ಮಂಗಳವಾರ, ಜೂನ್ 5, 2012

ಹಾಳು ಕೊಂಪೆಯಾಗಿರುವ ಹುಲಸೂರು ಬಸ್ ನಿಲ್ದಾಣ

 , ಕೆಲವು ವಷ೯ಗಳ ಹಿಂದೆ ಹುಲುಸೂರು ಮತಕ್ಷೇತ್ರವಾಗಿದ್ದ ಸಂದಭ೯ದಲ್ಲಿ ಗ್ರಾಮದ ಹೊರ ವಲಯದಲ್ಲಿ ಕಟ್ಟಲ್ಪಟ್ಟ ಬಸ್್ ನಿಲ್ದಾಣ ಬಳಕೆಗೆ ಬಾರದೇ ಹಾಳು ಕೊಂಪೆಯಾಗಿರುವುದು.

  ಬಸವಕಲ್ಯಾಣ ತಾಲೂಕಿನ ಹುಲಸೂರು ಗ್ರಾಮದಲ್ಲಿ ಎದುರಿಸುತ್ತಿರು ಪ್ರಯಾಣಿಕರಿಗೆ ಬಸ್್ ನಿಲ್ದಾಣದ ಕೊರತೆಯಿಂದಾಗಿ ಯಾವುದೇ ಕಟ್ಟಡವಿಲ್ಲದ ಮುಖ್ಯ ರಸ್ತೆಯ ಪಕ್ಕದ ಜಾಗದಲ್ಲಿ, ಪೊಲೀಸ್್ ಠಾಣೆ ಎದುರು ವಾಹನಗಳಿಗಾಗಿ ಕಾದು ನಿಂತಿರುವವರು ಹಾಗೂ ಖಾಸಗೀ ವಾಹನಗಳನ್ನು ಕಾಣಬಹುದು.

ವೀರಣ್ಣ ಮಂಠಾಳಕರ್

ಬಸವಕಲ್ಯಾಣ, ಜೂ. 3

ಬಸವಕಲ್ಯಾಣಃ ತಾಲೂಕಿನ ಹುಲಸೂರಿನಿಂದ ತಾಲೂಕಾ ಕೇಂದ್ರಗಳಿಗಾಗಲಿ ಇನ್ಯಾವುದೇ ಗ್ರಾಮಗಳಿಗೆ ತೆರಳಬೇಕಾದ ಪ್ರಯಾಣಿಕರಿಗೆ ಕನಿಷ್ಠ ಪಕ್ಷ ಕುಳಿತುಕೊಳ್ಳಲು ಆಸರೆ ಇಲ್ಲ. ಬಸ್್ ನಿಲ್ದಾಣವಿಲ್ಲದೇ ಪರದಾಡುವಂಥ ಸ್ಥಿತಿ ಹಲವು ವಷ೯ಗಳಿಂದ ಸಹ ಪ್ರಯಾಣಿಕರು ಎದುರಿಸುತಿದ್ದರೂ ಯಾರೂ ಕೇಳದಂತಾಗಿದೆ.

ಬಸ್್ ನಿಲ್ದಾಣದ ಸಮಸ್ಯೆ ಅನುಭವಿಸುತ್ತಿರುವ ಪ್ರಯಾಣಿಕರು ಜನಪ್ರತಿನಿಧಿಗಳ ಅರಿವಿಗೆ ಬರದೇ ಇರುವುದಕ್ಕೆ ಕಾರಣ ಗೊತ್ತಾಗುತ್ತಿಲ್ಲ. ಗ್ರಾಮದ ಹೊರವಲಯದಲ್ಲಿ ಹುಲಸೂರು ಮತಕ್ಷೇತ್ರವಾಗಿದ್ದ ಸಂದಭ೯ದಲ್ಲಿ ಕಟ್ಟಲ್ಪಟ್ಟ ಬಸ್್ ನಿಲ್ದಾಣವೊಂದು ಕೆಲಸಕ್ಕೆ ಬರದಂತಾಗಿದೆ. ಇದೀಗ ಅದು ಹಾಳು ಕೊಂಪೆಯಾಗಿ ರಾತ್ರಿ ಸಮಯದಲ್ಲಿ ಇಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನಲು ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ ಎನ್ನಬಹುದು.

ಕೆಲವೇ ವಷ೯ಗಳ ಹಿಂದೆ ಕಟ್ಟಲ್ಪಟ್ಟ ಬಸ್್ ನಿಲ್ದಾಣ ಹಾಳು ಕೊಂಪೆಯಾಗಿರುವುದು ಶಾಸಕರ ಗಮನಕ್ಕೆ ಬರದಿರುವುದಕ್ಕೆ ದುರಾದೖಷ್ವವೇ ಸರಿ. ಆದರೆ ಜನಪಯೋಗಿ ಕಾಯ೯ಕ್ಕೆ ಬಳಕೆಯಾಗುತ್ತಿಲ್ಲ ಎಂಬುದಕ್ಕೆ ನಿತ್ಯವೂ ಬಿಸಿಲಿರಲಿ, ಮಳೆ, ಗಾಳಿಗೆ ಮೈಯೊಡ್ಡಿ ನಿಲ್ಲುವಂಥ ವಾತಾವರಣ, ನೆರಳಿಗಾಗಿ ಪರಿತಪಿಸುವ ಮಕ್ಕಳು ಮಹಿಳೆಯರೇ ಇದಕ್ಕೆ ಸಾಕ್ಷಿಯಾಗಬಲ್ಲರು.

ಮುಖ್ಯ ರಸ್ತೆಯಲ್ಲಿರುವ ಪೊಲೀಸ್್ ಠಾಣೆಯ ಮುಂಭಾಗದಲ್ಲೇ ಜನ ನಿಂತುಕೊಳ್ಳಬೇಕಾಗಿದೆ. ಇಂತಹ ಸಂಕಷ್ಟದಲ್ಲಿರುವವರು ಅಕ್ಕಪಕ್ಕದಲ್ಲಿರುವ ಹೊಟೇಲ್್ಗಳಿಗೆ ನುಗ್ಗಿ ಒಂದಿಷ್ಟು ದಣಿವಾರಿಸಿಕೊಳ್ಳಲು ಸಹ ಹಣ ತೆತ್ತಬೇಕಾದ್ದು ನಿಜ. ತಾವು ಹೋಗಬೇಕಾದ ವಾಹನಗಳಿಗೆ ಬಸ್್ ನಿಲ್ದಾಣವಿಲ್ಲದೇ ಕಾದು ನಿಲ್ಲಬೇಕಾದ ಸ್ಥಿತಿ ಚಿಂತಾಜನಕವಾಗಿದೆ.

ಇಲ್ಲಿ ಬಂದು ಹೋಗುವ ಪ್ರಯಾಣಿಕರೆಲ್ಲಾ ಬೆವರಳಿಸಿಕೊಂಡೇ ಬಸ್್ ಹತ್ತಬೇಕು. ಯಾಕೆಂದರೆ ಯಾವುದೇ ನೆರಳಿನಾಸರೆ ಇಲ್ಲದೇ ಪ್ರಯಾಣಿಕರ ಗೋಳು ಯಾರೂ ಕೇಳದಂತಾಗಿದೆ. ಜನಪ್ರತಿನಿಧಿಗಳು ಈ ಸಮಸ್ಯೆ ಕುರಿತು ಗಂಭೀರವಾಗಿ ತೆಗೆದುಕೊಳ್ಳದೇ ಇರುವುದಕ್ಕೆ ಅನೇಕ ಹಿರಿಯ ಜೀವಿಗಳು ಆಕ್ರೋಷವನ್ನು ವ್ಯಕ್ತಪಡಿಸುತ್ತಾರೆ.

ಬಸವಕಲ್ಯಾಣ ಹಾಗೂ ಭಾಲ್ಕಿ ತಾಲೂಕು ಕೇಂದ್ರಗಳಿಂದ ಬಂದು ಹೋಗುವ ಈಶಾನ್ಯ ಸಾರಿಗೆ ಸಂಸ್ಥೆಯ ವಾಹನಗಳು ಮತ್ತು ಖಾಸಗೀ ವಾಹನಗಳು ಇದೇ ಹುಲಸೂರಿನ ಪೊಲೀಸ್್ ಠಾಣೆ ಎದುರಿನ ಬಸ್್ ನಿಲ್ದಾಣದಲ್ಲಿ ಅಂದರೆ, ಅಧಿಕೖತವಾಗಿ ಕಟ್ಟಡವಿಲ್ಲದಂಥ ಮುಖ್ಯ ರಸ್ತೆಯ ಪಕ್ಕದ ಬಸ್್ ನಿಲ್ದಾಣದಲ್ಲಿ ವಾಹನಗಳೆಲ್ಲ ಬಂದು ಸೇರುತ್ತವೆ.

ಜನಸಾಮಾನ್ಯರ ಮೂಲ ಸೌಲಭ್ಯಗಳತ್ತ ಚಿಂತನೆ ನಡೆಸುವ ನಾಯಕರುಗಳ ಕೊರತೆ ಬಸವಕಲ್ಯಾಣ ತಾಲೂಕಿನಲ್ಲಿ ಪ್ರಮುಖವಾಗಿ ಎದ್ದು ಕಾಣುತ್ತಿರುವುದಕ್ಕೆ ಮೇಲಿಂದ ಮೇಲೆ ಕೇಳಿ ಬರುತ್ತಲೇ ಇರುವ ಸಾವ೯ಜನಿಕರ ಅಳಲು ಇದಾಗಿದೆ. ಮಾಧ್ಯಮಗಳ ಮೂಲಕವಾದರೂ ಹೇಳಿಕೊಳ್ಳುವಂಥ ಅನಿವಾಯ೯ತೆ ಎದುರಾಗಿದೆ ಎಂದು ಗ್ರಾಮದ ಪ್ರಮುಖರು ದೂರುತ್ತಾರೆ.

ಪ್ರಯಾಣಿಕರಿಗೆ ಅನುಕೂಲವಾಗುವಂಥ ಬಸ್್ ನಿಲ್ದಾಣದ ನಿಮಾ೯ಣ ಸಾಧ್ಯವಾಗುವುದೆ ಎಂದು ಕಾದು ನೋಡುವಂತಾಗಿದೆ. ಚುನಾವಣೆಗಳು ಬಂದಾಗಲಷ್ಟೇ ನೆನಪಾಗುವ ನಾವು ಸಾವ೯ಜನಿಕರ ಮೂಲ ಸೌಲಭ್ಯಗಳ ಕೊರತೆಗಳಿಗೆ ಸ್ಪಂಧಿಸುವ ನಾಯಕರುಗಳ ಸ್ಪಂಧನೆಗೆ ಎದುರು ನೋಡುವಂತಾಗಿದೆ ಎನ್ನುತ್ತಾರೆ ಸಮಾಜ ಚಿಂತಕರು.

ಇನ್ನೊಂದು ಪ್ರಮುಖವಾದ ಸಂಗತಿಯೆಂದರೆ, ಹುಲಸೂರು ಗ್ರಾಮದಲ್ಲಿ ಪ್ರತಿ ವಷ೯ ನಡೆಯುವ ಗುರು ಬಸವೇಶ್ವರ ಸಂಸ್ಥಾನ ಮಠದ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಕಾ೯ರಿ ವಾಹನಗಳು ಬಿಟ್ಟರೆ ಬೇರೆ ದಿನಗಳಲ್ಲಿ ಖಾಸಗೀ ವಾಹನಗಳ ದಬಾ೯ರಿನಲ್ಲೇ ನಿತ್ಯವೂ ಪ್ರಯಾಣಿಸಬೇಕಾದ ಅನಿವಾಯ೯ತೆ ಇಲ್ಲಿನ ಜನಸಾಮಾನ್ಯರದ್ದಾಗಿದೆ

ಹುಲಸೂರಿನಿಂದ ಬೇರೆ ಮಾಗ೯ಗಳಿಗೆ ನಿಗ೯ಮಿಸಲು ಖಾಸಗೀ ವಾಹನಗಳ ಮೊರೆ ಹೊಕ್ಕದೇ ಬೇರೆ ಗತಿ ಇಲ್ಲ. ಒಂದೆರಡು ಸಕಾ೯ರಿ ಬಸ್್ ಹೊರತುಪಡಿಸಿ ಮ್ಯಾಕ್ಸಿಕ್ಯಾಬ್್ ಖಾಸಗೀ ವಾಹನಗಳೇ ಇಲ್ಲಿಂದ ಸಂಚರಿಸುತ್ತವೆ ಎಂಬ ದೂರುಗಳಿದ್ದರೂ ಸಕಾ೯ರಿ ವಾಹನಗಳ ಸೌಲಭ್ಯ ಅಷ್ಟಕಷ್ಟೇ ಎನ್ನಬಹುದು.

ಗ್ರಾಮಕ್ಕೆ ಸಕಾ೯ರಿ ವಾಹನಗಳಿಲ್ಲ ಎಂಬ ಕಾರಣಕ್ಕೇನಾದರೂ ಬಸ್್ ನಿಲ್ದಾಣದ ಅವಶ್ಯಕತೆಗೆ ಕಣ್ಮುಚ್ಚಿ ಕುಳಿತ್ತಿದ್ದಾರೆಯೇ ಎಂಬ ಅನುಮಾನಗಳು ಕಾಡುತ್ತವೆ. ಸಂಬಂಧಪಟ್ಟವರು ಇದಕ್ಕೇನಂತಾರೆ ಎಂಬುದು ಸಹ ಕಾದು ನೋಡಬೇಕಾಗಿದೆ. ಅನೇಕ ಅನುಮಾನಗಳಿಗೆ ಎಡೆಮಾಡಿಕೊಡುತ್ತಿರುವ ಇಲ್ಲಿನ ಮೂಲ ಬಸ್್ ನಿಲ್ದಾಣದ ಸಮಸ್ಯೆ ಬಗೆಹರಿಸುವವರೇ ಎಂದುನಿರೀಕ್ಷಿಸೋಣ.


ಕಾಮೆಂಟ್‌ಗಳಿಲ್ಲ: