎನ್ನುವಂತಾಗಿದೆ.

ಸಾರಿಗೆ ಸಂಸ್ಥೆಯ ಅಧಿಕಾರಿಗಳು ದಿವ್ಯ ನಿಲ೯ಕ್ಷತನದಿಂದ ಕಾಲ ಕಳೆಯದೇ, ಪ್ರಯಾಣಿಕರು ತಮ್ಮ ಜೀವ ಮುಷ್ಠಿಯಲ್ಲಿ ಹಿಡಿದುಕೊಂಡು ಓಡಾಡುವಂಥ ಪರಿಸ್ಥಿತಿ ಎದುರಾಗಿರುವುದನ್ನು ಮನಗಾಣಬೇಕು ಎಂಬುದು ಸಾವ೯ಜನಿಕರ ಅಭಿಪ್ರಾಯವಾಗಿದೆ.

ಸಂಬಂಧಪಟ್ಟವರಲ್ಲಿ ಈ ಸಮಸ್ಯೆ ಕುರಿತು ಕೂಡಲೇ ಮನವಿಸಬೇಕಾದ್ದು ಇಲಾಖೆಯ ಕತ೯ವ್ಯ ಹೌದು.  ಮೇಲಿಂದ ಮೇಲೆ ನಗರ ಅಭಿವೖದ್ಧಿಯಲ್ಲಿ ಸಾಗುತ್ತಿದೆ ಎಂದು ಬೀಗಿಕೊಳ್ಳುವ  ಜನಪ್ರತಿನಿಧಿಗಳು ಇಂತಹ ಸಮಸ್ಯೆಗಳತ್ತ ಗಮನ ಹರಿಸಿ ಎಲ್ಲಾ ಜನಸಾಮಾನ್ಯರ ಕುಂದು ಕೊರತೆಗಳ ಆಶಯದಂತೆ ಸ್ಪಂಧಿಸುವಂತಾಗಲಿ ಎಂಬ ನಿರೀಕ್ಷೆಯಲ್ಲಿ ಪ್ರಯಾಣಿಕರಿದ್ದಾರೆ.

ಕಾಮೆಂಟ್‌ಗಳಿಲ್ಲ: