ಬುಧವಾರ, ಅಕ್ಟೋಬರ್ 3, 2012

ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷದವರ ಪೈಪೋಟಿಃ

Khuba mallikarjun
ವೀರಣ್ಣ ಮಂಠಾಳಕರ್
---------------------


ಬಸವಕಲ್ಯಾಣಃ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷದವರ ಪೈಪೋಟಿಃ ಓಟು ನೋಟಿಗಾಗಿ ಎಲ್ಲವೂ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಿಲ್ಲಲು ಆಯಾ ಪಕ್ಷದ ಅಭ್ಯಥಿ೯ಗಳ ಅಧಿಕೖತ ಪಟ್ಟಿಯೇ ಇನ್ನೂ ಬಿಡುಗಡೆಯಾಗಿಲ್ಲ. ಆದರೂ ಬಸವಕಲ್ಯಾಣ ತಾಲೂಕಿನೆಲ್ಲೆಡೆ ರಾಜಕೀಯ ನಾಯಕರು, ಮಾಜಿ, ಹಾಜಿ ಹಾಗೂ ಪಕ್ಷಗಳ ಪ್ರಮುಖರು ಪ್ರಚಾರಕ್ಕಾಗಿ ಎಲ್ಲಿಲ್ಲದ ಕಸರತ್ತು ನಡೆಸುತ್ತಿರುವುದು ಕಂಡು ಬರುವಂತಾಗಿದೆ.

ಯಾವುದೋ ಹಬ್ಬ ಹರಿದಿನಗಳ ನೆಪದಲ್ಲಿ ಪಾಲ್ಗೊಳ್ಳುವುದು, ಧಾಮಿ೯ಕ ಕಾಯ೯ಕ್ರಮಗಳಲ್ಲಿ ವಿಶೇಷ ಪೂಜೆ ನೆರವೇರಿಸುವುದು ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ಸಾವ೯ಜನಿಕರ ಕುಂದು ಕೊರತೆಗಳಿಗೆ ಸ್ಪಂಧಿಸುವ ಬೆಳವಣಿಗೆ ರಾಜಕೀಯ ಜನರಲ್ಲಿ ಚುನಾವಣೆಯ ಕಾವು ಮತ್ತಷ್ಟು ಏರತೊಡಗಿದೆ.

2013ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಜಪವನ್ನೇ ಮಾಡುತ್ತಿರುವ ಅನೇಕರು ವಿಶೇಷ ದಿನಗಳ ಸಂದಭ೯ಕ್ಕೆ ವಿವಿಧ ಧಾಮಿ೯ಕ ಸಮಾರಂಭಗಳಲ್ಲಿ ಜನರನ್ನು ಶುಭಾಷಯ ಕೋರಿ ಕಟೌಟ್್, ಬ್ಯಾನರ್್ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅಧೀಕ ಸಂಖ್ಯೆಯ ಯುವನಾಯಕರಿಗೆ ಪ್ರಚಾರವೇ ಮೂಲ ಮಂತ್ರವಾಗಿದೆ.

ಇಲ್ಲಿಯವರೆಗೆ ಎಲ್ಲೋ ಇದ್ದವರು ಇದ್ದಕ್ಕಿದಂತೆ ಪ್ರತ್ಯಕ್ಷವಾಗಿ ಭಾರಿ ಪ್ರಚಾರದಲ್ಲಿ ಇರುವುದನ್ನು ನೋಡಿದರೆ ಕಾಂಗ್ರೇಸ್್ ಪಕ್ಷದಲ್ಲಿ ಅನೇಕರು ಆಕಾಂಕ್ಷಿಗಳಾಗಿದ್ದಾರೆ. ಇದರಿಂದ ಟಿಕೇಟ್್ ಮಾತ್ರ ಯಾರಿಗೆ ಸಿಗುತ್ತದೋ ನಿಖರವಾಗಿ ಹೇಳಲಾಗದಂತಾಗಿದೆ. ಹಲವರ ನಿರೀಕ್ಷೆ, ಕೆಲವರ ಲೆಕ್ಕಾಚಾರ ಕೂಡ ಏನಿದೆಯೋ ಎಂಬ ಅಪವಾದಗಳೂ ಬರುತ್ತಿವೆ.

ಜೆಡಿಎಸ್್ನಿಂದ ಮಾಜಿ ಶಾಸಕ ಮಲ್ಲಿಕಾಜು೯ನ ಖೂಬಾ ಮುಂಬರುವ ಚುನಾವಣೆಗೆ ನಿಲ್ಲುವುದು ಶತಸಿದ್ಧ ಎಂಬ ಮಾತುಗಳು ಕೇಳಿ ಬರುತಿದ್ದು, ಟಿಕೇಟ್್ ಸಿಗೋದು ಖಚಿತವೆಂಬಂತೆ ಅಬ್ಬರದ ಪ್ರಚಾರ ಮಾಡುತಿದ್ದಾರೆ. ಕಾಂಗ್ರೇಸ್್ ಪಕ್ಷದಲ್ಲಿ ಅನೇಕರು ಪೈಪೋಟಿ ನಡೆಸುವಂತೆ ಕಾಣಿಸಿಕೊಳ್ಳುತಿದ್ದಾರೆ.

ಹಾಲಿ ಶಾಸಕ ಬಸವರಾಜ ಪಾಟೀಲ ಅಟ್ಟೂರ್್ ಅವರು ಕಳೆದ ವಷ೯ ಕಾರು ಅಪಘಾತದಲ್ಲಿ ಗಾಯಗೊಂಡು ಇದೀಗ ಚೇತರಿಸಿಕೊಂಡಿದ್ದಾರೆ. ಆದ್ದರಿಂದ ಹೆಚ್ಚಿನ ಪ್ರಚಾರದಲ್ಲಿ ತೊಡಗಿಸಿಕೊಳ್ಳದೇ  ಮೌನವೇ ಸವ೯ ಲಕ್ಷಣ ಎನ್ನುವ ಹಾಗೆ ಅಟ್ಟೂರ್್ ಮತ್ತೆ ಚುನಾವಣಾ ಕಣಕ್ಕಿಳಿಯುವುದು ಖಚಿತವೆಂಬ ಮಾತು ಅವರ ಆಪ್ತ ವಲಯಗಳಿಂದ ಕೇಳಿ ಬರುತ್ತಿವೆ.

ಯೂಥ್್ ಕಾಂಗ್ರೇಸ್್ ಜಿಲ್ಲಾ ಯುವ ಘಟಕದ ಆನಂದ ದೇವಪ್ಪ, ಹಿಂದುಳಿದ ವಗ೯ಗಳ ಮುಖಂಡ ಬಿ.ನಾರಾಯಣರಾವ, ಶಿವಶರಣು ಬಿರಾದಾರ್್, ಶಿವರಾಜ ನರಶೆಟ್ಟಿ ಮುಂತಾದ ಪ್ರಮುಖರು ಒಂದೇ ಪಕ್ಷದಲ್ಲಿದ್ದರೂ ಚುನಾವಣೆ ವೇಳೆ ಪ್ರತಿಸ್ಫಧಿ೯ಗಳಂತೆ ಸಿದ್ಧತೆ ನಡೆಸುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.

ಇನ್ನೋವ೯ ಮಾಜಿ ಶಾಸಕ ಮಾರುತಿರಾವ ಮೂಳೆಯವರು ಯಾವ ಪಕ್ಷದಿಂದ ಚುನಾವಣೆ ಎದುರಿಸುವುದೆಂಬ ಗೊಂದಲ ಇದ್ದಂತಿದೆ. ಹೊಸ ಪಕ್ಷದಿಂದ ಚುನಾವಣಾ ಕಣಕ್ಕೆ ಬರಲಿದ್ದಾರೆ ಎಂಬ ಸ್ವರಗಳು ಕೇಳಿ ಬರುತ್ತಿದೆ. ಸ್ವಾಭಿಮಾನಿ ಶ್ರೀರಾಮುಲು ಅವರ ಹೊಸ ಪಕ್ಷಕ್ಕೆ ಮೂಳೆ ಸೇರಿದಂತೆ ಇತರೆ ಯುವನಾಯಕರು ಸೇರಲಿದ್ದಾರೆ ಎಂಬ ಗಾಳಿ ಸುದ್ಧಿಯೂ ಕೂಡ ಇದೆ.

ಯಾವುದೇ ಗಾಳಿ ಸುದ್ಧಿಗೆ ಒಳಗಾಗದ ಅನೇಕ ರಾಜಕೀಯ ಮುಖಂಡರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಾ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿದ್ದಂತೆ, ಸಧ್ಯಕ್ಕೆ ಸಾವ೯ಜನಿಕರ ಮಧ್ಯೆದಲ್ಲಿ ಕಾಣಿಸಿಕೊಳ್ಳದೇ ಇದ್ದರೂ ಚುನಾವಣಾ ಅಖಾಡಕ್ಕಿಳಿಯುವ ಪೂವ೯ಯೋಜಿತ ಯೋಚನೆ ಹಲವರಿಗಿದೆ.

ಕಾಮೆಂಟ್‌ಗಳಿಲ್ಲ: