ಮಂಗಳವಾರ, ಜೂನ್ 5, 2012

 ರಸ್ತೆ ಅಗಲೀಕರಣ ನಡೆಯುತ್ತಿರುವುದನ್ನು ಕುತೂಹಲದಿಂದ ವೀಕ್ಷಿಸುತ್ತಿರು ಜನ



 ದಕ್ಷ ಅಧಿಕಾರಿಗಳ ಕೊರತೆ-ಮಂದಗತಿಯಲ್ಲಿ ಸಾಗುತ್ತಿರುವ ರಸ್ತೆ ಅಗಲೀಕರಣ


ಬಸವಕಲ್ಯಾಣ, ಜೂ. 2

ನಗರದೆಲ್ಲೆಡೆ ರಸ್ತೆ ಅಗಲೀಕರಣ ಹಾಗೂ ಸೌಂದಯೀ೯ಕರಣಕ್ಕಾಗಿ ಕಳೆದ ಮೂರು ದಿನಗಳಿಂದ ಕೇಳಿ ಬರುತ್ತಿರುವ ಬುಲ್ಡೋಜರ್್ ಶಬ್ಧಗಳು ಕೇಳಿಯೇ ಕೆಲವರು ಬೆಚ್ಚಿ ಬಿದ್ದಿದ್ದಾರೆ. ಇನ್ನೂ ಕೆಲವರಿಗೆ ಕಟ್ಟಡಗಳು ಉರುಳಿ ಬೀಳುತ್ತಿರುವುದನ್ನು ನೋಡಿ ದುಸ್ವಪ್ನವಾಗಿ ಕಾಡುತ್ತಿರುವುದರಿಂದ ಸ್ಥಳೀಯ ಅಧಿಕಾರಿಗಳು ಎಚ್ಚೆತ್ತುಕೊಂಡು ಚುರುಕಾದ ಕಾಮಗಾರಿ ನಡೆಸುತ್ತಿರುವುದು ಕಂಡು ಬರುತ್ತಿದೆ.

ಬಸವಕಲ್ಯಾಣ ನಗರಕ್ಕೆ ದಕ್ಷ ಆಡಳಿತದ ಅಧಿಕಾರಿಯೊಬ್ಬರ ಅವಶ್ಯಕತೆ ಇದ್ದು, ಅಂಥವರನ್ನು ಬರಮಾಡಿಕೊಳ್ಳುವ ನಿರೀಕ್ಷೆಯಲ್ಲಿದಂತೆ ಅಭಿವೖದ್ಧಿ ಬಯಸುವವರು ಖುಷಿಯಲ್ಲಿದ್ದರೆ, ಇನ್ನೂ ಕೆಲವರಿಗೆ ದಕ್ಷ ಆಡಳಿತಾಧಿಕಾರಿಯ ಆಗಮನದಿಂದ ಇರಿಸುಮುರುಸಾಗಿದೆ. ಅನಧಿಕೖತ ಕಟ್ಟಡ ವ್ಯಾಪಾರಿಗಳಿಗೆ ದಿಕ್ಕೆ ತೋಚದಂತಾಗಿದೆ ಎನ್ನುತ್ತಾರೆ ಸ್ಥಳೀಯರು.

12 ನೇ ಶತಮಾನದ ಶರಣರ ನೆಲೆಬೀಡಾದ ಕಲ್ಯಾಣದಲ್ಲಿ ಕಾಯ೯ಕ್ಷೇತ್ರವಾಗಿಸಿಕೊಂಡಿದ್ದ ಎಲ್ಲಾ ಶರಣರ ಸ್ಮಾರಕಗಳ ಜೀಣೋ೯ದ್ಧಾರ ಕಾಯ೯ ಭರದಿಂದಲೇ ನಡೆಯುತ್ತಿವೆ ಎನ್ನುವಂತಿದ್ದರೂ ಸಹ  ಕೆಲವು ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ. ಇನ್ನೂ ಕೆಲವು ಅಭಿವೖದ್ಧಿ ಪ್ರಾಧಿಕಾರದ ಕಾಮಗಾರಿಗಳಿಗೆ ಗ್ರಹಣ ಹಿಡಿದಂತಾಗಿರುವುದಂತೂ ನಿಜ.

ಯಾಕೆಂದರೆ ಕಳೆದ ವಷ೯ದಿಂದ ಬಸವಕಲ್ಯಾಣ ಅಭಿವೖದ್ಧಿ ಪ್ರಾಧಿಕಾರದ ಸಹಾಯಕ ಆಯುಕ್ತರ ಹುದ್ದೆ ಖಾಲಿಯೇ ಇರುವುದರಿಂದ ಇಲ್ಲಿ ಇದೀಗ ಕೆಲವು ತಿಂಗಳಿಂದ ತಹಸೀಲ್್ ಕಚೇರಿಯ ಸಹಾಯಕ ಆಯುಕ್ತ ಎಚ್್. ಪ್ರಸನ್ನ ಅವರೇ ಕಾಯ೯ಭಾರ ವಹಿಸಿಕೊಂಡಿದ್ದಾರೆ.

ನಗರಸಭೆಯ ಜವಾಬ್ದಾರಿಯೂ ಅವರ ತಲೆಯ ಮೇಲೆ ಇರುವುದರಿಂದ ಯಾವುದೇ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಒಬ್ಬರಿಂದಲೇ ಇಷ್ಟೆಲ್ಲಾ ಕಾಯ೯ಭಾರ ನಿಭಾಯಿಸಿಕೊಂಡು ಹೋಗುವುದು ಮತ್ತು ಎಲ್ಲಾ ಇಲಾಖೆಗಳ ಕಾಮಗಾರಿಗಳು ಚುರುಕಾಗಿ ನಡೆಸಲು ಸ್ವಲ್ಪ ಕಷ್ಟವಾಗುತ್ತದೆ ಎನ್ನುವಂತಾಗಿದೆ.

ಹೀಗಾಗಿ ಜನರ ಕನಸಿನ ಕಲ್ಪನೆಯಾದ ಐತಿಹಾಸಿಕ ಬಸವಕಲ್ಯಾಣ ಪಟ್ಟಣವನ್ನು ಪ್ರವಾಸಿ ತಾಣವಾಗಿ ರೂಪುಗೊಳ್ಳುವುದು ಯಾವಾಗ ಎನ್ನುವಂತೆ ಜನ ಭಾರಿ ನಿರೀಕ್ಷೆಯಲ್ಲಿದ್ದಾರೆ. ಆದರೆ ಕೆಲವರಿಗದು ಬೇಕೇ ಇಲ್ಲ ಎನ್ನುವಂಥ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿರುವುದು ವಿಷಾದದ ಸಂಗತಿಯೆಂದು ಅಭಿವೖದ್ಧಿ ಚಿಂತಕರು ಖೇದವನ್ನು ವ್ಯಕ್ತಪಡಿಸುತ್ತಾರೆ.

ಹಾಗೊಂದು ವೇಳೆ ಬಸವಕಲ್ಯಾಣ ಪಟ್ಟಣ ರಸ್ತೆ ಅಗಲೀಕರಣಗೊಂಡು ಅಭಿವೖದ್ದಿ ಸಾಧ್ಯವಾದರೆ ದೈನಂದಿನ ವ್ಯವಹಾರ, ವ್ಯಾಪಾರಗಳು, ಪ್ರಮುಖ ಅಂಗಡಿ ಮಾಲೀಕರುಗಳಿಗೆ ನಷ್ಟವಾಗುತ್ತದೆಂಬ ಭ್ರಮೆ ಹಾಗೂ ಕೆಲ ಪ್ರಮುಖ ಸಂಸ್ಥೆಯ ಚಟುವಟಿಕೆಗಳು ನಿಂತು ಬಿಡುತ್ತವೆ ಎನ್ನಬಹುದು.

ಬಸವಕಲ್ಯಾಣಕ್ಕೆ ಹಷ೯ಗುಪ್ತ ಅವರಂಥ ದಕ್ಷ ಆಡಳಿತಧಿಕಾರಿ ಯಾಕಾದರೂ ಬರುತ್ತಾರೆ ಎಂಬ ಪ್ರಶ್ನೆ ಒಳಗೊಳಗೆ ಕೇಳಿ ಬರುವಂತಿದ್ದರೂ ಅಭಿವೖದ್ಧಿಪರವಾಗಿ ಚಿಂತಿಸುವವರ ಆಶಯ ಬಹುತೇಕ ನಿಜವಾಗಲಿದೆ ಎನ್ನಲು ಪ್ರಮುಖ ಕಾರಣವೆಂದರೆ ಬಿಕೆಡಿಬಿ ವಿಶೇಷಧಿಕಾರಿಯಾಗಿದ್ದ ಡಾ. ಎಸ್್.ಎಂ. ಜಾಮದಾರ್್ ಅವರ ನಿವೖತ್ತಿಯ ನಂತರ ಹಷ೯ಗುಪ್ತ ಅವರೇ ವಿಶೇಷಧಿಕಾರಿಯಾಗಿ ಬರಲೆಂಬುದು ಅನೇಕರು ಒತ್ತಾಯಿಸಿದ್ದಾರೆ ಎನ್ನಲಾಗುತ್ತಿದೆ.

ಬೀದರ ಜಿಲ್ಲಾಧಿಕಾರಿಯಾಗಿ ಜಿಲ್ಲೆಯ ಚಿತ್ರಣವನ್ನೇ ಬದಲಾಯಿಸಿರುವ ಹಷ೯ಗುಪ್ತ ಅವರು ಒಂದು ವೇಳೆ ಬಸವಕಲ್ಯಾಣಕ್ಕೆ ಬಂದರೆ ಅಭಿವೖದ್ಧಿ ತಾಣವಾಗಿ, ಪ್ರವಾಸಿಗರಿಗೆ 12 ನೇ ಶತಮಾನದ ಶರಣರನ್ನು, ಐತಿಹಾಸಿಕ ಪಳೆಯುಳಿಕೆಗಳನ್ನು ಅಳಿದುಳಿದಿರುವುದನ್ನು ಜೀವಂತ ನೋಡಲು ಸಿಗುವುದರಲ್ಲಿ ಸಂದೇಹವಿಲ್ಲ.

ಪ್ರವಾಸಿಗರಿಗೆ ಬಸವಕಲ್ಯಾಣ ಪಟ್ಟಣ ಕೈಬೀಸಿ ಕರೆಯುವಲ್ಲಿ ಹಷ೯ಗುಪ್ತ ಅವರಂಥ ಅಧಿಕಾರಿಗಳು ಬಂದರೆ ಮಾತ್ರ ಬಹುತೇಕ ನಿಜವಾಗಲಿದೆ ಎಂಬುದು ಜನಮನದಲ್ಲಿ ಖಚಿತವಾಗಿದೆ. ಆದ್ದರಿಂದಲೇ ಹಷ೯ಗುಪ್ತ ಅವರಿದ್ದಾಗಲೇ ಆಗಬೇಕಾದ ಅನೇಕ ಕಾಮಗಾರಿಗಳು ಇಷ್ಟೊಂದು ಭರದಲ್ಲಿ ಸಾಗುತ್ತಿರುವುದಕ್ಕೆ ಬುಲ್ಡೋಜರ್್ ಶಬ್ಧಗಳು ಕೇಳಿ ಬರುತ್ತಿರುವುದಕ್ಕೆ ಸಾಕ್ಷಿಯೆನ್ನುತ್ತಾರೆ ಅನೇಕ ಸಂಘಟನಾ ಪ್ರಮುಖರು.

ಕಾಮೆಂಟ್‌ಗಳಿಲ್ಲ: