ಮಂಗಳವಾರ, ಏಪ್ರಿಲ್ 17, 2012

ಬಸವಕಲ್ಯಾಣಃ ಅಬ್ಬರದ ಕಸಾಪ ಪ್ರಚಾರದಲ್ಲಿ ಯುವ ಉತ್ಸಾಹಿ ಸುರೇಶ ಚನಶೆಟ್ಟಿ

 ಚಿತ್ರ ವಿವರಃ ಬಸವಕಲ್ಯಾಣ ತಾಲೂಕಿನ ಹಾರಕೂಡ ಚೆನ್ನವೀರ ಶಿವಾಚಾಯ೯ರಿಂದ ಜಿಲ್ಲಾ ಕಸಾಪ ಚುನಾವಣೆ ಪ್ರಚಾರಕ್ಕೆ ಮಂಗಳವಾರ ಆಶಿವಾ೯ದ ಪಡೆದು ತಾಲೂಕಿನಲ್ಲೆಡೆ ಅಭ್ಯಥಿ೯ ಸುರೇಶ ಚನಶೆಟ್ಟಿ ಮತಯಾಚಿಸಿದರು. ಈ ಸಂದಭ೯ದಲ್ಲಿ ಶ್ರೀಗಳು ಸನ್ಮಾನಿಸಿದರು. ಅವರೊಂದಿಗೆ ಅವರ ಬೆಂಬಲಿಗರು ಉಪಸ್ಥಿತರಿದ್ದರು.


 ಬಸವಕಲ್ಯಾಣ, ಏ. 17


ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರ ಚುನಾವಣೆ ಇದೇ ಏ. 29 ರಂದು ನಡೆಯಲಿರುವ ಹಿನ್ನೆಯಲ್ಲಿ ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡದಿಂದ ಕಸಾಪ ಚುನಾವಣಾ ಸ್ಪಧಿ೯ ಸುರೇಶ ಚನಶೆಟ್ಟಿ ಅವರು ತಮ್ಮ ಬೆಂಬಲಿಗರೊಂದಿಗೆ ಚೆನ್ನವೀರ ಶಿವಾಚಾಯ೯ರ ಆಶೀವಾ೯ದ ಪಡೆದು ಮಂಗಳವಾರದ ದಿನವಿಡೀ ಮತದಾರರ ಮನೆ ಬಾಗಿಲಿಗೆ ಹೋಗಿ ಮತಯಾಚಿಸಿದರು.

ಸಾಹಿತ್ಯಿಕ, ಸಾಂಸ್ಕೖತಿಕ ವಾತಾವರಣ ಹುಟ್ಟು ಹಾಕುವ ಉದ್ದೇಶದಿಂದ ಕನ್ನಡಕ್ಕಾಗಿ ಏನೆಲ್ಲಾ ಯೋಚನೆ ಕನಸುಗಳನ್ನಿಟ್ಟುಕೊಂಡಿರುವ ಸುರೇಶ ಚನಶೆಟ್ಟಿ ಅವರು ಮತದಾರರ ಮೇಲೆ ಭಾರಿ ನಿರೀಕ್ಷೆಯನ್ನಿಟ್ಟುಕೊಂಡಂತೆ ಅಬ್ಬರದ ಪ್ರಚಾರವನ್ನು ಕೈಗೊಂಡಿದ್ದರು. ಅವರ ಮುಖಭಾವದಲ್ಲಿ ಸದಾ ನಗುವನ್ನು ತುಂಬಿಕೊಂಡು ಸಾಂಸ್ಕೖತಿಕ ಬದಲಾವಣೆ ಬಯಸುವ ಜನರತ್ತ ಧಾವಿಸಿದರು.

ಮತದಾರರ ಒತ್ತಾಸೆಗೆ ಮಣಿದು ನಾನು ಜಿಲ್ಲಾ ಕಸಾಪ ಚುನಾವಣಾ ಕಣಕ್ಕಿಳಿದಿದ್ದೇನೆ. ನಾಡು ನುಡಿಗಾಗಿ ಸೂಕ್ತ ವೇದಿಕೆ ನಿಮಾ೯ಣ ಮಾಡಲು ಹತ್ತು ಹಲವು ಕನಸುಗಳಿವೆ. ಅಂತಹ ಮಹತ್ವದ ಯೋಜನೆಗಳು ಕಾಯ೯ರೂಪಕ್ಕೆ ಬರಲು ಒಂದು ಬಾರಿ ಸುವಣ೯ವಕಾಶ ಮಾಡಿಕೊಡಬೇಕು ಎಂದು ಹಲವು ಮತದಾರರಲ್ಲಿ ಮನವಿಸಿರುವುದನ್ನು ಕಂಡು ಬಂದಿತ್ತು.

ಕನ್ನಡ ಸಾಹಿತ್ಯ ಪರಿಷತ್ತು ನೂರು ವಷ೯ ಪೂರೈಸಿ ಶತಮಾನೋತ್ಸವ ಸಂಭ್ರಮ ಹತ್ತಿರದಲ್ಲಿ ಬರುತ್ತಿದೆ. ಹಿರಿಯರ ಹಾಗೂ ವಿದ್ವಾಂಸರ ಮಾಗ೯ದಶ೯ನದಲ್ಲಿ ಅಥ೯ಪೂಣ೯ವಾಗಿ ಆಚರಿಸಲು ವಿನೂತನವಾದ ಕಾಯ೯ಕ್ರಮಗಳು, ವಿಭಿನ್ನ ಸಾಹಿತ್ಯಕ ಸಾಂಸ್ಕೖತಿಕ ಸಮ್ಮೇಳನಗಳು, ಸಮಾಜಮುಖಿ ಚಟುವಟಿಕೆಗಳು ಹಮ್ಮಿಕೊಳ್ಳಲು ನಿಧ೯ರಿಸಿದ್ದೇನೆ ಎಂದು ಹೇಳಿದರು.

ಪ್ರಚಾರದ ನಿಮಿತ್ಯ ಚನಶೆಟ್ಟಿ ಅವರೊಂದಿಗೆ ಡಾ. ಬಸವರಾಜ ಬಲ್ಲೂರ್್, ಶಾಂತಲಿಂಗ ಮಠಪತಿ, ರುದ್ರೇಶ ಮಠಪತಿ, ಪ್ರೇಮಸಾಗರ ಪಾಟೀಲ, ಡಾ. ಬಸವರಾಜ ಸ್ವಾಮಿ, ಕಾಶಪ್ಪ ಬಾಲಕಿಲೆ, ದೇವಿಂದ್ರ ಬರಗಾಲೆ, ರುದ್ರಮುನಿ ಮಠಪತಿ, ಧನರಾಜ ಭಾತಂಬ್ರೆ, ಡಾ. ರಾಜಕುಮಾರ ಅಲ್ಲೂರೆ, ಜೈಶೇನ್್ ಪ್ರಸಾದ್್ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.




ಕಾಮೆಂಟ್‌ಗಳಿಲ್ಲ: