ಮಂಗಳವಾರ, ಏಪ್ರಿಲ್ 17, 2012

ಕಸಾಪ ಮತದಾರರ ದಾರಿ ತಪ್ಪಿಸುವ ಉದ್ದೇಶ

ಬಸವಕಲ್ಯಾಣ, ಏ. 13

ರಾಜ್ಯ ಮತ್ತು ಜಿಲ್ಲೆಗಳಲ್ಲಿ ಏಕಕಾಲಕ್ಕೆ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಇದೇ ಏ. 29 ರಂದು ಜರುಗಲಿದ್ದು, ಆ ಹಿನ್ನೆಲೆಯಲ್ಲಿ ಸ್ಪಧಾ೯ ಕಣದಲ್ಲಿರುವ ಜಿಲ್ಲಾ ಕಸಾಪ ಅಭ್ಯಥಿ೯ಗಳಲ್ಲಿ ಕೆಲವರು ಸುಳ್ಳಿನ ಸರಮಾಲೆಯನ್ನೇ ಪೋಣಿಸಿ ತಮ್ಮ ವಯಕ್ತಿಕ ಸಾಧನೆಗಳ ಪಟ್ಟಿಯಲ್ಲಿ ಸುಳ್ಳಿನ ಕಂತೆಗಳನ್ನು ಸೇರಿಸಿ ಭಾರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಕಸಾಪ ಮತದಾರರ ದಾರಿ ತಪ್ಪಿಸುವ ಉದ್ದೇಶದಿಂದ ಸ್ಪಧಾ೯ ಕಣದಲ್ಲಿರುವ ಅಭ್ಯಥಿ೯ಯೊಬ್ಬರು ಬೆಂಬಲವನ್ನು ಕೋರಿ ಪ್ರಕಟಿಸಿದ ಪ್ರಣಾಳಿಕೆಯ ಪರಿಚಯ ಪತ್ರದಲ್ಲಿ ಅನೇಕ ಸುಳ್ಳುಗಳನ್ನೇ ಬರೆದುಕೊಂಡಿದ್ದಾರೆ. ಇಂತಹ ಒಂದು ಅಚಾತುಯ೯ ಮಾಡುವ ಮೂಲಕ ಜನಸಾಮಾನ್ಯರ ಕಣ್ಣಿಗೆ ಮಣ್ಣೆರೆಚುವ ಕಾಯ೯ದಲ್ಲಿ ನಿರತರಾಗಿದ್ದಾರೆ ಎಂಬ ಆರೋಪ ಸ್ಪಷ್ಟವಾಗಿ ಕೇಳಿ ಬರುತ್ತಿವೆ.

ಜಿಲ್ಲಾ ಕಸಾಪ ಸದಸ್ಯರಿಗೂ, ಸಾಹಿತ್ಯಾಸಕ್ತರಿಗೂ ಮುಗ್ಧ ಜನತೆಯ ದಾರಿ ತಪ್ಪಿಸಲು ಹೊರಟಿರುವ ಜಿಲ್ಲಾ ಕಸಾಪ ಚುನಾವಣಾ ಅಭ್ಯಥಿ೯ ಕಣದಲ್ಲಿರುವ ಪ್ರೊ. ವಿಜಯಲಕ್ಷ್ಮೀ ಗಡ್ಡೆ ಅವರು ವಿವಿಧ ಸಂಘ ಸಂಸ್ಥೆಯಲ್ಲಿ ಕಾಯ೯ ನಿವ೯ಹಿಸಿರುವ ಬಗ್ಗೆ ಚುನಾವಣಾ ಪ್ರಚಾರದ ನಿಮಿತ್ಯ ಪ್ರಕಟಿಸಿರುವ ಪರಿಚಯ ಪತ್ರ ಮತದಾರರ ಮನೆ ಮನೆಗೂ ತಲುಪಿಸಿದ್ದಾರೆ. ಅನೇಕ ಕನ್ನಡಪರ ಸಂಘ ಸಂಸ್ಥೆಗಳಲ್ಲಿ ಇರುವುದಾಗಿಯೂ ಸುಳ್ಳು ಸಾಧನೆಗಳು ಪ್ರತಿಬಿಂಬಿಸಿದ್ದಾರೆ.

ಕನ್ನಡ ಅಭಿವೖದ್ಧಿ ಪ್ರಾಧಿಕಾರದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಹೇಳಿಕೊಂಡಿರುವ ಅವರು, ಆ ಮೂಲಕ ಭಾರಿ ಪ್ರಮಾದವನ್ನೇ ಎಸಗಿದ್ದಾರೆ. ಈ ಕುರಿತು ಕ.ಅ.ಪ್ರಾಧಿಕಾರದ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರು ಕನ್ನಡಪ್ರಭದೊಂದಿಗೆ ಮಾತನಾಡಿ, ಬೀದರ ಜಿಲ್ಲೆಗೆ ಯಾರನ್ನೂ ಕೂಡ ಕನ್ನಡ ಅಭಿವೖದ್ಧಿ ಪ್ರಾಧಿಕಾರದ ಸದಸ್ಯರನ್ನಾಗಿ ನಾವು ನೇಮಕ ಮಾಡಿಲ್ಲ. ಇಲ್ಲದ ಜಂಭ ಕೊಚ್ಚಿಕೊಳ್ಳುವುದಕ್ಕಾಗಿ ಈ ರೀತಿ ಮಾಡುವುದು ಸರಿಯಲ್ಲ. ಗೌಣ ಸಾಧನೆಯವರಲ್ಲಿ ಇಂತಹ ಗುಣಗಳು ವಿಶೇಷವಾಗಿ ಕಂಡು ಬರುತ್ತವೆ ಎಂದು ಅವರು ಖಾರವಾಗಿಯೇ ನುಡಿದಿದ್ದಾರೆ.

ಅದೇ ರೀತಿ ಗಡಿ ಅಭಿವೖದ್ಧಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ  ಕನ್ನಡಪ್ರಭದೊಂದಿಗೆ ಮಾತನಾಡಿ, ತಮ್ಮ ಸ್ವಪ್ರತಿಷ್ಠೆಗಾಗಿ ಅಥವಾ ಕಸಾಪ ಚುನಾವಣಾ ಪ್ರಚಾರದಲ್ಲಿ ಮತದಾರರನ್ನು ದಾರಿ ತಪ್ಪಿಸುವ ಹುನ್ನಾರ ಇದಾಗಿದೆ. ಪವಿತ್ರವಾಗಿರುವ ಕನ್ನಡಿಗರ ಸಂಸ್ಥೆ ಕಸಾಪ ಅಧ್ಯಕ್ಷರುಗಳಾಗಿ ಇಂಥವರು ಬಂದರೆ ಕನ್ನಡವನ್ನೇ ಕುಲಗೆಡಿಸುತ್ತಾರೆ. ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಾರೆ ಎಂದು ಬೀದರ ಜಿಲ್ಲಾ ಗಡಿ ಅಭಿವೖದ್ಧಿ ಪ್ರಾಧಿಕಾರದ ಹೆಬ್ಬಾಳೆ ಸ್ಪಷ್ಟಪಡಿಸಿದ್ದಾರೆ.

ಅನೇಕ ಸಂಘ ಸಂಸ್ಥೆಗಳಲ್ಲಿ ಗೌರವಾನ್ವಿತ ಸೇವೆಯಲ್ಲಿರುವಂತೆ ಬೆಂಬಲವನ್ನು ಕೋರಿ ಪ್ರಣಾಳಿಕೆಯ ಹಿಂಬದಿ ಪುಟ (ವಿಜಿಟಿಂಗ್್ ಕಾಡ೯)ನಲ್ಲಿ ಪ್ರೊ. ವಿಜಯಲಕ್ಷ್ಮೀ ಗಡ್ಡೆ ಅವರು ಪ್ರಕಟಿಸಿರುವುದು ಅವರಿಗವರೇ ಆತ್ಮಾವಲೇಕನ ಮಾಡಿಕೊಳ್ಳಲಿ. ಇದು ನಾಚಿಗೇಡಿನ ಸಂಗತಿಯಾಗಿದೆ ಎಂದು ಕಸಾಪ ಸದಸ್ಯರು, ಬುದ್ಧಿಜೀವಿಗಳು ಕಿಡಿ ಕಾರಿದ್ದಾರೆ.

ಪ್ರೊ. ವಿಜಯಲಕ್ಷ್ಮೀ ಗಡ್ಡೆಯವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಮಾಡಿರುವುದನ್ನು ಪರಿಶೀಲಿಸಿ ನೋಡಿದಾಗ ಅನೇಕ ಸುಳ್ಳು ಸಾಧನೆಗಳ ಪಟ್ಟಿ ಬೆಳಕಿಗೆ ಬಂದಿದೆ.  ಈಗಲೇ ಈ ರೀತಿ ಮತದಾರರನ್ನು ತಪ್ಪು ದಾರಿಗೆಳೆಯುತ್ತಿರುವುದನ್ನು ನೋಡಿದರೆ ಇವರಲ್ಲಿ ನಿಜವಾದ ಕನ್ನಡಭಿಮಾನ, ಸಾಹಿತ್ಯಾಸಕ್ತಿ ಇಲ್ಲ ಎಂಬುದು ಸಾಬೀತಾಗುತ್ತದೆ. ಅಧಿಕಾರದ ಗದ್ದುಗೆಯನ್ನೇರಿ ಇವರು ಮಾಡುವುದೇನು ಎಂದು ಪ್ರಶ್ನಿಸುವಂತಾಗಿದೆ.

ಈ ಕುರಿತು ಅನೇಕ ಸಾಹಿತಿ, ಕವಿ, ಕಲಾವಿದರು, ಸದಸ್ಯರುಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎನ್ನುವುದಕ್ಕೆ ಇದೊಂದು ಜ್ವಲ್ಲಂತ ಉದಾಹರಣೆ ಅಷ್ಟೇ.  ಸುಳ್ಳು ಸಾಧನೆಯ ಪಟ್ಟಿಯಲ್ಲಿ ಸುಳ್ಳಿನ ಕಂತೆಗಳು ಸೇರಿರುವುದು ನಿಜವಾದ ಸಾಧಕರನ್ನೇ ನಾಚಿಸುವಂತೆ ಮಾಡಿರುವುದು ಹಾಸ್ಯಾಸ್ಪದವಾಗಿದೆ ಎನ್ನುತ್ತಾರೆ ಅನೇಕರು.

ಅದೇ ರೀತಿ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವುದಾಗಿಯೂ ಹೇಳಿದ್ದಾರೆ. ಹಾಗೂ ಕನಾ೯ಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷರೆಂದು ಕೂಡ ಬರೆದುಕೊಂಡಿರುತ್ತಾರೆ.

ಕರವೇ ಸಂಘಟನೆಗೂ ಗಡ್ಡೆ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಕರವೇ(ಪ್ರವೀಣಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಶಶಿಧರ ಕೋಸಂಬೆ ಪ್ರತಿಕ್ರಿಯಿಸಿದ್ದಾರೆ. ಅದೇ ರೀತಿ ಒಟ್ಟು 11 ವಿವರಗಳಲ್ಲಿನ 4ನೇಯ ಸಾಲಿನಲ್ಲಿ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷರೆಂದು ಸಹ ಪ್ರಕಟಿಸಿದ್ದಾರೆ.

ಈ ಕುರಿತು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಕೆ. ನೀಲಾ ಅವರು ಮಾತನಾಡಿ, ಬೀದರ ಜಿಲ್ಲಾ ಅಧ್ಯಕ್ಷರಾಗಿ ಸಧ್ಯಕ್ಕೆ ಅಂಬುಬಾಯಿ ಮಾಳಗೆ ಎನ್ನುವವರು ಕಾಯ೯ ನಿವ೯ಹಿಸುತ್ತಿದ್ದಾರೆ. ಪ್ರೊ. ವಿಜಯಲಕ್ಷ್ಮೀ ಗಡ್ಡೆ ಅವರು ನಮ್ಮ ಸಂಘಟನೆಯ ಉಪಾಧ್ಯಕ್ಷರಾಗಿ ಮತ್ತು ಕಾಯ೯ದಶಿ೯ಗಳಾಗಿ ಹಿಂದಿನ ಅವಧಿಗಳಲ್ಲಿ ಮಾತ್ರ ಇದ್ದರು ಎಂದು ಸ್ಪಷ್ಟ ಪಡಿಸಿದ್ದಾರೆ.

ವಿಜಯಲಕ್ಷ್ಮೀ ಗಡ್ಡೆ ಅವರು ತಮ್ಮ ಪರಿಚಯ ಪತ್ರದಲ್ಲಿ ದಾಖಲಿಸಿರುವಂತೆ ಗಮನಿಸುತ್ತಾ ಹೋದಂತೆ ಇಂತಹ ಸಾಕಷ್ಟು ತಪ್ಪುಗಳು ಕಂಡು ಬರುವಂತಿವೆ. ನಮ್ಮೂರ್ನಾಗ ನಾನೊಬ್ನೇ ಜಾಣ ಎನ್ನುವ ಹಾಗೆ ಶುನ್ಯ ಸಾಧನೆಯಲ್ಲೂ ಅಪಾರ ಸಾಧನೆಗೈದಂತೆ ಎಲ್ಲೆಂದರಲ್ಲಿ ಪ್ರಚಾರ ಕೈಗೊಂಡಿರುವುದಕ್ಕೆ ಕಡಿವಾಣ ಹಾಕಬೇಕು ಎಂಬುದು ಜನಸಾಮಾನ್ಯರ ಗೋಳಾಗಿದೆ.

ಅನೇಕ ಕನ್ನಡಪರ ಸಂಘಟನೆಗಳ ಅಧ್ಯಕ್ಷರಾಗಿ ಕಾಯ೯ ನಿವ೯ಹಿಸಿರುವ ಬಗ್ಗೆ ಸಾಕಷ್ಟು ವಿವರಗಳನ್ನು ಬಹಿರಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ನಿಮಿತ್ಯ ಬಿರುಸಿನ ಪ್ರಚಾರದಲ್ಲಿ ತೊಡಗಿರುವ ಪ್ರೊ. ವಿಜಯಲಕ್ಷ್ಮೀ ಗಡ್ಡೆ ಅವರು ಬಹಿರಂಗ ಸುದ್ಧಿ ಪತ್ರಿಕೆಯ ಗೌರವ ಸಂಪಾದಕರೆಂದು ಸಹ ಹೇಳಿಕೊಂಡಿರುವುದು ಅವರಿಗವರೇ ಆತ್ಮ ವಿಮಶೆ೯ ಮಾಡಿಕೊಳ್ಳಬೇಕಾಗಿದೆ.

ಬೀದರ ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಉಪನ್ಯಾಸ ಮಂಡಿಸಿರುವುದಾಗಿ ಸಹ ಉಲ್ಲೇಖಿಸಿದ್ದಾರೆ. ಹೊರ ರಾಜ್ಯಗಳಲ್ಲಿ ಪ್ರಬಂಧ ಮಂಡನೆ ಮಾಡಿರುವುದು ಸೇರಿದಂತೆ ಬಸವ ಕೇಂದ್ರ, ಅ.ಭಾ.ವೀ. ಮಹಾಸಭಾ, ಅನುಭವ ಮಂಟಪ, ಕನ್ನಡ ಶಕ್ತಿ ಕೇಂದ್ರದ ಸದಸ್ಯರಾಗಿರುವುದು ಅದೇಷ್ಟು ಸತ್ಯವೋ ಎನ್ನುವುದು ಅನುಮಾನಿಸುವಂತೆ ಮಾಡಿದೆ ಎನ್ನುತ್ತಾರೆ ಸ್ಥಳೀಯರನೇಕರು.

ಈ ಸಾಹಿತ್ಯೀಕ, ಸಾಂಸ್ಕೖತಿಕ ವಲಯಗಳ ರಾಯಭಾರಿಗಳಾಗಬೇಕೆನ್ನುವರು ಇಂತಹ ಸುಳ್ಳುಗಳ ಸಂತೆ ನಿಮಾ೯ಣ ಮಾಡಿದರೆ. ನಿಜವಾದ ಪ್ರತಿಭಾವಂತರು ಮೂಲೆಗುಂಪಾಗಿ ಸೇರಬೇಕಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಎನ್ನುವುದು ಕಸದ ತೊಟ್ಟಿಯನ್ನಾಗಿ ಮಾಡಿಬಿಡುವ ಭೀತಿ ಈ ರೀತಿಯ ಸಂಗತಿಗಳಿಂದ ಕಂಡು ಬರುತ್ತವೆ ಎನ್ನುತ್ತಾರೆ ಬಲ್ಲವರು.

ಕಾಮೆಂಟ್‌ಗಳಿಲ್ಲ: