ಭಾನುವಾರ, ಜೂನ್ 10, 2012

ಕುಡಿಯುವ ನೀರಿಗಾಗಿ ಪರದಾಟ


 ಸರತಿಯಲ್ಲಿ ನೀರಿಗಾಗಿ ಖಾಲಿ ಕೊಡಗಳು

ಕುಡಿಯುವ ನೀರಿಗೆ ಎದ್ದಿರುವ ಭೀಕರ ಸಮಸ್ಯೆಗೆ ಹಿಡಿದ ಕನ್ನಡಿಯಂತಿರುವ ಖಾಲಿ ಕೊಡಗಳು.
 

ಕೋಹಿನೂರು ವಾಡಿಯಲ್ಲಿ ಕುಡಿಯುವ ನೀರಿಗಾಗಿ ಪರದಾಟ 

ಬಸವಕಲ್ಯಾಣ, ಜೂ. 9

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಕೊರತೆಯಿಂದ ಜನಜೀವನ ಹಾಹಾಕಾರ ಎದುರಿಸುತಿದ್ದರೂ ಸಂಬಂಧಿಸಿದ ಗ್ರಾಮ ಪಂಚಾಯತ್್ ಅಧಿಕಾರಿಗಳು ಇತ್ತ ಗಮನ ಹರಿಸದೇ ಇರುವುದು ಜನ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಕೆಲವು ಗ್ರಾಮಗಳಲ್ಲಿ ಟ್ಯಾಂಕರ್್ಗಳಿಂದ ನೀರು ತರಿಸಿದರೂ ನೀರು ಸರಬರಾಜಿಗೆ ಸರಿಯಾದ ಸಮಯಕ್ಕೆ ಕರೆಂಟ್್ ಇರುವುದಿಲ್ಲ. ಕೋಹಿನೂರು ವಾಡಿಗಳಂಥ ಗ್ರಾಮಗಳಲ್ಲಿ ವಿದ್ಯುತ್್ ಸಂಪಕ೯ ಕಡಿತವಾಗಿರುವುದರಿಂದ ಸಮಪ೯ಕವಾದ ವಿದ್ಯುತ್್ ಇಲ್ಲದೇ ಪರದಾಡುವಂಥ ಸ್ಥಿತಿ ಎದುರಾಗಿದೆ.

ಇನ್ನೂ ಕೆಲವು ಗ್ರಾಮಗಳಲ್ಲಿ ಬೋರವೆಲ್್ಗಳಿದ್ದರೂ ಕೆಟ್ಟು ಹೋಗಿವೆ. ಕೊಳವೆ ಬಾವಿಗಳಲ್ಲಿನ ನೀರು ಬತ್ತಿ ಹೋಗಿರುವುದರಿಂದ ಟ್ಯಾಂಕರ್್ಗಳಿಂದ ತರಿಸುವ ನೀರಿಗಾಗಿ ನೂಕುನುಗ್ಗಲು ಶುರುವಾಗುತ್ತದೆ. ಸರದಿಯ ಪ್ರಕಾರ ನಾಲ್ಕಾರು ಕೊಡ ನೀರು ಸಿಗುವುದೇ ದುಸ್ಥರವೆನ್ನುವಂತಾಗಿದೆ ಎನ್ನುವ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಳ್ಳುವಂತಾಗಿದೆ.

ರಾಮತೀಥ೯ವಾಡಿ, ಲಾಡವಂತಿ, ಅಲಗೂಡ, ಭೋಸಗಾ, ಗುತ್ತಿ, ಮಿರಕಲ್, ಮಂಠಾಳ, ಸೇರಿದಂತೆ ಹಲವು ಗ್ರಾಮಗಳಲ್ಲಿ ಸಹ ಕುಡಿಯುವ ನೀರಿನ ತಾತ್ಸಾರ ಎದುರಿಸುತ್ತಿರುವದಕ್ಕೆ ಸಂಬಂಧಪಟ್ಟ ತಾಲೂಕಾ ಪಂಚಾಯತ್್ ಇಲಾಖೆ ಅಧಿಕಾರಿಗಳು ಸಮಸ್ಯೆಗಳಿರುವ ಆಯಾ ಗ್ರಾಮಗಳಿಗೆ ಭೇಟಿ ನೀಡಿ, ಸಮಸ್ಯೆ ಇತ್ಯಥ೯ಗೊಳಿಸಲು ಸೂಚಿಸಬೇಕೆಂಬ ಒತ್ತಾಯ ಗ್ರಾಮಸ್ಥರದ್ದಾಗಿದೆ.

ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿರುವ ಹಲವು ಗ್ರಾಮ ಪಂಚಾಯತ್್ ಸಿಬ್ಬಂದಿಗಳು ನೀರು ಬಿಡಲು ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಪಂಚಾಯತ್್ ಸದಸ್ಯರಿರುವ ಮನೆಗಳಿಗೆ ಮಾತ್ರ ಹೆಚ್ಚಿನ ನೀರು ಸರಬರಾಜಿಗೆ ಪ್ರತ್ಯೇಕ ಪೈಪ್್ಲೈನ್ ಮಾಡಲಾಗಿದೆ ಎಂಬ ದೂರುಗಳು ಕೇಳಿ ಬರುವಂತಾಗಿದೆ.

ಜನ ಸಾಮಾನ್ಯರಿಗೆ ಸಿಗದ ಸೌಲಭ್ಯ ಅವರಿಗೆ ಮಾತ್ರ ಸಿಗುತ್ತಿರುವುದು ಇದ್ಯಾವ ನ್ಯಾಯ ಎನ್ನುವಂತಾಗಿದ್ದು, ಅವರಿಗೊಂದು ನ್ಯಾಯ ನಮಗೊಂದು ನ್ಯಾಯ ಯಾಕೆ ಎನ್ನುವ ಜನಸಾಮಾನ್ಯರ ಮಾತಿಗೆ ಬೆಲೆ ಕೊಡದ ಗ್ರಾಪಂ ಅಧ್ಯಕ್ಷರು, ಸದಸ್ಯರು ತಾವೇ ಎಲ್ಲದಕ್ಕೂ ಸವಾ೯ಧಿಕಾರಿಯೆನ್ನುವಂತೆ ವತಿ೯ಸುತ್ತಿದ್ದಾರೆ.

ಬಸವಕಲ್ಯಾಣ ತಾಲೂಕಿನ ಅನೇಕ ಗ್ರಾಮಗಳ ಸಮಸ್ಯೆ ಇದೇ ಆಗಿರುವುದರಿಂದ ಕೂಡಲೇ ಮೇಲಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಾದ್ದು ಕೂಡ ಅಷ್ಟೇ ಅವಶ್ಯವಾಗಿದೆ. ತಾಲೂಕು ಕೇಂದ್ರದಿಂದ ಹತ್ತಾರು ಕಿ.ಮೀ ದೂರವಿರುವ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಬೇಕೆಂದು ಅನೇಕ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಾಮೆಂಟ್‌ಗಳಿಲ್ಲ: