ಗುರುವಾರ, ಜನವರಿ 2, 2014

ಪಕ್ಷ ಸಂಘಟಿಸಲು ಕಾರ್ಯಕರ್ತರಿಂದ ಸಾಧ್ಯ: ಬಿ.ನಾರಾಯಣರಾವ

ಬೀದರ ಲೋಕಸಭಾ ಚುನಾವಣಾ ಸ್ಪರ್ಧಿಯಾಗಿ ಎನ್. ಧರ್ಮಸಿಂಗ್


ಚಿತ್ರ ವಿವರ: ಬಸವಕಲ್ಯಾಣ ನಗರದ ಕಾಂಗ್ರೇಸ್ ಪಕ್ಷದ ಕಾರ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರನ್ನು ಸಭೆಯಲ್ಲಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಬಿ.ನಾರಾಯಣರಾವ ಮಾತನಾಡುತ್ತಿರುವುವುದು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಸೀರೋದ್ದೀನ್ ಹಾಲಹಿಪ್ಪರಗಾ, ನೀಲಕಂಠ ರಾಠೋಡ, ಅಜರಲಿ ನವರಂಗ, ತಹಸೀನ್ ಅಲಿ ಜಮಾದಾರ್ ಮುಂತಾದವರು ಉಪಸ್ಥಿತರಿದ್ದರು.


ಬಸಕಲ್ಯಾಣ: ಇದೇ ಬರುವ ಜನವರಿ 26 ರಂದು ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಯಾಗಿ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರನ್ನೇ ಟಿಕೇಟ್ ನೀಡಬೇಕೆಂದು ಹೈಕಮಾಂಡ್‍ಗೆ ಒತ್ತಾಯಿಸುತ್ತೇವೆ. ಧರ್ಮಸಿಂಗ್ ಅವರನ್ನಲ್ಲದೇ ಬೇರೆಯವರನ್ನು ಟಿಕೇಟ್ ನೀಡುವುದರೆ ಪಕ್ಷದ ಕಾರ್ಯಕರ್ತನಾಗಿ ನಾನು ಸಹಿಸುವುದಿಲ್ಲ ಎಂದು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಬಿ. ನಾರಾಯಣರಾವ ನುಡಿದರು.
ಬಸವಕಲ್ಯಾಣ ನಗರದ ಕಾಂಗ್ರೇಸ್ ಪಕ್ಷದ ಕಾರ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಪಕ್ಷವನ್ನು ಬಲಪಡಿಸಬೇಕಾದರೆ ಮೊಟ್ಟ ಮೊದಲಿಗೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಮಿತಿ ರಚಿಸಲಾಗುವುದು. ಇದರಿಂದ ಪಕ್ಷ ಸಂಘಟಿಸಲು ಸಾಧ್ಯವಾಗುತ್ತದೆ. ಈ ಹಿಂದಿನ ವಿಧಾನ ಸಭಾ ಚುನಾವಣೆಯಲ್ಲಿ ನನಗಾದ ಸೋಲು ನನ್ನದಲ್ಲ. ಕಾಂಗ್ರೇಸ್‍ನ ಎಲ್ಲಾ ಕಾರ್ಯಕರ್ತರದ್ದಾಗಿದೆ ಎಂದು ಹೇಳಿದರು.
ಕಳೆದ 30 ವರ್ಷಗಳಿಂದ ಕಾಂಗ್ರೇಸ್ ಪಕ್ಷದಲ್ಲಿ ಪ್ರಾಮಾಣಿಕತೆಯಿಂದ ದುಡಿಯುತ್ತಿರುವ ಫಲವಾಗಿ ವಿಧಾನ ಸಭೆ ಚುನಾವಣೆಗೆ ಟಿಕೇಟ್ ಸಿಕ್ಕಿತ್ತು. ಆದರೆ ಪಕ್ಷದಲ್ಲಿರುವ  ಒಗ್ಗಟುತನ ಕೆಲವರಿಂದ ಒಡೆದು ಹಾಳಾಗಿರುವುದರಿಂದ ನನ್ನ ಕನಸು ಕನಸಾಗಿಯೇ ಉಳಿದಿದೆ. ಮತ್ತೆ ಉತ್ತಮ ಕಾರ್ಯಕರ್ತರಿಂದ ಪಕ್ಷ ಬಲಪಡಿಸುವ ಉದ್ದೇಶ ಹೊಂದಿದ್ದೇನೆ ಎಂದರು.
ಬರುವ ಜನವರಿ 19, 2014ಕ್ಕೆ ಆಟೋ ನಗರ ಪಾರ್ಕ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಚಾಲನೆ ನೀಡಲಾಗುವುದು. ಅದಕ್ಕಾಗಿ ಈಗಾಗಲೇ 2 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಹಳೇ ಆಟೋ ನಗರ ನಿರ್ಮಾಣ ಹಾಗೂ ರಿಂಗ್ ರಸ್ತೆ ನಿರ್ಮಾಣಕ್ಕೂ ಜ. 19ಕ್ಕೆ ಚಾಲನೆ ದೊರೆಯಲಿದೆ. ಆರೋಗ್ಯ ಘಟಕದ ಕಾಮಗಾರಿ ಸಹ ಶೀಘ್ರವೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೇಸ್ ಪಕ್ಷದಲ್ಲಿ ಪ್ರಾಮಾಣಿಕತೆಯಿಂದ ದುಡಿಯುವ ಯಾರನ್ನೂ ಕೂಡ ಬಲಿ ಕೊಡುವುದಿಲ್ಲ. ದುಡಿದಿರುವವರಿಗೆ ತಕ್ಕ ಪ್ರತಿಫಲ ನೀಡುವ ಉದ್ದೇಶ ನನಗಿದೆ. ನಾನು ಪಕ್ಷಕ್ಕಾಗಿ ಜೀವ ಕೊಟ್ಟರೂ ಕಾರ್ಯಕರ್ತರನ್ನು ಸಾಯಲು ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಧರ್ಮ ಅವರು ಗೆದ್ದರೆ ನಾನು ಮುಂಬರುವ ವಿಧಾನಸಭಾ ಚುನಾವಣೆಗೆ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸ ಹೊಂದಿದ್ದೇನೆ ಎಂದು ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಬಸಿರೋದ್ದೀನ್ ಹಾಲಹಿಪ್ಪರ್ಗಾ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಬಿ.ನಾರಾಯಣರಾವ ಅವರು ಸೋತಿದ್ದರೂ ಗೆದ್ದ ಶಾಸಕರಿಂದ ಆಗದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜನಸಾಮಾನ್ಯರ ನಡುವಿದ್ದು ಜನರ ಸಮಸ್ಯೆಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಬಸವಕಲ್ಯಾಣ ತಾಲೂಕಿನಲ್ಲಿರುವ ಬಡ ಜನರ ಕೆಲಸ ಕಾರ್ಯಗಳನ್ನು ಮಾಡಿಸಿ ಕೊಡುತಿದ್ದಾರೆ. ಜನಪ್ರತಿನಿಧಿ ಆದವರು ಜನರಿಗಾಗಿಯೇ ಹೊರತು ಜನರಿಂದ ದೂರವಿರಲು ಶಾಸಕನಾಗಬಾರದು ಎಂದು ಕಿವಿ ಮಾತು ಹೇಳಿದರು.
ಪ್ರತಿಯೊಂದು ಪಂಚಾಯತ್ ಮಟ್ಟದಿಂದ ವಾರ್ಡ ಸಭೆಗಳನ್ನು ನಡೆಸಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕಾಟಾಚಾರಕ್ಕೆ ಪಕ್ಷದಲ್ಲಿ ದುಡಿಯುವವರು ದೂರ ಸರಿದು ಸಹಕರಿಸಬೇಕು. ಅಂಥವರಿಂದ ಉತ್ತಮ ನಡವಳಿಕೆಯ ಕಾರ್ಯಕರ್ತರು ಕೂಡ ಹಾಳಾಗುತ್ತಾರೆ ಎಂದು ಖಾರವಾಗಿ ನುಡಿದರು.
ಇದೇ ವೇಳೆ ತಾಲೂಕಾ ಕಾಂಗ್ರೇಸ್ ಅಧ್ಯಕ್ಷ ನೀಲಕಂಠ ರಾಠೋಡ ಮಾತನಾಡಿ, ಪಕ್ಷದ ಹಿರಿಯ ಕಾರ್ಯಕರ್ತ ಬಿ.ನಾರಾಯಣರಾವ ಅವರು ಸೋತಿದ್ದರೂ ಜನರ ಸಂಪರ್ಕದಲ್ಲಿದ್ದುಕೊಂಡು ಪಕ್ಷ ಬಲಪಡಿಸಲು ಶ್ರಮಿಸುತಿದ್ದಾರೆ. ಜನರ ಸಾರ್ಥಕತೆಗೆ ಹಗಲಿರುಳು ದುಡಿಯುತಿದ್ದಾರೆ. ಕಾಂಗ್ರೇಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿಯುವವರನ್ನು ಮನ್ನಣೆ ಸ್ಥಾನಮಾನ ಇದ್ದೇ ಇರುತ್ತದೆ. ಈ ಹಿಂದಿನ ವಿಧಾನಸಭಾ ಚುನಾವಣೆ ಅಷ್ಟೇನು ಕಳಪೆ ಮಟ್ಟದ್ದಾಗಿಲ್ಲ. ಇದೀಗ ಪ್ರತಿಯೊಬ್ಬ ಕಾರ್ಯಕರ್ತನು ಮಾನಸಿಕ ಸೀಮಿತದಲ್ಲಿದ್ದು ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಬಡವರಿಗಾಗಿ ಇರುವ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಬೇಕು. ಜನರ ಕುಂದು ಕೊರತೆಗಳಿಗೆ ಸ್ಪಂಧಿಸುವದರೊಂದಿಗೆ ಪರಿಹಾರವನ್ನು ಒದಗಿಸಲು ಶ್ರಮಿಸುತ್ತೇವೆ. ಪಕ್ಷದ ಕಾರ್ಯಕರ್ತರು ತಮ್ ತಮ್ಮ ಊರುಗಳಲ್ಲಿ ಉತ್ತಮ ಚಾರಿತ್ರ್ಯ ಹೊಂದಿದ್ದಾಗ ಮಾತ್ರ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಬಹುಮತ ಸಿಗಲು ಸಾಧ್ಯವಾಗುತ್ತದೆ ಎಂದು ರಾಠೋಡ ವಿವರಿಸಿದರು.
ನಗರ ಘಟಕದ ಅಧ್ಯಕ್ಷ ಅಜರ ಅಲಿ ನವರಂಗ ಮಾತನಾಡಿದರು. ಅಶೋಕ ಗುತ್ತೇದಾರ್, ರೈಲ್ವೆ ಸಮಿತಿ ಸದಸ್ಯ ದಿಲೀಪ ಶಿಂಧೆ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಅಶೋಕ ಢಗಳೆ, ತಹಸೀನ್‍ಅಲಿ ಜಮಾದಾರ್, ಯುವರಾಜ ಭೆಂಡೆ, ಅಜೀಜ್ ಅಟ್ಟೂರ್, ರಾಜಕುಮಾರ ಗುಂಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ನೂರಾರು ಕಾರ್ಯಕರ್ತರು ಹಾಜರಿದ್ದರು.

ವರದಿ: ವೀರಣ್ಣ ಮಂಠಾಳಕರ್
ಬಸವಕಲ್ಯಾಣ, ಬೀದರ ಜಿಲ್ಲೆ
ಮೊ. ಸಂಖ್ಯೆ: 8105783103


ಕಾಮೆಂಟ್‌ಗಳಿಲ್ಲ: