ಸೋಮವಾರ, ಡಿಸೆಂಬರ್ 31, 2012

ವಿಧಾನಸಭಾ ಚುನಾವಣೆ ನಿಮಿತ್ಯ ರಾಜಕೀಯ ಮುಖಂಡರುಗಳ ಕಸರತ್ತುಃ ಪ್ರಾದೇಶಿಕ ಪಕ್ಷ ಕೆಜೆಪಿಯ ವಚ೯ಸ್ಸು-ರಾಜಕೀಯ ಲೆಕ್ಕಾಚಾರ ಸಿಗದೇ ಗೆಲ್ಲುವರ್ಯಾರು...?

ಕಾಂಗ್ರೆಸ್ ಯುವ ಮುಖಂಡ ಆನಂದ ದೇವಪ್ಪ

 ವೀರಣ್ಣ ಮಂಠಾಳಕರ್

--------------------

ಬಸವಕಲ್ಯಾಣ, ಡಿ.31, 2012

ಶಾಸಕರುಗಳ ರಾಜಿನಾಮೆ ಪವ೯ ರಾಜ್ಯದೆಲ್ಲೆಡೆ ಶುರುವಾಗುತ್ತಿದ್ದಂತೆ ಪ್ರತಿಸ್ಪಧಿಗಳು ಹುಟ್ಟಿಕೊಳ್ಳುತ್ತಿರುವುದರ ಜೊತೆಗೆ ವಿವಿಧ ಪಕ್ಷಗಳ ಮುಖಂಡರು ಕೆಜೆಪಿಯತ್ತ ಒಲವು ತೋರಿಸುತ್ತಿರಲು ಮಾಜಿ ಸಿಎಂ ಬಿಎಸ್್ವೈ ಅವರು ಹುಟ್ಟು ಹಾಕಿರುವ ಪ್ರಾದೇಶಿಕ ಪಕ್ಷ ಕೆಜೆಪಿಯತ್ತ ಜನ ಮುಖ ಮಾಡುವಂತಾಗಿದೆ.

ರಾಜ್ಯದ ಪ್ರಬಲ ರಾಜಕೀಯ ಧುರೀಣರು ಕೆಜೆಪಿಗೆ ಸಾಥ್್ ನೀಡುತ್ತಿವುದರಿಂದ ಬಿಎಸ್್ವೈ ಅವರೇ ಹುಟ್ಟು ಹಾಕಿದ್ದ ಬಿಜೆಪಿ ನಿನಾ೯ಮಕ್ಕೆ ಸಜ್ಜಾಗಿದ್ದಾರೆ. ಕಾಂಗ್ರೆಸ್್ಗೆ ನೇರ ಪೈಪೋಟಿಯಿಂದ ಜನಸ್ನೇಹಿ ಯಾತ್ರೆಯ ಮೂಲಕ ಯಡಿಯೂರಪ್ಪನವರ ಗುಡುಗು ರಾಜ್ಯದ ಪ್ರತಿ ಜೆಲ್ಲೆಗಳ ಪ್ರತಿಪಕ್ಷದ ನಾಯಕರುಗಳಿಗೆ ಇದರಿಂದ ಬಿಸಿ ತಟ್ಟಿದಂತೆ ರಾಜಕೀಯದಲ್ಲಿ ಹೊಸ ಪಲ್ಲಟ ಆರಂಭವಾಗಲಿದೆ.

ಅಭಿವೖದ್ಧಿ ಮಂತ್ರವನ್ನೇ ಊದುವ ರಾಜಕೀಯ ನಾಯಕರು ಒಂದೆಡೆ ಇದ್ದರೆ ಅಭಿವೖದ್ಧಿಯ ಕನಸಿನೊಂದಿಗೆ ಮುಂಬರುವ ವಿಧಾನಸಭಾ ಚುನಾವಣಾ ಅಖಾಡಕ್ಕಿಳಿಯಲು ಯುವ ಪಡೆ ಸೇರಿದಂತೆ ರಾಜಕೀಯ ಮುತ್ಸದ್ದಿಗಳ ನಡುವೆ ನೇರ ಪೈಪೋಟಿ, ಪ್ರತಿಸ್ಪಧೆ೯ ಏಪ೯ಟ್ಟಿದೆ. ಬಿಕ್ಕಟ್ಟಿನ ಚುನಾವಣೆ ಎದುರಿಸುವಂಥ ಪರಿಸ್ಥಿತಿ ನಿಮಾ೯ಣಗೊಂಡಿದೆ.

ಬರುವ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಹಲವು ಪಕ್ಷದ ರಾಜಕೀಯ ಧುರೀಣರು ಕನಾ೯ಟಕದಲ್ಲೆಡೆ ಪ್ರವಾಸ ಕೈಗೊಂಡಿದ್ದಾರೆ. ಕೆಜೆಪಿಯ ಜನಸ್ನೇಹಿ ಕಾಯ೯ಕ್ರಗಳಂಥ ಸಮಾರಂಭಗಳು ಏಪ೯ಡಿಸುವ ಮೂಲಕ ಜನರ ಬಳಿ ಮಾಜಿ, ಹಾಜಿಗಳ ಪೈಪೋಟಿಯ ರಣರಂಗದ ವೇದಿಕೆ ಸಿದ್ಧವಾಗುತ್ತಿದೆ.

30 ವಷ೯ಗಳ ರಾಜಕೀಯ ಅನುಭವ ಹೊಂದಿರುವ ಬಸವಕಲ್ಯಾಣ ಶಾಸಕ ಬಸವರಾಜ ಪಾಟೀಲ ಅಟ್ಟೂರ್್ ಅವರು, ಶಿಕ್ಷಣ ಇಲಾಖೆಯ ಮಂತ್ರಿಗಳಾಗಿ ಪ್ರಭಾವಿ ರಾಜಕಾರಣಿಯೂ ಆಗಿದ್ದಾರೆ. ಇತ್ತೀಚಿಗಷ್ಟೇ ಅಟ್ಟೂರ್್ ಅವರು ಬಿಎಸ್್ವೈ ಸಮ್ಮುಖದಲ್ಲೇ ಬಿಜೆಪಿಗೆ ರಾಜಿನಾಮೆ ಸಲ್ಲಿಸಿ, ಕೆಜೆಪಿ ಸೇರಿರುವುದನ್ನು ಬಹಿರಂಗ ಸಮಾವೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಬಸವರಾಜ ಪಾಟೀಲ ಅಟ್ಟೂರ್್ ಅವರು, ಮಾಜಿ ಮುಖ್ಯಮಂತ್ರಿ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್್.ಯಡಿಯೂರಪ್ಪನವರ ಬೆಂಬಲಕ್ಕೆ ಕಟಿಬದ್ಧರಾಗಿ ನಿಂತಿದ್ದು, ಬಿಜೆಪಿ ಬೆಂಬಲಿಗರಿಗೆ ಜಿಲ್ಲೆಯಲ್ಲಿ ಬಿಸಿತಟ್ಟಿಸಿದ್ದಾರೆ. ಬೀದರ ಜಿಲ್ಲೆಯಲ್ಲಿ ಬಿಎಸ್್ವೈ  5 ಕೆಜೆಪಿ ಅಭ್ಯಥಿ೯ಗಳ ಘೋಷಣೆ ಮಾಡಿ ಔರಾದ ಕ್ಷೇತ್ರವೊಂದು ಬಾಕಿ ಉಳಿಸಿದ್ದಾರೆ.

ಅಟ್ಟೂರ್್ ಅವರು ರಾಜಕೀಯ ಅನುಭವಸ್ಥರಾಗಿ, 5 ಸಲ ಶಾಸಕರಾಗಿ, ಶಿಕ್ಷಣ ಮಂತ್ರಿಯಾಗಿ ಸೇವೆ ಸಲ್ಲಿಸಿದ ಜನಪ್ರಿಯ ನಾಯಕರೆಂದು ಗುರುತಿಸಿಕೊಂಡವರಾಗಿದ್ದಾರೆ. ಇತ್ತೀಚಿಗೆ ಅವರ ವಚ೯ಸ್ಸು ಕಡಿಮೆಯಾಗಿದೆ ಎಂಬ ಚಚೆ೯ ಕೇಳಿ ಬರುವಂತಾದರೂ ಅದನ್ನೆಲ್ಲಾ ಎದುರಿಸಲು ಸಿದ್ಧರಾಗಿ ಅನಾರೋಗ್ಯದಿಂದ ಚೇತರಿಸಿಕೊಂಡು ಜನರ ಬಳಿ ಹೋಗಿ ಅಭಿವೖದ್ಧಿಯ ಚಿಂತನೆ ಮೂಡಿಸಲಿದ್ದಾರೆ.

ಬಿಎಸ್್ಆರ್್ ಕಾಂಗ್ರೆಸ್್ ಪಕ್ಷದಿಂದ ಸ್ಪಧಿ೯ಸುವ ಎಂ.ಜಿ.ಮುಳೆ ದುಬ೯ಲವೆಂದು ಭಾವಿಸದೇ ಪ್ರಬಲ ಶಕ್ತಿ, ಜನ ಬೆಂಬಲ ಪಡೆಯುವ ಅಸಾಮಾನ್ಯ ನಾಯಕರಾಗಿ ಮತದಾರರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಸಫಲರಾಗುವ ಎಲ್ಲಾ ಲಕ್ಷಣಗಳು ಮುಳೆ ಅವರಲ್ಲಿ ಕಂಡು ಬರುತ್ತವೆ ಎಂಬ  ಮಾತುಗಳು ಕೇಳಿ ಬರುತ್ತಿವೆ.

ಮಾಜಿ ಶಾಸಕರಾಗಿದ್ದ ಹಿರಿಯ ರಾಜಕೀಯ ಧುರೀಣ ಎಂ.ಜಿ.ಮೂಳೆ ಮೊಟ್ಟ ಮೊದಲು ಜೆಡಿಎಸ್್ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ನಂತರದ ದಿನಗಳಲ್ಲಿ ಸೇಪ೯ಡೆಗೊಂಡಿದ್ದು ಕಾಂಗ್ರೆಸ್್ ಪಕ್ಷಕ್ಕೆ, ಹಲವು ಬಾರಿ ಸೋಲನನುಭವಿಸಿ ರಾಜಕೀಯ ಬಲ್ಲವರಾಗಿದ್ದಾರೆ.

ಹಿರಿಯ ರಾಜಕಾರಣಿ ಗುರುಪಾದಪ್ಪ ನಾಗಮಾರಪಳ್ಳಿ ಅವರೊಂದಿಗೆ ಬಿಜೆಪಿಗೆ ಸೇಪ೯ಡೆಯಾಗಿದ್ದ ಮುಳೆ ಅವರು ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಿ, ನಾಗಮಾರಪಳ್ಳಿ ಅವರಿಂದಲೂ ಮುಳೆ ಬೇಪ೯ಟ್ಟಿದ್ದಾರೆ. ನಾಗಮಾರಪಳ್ಳಿ ಅವರು ಬೀದರ ಕ್ಷೇತ್ರದಿಂದ ಕೆಜೆಪಿ ಅಭ್ಯಥಿ೯ಯಾಗಿ ಚುನಾವಣಾ ಅಖಾಡಕ್ಕಿಳಿಯುತ್ತಿರುವುದು ಪ್ರಕಟವಾಗಿದೆ.

ಬಿಎಸ್್ವೈ ಅವರ ಕಟ್ಟಾ ಬೆಂಬಲಿಗರಾಗಿ ಅವರ ಜೊತೆಯಾಗಿಯೇ ಇದ್ದು, ಪ್ರಾಮಾಣಿಕ ಕಾಯ೯ಕತ೯ನೆಂಬ ಹೆಸರಿಗೆ ಸುಭಾಷ ಕಲ್ಲೂರ್್ ಅವರು ಕೆಜೆಪಿ ಪಕ್ಷದ ಗೆಲುವಿಗಾಗಿ ಜಿಲ್ಲೆಯಲ್ಲೆಡೆ ಶಕ್ತಿ ಪ್ರದಶ೯ನ ಮಾಡಲಿದ್ದಾರೆ. ಪ್ರಾಮಾಣಿಕ ಸೇವೆಯಿಂದ ಕಲ್ಲೂರ್್ ಅವರಿಗೆ ಮಹತ್ವದ ಸ್ಥಾನ ಸಿಗುವ ಸಂಭವ ಭರವಸೆಯೂ ಕೂಡ ವ್ಯಕ್ತವಾಗಿದೆ.

ಬಸವಕಲ್ಯಾಣ ಕ್ಷೇತ್ರ ಪ್ರಮುಖರಾದ ಬಾಬು ಹೊನ್ನಾನಾಯಕ ಸಹ ಜೆಡಿಎಸ್್ ತೊರೆದು ಬಿಎಸ್್ಆರ್್ ಕಾಂಗ್ರೆಸ್್ಗೆ ಹೋಗಿದ್ದಾರೆ. ಸ್ವಾಭಿಮಾನಿ ಶ್ರೀರಾಮುಲು ಪಕ್ಷ ಬಿಎಸ್್ಆರ್್ ಕಾಂಗ್ರೆಸ್್ಗೆ ಸೇರಿರುವ ಇವರು ಯಾವ ಸ್ಥಾನ ಪಡೆಯಲಿದ್ದಾರೆಂಬುದು ಕಾದು ನೋಡಬೇಕಷ್ಟೇ. ಇಲ್ಲಿಂದಲೇ ಚುನಾವಣಾ ತಯ್ಯಾರಿ ನಡೆಸುತ್ತಿರುವುದು ಕೇಳಿ ಬರುತ್ತಿದೆ.

ಪ್ರಥಮ ಬಾರಿಗೆ ಚುನಾವಣಾ ಅಖಾಡಕ್ಕಿಳಿದು ತಂದೆಯ ರಾಜಕೀಯ ಬಳುವಳಿ ಪಡೆದ ಬಸವಕಲ್ಯಾಣ ಕ್ಷೇತ್ರದ ಅತಿ ಕಿರಿಯ ಶಾಸಕನೆಂಬ ಖ್ಯಾತಿಗೆ ಒಳಗಾದ ದಿ.ಸಿದ್ರಾಮಪ್ಪ ಖೂಬಾ ಅವರ ಮಗ ಮಲ್ಲಿಕಾಜು೯ನ ಖೂಬಾ ಅವರು ಜನಬೆಂಬಲ, ಆಶಿವಾ೯ದದಿಂದ ಮೂರು ವಷ೯ಗಳ ಕಾಲ ಅಧಿಕಾರ ನಡೆಸಿದ್ದರು.

ಎರಡನೇ ಸಲದ ವಿಧಾನಸಭಾ ಚುನಾವಣೆಯಲ್ಲಿ ಸೋಲನನುಭವಿಸಿದ್ದ ಖೂಬಾರನ್ನು ಮತದಾರರೇ ಸೋಲಿಸಿದ್ದರು ಎಂಬ ಮಾತು ಅವರಿಂದಲೇ ಕೇಳಿ ಬರುತ್ತದೆ. ಅಧಿಕಾರವಧಿಯಲ್ಲಿ ಮಾಡಿದ ತಪ್ಪು ಮೆಲುಕು ಹಾಕಿ, ಮುಂದೆ ಹಾಗಾಗದಂತೆ ಎಚ್ಚರ ವಹಿಸಿ ಅಭಿವೖದ್ಧಿಯ ಕನಸು ಕಂಡಿದ್ದೇನೆ ಎಂಬುದು ಅವರ ಆಪ್ತ ವಲಯಗಳಿಂದ ಕೇಳಿ ಬರುವ ಮಾತಾಗಿದೆ.

ಸೋಲಿನಿಂದಾಗಿ ಇದೀಗ ಸಾಕಷ್ಟು ತಪ್ಪುಗಳನ್ನು ತಿದ್ದಿಕೊಂಡಿದ್ದೇನೆ ಎನ್ನುವ ಖೂಬಾ ಅವರು, ಮುಂದಿನ ದಿನಗಳಲ್ಲಿ ಶಾಸಕರ ಭವಿಷ್ಯ ಜನರೇ ನಿಣ೯ಯಿಸಲಿದ್ದಾರೆ. ರಾಜಕೀಯವೆಂದರೆ ಗೊತ್ತಿಲ್ಲದ ನನಗೆ ಸೋಲಿನಿಂದ ರಾಜಕೀಯ ಕಲಿತಂತಾಗಿದೆ. ಆದ್ದರಿಂದ ಮುಂದಿನ ವಿಧಾನ ಸಭಾ ಚುನಾವಣೆಗೆ ಖೂಬಾ ಸಹ ಸ್ಪಧಿ೯ಸುತ್ತಿರುವುದು ಖಚಿತ ಎಂಬುದು ಅಪ್ತರಿಂದ ಕೇಳಿ ಬುರುತ್ತಿದೆ.

ಬಿಜೆಪಿ ಮತ್ತು ಕೆಜೆಪಿಗೆ ಸೋಲಿಸುವ ಛಲ ನೇರ ಕಾಂಗ್ರೆಸ್್ಗೆ ಪೈಪೋಟಿಯಾಗಿ ಚುನಾವಣಾ ಅಖಾಡಕ್ಕಿಳಿಯುತ್ತಿರುವ ಮಲ್ಲಿಕಾಜು೯ನ ಖೂಬಾ ಅವರು, ಬಿಎಸ್್ಆರ್್ ನಿಂದ ಯಾವುದೇ ಹಾನಿಯಿಲ್ಲವೆಂಬ ಮನೋಭಾವ ಹೊಂದಿದಂತಿದೆ.

ಇನ್ನೂ ಕಾಂಗ್ರೆಸ್್ ಪಕ್ಷದಲ್ಲಿ ಅಭ್ಯಥಿ೯ಯ ಘೋಷಣೆ ಸ್ಪಷ್ಟವಿಲ್ಲ. ಕಾಂಗ್ರೆಸ್್ನೊಂದಿಗೆ ಬನ್ನಿ, ಬದಲಾವಣೆ ತನ್ನಿ ಕಾಯ೯ಕ್ರಮವೊಂದರಲ್ಲಿ ಅಧೀಕೖತ ಅಭ್ಯಥಿ೯ಯ ಹೆಸರು ಘೋಷಣೆ ಆದಂತಿದ್ದರೂ, ಅಡ್ಡಗೋಡೆ ಮೇಲೆ ದೀಪವಿಟ್ಟಂತಾಗಿದೆ. ಮಾಜಿ ಸಿಎಂ ಹಾಗೂ ಸಂಸದ ಧಮ೯ಸಿಂಗ್್ ಅವರ ಮಾತಿನಿಂದ ಬೆಕ್ಕಿಗೆ ಗಂಟೆ ಕಟ್ಟಿದಂತಾಗಿದ್ದು ನಿಜ.

ಇಷ್ಟಾದರೂ ತೆರೆಮರೆಯಲ್ಲಿ ಅನೇಕರು ಕಾಂಗ್ರೆಸ್್ ಪಕ್ಷದಿಂದ ಟಿಕೇಟ್್ ಪಡೆಯುವ ಅಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್್ನ ವೀಕ್ಷಕರ ಸಭೆಯೊಂದರಲ್ಲಿ 16 ಜನ ಅಕಾಂಕ್ಷಿಗಳಾಗಿ ಅಜಿ೯ ಸಲ್ಲಿಸಿದರುವುದು ಅಪರೂಪವಾಗಿದೆ. ಮುಂದಿನ ದಿನಗಳಲ್ಲಿ ಅಭ್ಯಥಿ೯ಯ ಘೋಷಣೆಯಾದರೆ ಕಾಂಗ್ರೆಸ್್ನಲ್ಲೂ ಪ್ರತಿಸ್ಪಧಿ೯ಗಳು ಹೆಚ್ಚಾಗುವ ಸಂಭವ ಹೌದು. ಸ್ವತಂತ್ರ ಅಭ್ಯಥಿ೯ಗಳಾಗಿ ಚುನಾವಣೆ ಎದುರಿಸುವವರು ಇಲ್ಲಿದ್ದಾರೆ. ಹೈಕಮಾಂಡ ಮಾತ್ರ ಯಾರನ್ನು ಕಾಂಗ್ರೆಸ್್ ಟಿಕೇಟ್್ ನೀಡಿ ಆಶಿವ೯ದಿಸುತ್ತದೋ ಗೊತ್ತಿಲ್ಲದ ಗೊಂದಲ್ಲಿದೆ. ಏನೇ ಆದರೂ ಈ ಬಾರಿಯ ಚುನಾವಣೆಗೆ ರಂಗೇರಲಿದೆ.

ಬಿಜೆಯಿಂದ ಪ್ರಮುಖರೆಲ್ಲ ಶಾಸಕ ಬಸವರಾಜ ಪಾಟೀಲ ಅಟ್ಟೂರ್್ ಅವರ ಕೈ ಬಲಪಡಿಸಿದ್ದಾರೆ. ಬಿಜೆಪಿಗೆ ಗುಡ್್ಬೈ ಹೇಳಿ, ಕೆಜೆಪಿಗೆ ಕೈ ಜೋಡಿಸಿದ್ದಾರೆ. ಕೆಲ ಕಾಯ೯ಕತ೯ರು ಬಿಜೆಪಿಯಲ್ಲೇ ಉಳಿದುಕೊಂಡು ಅವರವರಲ್ಲಿಯೇ ಅನೇಕರು ಅಕಾಂಕ್ಷಿಗಳಾಗಿ ಉಳಿದಿರುವಂತೆ ಒಳಗೊಳಗೆ ಇರಿಸುಮುರುಸು ಕಂಡು ಬರುವಂತ್ತಿದೆ.

ಮತದಾರರ ಬಗ್ಗೆಯಾಗಲಿ, ಪಕ್ಷದ ಕಾಯ೯ಕತ೯ರುಗಳ ಬಗ್ಗೆ, ಅಭಿವೖದ್ಧಿ ಚಿಂತನೆಗಳು, ಜನಸಾಮಾನ್ಯರ ಕುಂದು ಕೊರತೆಗಳಿಗೆ ಸ್ಪಂಧಿಸುವಂಥ ಜನ ನಾಯಕರುಗಳಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜನರು ಬಯಸಿದಂತಿದೆ. ಮತದಾರರು ಉತ್ತಮರನ್ನು ಬೆಂಬಲಿಸಲು ಮುಂದಾಗಿರುವುದು ಮಾತ್ರ ಸುಳ್ಳಲ್ಲ.

ಕೇವಲ ಕಾಲಹರಣದ ರಾಜಕಾರಣ ಮಾಡುತ್ತಿರುವವರಿಗೆ, ರೈತರ ಸಮಸ್ಯೆಗಳಿಗೆ ಸ್ಪಂಧಿಸದೇ, ಸಮಾಜದ ಅಭಿವೖದ್ಧಿಯಿಲ್ಲದವರ ಸೋಲು ಗ್ಯಾರಂಟಿ.  ವಿದ್ಯುತ್್ ಕೊರತೆ, ರಸ್ತೆಗಳ ದುರಸ್ಥಿ, ಶಾಲಾ ಕಾಲೇಜುಗಳಲ್ಲಿನ ಅನೇಕ ಮೂಲಭೂತ ಸಮಸ್ಯೆಗಳು, ಕುಗ್ರಾಮಗಳ ಜನರ ಪಾಡು, ನಗರ ಪ್ರದೇಶಗಳ ಜನರ ಸ್ಥಿತಿ ಸೌಲಭ್ಯ ವಂಚಿತರ ಸ್ಥಿತಿ ಚಿಂತಾಜನಕವಾಗಿದೆ.

ಶಾಸಕ ಅಟ್ಟೂರ್ ಅವರ ಬೆಂಬಲಿಗರಾಗಿ ಬಿಜೆಪಿಯಲ್ಲಿ ಪ್ರಾಮಾಣಿಕ ಕಾಯ೯ಕತ೯ರಾಗಿ ಕಾಯ೯ನಿವ೯ಹಿಸಿದ್ದ ಭಾಜಪ ತಾಲೂಕಾಧ್ಯಕ್ಷ ಸುಧೀರ ಕಾಡಾದಿ ಹಾಗೂ ನಗರ ಘಟಕದ ಅಧ್ಯಕ್ಷ ಸೂಯ೯ಕಾಂತ ಚಿಲ್ಲಾಬಟ್ಟೆ ಇಬ್ಬರೂ ಬಿಜೆಪಿ ಟಿಕೇಟ್ ಅಕಾಂಕ್ಷಿಗಳಾಗಿದ್ದಾರೆ. ಹೈಕಮಾಂಡ ಯಾರನ್ನು ಟಿಕೇಟ್್ ನೀಡಿ ಪ್ರೊತ್ಸಾಹಿಸುತ್ತದೇ ಎಂಬುದನ್ನು ಕಾದು ನೋಡಬೇಕಾಗಿದೆ. ಮತ್ತೆ ಬಿಜೆಪಿ ಪಕ್ಷದಲ್ಲಿಯೇ ಕೆಲವರು ಪ್ರತಿಸ್ಪಧಿ೯ಗಳಾದರೆ ಸಂಶಯವಿಲ್ಲ ಎಂಬಂತಾಗಿದೆ.

ಎಸ್ಸಿ, ಎಸ್ಟಿ ಪ್ರಮಾಣ ಪತ್ರಗಳಿಂದ ಹಿಡಿದು ಯಾವುದೇ ಸಕಾ೯ರಿ ಕಚೇರಿಗಳಲ್ಲಿ ಜನಗಳ ಮೂಲಸೌಲಭ್ಯಕ್ಕೆ ಮುಂದಾಗುವ ನಾಯಕರುಗಳು ಇಲ್ಲಿ ಬೇಕಾಗಿದ್ದಾರೆ. ಎಲ್ಲರ ಸಮಸ್ಯೆಗಳಿಗೆ ಪ್ರಾಮಾಣಿಕ ಪ್ರಯತ್ನದ ಚಿಂತನೆ ಮಾಡುವವರ ಪಾಲಿಗೆ ಜನ ಬೆಂಬಲ ಇದ್ದೇ ಇರುತ್ತದೆ ಎನ್ನುವ ಅನೇಕರು ತಾಲೂಕಾಡಳಿತ ಸುಲಭಾಗಿ ಅಭಿವೖದ್ಧಿ ಹೊಂದುವಂತಾಗಬೇಕು ಎಂಬ ಅಳಲನ್ನು ತೋಡಿಕೊಳ್ಳುತ್ತಾರೆ.

ಶಾಸಕ ಬಸವರಾಜ ಪಾಟೀಲ, ಇತ್ತೀಚಿಗೆ ಬಿಜೆಪಿಗೆ ರಾಜಿನಾಮೆ ನೀಡಿ ಕೆಜೆಪಿಗೆ ಹೋಗಿದ್ದಾರೆ.

 

ಶಾಸಕ ಅಟ್ಟೂರ್ ಅವರ ಬೆಂಬಲಿಗರಾಗಿ ಬಿಜೆಪಿಯಲ್ಲಿ ಕಾಯ೯ನಿವ೯ಹಿಸಿದ್ದ ಭಾಜಪ ತಾಲೂಕಾಧ್ಯಕ್ಷ ಸುಧೀರ ಕಾಡಾದಿ ಹಾಗೂ ನಗರ ಘಟಕದ ಅಧ್ಯಕ್ಷ ಸೂಯ೯ಕಾಂತ ಚಿಲ್ಲಾಬಟ್ಟೆ

 

ಹಿರಿಯ ರಾಜಕಾರಣಿ, ಮಾಜಿ ಶಾಸಕ ಎಂ.ಜಿ.ಮುಳೆ

 

ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಯುವ ಕಾಯಾ೯ಧ್ಯಕ್ಷ ಮಲ್ಲಿಕಾಜು೯ನ ಖೂಬಾ

 

ಕಾಂಗ್ರೆಸ್್ ಮುಖಂಡ ಶಿವಶರಣ ಬಿರಾದಾರ್


ಕಾಮೆಂಟ್‌ಗಳಿಲ್ಲ: