ಭಾನುವಾರ, ಜೂನ್ 10, 2012

ಮುಖ್ಯ ಶಿಕ್ಷರಿಲ್ಲದ ಬಟಗೇರಾ ಶಾಲೆ

  ಬಸವಕಲ್ಯಾಣ.

ತಾಲೂಕಿನ ಬಟಗೇರಾ ಸರಕಾರಿ ಪ್ರೌಢ ಶಾಲೆ
    ಮುಖ್ಯ ಶಿಕ್ಷರಿಲ್ಲದ ಬಟಗೇರಾ ಶಾಲೆಯಲ್ಲಿ ಶೈಕ್ಷಣಿಕ ಕೊರತೆಯಿಂದ ಉತ್ತಮ ಬೋಧನೆಗೆ ಹಿನ್ನಡೆ


ಬಸವಕಲ್ಯಾಣ. ಜೂ. 8

ತಾಲೂಕಿನ ಬಟಗೇರಾ ಸರಕಾರಿ ಪ್ರೌಢ ಶಾಲೆ ಪ್ರಾರಂಭದಿಂದ ಶಿಕ್ಷಕರ ಕೊರತೆಯನ್ನು ತೀವೖವಾಗಿ ಅನುಭವಿಸುತಿದ್ದು, ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಬೇಡಿಕೆ ಒತ್ತಾಯಕ್ಕಾಗಿ ಕಳೆದ ವಷ೯ ಕ್ಷೇತ್ರ  ಶಿಕ್ಷಣಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರೂ ಶಿಕ್ಷಕರ ಕೊರತೆ ಇರುವ ಖಾಲಿ ಜಾಗ ಭತಿ೯ ಮಾಡಲಾಗಿಲ್ಲ ಎಂಬುದು ಗ್ರಾಮಸ್ಥರ  ಅಳಲಾಗಿದೆ.

ಮೂರೇ ಜನ ಶಿಕ್ಷಕರಿರುವ ಬಟಗೇರಾ ಸರಕಾರಿ ಪ್ರೌಢ ಶಾಲೆಗೆ ಶೌಚಾಲಯವಿಲ್ಲ. ನೀರು ಸರಬರಾಜಿಲ್ಲ, ವಿಜ್ಞಾನ, ಇಂಗ್ಲೀಷ ಶಿಕ್ಷಕರು ಸೇರಿದಂತೆ ಮುಖ್ಯೋಪಾಧ್ಯಯರಿಲ್ಲ. ಅನೇಕ ಮೂಲ ಸೌಲಭ್ಯಗಳ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ದುಸ್ಫರಿಣಾಮ ಬೀರುತಿದೆ. ಹೀಗೆ ಸಕಾ೯ರದ ಧೋರಣೆ ಮುಂದೊರೆದರೆ ಮತ್ತೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಶಿಕ್ಷಕರ ಕೊರತೆ ಬಗ್ಗೆ ಹಲವು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಕೂಡ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ಇದ್ದಂಥ ಶಿಕ್ಷಕರನ್ನೆ ಮತ್ತೆ ವಗಾ೯ವಣೆ ಮಾಡಿದ್ದಾರೆ. ಗುಣಮಟ್ಟದ ಬೋಧನೆ ಇಲ್ಲದೇ ಮಕ್ಕಳ ಸವ೯ತೋಮುಖ ಬೆಳವಣಿಗೆಗಾಗಿ ಪಾಲಕರು ಪರಿತಪಿಸುವಂತಾಗಿದೆ.

ಹೀಗೆ ಪರಿಸ್ಥಿತಿ ಮುಂದೊರೆದರೆ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದ ಸರಕಾರಿ ಪ್ರೌಢ  ಶಾಲೆಯ ಎಸ್್.ಡಿ.ಎಂ.ಸಿ ಅಧ್ಯಕ್ಷ ಬಸವರಾಜ ಹಿರೇಮಠ ಕನ್ನಡಪ್ರಭದೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದರು.

ಶಾಲೆಗೆ ಸಮಪ೯ಕವಾದ ಅಡುಗೆ ಕೋಣೆಗಳಿಲ್ಲ. ನಂಜುಂಡಪ್ಪ ವರದಿ ಅನುಷ್ಠಾನದಲ್ಲಿ ಕಟ್ಟಲ್ಪಟ್ಟ ಶೌಚಾಲಯ ಕೆಲಸಕ್ಕೆ ಬಾರದಂತಾಗಿವೆ. ಶಾಲೆಗೆ ಹೆಚ್ಚುವರಿ ಶಿಕ್ಷಕರನ್ನು ನೇಮಿಸಬೇಕೆಂಬ ಒತ್ತಾಯಕ್ಕೆ ಮಣಿಯದೇ ಇರುವ ಅಧಿಕಾರಿಗಳ ವಿರುದ್ಧ ಮತ್ತೆ ಬೀದಿಗಿಳಿಯಬೇಕಾದ್ದು ಅನಿವಾಯ೯ವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ಜೂನ್್ ತಿಂಗಳ ಒಳಗಾಗಿ ಅವಶ್ಯವಿರುವ ಶಿಕ್ಷಕರ ಭತಿ೯ ಮಾಡದಿದ್ದರೆ ಉಗ್ರ ಸ್ವರೂಪದ ಹೋರಾಟ ಮತ್ತು ಪ್ರತಿಭಟನೆ, ರಸ್ತೆ ತಡೆ ನಡೆಸಲು ಮತ್ತೆ ಮುಂದಾಗಿದ್ದೇವೆ. ಗಡಿ ಗ್ರಾಮಗಳೆಂಬ ಕಾರಣಕ್ಕೆ ಹಲವು ವಷ೯ಗಳಿಂದ ಜನಪ್ರತಿನಿಧಿಗಳಿಂದ ಶೈಕ್ಷಣಿಕ ಪರಿಸರಕ್ಕೆ ಸೌಲಭ್ಯಗಳು ಸಿಗದೇ ವಂಚಿತರಾಗುತಿದ್ದೇವೆ ಎಂದು ಅವರು ಗುಡುಗಿದ್ದಾರೆ.

ಕಳೆದ ವಷ೯ದ ಪ್ರತಿಭಟನೆಯಲ್ಲಿ ಅನೇಕ ಶಾಲಾ ಮಕ್ಕಳು, ಪಾಲಕ, ಪೋಷಕರು ಪಾಲ್ಗೊಂಡು ಭಾರಿ ನಿರೀಕ್ಷೆಯನ್ನೇ ಹೊಂದಿದ್ದರು. ಆದರೆ ಇಂದಿಗೂ ಸಹ ಶೈಕ್ಷಣಿಕ ಕೊರತೆಯನ್ನು ಅನುಭವಿಸುತ್ತಾ  ಮಕ್ಕಳಲ್ಲಿ ನಿರಾಸೆಯನ್ನೇ ಮೂಡಿಸಿರುವುದಕ್ಕೆ ಇಲ್ಲಿನ ಆಡಳಿತ ವ್ಯವಸ್ಥೆಯಿಂದ ಹೇಸಿಗೆ ಉಂಟಾಗುತ್ತಿದೆ ಎಂಬುದು ಗ್ರಾಮದ ಪ್ರಮುಖರು ಕೂಡ ಆಕ್ರೋಷ ಪಡುವಂತಾಗಿದೆ.

ಸದರಿ ಶಾಲೆಗೆ ಕನಿಷ್ಠ ಐದಾರು ಶಿಕ್ಷಕರ ಅಗತ್ಯ ಇರುವುದರಿಂದ ಕೊರತೆ ಕೂಡಲೇ ನೀಗಿಸಬೇಕು. ಇದ್ದಂಥ ಮೂರು ಜನ ಶಿಕ್ಷಕರಲ್ಲಿ ಕೆಲವರು ಆಗಾಗ ಗೈರು ಹಾಜರಾಗುತ್ತಿರುವುದು ಸಹ ಕಂಡು ಬರುವಂತಿದ್ದರೂ ಯಾರೂ ಪ್ರಶ್ನಿಸದಂತಾಗಿದೆ.

ಅನುಮತಿ ಪಡೆಯದೇ ಯಾವುದೇ ಸಭೆ, ಸಮಾರಂಭ, ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳುವ ಶಿಕ್ಷಕರಿಗೆ ಮುಖ್ಯ ಗುರುಗಳಿಲ್ಲದ ಕಾರಣ ಕೇಳದಂತಾಗಿದೆ. ಶಾಲಾ ಮಕ್ಕಳಿಗೆ ನ್ಯಾಯಯುತವಾಗಿ ಬೋಧನೆ ಮಾಡುವವರ ಅಗತ್ಯವಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಮಕ್ಕಳ ವ್ಯಕ್ತಿತ್ವ ವಿಕಾಸದತ್ತ ಗಮನ ಹರಿಸಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂಥ ವಾತಾವರಣ ಸೖಷ್ಟಿಯಾಗಬೇಕು.  ಹಿಂದುಳಿದ ಗ್ರಾಮಗಳೆಂಬ ಹಣೆಪಟ್ಟಿ ಅಂಟಿಕೊಂಡಿರುವ ಗ್ರಾಮಗಳಿಗೆ ಸಕಾ೯ರ ಮೊದಲ ಅಧ್ಯತೆಯನ್ನು ನೀಡಿ ಇಲ್ಲಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಆಸಕ್ತಿ ವಹಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿವೆ.

ಚಿಗುರಿನಲ್ಲೇ ಅರಳಬೇಕಾದ ಮಕ್ಕಳ ಭವಿಷ್ಯಕ್ಕೆ ಕರಾಳ ದಿನಗಳನ್ನು ಎದುರಾಗದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ಗಡಿ ಗ್ರಾಮಗಳಲ್ಲಿ ಮರಾಠಿ ಪ್ರಭಾವ ಹೆಚ್ಚಿರುವ ಕಾರಣ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಶಿಕ್ಷಕರಿಲ್ಲದೇ ಪರದಾಡುವಂಥ ಚಿಂತಾಜನಕ ಸ್ಥಿತಿ ಗಂಭೀರವಾಗಿ ಪರಿಗಣಿಸಬೇಕು ಎಂಬುದ್ದಾಗಿದೆ.

ಗಡಿ ಗ್ರಾಮಗಳಾದ ಆಲಗೂಡ, ಭೋಸಗಾ, ಲಾಡವಂತಿ, ಉಜಳಂಬ, ಚಿಟ್ಟಾ, ಕೋಹಿನೂರು, ಎಕಂಬಾ, ಗಿಲಗಿಲಿ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ಮರಾಠಿ ಭಾಷಿಕರು ಕನ್ನಡ ಶಿಕ್ಷಣ ಕಲಿಯಬೇಕೆಂಬ ಮಹತ್ವಕಾಂಕ್ಷೆ ಹೊಂದಿದ್ದಾರೆ. ಅವರಿಗೆಲ್ಲ  ಶಿಕ್ಷಣ ಸಿಗದೇ ವಂಚಿತರಾಗುತ್ತಿದ್ದಾರೆ. ಉತ್ತಮ ಕನ್ನಡ ಬೋಧಕರಿಲ್ಲದೇ ಅನೇಕ ಶಾಲೆಗಳಲ್ಲಿ ಕನ್ನಡವೆಂಬುದು ಕನಸಿನ ಮಾತಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಕಳೆದ ವಷ೯ ಶಾಲಾ ಮಕ್ಕಳು, ಪಾಲಕ, ಪೋಷಕರು, ಗ್ರಾಮಸ್ಥರಿಂದ ಶಿಕ್ಷಕರ ಕೊರತೆ ಸೇರಿದಂತೆ ಮೂಲಭೂತ ಸೌಲಭ್ಯಗಳಿಗಾಗಿ ಆಗ್ರಹಿಸಿ ರಸ್ತೆ ತಡೆ ನಡೆಸಿ, ಪ್ರತಿಭಟನೆ ಮಾಡಿದರೂ ಇಂದಿಗೂ ಇತ್ಯಥ೯ಗೊಳ್ಳದ ಸಮಸ್ಯೆ ಮತ್ತೆ ಭುಗಿಲೇಳುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

ಕಾಮೆಂಟ್‌ಗಳಿಲ್ಲ: